CLICK
ತಾರತಮ್ಯ ವಿಚಾರ
ಸನಾತನ ವೈದಿಕ ಸಂಸ್ಕೃತಿಯ ಈ ತಾರತಮ್ಯ ಎಂಬ ಪದ ಸಾಮಾನ್ಯಜನರಿಗೆ ಗೊಂದಲವನ್ನು ಉಂಟುಮಾಡಬಲ್ಲದ್ದಾಗಿದೆ.
ಇದನ್ನೇ ಅಸ್ತ್ರವನ್ನಾಗಿಸಿಕೊಂಡ ವೇದವಿರೋಧಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಈ ತಾರತಮ್ಯ ಎಂಬ ವಿಷಯವು ವೇದ, ಇತಿಹಾಸ, ಪುರಾಣ, ಧರ್ಮಶಾಸ್ತ್ರ, ಆಗಮಶಾಸ್ತ್ರ ಮುಂತಾದ ಎಲ್ಲಾ ವೈದಿಕಪ್ರಕಾರಗಳಲ್ಲಿ ಹಾಸುಹೊಕ್ಕಾಗಿದೆ.
ತಾರತಮ್ಯವು ದೋಷ ಎಂದಾಗುವುದು ಅದು ಅಮಾನವೀಯವಾದಾಗ ಮಾತ್ರ.
ಶಾಸ್ತ್ರೀಯ ತಾರತಮ್ಯ ಎಂದೂ ಅಮಾನವೀಯವಲ್ಲ.
ತಾರತಮ್ಯದಲ್ಲಿ ಎರಡು ವಿಧಗಳಿವೆ.
1. ನಿತ್ಯವಾದ ತಾರತಮ್ಯ
2. ಅನಿತ್ಯವಾದ ತಾರತಮ್ಯ.
ತೈತ್ತಿರೀಯೋಪನಿಷತ್ತಿನ ಆನಂದ ಮೀಮಾಂಸೆ ಮುಂತಾದ ಕಡೆಗಳಲ್ಲಿ ಹೇಳಿದ ದೇವತಾ ತಾರತಮ್ಯ ನಿತ್ಯವಾದ ತಾರತಮ್ಯ.
ಯಾಕೆಂದರೆ ಇದು ಚೈತನ್ಯಸ್ವರೂಪಗಳನ್ನು ಇಟ್ಟುಕೊಂಡು ಹೇಳಿರುವಂತದ್ದು.
ಅನಿತ್ಯ ತಾರತಮ್ಯ ವಿವಿಧ ಆಯಾಮಗಳಲ್ಲಿ ಇದೆ.
1. ಅವತಾರ ಧರ್ಮಕ್ಕನುಗುಣವಾದ ತಾರತಮ್ಯ.
2. ಧರ್ಮಶಾಸ್ತ್ರಸಮ್ಮತ ತಾರತಮ್ಯ
3. ವ್ಯೂಹವಿಧಿತಾರತಮ್ಯ
4. ದೇವಾಲಯಪದ್ಧತಿ ತಾರತಮ್ಯ.
5. ಸಾಮಾಜಿಕ ತಾರತಮ್ಯ
ದೇವತೆಗಳು ಅವತಾರ ತಾಳಿ ಬಂದಾಗ ಅಲ್ಲೊಂದು ಅನಿತ್ಯ ತಾರತಮ್ಯ ಏರ್ಪಡುತ್ತದೆ.
ಉದಾಹರಣೆಗೆ ವಿಷ್ಣುವು ಕೃಷ್ಣನಾಗಿ ಶೇಷನು ಬಲರಾಮನಾಗಿ ಅವತರಿಸಿದಾಗ ಇದನ್ನು ನೋಡಬಹುದು.
ನಿತ್ಯತಾರತಮ್ಯಕ್ರಮದಂತೆ ವಿಷ್ಣುವು ಶೇಷನಿಗಿಂತ ಶ್ರೇಷ್ಠ. ಆದರೆ ಅನಿತ್ಯ ತಾರತಮ್ಯದಂತೆ ಬಲರಾಮನೇ ಕೃಷ್ಣನಿಗಿಂತ ಶ್ರೇಷ್ಠನಾದಂತೆ ಕಂಡಿದೆ. ( ಕೃಷ್ಣನು ಬಲರಾಮನಿಗೆ ನಮಸ್ಕರಿಸುವುದು ಇತ್ಯಾದಿಗಳಿಂದ )
ಧರ್ಮಶಾಸ್ತ್ರಸಮ್ಮತ ತಾರತಮ್ಯ ಎಂದರೆ ವರ್ಣಾಶ್ರಮಧರ್ಮ. ಬ್ರಾಹ್ಮಣರು ಇತರರಿಗಿಂತ ಶ್ರೇಷ್ಠ ಎಂದು ಧರ್ಮಶಾಸ್ತ್ರಗಳಲ್ಲಿ ಹೇಳಿದೆ.
