🕉️ಪಂಚ ಕನ್ಯಾ ಸ್ಮರೇನ್ನಿತ್ಯಂ🕉️
🌺ಹಿಂದೂ ಪುರಾಣದ ಪ್ರಕಾರ ದೇವತೆಗಳು ವರದಿಂದಲೊ, ಶಾಪದಿಂದಲೊ, ಮನುಷ್ಯರಾಗಿ ಜನಿಸಿ, ಕಷ್ಟ-ಸುಖ, ನೋವು-ನಲಿವು, ಕಣ್ಣೀರು ಎಲ್ಲವನ್ನೂ ಅನುಭವಿಸಿ, ಸಾಮಾನ್ಯ ಜನಗಳ ಜೀವನದಲ್ಲಿ ಪ್ರಾತಃಸ್ಮರಣೀಯರಾಗಿ, ಮಾದರಿಯಾಗಿ, ಆದರ್ಶಪ್ರಾಯರಾಗಿದ್ದಾರೆ. ಅಂತಹ ಮಹಿಳೆಯರಲ್ಲಿ ಪ್ರಮುಖರಾಗಿ "ಅಹಲ್ಯಾ , ದ್ರೌಪದಿ, ಸೀತಾ, ತಾರಾ, ಮಂಡೋದರಿ". ಇವರಲ್ಲಿ ಅಹಲ್ಯಾ, ಸೀತಾ, ತಾರಾ, ಮಂಡೋದರಿ, ರಾಮಾಯಣದಲ್ಲಿದ್ಧರೆ, ದ್ರೌಪದಿಯು ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಮುಖ್ಯವಾಗಿದ್ದಳು.
🌸ಅಹಲ್ಯಾ🌸
🌹ಒಮ್ಮೆ ಬ್ರಹ್ಮನು, ತ್ರಿಲೋಕದಲ್ಲಿ ಸಿಗುವ ಸೌಂದರ್ಯವನ್ನೆಲ್ಲ ತೆಗೆದುಕೊಂಡು ಸುಂದರವಾದ ಹೆಣ್ಣುಮಗುವನ್ನು ಸೃಷ್ಟಿಸುತ್ತಾರೆ. ಅವಳ ಹೆಸರು 'ಅಹಲ್ಯಾ' ತ್ರಿಲೋಕ ಸುಂದರಿ. ಆ ಮಗು ಕನ್ಯೆ ಆಗುವವರೆಗೂ, ಪೋಷಿಸಿ ಬೆಳೆಸಲು ಮಹರ್ಷಿಗಳಾದ ಗೌತಮರಿಗೆ ಕೊಡುತ್ತಾನೆ.
🌹ಗೌತಮರು ಆಕೆಯನ್ನು ಯುಕ್ತ ವಯಸ್ಸು ಬರುವವರೆಗೂ ಬೆಳೆಸಿ ಬ್ರಹ್ಮನಿಗೆ ಒಪ್ಪಿಸುತ್ತಾರೆ. ನಂತರ ಬ್ರಹ್ಮನು, ಇಂದ್ರ ಹಾಗೂ ಗೌತಮರಿಗೆ, ಮೂರು ಲೋಕಗಳನ್ನು ಸುತ್ತಿ ಯಾರು ನನ್ನ ಬಳಿಗೆ ಮೊದಲು ಬರುತ್ತೀರೋ ಅವರಿಗೆ ನನ್ನ ಮಗಳನ್ನು ಕೊಟ್ಟು ವಿವಾಹ ಮಾಡುತ್ತೆನೆ ಎಂದರು.
🌹ಆಕೆಯ ಸೌಂದರ್ಯಕ್ಕೆ ಸೋತಿದ್ದ ಇಂದ್ರನು ಕ್ಷಣವೂ ತಡಮಾಡದೆ ವಾಯುವೇಗದಿಂದ ಓಡಿ ಬ್ರಹ್ಮನ ಬಳಿ ಬಂದು ನಿಲ್ಲುತ್ತಾನೆ. ಆದರೆ ಆ ವೇಳೆಗೆ ಗೌತಮರು ಬ್ರಹ್ಮನ ಸುತ್ತ ಮೂರು ಪ್ರದಕ್ಷಿಣೆ ಬಂದು ಅಹಲ್ಯೆಯನ್ನು ವಿವಾಹವಾಗುತ್ತಾರೆ. ಮಿಥಿಲಾ ನಗರದಲ್ಲಿ ಒಂದು ಕುಟೀರ ಕಟ್ಟಿಕೊಂಡು ಅನ್ಯೋನ್ಯವಾಗಿ ಬಾಳುತ್ತಾರೆ.
