SEARCH HERE

Showing posts with label ಆಚಾರ- ಕಾರ್ತಿಕ ಸ್ನಾನ karteeka snana. Show all posts
Showing posts with label ಆಚಾರ- ಕಾರ್ತಿಕ ಸ್ನಾನ karteeka snana. Show all posts

Saturday, 25 September 2021

ಕಾರ್ತಿಕ ಸ್ನಾನ karteeka snana

 ಕಾರ್ತಿಕ ಸ್ನಾನ


ಅಶ್ವೀನ ಶುಕ್ಲ ದಶಮೀ, ಅಥವಾ ಏಕಾದಶೀ, ಇಲ್ಲವೇ
ಹುಣ್ಣಿವೆಯಿಂದಾರಂಭಸಿ ಪ್ರತಿದಿನ ತೀರ್ಥಾದಿಗಳಲ್ಲಿ ಒಂದು ತಿಂಗಳ
ವರೆಗೆ ಸ್ನಾನಮಾಡತಕ್ಕದ್ದು. 

ಸೂರ್ಯೋದಯಕ್ಕಿಂತ ಮುಂಚೆ ಎರಡು
ಘಟಿ ಇರುವಾಗ ಸ್ನಾನಮಾಡತಕ್ಕದ್ದು. ಇದಕ್ಕೆ “ಕಾರ್ತಿಕ
ಸ್ನಾನ”ವೆನ್ನುವರು.

ಇದರ ಕ್ರಮ ಹೇಗೆಂದರೆ ವಿಷ್ಟು ಸ್ಮರಣೆ ಮಾಡಿ ದೇಶ
ಕಾಲಗಳನ್ನುಚ್ಚರಿಸಿ “ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ!
ನಮುಸ್ತೇಸ್ತು ಹೃಷಿಕೇಶ ಗ್ರಹಾಣಾರ್ಥುಂ೦ ನಮೋಸ್ತುತೇ” ಹೀಗೆ
ಉಚ್ಚರಿಸಿ ಅರ್ಘವನ್ನು ಕೊಟ್ಟು “ಕಾರ್ತಿಕೇಇಹಂ ಕರಿಷ್ಠಾಮಿ
ಪ್ರಾತ:ಸ್ನಾಸಂ ಜನಾರ್ದನ ಓಪ್ರೀತೃರ್ಥಂತವ ದೇವೇಶ
ದಾಮೋದರವಿನಷ್ಯತು! ಧ್ಯಾತ್ರಾಹಂ ತ್ವಾಂಚ ದೇವೇಶ ಜಲೇಸ್ಮಿನ್‌
ಸ್ನಾತುಮುದ್ಯತಃಚೆತವಪ್ರಸಾದಾತ್ರಾಪಂಮೇ
ದಾಮೋದರ ಎನಶೃತು॥” ಈ ಮಂತ್ರಗಳಿಂದ ಸ್ನಾನಮಾಡಿ ಪುನ:
ಎರಡಾವರ್ತಿ ಅರ್ಘವನ್ನು ಕೊಡತಕ್ಕದ್ದು. 

