ಹಿಂದೂ ಧರ್ಮದ ವಿಶಿಷ್ಟತೆ ಏನೆಂದರೆ ಇಲ್ಲಿ ಕೋಟ್ಯಾಂತರ ದೇವರುಗಳು ಇರುವುದು. ಪ್ರತಿಯೊಬ್ಬನಿಗೂ ಅವನ ಧರ್ಮದ, ಜಾತಿಯ, ಸಮುದಾಯದ, ಮನೆಯ ದೇವರು ಬೇರೆಬೇರೆ ಇರುತ್ತಾರೆ. ಆದರೆ, ನಂಬುತ್ತೀರೋ ಇಲ್ಲವೋ, ಹಿಂದೂ ಧರ್ಮದಲ್ಲಿ ಇರುವುದು ಮೂರು ದೈವೀ ಪಂಥಗಳು ಮಾತ್ರ. ಅವು ಯಾವುವು ಎಂದರೆ ಶೈವ (ಶಿವನನ್ನು ಪೂಜಿಸುವವರು), ವೈಷ್ಣವ (ವಿಷ್ಣುವನ್ನು ಪೂಜಿಸುವವರು) ಹಾಗೂ ಶಾಕ್ತ (ಶಕ್ತಿದೇವತೆಯನ್ನು ಪೂಜಿಸುವವರು). ಈ ಮೂವರು ದೇವರುಗಳ ನಾನಾ ಅವತಾರಗಳು, ನಾನಾ ಸ್ವರೂಪಗಳನ್ನೇ ನಾವು ಪೂಜಿಸುವುದು. ಮೇಲ್ನೋಟಕ್ಕೆ ಬೇರೆ ಎಂದು ಕಂಡರೂ, ಸೂಕ್ಷ್ಮವಾಗಿ ನೋಡಿದರೆ ನೀವು ಪೂಜಿಸುತ್ತಿರುವ ದೇವರು ಈ ಮೂವರಲ್ಲೇ ಒಬ್ಬರ ಅವತಾರ ಎಂಬುದು ನಿಮಗೆ ಗೊತ್ತಾಗುತ್ತದೆ.
ಪ್ರತಿ ಜನ್ಮರಾಶಿಗೂ ಒಂದು ನಕ್ಷತ್ರ ಇರುತ್ತದೆ. ಪ್ರತಿ ರಾಶಿಗೂ ಒಂದು ಗುಣಸ್ವಭಾವ, ಒಂದು ಪಂಚಭೂತ ಇರುವಂತೆ, ನಮ್ಮಿಂದ ಪೂಜೆಗೊಳ್ಳಬೇಕಾದ ದೇವತೆಯೂ ಒಂದಿರುತ್ತದೆ. ಆಯಾ ಜನ್ಮರಾಶಿಯವರು ತಮಗೆ ಸಂಬಂಧಿಸಿದ ದೇವತೆಗಳನ್ನು ನೆನೆದರೆ, ಧ್ಯಾನಿಸಿದರೆ, ಪೂಜಿಸಿದರೆ ಅವರು ಒಲಿಯುವುದು, ಪ್ರಸನ್ನರಾಗಿ ವರ ನೀಡುವುದು ಬಲುಬೇಗ. ಹಾಗಿದ್ದರೆ ನಿಮ್ಮ ರಾಶಿಯ ದೇವತೆ ಯಾರು, ತಿಳಿಯೋಣವೇ?
*ಮೇಷ* ಮತ್ತು *ವೃಶ್ಚಿಕ* ರಾಶಿಯನ್ನು ಆಳುವ ಗ್ರಹ *ಮಂಗಳ*.
*ಮಕರ* ಮತ್ತು *ಕುಂಭ* ರಾಶಿಯವರ ಗ್ರಹ *ಶನಿ*. ಈ ನಾಲ್ಕೂ ರಾಶಿಗಳಿಗೂ ಶಿವನೇ ಅಧಿದೇವತೆ. ಈತನಿಗೆ ನಮ್ಮ ಮೊದಲ ಪೂಜೆ ಸಲ್ಲಬೇಕು. ಹಾಗಂತ ಇತರ ದೇವತೆಗಳನ್ನು ಪೂಜಿಸಿದರೆ ಶಿವ ಕೋಪಿಸಿಕೊಳ್ಳುತ್ತಾನೆ ಎಂದೇನಿಲ್ಲ, ಆದರೆ ಶಿವ ಪಂಚಾಕ್ಷರಿಗಿಂತ ಅತ್ಯುತ್ತಮವಾದ ಮಂತ್ರ ಪಠಣ ನಮಗೆ ಬೇರಿನ್ನೊಂದಿಲ್ಲ. ಲಿಂಗಕ್ಕೆ ಅಭಿಷೇಕ, ಅರ್ಚನೆ ಮಾಡುವುದು, ಬಿಲ್ವಪತ್ರೆ ಸಮರ್ಪಿಸುವುದು, ಶಿವರಾತ್ರಿ ಜಾಗರಣೆ, ಶಿವಪೂಜೆ, ರುದ್ರಾಷ್ಟಕ ಪಠನ ಮುಂತಾದವುಗಳಿಂದ ಆತ ಸಂತುಷ್ಟನಾಗುತ್ತಾನೆ. ಶಿವ ದೇವಾಲಯಕ್ಕೆ ಭೇಟಿ ನೀಡಿದರೂ ಸಾಕು.
*ತುಲಾ* ಮತ್ತು *ವೃಷಭ* ರಾಶಿಗಳನ್ನು ಆಳುವ ಗ್ರಹವೆಂದರೆ *ಶುಕ್ರ*. ಈ ಎರಡು ರಾಶಿಗಳಿಗೆ ಅಧಿದೇವತೆ ಮಹಾಲಕ್ಷ್ಮೀ. ಅಂತೆಯೇ ಇವರಿಗೆ ಮಹಾಲಕ್ಷ್ಮೀ ದೇವಿಯ ಕೃಪಾಕಟಾಕ್ಷ ಆಗುವುದು ಬಲುಬೇಗ. ಇವರಿಗೆ ಬಾಳಿನಲ್ಲಿ ಕೆಲವೊಮ್ಮೆ ಧನಾಗಮನ ತಡವಾಗಬಹುದು. ಅದಕ್ಕೆ ಅವರು ಮಹಾಲಕ್ಷ್ಮಿಯನ್ನು ಪೂಜಿಸದಿರುವುದೇ ಕಾರಣವೆಂದು ತಿಳಿಯಬೇಕು. ಇವರಿಗೆ ವ್ಯಾಪಾರ ವ್ಯವಹಾರಗಳು ಚೆನ್ನಾಗಿ ಕೈ ಹಿಡಿಯಬಹುದು. ಶಕ್ತಿ ದೇವತೆಯ ಯಾವುದೇ ಅವತಾರವನ್ನೂ ಇವರು ಪೂಜಿಸಬಹುದು. ನವರಾತ್ರಿ ಪೂಜೆ, ಶಾರದಾ ಪೂಜೆ, ದುರ್ಗಾಪೂಜೆಗಳನ್ನು ಶಕ್ತ್ಯಾನುಸಾರ ಮಾಡಬೇಕು. ದೇವಿಯ ಕೃಪೆ ಪಡೆಯಲು ವಿಶೇಷವಾಗಿ ಪ್ರಯತ್ನಿಸಬೇಕು.
