SEARCH HERE

Showing posts with label ಆರೋಗ್ಯ- ಕೂದಲಿಗೆ ಆಗುವ ಲಾಭಗಳು ಒಂದೆಲಗ ಸೊಪ್ಪಿನಿಂದ. Show all posts
Showing posts with label ಆರೋಗ್ಯ- ಕೂದಲಿಗೆ ಆಗುವ ಲಾಭಗಳು ಒಂದೆಲಗ ಸೊಪ್ಪಿನಿಂದ. Show all posts

Friday, 1 October 2021

ಕೂದಲಿಗೆ ಆಗುವ ಲಾಭಗಳು ಒಂದೆಲಗ ಸೊಪ್ಪಿನಿಂದ

 ಒಂದೆಲಗ ಸೊಪ್ಪಿನಿಂದ ಆರೋಗ್ಯ, ತ್ವಚೆ ಹಾಗೂ ಕೂದಲಿಗೆ ಆಗುವ ಲಾಭಗಳು


ಭಾರತದಲ್ಲಿ ವಿಶೇಷವಾಗಿ ಸಿಗುವಂತಹ ಒಂದೆಲಗ ಎನ್ನುವ ತುಂಬಾ ಸಣ್ಣ ಗಿಡಮೂಲಿಕೆಯು ಜೌಗು ಪ್ರದೇಶ ಮತ್ತು ನೈಸರ್ಗಿಕವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುವುದು. ಇದನ್ನು ತರಕಾರಿಯಾಗಿಯೂ ಪ್ರತಿನಿತ್ಯ ಸೇವಿಸಬಹುದು ಮತ್ತು ಔಷಧಿಗೆ ಗಿಡಮೂಲಿಕೆಯಾಗಿಯೂ ಬಳಸಬಹುದು. ಒಂದೆಲಗದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಇದರಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ವಿಜ್ಞಾನಿಗಳು ದೃಢಪಡಿಸಿದ್ದರೂ ಕೆಲವರು ಇನ್ನೂ ಇದರ ಬಗ್ಗೆ ಚರ್ಚಿಸುತ್ತಿದ್ದಾರೆ. ಒಂದೆಲಗದಿಂದ ಆರೋಗ್ಯಕ್ಕೆ, ತ್ವಚೆ ಹಾಗೂ ಕೂದಲಿಗೆ ಯಾವ ರೀತಿಯ ಲಾಭಗಳು ಇವೆ ಎಂದು ತಿಳಿಯುವ....


ಒಂದೆಲಗದ ಆರೋಗ್ಯ ಲಾಭಗಳು

ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕು ನಿವಾರಿಸುವುದು


ಈ ಗಿಡಮೂಲಿಕೆಯನ್ನು ಸಾಮಾನ್ಯ ಶೀತ, ಮೂತ್ರನಾಳದ ಸೋಂಕು, ಸರ್ಪಸುತ್ತು, ಕ್ಷಯರೋಗ, ಕುಷ್ಟರೋಗ, ಹಂದಿಜ್ವರ, ಭೇದಿ, ಕಾಲರಾ ಇತ್ಯಾದಿಗಳ ಚಿಕಿತ್ಸೆಗೆ ಬಳಸಿಕೊಳ್ಳಬಹುದು. ಮನುಷ್ಯರಲ್ಲಿ ಕಾಣಿಸುವ ವೈರಲ್, ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ಸೋಂಕಿಗೆ ಇದನ್ನು ಬಳಸಲಾಗುವುದು.


ಬಳಲಿಕೆ ನಿವಾರಿಸುವುದು

ಬಳಲಿಕೆ ನಿವಾರಿಸುವುದು

ಇದು ಬಳಲಿಕೆ ನಿವಾರಣೆ ಮಾಡಲು ತುಂಬಾ ಸಹಕಾರಿ. ಈ ಗಿಡಮೂಲಿಕೆ ಸೇವಿಸಿದರೆ ನಿಮ್ಮಲ್ಲಿನ ಬಳಲಿಕೆಯು ದೂರವಾಗಿ ಶಕ್ತಿ ಬರುವುದು.


