ಆಶ್ವಯುಜ ಶುಕ್ಲ ಪೂರ್ಣಿಮಾ
ಕಾರ್ತೀಕ ಸ್ನಾನ, ನಕ್ಷತ್ರ ದೀಪಾರಂಭ ಇಂದಿನಿಂದ (ಆಶ್ವಯುಜ ಶುಕ್ಲ ಪೂರ್ಣಿಮಾ) ಆರಂಭವಾಗ್ತಿರುವ ಕಾರಣ... ಎಲ್ಲರಿಗೂ ರಾಧಾ ದಾಮೋದರನ ಅನುಗ್ರಹವಾಗಲಿ ಸದಾ..
***
ಆಶ್ವೀನ ಮಾಸದ ಮಹತ್ವ
ಆಶ್ವೀನ ಮಾಸಕ್ಕೆ ಪದ್ಮಾನಾಭರೂಪಿ ಪರಮಾತ್ಮನು ನಿಯಾಮಕ
ಆಶ್ವೀನ ಮಾಸದ ಪ್ರತಿಪತ್ತಿನಂದು ನವರಾತ್ರಿ ಉತ್ಸವವು ಪ್ರಾರಂಭವಾಗುತ್ತದೆ .
ಆಶ್ವೀನ ಮಾಸದ ಪಾಡ್ಯದಿಂದ ದಶಮಿಯವರೆಗೂ ಶ್ರೀನಿವಾಸ ಕಲ್ಯಾಣದ ಪ್ರವಚನ ಪಾರಾಯಣ ಮಾಡಬೇಕು . ವೈಶಾಖ ಮಾಸದ ಪ್ರತಿಪತ್ತಿನಿಂದ ಪ್ರಾರಂಭಿಸಿ ದಶಮಿಯವರೆಗೆ ಭಗವಂತ ಶ್ರೀನಿವಾಸನು ಪದ್ಮಾವತಿಯನ್ನು ಪಾಣಿಗ್ರಹಣ ಮಾಡಿದ ದಿವಸ ವೈಶಾಖ ಶುದ್ಧ ದಶಮಿಯಂದೇ ಸಂಜೆ , ವಿವಾಹವಾಯಿತು . ಹೀಗೆ ವಿವಾಹವನ್ನು ಮಾಡಿಕೊಂಡ ಶ್ರೀನಿವಾಸ -ಪದ್ಮಾವತಿಯರು ನೂತನ ದಂಪತಿಗಳು ಆರು ತಿಂಗಳು ಪರ್ವತವನ್ನು ಹತ್ತಬಾರದೆಂಬ ಶಿಕ್ಷಣವನ್ನು ಕೊಡಲೆಂದು ಪರ್ವತವನ್ನು ಹತ್ತದೆ ಶ್ರೀನಿವಾಸ ಮಂಗಾಪುರದಲ್ಲಿ ವಾಸ ಮಾಡಿದರು.
ವೈಶಾಖದಿಂದ ಆಶ್ವೀನ ಮಾಸದ ವರೆಗೂ ಅಲ್ಲಿಯೇ ವಿಹರಿಸಿ ಪರ್ವತವನ್ನು ಏರಿದರು ಹೀಗೆ ವಿವಾಹವಾದ ಆರು ತಿಂಗಳ ನಂತರ ಬಂದ ದಂಪತಿಗಳನ್ನು ಬ್ರಹ್ಮದೇವರು ಶಮಿಯಿಂದ ತಯಾರಿಸಿದ ರಥದಲ್ಲಿ ಕೂಡಿಸಿ ರಥೋತ್ಸವವನ್ನು ಮಾಡಿದರು ಇದೇ ಬ್ರಹ್ಮರಥೋತ್ಸವ.
ಈ ನವರಾತ್ರಿ ಸಮಯದಲ್ಲಿ ಶ್ರೀನಿವಾಸ ಕಲ್ಯಾಣ ಪಾರಾಯಣ ಮಾಡಬೇಕು . ಭಾಗವತಾದಿ ಗ್ರಂಥಗಳ ಪ್ರವಚನ ಮತ್ತು ಶ್ರವಣಮಾಡಬೇಕು .
ವೇದ ಪಾರಾಯಣಗಳನ್ನು ಮಾಡಿದರೆ ಕಲ್ಯಾಣವಾಗುವುದು ಮತ್ತು ವಿಶೇಷ ಫಲವಿದೆ ಎಂದು ಆಶ್ವೀನಮಾಸ ಮಹಾತ್ಮೇಯಲ್ಲಿ ಹೇಳಿದೆ .
***
Karthika snaana
Kartika snaana starts from Ashwayuja Hunnime to Karthika Hunnime.