*ಮಿಥುನ* ಮತ್ತು *ಕನ್ಯಾ* ಈ ಎರಡು ರಾಶಿಗಳಿಗೆ ಅಧಿಪತಿ ಗ್ರಹವು ಬುಧ. ಇವರ ಸುಖೀಜೀವನಕ್ಕೆ ಕಾರಣನಾಗುವ ದೇವರೆಂದರೆ ಶ್ರೀಮನ್ನಾರಾಯಣ. ಕ್ಷೀರಸಾಗರ ನಿವಾಸಿಯಾದ ಈತನು ಲಕ್ಷ್ಮೀಸಹಿತನಾಗಿ ಇರುವುದರಿಂದ, ಲಕ್ಷ್ಮೀಕಟಾಕ್ಷವೂ ಇವರಿಗೆ ಇದೆಯೆಂದು ತಿಳಿಯಬೇಕು. ಕೆಲವೊಮ್ಮೆ ಸಾಹೇಬರ ಹೆಂಡತಿಯನ್ನು ಪ್ರಸನ್ನೀಕರಿಸಿದರೆ ಸಾಹೇಬರ ಕೃಪೆಯೂ ಒಲಿಯುವ ಹಾಗೆ, ರಮಾದೇವಿಯ ಪೂಜೆಯಿಂದ ಶ್ರೀಮನ್ನಾರಾಯಣನೂ ಪ್ರಸನ್ನನಾಗುವ ಸಂಭವ ಇಲ್ಲದೇ ಇಲ್ಲ. ವಿಷ್ಣು ಅಥವಾ ಕೃಷ್ಣ ದೇವಾಲಯಗಳಿಗೆ ಭೇಟಿ ಕೊಡುವುದು, ವಿಷ್ಣುಪುರಾಣ ಓದುವುದು, ವಿಷ್ಣುವಿಗೆ ತುಳಸಿಯ ಪೂಜೆ ಇತ್ಯಾದಿಗಳಿಂದ ಒಲಿಸಿಕೊಳ್ಳಬಹುದು. ಓಂ ನಮೋ ಭಗವತೇ ವಾಸುದೇವಾಯ ಅಥವಾ ಓಂ ನಾರಾಯಣೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್ ಎಂಬ ಮಂತ್ರಗಳು ಶ್ರೇಯಸ್ಕರ. ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಸರ್ವ ಶ್ರೇಷ್ಠ.
*ಕಟಕ* ರಾಶಿಯವರಿಗೆ ಅಧಿಪತಿಯಾದ ಗ್ರಹವು *ಚಂದ್ರ* ನು. ಇವರು ಪೂಜಿಸಬೇಕಾದ ದೇವತೆಯೆಂದರೆ ಗೌರಿ ಅಥವಾ ಪಾರ್ವತಿ. ಚಂದ್ರನು ಮನಸ್ಸಿನಲ್ಲಿ ಉಬ್ಬರವಿಳಿತಗಳಿಗೆ ಕಾರಣನಾಗುತ್ತಾನೆ. ಆದರೆ ಪಾರ್ವತಿಯು ಕರುಣಾಳು ಮಾತೆ. ಆಕೆಯನ್ನು ನೆನೆಯುವುದು ಪೂಜಿಸುವುದು ಪ್ರಾರ್ಥಿಸುವುದರಿಂದ ಮನಸ್ಸಿನ ಮೇಲೆ ಶಾಂತಿಯು ಪ್ರಭಾವ ಬೀರುತ್ತದೆ. ಪಾರ್ವತಿ ದೇವಿಯ ಉಪಾಸನೆಯಿಂದ ಶಿವನೂ ಪ್ರಸನ್ನನಾಗುವನು. ದೇವಿಸ್ತುತಿ, ಶ್ರೀ ಲಲಿತಾ ಸಹಸ್ರನಾಮಗಳ ಪಠನದಿಂದ ಮಂಗಳವಾಗುವುದು. ದುರ್ಗಾದೇವಿಯ ದೇವಾಲಯ ಹತ್ತಿರದಲ್ಲಿದ್ದರೆ ಭೇಟಿ ಕೊಡುವುದನ್ನು ತಪ್ಪಿಸಬೇಡಿ.
*ಸಿಂಹ* ಜನ್ಮರಾಶಿಯವರಿಗೆ ಸೂರ್ಯನು ಅಧಿಪತಿಯಾಗುವ ಗ್ರಹ. ಸೂರ್ಯನ ಪ್ರಖರತೆಯನ್ನು ತಡೆದುಕೊಳ್ಳಬಲ್ಲ ದೇವಾಧಿದೇವ, ಕೈಲಾಸವಾಸಿಯಾದ ಈಶ್ವರನು ನಿಮ್ಮ ಅಧಿದೇವತೆ. ಈತನು ಸೂರ್ಯನ ಪ್ರಜ್ವಲತೆಯನ್ನು ಕಡಿಮೆ ಮಾಡಿ, ಜೀವನದಲ್ಲಿ ಶಾಂತಿ ನೆಮ್ಮದಿಗಳನ್ನು ಸಿಂಹ ರಾಶಿಯವರಿಗೆ ಕೊಡುವವನು. ಈಶ್ವರನು ಸುಲಭವಾಗಿ ಒಲಿಯುವವನಲ್ಲವಾದರೂ ನಿರಂತರ ಧ್ಯಾನ, ನೆನೆಯುವಿಕೆ, ಪೂಜೆ ಇತ್ಯಾದಿಗಳಿಂದ ಅವನನ್ನು ಪ್ರಸನ್ನ ಮಾಡಿಕೊಳ್ಳಬಹುದು.
*ಧನಸ್ಸು* ಮತ್ತು *ಮೀನ* ಈ ಎರಡೂ ರಾಶಿಯವರನ್ನು ಆಳುವ ಗ್ರಹನೆಂದರೆ ಗುರು. ಗುರುವಿಗೆ ಅಧಿದೇವತೆ ದೇವತೆಯೆಂದರೆ ಶ್ರೀ ದಕ್ಷಿಣಾಮೂರ್ತಿ. ದಕ್ಷಿಣಾಮೂರ್ತಿಯೂ ಕೂಡ ಶ್ರೀ ಶಿವ ದೇವರ ಒಂದು ಅವತಾರವೇ ಆಗಿದ್ದಾನೆ. ಈತನು ಬಹಳ ಪ್ರಭಾವಶಾಲಿಯಾದ ದೇವತೆಯಾಗಿದ್ದು, ನಿರ್ದಿಷ್ಟ ಪೂಜೆ ಮಂತ್ರಗಳಿಂದ ಅರ್ಚಿಸಿದರೆ ಈತನನ್ನು ಒಲಿಸಿಕೊಳ್ಳುವುದು ಏನೂ ಕಷ್ಟವಲ್ಲ. ದುಷ್ಟ ಶಕ್ತಿಗಳ ಭಯದಿಂದ ನಿಮ್ಮ ಫ್ಯಾಮಿಲಿಯನ್ನು ಈತನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾನೆ.
27 ನಕ್ಷತ್ರಗಳ ಆಧಾರದ ಮೇಲೆ ರೋಗವನ್ನೂ ನಿರ್ಧರಿಸಬಹುದು..
ಪ್ರತಿಯೊಬ್ಬರಿಗೂ ಅವರವರ ಜನ್ಮ ನಕ್ಷತ್ರಗಳಿಗೆ ಅನುಗುಣವಾಗಿ ರೋಗಗಳು ಬರುತ್ತವೆ. ರೋಗದ ಅವಧಿಯು ಸಹ ನಕ್ಷತ್ರದ ಆಧಾರದ ಮೇಲೆ ನಿರ್ಧಾರವಾಗುವುದು ಎಂದು ಹೇಳಲಾಗುವುದು.
ಹಾಗಾದರೆ ನಿಮ್ಮ ಜನ್ಮ ನಕ್ಷತ್ರ ಯಾವುದು.? ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ.? ರೋಗದ ಅವಧಿಯು ಹೇಗಿರುತ್ತದೆ.. ಎನ್ನುವುದನ್ನು ತಿಳಿಯುವ ಕುತೂಹಲ ಹೊಂದಿದ್ದರೆ ಈ ಲೇಖನದ ಮುಂದಿನ ಭಾಗವನ್ನು ಗಮನವಿಟ್ಟು ಓದಿ..
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜನ್ಮ ಸಮಯ ಆಧಾರಿತವಾಗಿ ವಿಶೇಷ ನಕ್ಷತ್ರಗಳನ್ನು ಹಾಗೂ ರಾಶಿಯನ್ನು ಹೊಂದಿರುತ್ತಾರೆ. ನಕ್ಷತ್ರ ಫಲಗಳು ಹಾಗೂ ರಾಶಿ ಚಕ್ರಗಳ ಪ್ರಭಾವದಿಂದ ವ್ಯಕ್ತಿ ನಿತ್ಯ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಹಾಗೂ ಅದೃಷ್ಟಗಳನ್ನು ಪಡೆದುಕೊಳ್ಳುವನು.
ವೈದಿಕ ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ 27 ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರವು ವಿಭಿನ್ನ ಶಕ್ತಿ ಹಾಗೂ ಪ್ರಭಾವವನ್ನು ಬೀರುತ್ತವೆ.
