SEARCH HERE

Friday, 23 April 2021

ಚೈತ್ರ ಗೌರೀ chaitra gowri chaitra shukla triteeya

 .

#ಚೈತ್ರ #ಗೌರೀ #ಪೂಜೆ #ವಿಧಾನ

  🌺🌺🌺🌺🌺🌺

ಚೈತ್ರಮಾಸದಲ್ಲಿ ಶುಕ್ಲಪಕ್ಷ  ತದಿಗೆ ದಿನ ಗೌರಿಯನ್ನು ಕೂಡಿಸಬೇಕು . ಆ ದಿನ  ಅನಾನುಕೂಲವಾದಲ್ಲಿ  ಒಂದು ಶುಕ್ರವಾರ  ಅಥವಾ  ರಾಮನವಮಿ  ಅಥವಾ  ಎರಡನೇ ಬಹುಳ ಗೌರಿಯನ್ನು ಕೂಡಿಸಬಹುದು .

ಈ ಪೂಜೆಗೆ  ಚೈತ್ರಗೌರೀ  ಎನ್ನುತ್ತಾರೆ  . ತದಿಗೆ ಗೌರೀ ಎಂದೂ ಕರೆಯುವರು.  ಉಯ್ಯಾಲೆ ಗೌರೀ ಅನ್ನುವ ವಾಡಿಕೆ ಕೂಡಾ ಕೆಲವು ಕಡೆಯಲ್ಲಿ ಇದೆ. 

ಓಂದು ಚಿಕ್ಕ ತಟ್ಟೆಯಲ್ಲಿ ನದಿಯ ಮರಳು ಇಟ್ಟು  ಸ್ವಲ್ಪ ನೀರು ಹಾಕಿ ಮುದ್ದೆ ಮಾಡಿ . ಅದನ್ನ  6 ಭಾಗ ಮಾಡಿ . ಅಂದರೆ ಮುಂದೆ ಒಂದು ಭಾಗ. ಗಣೇಶ ಹಿಂದೆ  ನಾಲ್ಕು ಮಧ್ಯ ಒಂದು ( ಮಂಗಳ ಗೌರೀಯಲ್ಲಿ ಮಾಡುವಂತೆ) ಸರಿಯಾಗಿ ಗೋಪುರದ ಆಕಾರದಲ್ಲಿ ಮಾಡಿ ಅದಕ್ಕೆ ಅರಸಿಣ ಕುಂಕುಮ ಹಚ್ಚಿ,   2  ಬಳೆಗಳನ್ನ ಇಟ್ಟು  ಮಾಂಗಲ್ಯ ಇದ್ದರೆ ಹಾಕಿ .

ಪಕ್ಕದಲ್ಲಿ 5 ವಿಳ್ಳದೆಲೆಯ ಕಳಶ ಇಟ್ಟು ಅದರಲ್ಲಿ ಸ್ವಲ್ಪ ನೀರು ಅರಸಿಣ ಕುಂಕುಮ ಮಂತ್ರಾಕ್ಷತೆ ಹಾಕಿ ಇಡಿ ಮುಂದೆ ಪುಟ್ಟ ಕನ್ನಡಿ ಇಡಿ .ಜೊತೆಗೆ ಗಂಗಾಜಲವುಳ್ಳ ತಂಬಿಗೆ ಗಣೇಶನನ್ನೂ ಇಡಿ . 

ಇದೆಲ್ಲವನ್ನೂ ಒಂದು ಚಿಕ್ಕ ಮಣೆ ಮೇಲೆ ಇಟ್ಟು ಅದಕ್ಕೆ ಹುರಿ ಇಂದ ಎರಡು ಕಡೆ ( ಉಯ್ಯಾಲೆ ಥರ ಕಟ್ಟಿ ) ಎರಡೂ ಹುರಿಯನ್ನು ಸೇರಿಸಿ ಅಲ್ಲೇ ಗೋಡೆಗೆ  ಅಂಟಿಸಿ . ಉಯ್ಯಾಲೆಯಲ್ಲಿ ಗೌರಮ್ಮನನ್ನು ಕೂಡಿಸಿದ ಹಾಗೆ ಚೆನ್ನಾಗಿ ಇರುತ್ತದೆ .ಮಣೆಯ ಕೆಳಗೆ ಆಧಾರವಾಗಿ ಬೇಕಾದರೆ ಅಷ್ಟೇ ಎತ್ತರದ ಆಸನ ಇಲ್ಲವೇ  ಇಟ್ಟಿಗೆಗಳನ್ನು ಇಡಬಹುದು . ಅದೆಲ್ಲ ಬರಿಯಲು ಕಷ್ಟ . ಅಲಂಕಾರ ಚೆನ್ನಾಗಿ ಕಾಣಿಸುವ ಹಾಗೆ ಮಾಡಿ . 

