ನಿಮ್ಮ ಜಾತಕದಲ್ಲಿರುವ ದೋಷಗಳು ದೂರವಾಗಿ ನಿಮ್ಮ ಜಾತಕ ಉತ್ತಮ ತಕವಾಗಿ ಬದಲಾಗುವುದು ಎಲ್ಲ ಕಷ್ಟಗಳು ನಿವಾರಣೆಯಾಗುವವು. ಜಾತಕದಲ್ಲಿ ಕಾಣಿಸಿಕೊಳ್ಳುವ ದೋಷ ವ್ಯಕ್ತಿಯ ಅದೃಷ್ಟದ ಮೇಲೆ ಪ್ರಭಾವ ಬೀರುತ್ತದೆ. ಜಾತಕ ದೋಷದಿಂದಾಗಿ ಎಷ್ಟು ಪ್ರಯತ್ನ ಪಟ್ಟರೂ ಸಹ ವೈಫಲ್ಯ ಬೆನ್ನು ಬಿಡುವುದಿಲ್ಲ.ಆದರೆ ನಮ್ಮ ಗ್ರಂಥಗಳಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಜಾತಕ ದೋಷವನ್ನು ಸರಳ ಉಪಾಯಗಳಿಂದ ಕಡಿಮೆ ಮಾಡಿಕೊಂಡು ಸಫಲತೆಯನ್ನು ಯಶಸ್ಸನ್ನು ಕಾಣಬಹುದಾಗಿದೆ.
ಶಿವಪುರಾಣದ ಪ್ರಕಾರ ಪ್ರತಿ ದಿನ ಒಂದು ಲೋಟ ನೀರನ್ನು ಶಿವಲಿಂಗಕ್ಕೆ ಅರ್ಪಿಸಿ ಪೂಜೆ ಪ್ರಾರ್ಥನೆಯನ್ನು ಮಾಡುವುದರಿಂದ ಶಿವ ಪ್ರಸನ್ನನಾಗುತ್ತಾನೆ. ಭಕ್ತರು ಸಹ ಅವರ ಆಸೆಯನ್ನು ಶಿವ ಈಡೇರಿಸುತ್ತಾನೆ.
ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಒಂದು ತಾಮ್ರದ ಲೋಟದಲ್ಲಿ ನೀರನ್ನು ತೆಗೆದುಕೊಂಡು ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. “ ಓಂ ನಮಃ ಶಿವಾಯ” ಎಂಬ ಪಂಚಾಕ್ಷರಿ ಮಂತ್ರವನ್ನು ಸಹ ಜಪಿಸಬೇಕು.ರಾತ್ರಿ ಮಲಗುವ ಸಮಯದಲ್ಲಿ ತಲೆದಿಂಬಿನ ಬದಿಯಲ್ಲಿ ತಾಮ್ರದ ಲೋಟದಲ್ಲಿ ನೀರನ್ನು ಇಟ್ಟು ಮಲಗಿ ಬೆಳಗ್ಗೆ ಎದ್ದ ತಕ್ಷಣ ಏಳು ಬಾರಿ ಆ ಲೋಟವನ್ನು ನೀರಿನ ಸಮೇತ ತಲೆಗೆ ಸುತ್ತಿಸಿದ ನಂತರ ಆ ನೀರನ್ನು ಒಂದು ಮುಳ್ಳಿನ ಗಿಡಕ್ಕೆ ಹಾಕಬೇಕು. ನಿಮ್ಮ ಮನೆಯ ಬಳಿ ಮುಳ್ಳಿನ ಗಿಡ ಇಲ್ಲ ಎಂದಾದರೆ ಬೇರೆ ಯಾವುದಾದರೂ ಗಿಡದ ಬುಡಕ್ಕೂ ಸಹ ಹಾಕಬಹುದು .ಪ್ರತಿದಿನ ಬೆಳಗ್ಗೆ ಸೂರ್ಯ ದೇವನಿಗೆ ನೀರನ್ನು ಅರ್ಪಿಸಿ ಸ್ನಾನದ ನಂತರ ತಾಮ್ರದ ಲೋಟದಲ್ಲಿ ನೀರನ್ನು ಅರ್ಪಿಸಿ . ಆ ನೀರಿನೊಳಗೆ ಕೆಂಪು ಹೂವು, ಕುಂಕುಮ ಮತ್ತು ಅಕ್ಕಿಯನ್ನು ಸೇರಿಸಿ ನಂತರ ಸೂರ್ಯದೇವನಿಗೆ ಅರ್ಪಿಸಬೇಕು.
ಸರಳ ಪರಿಹಾರ ಶ್ರೀ ಸುಧಾಕರ
*********