ಅಶ್ವಿನಿ ನಕ್ಷತ್ರ:
ಅಶ್ವಿನಿ ನಕ್ಷತ್ರವನ್ನು ಕೇತು ಆಳುವನು. ಇವನು ಈ ನಕ್ಷತ್ರದವರ ತಲೆ ಭಾಗ ಮತ್ತು ಮಿದುಳಿನ ಆರೋಗ್ಯವನ್ನು ನಿಯಂತ್ರಿಸುತ್ತದೆ. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ತಲೆ ನೋವು, ಜ್ವರ, ಡೆಂಗ್ಯೂ, ಮೆದುಳಿನ ಗಾಯ, ಮೈಗ್ರೇನ್, ಸಿಡುಬುಗಳಂತಹ ರೋಗಗಳು ಕಾಣಿಸಿಕೊಳ್ಳುತ್ತವೆ. ಇವರಿಗೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ 1, 9 ಅಥವಾ 25 ದಿನಗಳ ಕಾಲ ಇರುತ್ತದೆ ಎಂದು ಹೇಳಲಾಗುವುದು..
ಭರಣಿ ನಕ್ಷತ್ರ:
ಈ ನಕ್ಷತ್ರವನ್ನು ಶುಕ್ರನು ಆಳುವನು. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಮೆದುಳು, ಹಣೆ, ಕಣ್ಣು ಹಾಗೂ ಅಂಗಾಂಶಗಳ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಕಣ್ಣಿನ ಸೋಂಕು, ತಲೆಗೆ ಗಾಯ, ಸೆಳೆತ, ದೃಷ್ಟಿ ದೋಷ, ಶೀತ ಜ್ವರಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಈ ಆರೋಗ್ಯ ಸಮಸ್ಯೆಗಳು ಒಮ್ಮೆ ಕಾಣಿಸಿಕೊಂಡರೆ 11, 21 ಅಥವಾ 30 ದಿನಗಳ ಕಾಲ ಇರುತ್ತದೆ.
ಕೃತಿಕಾ ನಕ್ಷತ್ರ:
ಈ ನಕ್ಷತ್ರವನ್ನು ಸೂರ್ಯನು ಆಳುವನು. ಕೃತಿಕಾ ನಕ್ಷತ್ರದ ಅಡಿಯಲ್ಲಿ ಜನಿಸುವವರು ಸಾಮಾನ್ಯವಾಗಿ ಮುಖ, ತೋಳು, ಗಲಗ್ರಂಥಿಯ ಉರಿಯೂತ, ಕೆಳದವಡೆಯ ಸಮಸ್ಯೆ, ತಲೆ ಹಿಂಭಾಗಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವು ಒಮ್ಮೆ ಬಂದರೆ ಸಾಮಾನ್ಯವಾಗಿ 10 ಅಥವಾ 21 ದಿನಗಳ ಕಾಲ ಮುಂದುವರಿಯುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.
ರೋಹಿಣಿ ನಕ್ಷತ್ರ:
ರೋಹಿಣಿ ನಕ್ಷತ್ರವನ್ನು ಸಾಮಾನ್ಯವಾಗಿ ಪ್ರಕಾಶಮಾನವಾದ ನಕ್ಷತ್ರ ಎಂದು ಕರೆಯುವರು. ಈ ನಕ್ಷತ್ರವನ್ನು ಚಂದ್ರನು ಆಳುವನು. ಇವನು ಕಶೇರುಖಂಡ, ನಾಲಿಗೆ, ಬೆನ್ನು, ಮಿದುಳು ಭಾಗವನ್ನು ಆಳುವನು. ಈ ನಕ್ಷತ್ರದವರು ಸಾಮಾನ್ಯವಾಗಿ ಗಂಟಲು ನೀವು, ಸ್ತನ ನೋವು, ಶೀತ, ಕೆಮ್ಮು, ಮುಟ್ಟಿನ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಇವರಿಗೆ ಕಾಡುವ ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಸಾಮಾನ್ಯವಾಗಿ 3, 7 ಅಥವಾ 10 ದಿನಗಳ ಕಾಲ ತೆಗೆದುಕೊಳ್ಳುವರು.
ಮೃಗಶಿರಾ ನಕ್ಷತ್ರ:
ಈ ನಕ್ಷತ್ರವನ್ನು ಮಂಗಳನು ಆಳುವನು. ಮಂಗಳನು ವ್ಯಕ್ತಿಯ ಮೂಗು, ಕತ್ತು, ಗಂಟಲು, ಧ್ವನಿ ಪೆಟ್ಟಿಗೆ, ಭುಜ, ಎದೆ ಭಾಗವನ್ನು ನಿಯಂತ್ರಿಸುವನು. ಹಾಗಾಗಿ ಈ ನಕ್ಷತ್ರದವರು ಗಳಗಂಡ, ಗಾಯ, ಮುಖದಲ್ಲಿ ಮೊಡವೆ, ಅತಿಸಾರ, ಮಲಬದ್ಧತೆ, ಲೈಂಗಿಕ ಸಮಸ್ಯೆಗಳಂತಹ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇವರು ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಸಾಮಾನ್ಯವಾಗಿ 3, 5 ಅಥವಾ 9 ದಿನಗಳು ಬೇಕಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.
ಆರ್ದ್ರಾ ನಕ್ಷತ್ರ:
ಈ ನಕ್ಷತ್ರವು ರಾಹುವಿನ ಆಳ್ವಿಕೆಗೆ ಒಳಗಾಗಿರುತ್ತದೆ. ರಾಹು ಗಂಟಲು, ಭುಜ ಮತ್ತು ಕತ್ತಿನ ಭಾಗವನ್ನು ಆಳುತ್ತಾನೆ. ಈ ನಕ್ಷತ್ರದ ಅಡಿ ಜನಿಸಿದವು ಸಾಮಾನ್ಯವಾಗಿ ದಡಾರ, ಅಲರ್ಜಿ, ಒಣ ಕೆಮ್ಮು, ಡಿಫ್ತೀರಿಯಾಕ್ಕೆ ಒಳಗಾಗುತ್ತಾರೆ. ಇವರು ಒಮ್ಮೆ ಅನಾರೋಗ್ಯಕ್ಕೆ ಒಳಗಾದರೆ ಚೇತರಿಸಿಕೊಳ್ಳಲು 10 ಅಥವಾ 27 ದಿನಗಳ ಕಾಲ ಬೇಕಾಗುವುದು.
ಪುನರ್ವಸು ನಕ್ಷತ್ರ:
ಪುನರ್ವಸು ನಕ್ಷತ್ರವನ್ನು ಗುರು ಗ್ರಹದ ಆಳ್ವಿಕೆಯ ಅಡಿಯಲ್ಲಿ ಬರುವುದು. ಗುರುವು ಮೂಗು, ಗಂಟಲು, ಭುಜಗಳು, ಶ್ವಾಸಕೋಶ, ತಲೆ, ಹೊಟ್ಟೆ, ಮೇದೋಜ್ಜೀರಕ ಗ್ರಂಥಿ ಹಾಗೂ ಯಕೃತನ್ನು ಆಳುವನು. ಹಾಗಾಗಿ ಈ ನಕ್ಷತ್ರದ ವ್ಯಕ್ತಿಗಳು ಸಾಮಾನ್ಯವಾಗಿ ಬ್ರಾಂಕೈಟಿಸ್, ನ್ಯುಮೋನಿಯಾ, ಎದೆ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ರಕ್ತ ಸಮಸ್ಯೆ, ಬರ್ಬೆರಿಸ್ ಹಾಗೂ ಕ್ಷಯ ರೋಗಗಳು ಕಾಡುತ್ತವೆ. ಇವರಿಗೆ ಕಾಣಿಸಿಕೊಂಡ ಕಾಯಿಲೆಗಳಿಂದ ಗುಣಮುಖರಾಗಲು ಸಾಮಾನ್ಯವಾಗಿ 7 ದಿನಗಳು ಬೇಕಾಗುತ್ತವೆ.
ಪುಷ್ಯಾ ನಕ್ಷತ್ರ:
ಈ ನಕ್ಷತ್ರವನ್ನು ಶನಿ ಗ್ರಹವು ಆಳುವುದು. ಶ್ವಾಸಕೋಶ, ಉಸಿರಾಟ ಕ್ರಿಯೆ ಮತ್ತು ವ್ಯವಸ್ಥೆಗಳ ಮೇಲೆ ಹೆಚ್ಚು ಪ್ರಭಾವ ಬೀತರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಅನಾರೋಗ್ಯದಿಂದ ಚೇತರಿಸಿಕೊಳ್ಳಲು 7 ದಿನಗಳ ಕಾಲ ಬೇಕಾಗುವುದು.
