SEARCH HERE

Showing posts with label ವಿಶ್ವಾಸ- ವಿಶೇಷ ವ್ಯಕ್ತಿ. Show all posts
Showing posts with label ವಿಶ್ವಾಸ- ವಿಶೇಷ ವ್ಯಕ್ತಿ. Show all posts

Thursday, 15 April 2021

vishesha vyakti ವಿಶೇಷ ವ್ಯಕ್ತಿ







 ಒಬ್ಬ ಮನುಷ್ಯ ಜೀವನದಲ್ಲಿ ಇಷ್ಟೊಂದು ವಿಕ್ರಮಗಳನ್ನು ಸಾಧಿಸಬಹುದಾ ??  1. ಕೃಷ್ಣರಾಜ ಸಾಗರ ಅಣೆಕಟ್ಟು 2. ಮಹಾರಾಣಿ ಕಾಲೇಜು ಸ್ಥಾಪನೆ , ಬೆಂಗಳೂರು 3. ನಿಮಾನ್ಸ್ ಆಸ್ಪತ್ರೆ , ಬೆಂಗಳೂರು 4. ಮಿಂಟೋ ಹಾಸ್ಪಿಟಲ್ , ಬೆಂಗಳೂರು 5. ಕೆ . ಆರ್ . ಮಾರುಕಟ್ಟೆ , ಬೆಂಗಳೂರು  6. ಬನಾರಸ್ ಹಿಂದೂ ಮಹಾವಿದ್ಯಾಲಯ , ಸಹ ನಿರ್ಮಾತೃ 7. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ , ಬೆಂಗಳೂರು 8. ಶಿವನಸಮುದ್ರ ಜಲವಿದ್ಯುತ್ ಯೋಜನೆ 9. ವಾಣಿವಿಲಾಸ ಅಣೆಕಟ್ಟು ,  ಚಿತ್ರದುರ್ಗ 10. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ 11. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ  12.ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ  13. ಬೆಂಗಳೂರು ವಿಶ್ವವಿದ್ಯಾಲಯ (UVCE) ಸ್ಥಾಪನೆ 14. ಯುವರಾಜ ಕಾಲೇಜು ಮೈಸೂರು ಮೈಸೂರ್  15. ಮೈಸೂರು ರಾಜ್ಯ ರೈಲ್ವೆ 16. ಮೈಸೂರು ಮೆಡಿಕಲ್ ಕಾಲೇಜ್ 17 ಬೆಂಗಳೂರು ಟೌನ್ ಹಾಲ್ 18. ವಾಣಿವಿಲಾಸ್ ಮಹಿಳಾ ಮತ್ತು ಮಕ್ಕಳ  ಆಸ್ಪತ್ರೆ 19. ಮಂಡ್ಯ ಜಿಲ್ಲೆ ರಚನೆ 20. ದೇಶದಲ್ಲಿ ಮೊಟ್ಟಮೊದಲ ರಸ್ತೆಗಳಿಗೆ ದಾರಿದೀಪ ಅಳವಡಿಕೆ 21. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ , ಭದ್ರಾವತಿ ಸ್ಥಾಪನೆ 22. ಸೈಂಟ್ ಫಿಲೋಮಿನಾ ಚರ್ಚ್ ಸ್ಥಾಪನೆ 23. ಲಲಿತ ಮಹಲ್ ಪ್ಯಾಲೇಸ್ ಸ್ಥಾಪನೆ 24. ಹಿರೇಭಾಸ್ಕರ ಅಣೆಕಟ್ಟು ಶರಾವತಿ ನದಿಯಲ್ಲಿ ಸ್ಥಾಪನೆ 25. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಹಾಗೂ ವಿಧವಾ ಹುಡುಗಿಯರಿಗೆ ಸ್ಕಾಲರ್ಶಿಪ್ 26. ಬಾಲ್ಯವಿವಾಹ ನಿಷೇಧ 27. ವಿಶ್ವೇಶ್ವರಯ್ಯ ಕಾಲುವೆ ಸ್ಥಾಪನೆ 28. ಮೈಸೂರು ರೆಸಿಡೆನ್ಶಿಯಲ್ ಕೃಷಿ ಶಾಲೆ ಸ್ಥಾಪನೆ 29. ಮೈಸೂರು ಸೋಶಿಯಲ್ ಪ್ರೋಗ್ರೆಸ್ ಅಸೋಸಿಯೇಷನ್ ಸ್ಥಾಪನೆ  30. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜ್ , ಮೈಸೂರು ಸ್ಥಾಪನೆ 31. ವುಡ್ ಡಿಸ್ಟಿಲ್ಲೇಶನ್ ಫ್ಯಾಕ್ಟರಿ , ಭದ್ರಾವತಿ ಸ್ಥಾಪನೆ 32. ಮೈಸೂರ್ ಕ್ರೋಮ್ ಮತ್ತು ಟ್ಯಾನಿಂಗ್ ಫ್ಯಾಕ್ಟರಿ 33. ಸರ್ಕಾರಿ ವಿಜ್ಞಾನ ಕಾಲೇಜು , ಬೆಂಗಳೂರು 34. ಕೃಷ್ಣರಾಜನಗರ ಟೌನ್ ಸ್ಥಾಪನೆ 35. ಕೃಷ್ಣ ರಾಜೇಂದ್ರ ಆಸ್ಪತ್ರೆ ಮೈಸೂರು , ಸ್ಥಾಪನೆ 36. ಸಮಾಜದ ಜ್ಞಾನಿಗಳ ಜ್ಞಾನವನ್ನು ಸರ್ಕಾರದ ಉಪಯೋಗಕ್ಕೆ ಬಳಸಿಕೊಳ್ಳಲು ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್ ಸ್ಥಾಪನೆ 37. ದೇಶದಲ್ಲಿ ಮೊಟ್ಟಮೊದಲ ಮೈಸೂರು ಬಾಯ್ಸ್ ಸ್ಕೌಟ್ಸ್ ಸ್ಥಾಪನೆ 38. ಸರ್ಕಾರಿ ಶ್ರೀಗಂಧದ ಎಣ್ಣೆಯ ಫ್ಯಾಕ್ಟರಿ ಸ್ಥಾಪನೆ 39.ಚೇಂಬರ್ ಆಫ್ ಕಾಮರ್ಸ್ , ಮೈಸೂರು 40. ಮೈಸೂರು ಶುಗರ್ ಮಿಲ್ಸ್ , ಮಂಡ್ಯ 41. ಮೈಸೂರ್ ಲ್ಯಾಂಪ್ಸ್ , ಬೆಂಗಳೂರು 42. ಮೈಸೂರ್ ಪೇಪರ್ ಮಿಲ್ಸ್ ,

