SEARCH HERE

Showing posts with label ವಿಶ್ವಾಸ- ಹೆಣ್ಣು ಸಂಸ್ಕೃತಿ woman ಸ್ತ್ರೀ stree. Show all posts
Showing posts with label ವಿಶ್ವಾಸ- ಹೆಣ್ಣು ಸಂಸ್ಕೃತಿ woman ಸ್ತ್ರೀ stree. Show all posts

Friday, 1 October 2021

ಹೆಣ್ಣು ಸಂಸ್ಕೃತಿ woman ಸ್ತ್ರೀ stree

.



ಸ್ತ್ರೀ ಅಂದರೆ.. ಬರೀ ಅವಶ್ಯಕತೆ ಅಲ್ಲ..

ರಾಮನಿಗೆ➖ಸೀತೆ

ಕೃಷ್ಣನಿಗೆ➖ರಾಧೆ

ಶಿವನಿಗೆ➖ಪಾರ್ವತಿ

ನಾರಾಯಣನಿಗೆ➖ಲಕ್ಷ್ಮೀ


ಮಂತ್ರ ಪಠಣದಲ್ಲಿ➖ಗಾಯತ್ರಿ

ಗ್ರಂಥ ಪಠಣದಲ್ಲಿ➖ಗೀತಾ

ದೇವರೆದುರಿಗೆ➖ವಂದನ, ಅರ್ಚನ, ಪೂಜಾ, ಆರತಿ, ಆರಾಧನಾ.. ಇವರ ಜೊತೆಗೆ ಶ್ರದ್ಧಾ.


🔹 ನಮ್ಮ ದಿನಚರಿಯಲ್ಲಿ

ಉದಯಕ್ಕೆ➖ಉಷಾ.. ಅರುಣ

ಸಂಜೆಗೆ ➖ ಸಂಧ್ಯಾ

ರಾತ್ರಿಗೆ➖ನಿಶಾ,  

ಬೆಳಕಿಗೆ➖ಜ್ಯೋತಿ, ದೀಪ, ದೀಪಿಕಾ, ಪ್ರಭಾ..

ಬೆಳದಿಂಗಳಿಗೆ➖ರಜನಿ

ಸೂರ್ಯಕಿರಣಕ್ಕೆ➖ರಶ್ಮಿ, ಕಿರಣ

ಚಂದಿರನಿಗೆ➖ಶಶಿ, ಶಶಿಕಲಾ, ಚಂದ್ರಕಲಾ

ಹೆಸರಾಗುವುದಕ್ಕೆ➖ಕೀರ್ತಿ

ಕನಸಿಗೆ➖ಸ್ವಪ್ನ

ನೋಟಕ್ಕೆ➖ನಯನಾ, ನೇತ್ರ..

ಕೇಳುವುದಕ್ಕೆ➖ಶ್ರಾವ್ಯ, ಶ್ರಾವಣಿ,

ಮಾತನಾಡುವುದಕ್ಕೆ➖ವಾಣಿ, ವಾಣಿಶ್ರೀ, ಸುಭಾಷಿಣಿ

ಭೂಮಿಗೆ➖ವಸುಧಾ, ವಸುಂಧರಾ, ಭುವಿ, ಭುವನೇಶ್ವರಿ

ಹಸು, ಆಕಳಿಗೆ➖ನಂದಿನಿ

ಜಗತ್ತಿಗೆ➖ಜಗದೀಶ್ವರಿ, ಜಗದಾಂಬೆ

ದೇಶಕ್ಕೆ➖ಭಾರತಿ, ಭಾರತಾಂಬೆ

ಕನ್ನಡ ನಾಡಿಗೆ➖ಭುವನೇಶ್ವರಿ

ಋತುಗಳಿಗೆ➖ಚೈತ್ರ, ವಸಂತ, ಗ್ರೀಷ್ಮ

ಸಮರ್ಪಣೆಗೆ➖ಅರ್ಪಣಾ

ಆಹಾರಕ್ಕೆ➖ಅನ್ನಪೂರ್ಣ

ನಡೆಯುವುದಕ್ಕೆ➖ಹಂಸಾ

ನಗುವಿಗೆ➖ಸುಹಾಸಿನಿ..

ಚೆಲುವಿಕೆಗೆ➖ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ

ಸುವಾಸನೆಗೆ➖ಚಂದನ, ಪರಿಮಳ

ಒಳ್ಳೆಯ ನುಡಿಗೆ➖ಸುಭಾಷಿಣಿ

ತೇಜಸ್ಸಿಗೆ➖ತೇಜಸ್ವಿನಿ

ಚುಕ್ಕಿಗೆ➖ಬಿಂದು, ನಕ್ಷತ್ರ

ಗೆರೆಗೆ➖ರೇಖಾ, ಶಶಿರೇಖಾ

ಮುತ್ತಿಗೆ➖ಸ್ವಾತಿ

ಹರಳಿಗೆ➖ರತ್ನ

ಮಾದರಿಗೆ➖ಸ್ಪೂರ್ತಿ, ಪ್ರೇರಣಾ

ಪ್ರತಿಕ್ರಿಯಿಸುವುದಕ್ಕೆ➖ಸ್ಪದಂನಾ

ಕೆಲಸಕ್ಕೆ➖ಕೃತಿ, ಕೃತಿಕ

ಇಷ್ಟಕ್ಕೆ➖ಪ್ರೀತಿ

ನೀರಿಗೆ➖ಗಂಗಾ

ಬಂಗಾರಕ್ಕೆ➖ಸುವರ್ಣ, ಕನಕ, ಹೇಮಾ

ಬೆಳ್ಳಿಗೆ➖ರಜತ, ರಂಜಿತ

ಚಿತ್ತಾರಕ್ಕೆ➖ಚಿತ್ರ

ಊಹೆಗೆ➖ಕಲ್ಪನಾ

ನಿಜ ಸಂಗತಿಗೆ➖ಸತ್ಯವತಿ..