ನೆನಪಿನ ಶಕ್ತಿ ಹೆಚ್ಚಿಸುವುದು

ಒಂದೆಲಗ ನೆನಪಿನ ಶಕ್ತಿ ಹಾಗೂ ಬುದ್ಧಿ ಹೆಚ್ಚಿಸಿ, ಅಲ್ಝೈಮರ್, ಖಿನ್ನತೆ ಮತ್ತು ಆತಂಕ ಇತ್ಯಾದಿ ದೂರ ಮಾಡಲು ನೆರವಾಗುವುದು.


ಗಾಯ ಹಾಗೂ ಸುಟ್ಟ ಗಾಯ ಶಮನ

ಗಾಯ ಹಾಗೂ ಸುಟ್ಟ ಗಾಯ ಶಮನ

ವೈಜ್ಞಾನಿಕವಾಗಿ ಸೆಂಟೆಲ್ಲಾ ಏಷಿಯಾಟಿಕಾ ಎಂದು ಕರೆಯಲ್ಪಡುವಂತಹ ಈ ಗಿಡಮೂಲಿಕೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದಾಗಿ ಈ ಗಿಡಮೂಲಿಕೆಯನ್ನು ಗಾಯ, ಸುಟ್ಟ ಗಾಯ, ಸೋರಿಯಾಸಿಸ್, ಡರ್ಮಟೈಟಿಸ್ ಇತ್ಯಾದಿಗಳ ಚಿಕಿತ್ಸೆಗೆ ಬಳಸಬಹುದು. ಇದು ಗಾಯ, ಸುಟ್ಟಗಾಯ ಶಮನ ಮಾಡುವುದು. ಯಾಕೆಂದರೆ ಇದು ಬಾಧಿತ ಜಾಗಕ್ಕೆ ರಕ್ತಸಂಚಾರ ಹೆಚ್ಚಿಸಿ, ಆ್ಯಂಟಿಆಕ್ಸಿಡೆಂಟ್ ಮಟ್ಟ ವೃದ್ಧಿಸುವುದು. ಆ್ಯಂಟಿಆಕ್ಸಿಡೆಂಟ್ ಗಳು ಹೆಚ್ಚಾದರೆ ಆಗ ನಾರಿನ ಉತ್ಪತ್ತಿಯು ಹೆಚ್ಚಾಗುವುದು. ನಾರು ಕಾಲಜನ್ ನ್ನು ಸಂಶ್ಲೇಷಣೆ ಮಾಡಿ ಚರ್ಮದಲ್ಲಿ ಮೂಡಿರುವಂತಹ ಗಾಯದ ಗುರುತುಗಳನ್ನು ತೆಗೆಯಲು ನೆರವಾಗುವುದು.


ಸರಿಯಾಗಿ ನಿದ್ದೆ ಬರದಿದ್ದರೆ... 


ಸರಿಯಾಗಿ ನಿದ್ದೆ ಬರದಿದ್ದರೆ...

ತಲೆಯ ಚರ್ಮವನ್ನು ಬ್ರಾಹ್ಮಿ ತೈಲದಿಂದ ಮಸಾಜ್ ಮಾಡಿ ಕೊಂಚ ನಡೆದಾಡಿ ಒಂದು ಲೋಟ ಹಾಲು ಕುಡಿದು ಮಲಗಿದಾಗ ಗಾಢ ನಿದ್ದೆ ಆವರಿಸುವುದನ್ನು ಕಂಡುಕೊಳ್ಳಲಾಗಿದೆ. ಉತ್ತಮ ಆರೋಗ್ಯಕ್ಕೆ ನಿದ್ದೆ ತುಂಬಾ ಅಗತ್ಯ ನಿದ್ರಾರಾಹಿತ್ಯದ ಕಾರಣ ಮನೋವಿಕಲ್ಪ, ಖಿನ್ನತೆ, ಒತ್ತಡ ಮೊದಲಾದವುಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಅಷ್ಟೇ ಅಲ್ಲ, ಕೆಲವು ಮಕ್ಕಳು ಅಗತ್ಯಕ್ಕಿಂತಲೂ ಹೆಚ್ಚು ಚುರುಕಾಗಿರುವುದು (hyperactive) ಅಪಾಯಕ್ಕೆ ಎದುರಾಗ ಬಹುದಾದುದರಿಂದ ಮಕ್ಕಳ ತಲೆಗೂ ಬ್ರಾಹ್ಮಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಸಹಜ ಸ್ಥಿತಿಗೆ ತರಲು ಸಾಧ್ಯ.