🌹ಆದರೆ ಅವಳ ಸೌಂದರ್ಯಕ್ಕೆ ಮನಸೋತಿದ್ದ ಇಂದ್ರನಿಗೆ ಅವಳನ್ನು ಮರೆಯಲು ಆಗಿರಲಿಲ್ಲ. ಒಂದು ಸಮಯ ಸಾಧಿಸಿ ಗೌತಮರು ನದಿಗೆ ಸ್ನಾನ ಧ್ಯಾನ ಮಾಡಲು, ಹೋದಾಗ, ಇಂದ್ರನು ಗೌತಮರ ರೂಪದಲ್ಲಿ ಬಂದು ಅಹಲ್ಯೆಯೊಂದಿಗೆ ಶೃಂಗಾರ ನಡೆಸುತ್ತಾನೆ. ಅದೇ ಸಮಯಕ್ಕೆ ಬಂದ ಗೌತಮರು ಕಣ್ಣಾರೆ ನೋಡಿ ಪತ್ನಿಗೆ ಕಲ್ಲಾಗುವಂತೆ ಶಾಪ ಕೊಡುತ್ತಾರೆ.
🌹ಕೊನೆಗೆ ತಮ್ಮ ಪತ್ನಿಯ ತಪ್ಪಿಲ್ಲವೆಂದು ತಿಳಿದು, ಮುಂದೆ ಇಕ್ಷ್ವಾಕುವಂಶದ ಒಬ್ಬ ಪುರುಷೋತ್ತಮನು ಬಂದು ಶಿಲೆಯನ್ನು ಸ್ಪರ್ಶಿಸಿದಾಗ ಶಾಪ ವಿಮೋಚನೆಯಾಗುತ್ತದೆ ಎಂದು ವರ ಕೊಟ್ಟರು.
🌹ತ್ರೇತಾಯುಗದಲ್ಲಿ ರಾಮ ಲಕ್ಷ್ಮಣರು ಗುರುಗಳಾದ ವಿಶ್ವಾಮಿತ್ರರ ಜೊತೆ ಸೀತಾ ಸ್ವಯಂವರಕ್ಕೆಂದು,ಹೋಗುತ್ತಿದ್ದಾಗ, ಕಲ್ಲಾದ ಶಿಲೆಯ ಕುರಿತು ರಾಮನಿಗೆ ಕಥೆಯನ್ನು ವಿಶ್ವಾಮಿತ್ರರು ಕಥೆ ಮೂಲಕ ತಿಳಿಸುತ್ತಾರೆ, ರಾಮ ಅಹಲ್ಯೆಯ ಪಾದ ಮುಟ್ಟಿ ನಮಸ್ಕರಿಸಿದಾಗ, ರಾಮನ ವಿಶಿಷ್ಟ ಚೈತನ್ಯದ ಸ್ಪರ್ಶದಿಂದ ಜಡತ್ವ ನೀಗಿ ಅವಳಲ್ಲಿ ಚೈತನ್ಯ ತುಂಬುತ್ತದೆ.
🌸ದ್ರೌಪದಿ🌸
🌹ಮಹಾಭಾರತದ ಪ್ರಮುಖ ನಾಯಕಿ "ದ್ರೌಪದಿ" ಇವಳಿಲ್ಲದ ಮಹಾಭಾರತವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಪಾಂಚಾಲ ರಾಜ ದ್ರುಪದನ ಮಗಳು. ಶಿಖಂಡಿನಿ ಹಾಗೂ ಧೃಷ್ಟದ್ಯುಮ್ನನ ಸಹೋದರಿ. ಪಂಚಪಾಂಡವರ ಪತ್ನಿ. ಪಟ್ಟದ ರಾಣಿ, ಪಾಂಡವರ ಮನೆಯ ಮೆಚ್ಚಿನ ಸೊಸೆ. ಅತ್ತೆಯ ಪ್ರೀತಿ, ಮತ್ತು ನಂಬಿಕೆಯ ಸೊಸೆ.
🌹ಐದು ಜನ ಪಾಂಡವರ ಮನದ ಇಂಗಿತವನ್ನು ಅರಿತು ನಡೆವವಳು, ಸೂಕ್ಷ್ಮ ಮತ್ತು ವಿಶಿಷ್ಟ ಪಾತ್ರಗಳಲ್ಲಿ ಪ್ರಮುಖಳಾದವಳು. ಮಹಾಭಾರತದ ನಾಯಕ, ಕೃಷ್ಣನ ಗೆಳತಿ. ಕೃಷ್ಣನು ಹೇಗೆ ಯಾರಿಗೂ ಅರ್ಥವಾಗಲಿಲ್ಲವೋ, ದ್ರೌಪತಿಯು ಹಾಗೆ ಚರ್ಚೆಗೆ ಗ್ರಾಸಳಾದವಳು. ಎಲ್ಲರ ಚರ್ಚೆಗೆ ಮುಖ್ಯ ಭಾಗ ದ್ರೌಪದಿ. ದ್ರೌಪದಿ ಸ್ವಯಂ ಕಾಳಿಯೇ ಆಗಿದ್ದಾಳೆ. ಮಹಾಭಾರತದಲ್ಲಿ ಕೊನೆತನಕವೂ ಪ್ರಮುಖ ಪಾತ್ರ ವಹಿಸಿದ ದಿಟ್ಟ ಮಹಿಳೆ.