ಶುದ್ಧತೆಗೆ➖ನಿರ್ಮಲ, ಪವಿತ್ರ

ಆಲೋಚನೆಗೆ➖ಭಾವನಾ

ಕಣ್ಗಳಿಗೆ➖ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ

ಶಿಕ್ಷಣಕ್ಕೆ➖ವಿದ್ಯಾ

ಬುದ್ಧಿಗೆ, ಚತುರತೆಗೆ➖ಪ್ರತಿಭಾ

ಸಂತೋಷಕ್ಕೆ➖ಖುಷಿ, ಆನಂದಿನಿ, ಹರ್ಷಲಾ

ಕೋಪಕ್ಕೆ➖ಭೈರವಿ, ಕಾಳಿ

ಧೈರ್ಯಕ್ಕೆ➖ದುರ್ಗೆ

ಗೆಲುವಿಗೆ➖ಜಯಲಕ್ಷ್ಮಿ.. ವಿಜಯಲಕ್ಷ್ಮಿ

ಹೆಸರಾಗುವುದಕ್ಕೆ➖ಕೀರ್ತಿ

ಹಾಡಿಗೆ➖ಸಂಗೀತ

ಗಾಯನಕ್ಕೆ➖ಶೃತಿ, ಪಲ್ಲವಿ, ಕೋಕಿಲ

ನಾಟ್ಯ➖ಮಯೂರಿ

ಸಾಹಿತ್ಯ➖ಕವಿತಾ, ಕಾವ್ಯ

ನಿಸರ್ಗಕ್ಕೆ➖ಪ್ರಕೃತಿ

ರಕ್ಷಣೆಗೆ➖ಸುರಕ್ಷಾ

ವಿದ್ಯಾಭ್ಯಾಸಕ್ಕೆ➖ವಿದ್ಯಾ

ಸಂಪಾದನೆಗೆ➖ಲಕ್ಷ್ಮೀ

ಸ್ಪೂರ್ತಿಗೆ➖ಪ್ರೇರಣಾ

ಮೌನಕ್ಕೆ➖ಶಾಂತಿ

ಮಧುರತೆಗೆ➖ಮಾಧುರಿ, ಮಂಜುಳ

ಕನಿಕರಕ್ಕೆ➖ಕರುಣಾ

ಆಕ್ರೋಶಕ್ಕೆ➖ಕಾಳಿ 

ವಾತ್ಸಲ್ಯಕ್ಕೆ➖ಮಮತಾ

ಆಯುಷ್ಯಕ್ಕೆ➖ಜೀವಿತಾ

ಮೋಡಗಳಿಗೆ➖ಮೇಘ, ಮೇಘನಾ

ಚಿಮುಕಿಸುವಿಕೆಗೆ➖ಸಿಂಚನಾ

ಬಿಳುಪಿಗೆ➖ಶ್ವೇತಾ, ಗೌರಿ

ಕಪ್ಪಿಗೆ➖ಕೃಷ್ಣೆ

ವಾಸನೆಗೆ➖ಪರಿಮಳ

ಹೂವಿಗೆ➖ಪುಷ್ಪ, ಸುಮ, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ..

ಬಳ್ಳಿಗೆ➖ಲತಾ, 

ಶುಭಕರ➖ಮಂಗಳ,  ಸುಮಂಗಳ, ಶುಭಾಂಗಿನಿ

ಒಳ್ಳೆಯ ಮನಸ್ಸಿಗೆ➖ಸುಮನ

ಶ್ರೀಮಂತಿಕೆಗೆ➖ಐಶ್ವರ್ಯ, ಸಿರಿ

ವಿಸ್ತಾರಕ್ಕೆ➖ವಿಶಾಲ, ವೈಶಾಲಿ

ಜೇನಿಗೆ➖ಮಧು

ಬಯಕೆಗೆ➖ಆಶಾ, ಅಪೇಕ್ಷಾ

ತೀರ್ಮಾನಕ್ಕೆ➖ನಿಶ್ಚಿತ

ಬರಹಕ್ಕೆ➖ಲಿಖಿತ

ನೆರಳಿಗೆ➖ಛಾಯಾ

ನಿಧಾನಕ್ಕೆ➖ಮಂದಾಕಿನಿ

ಹೂ ಗೊಂಚಲಿಗೆ➖ಮಂಜರಿ

ಗೌರವಕ್ಕೆ➖ಮಾನ್ಯ, ಮಾನ್ಯತಾ


ನದಿಗಳಿಗೆ➖ಗಂಗಾ, ಯಮುನಾ, ಸರಸ್ವತಿ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ, 


ಹೀಗೆ ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇರುವಳು

ಆಕೆಗೆ ಒಂದು..ನಮಸ್ಕಾರ..

***


1.. ನಮ್ಮ ಹಣೆಯ ಮೇಲೆ ಕುಂಕುಮ ಇದೆ ಅಲ್ಲಿ ಲಕ್ಷ್ಮೀ ನಾರಾಯಣರ ಸನ್ನಿಧಾನ ಬಂತು.

2. ಕೆನ್ನೆಗೆ ಅರಿಷಿಣ ದ ಲೇಪನ ಇದೆ  ಅಲ್ಲಿ ಹಳದಿ ಹರಿದ್ರಾ ದೇವಿ  ಮುಖಕಾಮಿನಿ ಸೌಭಾಗ್ಯದ ಪ್ರತೀಕ ಅಲ್ಲಿ ಪಾರ್ವತಿಯ ಸನ್ನಿಧಾನ ಬಂತು.

3. ಕಣ್ಣಿಗೆ ಕಾಡಿಗೆ ಇದೆ ಅಲ್ಲಿ ಭಾರತಿ ದೇವಿಯ ಸನ್ನಿಧಾನ 

4. ಮುಡಿದಿರುವ ಹೂವಿನಲ್ಲಿ ಉಮಾಮಹೇಶ್ವರ ಸನ್ನಿಧಾನ ,

5. ಭಾರತೀಯರ ಪ್ರತೀಕವಾದ  ಸೀರೆ ಇದೆ  ಸೆರಗಿನಲ್ಲಿ ಸೀತಾ ದೇವಿ ಸನ್ನಿಧಾನ , 

6. ನೆರಗೆಯಲ್ಲಿ  ತಾರೆಯ ಸನ್ನಿಧಾನ 

7. ಸೀರೆಯ ಅಂಚಿನಲ್ಲಿ ದ್ರೌಪದಿಯ ಸನ್ನಿಧಾನ

8. ಕುಪ್ಪಸದಲ್ಲಿ ಅಹಲ್ಯೆಯ ಸನ್ನಿಧಾನ 

9. ಕುಪ್ಪಸದ ಅಂಚಿನಲ್ಲಿ ಮಂಡೋದರಿ ವಾಸ  ,

10. ಕೊರಳಲ್ಲಿ ಮುತ್ತೈದೆ ಪ್ರತೀಕ ಮಾಂಗಲ್ಯ , ಮೂಗಿನಲ್ಲಿ ಮುಗುತಿ ಕಿವಿಯಲ್ಲಿ ಓಲೆ ಇವು ಐದು ಮುತ್ತುಗಳು ,


ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಹೆಣ್ಣು  ಸುಂದರಿನೆ ಆದರೆ ಆ ಸೌಂದರ್ಯವನ್ನು ಕೆಡಿಸಿಕೊಂಡು ಓಡಾಡುತ್ತಿದ್ದಾರೆ , ಬಹುಶಃ ಬಹಳ ಜನರಿಗೆ ಹರಿದ ಪ್ಯಾಂಟ್ ನಲ್ಲಿ ಕೆದರಿದ ಕುದಲಿನಲಿ ಸುಂದರ ಕಾಣುತ್ತೇವೆ ಅನ್ನುವ ಭ್ರಮೆ , ಒಂದು ಸಲ ನೀವು ಹಣೆತುಂಬ ಕುಂಕುಮ ತಲೆಯಲ್ಲಿ ಮಾಲೆ ಮುಡಿದು ನೋಡಿ ಸೌಂದರ್ಯ ಎಲ್ಲಿದೆ ಅಂತ ಹೇಳುತ್ತೆ ..... 


ಸೌಂದರ್ಯ ಇರುವುದು ನಮ್ಮ  ಮುಖದಲ್ಲಿ ಅಲ್ಲ  ಅಚ್ಚುಕಟ್ಟಾಗಿ ಪಾಲಿಸಿದ ನಮ್ಮ ಸಂಪ್ರದಾಯದಲ್ಲಿ  , ನಾವು ಪಾಲಿಸಿದ ಸಂಸ್ಕಾರ ನಾಲ್ಕು ಜನ ನಮಗೆ ಕೈಯೆತ್ತಿ ನಮಸ್ಕರಿಸುವಂತೆ ಮಾಡುತ್ತೆ , ಇದು ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ.

***

❤️ ಹೆಣ್ಣು ಮಕ್ಕಳ ಸಂಪೂರ್ಣ ಜೀವನ ಚಕ್ರವೇ 🌷ನವದುರ್ಗೆಯ🌷 ಒಂಭತ್ತು  ರೂಪಗಳು.❤️


 1. ಹೆರಿಗೆಯಾಗಿ ಹುಟ್ಟಿದ ಹೆಣ್ಣು ಮಗುವು "🌷ಶೈಲಪುತ್ರಿ🌷" ರೂಪದಲ್ಲಿರುತ್ತಾಳೆ.