ಸೆಲ್ಯೂಲೈಟ್ ವಿರುದ್ಧ ಹೋರಾಡುವುದು

ಸೆಲ್ಯೂಲೈಟ್ ವಿರುದ್ಧ ಹೋರಾಡುವುದು

ಒಂದೆಲಗ ಚರ್ಮದಲ್ಲಿ ಸೆಲ್ಯೂಲೈಟ್ ವಿರುದ್ಧ ಹೋರಾಡಲು ಹಿಂದಿನಿಂದಲೂ ಬಳಸಿಕೊಂಡು ಬರಲಾಗುತ್ತಾ ಇದೆ. ಸೆಲ್ಯೂಲೈಟ್ ಬೊಕ್ಕೆ, ಮೊಡವೆ ಉಂಟು ಮಾಡುವುದು. ಸೆಲ್ಯೂಲೈಟ್ ಕೈಯ ಮೇಲ್ಭಾಗ, ತೊಡೆ ಹಾಗೂ ಪೃಷ್ಠದದಲ್ಲಿ ಕಾಣಿಸಿಕೊಳ್ಳುವುದು. ಒಂದೆಲೆಗ ಈ ಭಾಗದಲ್ಲಿ ರಕ್ತಸಂಚಾರವನ್ನು ಹೆಚ್ಚಿಸಿ, ಉರಿಯೂತ ಕಡಿಮೆ ಮಾಡುವುದು.


ವಯಸ್ಸಾಗುವ ಚರ್ಮಕ್ಕೆ


ವಯಸ್ಸಾಗುವ ಚರ್ಮಕ್ಕೆ

ಒಂದೆಲಗ ತ್ವಚೆಗೆ ಟೋನರ್ ಆಗಿ ಕೆಲಸ ಮಾಡುವುದು. ಇದು ಚರ್ಮವನ್ನು ಬಿಗಿಗೊಳಿಸುವುದು. ಇದರಿಂದಾಗಿ ವಯಸ್ಸಾಗುವ ಲಕ್ಷಣ ತಡೆಯುವ, ನೆರಿಗೆ ನಿವಾರಣೆ ಮಾಡುವಂತಹ ಕ್ರೀಮ್ ಗಳಲ್ಲಿ ಒಂದೆಲಗ ಬಳಸುವರು. ಈ ಗಿಡಮೂಲಿಕೆಯು ಕಾಲಜನ್ ಉತ್ಪತ್ತಿ ಹೆಚ್ಚಿಸುವುದು. ಇದರಿಂದ ವಯಸ್ಸಾಗುವ ಚರ್ಮ, ನೆರಿಗೆ ಮತ್ತು ಗೆರೆಗಳನ್ನು ನಿವಾರಿಸುವುದು. ಕಾಲಜನ್ ಉತ್ಪತ್ತಿಯು ಕಡಿಮೆಯಾದರೆ ಅದರಿಂದ ನೆರಿಗೆ, ವಯಸ್ಸಾಗುವಾಗ ಮೂಡುವ ಗೆರೆಗಳು ಮೂಡುವುದು. ಒಂದೆಲಗ ಕಾಲಜನ್ ಉತ್ಪತ್ತಿ ಹೆಚ್ಚಿಸುವ ಕಾರಣದಿಂದಾಗಿ ಇದನ್ನು ವಯಸ್ಸಾಗುವ ಲಕ್ಷಣ ತಡೆಯುವ ಕ್ರೀಮ್ ಗಳಲ್ಲಿ ಬಳಸುವರು.