ಆದರೆ ನಿತ್ಯತಾರತಮ್ಯದಂತೆ ಒಬ್ಬ ಶೂದ್ರ ಬ್ರಾಹ್ಮಣನಿಗಿಂತ ಶ್ರೇಷ್ಠ ಆಗಿರಬಹುದು.
ಈ ಶಾಸ್ತ್ರರಹಸ್ಯವನ್ನು ಮೊಟ್ಟಮೊದಲು ಹೇಳಿದ್ದು ಶ್ರೀಮಧ್ವಾಚಾರ್ಯರು.
ಯಾರ ಯೋಗ್ಯತೆ ಹೇಗೆ ಇರುತ್ತದೆ ಎಂದು ಗೊತ್ತಾಗುವುದಿಲ್ಲ. ಹಾಗಾಗಿ ಎಲ್ಲರಲ್ಲೂ ಗೌರವಪೂರ್ವಕ ವ್ಯವಹಾರ ಇರಬೇಕೆಂಬುದು ಮಧ್ವಶಾಸ್ತ್ರದ ಅಧ್ಯಯನದಿಂದ ತಿಳಿಯುತ್ತದೆ. ಹಾಗಾಗಿ ಶಾಸ್ತ್ರದ ಹಿನ್ನೆಲೆಯಲ್ಲಿ ಇಂತಹಾ ಮಾನವೀಯಮೌಲ್ಯಗಳಿಗೆ ಒತ್ತುಕೊಟ್ಟ ಶಾಸ್ತ್ರ ಇನ್ನೊಂದಿಲ್ಲ.
ವ್ಯೂಹವಿಧಿತಾರತಮ್ಯ ಎಂದರೆ ಕೆಲವು ಪ್ರಯೋಗಗಳಲ್ಲಿ ಹೇಳಿದ ತಾರತಮ್ಯ.
ಉದಾಹರಣೆಗೆ ನವಗ್ರಹಪೂಜೆ. ನಿತ್ಯತಾರತಮ್ಯ ಪ್ರಕಾರ ರವಿಗಿಂತ ಗುರು ಶ್ರೇಷ್ಠನಾದ ಗ್ರಹ.
ಆದರೆ ನವಗ್ರಹಹೋಮದಲ್ಲಿ ಮೊದಲ ಆಹುತಿ ರವಿಗೇ.
ಇದು ಯಾಕೆಂದರೆ ನವಗ್ರಹ ವ್ಯೂಹದ ನಾಯಕ ರವಿ.
ದೇವಾಲಯಪದ್ಧತಿ ತಾರತಮ್ಯದಲ್ಲಿ ಎರಡು ವಿಧಗಳಿವೆ.
ಆಗಮಶಾಸ್ತ್ರಾನುಸಾರಿಯಾದ ತಾರತಮ್ಯ ಮತ್ತು ಕ್ಷೇತ್ರಪದ್ಧತಿಯಂತೆ ಬಂದ ತಾರತಮ್ಯ.
ಆಗಮದಲ್ಲಿ ಕೆಲವೊಮ್ಮೆ ನಿತ್ಯತಾರತಮ್ಯಕ್ಕೆ ವಿರುದ್ಧವಾಗಿ ಬಲಿಸೂತ್ರ, ಪರಿವಾರ ಸ್ಥಾನಗಳು ಇರುತ್ತವೆ.
ಕ್ಷೇತ್ರಪದ್ಧತಿಯಿಂದಲೂ ಕೆಲವೊಮ್ಮೆ ತಾರತಮ್ಯ ಬರಬಹುದು. ಉದಾಹರಣೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯನ ಪರಿವಾರವಾಗಿ ಉಮಾಮಹೇಶ್ವರಸ್ಥಾನ ಇದೆ.