 2. ಕನ್ಯತ್ವದ ಹಂತದವರೆಗೂ "🌷ಬ್ರಹ್ಮಚಾರಿಣಿ🌷" ರೂಪದಲ್ಲಿರುತ್ತಾಳೆ. 


3. ಮದುವೆಗೆ ಮುಂಚೆ ಚಂದ್ರನಂತೆ ಪರಿಶುದ್ಧಳಾಗಿರುವ ಇವಳು "🌷ಚಂದ್ರಘಂಟಾ🌷"  ಆಗಿರುತ್ತಾಳೆ. 


4. ಮದುವೆಯ ನಂತರ ಅವಳು ಹೊಸ ಜೀವಿಗೆ ಜನ್ಮ ನೀಡಲು ಗರ್ಭಧರಿಸಿರುವಾಗ,  "🌷ಕೂಷ್ಮಾಂಡಾ🌷" ರೂಪದಲ್ಲಿರುತ್ತಾಳೆ. 


5. ಮಗುವಿಗೆ ಜನ್ಮ ನೀಡಿದ ನಂತರ ಅದೇ ಮಹಿಳೆಯು "🌷ಸ್ಕಂದಮಾತೆ🌷" ಆಗುತ್ತಾಳೆ.


6. ಸ್ವಯಂ ಸಂಯಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವ ಮಹಿಳೆ "🌷ಕಾತ್ಯಾಯನಿ🌷" ರೂಪವಾಗುತ್ತಾಳೆ. 


7. ಪತಿಯ ಅಕಾಲಿಕ ಮರಣವನ್ನೂ ತನ್ನ  ಸಂಕಲ್ಪದಿಂದ ಜಯಿಸಿ ಅಥವಾ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ದುಷ್ಟರನ್ನು ಎದುರಿಸಲು "🌷ಕಾಳರಾತ್ರಿ🌷" ಆಗುತ್ತಾಳೆ 


8. ಜಗತ್ತಿಗೆ ಒಳ್ಳೆಯದನ್ನು ಬಯಸಿ, ಮಾಡುವುದರಿಂದ (ಅವರಿಗೆ ಕುಟುಂಬವೇ ಪ್ರಪಂಚ) "🌷ಮಹಾ ಗೌರಿ🌷" ಆಗುತ್ತಾಳೆ. 


9. ಭೂಮಿಯನ್ನು ತೊರೆದು ಸ್ವರ್ಗಕ್ಕೆ ಹೋಗುವ ಮೊದಲು, ಅವಳು ತನ್ನ ಮಕ್ಕಳಿಗೆ ಇಹಲೋಕದಲ್ಲಿ ಯಶಸ್ಸನ್ನು (ಎಲ್ಲಾ ಸುಖ ಮತ್ತು ಸಂಪತ್ತನ್ನು) ಅನುಗ್ರಹಿಸುವ "🌷ಸಿದ್ಧಿದಾತ್ರಿ🌷" ಆಗುತ್ತಾಳೆ. 


ನಮ್ಮೆಲ್ಲ ಹೆಣ್ಣು ಮಕ್ಕಳಿಗೂ ಈ ಎಲ್ಲ ಗುಣಗಳ ಅರಿವಾಗಿ, ಅದರಂತೆ ನಡೆದುಕೊಳ್ಳುವ ಮೂಲಕ ಪ್ರತಿ ಮನೆಯಲ್ಲೂ ನೆಮ್ಮದಿ ಮೂಡಲಿ, ಶುಭಮಸ್ತು 🌷🦢🚩

*|| ಜೈ  ಮಾತಾ

ನವದುರ್ಗೆಯರಿಗೆ🌷🦢🚩 ||*

***

ತಾಯಿ ಮತ್ತು ಹೆಂಡತಿ


 `ನೋಡಿ ಆಕೆ  ಪರಿಣತಳು.  ಮನೆಯಲ್ಲಿ ನಡೆಯಬೇಕಾದ್ದರ ಕಾಯಿದೆ ಎಲ್ಲ ಆಕೆಯೇ ಮಾಡಿದ್ದು.  


ಆಕೆ ವೈದ್ಯ ವೃತ್ತಿಮಾಡುತ್ತಾಳೆ. ಯಾರಿಗಾದರೂ ಆರೋಗ್ಯ ಕೆಟ್ಟರೆ ಯಾವ ಕಷಾಯ ಮಾಡಬೇಕು, ಯಾರಿಗೆ ಬಿಸಿನೀರಿನ ಉಗಿ ನೀಡಬೇಕು, ಯಾವ ಮುಲಾಮು ಹಚ್ಚಬೇಕು ಎಂಬುದರ ತೀರ್ಮಾನವೆಲ್ಲ ಆಕೆಯದೇ.  ಆಕಸ್ಮಿಕವಾದ ಗಾಯವೇನಾದರೂ ಆದರೆ ಅವರಿಗೆ ಪ್ರಥಮ ಚಿಕಿತ್ಸೆಯನ್ನು ಆಕೆಯೇ ನೀಡುತ್ತಾಳೆ. ಔಷಧಿ ಕೊಡುತ್ತಾಳೆ. 

 

ಮರೆಯದೇ ಮಾತ್ರೆ ನೀಡುತ್ತಾಳೆ. ಈ ವೈದ್ಯವೃತ್ತಿಯೊಡನೆ ಆಕೆ ಆಹಾರತಜ್ಞೆಯೂ ಹೌದು.  ಯಾರಿಗೆ ಯಾವುದು ಇಷ್ಟ ಎಂದು ಗಮನಿಸಿ ಆಹಾರ ತಯಾರು ಮಾಡುತ್ತಾಳೆ.  ಬೇಜಾರಾಗದ ಹಾಗೆ ದಿನದಿನವೂ ರುಚಿಯಲ್ಲಿ ಬದಲಾವಣೆ  ಮಾಡುವುದೂ ಆಕೆಯೇ. ಇದಿಷ್ಟೇ ಎನ್ನಬೇಡಿ.  ಆರೋಗ್ಯ ಇಲಾಖೆಯೂ ಆಕೆಯದೇ. 


ಬಟ್ಟೆಗಳನ್ನು ಶುದ್ಧಗೊಳಿಸಿ, ಜೋಡಿಸಿ ಇಡುವುದು, ಮನೆಯಲ್ಲಿ ಸ್ವಲ್ಪವೂ ಕಸ ಇಲ್ಲದ ಹಾಗೆ ಚೊಕ್ಕಟವಾಗಿ ಇರಿಸುವುದು.  ಇದರ ಜೊತೆಗೆ ಹಣಕಾಸೂ ಅವಳ ಸುಪರ್ದಿಗೆ ಸೇರಿದ್ದು.  ಇದ್ದ ಸ್ವಲ್ಪ ಹಣದಲ್ಲೇ ಹೇಗೆ ಬೇಕಾದ್ದನ್ನು ಮಾತ್ರ ಖರೀದಿಸಿ, ದುಂದುವೆಚ್ಚ ಮಾಡದೇ ಉಳಿಸಿ ಕೂಡಿಟ್ಟು ಬೇಕಾದಾಗ ಮನೆಗೆ ನೀಡುತ್ತಾಳೆ.  