🌹ಕುರುಕ್ಷೇತ್ರ ಯುದ್ಧದ ನಂತರ ಹಲವು ವರ್ಷಗಳ ರಾಜ್ಯಭಾರ ಮಾಡಿ ಪಾಂಡವರು ಸ್ವರ್ಗಕ್ಕೆ ಹೊರಡುತ್ತಾರೆ.ದಾರಿಯ ಮಧ್ಯದಲ್ಲಿ ದ್ರೌಪದಿ ಮರಣಹೊಂದುತ್ತಾಳೆ. ಕಾಳಿ ಅಂದರೆ,"ಸ್ತ್ರೀ" ಜನ್ಮದಿಂದ ಆರಂಭಿಸಿ ಆರು ಹಂತಗಳನ್ನು ದಾಟಿ ಏಳನೇ ಹಂತಕ್ಕೆ ಯೋಗಿನಿ ಪಟ್ಟ ಅದನ್ನು ಮೀರಿ ಮುಂದಿನದು ಕಾಳೀ.
🌸ಸೀತಾ 🌸
🌹ಅವಳೇ ಸಾಧಿಸಿಕೊಂಡಿದ್ದ ಸಿದ್ದಿಯಿಂದ ರಕ್ಷಿಸಲ್ಪಟ್ಟಿರುತ್ತಾಳೆ. ರಾವಣನಿಗೂ ಅವಳನ್ನು ಏನು ಮಾಡಲಾಗಲಿಲ್ಲ . ಎಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೆ ಧೈರ್ಯದಿಂದ ಎದುರಿಸಿ ತೋರಿಸಿದಳು. ಸ್ತ್ರೀ ಅಬಲೆಯಲ್ಲ ಮಹಾನ್ ಶಕ್ತಿವಂತ ಎಂಬುದನ್ನು ತೋರಿಸಿಕೊಟ್ಟ ಪತಿವ್ರತಾ ಮಹಿಳೆ.
🌸ತಾರಾ🌸
🌹ಈಕೆ ಒಂದು ನಕ್ಷತ್ರ ಎನ್ನುತ್ತಾರೆ. ವಾಲಿ-ಸುಗ್ರೀವರ ಪತ್ನಿ. ಇವಳು ಸಮುದ್ರದಿಂದ ಜನಿಸಿರುವ ಅಪ್ಸರೆ. ವಾಲಿ, ಸುಗ್ರೀವನನ್ನು ಯುದ್ಧಕ್ಕೆ ಆಹ್ವಾನಿಸಿದಾಗ, ತಾರಾ ಶ್ರೀರಾಮನ ಬಗ್ಗೆ ಎಲ್ಲವನ್ನು ಹೇಳಿ ಸುಗ್ರೀವನನ್ನು ರಕ್ಷಿಸುತ್ತಾಳೆ. ವಾಲಿಯ ಮರಣದ ನಂತರ ತಾರಾ ಸುಗ್ರೀವನನ್ನು ಮದುವೆ ಆಗುತ್ತಾಳೆ. ವಾಲಿ ಮತ್ತು ತಾರಾಳ ಮಗ ಅಂಗದ.
🌸ಮಂಡೋದರಿ🌸
🌹ಪೂರ್ವಕಾಲದಲ್ಲಿದ್ದ ಕಶ್ಯಪರ ಮಗನಾದ ಮಯಾಸುರ ಹಾಗೂ ಹೇಮಾಳಿಗೆ, ಮಾಯಾವಿ ಹಾಗೂ ದುಂದುಬಿ ಎಂಬ ಗಂಡು ಮಕ್ಕಳು ಇರುತ್ತಾರೆ. ಒಬ್ಬ ಪುತ್ರಿಯೂ ಬೇಕೆಂಬ ಕಾರಣದಿಂದ ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಹನ್ನೆರಡು ವರ್ಷಗಳ ನಂತರ ಒಂದು ಬಾವಿಯೊಳಗೆ ಹೆಣ್ಣು ಮಗು ಅಳುವುದು ಕೇಳಿಸಿತು. ಮಗುವನ್ನು ತೆಗೆದುಕೊಂಡು ಬಂದರು.