“ನಿತ್ನೇನೈಮಿತ್ತಾಕೇ ಕೃಷ್ಣ
ಕಾರ್ಷಿಕೇ ಪಾಪನಾಶನೇ। ಗೃಹಾಣಾರ್ಘಂ ಮಯಾದತ್ತಂ ರಾಧಮಾ
ಸಹಿತೋಷಹರೇ॥! ವ್ರತಿನ: ಕಾರ್ತಿಕೇಮಾಪಿ ಸ್ನಾತಸ್ಮ ವಿಧಿವನ್ಮ್ನಮ।
ಗೃಹಣಾರ್ಘಂ ಮಯಾದತ್ತಂ ರಾಧಯಾ ಸಹಿತೋಹರೇ” ಇವೇ ಅರ್ಘ
ಮಂತ್ರಗಳು. ಕುರುಕ್ಷೇತ್ರ, ಗಂಗಾ, ಪುಷ್ಕರ ಮೊದಲಾದ
ತೀರ್ಥವಿಶೇಷಗಳಲ್ಲಿ ಪುಣ್ಮವೂ ವಿಶೇಷವೆಂದರಿಯುವದು. ಇಡೀ
ಕಾರ್ತಿಕ ಮಾಸದಲ್ಲಿ ನಿತ್ಯದಲ್ಲೂ ಸ್ನಾನಮಾಡುವದು,
ಜಿತೇಂದ್ರಿಯನಾಗಿರುವದು, ಜಪದಲ್ಲಾಸಕ್ತನಾಗಿರುವದು,
ಹವಿಷ್ಕಾನ್ನವನ್ನು ಭುಂಜಿಸುವದು. ಹೀಗೆ ವ್ರತಸ್ತನಾದರೆ ಸಮಸ್ತ
ಪಾಪಗಳಿಂದ ಮುಕ್ತನಾಗುತ್ತಾನೆ. ಹೀಗೆ ವಿಶೇಷವಿದೆ.

ಭಾಗೀರಥೀ. ವಿಷ್ಣು, ಸೂರ್ಯ ಇವರನ್ನು ಸ್ಮರಿಸಿ ಜಲವನ್ನು
ಪ್ರವೇಶಿಸತಕ್ಕದ್ದು. ವ್ರತಸ್ತನಾದವನು ನಾಭಿಮಾತ್ರದ ಜಲದಲ್ಲಿ
ಯಥಾವಿಧಿಯಾಗಿ ಸ್ನಾನಮಾಡತಕ್ಕದ್ದು. ನಿತ್ಯದ ಪ್ರಾತಃಸ್ನಾನ ಹಾಗೂ
ಸಂಧ್ಯಾವಂದನಗಳ ನಂತರ ಕಾರ್ತಿಕ ಸ್ನಾನವನ್ನು ಮಾಡತಕ್ಕದ್ದು.
ಯಾಕೆಂದರೆ ಅವುಗಳ ಹೊರತು ಕರ್ಮಾಧಿಕಾರ ಪ್ರ್ರಾಪ್ತವಾಗುವದಿಲ್ಲ.
ಪ್ರಾತಃ ಸಂದ್ಯೆಯು ಸೂರ್ಯೋದಯಕ್ಕೆ ಸಮಾಪ್ತವಾಗುವುದಾದರೂ
ಇಲ್ಲಿ ವಚನ ಬಲದಿಂದ ಉದಯಕ್ಕಿಂತ ಮೊದಲು ಸಂಧ್ಯೆಯನ್ನು
ಮುಗಿಸಿ ಕಾರ್ತೀಕ ಸ್ನಾನವನ್ನುಮಾಡತಕ್ಕದೆಂದು “ನಿರ್ಣಯ
ಸಿಂಧು”ವಿನಲ್ಲಿ ಹೇಳಿದೆ. 

ಆದರೆ ಅನ್ಯ ಗ್ರಂಥಗಳಲ್ಲಿ ಹೀಗೆ
ಹೇಳಿರುವುದು ಕಾಣ ಬರುವುದಿಲ್ಲ. ಇಡೀ ಮಾಸದಲ್ಲಿ ಸ್ನಾನ
ಮಾಡಲಸಮರ್ಥರಾದವರು ಕನಿಷ್ಟ ಮೂರು ದಿನವಾದರೂ ಸ್ನಾನ
ಮಾಡತಕ್ಕದ್ದು…

*ಕಾರ್ತಿಕ ಸ್ನಾನ ಮಂತ್ರ: ಕಾರ್ತಿಕೇಯಂ ಕರಿಷ್ಯಾಮಿ ಪ್ರಾತಃ ಸ್ನಾನಂ ಜನಾರ್ದನ ಪ್ರೀತ್ಯರ್ಥಂ ತವ ದೇವೇಶ ದಾಮೋದರ ಮಯಾ ಸಹ ಧ್ಯಾತ್ವಾಹಂ ತ್ವಾಂ ದೇವೇಶ ಜಲೇಸ್ಮಿನ್ ಸ್ನಾತು ಮುದ್ಯತಃ ತವ ಪ್ರಸಾದಾತ್ ಪಾಪಂ ಮೇ  ದಾಮೋದರ ವಿನಶ್ಯತು.