ಮನೆಯ ವ್ಯವಹಾರವೆಲ್ಲ ಅವಳದೇ ಜವಾಬ್ದಾರಿ.  ಯಾವ ವಿಶ್ವವಿದ್ಯಾಲಯದ ವಿಶೇಷ ಡಿಗ್ರಿ ಇಲ್ಲದೇ, ತರಬೇತಿ ಇಲ್ಲದೇ ಮಕ್ಕಳಿಗೆ ಶಿಕ್ಷಣ, ತರಬೇತಿ ನೀಡುತ್ತಾಳೆ. ಆದ್ದರಿಂದ ನಾನು, ನನ್ನ ಮಕ್ಕಳು ಎಲ್ಲ ಆಕೆಗೆ ಶರಣಾಗಿಬಿಟ್ಟಿದ್ದೇವೆ.  ಅದಕ್ಕೇ ಆಕೆ ಗೃಹಿಣಿ ಎನ್ನಿಸಿಕೊಳ್ಳುತ್ತಾಳೆ` ಎಂದೆ.


 ಅವರು ಬಾಯಿ ತೆರೆದುಕೊಂಡು ಕೇಳುತ್ತಲೇ ಇದ್ದರು.   ಇದು ನನ್ನ ಮನೆಯ ವಿಷಯ ಮಾತ್ರ ಅಲ್ಲ. ಪ್ರತಿಯೊಂದು ಮನೆಯಲ್ಲಿ ಮಹಿಳೆ ಮಾಡುವುದೂ ಇದನ್ನೇ.  ಆದರೆ ಬಹಳಷ್ಟು  ಗಂಡಂದಿರಿಗೆ ಹೆಂಡತಿಯ ಪರಿಶ್ರಮದ ಅರ್ಥವೇ ಆಗುವುದಿಲ್ಲ.  ಯಾರಾದರೂ ಕೇಳಿದರೆ ನನ್ನ ಹೆಂಡತಿ ಮನೆಯಲ್ಲಿದ್ದಾಳೆ. 


ಯಾವ ಕೆಲಸದಲ್ಲೂ ಇಲ್ಲ.  ಆಕೆ ಹೌಸ್ ವೈಫ್ ಎಂದು ಉದಾಸೀನದಿಂದ ಹೇಳುತ್ತಾರೆ.  ಆಕೆ ಮಾಡುವ ಕೆಲಸ ಹತ್ತು ಜನ ಮಾಡುವ ಕೆಲಸ, ಮನೆ ಉಳಿಸುವ ಬೆಳೆಸುವ ಕೆಲಸ ಎಂದೆ. ಎಲ್ಲರೂ ಒಪ್ಪಿದಂತೆ ತೋರಿತು. ಈಗ ಸ್ವಲ್ಪ ಜನ ಗಂಡಂದಿರರಿಗೆ ಇದರ ಅರಿವಾಗಿ ತಮ್ಮ, ತಮ್ಮ ಹೆಂಡತಿಯರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ.  ಆದರೂ ಸಹಾಯವೇ ಬೇರೆ ಜವಾಬ್ದಾರಿಯೇ ಬೇರೆ.  


ಗಂಡ  ಏನು ಮಾಡಲಿ,  ಎಂದು ಕೇಳಿದಾಗ ಏನು ಮಾಡಬೇಕು, ಅವನಿಂದ ಏನು ಆದೀತು ಎಂದು ಯೋಚಿಸಿ ತೀರ್ಮಾನ ಕೊಡುವುದು ಹೆಂಡತಿಯೇ. ಆಕೆಗೂ ಗಂಡನಂತೆ ಟಿ.ವಿ. ನೋಡಬೇಕು, ಆಟ ನೋಡಬೇಕು, ಗೆಳತಿಯರೊಂದಿಗೆ ಸಿನಿಮಾಕ್ಕೆ ಹೋಗಬೇಕು, ಕಣ್ಣು ತುಂಬ ನಿದ್ರೆ ಮಾಡಬೇಕು ಎಂಬ ಆಸೆಗಳಿದ್ದರೂ ಅವುಗಳನ್ನು ಮನೆಗೋಸ್ಕರ ಹತ್ತಿಕ್ಕಿಕೊಂಡು ಎಲ್ಲರೂ ತಮತಮಗೆ ಬೇಕಾದ್ದನ್ನು ಪಡೆಯುವಂತೆ ಅನುವು ಮಾಡಿಕೊಡುವ ಗೃಹಿಣಿಯ ಬೆಲೆ ಅರಿಯದವರೇ ದಡ್ಡರು.ಅದಕ್ಕೆಂದೇ ಕವಿವಾಣಿ ಹೇಳುತ್ತದೆ,  ಹೆಂಡತಿಯೊಲುಮೆಯ ಭಾಗ್ಯವನರಿಯದ ಗಂಡಿಗೆ ಜಯವಿಲ್ಲ.

***

ಮಾತೃತ್ವಕ್ಕೆ ಮಾಡೋಣ ಅನಂತ ನಮನ


ಮಾರ್ಚ್ ತಿಂಗಳಲ್ಲಿ ಮಹಿಳಾ ದಿನ ಬಂತೆಂದರೆ ಸಾಕು ಸುಪ್ರಸಿದ್ಧ ಹಾಗೂ ಐತಿಹಾಸಿಕ ಮಹಿಳೆಯರ ಸ್ತುತಿ ಮಾಡಿ, ಹೊಗಳಿ ಅಟ್ಟಕ್ಕೇರಿಸಿದರೆ ಆಯಿತಾ ಅಂದಿನ ಆಚರಣೆ..? ನಮ್ಮ ಪ್ರಾಚೀನರನ್ನು ನಾವು ಎಂದಿಗೂ ಮರೆಯಬಾರದು ಎಂಬುದು ಎಷ್ಟು ಸತ್ಯವೋ ಹಾಗೆ ಪ್ರಸಿದ್ಧಿಗೆ ಬಾರದೇ ತನ್ನ ಪರಿವಾರಕ್ಕೆ ಮಾತ್ರ ಸೀಮಿತಗೊಂಡ ಹೆಣ್ಣು ಸ್ತೋತ್ರಕ್ಕೆ ಅರ್ಹಳಲ್ಲವೇ ಎಂಬ ಪ್ರಶ್ನೆಯೂ ಸದಾ ಕಾಡುತ್ತದೆ. 

ಎಕೆಂದರೆ ಸ್ತ್ರೀ ಎನ್ನುವುದು ಕೇವಲ ಒಂದು ಲಿಂಗವನ್ನು ಸೂಚಿಸುವ ಶಬ್ದವಲ್ಲ. ಸ್ತ್ರೀ ಎಂಬುದು ಒಂದು ತತ್ತ್ವ. ಆ ತತ್ವದಿಂದ ಹೊರಹೊಮ್ಮುವ ಅತಿ ಉತ್ಕೃಷ್ಟವಾದ ಅಂಶವೇ "ಮಾತೃತ್ವ". ಗರ್ಭದಲ್ಲಿ ನವಮಾಸ ಮಗುವನ್ನಿಟ್ಟಕೊಂಡು ಜನ್ಮ ನೀಡಿ ಅಮ್ಮ ಎನಿಸಿಕೊಳ್ಳುವುದಷ್ಟೇ ಮಾತೃತ್ವವಲ್ಲ. ಅದು ದೈಹಿಕವಾದ ತಾಯ್ತನ. 

ಆದರೆ ಹೆಣ್ಣಿಗೆ ದೈವದತ್ತವಾದ, ಸ್ವಾಭಾವಿಕವಾಗಿ ಹೊಂದಿಕೊಂಡ ಅತ್ಯುತ್ತಮ ಗುಣ ಒಂದಿದೆ. ಅದು ಮಾನಸಿಕವಾದ ತಾಯ್ತನ.  ಐದಾರು ವರ್ಷದ ಹೆಣ್ಣು ಮಗಳೂ ಸಹ ತನ್ನ ತಮ್ಮ -ತಂಗಿಯರ ಬಗ್ಗೆ ತೋರಿಸುವ ಕಾಳಜಿ ಅಂತಃಕರಣದ ಸ್ವಭಾವ ಮಗುವನ್ನೂ  ಅಮ್ಮನಾಗಿಸುತ್ತದೆ. ಮರಾಠಿ ಭಾಷೆಯಲ್ಲಿ ಹಿರಿಯಕ್ಕನನ್ನು ತಾಯೀ ಎಂದೇ ಸಂಬೋಧಿಸುತ್ತಾರೆ. 