ಕಾರ್ತೀಕ ಸ್ನಾನಾರಂಭ – ಆಶ್ವಯುಜ ಶುದ್ಧ ಹುಣ್ಣಿಮೆಯಿಂದ ಕಾರ್ತೀಕ ಹುಣ್ಣಿಮೆಯವರೆಗೆ
ಶ್ರೀ ಕಾವೇರಿ ಗಂಗಾದಿ ನದಿ ದೇವಿಯರನ್ನು ಹೇಗೆ ನೋಡಬೇಕು ?
ನಾವು ಕಾಣುವ ಮಿಂದುವ ನೀರೇ ಕಾವೇರಿಯೋ, ಗಂಗೆಯೋ, ಯಮುನೆಯೋ ಅಥವಾ ಬೇರೆ ರೂಪವೂ ಇರುತ್ತದೋ ಎಂದರೆ ೨ ರೂಪವೂ ಉಂಟು. ಅದರಲ್ಲಿ ನೀರು ಜಡವಾದ ರೂಪ, ಅದಕ್ಕಿಂತ ಭಿನ್ನವಾದ ಮತ್ತೊಂದು ಚೇತನ ರೂಪ, ಇವೆರಡೂ ಪರಮಾದರಣೀಯವಾದವು. ಅದರಲ್ಲೂ ತಾರತಮ್ಯವುಂಟು.
ಸಾಮಾನ್ಯವಾಗಿ ನಾವು ಕಾವೇರಿ ಇತ್ಯಾದಿ ಸ್ನಾನ ಮಾಡುವಾಗ ಗಂಗಾಸ್ನಾನ ಮಾಡಿದ ಫಲ ಬರುವುದೆಂದು ತಿಳಿದು ಸ್ನಾನ ಮಾಡುತ್ತೇವೆ. ಆದರೆ ಈ ಕಾವೇರಿಯೇ ಗಂಗೆಯೇ?…. ನಾವು ಕಾಣುವ ಕಾವೇರಿಯಾಗಲೀ, ಯಮುನೆಯಾಗಲೀ, ಗೋದಾವರಿಯಾಗಲಿ, ತುಂಗೆಯಾಗಲೀ ಗಂಗೆಯಲ್ಲ.
ನಾವು ಅನುಸಂಧಾನ ಮಾಡಬೇಕಾದ ವಿಧಾನ – ಈ ನೀರೇ ಗಂಗೆಯಲ್ಲ, ಅದರಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳೂ ಇರುತ್ತಾರೆ. ಅವರ ಜೊತೆಗೆ ಅವರ ಪತಿಗಳೂ, ಅವರ ಪತ್ನಿಯರೂ (ಗಂಡು ನದಿಗಳಾದರೆ), ಇದ್ದು, ಅವರೊಳಗೆ ಗಂಗಾ ನದಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಗಂಗಾ ದೇವಿಯ ಅಂತರ್ಗತನಾದ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಕ್ಷೀರಾಬ್ಧಿಶಾಯಿ, ಶ್ರೀ ಲಕ್ಷ್ಮೀನಾರಾಯಣನಿಗೆ ನಮಸ್ಕರಿಸಿ, ಈ ಸ್ನಾನ ನಮಗಲ್ಲ, ನಮಗೊಳಗಿರುವ ಲಕ್ಷ್ಮೀರಮಣನಿಗೆ ಅಭಿಷೇಕ ಎಂದು ಅನುಸಂಧಾನ ಮಾಡಿ, ಶಂಖಮುದ್ರೆಯಿಂದ ನೀರನ್ನು ಪ್ರೋಕ್ಷಿಸಿಕೊಂಡು (ಶಂಖದಲ್ಲಿ ಲಕ್ಷ್ಮಿಯ ಸಾನ್ನಿಧ್ಯ ಇರುವುದರಿಂದ – ಶಂಖಮುದ್ರೆಯಿಂದ ಪ್ರೋಕ್ಷಿಸಿಕೊಳ್ಳಬೇಕು. ಅಷ್ಠೇ ಅಲ್ಲ ಪರಮಾತ್ಮನಿಗೆ ಸ್ನಾನ ಮಾಡಿಸಲು ನಮಗೆ ಯೋಗ್ಯತೆ ಇಲ್ಲ, ಆದ್ದರಿಂದ ಅಲ್ಲಿ ಲಕ್ಶ್ಮಿಯನ್ನು ಅನುಸಂಧಾನ ಮಾಡಬೇಕು), ನಂತರ ಸ್ನಾನ ಮಾಡಬೇಕು.