ಆಶ್ಲೇಷಾ ನಕ್ಷತ್ರ:
ಈ ನಕ್ಷತ್ರವು ಬುಧ ಗ್ರಹದಿಂದ ಆಳಲ್ಪಡುವುದು. ಇದು ಶ್ವಾಸಕೋಶ, ಅನ್ನನಾಳ, ಮೇದೋಜ್ಜೀರಕ ಗ್ರಂಥಿ, ಯಕೃತ್, ನರಗಳ ಮೇಲೆ ಹಿಡಿತವನ್ನು ಹೊಂದಿರುತ್ತದೆ. ಇವರಿಗೆ ಸಾಮಾನ್ಯವಾಗಿ ಶೀತ, ಹೊಟ್ಟೆ ಸಮಸ್ಯೆ, ಪೊಟ್ಯಾಸಿಯಮ್ ಕೊರತೆ, ಮೊಣಕಾಲು ಸಮಸ್ಯೆ, ಅಜೀರ್ಣ, ಕಫ, ವಾಯು, ಉಸಿರಾಟದ ತೊಂದರೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುವುದು. ಅನಾರೋಗ್ಯದಿಂದ ಚೇತರಿಸಿಕೊಳ್ಳಲು 9, 20 ಅಥವಾ 30 ದಿನಗಳು ಬೇಕಾಗುವುದು.
ಮಘಾ ನಕ್ಷತ್ರ:
ಈ ನಕ್ಷತ್ರವು ಕೇತುವಿನ ಆಳ್ವಿಕೆಗೆ ಒಳಗಾಗುತ್ತವೆ. ಕೇತು ಹೃದಯ, ಬೆನ್ನು, ಬೆನ್ನುಹುರಿ, ಯಕೃತ್ ಮತ್ತು ಅಪಧಮನಿಯ ಭಾಗವನ್ನು ನಿಯಂತ್ರಿಸುತ್ತದೆ. ಇವರಿಗೆ ಸಾಮಾನ್ಯವಾಗಿ ಬೆನ್ನು ನೋವು, ಕಾಲರ, ತಲೆ ಸುತ್ತು, ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಅನಾರೋಗ್ಯದಿಂದ ಚೇತರಿಸಿಕೊಳ್ಳಲು 20, 30 ಅಥವಾ 45 ದಿನಗಳ ಕಾಲ ಬೇಕಾಗುವುದು.
ಪೂರ್ವಾ ಫಾಲ್ಗುಣಿ ನಕ್ಷತ್ರ:
ಈ ನಕ್ಷತ್ರವನ್ನು ಶುಕ್ರನು ಆಳುವನು. ಶುಕ್ರನು ಹೃದಯ, ಬೆನ್ನುಹುರಿಯ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರುತ್ತಾನೆ. ಹಾಗಾಗಿ ಈ ನಕ್ಷತ್ರದವರು ಹೆಚ್ಚಾಗಿ ಮೂಳೆ ಕಾಯಿಲೆ, ರಕ್ತ ಹೀನತೆ, ಕಾಲು ನೋವು ಪಾದಗಳ ಸೆಳೆತ, ಬಿಪಿಯಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಇವರಿಗೆ ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು 7, 15 ಅಥವಾ 27 ದಿನಗಳ ಕಾಲ ಬೇಕಾಗುವುದು.
ಉತ್ತರಾ ಫಾಲ್ಗುಣಿ ನಕ್ಷತ್ರ:
ಈ ನಕ್ಷತ್ರವನ್ನು ಸೂರ್ಯನು ಆಳುವನು. ಇವನು ಕರುಳಿನ ಮೇಲೆ ಹೆಚ್ಚು ಪ್ರಭಾವ ಬೀರುವನು. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಜ್ವರ, ಬಿ.ಪಿ, ದೌರ್ಬಲ್ಯ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದು, ಹೊಟ್ಟೆಯ ತೊಂದರೆ, ದೀರ್ಘಕಾಲದ ಕೆಮ್ಮು, ಕರುಳಿನಲ್ಲಿ ಗಡ್ಡೆ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳಿಂದ ಚೇತರಿಸಿಕೊಳ್ಳಲು 7, 15 ಅಥವಾ 27 ದಿನಗಳು ಬೇಕಾಗುತ್ತವೆ.
ಹಸ್ತಾ ನಕ್ಷತ್ರ:
ಈ ನಕ್ಷತ್ರವನ್ನು ಚಂದ್ರನು ಆಳುವನು. ಇವನು ಕರುಳು ಮತ್ತು ಗ್ರಂಥಿಗಳ ಮೇಲೆ ಹೆಚ್ಚಿನ ಹಿಡಿತವನ್ನು ಹೊಂದಿರುತ್ತಾನೆ. ಈ ನಕ್ಷತ್ರದಲ್ಲಿ ಜನಿಸಿದವರು ವಾಯು ಸಮಸ್ಯೆ, ಕರುಳು ಸಡಿಲವಾಗುವುದು, ಉನ್ಮಾದ, ಟೈಫಾಯ್ಡ್, ಅತಿಸಾರ, ಭೇದಿ, ಕಾಲರಾ ಮತ್ತು ಭುಜದ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಇವರಿಗೆ 9 ರಿಂದ 15 ದಿನಗಳ ಕಾಲ ಬೇಕಾಗುವುದು.
ಚಿತ್ತಾ ನಕ್ಷತ್ರ:
ಈ ನಕ್ಷತ್ರವನ್ನು ಮಂಗಳನು ಆಳುವನು. ಇವನು ಮೂತ್ರಪಿಂಡ, ಹರ್ನಿಯಾ, ಸೊಂಟ ಮತ್ತು ಮೆದುಳಿನ ಭಾಗಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಜ್ವರ, ಕಲ್ಲಿನ ಸಮಸ್ಯೆ, ಮೂತ್ರ ಪಿಂಡಗಳ ಸಮಸ್ಯೆ, ರಕ್ತಸ್ರಾವ, ಹುಣ್ಣು ತೀವ್ರವಾದ ನೋವು, ಮೊಣಕಾಲು ಸಮಸ್ಯೆ ಮತ್ತು ತಲೆನೋವಿನಂತಹ ಅನಾರೋಗ್ಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವುಗಳಿಂದ ಚೇತರಿಸಿಕೊಳ್ಳಲು 8 ರಿಂದ 15 ದಿನಗಳು ಬೇಕಾಗುವುದು.
ವಿಶಾಖಾ ನಕ್ಷತ್ರ:
ಗುರು ಗ್ರಹವು ವಿಶಾಖಾ ನಕ್ಷತ್ರವನ್ನು ಆಳುವುದು. ಗುರುವು ಕೆಳಹೊಟ್ಟೆ, ಯೋನಿ, ಗುದನಾಳ, ಗಾಳಿಗುಳ್ಳೆ, ಮೂತ್ರಪಿಂಡ, ಮೇದೋಜ್ಜೀರಕ ಗ್ರಂಥಿಗಳು, ಪ್ರಾಸ್ಟೇಟ್ ಗ್ರಂಥಿ ಮತ್ತು ಕೊಲೊನ್ ಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಈ ನಕ್ಷತ್ರದವರು ಗರ್ಭಕೋಶದ ತೊಂದರೆ, ಮೂತ್ರಪಿಂಡದ ಸಮಸ್ಯೆ, ಫೈಬ್ರಾಯ್ಡ್, ಅನಿಯಮಿತ ಮುಟ್ಟಿನ ಸ್ರಾವ, ಮೂತ್ರದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇವರು ಚೇತರಿಸಿಕೊಳ್ಳಲು ಸಾಮಾನ್ಯವಾಗಿ 20 ರಿಂದ 30 ದಿನಗಳ ಕಾಲ ಬೇಕಾಗುವುದು.