 *ಆರ್ಘ್ಯ ಮಂತ್ರ: ನಮಃ ಕಮಲನಾಭಾಯ ನಮಸ್ತೆ ಜಲಾಶಾಯಿನೇ ನಮಸ್ತೆಸ್ತು ಋಷಿಕೇಷ ಗೃಹಾಣರ್ಘಂ ನಮೋಸ್ತುತೆ!
ವ್ರತಿನೇ ಕಾರ್ತಿಕ ಮಾಸೇ ಸ್ನಾತಸ್ಯ ವಿಧಿವನ್ಮಮ  ಗ್ರಹಣಾರ್ಘಂ  ಮಯಾದತ್ತಂ ಧನುಜೇಂದ್ರ ನಿಷೂಧನ !! ನಿತ್ಯ ನೈಮಿತ್ತಿಕೇ  ಕೃಷ್ಣ ಕಾರ್ತಿಕೇ ಪಾಪನಾಶನೇ ಗೃಹಾಣರ್ಘ್ಯಂ ಮಯಾ ದತ್ತಂ ರಾಧಯಾ ಸಹಿತೋ ಹರೇ!!*

 ಸಂಕಲ್ಪ: ಅದ್ಯದಿನ ಮಾರಭ್ಯ  ಮಾಸ ಪರ್ಯಂತಂ ಕಾರ್ತಿಕ ಸ್ನಾನಂ  ಜ್ಞಾನ ಭಕ್ತಿ ವೈರಾಗ್ಯ ಸಿದ್ಧ್ಯರ್ಥಂ  ಭಾರತೀರಮಣ ಮುಖ್ಯಪ್ರಾಣ ಅಂತರ್ಗತ ಕಾರ್ತಿಕ ರಾಧಾ ದಾಮೋದರ ಅಭಿನ್ನ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಅಹಂ ಆಚರಿಷ್ಯೇ!!

* ದಾಮೋದರ ಸ್ತೋತ್ರವನ್ನು  ಹೇಳಿ ಮಂಗಳಾರತಿಯನ್ನು ಮಾಡಿ ನಂತರ ಸ್ನಾನವನ್ನು ಮಾಡಬೇಕು.

* ಶ್ರೀತುಳಸಿ ವೃಂದಾವನದ ಮುಂದೆ ನಕ್ಷತ್ರ ದೀಪಾರಾಧನೆ ಮಾಡುವುದು.