🌹ಬಾವಿಯೊಳಗೆ ಸಿಕ್ಕಿದ್ದರಿಂದ "ಮಂಡೋದರಿ" ಎಂದು ಹೆಸರಿಟ್ಟು ಬೆಳೆಸಿದರು. ಇವಳು ರಾವಣನನ್ನು ಮದುವೆಯಾಗಿ ಶೂರರಾದ ಮಕ್ಕಳಿಗೆ ಜನ್ಮ ನೀಡಿದಳು. ಈಕೆ ಧರ್ಮವನ್ನು ಬೆಂಬಲಿಸುತ್ತಿದ್ದಳು. ರಾವಣನನ್ನು ಹೆಚ್ಚು ಪ್ರೀತಿಸುತ್ತಿದ್ದಳು. ಹಾಗಾಗಿ ಮಂಡೋದರಿ ಚಂದ್ರಲೋಕದಿಂದ ಅಮೃತವನ್ನು ಸಂಗ್ರಹಿಸಿ ತಂದು ರಾವಣನ ಹೊಟ್ಟೆಯೊಳಗೆ ಶೇಖರಿಸಿ ಇಟ್ಟಿರುತ್ತಾಳೆ.
🌹ಇದರಿಂದಾಗಿ ರಾವಣ ಸಾಯುತ್ತಿರಲಿಲ್ಲ ರಾಮ-ರಾವಣರ ಯುದ್ಧದಲ್ಲಿ ವಿಬೀಷಣ ಈ ವಿಷಯವನ್ನು ರಾಮನಿಗೆ ತಿಳಿಸಿ, ರಾವಣನನ್ನು ಬ್ರಹ್ಮದೇವನ ಅಸ್ತ್ರದಿಂದ ಮಾತ್ರ ಸಂಹರಿಸಲು ಸಾಧ್ಯ ಎಂಬ ರಹಸ್ಯವನ್ನು ತಿಳಿಸುತ್ತಾನೆ.
🌹ರಾಮ-ರಾವಣರ ಯುದ್ಧದಲ್ಲಿ ರಾವಣನನ್ನು ಎಚ್ಚರಿಸಿದರೂ, ಅವನು ಕೇಳದಿದ್ದಾಗ, ಪತಿಯೇ ಪರದೈವವೆಂದು ರಾವಣನೊಂದಿಗೆ ಯುದ್ಧದಲ್ಲಿ ಸಹ ಭಾಗಿಯಾಗುತ್ತಾಳೆ.
🌹ಅಹಲ್ಯಾ, ದ್ರೌಪದಿ, ಸೀತಾ, ತಾರಾ, ಮಂಡೋದರಿ ಯರು ವಿಶಿಷ್ಟ ನಿತ್ಯ ನೂತನ ಕನ್ಯೆಯರು. ಸ್ವಯಂಸಿದ್ದ ಅಗ್ನಿ ಸ್ವರೂಪರು. ಪಾವನತ್ವವನ್ನು ಪಡೆದವರು. ಇವರು ತಮ್ಮ ತಮ್ಮ ಬದುಕಿನಲ್ಲಿ ತಾವು ಎದುರಿಸಿದ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೂ ದೃತಿಗೆಡದೆ, ಅವಮಾನಗಳನ್ನು ಸಹಿಸಿಕೊಂಡು ಸಂಕಷ್ಟಗಳನ್ನು ನುಂಗಿಕೊಂಡು, ಧೈರ್ಯದಿಂದ ಸಂಕಷ್ಟಗಳನ್ನು ಎದುರಿಸಿ ಅಧೋಗತಿಯ ಜೀವನದಿಂದ ಮೇಲೆದ್ದು ಹೊರಹೊಮ್ಮಿದವರು. ಕುಂತಿ- ಗಾಂಧಾರಿಯರು ಕೂಡ ಇವರ ಸಾಲಿಗೆ ಸೇರಿದ್ದಾರೆ.
ಅಹಲ್ಯಾ, ದ್ರೌಪದಿ, ಸೀತಾ, ತಾರಾ ಮಂಡೋದರಿ ತಥಾ!
ಪಂಚಕನ್ಯಾ ಸ್ಮರೇನಿತ್ಯಂ ಮಹಾ ಪಾತಕ ನಾಶನಂ !
🌾🌾ಅಹಲ್ಯಾ, ದ್ರೌಪದೀ, ಸೀತಾ, ತಾರಾ ಮತ್ತು ಮಂಡೋದರಿ - ಈ ಐವರನ್ನು ಮನುಷ್ಯರು ಸ್ಮರಿಸಬೇಕು. ಇದರಿಂದ ಮಹಾ ಪಾತಕವು ನಾಶವಾಗುತ್ತದೆ.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
🌸
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
🌸ph no :9480916387
***