ಪರರ ಮಕ್ಕಳಿಗೂ ಅಂತಃಕರಣ ತೋರಿಸುವುದು, ಬೇರೆ ಮಕ್ಕಳ ದುಃಖ ಕಷ್ಟಗಳನ್ನು ತನ್ನದೇ ಎಂದು ತಿಳಿದು ಅದನ್ನು ಪರಿಹರಿಸಲು ಮುಂದಾಗುವುದು ಇದು ಹೆಣ್ಣಿನ ಸಹಜ ಸ್ವಭಾವ. ಬಹುಶಃ ಅದಕ್ಕೆ ಇರಬಹುದೆನೋ ಆಸ್ಪತ್ರೆಗಳಲ್ಲಿ ಸಹನೆಯಿಂದ ಶುಶ್ರೂಷೆ ಮಾಡಲು ಹೆಣ್ಣು ಮಕ್ಕಳೇ ಇರುತ್ತಾರೆ. ಅಲ್ಲದೇ ಮೂರ್ನಾಲ್ಕು ವರ್ಷದ ಚಿಕ್ಕ ಮಕ್ಕಳ ಶಾಲೆಗಳಲ್ಲಿ ಇಂದಿಗೂ 'ಆಯಾ' ಎಂಬುವಳೇ ಮಕ್ಕಳ ಮಲಮೂತ್ರಗಳನ್ನು ತೊಳೆಯುತ್ತಾಳೆ. ತಿನ್ನಲು ಬಾರದ ಕಂದಮ್ಮಗಳಿಗೆ ಊಟವನ್ನೂ ಮಾಡಿಸುತ್ತಾಳೆ. ಅವರ ಕೈ ಹಿಡಿದು ತಾಳ್ಮೆಯಿಂದ ಅಕ್ಷರವನ್ನೂ ಬರೆಸುತ್ತಾಳೆ. ಈ ಎಲ್ಲ ಕಾರ್ಯಗಳನ್ನು ಮಾಡುವಲ್ಲಿ ಬಹುಶಃ ಇಂದಿನವರೆಗೂ ಯಾವ ಪುರುಷ ಕಂಡಿಲ್ಲ. 

ಹೆಣ್ಣಿನ ಈ ಕಾಳಜಿ, ಲಾಲನೆ-ಪಾಲನೆ, ಶುಶ್ರೂಷೆ, ಎಲ್ಲರಲ್ಲಿಯೂ ಸಮಾನ ಪ್ರೀತಿಯ ಹಂಚಿಕೆ , ಔದಾರ್ಯ 

ಇದುವೇ ಮಾತೃತ್ವ.

ಪುರುಷನನ್ನು ಎಂದಾದರೂ ಪರರ ಮಕ್ಕಳ ಮಲಮೂತ್ರಗಳನ್ನು ತೊಳೆಯುವ, ಊಟ ಮಾಡಿಸುವ ಕೆಲಸದಲ್ಲಾಗಲಿ ನೋಡಿದ್ದುಂಟೇ? 

ಹಾಗಾದರೆ ಪುರುಷರಲ್ಲಿ ಈ ಸದ್ಗುಣಗಳೇ ಇಲ್ಲವೆ ಎಂಬ ಆಕ್ಷೇಪ ಬೇಡ. ಕಾರಣ ಅವನಲ್ಲಿಯೂ ಈ ಎಲ್ಲ ಮಾತೃತ್ವ ಸಮಾನ ಗುಣಗಳು ಕಂಡುಬಂದರೆ ಅದಕ್ಕೂ ಸಹ ಅವನ ತಾಯಿ ಕೊಟ್ಟ ಸಂಸ್ಕಾರವೇ ಕಾರಣ ಎಂಬುದು ಸತ್ಯ. ಇನ್ನೊಬ್ಬರ ಕಷ್ಟದಲ್ಲಿ ಸರಳವಾಗಿ ಮನ ಕರಗುವ ಗುಣ ಪುರುಷನಲ್ಲಿ ಕಂಡರೆ  ನಮ್ಮ ಗ್ರಾಮೀಣ ಭಾಷೆಯಲ್ಲಿ ಅದನ್ನೂ ಸಹ "ಅವಾ ಭಾಳ್ ಹೆಣ್ಗರಳಿನ ಮನುಷ್ಯಾ ಇದ್ದಾನ" ಅಂತ ಹೇಳುತ್ತಾರೆ. ಹೆಣ್ಣಿನ ಕರುಳೇ ಹಾಗಲ್ಲವೇ. ತಪಸ್ಸು, ತ್ಯಾಗ, ಧೈರ್ಯ, ಸಹಿಷ್ಣುತೆ, ಔದಾರ್ಯ, ಸೇವೆ ಮೊದಲಾದ ಸದ್ಗುಣಗಳನ್ನು ಹೆಣ್ಣು ಸ್ವಾಭಾವಿಕವಾಗಿಯೇ ಪಡೆದಿದ್ದಾಳೆ. 

ಇದಕ್ಕೆ ಅಪವಾದವೆಂಬಂತೆಯೂ ಅನೇಕರು ಇರಬಹುದು. ಇಲ್ಲವೆಂದೇನಲ್ಲ. 


ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾಳೆ. ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಸೊಸೆಯಾಗಿ,ಅಕ್ಕ - ತಂಗಿಯಾಗಿ. ಆದರೆ ಈ ಎಲ್ಲ ಪಾತ್ರಗಳಲ್ಲಿಯೂ ಮಾತೃತ್ವ ಎಂಬುದು ಅವಳಲ್ಲಿ ಸಹಜ

ಗುಣ. ಹೆಣ್ಣು ಸಹಜವಾಗಿ ಮಾಡುವಷ್ಟು ತ್ಯಾಗವನ್ನು ಪುರುಷನು ಕಲ್ಪನೆಯನ್ನೂ ಮಾಡಲಾರನು ಎಂಬುದು ಎಲ್ಲರಿಗೂ ಅನುಭವ ಪ್ರಮಾಣ. 


ಪಾಣಿಗ್ರಹಣದ ನಂತರ ಧರ್ಮಪತ್ನಿ ಎಂದು ನಮ್ಮ ಸಂಸ್ಕೃತಿಯಲ್ಲಿ ಆಕೆಯನ್ನು ಕರೆದದ್ದು. ಕಾರಣ ಗಂಡನ ಎಲ್ಲ ಧರ್ಮ ಕಾರ್ಯಗಳಿಗೂ ಅವಳೇ ಆಧಾರ. ಅವಳಿಲ್ಲದೇ ಅವನಿಗೆ ಏನನ್ನೂ ಮಾಡಲು ಅಧಿಕಾರವಿಲ್ಲ ಎನ್ನುತ್ತವೆ ಶಾಸ್ತ್ರಗಳು. 

ನಂತರ ಬರುವ ಅತಿ ಪವಿತ್ರ ಹಾಗೂ ಶ್ರೇಷ್ಠ ಸ್ಥಾನವೇ ತಾಯಿ. 