 * ಸಾಧಕರ ಸಾಧನೆಗೆ ಪಂಚರಾತ್ರ ಸಂಹಿತೆಯಿಂದ  ಒಂದು ಸ್ತೋತ್ರ ಬೆಳಗ್ಗೆ ಎದ್ದ ಕೂಡಲೇ ಹೇಳಲು
ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ಭಗವನ್ನಾಮಕೀರ್ತನಂ! ಸ್ತೋತ್ರೇಣ ತೋಷಯೇದ್ ವಿದ್ವಾನ್ ಗುರುಮ್ ಸಂಸ್ಮತ್ಯ ಸಾಧಕಃ ! ವಾಸುದೇವಾಯ ದೇವಾಯ ಸಮಗ್ರ ಗುಣ ಮೂರ್ತಯೇ ಸಂಕರ್ಷಣ ನಮಸ್ತೆಸ್ತು ವಿಶ್ವ ಪಾವನ ಮೂರ್ತಯೇ ಅನಿರುದ್ಧ ನಮಸ್ತೆಸ್ತು ಜಗತ್ಕಾರಣ ಮೂರ್ತಯೇ ಕೇಶವಾಯ ನಮಸ್ತೆಸ್ತು ತತೋ ನಾರಾಯಣಾಯ ತೇ ಮಾಧವಾಯ ನಮಸ್ತೆಸ್ತು ಗೋವಿಂದಾಯ ನಮೋ ನಮಃ ವಿಶ್ವಾತ್ಮನ ನಮಸ್ತುಭ್ಯಂ ನಮೋಸ್ತು ಮಧುಸೂದನ ತ್ರಿವಿಕ್ರಮ ನಮಸ್ತೆಸ್ತು ಹೃಷಿಕೇಶಾಯ ತೇ ನಮಃ ನಮಸ್ತೆ ಪದ್ಮನಾಭಯ್ಯ ನಮೋ ದಾಮೋದರ ನಮಸ್ತೆ ಮತ್ಸ ರೂಪಾಯ ನಮಸ್ತೆ ಮೂರ್ತಯೇ ವಾರಾಹಯ ನಮಸ್ತೆಸ್ತು ನಾರಸಿಂಹಾಯ ತೇ ನಮಃ ವಾಮನ ನಮಸ್ತೆಸ್ತು ನಮೋ ರಾಮ ತ್ರಯಾಯ ಚ ಗೋವಿಂದಾಯ ನಮಸ್ತೆಸ್ತು ಹಯಗ್ರೀವಾಯ ತೇ ನಮಃ ಏವಂಸ್ತುತ್ವಾ ವಿಧಾನೇನ ತೀರದೇಶಂ ಸಮಾಸ್ರಯೇತ್ !
9:00 PM
***

ಕಾರ್ತಿಕ ಮಾಸ
ಶ್ರೀ ಕಾವೇರಿ ಗಂಗಾದಿ ನದಿ ದೇವಿಯರನ್ನು ಹೇಗೆ ನೋಡಬೇಕು?
ನಾವು ಕಾಣುವ ಮಿಂದುವ ನೀರೇ ಕಾವೇರಿಯೋ, ಗಂಗೆಯೋ, ಯಮುನೆಯೋ ಅಥವಾ ಬೇರೆ ರೂಪವೂ ಇರುತ್ತದೋ ಎಂದರೆ ೨ ರೂಪವೂ ಉಂಟು. ಅದರಲ್ಲಿ ನೀರು ಜಡವಾದ ರೂಪ, ಅದಕ್ಕಿಂತ ಭಿನ್ನವಾದ ಮತ್ತೊಂದು ಚೇತನ ರೂಪ, ಇವೆರಡೂ ಪರಮಾದರಣೀಯವಾದವು. ಅದರಲ್ಲೂ ತಾರತಮ್ಯವುಂಟು.
ಸಾಮಾನ್ಯವಾಗಿ ನಾವು ಕಾವೇರಿ ಇತ್ಯಾದಿ ಸ್ನಾನ ಮಾಡುವಾಗ ಗಂಗಾಸ್ನಾನ ಮಾಡಿದ ಫಲ ಬರುವುದೆಂದು ತಿಳಿದು ಸ್ನಾನ ಮಾಡುತ್ತೇವೆ. ಆದರೆ ಈ ಕಾವೇರಿಯೇ ಗಂಗೆಯೇ?…. ನಾವು ಕಾಣುವ ಕಾವೇರಿಯಾಗಲೀ, ಯಮುನೆಯಾಗಲೀ, ಗೋದಾವರಿಯಾಗಲಿ, ತುಂಗೆಯಾಗಲೀ ಗಂಗೆಯಲ್ಲ.