ಶಿವನು ಸುಬ್ರಹ್ಮಣ್ಯನಿಗಿಂತ ಶ್ರೇಷ್ಠ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಕುಕ್ಕೆಯ ರಾಜ್ಯಭಾರ ಸುಬ್ರಹ್ಮಣ್ಯನಿಗೆ ಸೇರಿರುವುದರಿಂದ ಅವನೇ ಮುಖ್ಯನಾಗುತ್ತಾನೆ.
ಕೆಲವೊಮ್ಮೆ ದೇವಾಲಯಪದ್ಧತಿಯ ತಾರತಮ್ಯದಲ್ಲಿ ಎರಡು ದೇವರು ಅಥವಾ ಅದಕ್ಕಿಂತ ಹೆಚ್ಚು ದೇವರು ಸಮರಾಗಿ ಉಳಿದ ದೇವರುಗಳಿಗಿಂತ ಶ್ರೇಷ್ಠವಾಗುವುದು ಇದೆ.
ಉದಾಹರಣೆಗೆ ಶಂಕರನಾರಾಯಣ ದೇವಾಲಯಗಳು. ನಿತ್ಯತಾರತಮ್ಯ ಪ್ರಕಾರ ಹರಿಯು ಹರನಿಗಿಂತ ಶ್ರೇಷ್ಠ. ಆದರೆ ಆಗಮಶಾಸ್ತ್ರದ ಒಂದು ಕ್ರಮದಂತೆ ಅವರಿಬ್ಬರಿಗೂ ಸಮಾನ ಸ್ಥಾನ ಇದ್ದು ಅವರಿಬ್ಬರೂ ಅಲ್ಲಿ ಇತರ ಪರಿವಾರಗಳಿಗಿಂತ ಶ್ರೇಷ್ಠರಾಗಿದ್ದಾರೆ.
ದೇವಾಲಯಪದ್ಧತಿತಾರತಮ್ಯ ದೈವಾಲಯಗಳಲ್ಲೂ ಇದೆ. ದೈವಸ್ಥಾನದಲ್ಲಿ ಒಂದು ದೈವ ಪ್ರಧಾನ ಆಗಿರುತ್ತದೆ. ಉಳಿದವು ಪರಿವಾರಗಳಾಗಿರುತ್ತವೆ. ಅಲ್ಲದೆ ತುಳುನಾಡಿನಲ್ಲಿ ಮರ್ಲು ಧೂಮಾವತಿ, ಪಂಜುರ್ಲಿ ಮುಂತಾದ ರಾಜನ್ ದೈವಗಳು ಇತರ ದೈವಗಳಿಗಿಂತ ಶ್ರೇಷ್ಠ ಎಂಬ ರೂಢಿ ಇದೆ. ಹಾಗಾಗಿ ದೇವತಾ ತಾರತಮ್ಯ ಇಲ್ಲ ಎಂದರೆ ಅದು ತುಳುನಾಡಿನ ದೈವಾರಾಧನೆಗೆ ಮಾಡುವ ಅವಮಾನ.*
ಸಾಮಾಜಿಕ ತಾರತಮ್ಯ ಎಲ್ಲರಿಗೂ ತಿಳಿದಿದೆ. ಒಬ್ಬ ಧನಿಕ ಸಮಾಜದಲ್ಲಿ ಬಡವನಿಂದ ಶ್ರೇಷ್ಠ ಎನಿಸಿಕೊಳ್ಳುತ್ತಾನೆ.
ಒಬ್ಬ ತಹಶೀಲುದಾರನಿಗಿಂತ ಒಬ್ಬ ಜಿಲ್ಲಾಧಿಕಾರಿ ಶ್ರೇಷ್ಠ, ಗೃಹಮಂತ್ರಿಗಿಂತ ಪ್ರಧಾನಮಂತ್ರಿ ಶ್ರೇಷ್ಠ ಇತ್ಯಾದಿಗಳು ಸಮಾಜದ ವ್ಯವಸ್ಥೆಯಲ್ಲಿ ಕಂಡುಬರುವ ತಾರತಮ್ಯ.
******
ಸಾಮಾನ್ಯರಿಗೆ ಪ್ರಶ್ನೆ ಬರಬಹುದು ಎಲ್ಲಾ ಓಕೆ. ದೇವತಾತಾರತಮ್ಯ ಯಾಕೆ ಎಂದು. ವೇದ, ಆಗಮಶಾಸ್ತ್ರಗಳ ವಿರೋಧ ಬರುವುದರಿಂದ ಅದನ್ನು ಒಪ್ಪಲೇಬೇಕು.