ಅನುರಾಧಾ ನಕ್ಷತ್ರ:
ಈ ನಕ್ಷತ್ರವನ್ನು ಶನಿಯು ಆಳುವನು. ಗಾಳಿ ಗುಳ್ಳೆ, ಜನನಾಂಗ, ಗುದನಾಳ, ಮೂಗಿನ ಮೂಳೆಗಳನ್ನು ನಿಯಂತ್ರಿಸುವನು. ಇ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಮಲಬದ್ಧತೆ, ಸಂತಾನ ಹೀನತೆ, ಮೂಳೆ ಮುರಿತ, ಗಂಟಲಿನ ಸಮಸ್ಯೆಯನ್ನು ಅನುಭವಿಸಬೇಕಾಗುವುದು. ಸಮಸ್ಯೆಗಳಿಂದ ಚೇತರಿಕೆ ಕಾಣಲು 6, 10 ಅಥವಾ 28 ದಿನಗಳು ಬೇಕಾಗುವುದು.
ಜ್ಯೇಷ್ಠಾ ನಕ್ಷತ್ರ:
ಈ ನಕ್ಷತ್ರವನ್ನು ಬುಧ ಗ್ರಹವು ಆಳುವುದು. ಇವನು ಅಂಡಾಶಯ, ಗರ್ಭ, ಕೊಲೊನ್, ಗುದದ್ವಾರ ಮತ್ತು ಜನನಾಂಗಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದವರು ಸಾಮಾನ್ಯವಾಗಿ ಗಡ್ಡೆ, ಫಿಸ್ತುಲಾ, ಭುಜದ ನೋವು, ಶಸ್ತ್ರಾಸ್ತ್ರ ಚಿಕಿತ್ಸೆಗಳನ್ನು ಹೊಂದಬೇಕಾಗುವುದು. ಇವರಿಗೆ ಬಂದ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳಲು 15, 21 ಅಥವಾ 30 ದಿನಗಳು ಬೇಕಾಗುವುದು.
ಮೂಲಾ ನಕ್ಷತ್ರ:
ಈ ನಕ್ಷತ್ರವನ್ನು ಕೇತು ಆಳುವನು. ಅವನು ಸೊಂಟವನ್ನು ಆಳುವನು. ಈ ನಕ್ಷತ್ರದವರು ಸಾಮಾನ್ಯವಾಗಿ ಸಂಧಿವಾತ, ಸೊಂಟದ ಕಾಯಿಲೆ, ಶ್ವಾಸಕೋಶದ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಇವರಿಗೆ ಬಂದ ಅನಾರೋಗ್ಯದಿಂದ ಚೇತರಿಸಿಕೊಳ್ಳಲು 9,15 ಅಥವಾ 20 ದಿನಗಳು ಬೇಕಾಗುವುದು.
ಪೂರ್ವಾಷಾಢ:
ಈ ನಕ್ಷತ್ರವನ್ನು ಶುಕ್ರನು ಆಳುವನು. ಇವನು ರಕ್ತನಾಳ, ಮಿದುಳು, ಬೆನ್ನುಮೂಳೆಗಳ ಮೇಲೆ ಪ್ರಭಾವವನ್ನು ಬೀರುವನು. ಇವರು ಸಾಮಾನ್ಯವಾಗಿ ಅಸ್ತಮಾ, ಸಂಧಿವಾತ, ಸಂಟದ ನೋವು, ಸುರುಳಿ ಕಾಯಿಲೆ, ರಕ್ತ ಶುದ್ಧಿಯ ಸಮಸ್ಯೆ ಮತ್ತು ಶೀತದಂತಹ ಸಮಸ್ಯೆಗಳು ಕಾಡುತ್ತವೆ. ಈ ನಕ್ಷತ್ರದವರು ಅನಾರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಎರಡು ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಸಮಯ ಬೇಕಾಗುವುದು.
ಉತ್ತರಾಷಾಢ:
ಈ ನಕ್ಷತ್ರದವರನ್ನು ಸೂರ್ಯ ಆಳುವನು. ಸೂರ್ಯನು ತೊಡೆ, ಪಕ್ಕೆಲಬು, ಮೊಣಕಾಲು, ಮಂಡಿಚಿಪ್ಪುಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದವರು ಎಸ್ಜಿಮಾ, ಚರ್ಮದ ಕಾಯಿಲೆ, ಜೀರ್ಣಾಂಗ ಅಸ್ವಸ್ಥತೆಗಳು, ಹೃದಯ ಸಮಸ್ಯೆ, ಹೊಟ್ಟೆ ಸಂಬಂಧಿ ಕಾಯಿಲೆಗಳು ಕಾಡುವುದು. ಈ ನಕ್ಷತ್ರದವರಿಗೆ ಚೇತರಿಕೆ ಕಾಣಲು 40 ರಿಂದ 45 ದಿನಗಳು ಬೇಕಾಗುವುದು.
ಶ್ರವಣಾ ನಕ್ಷತ್ರ:
ಈ ನಕ್ಷತ್ರವನ್ನು ಚಂದ್ರನು ಆಳುವನು. ಚರ್ಮ, ದುಗ್ಧರಸ, ಮೊಣಕಾಲುಗಳನ್ನು ಆಳುವನು. ಇವರು ಕ್ಷಯ, ಎಸ್ಜಿಮಾ, ಕುಷ್ಠರೋಗ, ಕೀವು ರಚನೆ, ಜೀರ್ಣಾಂಗ ಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವರಿಗೆ ಅನಾರೋಗ್ಯದಿಂದ ಚೇತರಿಕೆ ಕಾಣಲು 5 ರಿಂದ 10 ದಿನಗಳು ಬೇಕಾಗುವುದು.
ಧನಿಷ್ಠಾ ನಕ್ಷತ್ರ:
ಈ ನಕ್ಷತ್ರವನ್ನು ಮಂಗಳ ಗ್ರಹವು ಆಳುವುದು. ಅಪಘಾತ, ಹೊಲಿಗೆ ಚಿಕಿತ್ಸೆ, ಶಸ್ತ್ರಾಸ್ತ್ರ ಚಿಕಿತ್ಸೆಯ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಧನಿಷ್ಠಾ ನಕ್ಷತ್ರದವರು ಸಾಮಾನ್ಯವಾಗಿ ಮೊಣಕಾಲು ಸಮಸ್ಯೆ, ಮೂಳೆ ಸಮಸ್ಯೆ, ಮಲೇರಿಯಾ, ಫಿಲೇರಿಯಾ, ಅಧಿಕ ಜ್ವರ, ಅತಿಸಾರ, ಎಲಿಫಾಂಟಿಯಾಸಿಸ್, ಒಣ ಕೆಮ್ಮು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಅನಾರೋಗ್ಯದಿಂದ ಚೇತರಿಕೆ ಕಾಣಲು 13 ರಿಂದ 15 ದಿನಗಳ ಕಾಲ ಬೇಕಾಗುವುದು.
ಶತಭಿಷಾ ನಕ್ಷತ್ರ:
ಈ ನಕ್ಷತ್ರವನ್ನು ರಾಹು ಆಳುವನು. ರಾಹುವು ಸ್ನಾಯು, ಮೊಣಕಾಲು ಮತ್ತು ಪಾದಗಳನ್ನು ನಿಯಂತ್ರಿಸುವನು. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಸಂಧಿವಾತ, ಹೃದಯಘಾತ, ಬಿ.ಪಿ, ನಿದ್ರಾಹೀನತೆ ಆರೋಗ್ಯ ಸಮಸ್ಯೆಗಳನ್ನು ಆಗಾಗ ಅನುಭವಿಸುವರು. ಇವರಿಗೆ ಅನಾರೋಗ್ಯದಿಂದ ಚೇತರಿಸಿಕೊಳ್ಳಲು 3, 10 ಅಥವಾ 40 ದಿನಗಳು ಬೇಕಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.
ಪೂರ್ವಾಭಾದ್ರಾ ನಕ್ಷತ್ರ:
ಈ ನಕ್ಷತ್ರವನ್ನು ಗುರು ಗ್ರಹವು ಆಳುವುದು. ಇವನು ಪಾದ, ಕಾಲ್ಬೆರಳು ಮತ್ತು ಕಾಳುಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಯಕೃತ್, ಕಾಮಲೆ, ಹೊಟ್ಟೆ ಗಡ್ಡೆ, ಕರುಳು ಕಾಯಿಲೆಗಳಿಗೆ ತುತ್ತಾಗುವುದು. ಈ ರೋಗಗಳಿಂದ ಚೇತರಿಕೆ ಕಾಣಲು ಈ ನಕ್ಷತ್ರದವರಿಗೆ 2, 10 ಅಥವಾ 3 ತಿಂಗಳುಗಳ ಕಾಲ ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತವೆ.