**

G P Rajaratnam interviwing D V Gundappa


***





ಈ ಜಗದ್ವಿಖ್ಯಾತ ಫೋಟೋವನ್ನು ಸೆರೆಹಿಡಿದ ಛಾಯಾಗ್ರಾಹಕ ಏನಾದ ಗೊತ್ತೇ


ಸಂದೇಶ ಇ-ಮ್ಯಾಗಝಿನ್: ಈ ಫೋಟೋ ಬಹಳ ಫೇಮಸ್, ನೀವು ಈ ಮೊದಲು ಈ ಫೋಟೋವನ್ನು ಎಲ್ಲಾದರೂ ನೋಡಿಯೇ ಇರುತ್ತೀರಿ. ಹಸಿವಿನಿಂದ ನರಳುತ್ತಿದ್ದ ಆಫ್ರಿಕನ್ ಸಣ್ಣ ಬಾಲಕಿ ಮತ್ತು ತನ್ನ ಆಹಾರಕ್ಕಾಗಿ ಆಕೆ ಸಾಯುವುದನ್ನು ಪಕ್ಕದಲ್ಲೇ ಕಾದು ಕುಳಿತಿದ್ದ ಒಂದು ರಣಹದ್ದು ಈ ಫೋಟೋದಲ್ಲಿ ಇದೆ.