ಹತ್ತು ಉಪಾಧ್ಯಾಯರಿಗಿಂತ ಒಬ್ಬ ಆಚಾರ್ಯರು ಉತ್ತಮರು. ನೂರು ಆಚಾರ್ಯರಿಗಿಂತ ಒಬ್ಬ ತಂದೆ ಉತ್ತಮ. ಇಂತಹ ಸಾವಿರ ತಂದೆಯರಿಗಿಂತ ಜನ್ಮ ನೀಡಿದ ಒಬ್ಬ ಜನನಿ ಅತ್ಯುತ್ತಮಳು ಹಾಗೂ ಪರಮ ಶ್ರೇಷ್ಠಳು ಎನ್ನುತ್ತದೆ ಮನುಸ್ಮೃತಿ. ಕಾರಣ ಒಬ್ಬ ವಿದ್ವಾಂಸ, ವಿಜ್ಞಾನಿ, ದೇಶ ಕಾಯುವ ವೀರ ಯೋಧ ಇಂತಹ ಎಲ್ಲ ಮಹಾನ್ ಚೇತನರಿಗೆ ನಾರಿಯೇ ಜನ್ಮವಿತ್ತಿದ್ದಾಳೆ. ಅಂತಹ ಮಾತೆ ಎಲ್ಲರಿಗಿಂತಲೂ ಉತ್ತಮಳು. 


ಸಮಾಜದ ಕೆಲವು ವರ್ಗಗಳಲ್ಲಿ ನಡೆದ ಹೆಣ್ಣಿನ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಮಾಜಘಾತುಕ ಶಬ್ದವೇ ಈ "ಮಹಿಳಾ ಸಮಾನತೆ". ಎಲ್ಲಿಂದ ಹೇಗೆ ಸಮಾನತೆ ಸಾಧ್ಯ? ಪುರುಷ ಗರ್ಭಧಾರಣೆ ಮಾಡಬಹುದಾ? ಯಾರು ಒಪ್ಪದಿದ್ದರೂ ಭಗವಂತನ ಸೃಷ್ಟಿಯೇ ಹಾಗಿದೆ. ಹೆಣ್ಣಿನಲ್ಲಿ ಅಪೂರ್ವವಾದ ಸೃಷ್ಟಿ ಕಾರ್ಯವನ್ನು ಮಾಡುವ ಯೋಗ್ಯತೆಯನ್ನು ನೀಡಿದವ ಭಗವಂತ. ಪುರುಷನ ಸ್ವಾತಂತ್ರದ ಕ್ಷೇತ್ರ ಶರೀರವಾದರೆ, ನಾರಿಯ ಸ್ವಾತಂತ್ರ್ಯದ ಕ್ಷೇತ್ರ ಹೃದಯ. ಆದ್ದರಿಂದಲೇ ತಾಯಿ ಮಾಡುವ ಕಾರ್ಯವನ್ನು ಇನ್ನಾರೂ ಮಾಡಲಾರರು. ಅದಕ್ಕೆ ಪುರುಷನಿಗಿಂತಲೂ ಸ್ತ್ರೀ ಎಂದಿಗೂ ಶ್ರೇಷ್ಠಳೇ ಹೊರತು ಸಮಾನಳಲ್ಲ.  

Feminism ಎಂಬ ಈ ವಿಚಾರ ಹೊರಬಂದದ್ದೇ ಅಮೇರಿಕಾ ಯೂರೋಪ್ ರಾಷ್ಟ್ರಗಳಿಂದ. ಅಲ್ಲಿ ಹೆಣ್ಣು ಮಕ್ಕಳಿಗೆ ಚರ್ಚಗಳಲ್ಲಿ ಪ್ರವೇಶವಿರಲಿಲ್ಲ. ಮತದಾನದ ಹಕ್ಕೂ ಇರಲಿಲ್ಲ. ಅವರ ಅಂತಹ ದುಸ್ಥಿತಿಯಲ್ಲಿ ನಮ್ಮ ನೆಲದಲ್ಲಿ ಮಹಾರಾಣಿಯರು ರಾಜ್ಯವಾಳುತ್ತಿದ್ದರು. ಯುದ್ಧ ಮಾಡುತ್ತಿದ್ದರು. ವಿದ್ವಾಂಸರೊಂದಿಗೆ ಶಾಸ್ತ್ರ ವಿಮರ್ಶೆಯಲ್ಲಿ ತೊಡಗಿದ್ದರು. ಇದು ನಮ್ಮ ಪ್ರಾಚೀನ ಮಹಿಳೆಯರ ಸ್ಥಾನವಾಗಿತ್ತು.

ಭೋಗಕ್ಕಾಗಿಯೇ ಸ್ತ್ರೀಯರ ಜನ್ಮವೆಂದು ಪ್ರತಿಪಾದಿಸುವ ಪಾಶ್ಚಾತ್ಯ ಸಂಸ್ಕೃತಿ ಒಂದೆಡೆಯಾದರೆ, ತಾಯಿ ಜಗದಂಬೆಯ ಸ್ವರೂಪ ಸ್ತ್ರೀ ಎಂದು ಅವಳನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಕನ್ಯೆಯರಲ್ಲಿ ದುರ್ಗೆಯ ಸನ್ನಿಧಾನವೆಂದು ತಿಳಿಸಿ, ಕನ್ಯಾಪೂಜೆಯನ್ನು ಮಾಡುವ ಸಂಸ್ಕೃತಿ ನಮ್ಮದು. ನಮ್ಮ ಪ್ರಾಚೀನರು ಎಂದಿಗೂ ಮಹಿಳೆಯರಿಗೆ ಸಮಾನ ದರ್ಜೆ ನೀಡಲೇ ಇಲ್ಲ.ಬದಲಾಗಿ ಉನ್ನತ ಸ್ಥಾನದಲ್ಲಿಯೇ ಕಂಡವರು. 

ಆದರೆ ಕಾಲಕ್ರಮೇಣ ಸನಾತನ ಸಂಸ್ಕೃತಿಯ ತಿರಸ್ಕಾರ ಹಾಗೂ ಪಾಶ್ಚಾತ್ಯರ ಪುರಸ್ಕಾರವೇ ಹೆಣ್ಣಿನ ಸ್ಥಾನವನ್ನು ಗೌಣವಾಗಿಸಿತು. ಸೀತೆ ಸಾವಿತ್ರಿಯರ ಅವಶ್ಯಕತೆ ನಮಗಿಲ್ಲ ಎಂಬ ತಿರಸ್ಕಾರ ಭಾವನೆಯಿಂದ ಸಮಾನತೆ ಸಾಧ್ಯವೇ..? 

ಆದರೂ ಸಮಯ ಮೀರಿಲ್ಲ. ಹೆಣ್ಣು ತಾನು ಉತ್ತರದಾಯಿತ್ವ ವಹಿಸಿಕೊಂಡರೆ ಯಾವುದು ಅಸಾಧ್ಯವಿಲ್ಲ. ನಮ್ಮ ಭಾರತೀಯ ಸನಾತನ ಸಂಸ್ಕೃತಿ ಪರಂಪರೆಯ ರಕ್ಷಣೆಯ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿಭಾಯಿಸಬಹುದು. ಇತಿಹಾಸ ಕೇವಲ ಪುಟ ತಿರುಗಿಸಲು ಮೀಸಲಾಗುವುದು ಬೇಡ. ಇತಿಹಾಸ ಮತ್ತೆ ಮರುಕಳಿಸಲು ಸಾಧ್ಯವಾದರೆ ಮಾತ್ರ ಸಾರ್ಥಕ. 