ನದಿಗಳಲ್ಲಿ ಮಾಡಬಾರದ್ದು :
ನದಿಯಲ್ಲಿ ಉಗುಳಬಾರದು, ನದಿಯಲ್ಲಿ ಮಲಮೂತ್ರ ವಿಸರ್ಜನ ಮಾಡಬಾರದು, ಬಟ್ಟೆ ಒಗೆಯಬಾರದು, ಸೋಪು ಹಾಕಿಕೊಳ್ಳಬಾರದು. ಬೇರೆಯವರು ಮಾಡುತ್ತಾರಲ್ಲ ಅಂತ ಭಾವಿಸಬೇಡಿ – ಅವರಿಗೆ ಸ್ನಾನದ ಮಹತ್ವ ತಿಳಿದಿರುವುದಿಲ್ಲ, ಅವರು ಮಾಡುತ್ತಾರೆ, ನಾವು ಅವರನ್ನು ಅನುಸರಿಸಬಾರದು. ಸಾಧ್ಯವಾದರೆ ಅವರಿಗೂ ತಿಳಿಹೇಳಬೇಕು.
ನದಿಗೆ ಕಾಲಿಡುವ ಮೊದಲು ನಮ್ಮ ಕೈಕಾಲು ಹೊರಗಡೆ ತೊಳೆದುಕೊಂಡು ಬಂದು ಶುಚಿರ್ಭೂತರಾಗಿ, ಒಮ್ಮೆ ನೀರನ್ನು ಕೈಯಿಂದ ತೆಗೆದುಕೊಂಡು ಪ್ರೋಕ್ಷಿಸಿಕೊಂಡು ನಂತರ ನದಿಯಲ್ಲಿ ನಾವು ಸ್ನಾನಕ್ಕೆ ಇಳಿಯಬೇಕು.
ನದಿಯಲ್ಲಿ ಸ್ನಾನ ಮಾಡುವಾಗ ಎಲ್ಲ ನದಿ ದೇವತೆಗಳನ್ನೂ ಸ್ಮರಿಸಬೇಕು.
ಗಂಗಾಸಿಂಧುಸರಸ್ವತೀಚ ಯಮುನಾ ಗೋದಾವರೀ ನರ್ಮದಾ |
ಕೃಷ್ಣಾಭೀಮರತೀ ಚ ಫಲ್ಘುಸರಯೋ ಶ್ರೀಗಂಡಕೀ ಗೋಮತೀ |
ಕಾವೇರೀ ಕಪಿಲಾಪ್ರಯಾಗವಿನುತಾ ನೇತ್ರಾವತೀತ್ಯಾದಯೋ |
ನದ್ಯ: ಶ್ರೀಹರಿಪಾದಪಂಕಜಭವಾ: ಕುರ್ವಂತು ನೋರ್ಮಂಗಲಂ ||
गंगासिंधू सरस्वती च यमुना गोदावरी नर्मदा ।
कृष्णा भीमरती च फल्घुसरयू श्री गंडकी गोमती ।
कावेरी कपिलाप्रयाग विनता नेत्रावतीत्यादयो
नद्य: श्री हरिपादपंकज भवा: कुर्वंतुनो मंगळं ।
ನಂತರ ಒಮ್ಮೆ ನೀರಿನಲ್ಲಿ ಮುಳುಗಿ; Prokshana mantra
apavitra: pavitrOvaa sarvaavasthaaM gatOpivaa |
ya: smarEt puMDarIkaakShaM sa baahyaabhyaMtarashuchi:|
अपवित्र: पवित्रोवा सर्वावस्थां गतोपिवा ।
य: स्मरेत् पुंडरीकाक्षं स बाह्याभ्यंतरशुचि:।
ಅಪವಿತ್ರ: ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |
ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಶುಚಿ: |
ಎಂಬ ಮಂತ್ರದಿಂದ ಪ್ರೋಕ್ಷಿಸಿಕೊಳ್ಳಬೇಕು.
ಸಾಧ್ಯವಾದರೆ ವಾದಿರಾಜ ಗುರುಸಾರ್ವಭೌಮರ
“ತೀರ್ಥಪ್ರಬಂಧ”ವನ್ನು ಒಮ್ಮೆ ಅಧ್ಯಯನ ಮಾಡಿ ಆ ತೀರ್ಥಕ್ಷೇತ್ರದ ಬಗ್ಯೆ ಮಾಹಿತಿಯನ್ನು ತಿಳಿದುಕೊಂಡು ಅವರು ಹೇಳಿದಂತೆ ಅನುಸಂಧಾನ ಮಾಡಬೇಕು.
