ಒಂದರಿಂದ ಹತ್ತು ಮಗ್ಗಿ ಹೇಗಿತ್ತೆಂದರೆ, ಸಾಂಪ್ರದಾಯಿಕವಾಗಿ ಕಲಿತರೆ...
1x1= ಸ್ವತಂತ್ರತತ್ವ ಒಂದು: (ಶ್ರೀಹರಿ)
1x2 = ಆತ್ಮಗಳು ಎರಡು: (ಜೀವಾತ್ಮ, ಪರಮಾತ್ಮ)
1x3 = ಗುಣಗಳು ಮೂರು: (ಸತ್ವ, ರಜ, ತಮ)
1x4 = ಪುರುಷಾರ್ಥಗಳು ನಾಲ್ಕು: (ಧರ್ಮ, ಅರ್ಥ, ಕಾಮ, ಮೋಕ್ಷ)
1x5 = ಭೇದಗಳು ಐದು: (ಜೀವ-ಈಶ, ಜಡ-ಈಶ ಜೀವ-ಜೀವ, ಜೀವ-ಜಡ, ಜಡ-ಜಡ)
1x6 = ಶತ್ರುಗಳು ಆರು: (ಕಾಮ, ಕ್ರೋಧ, ಲೋಭ ಮೋಹ, ಮದ, ಮತ್ಸರ)
1x7 = ಶಾಸ್ತ್ರಗಳು ಏಳು (ನಾಲ್ಕು ವೇದಗಳು, ರಾಮಾಯಣ, ಮಹಾಭಾರತ, ಪಂಚರಾತ್ರ)
1x8 = ದಿಕ್ಷಾಲಕರು ಎಂಟು: (ಇಂದ್ರ, ಅಗ್ನಿ, ಯಮ, ನಿಋರುತಿ, ವರುಣ, ಕೋಣವಾಯು, ಕುಬೇರ, ಈಶಾನ)
1x9 = ಭಕ್ತಿಲಕ್ಷಣಗಳು ಒಂಭತ್ತು: (ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಆತ್ಮನಿವೇದನ)
1x10 = ಶ್ರೀಹರಿಯ ಅವತಾರಗಳು ಹತ್ತು: ಮತ್ಸ, ಕೂರ್ಮ, ವರಾಹ, ನರಸಿಂಹ, ವಾಮನ, ಭಾರ್ಗವ, ರಾಮ, ಕೃಷ್ಣ, ಬುದ್ಧ, ಕಲ್ಕಿ.
ಒಂದರಿಂದ ಹತ್ತು ಹೀಗಿತ್ತು. ಆಧ್ಯಾತ್ಮಿಕ ಮಗ್ಗಿ ಮುಗಿದಿತ್ತು.
ಪುಟ್ಟ ಮಕ್ಕಳು ಕಲಿತು ಹೇಳಿದರೆ, ಅದೇ ನಮಗೆ ಸಂಪತ್ತು
***