ಶಾಸ್ತ್ರಸಮ್ಮತವಾದ್ದರಿಂದ ದೇವತೆಗಳ ಅವಕೃಪೆ ಉಂಟಾಗಲು ಸಾಧ್ಯವಿಲ್ಲ. ನಿತ್ಯತಾರತಮ್ಯ ಪ್ರಕಾರ ಗಣಪತಿಗಿಂತ ಶಿವನು ಶ್ರೇಷ್ಠ ಎಂದು ಹೇಳಿದರೆ ವಿವೇಕಿಯಾದ ಗಣಪತಿಗೆ ಕೋಪ ಬರಲು ಸಾಧ್ಯವೇ?
ಯೋಚಿಸಿ. ಕ್ಷೇತ್ರಪದ್ಧತಿಪ್ರಕಾರ ಕುಕ್ಕೆಯಲ್ಲಿ ಸುಬ್ರಹ್ಮಣ್ಯ ಅಲ್ಲಿರುವ ಇತರ ಶಕ್ತಿಗಳಿಗಿಂತ ಶ್ರೇಷ್ಠ ಎಂದರೆ, ಇತರ ಶಕ್ತಿಗಳಿಗೆ ಅಥವಾ ಸುಬ್ರಹ್ಮಣ್ಯನಿಗೆ ಕೋಪ ಬರಲು ಸಾಧ್ಯವೇ?
ಆದರೆ ಅನಿತ್ಯತಾರತಮ್ಯದಿಂದ ನಿತ್ಯತಾರತಮ್ಯವನ್ನು ಅಲ್ಲಗಳೆದರೆ ಮಾತ್ರ ಮಹಾಪಾಪ ಸಂಚಯ ಆಗುತ್ತದೆ. ಉದಾಹರಣೆಗೆ ಕುಕ್ಕೆ ಕ್ಷೇತ್ರದಲ್ಲಿ ಸುಬ್ರಮಣ್ಯನ ಪರಿವಾರವಾಗಿ ಉಮಾಮಹೇಶ್ವರ ಇರುವುದರಿಂದ ನಿತ್ಯತಾರತಮ್ಯವಿಧಿಯಂತೆಯೂ ಶಿವನಿಗಿಂತ ಸುಬ್ರಹ್ಮಣ್ಯನೇ ಶ್ರೇಷ್ಠ ಎಂದು ಯಾರಾದರೂ ತಿಳಿದರೆ ಅವನಿಗೆ ಸುಬ್ರಹ್ಮಣ್ಯನಿಗಿಂತ ದೊಡ್ಡ ಶತ್ರು ಇನ್ನೊಬ್ಬನಿರುವುದಿಲ್ಲ.
ನಿತ್ಯ ತಾರತಮ್ಯ ಅಥವಾ ಅನಿತ್ಯ ತಾರತಮ್ಯವನ್ನು ಹೇಳದ ಒಂದು ಪೂಜಾಪದ್ಧತಿ ಭಾರತದೇಶದಲ್ಲಿ ಇಲ್ಲ.
ಪಂಚಾಯತನ ಪೂಜಾಪದ್ಧತಿ ಎಂಬ ಒಂದು ಕ್ರಮ ಇದೆ. ಇಲ್ಲಿಯೂ ತಾರತಮ್ಯ ಇದೆ. ಅಲ್ಲಿ ಇಷ್ಟದೇವತೆಯೇ ಪ್ರಧಾನ.
ಉಳಿದವರು ಪರಿವಾರಗಳು.
ಅಲ್ಲದೆ ಕುಂಭೋದರಾದಿ ತತ್ತತ್ಪರಿವಾರಗಳ ಬಲಿಹರಣವೂ ವಿಹಿತವಾಗಿದೆ. ಹಾಗಾಗಿ ಇಲ್ಲೂ ತಾರತಮ್ಯ ಇದೆ. ಈ ಪೂಜಾಪದ್ಧತಿಯೂ ಶಾಸ್ತ್ರೀಯವಾದದ್ದೇ.
