SEARCH HERE

Showing posts with label ಪರಿಹಾರ- ದೀಪ ಹಚ್ಚಿ light deepa lamp. Show all posts
Showing posts with label ಪರಿಹಾರ- ದೀಪ ಹಚ್ಚಿ light deepa lamp. Show all posts

Tuesday, 1 January 2019

ದೀಪ ಹಚ್ಚಿ deepa light deepa lamp


'ದೀಪ
ನಾವು ದಿನ ನಿತ್ಯ ದೇವರಿಗೆ ದೀಪ ಇಟ್ಟು, ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತೇವೆ. ನಮ್ಮನ್ನು ಕುತೂಹಲದಿಂದ ನೋಡಿ ಕಲಿಯುವ ಮಕ್ಕಳು' ನಾವು ದೇವರಿಗೆ ದೀಪ ಯಾಕೆ ಇಡಬೇಕು?' ಅದೊಂದು ದಿನ ನಮ್ಮನ್ನು ಕೇಳಿಯೇ ಬಿಡುತ್ತವೆ. ನೀವು ತಬ್ಬಿಬ್ಬುಗೊಳ್ಳುತ್ತಿರಿ.ಕೆಲವರು  'ಇದು ನಮ್ಮ ಸಂಪ್ರದಾಯ ಮಗು, ಅಜ್ಜ ಇಡುತ್ತಿದ್ದರು ಆದನಂತರ ಅಪ್ಪ ಇಡುತ್ತಿದ್ದರು ಈಗ ನಾನು ಮುಂದೆ ನೀನು' ಎನ್ನುತ್ತಾ ಮಗುವನ್ನು ಸಮಾಧಾನ ಪಡಿಸುತ್ತಾರೆ. ಮಗು ಸತ್ಯ ಎನ್ನುತ್ತಾ ನಂಬಿ ಬಿಡುತ್ತದೆ!!. ಆದರೆ ದೀಪ ಇಡುವ ಒಂದು ಮುಖ್ಯ ಕಾರಣ ಹೇಳುವ ಸಣ್ಣ ಪ್ರಯತ್ನ. ನೀವು ತಿಳಿದುಕೊಳ್ಳಿ ಮತ್ತು ನಿಮ್ಮವರೊಂದಿಗೂ ಹಂಚಿಕೊಳ್ಳಿ.

ದೀಪ ಅನ್ನುವುದು ಬರೇ ಬೆಳಕಿಗಾಗಿ ಇಡುವುದಲ್ಲ. ಬದಲಿಗೆ ನಿಮ್ಮ ಪ್ರಾರ್ಥನೆ ಮತ್ತು ಹರಕೆಗನ್ನು ದೇವರಿಗೆ ತಲುಪಿಸುವ ವಾಹಕ. ದೀಪ ಅನ್ನುವುದು ಅಗ್ನಿಯಿಂದ ಪ್ರಜ್ವಲಿತವಾಗಿದೆ. 


ನಾವು ಮಾಡುವ ಯಾಗದ ಹವಿಸನ್ನು ಹೇಗೆ ಅಗ್ನಿಯು ಆಯ ದೇವತೆಗಳಿಗೆ ಕೊಂಡೊಯ್ದು ಒಪ್ಪಿಸುತ್ತದೋ ಅದೇ ತೆರನಾಗಿ ದೀಪವೂ ನಿಮ್ಮ ಪ್ರಾರ್ಥನೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುವ ಸಾಧನವಾಗಿದೆ.


 ನೀವು ಯಾವ ದೇವರನ್ನು ಪ್ರಾರ್ಥನೆ ಮಾಡುತ್ತಿರೋ ಆ ಪ್ರಾರ್ಥನೆ ನಿಮ್ಮ ಆ ದೇವರ ಬಳಿ ತಲುಪಲು ದೀಪ ಒಂದು ಮಾಧ್ಯಮ. ಹಿಂದೊಮ್ಮೆ ನಾವು ಪ್ರಾರ್ಥನೆ ಮಾಡುವಾಗ ದೀಪ ನಂದಿ ಹೋದರೆ ಅಪಶಕುನ ಅನ್ನುತ್ತಿದ್ದರು.ಯಾಕೆಂದರೆ ನಿಮ್ಮ ಪ್ರಾರ್ಥನೆ  ಸಂಕಲ್ಪದಲ್ಲಿ ದೋಷವಿದೆ ಅನ್ನುತ್ತಿದ್ದರು. ಆದ್ದರಿಂದ ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಬಂಧ ಸೇತುವೆ ಒಂದು ಪುಟ್ಟ ದೀಪವಾಗಬಲ್ಲುದು.