ಚರ್ಮದ ಕಾಂತಿ ಹೆಚ್ಚಿಸುತ್ತದೆ 

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಬ್ರಾಹ್ಮಿ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ಸಮರ್ಥವಾಗಿವೆ. ವಿಶೇಷವಾಗಿ ಚರ್ಮದ ಹೊರಪದರ (epidermis ಅಥವಾ epithilial layer)ದಲ್ಲಿ ಅಂಟಿಕೊಂಡಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮ ಹೊಸ ಜೀವಕೋಶಗಳನ್ನು ಪಡೆಯುವ ಮೂಲಕ ಸಹಜಕಾಂತಿಯನ್ನು ಹೆಚ್ಚಿಸಿಕೊಳ್ಳುತ್ತದೆ.ಅಷ್ಟೇ ಅಲ್ಲ, ಚರ್ಮದ ಕೆಳಪದರ (ಹೈಪೋಡರ್ಮಿಸ್) ಮತ್ತು connective tissueಗಳಲ್ಲಿ ರಕ್ತಪರಿಚಲನೆ, ತೈಲಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಚರ್ಮದ ಆರೋಗ್ಯ ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಚರ್ಮವ್ಯಾಧಿಗಳಾದ ಸೋರಿಯಾಸಿಸ್ (psoriasis), ತುರಿಕೆ (eczema), ಕೀವು (abscess) ಮತ್ತು ವ್ರಣ (ulceration) ಗಳಾಗುವುದನ್ನು ತಡೆಯುತ್ತದೆ ಹಾಗೂ ಈಗಾಗಲೇ ಇದ್ದರೆ ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.


ಕೂದಲು ಉದುರುವಿಕೆ ತಡೆಯಲು ಹೇಗೆ ನೆರವಾಗುವುದು?


ಕೂದಲು ಉದುರುವಿಕೆ ತಡೆಯಲು ಹೇಗೆ ನೆರವಾಗುವುದು?

ಒಂದೆಲಗವನ್ನು ತುಂಬಾ ಹಿಂದಿನಿಂದಲೂ ಕೂದಲು ಉದುರುವಿಕೆ ತಡೆಯಲು ಬಳಸಲಾಗುತ್ತಿದೆ. ಇದು ಕೂದಲಿನ ಮರುಬೆಳವಣಿಗೆಗೆ ನೆರವಾಗುವುದು. ಕೂದಲಿನ ಕಿರುಚೀಲಗಳು ಪೋಷಣೆಯಿಲ್ಲದೆ ದುರ್ಬಲಗೊಂಡಾಗ ಕೂದಲು ಉದುರುವುದು. ಈ ಗಿಡಮೂಲಿಕೆಯು ಕೂದಲಿನ ಕಿರುಚೀಲಗಳನ್ನು ಬಲಗೊಳಿಸಿ, ತಲೆಬುರುಡೆಗೆ ಪೋಷಣೆ ನೀಡುವುದು. ಇದು ರಕ್ತಸಂಚಾರ ಉತ್ತಮಪಡಿಸಿ, ಕೂದಲ ಬೆಳವಣಿಗೆಗೆ ನೆರವಾಗುವುದು.


ತಲೆಬುರುಡೆಯಲ್ಲಿ ರಕ್ತಸಂಚಾರ ಸುಧಾರಣೆ

ತಲೆಬುರುಡೆಯಲ್ಲಿ ರಕ್ತಸಂಚಾರ ಸುಧಾರಣೆ

ಒಂದೆಲಗದಿಂದಾಗಿ ರಕ್ತನಾಳಗಳು ಆರಾಮವಾಗಿ ರಕ್ತ ಸಂಚಾರವು ಉತ್ತಮವಾಗುವುದು. ಇದರಿಂದ ಆಮ್ಲಜನಕ ಮತ್ತು ಇತರ ಪೋಷಕಾಂಶಗಳು ತಲೆಬುರುಡೆಗೆ ಪ್ರವೇಶಿಸಲು ಜಾಗ ಸಿಗುವುದು. ಒಂದೆಲಗವು ತಲೆಬುರುಡೆಗೆ ಪೋಷಣೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವುದು, ಕೂದಲು ಉದುರುವುದನ್ನು ತಡೆಯುವುದು ಮತ್ತು ಕೂದಲು ಬೆಳೆಯಲು ನೆರವಾಗುವುದು. ಇದರಿಂದ ಬಲಿಷ್ಠ, ಕಾಂತಿಯುತ ಕೂದಲು ನಮ್ಮದಾಗುವುದು.

***