ಪುರಾಣದಲ್ಲಿ ಈ ಪದ್ಧತಿ ವರ್ಣಿತವಾಗಿದೆ. ( ಗರುಡ ಪುರಾಣ ಎಂದು ನೆನಪು. ಆದರೆ ಪ್ರೇತಕಾಂಡ ಅಲ್ಲ ). ಸ್ಮಾರ್ತಸಂಪ್ರದಾಯದಲ್ಲಿ ಪ್ರವರ್ತನೆ ಆದ ಪದ್ಧತಿ ಇದು. ಆದರೆ ಅವರಲ್ಲಿ ಹೊಸದಾಗಿ ಸೃಷ್ಟಿ ಆದ ಪದ್ಧತಿ ಅಲ್ಲ.
ಆದರೆ ಶ್ರೀಮಧ್ವಾಚಾರ್ಯರು ವೈದಿಕಶಿಖಾಮಣಿಗಳಾದ್ದರಿಂದ ವೇದಗಳಲ್ಲಿ ಹೇಳಿದ ನಿತ್ಯತಾರತಮ್ಯದ ಪದ್ಧತಿಯನ್ನು ಅಧಿಕೃತಗೊಳಿಸಿದರು. ಅದೇ ಮಾಧ್ವಮಠಗಳಲ್ಲಿ ನಡೆಯುವಂತದ್ದು. ಅನಿತ್ಯತಾರತಮ್ಯವ್ಯವಸ್ಥೆ ಪ್ರವರ್ತಿತವಾಗಿರುವ ದೇವಾಲಯಗಳಲ್ಲಿ ನಿತ್ಯತಾರತಮ್ಯದ ಸ್ಮರಣೆಯೊಂದಿಗೆ ಅನಿತ್ಯತಾರತಮ್ಯವನ್ನು ಪ್ರವರ್ತಿಸುವ ತುಂಬಾ ಶಾಸ್ತ್ರಸಮ್ಮತ ಪೂಜಾಪದ್ಧತಿಯನ್ನು ಪ್ರವರ್ತಿಸಿದರು.
ಅಂತಹಾ ಪದ್ಧತಿಯೇ ಮಾಧ್ವರು ಪೂಜಿಸುವ ದೇವಾಲಯಗಳಲ್ಲಿ ಇರುವುದು. ಮಾಧ್ವರು ಎಲ್ಲಿಯೂ ಆಗಮ ವ್ಯತ್ಯಾಸ ಮಾಡುವುದಿಲ್ಲ. ಮಾಧ್ವರು ಶೈವಾಗಮದಂತೆ ಪೂಜೆ, ಉತ್ಸವಗಳನ್ನು ನಡೆಸುವ ದೇವಾಲಯಗಳು ಬೇಕಾದಷ್ಟು ಇವೆ.
ಅಲ್ಲದೆ ಮಾಧ್ವರು ಪೂಜಿಸುವ ದೈವಾಲಯಗಳೂ ಇವೆ. ಅಲ್ಲಿಯೂ ಕ್ಷೇತ್ರಪದ್ಧತಿಗೆ ದ್ರೋಹ ಆಗಿಲ್ಲ.
ಹೀಗೆ ಒಂದಷ್ಟು ತಾರತಮ್ಯ ಚಿಂತನೆ .
✍🏻ಮಹೇಂದ್ರ ಸೋಮಯಾಜೀ.
******
info from madhvafestivals.wordpress.com
DEVATA TARATAMYA
1 Vishnu – Hari Sarvottamma
2 Lakshmi – Nitya Mukta
3 a) Brahma
b) Vaayu
4 a) Saraswati
b) Bhaarathi
5 a) Garuda
b) Shesha
c) Rudra
6 Shanmahishi-s of Krishna
a) Jaambavati
b) Bhadra
c) Neela
d) Kalindi
e) Mitravinda
f) Lakshana
7 a) Sauparni (Dharmapatni of Garuda)
b) Vaaruni (Dharmapatni of Shesha)
c) Paarvati (Dharmapatni of Rudra)
8 a) Indra (Purandara)
b) Kaama/ Manmatha (Kumara/Skanda/Shanmukha)
9 Ahankaarika Praana
10 a) Svaayambhu Manu
b) Daksha Prajapati
c) Bruhaspatyacharya
d) Shachi (Dharmapatni of Indra (Purandara))
e) Rati (Dharmapathni of Kaama)
f) Aniruddha (Son of Kaama)
11 Pravaha Vaayu
12 a) Vivasvaan Surya
b) Chandra
c) Yama
d) Shataroopa (Dharmapatni of Svaayumbhu Manu)
13 Varuna
14 Devarshi Naarada
15 a) Bhrugu
b) Agni
c) Prasooti (Dharmapatni of Daksha Prajapati)
16 [a to g are Brahmaputra-s)
a) Mareechi
b) Athri
c) Angirasa
d) Pulastya
e) Pulaha
f) Kratu
g) VashishTa
h) VaivasvataManu
i) Vishwamitra
17 a) Mitra
b) Niraruti
c) Praavahi (Dharmapatni of Pravaha Vaayu)
d) Taara (Dharmapatni of Bruhaspatyacharya)
18 a) Vishvaksena
b) Ganapati
c) Ashwini Devata-s –Naasatya & Dasra
d) Kubera
e) Shesha Shatastha SOmarasapaanaarha-s
LISTED IN SOMARASAPAANAARHA SECTION
19. KARMAJA DEVATA-S (KAKSHA 19)
a. Dvaarapalaka-s b. Mareechi (Son of Vaayu) c. Paavaka (Son of Agni)
d. Jayanta (Son of Indra) e. vishvakarma f. Shata Punya Shloka Raja-s
g. RuShi-s h. Vishnu Parshada-s i. Gandharva-s j. 92 Apsara Streeya-s
k. 7 Pitru-s – saptha pitru devategalu (ganas). They are yama, soma, kavyavAhana, agniShTAta, aryama, anala, barhiShat).
