SEARCH HERE

Showing posts with label ವಿಶ್ವಾಸ- ಅಹಂಕಾರದ ಲಕ್ಷಣ ಗಳು ahankara lakshana. Show all posts
Showing posts with label ವಿಶ್ವಾಸ- ಅಹಂಕಾರದ ಲಕ್ಷಣ ಗಳು ahankara lakshana. Show all posts

Thursday, 8 April 2021

ಅಹಂಕಾರದ ಲಕ್ಷಣ ಗಳು ahankara lakshana

ಅಹಂಕಾರದ ಮುಖ್ಯ ಲಕ್ಷಣ ಗಳು
೧. ತಕ್ಷಣ ಸಿಡುಕುವುದು
೨. ಮತ್ತೊಬ್ಬರ ಭಾವನೆಗಳನ್ನು ನಿರ್ಲಕ್ಷ್ಯಿಸುವುದು
೩.ನನಗೆ ಎಲ್ಲ ಗೊತ್ತು,ನನಗೆ ಎಲ್ಲ ಸಾದ್ಯವಿದೆ ಎಂದು ಭಾವಿಸುವುದು.
೪.ತನ್ನ ಶಕ್ತಿ ಸಾಧನೆಯ ಕಡೆ ಜನರ
    ಶ್ರದ್ಧೆ ಆಕರ್ಷಿಸುವುದು.
೫. ತನ್ನ ಮೇಲಿರುವ ವಿಮರ್ಶಣೆ ಕೇಳಿದರೆ ಸಿಡುಕುತ್ತಾನೆ
೬. ವಿಮರ್ಶಕರಿಂದ ದೂರ ಸರಿಯುತ್ತಾನೆ
೭. ಮಾತುಗಳನ್ನು ಆಡಿ  ವಾದಕ್ಕಿಳಿಯುತ್ತಾನೆ
೮. ಕ್ಷ ಮಿಸಲು ಒಪ್ಪುವುದಿಲ್ಲ
೯. ತಿದ್ದುಪಡಿಗಳನ್ನು ಒಪ್ಪುವುದಿಲ್ಲ
೧೦. ವಿಧೇಯತೆ ಇರುವುದಿಲ್ಲ
೧೧. ಆರೋಪಿಸಿ ಕಿರಿಕಿರಿ ಮಾಡುತ್ತಾನೆ
೧೨. ಸ್ವ ನಾಶ ಹೊಂದಿದರು ಸೋಲು ಒಪ್ಪುವುದಿಲ್ಲ
೧೩. ಸ್ವಂತ ಸಾಧನೆಯ ಕುರಿತು ಚಿಂತಿಸಿ  ಅದರಲ್ಲಿ ಮುಳುಗುವನು
೧೪. ದೇವರಲ್ಲಿ ಆಶ್ರಯ ಪಡುವುದಿಲ್ಲ
೧೫. ಇನ್ನೊಬ್ಬರನ್ನು ಹಿಯಾಳಿಸಿ ಕೀಳಾಗಿ ಮಾತನಾಡುವುದು
೧೬. ಸೋತರೆ ಸೋಲಿಸಿದವರೊಂದಿಗೆ ಹಗೆತನ ಇಡುವುದು
೧೭. ಸ್ವಂತ ತಪ್ಪುಗಳನ್ನು ತಿಳಿಯದೆ ಅದು ಆವರ್ತಿಸುವುದು
೧೮. ಒಳ್ಳೆಯ ಸಂಬಂಧಗಳನ್ನು ಸ್ಥಾಪಿಸಲೋ ಇರುವುದನ್ನು ನೆಲೆಸಲು ಸಾಧಿಸುವುದಿಲ್ಲ
೧೯. ತನ್ನ ಇಷ್ಟದಂತೆ ವರ್ತಿಸುವುದು
೨೦. ಜಂಭ ಕೊಚ್ಚುವುದು

ಅಹಂಕಾರಿ ಸಾಮಾನ್ಯವಾಗಿ ಬಳಸುವ ಪದಗಳು
*. ನನಗೆ ತಿಳಿಸಲಿಲ್ಲ ನನ್ನೊಂದಿಗೆ ಯಾರೂ ಹೇಳಲಿಲ್ಲ
*. ಇದಕ್ಕಿಂತಲೂ ಚೆನ್ನಾಗಿ ನಾನು ಮಾಡಿ ತೋರಿಸುತ್ತಿದ್ದೆ
*. ನನಗೆ ಗೊತ್ತಿದ್ದಶ್ಟು ನಿಮಗೆ  ಗೊತ್ತಿಲ್ಲ
*. ನಾನು ಸತ್ತರೆ ಅದು ಇಲ್ಲಿ ನಡೆಯುವುದು
*. ನನ್ನ ಹತ್ತಿರ ನಿಮ್ಮ ಆಟ ನಡೆಯುವುದಿಲ್ಲ
*. ನಿನಗೆ ನನ್ನ ವಿಷಯ ಗೊತ್ತಿಲ್ಲ
*. ನನ್ನ ವಿಷಯ ನಾನು ನೋಡಿ ಕೊಳ್ಳುತ್ತೇನೆ
*. ನಾನು ಯಾರೆಂದು ಅವನಿಗೆ ತೋರಿಸುತ್ತೇನೆ
*. ನಾನು ಇಂತಹದು ಎಷ್ಟೋ ನೋಡಿದ್ದೇನೆ
*. ನನ್ನ ಒಂದು ಮುಖ ಮಾತ್ರ ನೀ ನೋಡಿದ್ದು
*. ನಿನ್ನ ಒಂದೂ ಸಹಾಯವಿಲ್ಲದೆ ನಾನು ಬದುಕ ಬಲ್ಲೆ

ಈ ಮೇಲೆ ತಿಳಿಸಿದ ಕಾರ್ಯಗಳು ತಮ್ಮಲ್ಲಿ ಇದ್ದರೆ ಚಿಂತಿಸಿ ನಾನು ಒಬ್ಬ ಅಹಂಕಾರಿಯೋ 
*****