ಕಾರ್ತೀಕ ಸ್ನಾನ ಸಂಕಲ್ಪ – ಶ್ರೀರಂಗಪಟ್ಟಣದಲ್ಲಿ (ಬೇರೆ ಬೇರೆ ಕ್ಷೇತ್ರಗಳಲ್ಲಿ ಹೋದಾಗ ಅಲ್ಲಿನ ದೇವರನ್ನು ಸ್ಮರಿಸಬೇಕು)
ಪ್ರಣವಸ್ಯ…………ಶ್ರೀ …. ನಾಮಸಂವತ್ಸರೇ, ದಕ್ಷಿಣಾಯಣೇ, ಶರದೃತು, ಕಾರ್ತೀಕಮಾಸೇ,……… ಪಕ್ಷೇ……ತಿಥೌ, …….ವಾಸರೇ, ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೇರಣೆಯ,……ಪ್ರೀತ್ಯರ್ಥಂ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, ಶ್ರೀರಂಗನಾಥ ಸನ್ನಿಧೌ, ಅಶ್ವತ್ಥ ಸನ್ನಿಧೌ, ಕಾರ್ತೀಕ ತುಲಾಮಾಸ ಪ್ರಯುಕ್ತ ಗಂಗಾಸ್ನಾನಮಹಂ ಕರಿಷ್ಯೇ.
ಕಾರ್ತೀಕ ಸ್ನಾನ ಮಂತ್ರ :
ಕಾರ್ತಿಕೇಹಂ ಕರಿಷ್ಯಾಮಿ ಪ್ರಾತಸ್ನಾನಂ ಜನಾರ್ದನ,
ಪ್ರೀತ್ಯರ್ಥಂ ತವ ದೇವೇಶ ದಾಮೋದರ ತ್ವಯಾ ಸಹ |
ಧ್ಯಾತ್ವಾಹಂ ತ್ವಾಂಚ ದೇವೇಶ ಜಲೇಸ್ಮಿನ್ ಸ್ನಾತುಮುದ್ಯತ
ತವ ಪ್ರಸಾದಾತ್ ಪಾಪಂ ಮೇ ದಾಮೋದರ ವಿನಶ್ಯತು |
कार्तिकेहं करिष्यामि प्रातस्नानं जनार्दन,
प्रीत्यर्थं तव देवेश दामोदर त्वया सह ।
ध्यात्वाहं त्वांच देवेश जलेस्मिन् स्नातुमुद्यत
तव प्रसादात् पापं मे दामोदर विनश्यतु ।
ಅರ್ಘ್ಯಮಂತ್ರ*
ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ |
ನಮಸ್ತೇಸ್ತು ಹೃಷೀಕೇಶ ಗೃಹಾಣಾರ್ಘ್ಯಂ ನಮೋಸ್ತುತೇ |
ವ್ರತಿನ: ಕಾರ್ತಿಕೇ ಮಾಸಿ ಸ್ನಾತಸ್ಯ ವಿಧಿವನ್ಮಮ |
ಗೃಹಾಣಾರ್ಘ್ಯಂ ಮಯಾದತ್ತಂ ದನುಜೇಂದ್ರನಿಷೂದನ |
ನಿತ್ಯನೈಮಿತ್ತಿಕೇ ಕೃಷ್ಣ ಕಾರ್ತಿಕೇ ಪಾಪನಾಶನೇ |
ಗೃಹಾಣಾರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ ||
नम: कमलनाथाय नमस्ते जलशायिने ।
नमस्तेस्तु हृशीकेश गृहाणार्घ्यम् नमोस्तु ते ।
व्रतिन: कार्तिके मासि स्नातस्य विधिवन्मम ।
गृहाणार्घ्यम् मया दत्तं दनुजेंद्र निशूदन ।
नित्य नैमित्तिके कृष्ण कार्तिके पाप नाशिने ।
गृहाणर्घ्यम् मया दत्तं राधया सहितो हरे ।
ಕಾವೇರಿ ನದಿ ಸ್ತೋತ್ರ –
“ಓಂ ಕಾವೇರ್‍ಯೈ ನಮ:” “ಓಂ ಅಗಸ್ತ್ಯ ಪತ್ನ್ಯೈ ನಮ:” “ಓಂ ಸರ್ವಪಾವನ್ಯೈ ನಮ:” “ಓಂ ಮಹಾ ಪುಣ್ಯಾಯೈ ನಮ:”
“ಓಂ ಸ್ನಾನ ಮಾತ್ರೇಣ ಸರ್ವ ಪಾಪ ಪ್ರಸಮನ್ಯೈ ನಮ:” “ಓಂ ಮೋಕ್ಷದಾತ್ರ್ಯೈ ನಮ:”
ನದಿ ಸ್ನಾನ ಚಿಂತನೆ– ಪ್ರಾಥಸ್ಮರಣೀಯ ಶ್ರೀ ದೇವೇಂದ್ರ ತೀರ್ಥ ಶ್ರೀಪಾದರು ತಮ್ಮ ಉಪನ್ಯಾಸದಲ್ಲಿ ಹೇಳುತ್ತಿದ್ದ ರೀತಿ.
by NARAHARI SUMADHWA
***