SEARCH HERE

Showing posts with label ವಿಶ್ವಾಸ- ಸುವರ್ಣ ಮಂತ್ರಾಕ್ಷತೆ ಮಹತ್ವ. Show all posts
Showing posts with label ವಿಶ್ವಾಸ- ಸುವರ್ಣ ಮಂತ್ರಾಕ್ಷತೆ ಮಹತ್ವ. Show all posts

Friday, 1 October 2021

ಸುವರ್ಣ ಮಂತ್ರಾಕ್ಷತೆ ಮಹತ್ವ

 “ಸುವರ್ಣ ಮಂತ್ರಾಕ್ಷತೆ” ಮತ್ತು ಮಹತ್ವಗಳು..!


ಹೀಗೆ ಗುರುಗಳು ಕೊಡುವ “ಮಂತ್ರಾಕ್ಷತೆಗೆ ” “ಸುವರ್ಣಮಂತ್ರಾಕ್ಷತೆ” ಎಂದು ಹೆಸರು..!!!

ಹಣ್ಣಾದರೆ ಪ್ರಸಾದವಾಗಿ ತಿನ್ನಬಹುದು, ಆದರೆ “ಸುವರ್ಣ ಮಂತ್ರಾಕ್ಷತೆ” ಏನು ಮಾಡಬೇಕು..? ಇಲ್ಲಿದೆ ನೋಡಿ ಮಾಹಿತಿ..


“ಸುವರ್ಣ ಮಂತ್ರಾಕ್ಷತೆ” ಯನ್ನು ಬರೀ ಕೈಯಲ್ಲಿ ತೆಗೆದುಕೊಳ್ಳಬಾರದು..!


ತೆಗೆದುಕೊಳ್ಳುವವರು ಪುರುಷರಾದರೆ “ಶಲ್ಯ” ದ ತುದಿಯಿಂದ ತೆಗೆದುಕೊಳ್ಳಬೇಕು..!


“ಹೆಂಗಸರಾದರೆ” “ಸೀರೆಯ” “ಸೆರಗಿನ ತುದಿ” ಯಿಂದ ತೆಗೆದುಕೊಳ್ಳಬೇಕು..!


ಹೆಂಗಸರ ಸೀರೆಯ ಸೆರಗಿನಲ್ಲಿ ಸದಾ ಲಕ್ಷ್ಮೀದೇವಿ ನೆಲೆಸಿರುತ್ತಾರಂತೆ..!


ಅದಕ್ಕೆ ನಮ್ಮ ಹಿರಿಯರು ಸೆರಗಿನಲ್ಲಿ ಯಾವಾಗಲೂ ಸ್ವಲ್ಪವಾದರೂ ಹಣವನ್ನು ಇಟ್ಟುಕೊಂಡಿರುತ್ತಿದ್ದರು..!


೧. ಸುವರ್ಣ ಮಂತ್ರಾಕ್ಷತೆಯನ್ನು “ನಗದು” ಪೆಟ್ಟಿಗೆಯಲ್ಲಿ ಇಟ್ಟು ಪ್ರತಿದಿನ ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯಲ್ಲಿನ ಸರ್ವದಾರಿದ್ರ್ಯಗಳೂ ನಿವಾರಣೆಯಾಗುತ್ತದೆ..!


೨. ವ್ಯಾಪಾರ-ವ್ಯವಹಾರ ಮಾಡುವ ಜಾಗದಲ್ಲಿ ಇಟ್ಟು ಪೂಜಿಸಿದರೆ ಅಧಿಕ ಲಾಭವಾಗಿ ಅಭಿವೃದ್ಧಿ ಆಗುತ್ತದೆ..


೩. ಸುವರ್ಣ ಮಂತ್ರಾಕ್ಷತೆಯನ್ನು ದೇವರ ಮನೆಯಲ್ಲಿ ಪ್ರತಿದಿನ ಇಟ್ಟು ಪೂಜಿಸುತ್ತಿದ್ದರೆ ಆ ಮನೆಯ ಮೇಲೆ ಯಾವುದೇ ದುಷ್ಟಮಂತ್ರಗಳು, ಮಾಟ ಮಂತ್ರಗಳು ಕೆಲಸ ಮಾಡುವುದಿಲ್ಲ..!