ಎಲ್ಲಾ ಪೂಜೆ ಸಾಮಾನುಗಳಿಂದ ಪೂಜೆ ಮಾಡಿ . ಒಂದು ತಿಂಗಳು ಕದಲಿಸಬಾರದು. ನಿತ್ಯಪೂಜೆ ಮಾಡಲು ಹಿಂದಿನ ದಿನದ  ನಿರ್ಮಾಲ್ಯದ ಹೂವು ಮಾತ್ರ ತೆಗೆಯಿರಿ. ದಿನಾ ಏರಿಸುವ ಗೆಜ್ಜೆ ವಸ್ತ್ರ ತೆಗೆಯಬೇಡಿ . ಪೂಜೆಗೆ  ದವನ   ಮಲ್ಲಿಗೆ ಶ್ರೇಷ್ಠ . ಶುಕ್ರವಾರ  ಮಂಗಳವಾರ ಮುತ್ತೈದೆಗೆ  ಅರಸಿಣ ಕುಂಕುಮ  ಕೋಸಂಬ್ರಿ ಮಜ್ಜಿಗೆ  ಪಾನಕ ದಕ್ಷಿಣೆ ಸಮೇತ ಕೊಡಿ . ಅಕ್ಷಯ ತದಿಗೆವರೆಗೂ ಪೂಜೆ ಮಾಡಿ ಕದಲಿಸಬೇಕು . ಅಷ್ಟರ ಒಳಗೆ  ಒಂದು ದಿನವಾದರೂ  ಹೂವೀಳ್ಯ (  ಮುತ್ತೈದೆಯರನ್ನು ಕರೆದು ಅರಸಿಣ ಕುಂಕುಮ  ಮಜ್ಜಿಗೆ ಪಾನಕ ಕೋಸಂಬ್ರಿ ದಕ್ಷಿಣೆ ವಿಳ್ಳದೆಲೆ 4  ಅಡಿಕೆ ಕೊಟ್ಟು ನಮಸ್ಕಾರ ಮಾಡಿ . 

ಅಕ್ಷಯತದಿಗೆ ಆದ ಮೇಲೆ ಒಂದು ಒಳ್ಳೆಯ ದಿನ ಗೌರಿಯನ್ನು ಕದಲಿಸಿ  ಗಿಡದ ಕೆಳಗಡೆ ಬಿಡಿ . 

ಪ್ರತಿ ಶುಕ್ರವಾರ  ಕಳಶದ ವಿಳ್ಳದೆಲೆ ಬೇರೆ ಇಟ್ಟು ಕಳಶದಲ್ಲಿ ಸ್ವಲ್ಪ ನೀರು ಅರಸಿಣ ಕುಂಕುಮ ಮಂತ್ರಾಕ್ಷತೆ ಹಾಕಿ . ಆದರೆ ಕಳಶ ತೆಗೆದು ತೊಳೆದು ಇಡುವ ಕೆಲಸ ಮಾಡಬೇಡಿ . ಇದ್ದ ಜಾಗದಲ್ಲೇ ವಿಳ್ಯದೆಲೆ ಬದಲಿಸಿ ಅಷ್ಟೇ .

ಶುಕ್ರವಾರ ತದಿಗೆ  ಹುಣ್ಣಿಮೆಯ ದಿನ ಒಬ್ಬ ಮುತ್ತೈದೆಗೆ ಉಡಿ ತುಂಬಿ . 

 ಅನುಕೂಲ ಇದ್ದವರು ಹಬ್ಬದ ಅಡಿಗೆ ಮಾಡಿ ಬಡಿಸಬಹುದು .

ಒಂದು ಶುಕ್ರವಾರ  ಅಥವಾ ಹುಣ್ಣಿಮೆ ದಿನ ಮರದ ಬಾಗಿನ ಅನುಕೂಲ ಇದ್ದವರು ಕೊಡಬಹುದು . 

ಮುಖ್ಯವಾಗಿ ಭಕ್ತಿಯಿಂದ ಪೂಜೆ ಮಾಡುವುದು ಶ್ರೇಷ್ಠ .

ಶ್ರೀಮಧ್ವೇಶಾರ್ಪಣಮಸ್ತು

***

No comments:

Post a Comment