ನೀವು ನಿತ್ಯ ಮನೆಯಲ್ಲಿ ದೇವರಿಗೆ ಅಥವಾ ದೈವಗಳಿಗೆ ಕೈ ಮುಗಿಯುವಾಗ ಪುಟ್ಟ ದೀಪವೊಂದನ್ನು ಪ್ರಜ್ವಲಿಸುವ ಪರಿಪಾಟವನ್ನು ಇಟ್ಟುಕೊಳ್ಳಿ. ನಿಮ್ಮ ಪ್ರತಿ ಪ್ರಾರ್ಥನೆ ಮುಟ್ಟಬೇಕಾದ ಜಾಗವನ್ನು ತಟ್ಟುತ್ತದೆ. ಪ್ರಾರ್ಥನೆಗಳು ಫಲಿಸುತ್ತವೆ. ದೇವರಮತ್ತು ನಿಮ್ಮ ಸಂಬಂಧಗಳು ಹತ್ತಿರ ಮತ್ತು ಗಟ್ಟಿಯಾಗುತ್ತದೆ.ಕಾರಣಿಕಗಳು ಮಾತಾಡುತ್ತವೆ. 



ಇನ್ನು ಮಕ್ಕಳ ಜನ್ಮ ದಿನಾಚರಣೆಯ ಸಮಯದಲ್ಲಿ ಕ್ಯಾಂಡಲ್ ನಂದಿಸುವುದಕ್ಕಿಂತ ದೀಪ ಪ್ರಜ್ವಲಿಸುವುದು ತುಂಬಾ ಸೂಕ್ತವಾದ ಆಚರಣೆಯಾಗಿದೆ. ಉರಿಯುತ್ತಿರುವ ಪುಟ್ಟ ದೀಪ ನಿಮ್ಮ ಬಂಧುಗಳ ಹಾರೈಕೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುತ್ತದೆ.ಯಾರಾದರೂ ಕೆಟ್ಟ ಹಾರೈಕೆಯನ್ನು ಮಾಡಿದರೆ ಅವನ್ನು ಅಲ್ಲೇ ಸುಟ್ಟು ಒಳ್ಳೆಯ ಆರೈಕೆಗಳನ್ನು ಮಾತ್ರ ದೇವರ ಪಾದತಳದಲ್ಲಿಡುವ ಗುಣ ಒಂದು ಪುಟ್ಟ ಹಣತೆಗಿದೆ...!!!

*******

'ದೀಪ' ಹಚ್ಚಿ, ಶಾಂತಿ ಸಮೃದ್ಧಿಯಿಂದಿರಿ... ಒಂದು ವೈಜ್ಞಾನಿಕ ಕಾರಣವೂ ಇದೆ.
ಹಣತೆಯ ಜ್ವಾಲೆಗೆ ಸುತ್ತಲಿನ ಪರಿಸರದಲ್ಲಿ ಆಯಸ್ಕಾಂತೀಯ ಅಲೆಗಳನ್ನು ಸೃಷ್ಟಿಸುವ ಶಕ್ತಿಯಿದೆ.*

ಈ ಅಲೆಗಳು ವಿದ್ಯುದಾಯಸ್ಕಾಂತೀಯ ಶಕ್ತಿಯನ್ನು ಹೊಂದಿದ್ದು ಅತಿ ಕಡಿಮೆ ಪ್ರಮಾಣದಲ್ಲಿ ಚರ್ಮಕ್ಕೆ ನವಿರಾದ ಪ್ರಚೋದನೆ ನೀಡುತ್ತದೆ. ಇದರಿಂದ ಕನಿಷ್ಠ ಮೂರು ಗಂಟೆಗಳವರೆಗಾದರೂ ಚರ್ಮದ ಅಡಿಯಲ್ಲಿ ಸಾಗುವ ರಕ್ತಕಣಗಳನ್ನು ಹೆಚ್ಚು ಚುರುಕುಗೊಳಿಸುತ್ತದೆ.

ಮನೆಯ ಸುತ್ತಲೂ ನೂರಾರು ದೀಪಗಳನ್ನು ಉರಿಸುವ ಮೂಲಕ ಗಾಳಿಯಲ್ಲಿ ತೇಲಾಡುತ್ತಿರುವ ಈ ಸೂಕ್ಷ್ಮ ಬ್ಯಾಕ್ಟೀರಿಯಾ ಮತ್ತು ಕ್ರಿಮಿಗಳನ್ನು ಕೊಲ್ಲಲು ಸಾಧ್ಯವಾಗುತ್ತದೆ.