‘ದಿ ವಲ್ಚರ್ ಆಂಡ್ ದಿ ಲಿಟ್ಟಲ್ ಗರ್ಲ್’ ಹೆಸರಿನ ಈ ಫೋಟೋವನ್ನು 1993ರಲ್ಲಿ ಸುಡಾನಿನಲ್ಲಿ ಭೀಕರ ಬರಗಾಲದ ಸಮಯದಲ್ಲಿ ಸೌತ್ ಆಫ್ರಿಕಾದ ಖ್ಯಾತ ಫೋಟೋ ಜರ್ನಲಿಸ್ಟ್ ಕೆವಿನ್ ಕಾರ್ಟರ್ ಅವರು ಸೆರೆಹಿಡಿದಿದ್ದರು.
ಫೋಟೋದಲ್ಲಿ ಕಾಣುವ ಆ ಆಫ್ರಿಕನ್ ಬಾಲಕಿ ಹಸಿವನ್ನು ತಾಳಲಾರದೆ ಸಮೀದಲ್ಲೇ ವಿಶ್ವಸಂಸ್ಥೆ ಸ್ಥಾಪಿಸಿದ ಗಂಜಿ ಕೇಂದ್ರಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಳು. ಆದರೆ ಬಹಳ ದಿನಗಳಿಂದ ಆಹಾರವಿಲ್ಲದೆ ಕಾಲುಗಳ ಚಲನಾ ಶಕ್ತಿ ನಶಿಸಿ ಆ ಪುಟ್ಟ ಮಗು ತೆವಳಿಕೊಂಡು ಹೋಗಲು ಪ್ರಯತ್ನಿಸುತ್ತಿತ್ತು. ಆದರೆ ಆ ಮಗು ಅಂದು ಗಂಜಿ ಕೇಂದ್ರವನ್ನು ತಲುಪಿತಾ ಅಥವಾ ಅಲ್ಲೇ ಸತ್ತು ರಣ ಹದ್ದುವಿಗೆ ಆಹಾರವಾಯಿತಾ ಎಂಬುದು ಇವತ್ತಿಗೂ ಪ್ರಶ್ನೆಯಾಗಿಯೇ ಉಳಿದಿದೆ.
ಈ ಫೋಟೋಗಾಗಿ ಕೆವಿನ್ ಕಾರ್ಟರ್ ರವರಿಗೆ 1993ರಲ್ಲಿ ಪುಲಿಟ್ಜರ್ ಪ್ರಶಸ್ತಿ ಕೂಡ ಲಭಿಸಿತ್ತು. ಆದರೆ ಕೆವಿನ್ ಮಾತ್ರ ಈ ಪುರಸ್ಕಾರದಿಂದ ಖುಷಿ ಪಡಲೇ ಇಲ್ಲ. ಇದಾಗಿ ಕೆಲವೇ ತಿಂಗಳಲ್ಲಿ ಆಗ 33 ವರ್ಷ ಪ್ರಾಯದವರಾಗಿದ್ದ ಕೆವಿನ್ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡರು.
ಇಲ್ಲಿ ನಡೆದದ್ದೇನೆಂದರೆ, ಕೆವಿನ್ ಕಾರ್ಟರ್ ಅವರಿಗೆ ಈ ಫೋಟೋಗೆ ಪುಲಿಟ್ಜರ್ ಪ್ರಶಸ್ತಿ ಬಂದಾಗ ಅವರಿಗೆ ದೇಶ ವಿದೇಶಗಳಿಂದ ಪತ್ರಗಳು ಫೋನ್ ಕಾಲ್‌ಗಳು ಬರಲು ಪ್ರಾರಂಭಿಸಿದ್ದವು. ಟಿವಿ ಮಾಧ್ಯಮಗಳಲ್ಲೂ ಈ ವಿಷಯ ಚರ್ಚೆ ನಡೆಯುತ್ತಿತ್ತು.