ಮಹಿಳಾ ದಿನದಂದು ಕೇವಲ ಪರಸ್ಪರ ಹೊಗಳುವಿಕೆಯಲ್ಲಿಯೇ ಆಚರಣೆಯನ್ನು ಮಾಡಿ ಮುಗಿಸುವುದಕ್ಕಿಂತ ಕೆಲವು ಸಂಕಲ್ಪಗಳನ್ನು ಮಾಡಿ, ಪರಿವಾರದ ಸಮಾಜದ ದೇಶದ ಎಲ್ಲ ಬಗೆಯ ಹಿತಚಿಂತನೆಯ ನಿಟ್ಟಿನಲ್ಲಿ ನಮ್ಮ ಸನಾತನ ಸಂಸ್ಕೃತಿ, ಪರಂಪರೆಯ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಂಕಲ್ಪವೇ ನಿಜವಾದ ಮಹಿಳಾದಿನ.


ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಸಹಜವಾಗಿ ಕೇಳಿದಳು ನೀವು ವೃತ್ತಿ ಮಾಡುವಿರಾ ಅಥವಾ ಗೃಹಿಣಿಯಾ ಎಂದು. ಅದಕ್ಕೆ ಅವಳು ಉತ್ತರಿಸಿದಳು ನಾನು ಬೆಳಿಗ್ಗೆ ಎಚ್ಚರಿಕೆ ಗಂಟೆ. ನಂತರ ಅಡುಗೆಯವಳು, ಸೇವಕಳು ಆಗುತ್ತೇನೆ. ಈ ಮಧ್ಯೆ ಮನೆಯಲ್ಲಿ ಕೆಟ್ಟ ವಸ್ತುಗಳನ್ನು ರಿಪೇರಿ ಮಾಡುವವಳಾಗುತ್ತೇನೆ. ಹೊಲಿಗೆಯವಳಾತ್ತೇನೆ. ಮನೆಯ ವೃದ್ಧರಿಗೆ ಶುಶ್ರೂಷೆ ಮಾಡುವ ದಾದಿಯೂ ಆಗುತ್ತೇನೆ. ಮಕ್ಕಳಿಗೆ ಶಿಕ್ಷಕಿಯೂ ಆಗುತ್ತೇನೆ. ಗಂಡನ ಸೋಲಿನಲ್ಲಿ ಧೈರ್ಯ ತುಂಬುವ ತಾಯಿಯಾಗುತ್ತೇನೆ. ಅವನ ಗೆಲುವಿನಲ್ಲಿ ಹೆಗಲು ಕೊಡುವ ಸ್ನೇಹಿತೆಯಾಗುತ್ತೇನೆ. ಒಮ್ಮೊಮ್ಮೆ ತಂದೆಯಾಗಿಯೂ ಬದಲಾಗುತ್ತೇನೆ. ಇಷ್ಟಾದರೂ ಎಲ್ಲರ ಕೋಪಕ್ಕೂ ನಾನೇ ಬಲಿಯಾಗುತ್ತೇನೆ. ಅಂತೂ ನಾನು ದಿನದ ಇಪ್ಪತ್ನಾಲ್ಕು ಗಂಟೆ ವೃತ್ತಿ ಜೀವನ ನಡೆಸುತ್ತಿರುವ ಗೃಹಿಣಿಯಾಗಿದ್ದೇನೆ ಎಂದಳು.  ಹೆಣ್ಣಿನ ಸ್ವರೂಪದಲ್ಲಿಯೇ ತುಂಬಿಕೊಡಿದೆ ನಿಸ್ವಾರ್ಥವಾದ ಮಾತೃತ್ವ. ಅಂತಹ ಮಾತೃತ್ವಕ್ಕೆ ಮಾಡೋಣ ಅನಂತ ನಮನ.. 

-- ಮೇಧಾ ಪ್ರಹ್ಲಾದಾಚಾರ್ಯ ಜೋಶಿ

***

ಬೈತಲೆಯ ಮಹತ್ವ **


ಹೆಣ್ಣು ಮಕ್ಕಳ ಜ್ಞಾನಕ್ಕೆ ಕಾರಣವಾದಂತಹ ಒಂದು ನಾಡಿ,


ಸೀಮಂತಿನಿ ಅನ್ನುವ ನಾಡಿ ಹೆಣ್ಣು ಮಕ್ಕಳ ತಲೆಯ ಮಧ್ಯ ಬಾಗದಲ್ಲಿ ಇರುತ್ತದೆ.


ಗಂಡು ಮಕ್ಕಳ ತಲೆಯಲ್ಲಿ ಆ ನಾಡಿ ಇರುವುದಿಲ್ಲ


ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಇರುತ್ತದೆ.


ತಲೆಯ ಮಧ್ಯಭಾಗದಲ್ಲಿ ಕೂದಲನ್ನು ಆಚೆ ಈಚೆ ಮಾಡಿ ಬಾಚಿ ಕೊಳ್ಳುತ್ತಾರೆ, ಆದುದರಿಂದ ಹೆಣ್ಣಿನ ದೇಹಕ್ಕೆ ಪಾವಿತ್ರತೆ ಯೂ ಸಿಗುತ್ತದೆ..


ನಮ್ಮ ದೇಹದ ಕೂದಲು ನಮ್ಮ ಪಾಪದ ಪ್ರತೀಕ, ಆದರೆ ಹೆಣ್ಣು ಮಕ್ಕಳ ದೇಹದ ಕೂದಲು ಹಾಗಲ್ಲ.. ಕಾರಣ ಯಾವಾಗ ಅವರು ಎರಡು ವಿಭಾಗ ಮಾಡಿ ಜಡೆಯನ್ನು ಹಾಕಿ ಕೊಳ್ಳುತ್ತಾರೋ ಆಗ ಅವರ ಇಡೀ ದೇಹಕ್ಕೆ ಪಾವಿತ್ರಾತೆಯು ಬಂದು ಬಿಡುತ್ತದೆ...


ಅದಕ್ಕಾಗಿಯೇ ಹೆಣ್ಣು ಮಕ್ಕಳಿಗೆ ಪ್ರತಿನಿತ್ಯ ತಲೆಗೆ ಸ್ನಾನ ಒಳ್ಳೆಯದಲ್ಲ.....

ಗಂಡು ಮಕ್ಕಳು ಶುದ್ಧರಾಗಿರಬೇಕೆಂದರೆ ಪ್ರತಿ ದಿನ ತಲೆಗೆ ಸ್ನಾನ ಮಾಡಲೇ ಬೇಕು..


ಆ ಸೀಮಂತಿನಿ ಅನ್ನುವ ನಾಡಿ ಶಾಸ್ತ್ರ ತತ್ವಗಳಲ್ಲಿ ನಂಬಿಕೆಯನ್ನು ಹುಟ್ಟಿಸುತ್ತದೆ. ಶ್ರದ್ದೆಯನ್ನು ಹುಟ್ಟಿಸುತ್ತದೆ..(ಹೆಣ್ಣು ಮಕ್ಕಳಿಗೆ)


ಹಾಗಾಗಿ ಶುದ್ಧರಾದಂತ ಹೆಣ್ಣು ಮಕ್ಕಳಿಗೆ ಶಾಸ್ತ್ರರೋಕ್ತಾವಾದ ವಿಷಯಗಳಲ್ಲಿ ಬಹಳ ಶ್ರದ್ದೆಯಿಂರುತ್ತದೆ...


ತಲೆಯನ್ನು ಬಾಚಿ ಕೊಳ್ಳದೆ ಬಿರೆಹೊಯೈದು (ಕೂದಲನ್ನು ಹಾಗೇ ಬಿಡುವುದು)ಕೊಳ್ಳುವಂತ ಹೆಣ್ಣುಮಕ್ಕಳು ಶಾಸ್ತ್ರದಲ್ಲಿ ನಂಬಿಕೆಯನ್ನು ಕಳೆದು ಕೊಂಡಿರುತ್ತಾರೆ..