ಹಸುವಿನ ತುಪ್ಪದ ದೀಪ:
ಈ ದೀಪದ ಬೆಳಕು ಮನೆಯಲ್ಲಿ ತೇಜಸ್ಸು, ದೇವರ ಅನುಗ್ರಹ, ಸಮೃದ್ಧಿ ಹಾಗೂ ಆರೋಗ್ಯವನ್ನು ತರುತ್ತದೆ.

ಸಾಮಾನ್ಯ ಎಣ್ಣೆ
ಮನೆಯಲ್ಲಿ ನೆಮ್ಮದಿ ಹಾಗೂ ಜ್ಞಾನವನ್ನು ಹೆಚ್ಚಿಸುತ್ತದೆ.

ಬೇವಿನ ಎಣ್ಣೆ
ಇದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ.

ಎಳ್ಳೆಣ್ಣೆ
ಕಣ್ಣಿಗೆ ಕಾಣಿಸದ ಅಪಾಯ ಹಾಗೂ ಅಡ್ಡಿಗಳನ್ನು ನಿವಾರಿಸುತ್ತದೆ.

ಸುಗಂಧವಿರುವ ಎಣ್ಣೆ
ಇದರ ಪರಿಮಳದಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.

ಸರಳ ಪರಿಹಾರ
ಶ್ರೀ ಸುಧಾಕರ
***

ಯಾವ ದೀಪ ಯಾವ ಮಂಗಳಾರತಿ ಶ್ರೇಷ್ಠ?

ಜಗನ್ನಾಥದಾಸರ ಮಾತು. ದೀಪಕ್ಕೆ ತುಪ್ಪ ಶ್ರೇಷ್ಠ. ತುಪ್ಪ ಜ್ಞಾನದ ಸಂಕೇತ. ಸ್ನಿಗ್ಧ  ಸವಿ ಗಟ್ಟಿ ಪುಷ್ಠಿ.
ತುಪ್ಪದ ದೀಪ ಹಚ್ಚಬೇಕು. ಅಂದರೆ ಹರಿ ಮಹಾತ್ಮೆಯ ಸುಜ್ಞಾನ ವೆಂಬ ದಿವ್ಯ ತುಪ್ಪದ ದೀಪ. ದೀಪದಿಂದ ಕತ್ತಲೆ ಮಾಯ. ಜ್ಞಾನದಿಂದ ಅಜ್ಞಾನದ ನಾಶ.
ತಿರು ತಿರುಗಿ ಮಾಡುವ ಮಂಗಳಾರತಿ ಯಾವುದು?
 ಇಲ್ಲಿ ಭಕ್ತಿಯೇ ಮಂಗಳಾರತಿಯ 
ಬತ್ತಿ ದೀಪ. ಮತ್ತೆ ಮತ್ತೆ ಪರಮಾತ್ಮನ ಸ್ಮರಣೆ ಕೀರ್ತನೆ ಮಾಡುವದು, ಮಹಾತ್ಮೆ ಕೊಂಡಾಡುವುದು, ನಿರಂತರ ಹರಿ ಭಜನೆ ಮಾಡುವುದೇ ಸುತ್ತಿ  ಸುತ್ತಿ ಮಾಡುವ ಮಂಗಳಾರತಿ. ಇಂಥ ದೀಪ ಆರತಿಗಳು ಹರಿ ಅನುಗ್ರಹ ಸಾಧನೆಗೆ ಸೋಪಾನಗಳು.
***


ದೀಪಗಳು ನಮ್ಮ ಮನೆಯನ್ನಷ್ಟೇ ಬೆಳಗುವ ಹೊಳಪಲ್ಲ ನಮ್ಮ ಅಂತರಂಗದ ಜ್ಞಾನವನ್ನು ಬೆಳಗುವ ಸಂಕೇತವೂ ಹೌದು.......
ಇಂತಹ ದೀಪದ ಮಹತ್ವ ಹಾಗೂ ಅದರ ಬಗ್ಗೆ ನಮ್ಮ ಪೂರ್ವಜರು ಅತ್ಯಂತ ಶಿಸ್ತಿನ ಹಾಗೂ ಭಕ್ತಿಯ ಅಡಿಪಾಯ ಹಾಕಿ ಕೊಟ್ಟಿದ್ದಾರೆ.

