SEARCH HERE
Showing posts with label ವಿಶ್ವಾಸ- ಕರೆಯದವರ ಮನೆಗೆ ಊಟಕ್ಕೆ ಹೋಗಬೇಡ. Show all posts
Showing posts with label ವಿಶ್ವಾಸ- ಕರೆಯದವರ ಮನೆಗೆ ಊಟಕ್ಕೆ ಹೋಗಬೇಡ. Show all posts
Wednesday, 14 April 2021
ಕರೆಯದವರ ಮನೆಗೆ ಊಟಕ್ಕೆ ಹೋಗಬೇಡ
ಚಿನ್ನದಂಥ ಸಾಲುಗಳು:
ಕರೆಯದವರ ಮನೆಗೆ
ಊಟಕ್ಕೆ ಹೋಗಬೇಡ
ಕರುಣೆ ಇಲ್ಲದವರ ಹತ್ತಿರ
ಕಷ್ಟವನು ಹೇಳಬೇಡ
ಬಂದ ಭಾಗ್ಯವನು
ಕಾಲಲ್ಲಿ ಒದೆಯಬೇಡ
ಹಸಿವಿರದವಗೆ ಒತ್ತಾಯದ
ಊಟ ಬಡಿಸಬೇಡ
ಹೃದಯಹೀನರ ಹತ್ತಿರ
ಪ್ರೀತಿ ಭಿಕ್ಷೆ ಬೇಡಬೇಡ
ಹೆತ್ತವರೆದುರು ಎದೆಗೊಟ್ಟು
ಮಾತನಾಡಬೇಡ
ನದಿಮೂಲ ಹುಡುಕುವ
ತಂಟೆಗೆ ಹೋಗಬೇಡ
ದೇವರಿಲ್ಲವೆಂದು ಹುಚ್ಚು
ವಾದ ಮಾಡಬೇಡ
ನೊಂದವರ ನಿಟ್ಟುಸಿರಿಗೆ
ಕಾರಣನಾಗಬೇಡ
ಒಡಹುಟ್ಟಿದವರ ಪ್ರೀತಿಗೆ
ಪುರಾವೆ ಕೇಳಬೇಡ
ಕಂಡವರ ಎದುರಿಗೆ
ಹೆಂಡತಿಯ ನಿಂದಿಸಬೇಡ
ಗುರುಹಿರಿಯರ ಮಾತಿಗೆ
ಎದುರುತ್ತರ ಕೊಡಬೇಡ
ಅಸಹಾಯಕರ ಸ್ಥಿತಿಯ
ಕಂಡು ನಗಬೇಡ
ಸ್ನೇಹಿತನನ್ನು ನಂಬಿಸಿ
ಬೆನ್ನಿಗೆ ಚೂರಿ ಇರಿಯಬೇಡ
ಬಾಯಾರಿದಾಗ ನೀರುಕೊಟ್ಟ
ಮನೆಯನು ಮರೆಯಬೇಡ
ಯಾರನ್ನು ಅತಿಯಾಗಿ ನಂಬಿ
ಮೋಸಹೋಗಬೇಡ
ಕ್ಷೇಮವಾಗಿ ಮನೆ ತಲುಪಿಸಿದ
ದಾರಿಯನು ಮರೆಯಬೇಡ..
ಒಂಟಿ ನಾನೆನ್ನುವಾಗ,
ಜೊತೆ ಬಂದ ಮನವನು ಮರೆಯಬೇಡ
********
Subscribe to:
Posts (Atom)