l. Manu-s m. Indra-s n. Yagnya Sadhanaabhimaani Devatas
o. Archara Marga Devatas p. Dhoomaadi Maarga Devatas
q. Graha-s r. Sulekha Naamaka Chitragupta
s. Dig-abhimaani Devata-s t. Ab-abhimaani Devata-s
u. Vahana-s of Devata-s v. Maalagaara Sudhaama
w. GaNa Naamaka ChanDaka x. Kaalaakhyabhimaani
20 a) Parjanya (Megabhimani)
b) Ganga (Dharmapatni of Varuna)
c) Sangnya (Dharmapatni of Vivasvaan Surya)
d) Rohini ( Dharmaptni of Chandra)
e) Viradusha (Dharmapatni of aniruddha) – BrahmAndAbhimAnini
f) Shyamala (Dharmaptni of Yama)
21 KurmAdhi anAkhyAta Devatha-s
22 Svaaha (Dharmapatni of Agni) – ManthrAbhimAnini
23 Budha (JalAbhimAni)
24 a) Devaki
b) Yashoda
c) Usha (Dharmapatni of Ashvini Devata-s) – NAmAbhimAnini
25 a) Shanaishchara
b) Dhara
26 Pushkara (KarmAbhimAni)
27 AjAnaja Devata-s
AAJAANAJA DEVATA-S (KAKSHA 27)
Aakhyaata Aajaanaja Devata-s:
1. 92 Gandharva-s 2. Kratu
3. Sindhu 4. 908 Apsara Streeya-s (92 appeaar in Kaksha 19)
5. 16,100 Children of Agni (Born as Shri Krishna Patni-s)
Anaakhyaata Aajaanaja Devata-s:
1. Vibudha-s (100 in total)
2. Deva Bhrutya Pitru-s (100 in total)
3. Deva Bhrutya Asura-s (100 in total)
4. Deva Gaayana Gandharva-s (100 in total)
5. Deva Nrutya Apsara Streeya-s (100 in total)
6. Siddha Sanketa-s (70 in total) [Deva Karya Nirvaahaka-s]
7. Vaahana carriers YakShara-s (70 in total)
8. Shibika carriers RakShasa-s (30 in total)
9. Deva Paricharaka Chaarana-s (30 in total)
10. Sevaakarta Bhuta-s (70 in total)
11. Kinnara-s (70 in total)
12. Pishacha-s (70 in total)
13. Kubera Bhrutya Guhyaka-s (7 in total)
14. Preta-s (70 in total)
15. Vidyadhara-s (70 in total)
16. VaruNa Bhrutya Naaga-s (5 in total)
17. Shata-Una ShatakoTi RuShi-s
28 Chira Pitru-s
29 Deva Gandharva-s
30 Manushya Gandharva-s
31 Kshitipa-s (Maanusha Chakravarti-s)
32 ManushyOttama-s
a) Nara
b) Bhuchara
c) Khechara
d) Krimi
e) Truna
SOMARASA-PAANAARHA-S
There are 100 SOmarasa Paanaarha-s as detailed below:
I. Higher Kaksha than Kaksha 18 : 13
II. Kaksha 18 : 84
III. Lower Kaksha than Kaksha 18 : 3
I. Higher Kaksha than Kaksha 18 (Count of 13):
1. Urukrama (Kaksha 1 – One among Aditya-s – AvathAra of Hari)
2. Pradhana Vaayu (Kaksha 3 – One among Aditya-s – Bharati Pati – Mukhya PraNa)
3. Maha Rudra (Kaksha 5 – One among EkAdasha Rudra-s – Vaama)
4. Indra (Kaksha 8 – One among Adhitya-s – Purandara)
5. Ahankaarika PraaNa (Kaksha 9 – One among Maruth-s)
6. Bruhaspati (Kaksha 10)
7. Pravaha Vaayu (Kaksha 11 – One among Maruth-s)
8. Chandra (Kaksha 12)
9. Yama (Kaksha 12)