ಅವತ್ತು ಅವರಿಗೆ ಬಂದ ಒಂದು ಸಂದರ್ಶನದ ಫೋನ್ ಕರೆಯಲ್ಲಿ ವ್ಯಕ್ತಿಯೊಬ್ಬರು ‘ನಂತರ ಆ ಮಗುವಿಗೆ ಏನಾಯಿತು?’ ಅಂತ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಕೆವಿನ್ ‘ಇಲ್ಲ ನನಗೆ ಗೊತ್ತಿಲ್ಲ! ಅವತ್ತು ನನಗೆ ವಿಮಾನಕ್ಕೆ ಸಮಯವಾಗಿದ್ದ ಕಾರಣ ನಾನು ಬೇಗ ಅಲ್ಲಿಂದ ಹೊರಟೆ!’ ಎಂದರು. ಕೆವಿನ್ ಉತ್ತರವನ್ನು ಕೇಳಿ ಆ ಕಡೆಯ ವ್ಯಕ್ತಿ ‘ನನ್ನ ಪ್ರಕಾರ ಆ ದಿನ ಅಲ್ಲಿ ಎರಡು ರಣಹದ್ದುಗಳಿದ್ದವು. ಒಂದರ ಕೈಯಲ್ಲಿ ಕ್ಯಾಮರಾ ಇತ್ತು.’ ಎಂದು ಹೇಳಿ ಫೋನ್ ಕಾಲ್ ಕಟ್ ಮಾಡಿದರು.
ಆ ವ್ಯಕ್ತಿ ಹೇಳಿದ ಆ ಮಾತು ಕೆವಿನ್ ಮನಸ್ಸಿಗೆ ಎಷ್ಟು ನಾಟಿತೆಂದರೆ, ಆ ಮಗುವನ್ನು ರಕ್ಷಿಸಲು ನನ್ನಿಂದ ಆಗಲಿಲ್ಲವಲ್ಲ ಎಂಬ ದುಃಖದಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಕೆವಿನ್ ಕೆಲವೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು.
ಈ ಘಟನೆ ಸ್ಮಾರ್ಟ್ ಫೋನ್ ಯುಗದಲ್ಲಿ ಜೀವಿಸುತ್ತಿರುವ ನಮ್ಮ ತಲೆಮಾರಿಗೂ ಪ್ರಸ್ತುತ. ಇವತ್ತು ಅಪಘಾತ ಅಥವಾ ಇನ್ನೇನಾದರೂ ಅವಘಡ ಸಂಭವಿಸಿದರೆ, ಅಪಘಾತ ನಡೆದ ವ್ಯಕ್ತಿಯನ್ನು ಬದುಕಿಸಲು ಜನರಿರುವುದಿಲ್ಲ. ಆದರೆ ಫೋಟೋ ಕ್ಲಿಕ್ಕಿಸಿ ವಾಟ್ಸಾಪ್‌ಗೆ ಹಂಚಲು ಎಷ್ಟು ಜನರಿದ್ದಾರೆ ಅಲ್ಲವೆ..? ಮಾನವೀಯತೆ ಸತ್ತ ಸಮಾಜವನ್ನು ನಾಗರಿಕ ಸಮಾಜ ಅಂತ ಕರೆಯಲು ಸಾಧ್ಯವೇ ಇಲ್ಲ.
************

