SEARCH HERE

Showing posts with label ಪರಿಹಾರ- ವಿಶೇಷ ಸಲಹೆಗಳು ಪರಿಹಾರ. Show all posts
Showing posts with label ಪರಿಹಾರ- ವಿಶೇಷ ಸಲಹೆಗಳು ಪರಿಹಾರ. Show all posts

Monday, 12 April 2021

ವಿಶೇಷ ಸಲಹೆಗಳು suggestions be careful

ತುಂಬಾ ಜನ ಮಾಟ ಮಂತ್ರ ಹಾಗೂ ಪ್ರಭಾವದ ಬಗ್ಗೆ, ತಿಳಿದವರು ಪ್ರತಿದಿನ ಚಂಡೀದಂಡಕ ವನ್ನು ಓದ ಬೇಕು. ತುಳಸಿಯ ಎಲೆಯನ್ನು ಕುಡಿಯುವ ನೀರಿಗೆ ಹಾಕಿ ಎಲ್ಲರೂ ಪ್ರತಿದಿನ ಕುಡಿಯುತ್ತಾ ಬಂದರೆ ತುಳಸೀ ನೀರು ಎಂತಹ ಮಾಟ ಮಂತ್ರ ದೋಷವನ್ನಾದರೂ ತಡೆಯುತ್ತದೆ.

+ ರಾಹು ಪ್ರಭಾವ ಇರುವ ಮನೆಗಳಲ್ಲಿ ಕೆಲವರಿಗೆ ಶುಕ್ರವಾರ, ಹಬ್ಬ ಹರಿದಿನಗಳಲ್ಲಿ, ಅಮಾವಾಸ್ಯೆಯ  ಹಿಂದೆ ಮುಂದೆ, ಪರದಾಟ, ಮನೆಯಲ್ಲಿ ಜಗಳಗಳು, ಅಪಭ್ರಂಶ ಮಾತುಗಳು, ನಡೆಯುತ್ತಿದ್ದರೆ
ಇಂಥವರು ಪ್ರತಿದಿನ "ಸ್ನಾನ ಮಾಡೋ ನೀರಿಗೆ ಚಿಟಿಕೆ ಅರಿಸಿನ ಮತ್ತು ಚೂರು ಪಚ್ಚಕರ್ಪೂರ" ಹಾಕಿ ಸ್ನಾನ ಮಾಡಿ, "ಶ್ರೀ ಸುಬ್ರಹ್ಮಣ್ಯ ಅಷ್ಟೋತ್ತರ ಮತ್ತು ದೇವಿ ಖಡ್ಗಮಾಲಾ ಸ್ತೋತ್ರ " ಓದುತ್ತಾ ಬನ್ನಿ ತುಂಬಾ ಶುಭವಾಗುತ್ತೆ..

+ ಮನೆಯಲ್ಲಿ ಎಷ್ಟೇ ದುಡಿದರೂ ಅಭಿವೃದ್ಧಿ ಹೀನತೆ, ದೇಹ ಕೃಶವಾಗುತ್ತಿದ್ದು ಆರೋಗ್ಯ ಸಮಸ್ಯೆ, ಹಿರಿಯರಿಗೆ ಕಿರಿಯರು ಅಗೌರವ ತೋರುತ್ತಿದ್ದರೆ ಪ್ರತಿದಿನ ವಿಷ್ಣು ಸಹಸ್ರನಾಮ ಓದಿ, ಶನಿವಾರದ ದಿನ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರ ಹಾಕಿಸಿ ಪೂಜೆ ಮಾಡಿಸಿ.

+ ಮನೆಯ ಹತ್ತಿರ ಮಾಟ ಮಂತ್ರದ ನಿಂಬೆಹಣ್ಣು, ಯಂತ್ರ,.. ಇತ್ಯಾದಿ ಬಿದ್ದಿದ್ದರೆ, ಅದನ್ನು ಮುಟ್ಟ ಬೇಡಿ, ಮತ್ತೆ ಗುಡಿಸ ಬೇಡಿ.
 ವಿಷ್ಣುವಿನ ಪಾದ ದ ಹತ್ತಿರ ಐದು ತುಳಸಿ ಯ ದಳ ಇಟ್ಟು  ಪ್ರಾರ್ಥಿಸಿ, ನಮಸ್ಕಾರ ಮಾಡಿ ಆ ತುಳಸಿ ದಳ ವನ್ನು ತೆಗೆದು ಒಂದು ಲೋಟ ಶುದ್ಧ ನೀರಿಗೆ ಹಾಕಿ, ಆ ನೀರನ್ನು ತೆಗೆದು ಕೊಂಡು ಹೋಗಿ ನಿಂಬೆಹಣ್ಣು , ಯಂತ್ರ  ಇತ್ಯಾದಿಯ ಮೇಲೆ ಹಾಕಿರಿ.  ತುಳಸಿ ಮಡಿ ಯು ಎಂತಹಾ ಮಹಾಜ್ಞಾನಿ ಮಾಟ ಮಂತ್ರ ಮಾಡಿದ್ದರೂ ಅದು ಕೆಲಸ ಮಾಡುವುದಿಲ್ಲ. 

+ ಕೆಲವರು ಹೊರಗಡೆ ಕೆಲಸ ಮುಗಿಸಿ ಮನೆಗೆ ಬಂದಾಕ್ಷಣ ಕಿರಿಕಿರಿ, ಕೋಪ, ಜಗಳ ಮಾಡುತ್ತಿದ್ದರೆ ತಿಳಿಯದೆ ಮಾರ್ಗದಲ್ಲಿ ನಿಂಬೆ ಹಣ್ಣು ದಾಟಿದ್ದರೆ, ತುಳಿದಿದ್ದರೆ ಅವರಿಗೆ ಬಂದ ತಕ್ಷಣ ಸ್ವಲ್ಪ ದೃಷ್ಟಿ ತೆಗೆದು ಹಾಕಿದರೆ ಶಾಂತರಾಗಿ ಬಿಡುತ್ತಾರೆ.

+ ವಾಸ್ತುದೋಷ, ಮನೆಯ ಮೂಲೆಗಳಲ್ಲಿ ಸಮಸ್ಯೆ ಇದ್ದಲ್ಲಿ ಈಶ್ವರ ದೇವರಿಗೆ ಪ್ರತೀ ಸೋಮವಾರ ಎಳನೀರನ್ನು ಅಭಿಷೇಕಕ್ಕೆ ಕೊಟ್ಟು ಅಭಿಷೇಕ ಮಾಡಿಸಿ, ಆ ಅಭಿಷೇಕದ ಶುದ್ಧೋದಕ ವನ್ನು ತೆಗೆದು ಕೊಂಡು ಬಂದು ಮನೆಗೆಲ್ಲಾ ಪ್ರೋಕ್ಷಣೆ ಮಾಡಿ. ಮನೆಯಲ್ಲಿ ಪ್ರತಿದಿನ ಲಲಿತಾ ಸಹಸ್ರನಾಮ ಪಾರಾಯಣ ಮಾಡಿ...

ಎಲ್ಲದಕ್ಕೂ ಮೊದಲು ಗುರು ಕೃಪೆಯಾಗಲಿ... ಶುಭವಾಗಲಿ...
*****