ಉತ್ತರಾಭಾದ್ರಾ ನಕ್ಷತ್ರ:
ಈ ನಕ್ಷತ್ರವನ್ನು ಶನಿ ಗ್ರಹವು ಆಳುವುದು. ಶನಿಯು ಕಾಲುಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರುತ್ತಾನೆ. ಈ ನಕ್ಷತ್ರದವರು ಅಂಡವಾಯು, ತಣ್ಣನೆಯ ಪಾದ, ಕಾಲು ಮುರಿತ, ಮಲಬದ್ಧತೆ, ಡ್ರಾಪ್ಸಿ ಮತ್ತು ಅಜೀರ್ಣ ಸಮಸ್ಯೆಯು ಆಗಾಗ ಕಾಣಿಸಿಕೊಳ್ಳುವುದು. ಇವರಿಗೆ ಅನಾರೋಗ್ಯದಿಂದ ಚೇತರಿಕೆ ಕಾಣಲು ಸಾಮಾನ್ಯವಾಗಿ 7, 10 ಅಥವಾ 45 ದಿನಗಳು ಬೇಕಾಗುವುದು.
ರೇವತಿ ನಕ್ಷತ್ರ:
ಈ ನಕ್ಷತ್ರವನ್ನು ಬುಧನು ಆಳುವನು. ಬುಧನು ಕಾಲು ಮತ್ತು ಕಾಲ್ಬೆರಳಿನ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ. ಇವರಿಗೆ ಸಾಮಾನ್ಯವಾಗಿ ಮಲಬದ್ಧತೆ, ಅಂಡವಾಯು, ಕ್ಷಯ ರೋಗ ಕಾಣಿಸಿಕೊಳ್ಳುವುದು. ಇವುಗಳಿಂದ ಚೇತರಿಕೆ ಕಾಣಲು 10, 28 ಅಥವಾ 45 ದಿನಗಳು ಬೆಕಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.
ಸ್ವಾತಿ ನಕ್ಷತ್ರ:
ಈ ನಕ್ಷತ್ರವನ್ನು ರಾಹು ಆಳುವನು. ಇವನು ಮೂತ್ರಪಿಂಡ, ಕೌಶಲ್ಯ, ಮೂತ್ರನಾಳಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದವರಿಗೆ ಸಾಮಾನ್ಯವಾಗಿ ಚರ್ಮರೋಗ, ಮೂತ್ರದ ಸಮಸ್ಯೆ, ವಾಯು ಸಮಸ್ಯೆ ಆಗಾಗ ಕಾಣಿಸಿಕೊಳ್ಳುವುದು. ಇವರಿಗೆ ಅನಾರೋಗ್ಯದಿಂದ ಚೇತರಿಕೆ ಕಾಣಲು 2 ಅಥವಾ 10 ದಿನಗಳು ಬೇಕಾಗುವುದು..
ಸರ್ವೇ ಜನಾಃ ಸುಖಿನೋ ಭವಂತು..
***
ಗಣಗಳ ಗುಣಲಕ್ಷಣಗಳು ನಿಮ್ಮ ಗಣ ಯಾವುದು ತಿಳಿಯಿರಿ ದೇವ ಗಣ, ಮನುಷ್ಯ ಗಣ, ರಾಕ್ಷಸ ಗಣ.
ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.
ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ. 27 ನಕ್ಷತ್ರಗಳನ್ನು ಮೂರು ಗಣಗಳಾಗಿ ವಿಂಗಡಿಸಿದರೆ ಒಂದೊಂದು ಗಣಗಳು ಒಂಬತ್ತು ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ. ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಗಣಗಳು ಇರುತ್ತದೆ ಎಂದು ಹೇಳಬಹುದು.
ಮೊದಲನೆಯದಾಗಿ ನಿಮ್ಮ ಜನ್ಮ ಪುಷ್ಯ ನಕ್ಷತ್ರ, ಪುನರ್ವಸು ನಕ್ಷತ್ರ, ಶ್ರವಣ ನಕ್ಷತ್ರ, ಅನುರಾಧ ನಕ್ಷತ್ರ, ಅಶ್ವಿನಿ ನಕ್ಷತ್ರ, ಸ್ವತಿ ನಕ್ಷತ್ರ, ಮೃಗಶಿರ ಹಾಗೂ ರೇವತಿ ನಕ್ಷತ್ರ ನಕ್ಷತ್ರಗಳಲ್ಲಿ ನೀವು ಜನಿಸಿದರೆ ನೀವು ದೇವಗಣ ದವರ್ ಆಗಿರುತ್ತೀರಿ.
ದೇವ ಗಣದವರು ಹೆಸರಿನಂತೆಯೇ ಇವರ ಸ್ವಭಾವವು ದೇವರ ಹಾಗೆ ಇರುತ್ತದೆ ಎಂದು ಹೇಳಬಹುದು. ಸಾಧಾರಣ ಜೀವನ ಮತ್ತು ಉಚ್ಚ ಮನಸ್ಸಿನವರ ಆಗಿರುತ್ತಾರೆ. ಸರಳವಾಗಿ ರುತ್ತಾರೆ ನೇರವಾಗಿ ಇರುತ್ತಾರೆ ಮತ್ತು ಜಗಳದಿಂದ ದೂರವಾಗಿರುತ್ತದೆ. ಇವರು ದಾನ-ಧರ್ಮ ಮಾಡುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಯಾರಾದರೂ ಇವರಿಗೆ ತೊಂದರೆಯನ್ನು ಕೊಟ್ಟರೆ ಸೇಡು ತೀರಿಸಿಕೊಳ್ಳುವ ಬಗ್ಗೆ ಯೋಚಿಸುವುದಿಲ್ಲ. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ. ಇವರು ಯಾರಿಗಾದರೂ ಸಲಹೆ ಕೊಟ್ಟರೆ ಎಲ್ಲವನ್ನು ಕೇಳುತ್ತಾರೆ ಎಂದು ಹೇಳಬಹುದು.ಇವರು ಕಮ್ಮಿ ಭೋಜನವನ್ನು ಸೇವಿಸುತ್ತಾರೆ ಇವರು ಹೃದಯದಿಂದ ಕೋಮಲ ಮನಸ್ಸಿನವನಾಗಿದ್ದರೆ.
ನೀವು ಪೂರ್ವಾಷಾಡ ನಕ್ಷತ್ರ, ಉತ್ತರಾಷಾಡ ನಕ್ಷತ್ರ, ಪೂರ್ವ ಪಾಲ್ಗುಣಿ ನಕ್ಷತ್ರ, ಉತ್ತರ ಪಾಲ್ಗುಣಿ ನಕ್ಷತ್ರ, ಉತ್ತರ ಭದ್ರಪದ ನಕ್ಷತ್ರ, ಪೂರ್ವಭಾದ್ರಪದ ಭರಣಿ ನಕ್ಷತ್ರ, ರೋಹಿಣಿ ನಕ್ಷತ್ರ, ಆರಿದ್ರ ನಕ್ಷತ್ರಗಳಲ್ಲಿ ಜನಿಸಿದ್ದರೆ ನೀವು ಮನುಷ್ಯ ಗಣದವರು ಆಗಿರುತ್ತೀರಿ. ಈ ಗಣದಲ್ಲಿ ಜನಿಸಿದವರು ಕರ್ಮ ಶೀಲ ರಾಗಿರುತ್ತಾರೆ. ಕರ್ಮದಲ್ಲಿ ವಿಶ್ವಾಸವಿರುವ ರಾಗಿರುತ್ತಾರೆ.
ಆಕರ್ಷಕ ಮತ್ತು ಎಲ್ಲರನ್ನೂ ಪ್ರಭಾವಿಸುವ ದೃಢನಿರ್ಧಾರವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರು ಬೇಗ ಚಿಂತೆಗೆ ಒಳಗಾಗುತ್ತಾರೆ ಎಂದು ಹೇಳಬಹುದು. ಇವರು ನಿನ್ನೆ ಮತ್ತು ನಾಳೆಯ ಬಗ್ಗೆ ಹೆಚ್ಚಿಗೆ ಯೋಚಿಸುವುದಿಲ್ಲ. ಇವರು ಸ್ಥಿರವಾಗಿ ಇರುವುದನ್ನು ಇಷ್ಟಪಡುತ್ತಾರೆ. ಇವರು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಹೆಚ್ಚು ಒಳ್ಳೆಯದನ್ನು ಬಯಸುವುದಿಲ್ಲ ಸಾಮಾನ್ಯವಾಗಿ ಇರುತ್ತಾರೆ.