Mr Gandhi, born with Silver Spoon in Mouth, Current Congress President with no basic knowledge of equity, shares, market capital and IT companies, said to show a single company which started from scratch.

Here is a list .

●in 1981 7 engineers started a company knwon as Infosys Now is the 2nd Biggest IT company of India with a total asset value of 12.5 billion $ and employees around 2.25 lakh people.

● 1977 A petrol pump Attendant started a company known as Reliance today is net worth 120.5 billion $, employees 2.73 lakh people.

● L&T started it's operation in 1938, total assests.34 Billion $ and 1.1 lakh employee.

●In 1976 Shiva Nadar started HCL technologies , now a market capital of 18.7 billion $ 

● In 1945 JC Mahindra and KC Mahindra started Mahindra from scratch  and now its revenue only is 14 billion$ and 58000 employee.

● in 1994 HDFC started its operation and now is the largest bank of India in Market Capital and employee 98000.

●In 1946 Tribhvan Das Patel started Amul From scratch and now a networth of approx 8 billion $

●in 1942 Aman Jain Started Asian Paints from scratch.

● in 1946 K.M Mammen Mappiali Started MRF , Madras rubber factory.

●TCS started its operation 1968 from scratch way before Rajiv Gandhi bought Computers in India (as fake spread by Congress., Now TCS is the biggest IT company of India.

●Lijjat, Haldiram, And Many More.
******

Krishnamurthy Ella Bharat Bioteck founder

On the border between Tamilnadu and erstwhile Andhra , lies the temple town of Thiruthani, one of the six famed abodes of Lord Muruga.  Krishnamurthy Ella was born in 1969, in an agricultural family to middle class parents. No one could have imagined his trajectory.
Perhaps because of his background, Krishna wanted to study agriculture. His father wasn’t pleased - he told his son “Nobody becomes a farmer by just studying agriculture” . Unfazed, Krishna joined University of Agricultural sciences in Bangalore. His passion and hardwork earned him a gold medal. Unlike “ordinary” gold medalists, he wasn’t content to get a job. Nevertheless he supported himself after undergrad by working briefly in the agricultural division of Bayer Pharma.  He longed for more. He got a rotary scholarship which enabled him  to move to the US, to do his PhD in University of Wisconsin. The scholarship was the wind under his wings. There was no looking back.
 His speciality was molecular biology.
While in the US, he met Suchitra, an economics graduate and married her. 
Average Indians in US would dream of a green card for themselves. Dr Krishna dreamt for millions of people - freedom from diseases. His solution - low cost vaccine for neglected diseases.
He wanted his dreams to become reality in India. He started Bharat Biotech in Hyderabad in the newly formed Genome Valley. The first product was caesium free Hepatitis B vaccine - the first in the world. His work caught the attention of Bill& Melinda Gates foundation - whose funds enabled Bharat Biotech to develop Rotavirus vaccine and conjugate Typhoid vaccine - again for the first time in the world. 
It took 16 long years to make the rotavirus vaccine a reality. The vaccine costs 85 dollars in the western world, but Krishna had brought its price down to an astounding 1 dollar ! The vaccines are available in 70 countries and Dr Krishna and team have 140 patents to their name.
Then covid happened.
The race for the vaccine started. The virus was new. No one knew what would work for sure - and everyone was hedging bets. Meanwhile, Adar Poonawalla , the billionaire CEO of the world’s largest vaccine manufacturing company was in talks with Oxford and Astra for manufacturing a adenovirus vaccine. Half a dozen companies from India tried, but realistically our collective fate depended on these two men. 
