ಕೂದಲಿಗೆ ಮೆಂತೆ ನಿಮಗಿಲ್ಲ ಚಿಂತೆ
ಚಿನ್ನಾಗಿರುವ ಕೇಶವು ಮುಖದ ಅಂದವನ್ನು ಮತ್ತಷ್ಟು ಸುಂದರಗೊಳಿಸುತ್ತದೆ ಎಂಬುದಕ್ಕೆ ಎರಡು ಮಾತಿಲ್ಲ. ರೇಷ್ಮೆ ನುಣುಪಿನ ಕಡುಗಪ್ಪು ಕೂದಲು ಸೌಂದರ್ಯಕ್ಕೆ ಭೂಷಣ. ಸಿಲ್ಕಿ, ಕರ್ಲಿ, ಸ್ಟ್ರೇಟ್ ಕೂದಲು ಸಾಮಾನ್ಯವಾಗಿ ಅವರವರ ದೇಹ ಪ್ರಕೃತಿಗರ ಅನುಗುಣವಾಗಿ ಬೆಳೆಯುತ್ತದೆ. ತಮ್ಮ ಕೇಶ ಸೌಂದರ್ಯದ ಬಗ್ಗೆ ಸಂಪೃತ್ತಿ ವ್ಯಕ್ತಪಡಿಸುವ ಮಹಿಳೆಯರು ತುಂಬಾ ವಿರಳ.
ತಲೆಕೂದಲ ಮೊದಲಶತ್ರು ತಲೆಹೊಟ್ಟು. ಅದು ಯಾಕೆ ಬರುತ್ತದೆ ಮತ್ತು ಹೇಗೆ ಬರುತ್ತದೆ ಎಂಬುದನ್ನು ತಿಳಿಯದೆ ರಾಸಾಯನಿಕಯುಕ್ತ ಶಾಂಪೂ ಬಳಸಿ, ಪ್ರಯೋಜನ ಸಿಗದೆ ತೊಳಲಾಡುವುದು ಹಲವು ಮಂದಿ. ಇನ್ನೂ ಕೂದಲು ಉದುರುವುದು, ಬಾಲ ನೆರೆ, ಒಣ ಕೂದಲು, ಸೀಳು ಕೂದಲು ಹೀಗೆ ಸಮಸ್ಯೆಗಳು ಹಲವು. ಬೇಸಿಗೆಯ ಬಿಸಿಲಿನ ಝಳಕ್ಕೆ ಬೆವರು, ಧೂಳು, ಪ್ರದೂಷಣೆಗೆ ಕೂದಲು ಕೊಳೆಯಾಗಿ ತಲೆಹೊಟ್ಟಿನ ಕಿರಿಕಿರಿ, ಉಷ್ಣದಿಂದ ತಲೆಯನ್ನು ಬೊಕ್ಕೆ ಏಳುವುದು, ನೆತ್ತಿ ಬಿಸಿಯಾಗುವುದು, ಅಂಗೈ-ಅಂಗಾಲಿನಲ್ಲಿ ಉರಿ ಇತ್ಯಾದಿ ಹಲವು ಸಮಸ್ಯೆಗಳು ಕಾಡುತ್ತವೆ. ಕೆಲವು ಉಪಾಯಗಳನ್ನು ಕೈಗೊಂಡರೆ ಇವುಗಳಿಂದ ಪಾರಾಗಬಹುದು.
