SEARCH HERE

Showing posts with label ಪರಿಹಾರ- ತೆಂಗಿನ ಕಾಯಿ coconut parihara. Show all posts
Showing posts with label ಪರಿಹಾರ- ತೆಂಗಿನ ಕಾಯಿ coconut parihara. Show all posts

Tuesday, 1 January 2019

ತೆಂಗಿನ ಕಾಯಿ ಪರಿಹಾರ, coconut parihara


at your belief
ಜೀವನದಲ್ಲಿ ಶಾಂತಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಿಸಲು .. ತೆಂಗಿನ ಕಾಯಿ

ಜೀವನದಲ್ಲಿ ಯಶಸ್ಸು ಸಾಧಿಸಲು 
ನಿಮ್ಮ ಯಾವುದಾದರೂ ಸಮಸ್ಯೆಗಳು ಕೋರ್ಟ್ನಲ್ಲಿ ಇದ್ದರೆ ಮನೆಯಲ್ಲಿ ತೆಂಗಿನ ಕಾಯಿಯ ಪೂಜೆಯನ್ನು ಮಾಡಿ. ತೆಂಗಿನ ಕಾಯಿಯ ಮೇಲೆ ಕೆಂಪು ಹೂವನ್ನು ಇರಿಸಿ ಮನೆ ಬಿಡುವ ಮೊದಲು ಹೀಗೆ ಮಾಡಬೇಕು, ನಿಮ್ಮೊಂದಿಗೆ ಹೂವನ್ನು ತೆಗೆದುಕೊಂಡು ಹೋಗಿ. ಇದರಿಂದ ನ್ಯಾಯ ನಿಮ್ಮ ಪಾಲಾಗುತ್ತದೆ.

ಕೆಟ್ಟ ದೃಷ್ಟಿ 
ಬೇರೆಯವರ ಕೆಟ್ಟ ದೃಷ್ಟಿಯಿಂದ ನಿಮ್ಮ ಜೀವನದಲ್ಲಿ ಸುಧಾರಣೆಯಾಗುತ್ತಿಲ್ಲವೇ? ಅರ್ಧ ಮೀಟರ್ ಬಟ್ಟೆಯಲ್ಲಿ ತೆಂಗಿನ ಕಾಯಿಯನ್ನು ಕಟ್ಟಿ ಯಾರ ಮೇಲೆ ದೃಷ್ಟಿ ದೋಷವುಂಟಾಗಿದೆಯೇ ಅವರ ಮೇಲೆ ಸುತ್ತಿ. ನಂತರ ಆ ತೆಂಗಿನ ಕಾಯಿಯನ್ನು ಹನುಮಂತನ ಕಾಲ ಬಳಿ ಇರಿಸಿ.

ಕಾರ್ಯ ಸಾಧಿಸಲು 
ನಿಮ್ಮ ಜೀವನದಲ್ಲಿ ಹೆಚ್ಚಿನ ತೊಂದರೆ ಇದೆ ಎಂದಾದರೆ ರಾತ್ರಿ ಪೂರ್ತಿ ತೆಂಗಿನ ಕಾಯಿಯನ್ನು ನಿಮ್ಮ ಪಕ್ಕದಲ್ಲಿರಿಸಿ. ಬೆಳಗ್ಗೆ, ಇತರ ಪೂಜಾ ಸಾಮಾಗ್ರಿಗಳೊಂದಿಗೆ ಆ ತೆಂಗಿನ ಕಾಯಿಯನ್ನು ಗಣೇಶ ದೇವಸ್ಥಾನಕ್ಕೆ ನೀಡಿ.

ಆರ್ಥಿಕ ನಷ್ಟ
ತೆಂಗಿನ ಕಾಯಿಯನ್ನು ಹನುಮಂತನ ದೇವಸ್ಥಾನಕ್ಕೆ ಕೊಂಡೊಯ್ಯಿರಿ. ನಂತರ ಹನುಮಾನ್  ದೇವಸ್ಥಾನದಲ್ಲಿ ಕುಳಿತು 8 ವಾರಗಳ ಕಾಲ ಹನುಮಾನ್ ಚಾಲೀಸವನ್ನು ಪಠಿಸಿ.