They couldn’t have been more different. Poonawalla was a born billionaire, young and dashing, dressed in immaculate tuxedos, driving luxury cars and flying private jets to London. Krishna was a scientist from a family of farmers, a salt of the earth man who had risen through sheer hardwork and grit.
The global race to develop a vaccine had many approaches simultaneously. It’s a little like betting on many horses at the same time. Krishna realised that the vaccines should not just be safe and effective, but also practical. That meant no difficult storage conditions. 
So mRNA vaccines were out. The adenovirus vaccines trick the body into believing that it has infection by sending just the spike protein the virus uses to enter the cell. The immune system once primed, remembers this and when the real virus attacks, is able to protect us. There was one glitch - the protection wasn’t full, at least in the early stages when they tested in chimpanzees . Krishna toyed with the idea of modified rabies virus as a vector, but it didn’t work out. His projects with University of Wisconsin , his alma mater and Thomas Jefferson Institute too didn’t yield much results.
When the rest of the world went for cutting edge mRNA tech, Dr Krishna decided to go the retro route. Sometimes, old is gold. And he struck gold with the killed virus vaccine , developed in association with ICMR. 
It had to be tested though - initially in mice and guineapigs and then in humans. There were numerous struggles in phase 1 and 2 trials. This was a race against time. Corona was killing people. The previous vaccine had taken long years of research. Will covaxin work? Will it be safe? Were the foremost questions in everyone’s mind.
With the help of  India’s virologists , they shortened the testing phase. They gave the vaccine to volunteers and in 28 days - their blood sample was taken. It was tested in a high biosafety lab with the deadly virus. If the vaccine had worked, the antibodies in the blood sample, would neutralise the virus and there won’t be any growth. 
To their ecstasy, the vaccine worked brilliantly. At long last, he had developed a vaccine that was made in India, but for the world.
Covaxin was born.
Amazingly, Krishna Ella had achieved this without a single rupee from the government !There were further struggles ahead - in human testing.  The pandemic had created a virtual Babel of tongues, magnified a million times by social media - with every Tom, Dick and Harry raising doubts about the vaccine in every stage.  Indian regulatory authorities were sane for once - they expedited the process.
India became the only third world country to develop a vaccine. With the Vaccine Maitri initiative, it gave vaccines to many countries. It was an incredible achievement.
In the 60s, President Kennedy announced that America will put a man on the moon within a decade - eventhough no one knew how. It came to be known as the “moonshot”. Covaxin is India’s moonshot moment or perhaps a “coroshot” moment, achieved not in a decade, but within one year.  It’s our own success in the war against an invisible foe. The fruits of this victory, will be shared - with the poorest of countries. 
They say, seeing is believing. Great men reverse this adage. They believe  with such intensity that they bring to life and see what they believe. Believing is seeing. 
As I write this, I remember Soorarai Potru, a Tamil movie that chronicles the tale of a man who dreamed of the skies. Dr Krishna Ella’s story is even more audacious. It’s a story how a farmer’s son from Thirutani became a scientist and rose up to the biggest challenge of our lifetime. It’s  also the story of how India metamorphosed from a bystander to  a vaccine superpower.
Jai Hind.
©️KarthikBalachandran
PS: I hope someone makes this movie, once we crush the second wave.
******