ನೀವು ಆಶ್ಲೇಷ ನಕ್ಷತ್ರ, ವಿಷಕ ನಕ್ಷತ್ರ, ಕೃತಿಕ ನಕ್ಷತ್ರ, ಮಕ ಜೇಷ್ಠ ಮೂಲ ಶತಭಿಷ ನಕ್ಷತ್ರ, ಜೇಷ್ಠ ನಕ್ಷತ್ರ ಹಾಗೂ ಚಿತ್ತ ನಕ್ಷತ್ರಗಳಲ್ಲಿ ಜನಿಸಿದರ ನೀವು ರಾಕ್ಷಸ ಗಣ ದವರ್ ಆಗಿರುತ್ತೀರಿ.ಇವರು ಧೈರ್ಯ ಮತ್ತು ಉತ್ಸಾಹಿ ಗಳಾಗಿರುತ್ತಾರೆ. ಇವರಿಗೆ ಒಳ್ಳೆಯ ಗುಣಗಳು ಇರುತ್ತದೆ ಆದರೆ ಸ್ವಲ್ಪ ನಕಾರಾತ್ಮಕ ಯೋಚನೆ ಇರುತ್ತದೆ.
ಇವರು ಸ್ವಲ್ಪ ಆತುರದ ಸ್ವಭಾವದವರಾಗಿರುತ್ತಾರೆ. ಯಾವಾಗಲೂ ತಮ್ಮ ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಇಷ್ಟಪಡುತ್ತಾರೆ. ಇವರು ಹೆಚ್ಚು ಹೆದರುವುದಿಲ್ಲ ಇಚ್ಛಾಶಕ್ತಿ ಹೆಚ್ಚಾಗಿರುತ್ತದೆ. ಇವರಿಗೆ ಸಿಟ್ಟು ಹೆಚ್ಚಾಗಿರುತ್ತದೆ ಮತ್ತು ಇವರ ಮಾತು ಸ್ವಲ್ಪ ಕಠೋರ ವಾಗಿರುತ್ತದೆ, ಇವರು ಯೋಗ ಧ್ಯಾನ ಮಾಡುವುದರಿಂದ ತಮ್ಮ ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವುದರಿಂದ ಇವರಿಗೆ ಒಳ್ಳೆಯದಾಗುತ್ತದೆ.
***
ಸಾಡೇಸಾತಿ
ಅಗ್ನಿ ಭೂ ವಾಯು ಜಲ ತತ್ವಗಳಿಂದ ಗುರುತಿಸಲ್ಪಡುವ ರಾಶಿಗಳಲ್ಲಿ ....
ಅಗ್ನಿತತ್ವದ ರಾಶಿಯಲ್ಲಿ ಶನಿಯು ಸಂಚರಿಸುವಾಗ ಹೆಚ್ಚಿನ ತೊಂದರೆಯನ್ನು....
ಜಲತತ್ತ್ವ ರಾಶಿಗಳಲ್ಲಿ ಸಂಚರಿಸುವಾಗ ಅಗ್ನಿತತ್ವದ ರಾಶಿಗಳಿಂದ ಕಡಿಮೆ ತೊಂದರೆಯನ್ನು ನೀಡುವನು...
ಆದರೆ ಭೂತತ್ವ ರಾಶಿಗಳಲ್ಲಿ ಸ್ವಲ್ಪ ಶುಭ ಫಲವನ್ನು ನೀಡುವನು
ಹಾಗೆ ವಾಯುತತ್ವ ರಾಶಿಗಳಲ್ಲಿ ಇನ್ನೂ ಹೆಚ್ಚಿನ ಶುಭ ಫಲವನ್ನು ನೀಡುವನು
ಅಷ್ಟಕ್ಕ ವರ್ಗದಲ್ಲಿ ಕಡಿಮೆ ಬಿಂದು ಇರುವ ರಾಶಿಯಲ್ಲಿ ಗೋಚಾರದಲ್ಲಿ ಶನಿಯು ಬಂದಾಗ ಸಾಡೇಸಾತಿನಲ್ಲಿ ಹೆಚ್ಚಿನ ತೊಂದರೆಯಾಗುವುದು .
***
ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.🌹
ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ. 27 ನಕ್ಷತ್ರಗಳನ್ನು ಮೂರು ಗಣಗಳಾಗಿ ವಿಂಗಡಿಸಿದರೆ ಒಂದೊಂದು ಗಣಗಳು ಒಂಬತ್ತು ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ. ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಗಣಗಳು ಇರುತ್ತದೆ ಎಂದು ಹೇಳಬಹುದು.
🌸 ದೇವಗಣ🌸
ಮೊದಲನೆಯದಾಗಿ ನಿಮ್ಮ ಜನ್ಮ ಪುಷ್ಯ ನಕ್ಷತ್ರ, ಪುನರ್ವಸು ನಕ್ಷತ್ರ, ಶ್ರವಣ ನಕ್ಷತ್ರ, ಅನುರಾಧ ನಕ್ಷತ್ರ, ಅಶ್ವಿನಿ ನಕ್ಷತ್ರ, ಸ್ವತಿ ನಕ್ಷತ್ರ, ಮೃಗಶಿರ ಹಾಗೂ ರೇವತಿ ನಕ್ಷತ್ರ ನಕ್ಷತ್ರಗಳಲ್ಲಿ ನೀವು ಜನಿಸಿದರೆ ನೀವು ದೇವಗಣ ದವರ್ ಆಗಿರುತ್ತೀರಿ.
ದೇವ ಗಣದವರು ಹೆಸರಿನಂತೆಯೇ ಇವರ ಸ್ವಭಾವವು ದೇವರ ಹಾಗೆ ಇರುತ್ತದೆ ಎಂದು ಹೇಳಬಹುದು. ಸಾಧಾರಣ ಜೀವನ ಮತ್ತು ಉಚ್ಚ ಮನಸ್ಸಿನವರ ಆಗಿರುತ್ತಾರೆ. ಸರಳವಾಗಿ ರುತ್ತಾರೆ ನೇರವಾಗಿ ಇರುತ್ತಾರೆ ಮತ್ತು ಜಗಳದಿಂದ ದೂರವಾಗಿರುತ್ತದೆ. ಇವರು ದಾನ-ಧರ್ಮ ಮಾಡುವುದರಲ್ಲಿ ಆಸಕ್ತಿ ಹೊಂದಿರುತ್ತಾರೆ. ಯಾರಾದರೂ ಇವರಿಗೆ ತೊಂದರೆಯನ್ನು ಕೊಟ್ಟರೆ ಸೇಡು ತೀರಿಸಿಕೊಳ್ಳುವ ಬಗ್ಗೆ ಯೋಚಿಸುವುದಿಲ್ಲ. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸಿರುತ್ತಾರೆ. ಇವರು ಯಾರಿಗಾದರೂ ಸಲಹೆ ಕೊಟ್ಟರೆ ಎಲ್ಲವನ್ನು ಕೇಳುತ್ತಾರೆ ಎಂದು ಹೇಳಬಹುದು.ಇವರು ಕಮ್ಮಿ ಭೋಜನವನ್ನು ಸೇವಿಸುತ್ತಾರೆ ಇವರು ಹೃದಯದಿಂದ ಕೋಮಲ ಮನಸ್ಸಿನವ ಆಗಿರುತ್ತಾರೆ
🌸 ಮನುಷ್ಯ ಗಣ🌸
ನೀವು ಪೂರ್ವಾಷಾಡ ನಕ್ಷತ್ರ, ಉತ್ತರಾಷಾಡ ನಕ್ಷತ್ರ, ಪೂರ್ವ ಪಾಲ್ಗುಣಿ ನಕ್ಷತ್ರ, ಉತ್ತರ ಪಾಲ್ಗುಣಿ ನಕ್ಷತ್ರ, ಉತ್ತರ ಭದ್ರಪದ ನಕ್ಷತ್ರ, ಪೂರ್ವಭಾದ್ರಪದ ಭರಣಿ ನಕ್ಷತ್ರ, ರೋಹಿಣಿ ನಕ್ಷತ್ರ, ಆರಿದ್ರ ನಕ್ಷತ್ರಗಳಲ್ಲಿ ಜನಿಸಿದ್ದರೆ ನೀವು ಮನುಷ್ಯ ಗಣದವರು ಆಗಿರುತ್ತೀರಿ. ಈ ಗಣದಲ್ಲಿ ಜನಿಸಿದವರು ಕರ್ಮ ಶೀಲ ರಾಗಿರುತ್ತಾರೆ. ಕರ್ಮದಲ್ಲಿ ವಿಶ್ವಾಸವಿರುವ ರಾಗಿರುತ್ತಾರೆ.