10. Vivasvaan (Kaksha 12 – One among Aditya-s)
11. VaruNa (Kaksha 13 – one among Aditya-s)
12. Agni (Kaksha 15 – One among Ashta Vasu-s)
13. Mitra (Kaksha 17 – one among Aditya-s)
II. Kaksha 18 (Count of 84):
a. AshTa Vasu (Count of 8 — 1 appear in other kaksha)
1. DroNa 2. Dhruva 3. Dosha 4. Arka 5. PraNa 6. Dyu
7. Vibhavasu
One Vasu ‘Agni’ appears in Uttama Kaksha – 15
b. Ekaadasha Rudra (Count of 11 — 1 appear in other Kaksha)
1. Bheema 2. Raivata 3. Oja 4. Ajaikapaat 5. Mahan
6. Bahuroopaka 7. Bhava 8. Ugra 9. Vrushaakapi 10. Ahirbudhni
One Rudra ‘Vaama –Parvati pati’ appears in Uttama Kaksha – 5
c. Dwaadasha Aditya (Count of 12 — 6 appear in other Kaksha-s)
1. Bhaga 2. Poosha 3. Savitru 4. Dhaata 5. Aaryama 6. TvasTru
Six Aditya-s appear in different Kaksha-s:
Of these 5 Aditya-s appear in Uttama (higher) Kaksha:
Urukrama – Kaksha 1 Indra – Kaksha 8 2. Vivasvaan – Kaksha 12
3. VaruNa – Kaksha 13 4. Mitra – Kaksha 17
One appear in Adhama Kaksha:
Parjanya – Kaksha 20
d. Maruth GaNa (Count of 49 — 2 appear in other Kaksha-s)
1. PraaNa 2. Apaana 3. Vyaana 4. Udaana 5. Samaana 6. Naaga 7. Koorma
8. Krukala 9. Devadatta 10. Dhananjaya 11. Aavaha 12. Paraavaha 13. Samvaha
14. Shamyu 15. Udvaha 16. Vivaha 17. Shanku 18. Kaala 19. Shvaasa 20. Nala
21. Anila 22. Pratibha 23. Kumuda 24. Kaanta 25. Shuchi 26. Shveta 27. Ajita
28. Guru 29. Jhunjhu 30. Samvartaka 31. Keela 32. Jita 33. Soumya 34. Kapi
35. JaDa 36. Mandooka 37. Samhruta 38. Siddha 39. Rakta 40. KrushNa
41. Pika 42. Shuka 43. Yati 44. Bheema 45. Hanu 46. Pinga 47. Kampana
Two Maruth-s ‘Ahankaarika PraaNa- Kaksha 9’ and ‘Pravaha Vaayu – Kaksha 11’
appeared in Uttama Kaksha
Note:
i. PraaNa, Apaana, Vyaana, Udaana, Samaana are Daasa PraaNa-s
ii. Bharati-pati Mukhya PraaNa has 5 rUpAs with the same 5 names and those
should not be confused with Daasa PraaNa-s.
e. Vishvedevata (Count of 10 – All appear in this Kaksha)
1. Puroorava 2. Aardava 3. Kaala 4. Kaama 5. Dhuri 6. Lochana 7. Satya
8. Vasu 9. Daksha 10. Kratu
f. Ashwini Devata (Count of 2)
1. Naasatya 2. Dasra
g. Others in this Kaksha (Count of 2)
1. Dyaava 2. Rubhu
Total Count in Kaksha 18 =
AshTa Vasu (7) + Ekaadasha Rudra (10) + Dwaadasha Aditya (6) + Maruth
GaNa (47) + Vishvedevata (10) + Ashwini Devata (2) + Others (2)
= 84
III. Lower Kaksha than Kaksha 18 (Count of 3):
In Kaksha 19:
Kavyavaaha
In Kaksha 20:
Parjanya – One among Aditya-s
5 appeared in Kakshas between 1 & 17, 6 appeared in Kaksha 18
In Kaksha 25: Pruthvi
Dwaarapalaka-s
There are 56 Dvaarapalaka-s.