 ಹಿರೇಮಗಳೂರು ಕಣ್ಣನ್ ಒ೦ದು ಸಮಾರ೦ಭದಲ್ಲಿ ತಿಳಿಸಿದ್ದು ಹೀಗೆ


ಗಂಡ ಹೆಂಡತಿ ಎಷ್ಟೇ ವಯಸ್ಸಾದರೂ ಅವರ ಪ್ರೀತಿ ಬೆಳೆಯುತ್ತಲೇ ಹೋಗುತ್ತದೆ !
ಎಂಭತ್ತು ವರುಷದ ಮುದುಕಿ ತೊಂಭತ್ತರ ಗಂಡನಿಗೆ  ಹೇಳುತ್ತಾಳೆ :
   " ಈ ದಾಂಪತ್ಯಯಾನದಲಿ
     ಎನ್ನ ಕೈ ಪಿಡಿದವರು
     ಹಿಡಿದ ಕೈ ಬಿಡದವರು
     ನೀವಲ್ಲವೇ ನನ್ನ ದೊರೆ ನೀವಲ್ಲವೇ !
           ಹಬ್ಬಗಳು  ಬಂದಾಗ
           ಹೊಸಪಂಚೆ ನಿಮಗಿರಲಿ, ಇರದಿರಲಿ
           ನಾ ಹಳೆ ಸೀರೆ ಉಟ್ಟಾಗ
           ಬಿಟ್ಟುಬಿಡು  ಎಂದವರು
           ಸಾಕುಬಿಡು ಎಂದವರು
           ಹೊಸಸೀರೆ ಕೊಟ್ಟವರು,
           ಮಲ್ಲಿಗೆಯನಿತ್ತವರು,
           ನೀವಲ್ಲವೇ ನನ್ನ ದೊರೆ ನೀವಲ್ಲವೇ ?
    ಮತ್ತೆ ನಾ  ತವರೂರು ಹೊರಟಾಗ
    ಬಾಗಿಲಬಳಿ  ಬಂದವರು‌
    ಬೇಗ ಬಾ  ಎಂದವರು
    ನೀವಲ್ಲವೇ ನನ್ನ ದೊರೆ  ನೀವಲ್ಲವೇ
          ಮತ್ತೆ  ಫೋನುಗಳ ಮಾಡುತ್ತ ,
          ಮನೆಯೊಳಗೆ ನೀನಿಲ್ಲ
          ಬಳೆಗಳ ಸದ್ದಿಲ್ಲ , ಬಾಯಿಗೆ ರುಚಿಯಿಲ್ಲ
          ಬೇಗನೆ ಬರುವೆಯಲ್ಲ  ಎಂದವರು
          ನೀವಲ್ಲವೇ, ನನ್ನ ದೊರೆ ನೀವಲ್ಲವೇ ? "
ಅದಕ್ಕೆ  ಗಂಡ ಹೇಳ್ತಾನೆ !
       " ಬೇರಿಲ್ಲದೆ ಮರವೆಲ್ಲಿದೆ
         ಮರವಿಲ್ಲದೆ ಹೂವೆಲ್ಲಿದೆ
         ಹೂವಿಲ್ಲದೆ ಹಣ್ಣೆಲ್ಲಿದೆ
         ನೀನಿಲ್ಲದ ಮನೆ ಯಾರಿಗೆ ಬೇಕಾಗಿದೆ ?
ಎಂತಹ ಹೃದಯಸ್ಪರ್ಶಿ ಮಾತು !....
           "  ಮನೆಯೊಳಗೆ ಬಂದವಳೇ ,
              ಮನೆಯಾಕೆ ಆದವಳೇ,
              ಮನದೊಳಗೆ ನಿಂದವಳೇ,
             ನೀನಲ್ಲವೇ ನನ್ನರಸಿ ನೀನಲ್ಲವೇ ?
      ಬಡತನವೊ ,ಸಿರಿತನವೊ ,
      ಕಷ್ಟನಷ್ಟಗಳಲಿ ಎನ್ನ ಜೊತೆ ಬಂದವಳು !
      ಜೊತೆಯಾಗಿ ನಿಂದವಳು
      ನೀನಲ್ಲವೇ ನನ್ನರಸಿ ನೀನಲ್ಲವೇ ! "
ಮತ್ತೆ ಕೊನೆಗೆ  ಆ ಮುದುಕ ಒಂದು ಮಾತು ಹೇಳುತ್ತಾನೆ !
         "  ವೃದ್ಧಾಪ್ಯ ಬಂದಾಗ
            ಆರೋಗ್ಯ ಹೋದಾಗ ,
            ಆದಾಯ ಇರದಾಗ ,
            ಹಣವೆಲ್ಲ ಸವೆದಾಗ‌ ,
            ಬಂಧುಗಳು  ಬರದಾಗ ,
            ಮಕ್ಕಳು ಮರೆತಾಗ ,
            ನಾ ಒಳಗೊಳಗೆ ಅತ್ತಾಗ ,
            ಬಳಿ ಬಂದು ನಿಂದವಳು ,
            ಮರುಗದಿರಿ ಅಂದವಳು ,
            ಕಣ್ಣೀರ ತಡೆದವಳು ,
            ಯಾರಿರಲಿ, ಇರದಿರಲಿ ,
           ನಾನಿಲ್ಲವೇ ನಿಮ್ಮ ಜೊತೆ , ಎಂದವಳು ,
           ನೀನಲ್ಲವೇ ನನ್ನರಸಿ ನೀನಲ್ಲವೇ !
     