ಅಡುಗೆ ಮನೆಯ ಹೊಂಬಣ್ಣದ ರಾಣಿ ಮೆಂತ್ಯ, ಹಲವು ಔಷಧೀಯ ಗುಣಗಳನ್ನು ಹೊಂದಿರುವಂಥದ್ದು. ಇದನ್ನು ಉಪಯೋಗಿಸಿ ಹಲವು ಪ್ರಯೋಜನಗಳನ್ನು ಪಡೆಯಬಹುದು. ರಾತ್ರಿ ಎರಡು ಚಮಚ ಮೆಂತೆಯನ್ನು ನೀರಿನಲ್ಲಿ ನೆನೆಸಿ, ಬೆಳಗ್ಗೆ ತೆಂಗಿನಕಾಯಿ ಹಾಲಿನ ಜೊತೆ ರುಬ್ಬಿ ತಲೆಕೂದಲಿಗೆ ಪ್ಯಾಕ್ ಹಾಕಿಕೊಳ್ಳಬೇಕು. ಎರಡು ಗಂಟೆ ಬಳಿಕ ಹದ ಬಿಸಿ ನೀರಿನಲ್ಲಿ ತೊಳೆದುಕೊಳ್ಳಬೇಕು. ಕೂದಲಿಗೆ ಮೆಂತೆ ಹಾಕಿಕೊಳ್ಳವ ಮೊದಲು ತೆಂಗಿನ ಎಣ್ಣೆಯನ್ನು ಉಗುರು ಬಿಸಿಮಾಡಿ ಹತ್ತಿಯ ಮುಖಾಂತರ ಕೂದಲಿನ ಬುಡಕ್ಕೆ ಹಚ್ಚಿಕೊಂಡರೆ ಒಳಿತು. ಈ ರೀತಿ ವಾರಕೊಮ್ಮೆ ಹಾಕಿಕೊಂರೂ ಸಾಕು, ಹಲವು ಪ್ರಯೋಜನ ಪಡೆಯಬಹುದು. ಮೆಂತೆ ರುಬ್ಬುವಾಗ ಇದಕ್ಕೆ ದಾಸವಾಳ ಸೊಪ್ಪು, ನುಗ್ಗೆ ಸೊಪ್ಪು, ಬೃಂಗರಾಜ ಅಥವಾ ವಂದೆಲಗವನ್ನೂ ಸೇರಿಸಿಕೊಂಡರೆ ಹೆಚ್ಚು ಪ್ರಯೋಜನಕಾರಿ.
ಮೆಂತ್ಯ ಬಳಕೆಯ ಪ್ರಯೋಜನಗಳು:
1. ಬಿಸಿಲಿನ ಬೇಗೆಯಿಂದ ಉಂಟಾದ ಉಷ್ಣದಿಂದ ದೇಹವನ್ನು ತಂಪಾಗಿಸುತ್ತದೆ.
2. ಪ್ರಕೃತಿ ಸಹಜ ಸುಖನಿದ್ರೆ ನೀಡಿ, ಒತ್ತಡದಿಂದ ಪಾರು ಮಾಡುತ್ತದೆ.
3. ತೆಂಗಿನಕಾಯಿ ಹಾಲು ಸೇರಿಸಿ ಬಳಸಿದ ಇದು ಹೊಸ ಕೂದಲಿಗೆ ಜೀವ ತುಂಬುತ್ತದೆ. ಮೆಂತೆ ಹಾಕಲು ಆರಂಭಿಸಿದ ಎರಡು ವಾರಗಳಲ್ಲೇ ಸಣ್ಣಸಣ್ಣ ಹೊಸ ಕೂದಲುಗಳು ಬೆಳೆಯಲು ಆರಂಭವಾಗುತ್ತದೆ.
4. ವಂದೆಲಗ ಸೇರಿಸಿ ಬಳಸಿದರೆ ಬಾಲನೆರೆಯಿಂದ ಪಾರಾಗಬಹುದು. ಕೂದಲಿನ ನೈಸರ್ಗೀಕ ಬಣ್ಣ ಮತ್ತು ಬಲ ಕಾಪಾಡಿಕೊಳ್ಳಬಹುದು.
5. ಮೆಂತೆಯನ್ನು ತಲೆಯ ಮೇಲೆ ಹಚ್ಚಿಕೊಳ್ಳುವುದರಿಂದ ಕಣ್ಣುರಿ, ಅಂಗಾಲು ಉರಿ ಮತ್ತು ನೆತ್ತಿ ಬಿಸಿಯಾಗುವುದರಿಂದ ಪಾರಾಗಬಹುದು.
6. ತಲೆಹೊಟ್ಟಿನ ಸಮಸ್ಯೆಗೆ ನೈಸರ್ಗೀಕ ನಿವಾರಣೋಪಾಯ.
7. ಕೂದಲು ಕಪ್ಪಾಗಿ, ದಟ್ಟವಾಗಿ, ನಯವಾಗಿ ಹೊಳಪಿನಿಂದ ಕೂಡಿರುತ್ತದೆ.
8. ನೆನೆಸಿದ ಮೆಂತೆ ಕಾಳನ್ನು ಪ್ರತಿನಿತ್ಯ ಹಸಿದ ಹೊಟ್ಟೆಯಲ್ಲಿ ಸೇವಿಸಿದರೆ ಉರಿಮೂತ್ರ, ಮಲಬದ್ಧತೆ, ಕೊಲೆಸ್ಟಾಲ್, ಮಧುಮೇಹ, ಬೊಜ್ಜು ಮುಂತಾದ ತೊಂದರೆಗಳಿಗೆ ಪರಿಹಾರ ಸಿಗುತ್ತದೆ.
ಕೃಪೆ ವಾಟ್ಸಪ್
***