How we have to see the rivers?
While doing bath in the river – we should do the chintana as – The river itself is not Ganga, kaveri. It is a jadaatmaka. In the river, there is bhinna roopa i.e.. Chetana roopa of Ganga, Kaveri, etc. There is taratamya also in the river. In the rivers, there is sannidhana of samasta tirthabhimani devategalu. With them, their pathis (husbands), and their wives (in case of male rivers). In them we must do the chintana of Gaanga saannidhya. We must think the ganga devi antargata Bharatiramana mukyapranantargata ksheerabdhishaayi, shrI Lakshmi Narayana. We must do the chintana that the snaana what we are doing is not for us. But it is abhisheka for Lakshmi Ramana. We should do the prokshana of river water in shanka mudra (in shanka there is saaniddhya. Not only, that we don’t have the yogyate to do the snaana for Srihari, only Lakshmi can do that. As such we must do the chintana). Then we must have the regular bath.

ನಾವು ಅನುಸಂಧಾನ ಮಾಡಬೇಕಾದ ವಿಧಾನ –
ಈ ನೀರೇ ಗಂಗೆಯಲ್ಲ, ಅದರಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳೂ ಇರುತ್ತಾರೆ. ಅವರ ಜೊತೆಗೆ ಅವರ ಪತಿಗಳೂ, ಅವರ ಪತ್ನಿಯರೂ (ಗಂಡು ನದಿಗಳಾದರೆ), ಇದ್ದು, ಅವರೊಳಗೆ ಗಂಗಾ ನದಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಆ ಗಂಗಾದೇವಿಯ ಅಂತರ್ಗತನಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಕ್ಷೀರಾಬ್ಧಿಶಾಯಿ, ಶ್ರೀ ಲಕ್ಷ್ಮೀನಾರಾಯಣನಿಗೆ ನಮಸ್ಕರಿಸಿ, ಈ ಸ್ನಾನ ನಮಗಲ್ಲ, ನಮಗೊಳಗಿರುವ ಲಕ್ಷ್ಮೀರಮಣನಿಗೆ ಅಭಿಷೇಕ ಎಂದು ಅನುಸಂಧಾನ ಮಾಡಿ, ಶಂಖಮುದ್ರೆಯಿಂದ ನೀರನ್ನು ಪ್ರೋಕ್ಷಿಸಿಕೊಂಡು (ಶಂಖದಲ್ಲಿ ಲಕ್ಷ್ಮಿಯ ಸಾನ್ನಿಧ್ಯವಿರುವುದರಿಂದ – ಶಂಖಮುದ್ರೆಯಿಂದ ಪ್ರೋಕ್ಷಿಸಿಕೊಳ್ಳಬೇಕು. ಅಷ್ಠೇ ಅಲ್ಲ ಪರಮಾತ್ಮನಿಗೆ ಸ್ನಾನ ಮಾಡಿಸಲು ನಮಗೆ ಯೋಗ್ಯತೆ ಇಲ್ಲ, ಆದ್ದರಿಂದ ಅಲ್ಲಿ ಲಕ್ಶ್ಮಿಯನ್ನು ಅನುಸಂಧಾನ ಮಾಡಬೇಕು), ನಂತರ ಸ್ನಾನ ಮಾಡಬೇಕು.

We must not spit in rivers, never do malamootra visarjana, never wash our clothes, don’t use soap. Ofcourse some other people may be doing. As they do not know the importance of Rivers, they are doing. If possible, we must also tell them not to do.

ನದಿಯಲ್ಲಿ ಉಗುಳಬಾರದು, ನದಿಯಲ್ಲಿ ಮಲಮೂತ್ರ ವಿಸರ್ಜನ ಮಾಡಬಾರದು, ಬಟ್ಟೆ ಒಗೆಯಬಾರದು, ಸೋಪು ಹಾಕಿಕೊಳ್ಳಬಾರದು. ಬೇರೆಯವರು ಮಾಡುತ್ತಾರಲ್ಲ ಅಂತ ಭಾವಿಸಬೇಡಿ – ಅವರಿಗೆ ಸ್ನಾನದ ಮಹತ್ವ ತಿಳಿದಿರುವುದಿಲ್ಲ, ಅವರು ಮಾಡುತ್ತಾರೆ, ನಾವು ಅವರನ್ನು ಅನುಸರಿಸಬಾರದು. ಸಾಧ್ಯವಾದರೆ ಅವರಿಗೂ ತಿಳಿಹೇಳಬೇಕು.