ವ್ಯಾಪಾರದಲ್ಲಿ ನಷ್ಟ 
ಗುರುವಾರ ಒಂದುವರೆ ಮೀಟರ್ನಷ್ಟು ಹಳದಿ ಬಟ್ಟೆಯನ್ನು ತೆಗೆದುಕೊಂಡು ಹಳದಿ ಬಣ್ಣದ ಸಿಹಿತಿಂಡಿಗಳೊಂದಿಗೆ ವಿಷ್ಣುವಿನ ದೇವಸ್ಥಾನದಲ್ಲಿ ನೀಡಿ.

ಸಮಸ್ಯೆಗಳು ನಿಮ್ಮ ಜೀವನದಲ್ಲಿ 
ತೆಂಗಿನ ಕಾಯಿ ತೆಗೆದುಕೊಳ್ಳಿ ಕೆಲವು ಕೆಂಪು ಹೂವು ತೆಗೆದುಕೊಳ್ಳಿ ಮತ್ತು ಕರ್ಪೂರವನ್ನು ತೆಗೆದುಕೊಂಡು ದುರ್ಗಾ ಮಾತೆಯ ಮುಂದಿರಿಸಿ. ನಿತ್ಯವೂ ಪ್ರಾರ್ಥಿಸಿ.

ಹೆಚ್ಚಿನ ಬಡತನವನ್ನು ನೀವು ಅನುಭವಿಸುತ್ತಿದ್ದೀರಿ? 
ತೆಂಗಿನ ಕಾಯಿಯನ್ನು ತೆಗೆದುಕೊಂಡು ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ. ಈ ತೆಂಗಿನ ಕಾಯಿಯನ್ನು ಲಾಕರ್ನಲ್ಲಿ ಇರಿಸಿ. ನಿಮ್ಮ ಬಡತನ ನಿವಾರಣೆಯಾಗುತ್ತದೆ.

ಶನಿಯನ್ನು ಪ್ರೀತ್ಯರ್ಥಪಡಿಸಲು 
ನಿಮ್ಮ ಶನಿ ಕುಂಡಲಿ ದುರ್ಬಲವಾಗಿದೆ ಎಂದಾದಲ್ಲಿ ಪ್ರತಿ ಶನಿವಾರ ಪವಿತ್ರ ಜಲದಲ್ಲಿ ತೆಂಗಿನ ಕಾಯಿಯನ್ನು ಮುಳುಗಿಸಿ ಅಂದರೆ ಗಂಗಾ ಮತ್ತು ಯಮುನಾದಂತಹ ನದಿಯಲ್ಲಿ. ಹೀಗೆ ಮಾಡುವಾಗ "ಓಂ ರಾಮದೂತಾಯ ನಮಃ ಎಂಬ ಮಂತ್ರವನ್ನು ಪಠಿಸಿ. ಹೀಗೆ 7 ಬಾರಿ ಸತತವಾಗಿ ಮಾಡಿ ಮತ್ತು ಶನಿ ದೋಷ ನಿವಾರಣೆಯಾಗುತ್ತದೆ ನಿಮ್ಮ ಮೇಲೆ ಹನುಮಂತನ ಅನುಗ್ರಹ ಕೂಡ ಉಂಟಾಗುತ್ತದೆ.

ಅದೃಷ್ಟಕ್ಕಾಗಿ 
ಪವಿತ್ರ ಜಲದಲ್ಲಿ ತೆಂಗಿನ ಕಾಯಿಯನ್ನು ಮುಳುಗಿಸಿ ಹೀಗೆ ಮಾಡುವ ಮುನ್ನ ನಿಮ್ಮ ಇಷ್ಟದೇವರನ್ನು ನೆನೆಯಿರಿ ಮತ್ತು ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ.

ಸರಳ ಪರಿಹಾರ ಶ್ರೀ ಸುಧಾಕರ 
*********