೪. ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ ಗುರುಗಳ ಪ್ರಾರ್ಥನೆ ಮಾಡಿ “ಗುರುಚರಿತ್ರೆ” ಪಾರಾಯಣ ಮಾಡಿದರೆ,

ಜಾತಕದಲ್ಲಿನ “ಗುರು” ಗ್ರಹದ ನೀಚತ್ವ ದೋಷ , ಗುರುಶಾಪ, ಗುರುಅಸ್ತದ ದೋಷಗಳು ಪೂರ್ಣ ನಿವಾರಣೆಯಾಗಿ , “ಜಾತಕಸ್ಥರು ಜೀವನದಲ್ಲಿ ಇತ್ತಮವಾದ ನೆಲೆ ಕಂಡುಕೊಳ್ಳುತ್ತಾರೆ..!


೬. ಪ್ರತಿದಿನ ಪೂಜೆ ಮಾಡುವಾಗ ” ಸುವರ್ಣಮಂತ್ರಾಕ್ಷತೆಗೆ” ಪೂಜೆ ಮಾಡಿದರೆ “ಲಕ್ಷ್ಮೀ” ದೇವಿಯ ಪೂರ್ಣ ಅನುಗ್ರಹವಾಗಿ ಸಮಸ್ತ ಸಾಲದಭಾಧೆ ನಿವಾರಣೆಯಾಗುತ್ತದೆ..!


೭. ಸುವರ್ಣ ಮಂತ್ರಾಕ್ಷತೆಯನ್ನು ಬೆಳ್ಳಿಯ ತಾಯತದಲ್ಲಿಟ್ಟು , ಶಾಸ್ತ್ರೋಕ್ತವಾಗಿ ಧರಿಸಿದರೆ ಸಕಲ ಕಾರ್ಯ ದಿಗ್ವಿಜಯವಾಗಿ , ಮನೋಸಂಕಲ್ಪ ನೆರವೇರುತ್ತದೆ..!


೮. ಮನೆ ಕಟ್ಟುವಾಗ, ಬಾವಿ ತೋಡಿಸುವಾಗ, ಸುವರ್ಣ ಮಂತ್ರಾಕ್ಷತೆ ಪೂಜೆ ಮಾಡಿ, ಗುರುಗಳ ಪ್ರಾರ್ಥನೆ ಮಾಡಿ ಪೂಜಿಸಿದರೆ ಮನೆಯ ಕೆಲಸಗಳು ನಿರ್ವಿಘ್ನವಾಗಿ ನೆರವೇರುತ್ತದೆ.. ಬಾವಿಯಲ್ಲಿ ಸಿಹಿಯಾದ ನೀರು ಬರುತ್ತದೆ.


ಈ ಮಂತ್ರಾಕ್ಷತೆಯಿಂದ

1. ವಿದ್ಯಾರ್ಥಿಗಳಿಗೆ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ , ವಿದ್ಯಾಭಿವೃದ್ದಿ ಆಗುತ್ತದೆ..!

2. ಸಕಲ ವ್ಯಾಧಿಗಳು ರೋಗಗಳು ನಿವಾರಣೆಯಾಗುತ್ತದೆ..

3. ಪ್ರಯಾಣದಲ್ಲಿನ ತೊಂದರೆಗಳನ್ನು ನಿವಾರಿಸುತ್ತದೆ..

4. ಮನೆಯಲ್ಲಿನ ಸರ್ವದೋಷಗಳು ನಿವಾರಣೆಯಾಗಿ ಉತ್ತಮವಾದ ಅಭಿವೃದ್ಧಿ ಹೊಂದುತ್ತಾರೆ..

5. "ಅಕ್ಷತೆ" ಇಲ್ಲದೇ ಆಶೀರ್ವಾದ ಮಾಡಬಾರದು..!

 

 ಕೃಷ್ಣಾರ್ಪಣಮಸ್ತು

(ಸತ್ಸಂಗ ಸಂಗ್ರಹ)

***