ಬನ್ನಿ ತಿಳಿಯೋಣ.......🙏🏼💐

ದೀಪದ ಪಾತ್ರೆಯಲ್ಲಿ *ಬ್ರಹ್ಮ ದೇವರು, ತೈಲದಲ್ಲಿ ಲಕ್ಷ್ಮೀ ದೇವಿ ಯ ಸನ್ನಿಧಾನ, ಬತ್ತಿಯಲ್ಲಿ ವಾಸುದೇವ, ಸಂಕರ್ಷಣ ಸನ್ನಿಧಾನ, ಬಿಳುಪಿನಲ್ಲಿ ವಾಯುದೇವರು, ಕಪ್ಪಿನಲ್ಲಿ ರುದ್ರದೇವರು, ಕೆಂಪಿನಲ್ಲಿ ಇಂದ್ರ ನ ಸನ್ನಿಧಾನವಿರುತ್ತದೆ.
***
ಮನೆಯಲ್ಲಿ ದೀಪ ಹಚ್ಚುವಾಗ ವಿಶೇಷವಾಗಿ ಹೇಳಬೇಕಾದ ಮಂತ್ರವನ್ನು ತಿಳಿದುಕೊಳ್ಳಿ!

ಮನೆಯಲ್ಲಿ ದೀಪ ಹಚ್ಚುವುದು ಬಹಳ ಮುಖ್ಯವಾಗಿರುತ್ತದೆ. ಒಂದು ವೇಳೆ ಮನೆಯಲ್ಲಿ ದೀಪ ಹಚ್ಚದೆ ಇದ್ದರೆ ಹಲವಾರು ತೊಂದರೆಗಳು ಕಾಡುತ್ತವೆ. ಆದ್ದರಿಂದ ಪ್ರತಿದಿನ ದೀಪ ಹಚ್ಚುವುದನ್ನು ಯಾವತ್ತಿಗೂ ಮರೆಯಬಾರದು. ಇನ್ನು ಮನೆಯಲ್ಲಿ ದೀಪ ಹಚ್ಚುವುದರಿಂದ ತುಂಬಾನೇ ಲಾಭ ಇದೆ. ಕತ್ತಲೆಯಲ್ಲಿ ದೀಪ ಹಚ್ಚಿದರೆ ಬೆಳಕು ಬರುತ್ತದೆ.ಇದೆ ರೀತಿ ನಿಮ್ಮ ಜೀವನದಲ್ಲಿ ಕೂಡ ಪ್ರತಿದಿನ ದೀಪ ಹಚ್ಚಿದರೆ ನಿಮ್ಮ ಜೀವನದಲ್ಲಿ ಇರುವಂತಹ ಕತ್ತಲೆ ಅದು ಬೆಳಕಿಗೆ ಬರುತ್ತದೆ.

ಮನೆಯಲ್ಲಿ ದೀಪ ಹಚ್ಚುವಾಗ ಈ ಒಂದು ಮಂತ್ರವನ್ನು ಹೇಳಬೇಕು.ಈ ಒಂದು ಮಂತ್ರವನ್ನು ಪ್ರತಿದಿನ ಹೇಳಿದರೆ ನಿಮಗೆ ಫಲ ಸಿಗುತ್ತದೆ. ಸಾಧ್ಯವಾದರೆ ನೀವು ತುಪ್ಪದ ದೀಪವನ್ನು ಹಚ್ಚಬಹುದು.ಇದರಿಂದ ನಿಮಗೆ ತುಂಬಾನೇ ಲಾಭ ಸಿಗುತ್ತದೆ. ಈ ಒಂದು ಮಂತ್ರವನ್ನು ಪ್ರತಿದಿನ ದೀಪ ಹಚ್ಚುವಾಗ ಹನ್ನೊಂದು ಬಾರಿ ಜಪಿಸಬೇಕು.

ದೀಪ ಜ್ಯೋತಿ ಪರಬ್ರಹ್ಮ-ದೀಪಂ ಮೃತ್ಯು ವಿನಾಷಣಂ-ದೀಪೇನ ಸರ್ವತೇ ಸಾಧ್ಯಮ್-ಸಂಧ್ಯಾ ದೀಪಂ ನಮೋಸ್ತುತೆ..ಈ ಒಂದು ಮಂತ್ರವನ್ನು ದೀಪ ಹಚ್ಚಿದ ತಕ್ಷಣ 11 ಬಾರಿ ಜಪಿಸಬೇಕು. ಇದರಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟ ಇದ್ದರೂ ಕೂಡ ಕಡಿಮೆಯಾಗುತ್ತ ಬರುತ್ತದೆ.
**