ಆಕರ್ಷಕ ಮತ್ತು ಎಲ್ಲರನ್ನೂ ಪ್ರಭಾವಿಸುವ ದೃಢನಿರ್ಧಾರವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಆದರೆ ಇವರು ಬೇಗ ಚಿಂತೆಗೆ ಒಳಗಾಗುತ್ತಾರೆ ಎಂದು ಹೇಳಬಹುದು. ಇವರು ನಿನ್ನೆ ಮತ್ತು ನಾಳೆಯ ಬಗ್ಗೆ ಹೆಚ್ಚಿಗೆ ಯೋಚಿಸುವುದಿಲ್ಲ. ಇವರು ಸ್ಥಿರವಾಗಿ ಇರುವುದನ್ನು ಇಷ್ಟಪಡುತ್ತಾರೆ. ಇವರು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಹೆಚ್ಚು ಒಳ್ಳೆಯದನ್ನು ಬಯಸುವುದಿಲ್ಲ ಸಾಮಾನ್ಯವಾಗಿ ಇರುತ್ತಾರೆ.
🌸 ರಾಕ್ಷಸಗಣ🌸
ನೀವು ಆಶ್ಲೇಷ ನಕ್ಷತ್ರ, ವಿಷಕ ನಕ್ಷತ್ರ, ಕೃತಿಕ ನಕ್ಷತ್ರ, ಮಕ ಜೇಷ್ಠ ಮೂಲ ಶತಭಿಷ ನಕ್ಷತ್ರ, ಜೇಷ್ಠ ನಕ್ಷತ್ರ ಹಾಗೂ ಚಿತ್ತ ನಕ್ಷತ್ರಗಳಲ್ಲಿ ಜನಿಸಿದರ ನೀವು ರಾಕ್ಷಸ ಗಣ ದವರ್ ಆಗಿರುತ್ತೀರಿ.ಇವರು ಧೈರ್ಯ ಮತ್ತು ಉತ್ಸಾಹಿ ಗಳಾಗಿರುತ್ತಾರೆ. ಇವರಿಗೆ ಒಳ್ಳೆಯ ಗುಣಗಳು ಇರುತ್ತದೆ ಆದರೆ ಸ್ವಲ್ಪ ನಕಾರಾತ್ಮಕ ಯೋಚನೆ ಇರುತ್ತದೆ.
ಇವರು ಸ್ವಲ್ಪ ಆತುರದ ಸ್ವಭಾವದವರಾಗಿರುತ್ತಾರೆ. ಯಾವಾಗಲೂ ತಮ್ಮ ಜೀವನದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಇಷ್ಟಪಡುತ್ತಾರೆ. ಇವರು ಹೆಚ್ಚು ಹೆದರುವುದಿಲ್ಲ ಇಚ್ಛಾಶಕ್ತಿ ಹೆಚ್ಚಾಗಿರುತ್ತದೆ. ಇವರಿಗೆ ಸಿಟ್ಟು ಹೆಚ್ಚಾಗಿರುತ್ತದೆ ಮತ್ತು ಇವರ ಮಾತು ಸ್ವಲ್ಪ ಕಠೋರ ವಾಗಿರುತ್ತದೆ, ಇವರು ಯೋಗ ಧ್ಯಾನ ಮಾಡುವುದರಿಂದ ತಮ್ಮ ಸಿಟ್ಟನ್ನು ಕಡಿಮೆ ಮಾಡಿಕೊಳ್ಳುವುದರಿಂದ ಇವರಿಗೆ ಒಳ್ಳೆಯದಾಗುತ್ತದೆ
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
🌸ph no :9480916387
***
अगले 50 वर्षों तक शनि की साढ़ेसाती किन-किन राशियों पर आएगी
इसके बारे में आज जानेंगे ।
मेष राशि पर 29 मार्च 2025 से 31 मई 2032 तक शनि की साढ़ेसाती रहेगी,
वृष राशि पर 3 जून 2027 से 13 जुलाई 2034 तक,
मिथुन पर 8 अगस्त 2029 से 27 अगस्त 2036 तक,
कर्क पर 31 मई 2032 से 22 अक्टूबर 2038 तक,
सिंह राशि पर 13 जुलाई 2034 से 29 जनवरी 2041 तक,
कन्या राशि वालों पर शनि की साढ़ेसाती 27 अगस्त 2036 से 12 दिसंबर 2043 तक,
तुला पर 22 अक्टूबर 2038 से 8 दिसंबर 2046 तक,
वृश्चिक पर 28 जनवरी 2041 से 3 दिसंबर 2049 तक,
धनु पर 12 दिसंबर 2043 से 3 दिसंबर 2049 तक,
मकर पर 26 जनवरी 2017 से 29 मार्च 2025 तक,
कुंभ पर 24 जनवरी 2020 से 3 जून 2027 तक,
मीन राशि वालों पर शनि की साढ़ेसाती 29 अप्रैल 2022 से 8 अगस्त 2029 तक प्रभावी रहेगी.
विभिन्न राशियों पर लोगों की जन्मांग कुंडली के आधार पर शनि अनुकूल और प्रतिकूल फल प्रदान करेंगे।
जाप: *ॐ ह्रीं शनिग्रहारिष्ट निवारक
आप अपनी कुंडली का विस्तृत विश्लेषण व कुंडली मिलान करवा सकते हैं।
सही और सटीक मार्गदर्शन के लिए संपर्क करें।
🕉🔱🕉🔱🕉🔱🕉 🔱🕉
ज्योतिष आचार्य पांडुरंगरावशास्त्री
ज्योतिष शास्त्रकुंडली मीलानवास्तुशास्त्रवैदिक अनुष्ठान व समस्त धार्मिक कार्यो के लिए संपर्क करें:
मो: +9321113407
Email- pigweshastri@gmail.com
🙏Mumbai🙏
***
No
English Name
Devanagari Name
Tamil Name
Malayalam Name
1
Ashvini/Aswini
अश्विनी
Aswini
Aswathi
2
Bharani
भरणी
Bharani
Bharani
3
Krittika/Krithika
कृत्तिका
Karthigai
Kaarthika
4
Rohini
रोहिणी
Rohini
Rohini
5
Mrigashirsha
मृगशीर्ष
Mrigasheersham
Makeeryam
6
Ardra
आर्द्रा
Thiruvaathirai
Thiruvaathira
7
Punarvasu
पुनर्वसु
Punarpoosam
Punartham
8
Pushya
पुष्य
Poosam
Pooyyam
9
Ashlesha
आश्ळेषा/आश्लेषा
Aayilyam
Aayilyam
10
Magha
मघा
Makam
Makham
11
Purva Phalguni
पूर्व फाल्गुनी
Pooram
Pooram
12
Uttara Phalguni
उत्तर फाल्गुनी
Uthiram
Uthram
13
Hasta
हस्त
Hastham
Atham
14
Chitra
चित्रा
Chithirai
Chitra
15
Swati
स्वाति
Swaathi
Chothi
16
Vishakha
विशाखा
Visaakam
Visaakam
17
Anuradha
अनुराधा
Anusham
Anizham
18
Jyeshtha
ज्येष्ठा
Kettai
Thrikketta
19
Mula
मूल
Moolam
Moolam
20
Purva Ashadha
पूर्वाषाढा
Pooraadam
Pooraadam
21
Uttara Ashadha
उत्तराषाढा
Uthiraadam
Uthraadam
22
Shravana
श्रवण
Thiruvonam
Thiruvonam
23
Dhanishtha
श्रविष्ठा/धनिष्ठा
Avittam
Avittam
24
Shatabhisha
शतभिषक्/शततारका
Chathayam/Sadayam
Chathayam
25
Purva Bhadrapada
पूर्वभाद्रपदा/पूर्वप्रोष्ठपदा
Poorattathi
Poorattadhi
26
Uttara Bhadrapada
उत्तरभाद्रपदा/उत्तरप्रोष्ठपदा
Uthirattathi
Uthrattathi
27
Revati
रेवती
Revathi
Revathi
***