SEARCH HERE

Showing posts with label ಆಚಾರ- ಮನುಷ್ಯ ಜನ್ಮ. Show all posts
Showing posts with label ಆಚಾರ- ಮನುಷ್ಯ ಜನ್ಮ. Show all posts

Tuesday, 13 April 2021

ಮನುಷ್ಯ ಜನ್ಮ ಸಿಗುವುದರಲ್ಲಿ manushya janma

೧) ಮನುಷ್ಯ ಜನ್ಮ ಸಿಗುವುದರಲ್ಲಿ? ಪೂರ್ವಜನ್ಮಗಳಲ್ಲಿಯ ಪಾಪ ಪುಣ್ಯಗಳ ಸಮ ಸಂಗ್ರಹದ ಸೂತ್ರ ಅಡಗಿದೆ!!
೨) ಸತ್ ಸಂಸ್ಕಾರವಂತರ ಮನೆಯಲ್ಲಿ ಹುಟ್ಟುವ ಯೋಗ್ಯತೆಯಲ್ಲಿ? ಹಿಂದೆ ಮಾಡಿದ ಸತ್ಕರ್ಮಗಳ ಫಲದ ಪ್ರಭಾವ ಅಡಗಿದೆ!!
೩) ಸತ್ಸಂಗದ ಸವಿ ಸೇವಿಸುವ ತನ್ಮಯತೆಯಲ್ಲಿ? ಸದ್ಗುರುಗಳ ಪ್ರಾಪ್ತಿಯ ಅಲಭ್ಯ ಲಾಭದ ಯೋಗ ಅಡಗಿದೆ!!
೪) ಸದ್ಗುರುಗಳಿಂದ ಅನುಗ್ರಹಿತರಾಗುವ ಅವಕಾಶದ ಪ್ರಾಪ್ತಿಯಲ್ಲಿ? ಪರಮಾರ್ಥದ ಪ್ರಾದುರ್ಭಾವ ಅಡಗಿದೆ!! 
೪) ಸದ್ಗುರುಗಳು ತಿಳಿಸಿದ ನಾಮೋಪಾಸನೆಗಳನ್ನು ಆಜ್ಞೆಯಂತೆ ಪಾಲಿಸುವುದರಲ್ಲಿ? ಸತ್ ಶಿಷ್ಯತ್ವ ಅಡಗಿದೆ!!
೫) ಸದ್ಗುರುಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೇಮಿಸುವುದರಲ್ಲಿ? ಪರಮ ಭಕ್ತಿಯ ಮರ್ಮ ಅಡಗಿದೆ!!
೬) ಸ್ವಥಃದ ಸ್ವತಂತ್ರತೆ ಸೂನ್ಯವಾಗುವುದರಲ್ಲಿ? ಸಂಪೂರ್ಣ ಶರಣಾಗತಿಯ ಭಾವ ಅಡಗಿದೆ!!
೭) ಪರಿಶುದ್ಧ ಭಾವದ ಪರಾಕಾಷ್ಠತೆಯಲ್ಲಿ?  ಬ್ರಹ್ಮಾನಂದದ ಅನುಭೂತಿ ಅಡಗಿದೆ!!
೮) ಅಖಂಡ ನಾಮ ಸ್ಮರಣೆಯ ತನ್ಮಯತೆಯಲ್ಲಿ? ಶ್ರೀ ಸದ್ಗುರುಗಳ ಸಂಪೂರ್ಣ ಕೃಪೆಯ ಸಂಕೇತ ಅಡಗಿದೆ!!
೯) ಶ್ರೀ ಸದ್ಗುರುಗಳ ಸಂಪೂರ್ಣ ಕೃಪೆಯಲ್ಲಿ? ಸ್ವರೂಪ ಸಾಕ್ಷಾತ್ಕಾರವೇ ಅಡಗಿದೆ!!
೧೦) ಸ್ವರೂಪ ಸಾಕ್ಷಾತ್ಕಾರದ ಪರಮಾನಂದದಲ್ಲಿಯ ಅನನ್ಯ ಲೀನತೆಯೇ? ಶ್ರೀ ಸದ್ಗುರುಗಳ ಸ್ವರೂಪ ಹಾಗೂ ವಿಮಲ ಬ್ರಹ್ಮ ಸ್ವರೂಪವಾಗಿರುವದೆಂಬುದು ಈ ಮನುಕುಲಕ್ಕೆ ನೀಡಿದ ಮಹಾತ್ಮರುಗಳ ಮಹತ್ವದ ಸಂದೇಶವಾಗಿದೆ!! 
 ಆ ನಿಟ್ಟಿನಲ್ಲಿ ಅರಿತು ನಡೆದು ಆ ಬ್ರಹ್ಮಾನಂದ ಸ್ಥಿತಿಯಲ್ಲಿರುವುದೇ ಸಾಯುಜ್ಯ ಮುಕ್ತಿಯಾಗಿದೆ!! 
ಆ ರೀತಿಯಲ್ಲಿ ನಡೆದು ನಾವೆಲ್ಲರೂ ಧನ್ಯರಾಗಬೇಕೆಂಬುದೇ ಎಲ್ಲಾ ಶ್ರೀ ಸದ್ಗುರು ಸಮರ್ಥರುಗಳ ಶರಣ ಸಂತ ಮಹಾತ್ಮರುಗಳ ಇಚ್ಛೆಯಾಗಿದೆ!! ಜೈ ಶ್ರೀ ರಾಮ!!
   ಶ್ರೀ ಗುರುದಾಸ
    ಶ್ರೀ ಕ್ಷೇತ್ರ ಕೂಪಗಡ್ಡಿ.
   "ಜೈ ಜೈ ರಘುವೀರ್ ಸಮರ್ಥ"
******