SEARCH HERE

Showing posts with label ಹಬ್ಬ ಕಲ್ಕಿ ಜಯಂತಿ ಶ್ರಾವಣ ಶುದ್ಧ ಷಷ್ಠಿ kalki jayanti shravana shukla shashti. Show all posts
Showing posts with label ಹಬ್ಬ ಕಲ್ಕಿ ಜಯಂತಿ ಶ್ರಾವಣ ಶುದ್ಧ ಷಷ್ಠಿ kalki jayanti shravana shukla shashti. Show all posts

Tuesday, 17 August 2021

ಕಲ್ಕಿ ಜಯಂತಿ ಶ್ರಾವಣ ಶುದ್ಧ ಷಷ್ಠಿ kalki jayanti shravana shukla shashti

 ಕಲ್ಕಿ ಜಯಂತಿ ಶ್ರಾವಣ ಶುದ್ಧ ಷಷ್ಠಿ.


ನಾವೆಲ್ಲರೂ ಜೀವಿಸಿದ ಯುಗದ ಹೆಸರು ಕಲಿಯುಗ. ಚತುರ್ಯುಗಗಳಲ್ಲಿ ಕೊನೆಯದು. ವೇದಗಳ ಪ್ರಕಾರ ಈ ಯುಗದಲ್ಲಿ ಧರ್ಮವು ಒಂದು ಪಾದ ಮಾತ್ರ ಇದೆ. ಮೂರು ಪಾದ ಅಧರ್ಮ ಇದೆ.  ಕಲಿ ಶಬ್ದದ ಅರ್ಥವೇ ಅನಿಷ್ಟ, ಅಧರ್ಮ, ದುಷ್ಟ ಎಂದು ಅನೇಕ ಇವೆ. ಇದೆಲ್ಲ ಪರಿವರ್ತನೆ ಕಾಲ ನಾಮಕ ಪರಮಾತ್ಮನ ಆಧೀನದಲ್ಲಿ ಇದೆ.  ಅದನ್ನು ಮೀರಿ ನಡೆಯುವಂತಿಲ್ಲ.  ವೇದವ್ಯಾಸ ದೇವರು ಜನಮೇಜಯ ರಾಜನಿಗೆ ರಾಜಾ ನೀನು ಅಶ್ವಮೇಧ ಯಾಗ ಮಾಡಬೇಡ. ಒಂದು ನಿನ್ನ ಸದ್ಗುಣದಿಂದ ಮಾಡಿದರೂ  ಸಹ ಅದನ್ನು ನಾಶ ಮಾಡಲು ಬೇರೆಯವರಿದ್ದಾರೆ.  ಎಂದು ಹೇಳಿದರು. ಅದರಂತೆ ಕಲಿಕಾಲದ ಪ್ರಭಾವದಿಂದ ರಾಜ ಮಾಡಿದ ಯಾಗ ಬ್ರಾಹ್ಮಣ ಕೋಪದಿಂದ ನಿಂತಿತು. ಈ ವಿಷಯ ಭಾಗವತದಲ್ಲಿ ವ್ಯಾಸರು ಜನಮೇಜಯನಿಗೆ ಹೇಳಿದ್ದಾರೆ. 


ಹರಿವಂಶ ಪುರಾಣ ಮತ್ತು ಭಾಗವತ ಪುರಾಣ ಗಳಲ್ಲದೆ ಇನ್ನೂ  ಕೆಲವು ಪುರಾಣಗಳಲ್ಲಿ ಕಲಿಯುಗದ ಲಕ್ಷಣಗಳನ್ನು ವರ್ಣಿಸಿದ್ದಾರೆ. ಬಾಹುಬಲ ಇದ್ದವನೇ ರಾಜ ಮುಖಂಡನಾಗುತ್ತಾನೆ. ಮಾನವನ ಆಹಾರ ಪ್ರಾಪ್ತಿ ಕಡಿಮೆಯಾಗಿ, ಜೀವಿಯು ಗಡ್ಡೆ, ಬೇರು ಗಿಡದ ತೊಪ್ಪಲು ತಿಂದು ಜೀವಿಸಬೇಕಾಗುತ್ತದೆ.  ಇದರಿಂದ ಹುಟ್ಟುವ ಮಕ್ಕಳು ಅನಾರೋಗ್ಯದಿಂದ ಇರುತ್ತವೆ. ಮನುಷ್ಯ ಕೇವಲ ಮೂರು ಅಡಿ ಎತ್ತರ ಇರುವನು. ಆಯುಷ್ಯವು 20 ರಿಂದ 30 ವರ್ಷ ಇರುತ್ತದೆ. ಪುರುಷ ಸ್ತ್ರೀಯರಲ್ಲಿ ಬೇಧ ಇಲ್ಲ. ಮಾಡುವೆ ಎಂದರೆ ಕೇವಲ ರತಿ ಮಾತ್ರ. ಜಗತ್ತಿನಲ್ಲಿ  ಮುಸಲ್ಮಾನ ಯವನರ ಹಾವಳಿ ಬಹಳ ಆಗುವದು.  ಜುಟ್ಟು ಶಿಖೆಗೆ ಗೌರವ ಇರುವದಿಲ್ಲ. ವಿಪ್ರರು ತಮ್ಮ ಜ್ಞಾನವನ್ನು ವ್ಯಾಪಾರ ಮಾಡಿಕೊಳ್ಳುತ್ತಾರೆ. ಹೀಗೆ ಅಧರ್ಮವು ಎಲ್ಲಿ ನೋಡಿದಲ್ಲಿ ಬೆಳೆಯುತ್ತಾ ಇರುವಾಗ ಕಲ್ಕಿಯು ಅರ್ಥಾತ್ ಶ್ರೀಹರಿಯು ಕಲ್ಕಿಯ ಅವತಾರವನ್ನು ಮಾಡಿ ಸಕಲ ಅಧರ್ಮಿಯರನ್ನು ಕುದುರೆಯ ಮೇಲೇರಿ ಸಂಹರಿಸುತ್ತಾನೆ.  ಈ ಕಲ್ಕಿಯು ಕಳಿಂಗ ದೇಶದ ಒಬ್ಬ ಬ್ರಾಹ್ಮಣನಲ್ಲಿ ಅವತಾರ ಮಾಡುವನು.  ಕೊನೆಗೆ ಜನರಿಗೆ ತಂತಾನೆ ಇದೆಲ್ಸ್ ಅಧರ್ಮ, ನಾವು ಧರ್ಮದಿಂದ ಇರಬೇಕೆಂಬ ಭಾವನೆ ಉದಯವಾಗಿ  ಸತ್ಯಯುಗದ ಪ್ರಾರಂಭ ನಿಧಾನವಾಗಿ ಆಗುವದು.  

ಧರ್ಮ ಸ್ಥಾಪನೆ ಮಾಡುವ ಕಲ್ಕಿಯು  ಶ್ರಾವಣ ಮಾಸದ ಶುಕ್ಲಪಕ್ಷ ಷಷ್ಠಿ ದಿನ ಅವತಾರ ಮಾಡುವನು. ಧರ್ಮ ರಕ್ಷಕನಾದ ಈ ಕಲ್ಕಿ ಎಲ್ಲರನ್ನೂ ಅಧರ್ಮದ ಹಾವಳಿಯಿಂದ ರಕ್ಷಿಸಿ ಧರ್ಮ ಮಾರ್ಗ ತೋರಲೆಂದು ಪ್ರಾರ್ಥಿಸುವ ನಿಮ್ಮವನೇ ಆದ..ಮಧುಸೂದನ ಕಲಿಭಟ್.

-recd in whatsapp

***