7 AvaraNa-s * 8 dhvArapAlaka-s = 56 Dvaarapalaka-s
1. Jaya 2. Vijaya
Others
Shata Punya Shloka Raja-s
1. Prahlada 2. Priyavrata 3. Uttaanapaada
4. Gaya 5. Maandhaata 6. Pruthu 7. Shashibindu 8. Kaartaveerya 9. Kakutya
10. Daushyanti 11. Bharata 12. Pareekshitha 13. Janaka 14. Haihaya 15. Arshabha
16. Others
Rushi-s (Count of Shata KoTi Rushi-s – 8 appear in Uttama Kaksha & Shata-Una Shata Koti appear in Adhama Kaksha — There are 92 RuShi-s in this Kaksha)
1. Chavana 2. Uchitthya 3. Kardama 4. Kashyapa 5. Sanaka
6. Sanandana 7. Sanatsujaata
8. Others
Gandharva-s
1. HaaHaa 2. HuHu 3. DhrutaraashTra 4. Tumbura 5. Chitraratha
6. Vishvaavasu 7. Paraavasu 8. Vidyaadhara
Manu-s (Count of 14 – 3 Belong to Uttama Kaksha)
1. Svaayambhu [Kaksha 10] 2. SvaarOchiSha 3. uttama
4. taapasa [Kaksha 1 – Shri Hari] 5. Raivata 6. ChakShusha
7. Vaivasvata [Kaksha 16] 8. SaavarNi 9. DakshsaavarNi
10. BrahmasaavarNi 11. DharmasaavarNi 12. RudrasaavarNi
13. DevasaavarNi 14. IndrasaavarNi
Indra-s (Count of 14 – 7 appear in Uttama Kaksha):
1. Yagnya [Kaksha 1 – Shri Hari] 2. ROchana [Kaksha 3 – MukhyapraaNa]
3. Satyajitu [Kaksha 12 – Yama] 4. Vibhu [Kaksha 18 – Dasra (Ashvini Devata)]
5. Trishikha [Kaksha 18 – Naasatya (Ashvini Devata)] 6. Mandaradyumna [Kaksha 8 – Sachipati Indra] 7. Purandara [Kaksha 8 – Sachipati Indra]
8. Bali 9. Adbhuta 10. Shambhu 11. Vidhruta 12. Krutadhaama 13. Divaspati
14. Dhrutashuchi
Graha-s (Count of 9 – 5 appear in Uttama & Adhama Kaksha):
1. Guru [Kaksha 10 – Bruhaspatyaachaarya] 2. Soorya [Kaksha 12]
3. Chandra [Kaksha 12] 4. Raahu 5. Ketu 6. Mangala
7. Shukra 8. Budha [Kaksha 23] 9. Shani [Kaksha 25]
Vahana-s
1. Nandi 2. Hamsa 3. Others
bhAratI ramaNa mukhyaprAMtargata shrI kRuShNArpanamastu
****
We all know that Madhwa philosophy’s one of the prime facet is Taratamya(Hierarchy/ Ranking). The Bhajane/Dasa sahithya recital should also strictly adhere to Taratamya to get the complete blessings of Hari Vaayu Gurugalu
What is Avarohana and Arohana taratamya?
1. bhajane during the day should be in avarOhaNa tAratamya (descending order starting from paramAtma Sri Hari)
2. bhajane during the evenings/night should be done in ArOhaNa tAratamya (ascending order starting from dASa kaksha, yati kakasha, Ganesha, Parvati and so on, ending with paramAtma Sri Hari)
*****
to check
Guru Madhwa rayarige namo namo(Guru parampara)
Sathya Jagathidhu(Pancha beda/Taratamya)
Ganapathi
Parvathi devi
Rudra devaru
Sesha devaru
Garuda devaru
Bharathi devi
Saraswathy devi
Sri Ananda Theertharu
Hanumantha devaru
Mahalakshmi
Lord Sri Hari/Govinda/Krishna/Panduranga
***
***
No comments:
Post a Comment