SEARCH HERE

Showing posts with label ವಿಶ್ವಾಸ- ಮಕ್ಕಳನ್ನು ಮುದ್ದಿಸುವುದು ಮಾತ್ರವಲ್ಲ ದಂಡಿಸುವುದುಾ ಪ್ರೀತಿಯೇ. Show all posts
Showing posts with label ವಿಶ್ವಾಸ- ಮಕ್ಕಳನ್ನು ಮುದ್ದಿಸುವುದು ಮಾತ್ರವಲ್ಲ ದಂಡಿಸುವುದುಾ ಪ್ರೀತಿಯೇ. Show all posts

Wednesday, 14 April 2021

ಮಕ್ಕಳನ್ನು ಮುದ್ದಿಸುವುದು ಮಾತ್ರವಲ್ಲ, ದಂಡಿಸುವುದುಾ ಪ್ರೀತಿಯೇ

 ಮಕ್ಕಳನ್ನು  ಮುದ್ದಿಸುವುದು ಮಾತ್ರವಲ್ಲ, ದ೦ಡಿಸುವುದುಾ ಪ್ರೀತಿಯೇ.....!!!! 😃


ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದಷ್ಟೇ ಪ್ರೀತಿಯಲ್ಲ, ಕೊಡಿಸದೇ ಇದ್ದು ನಿರಾಕರಣೆಯ ನೋವ ಸಹಿಸೋದನ್ನು ಕಲಿಸೋದು ಕೂಡ ಪ್ರೀತಿಯೇ...

ಕೇಳಿದಲ್ಲಿಗೆ ಕರೆದೊಯ್ಯುವುದು/ಕಳಿಸುವುದಷ್ಟೇ ಅಲ್ಲ, ಕರೆದೊಯ್ಯದೇ/ಕಳಿಸದೇ ಮನೆಯಲ್ಲಿ ಇರುವಂತೆ ಮಾಡಿ ನಿರಾಸೆಯನ್ನು ಅರಗಿಸಿಕೊಳ್ಳೋದನ್ನು ತಿಳಿಸೋದೂ ಪ್ರೀತಿಯೇ...

ಕೇಳಿದ್ದೆಲ್ಲವನ್ನೂ ಅವರ ಬಾಯಿಂದುದುರಿದ ತಕ್ಷಣ ಹಾಜರುಪಡಿಸೋದಷ್ಟೇ ಅಲ್ಲ, ತಮ್ಮ ಅಗತ್ಯಗಳಿಗಾಗಿ ಕಾಯುವ ತಾಳ್ಮೆ ಕಲಿಸೋದೂ ಪ್ರೀತಿಯೇ...

ಅವರು ಹೋದ ದಾರಿಯಲ್ಲಿಯೇ ಅವರನ್ನು ಅವರ ಪಾಡಿಗೆ ಬಿಡುವುದಷ್ಟೇ ಅಲ್ಲ, ಸರಿಯಾದ ದಾರಿಯನ್ನು ತೋರಿಸುವುದೂ ಕೂಡ ಪ್ರೀತಿಯೇ...

ಅವರಿಗೆ ಅನಿಸಿದ್ದೆಲ್ಲವನ್ನೂ ಹೇಳುವಷ್ಟು ಸ್ವಾತಂತ್ರ್ಯ ಕೊಡುವುದಷ್ಟೇ ಅಲ್ಲ, ಯಾವ ಸಮಯದಲ್ಲಿ ಏನು ಮತ್ತು ಎಷ್ಟು ಮಾತನಾಡಬೇಕೆಂಬುದರ ಅರಿವು ಮೂಡಿಸೋದೂ ಪ್ರೀತಿಯೇ...

ಆಸೆ ಪಟ್ಟದ್ದೆಲ್ಲವನ್ನೂ ಕೊಂಡು ಯಾ ತಯಾರಿಸಿ ತಿನ್ನಿಸುವುದಷ್ಟೇ ಅಲ್ಲ, ತಮ್ಮ ದೇಹ ಮತ್ತು ಆರೋಗ್ಯದ ಬಗ್ಗೆ ನಿಗಾ ವಹಿಸೋದನ್ನು ರೂಢಿಸೋದೂ ಪ್ರೀತಿಯೇ...
*********