ಅದೇ ಬೈತಲೆಯನ್ನು ತೆಗೆದು ತಲೆಯನ್ನು ಬಾಚಿಕೊಳ್ಳುವಂತಹ ಹೆಣ್ಣು ಮಕ್ಕಳಿಗೆ ಶಾಸ್ತ್ರ ಜ್ಞಾನ ಸುಲಭವಾಗಿ ದೊರಯುತ್ತದೆ...


ಎಷ್ಟರ ಮಟ್ಟಿಗೆ ಹೆಣ್ಣು ಮಕ್ಕಳು ಗರ್ಭಿಣಿ ಆದಾಗ ಅವರಿಗೆ ಸೀಮಂತ ಅನ್ನುವ ಒಂದು ಸಂಸ್ಕಾರ ಇದೆ....


ಈ ಸಂಸ್ಕಾರದೊಳಗೆ ಮುಳ್ಳು ಹಂದಿಯ ನಾಲ್ಕು / ಆರು ಮುಳ್ಳುಗಳನ್ನು ತಂದು ನಿಧಾನವಾಗಿ ಗರ್ಭಿಣಿಗೆ ತೊಂದರೆ ಆಗದ ಹಾಗೆ ತಲೆಯನ್ನು ಬಾಚಬೇಕು.ಆ ಮುಳ್ಳಿನ ಕೊನೆಯ ಸ್ಪರ್ಶದಿಂದ ಹೊಟ್ಟೆಯೊಳಗಿನ ಮಗುವಿಗೆ ಮೇಧಾವೃದ್ದಿಯಾಗುತ್ತದೆ.


ಅಂತಹ ಅದ್ಭುತವಾದ ನಾಡಿ... ಸೀಮಂತಿನಿ ನಾಡಿ.. ತಲೆಯ ಮಧ್ಯ ಭಾಗದಲ್ಲಿರುತ್ತದೆ.. ಅದಕ್ಕಾಗಿ ಬೈತಲೆಯನ್ನು ತೆಗೆಯುತ್ತಾರೆ.

ಸಂಗ್ರಹಣೆ

***

ಆರು ವರ್ಷಗಳ ಅಂತ್ಯದ ವೇಳೆಗೆ ಜಗತ್ತಿನ 45% ಹುಡುಗಿಯರು ಕನ್ಯೆಯರಾಗಿಯೇ ಉಳಿಯುತ್ತಾರೆ

ಫೆಬ್ರವರಿ 1, 2025 ರ ಲೋಕಮತ್ ಪತ್ರಿಕೆಯಲ್ಲಿ ಪ್ರಕಟವಾದ ಅಂತರರಾಷ್ಟ್ರೀಯ ಸಮೀಕ್ಷಾ ವರದಿ.  ಮಾರ್ಗನ್ ಸ್ಟ್ಯಾನ್ಲಿ ಎಂಬ ಸಂಸ್ಥೆಯು ಹುಡುಗಿಯರ ವಿವಾಹದ ಕುರಿತಾದ ತನ್ನ ಅಂತರರಾಷ್ಟ್ರೀಯ ಸಮೀಕ್ಷಾ ವರದಿಯಲ್ಲಿ ಆರು ವರ್ಷಗಳ ಅಂತ್ಯದ ವೇಳೆಗೆ, ವಿಶ್ವದ 45% ಹುಡುಗಿಯರು ಅವಿವಾಹಿತರಾಗಿಯೇ ಉಳಿಯುತ್ತಾರೆ ಎಂದು ಹೇಳಿದೆ.

ಕಾರಣ

೧.ಪ್ರಸ್ತುತ ಉನ್ನತ ಶಿಕ್ಷಣ ಪಡೆದ ಹುಡುಗಿಯರ ಶೇಕಡಾವಾರು ಹೆಚ್ಚಾಗಿದೆ.

೨.ಹುಡುಗಿಯರು ತಮ್ಮ ವೃತ್ತಿಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ.      

೩.ಅವರ ಪ್ರಗತಿ ಅವರಿಗೆ ಮುಖ್ಯವಾಗಿದೆ.

೪.ಅವಳು ಯಾರನ್ನೂ ಅವಲಂಬಿಸಲು ಬಯಸುವುದಿಲ್ಲ. 😱

೫.ಅವರಿಗೆ ಸ್ವಾತಂತ್ರ್ಯ ಬೇಕು, ಯಾರಿಗೂ ಬದ್ಧವಾಗಿರಲು ಇಷ್ಟವಿಲ್ಲ. 

೬.ಅವಳು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾಳೆ🤔 ಮತ್ತು ತನ್ನ ಇಚ್ಛೆಯಂತೆ ತನ್ನ ಜೀವನವನ್ನು ನಡೆಸಲು ಬಯಸುತ್ತಾಳೆ.

୭.ಅವಳು ಮದುವೆಯ ಬಂಧಗಳಲ್ಲಿ ಬಂಧಿಸಲ್ಪಡಲು ಬಯಸುವುದಿಲ್ಲ. 🤔 

೮.ಇಂದು ಹುಡುಗಿಯರು ಅನೇಕ ದೊಡ್ಡ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರಿಗೆ ದೊಡ್ಡ ಪ್ಯಾಕೇಜ್‌ಗಳೂ ಸಿಗುತ್ತವೆ.👌

೯.ಇಂದು ಹುಡುಗಿಯರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಿದ್ದಾರೆ ಮತ್ತು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ಮದುವೆಯ ವಯಸ್ಸನ್ನು ದಾಟಿದ ನಂತರವೂ ಅವರು ಮದುವೆಯಾಗಿಲ್ಲ. 😟

೧೦.ಓದುವಾಗ, ನಂತರ ಉದ್ಯೋಗ ಪಡೆಯುವಾಗ ಮತ್ತು ನಂತರ ಸಂಬಂಧವನ್ನು ಹುಡುಕುವಾಗ ಹುಡುಗಿಯರ ವಯಸ್ಸು ಹೆಚ್ಚುತ್ತಿದೆ.😟

೧೧.ಹೆಚ್ಚಿನ ವಿದ್ಯಾವಂತ ಹುಡುಗಿಯರು ವಯಸ್ಸಾದಂತೆ ಸಮಾನವಾದ ವಿವಾಹ ಪ್ರಸ್ತಾಪಗಳನ್ನು ಕಂಡುಹಿಡಿಯುವುದು ಕಷ್ಟಕರವಾಗುತ್ತದೆ.😰

೧೨.ಹುಡುಗಿಯರು ದೊಡ್ಡವರಾದ ನಂತರ ಮದುವೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.😰 

೧೩ .ಮದುವೆಯಾಗುವುದು ಮತ್ತು ಮಗುವನ್ನು ಹೊಂದುವುದು ತನ್ನ ಪ್ರಗತಿಗೆ ಒಂದು ಅಡಚಣೆ ಎಂದು ಅವಳು ಪರಿಗಣಿಸುತ್ತಾಳೆ.  😟

ಈ ಬಿಕ್ಕಟ್ಟನ್ನು ತಪ್ಪಿಸಲು, ಹುಡುಗಿಯರು  ಮತ್ತು ಹುಡುಗರು 23 ರಿಂದ 25 ವರ್ಷ ವಯಸ್ಸಿನೊಳಗೆ ಮದುವೆಯಾಗುವಂತೆ ಸಮಾಜದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡಬೇಕು ಇಲ್ಲವಾದಲ್ಲಿ ಭವಿಷ್ಯದಲ್ಲಿ ಕುಟುಂಬ ವ್ಯವಸ್ಥೆ ನಶಿಸಿ ಹೋಗುತ್ತದೆ,ಮಕ್ಕಳೇ ಅಪರೂಪ ಆಗುತ್ತಾರೆ.

***








woman power


all woman music band





***