Before putting our legs in the rivers, we must have first washed our lega outside. First we must have the prokshana. Then enter the river. While doing snaana in the river, we must do the chintana of all the rivers. We must also do the chintana of kshetravaasi devategalu.

ನದಿಗೆ ಕಾಲಿಡುವ ಮೊದಲು ನಮ್ಮ ಕೈಕಾಲು ಹೊರಗಡೆ ತೊಳೆದುಕೊಂಡು ಬಂದು ಶುಚಿರ್ಭೂತರಾಗಿ, ಒಮ್ಮೆ ನೀರನ್ನು ಕೈಯಿಂದ ತೆಗೆದುಕೊಂಡು ಪ್ರೋಕ್ಷಿಸಿಕೊಂಡು ನಂತರ ನದಿಯಲ್ಲಿ ನಾವು ಸ್ನಾನಕ್ಕೆ ಇಳಿಯಬೇಕು.

ನದಿಯಲ್ಲಿ ಸ್ನಾನ ಮಾಡುವಾಗ ಎಲ್ಲ ನದಿದೇವತೆಗಳನ್ನೂ ಸ್ಮರಿಸಬೇಕು.

ಗಂಗಾಸಿಂಧುಸರಸ್ವತೀಚ ಯಮುನಾ ಗೋದಾವರೀ ನರ್ಮದಾ |
ಕೃಷ್ಣಾಭೀಮರತೀ ಚ ಫಲ್ಘುಸರಯೋ ಶ್ರೀಗಂಡಕೀ ಗೋಮತೀ |
ಕಾವೇರೀ ಕಪಿಲಾಪ್ರಯಾಗವಿನುತಾ ನೇತ್ರಾವತೀತ್ಯಾದಯೋ |
ನದ್ಯ: ಶ್ರೀಹರಿಪಾದಪಂಕಜಭವಾ: ಕುರ್ವಂತು ನೋರ್ಮಂಗಲಂ ||

गंगासिंधू सरस्वती च यमुना गोदावरी नर्मदा ।
कृष्णा भीमरती च फल्घुसरयू श्री गंडकी गोमती ।
कावेरी कपिलाप्रयाग विनता नेत्रावतीत्यादयो
नद्य: श्री हरिपादपंकज भवा: कुर्वंतुनो मंगळं ।

ನಂತರ ಒಮ್ಮೆ ನೀರಿನಲ್ಲಿ ಮುಳುಗಿ; Prokshana mantra
apavitra: pavitrOvaa sarvaavasthaaM gatOpivaa |
ya: smarEt puMDarIkaakShaM sa baahyaabhyaMtarashuchi:|

अपवित्र: पवित्रोवा सर्वावस्थां गतोपिवा ।
य: स्मरेत् पुंडरीकाक्षं स बाह्याभ्यंतरशुचि:।

ಅಪವಿತ್ರ: ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |
ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಶುಚಿ: |

ಎಂಬ ಮಂತ್ರದಿಂದ ಪ್ರೋಕ್ಷಿಸಿಕೊಳ್ಳ ಬೇಕು.
ಸಾಧ್ಯವಾದರೆ ವಾದಿರಾಜ ಗುರುಸಾರ್ವಭೌಮರ
“ತೀರ್ಥಪ್ರಬಂಧ”ವನ್ನು ಒಮ್ಮೆ ಅಧ್ಯಯನ ಮಾಡಿ ಆ ತೀರ್ಥಕ್ಷೇತ್ರದ ಬಗ್ಯೆ ಮಾಹಿತಿಯನ್ನು ತಿಳಿದುಕೊಂಡು ಅವರು ಹೇಳಿದಂತೆ ಅನುಸಂಧಾನ ಮಾಡಬೇಕು.
***