    ಇದು  ನಮ್ಮ ಭಾರತೀಯ ಸಂಸ್ಕೃತಿ !
******



ಆರಂಕುಶಮಿಟ್ಟೊಡಂ ನೆನವುದೇನ್ನಮನಂ ಬನವಾಸಿ ದೇಶಮಂ  ಅಂದೊಡನೆ ನಮಗೆ ನೆನಪಾಗುವುದು ಆದಿ ಕವಿ ಪಂಪ. ಹಾಗೇ ನೀರಿಳಿಯದ ಗಂಟೆಲೊಳ್ ಕಡುಬಂ ತುರುಕಿದಂತಾಯತ್ತು, ಕತ್ತೂರಿಯಲ್ತೆ, ಪದ್ಯo, ಹೃದ್ಯo, ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು, ಸಪ್ತಾಕ್ಷರೀ ಮಂತ್ರ ಮುಂತಾದ ಮಾತುಗಳನ್ನು ಕೇಳಿದಾಗ ನಮಗೆ ನೆನಪಾಗುವುದು ಕನ್ನಡ ಹೊಸ ಸಾಹಿತ್ಯದ ಮುಂಗೋಳಿ ಎಂದೇ ಹೆಸರಾಗಿದ್ದ ಮುದ್ದಣ್ಹ(ನಂದಳಿಕೆ ಲಕ್ಷೀನಾರಾಯಣ, ಉಡುಪಿ ಜಿಲ್ಲೆ ) ಹೊಸಗನ್ನಡದ ಆದ್ಯ ಕವಿಗಳಲ್ಲಿ ಪ್ರಮುಖರು. ತನ್ನ ಮುದ್ದಿನ ಮಡದಿಯನ್ನು ಹಲವು ಹೆಸರುಗಳಿಂದ (ಶ್ರೀ ರಾಮೇಶ್ವಮೇಧ ಕೃತಿಯಲ್ಲಿ ) ಕರೆಯುತಿದ್ದ ಈ ಕವಿಯ ಜನ್ಮದಿನದಂದು (24.1.1870-16.2.1901)ಇಷ್ಟೆಲ್ಲಾ ನೆನಪಿಸಿಕೊಳ್ಳಲು ಸಂತಸ ಎನಿಸುತ್ತದೆ.

*******


5 December at 20:20 · 

ಟಿ. ಎನ್. ಸೀತಾರಾಂ

ಸದಭಿರುಚಿ, ಸೃಜನಶೀಲತೆ, ಜನಪ್ರಿಯತೆ, ಪ್ರಗತಿಪರ ಚಿಂತನೆ, ಪ್ರಯೋಗಶೀಲತೆ ಇವೆಲ್ಲ ಒಟ್ಟಿಗೆ ಮೇಳೈಸಲು ಸಾಧ್ಯವೇ ಎಂಬ ಪ್ರಶ್ನೆಗೆ ನಮ್ಮ ಕನ್ನಡಿಗರ ರೆಡೀಮೇಡ್ ಉತ್ತರವಾಗಿ ಸದಾ ನೆನಪಿಗೆ ಬರುವವರು ಕಿರುತೆರೆಯ ಮೂಲಕ ಮನೆ ಮನೆಗಳ, ಮನಗಳ ಆಪ್ತ ಮಾತಾಗಿರುವ ಟಿ. ಎನ್. ಸೀತಾರಾಂ.

ತಳಗವಾರ ನಾರಾಯಣರಾವ್ ಸೀತಾರಾಂ ಅವರು ಜನಿಸಿದ್ದು ಡಿಸೆಂಬರ್ 6, 1948ರ ವರ್ಷದಲ್ಲಿ. ಇಂದು ಕಿರುತೆರೆಯ ಧಾರಾವಾಹಿಗಳ ನಿರ್ಮಾಣ ಮತ್ತು ನಿರ್ದೇಶನಗಳ ಮೂಲಕ ಜನಪ್ರಿಯರಾಗಿರುವ ಅವರು ಪತ್ರಕರ್ತ, ಕತೆಗಾರ, ನಾಟಕಕಾರ, ಚಿತ್ರ ನಟ, ಚಿತ್ರ ನಿರ್ದೇಶಕರಾಗಿಯೂ ಛಾಪು ಹರಡಿಕೊಂಡವರು. ಮೂಲತಃ ಗೌರಿಬಿದನೂರಿನವರಾದ ಸೀತಾರಾಂ ಅವರ ಹೆಸರಿನ ಪ್ರಾರಂಭದಲ್ಲಿರುವ ‘ತಳಗವಾರ’ ಅವರ ತಂದೆಯವರ ಸ್ಥಳ. ತಂದೆಯವರು ನಾರಾಯಣರಾಯರು ಮತ್ತು ತಾಯಿ ಸುಂದರಮ್ಮನವರು. ಕೃಷಿಯನ್ನಾಶ್ರಯಿಸಿದ ಕುಟುಂಬ ಅವರದ್ದು. ಪ್ರಾರಂಭಿಕ ವಿದ್ಯಾಭ್ಯಾಸವನ್ನು ದೊಡ್ಡಬಳ್ಳಾಪುರದ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಸೀತಾರಾಂ ಮುಂದೆ ಬೆಂಗಳೂರು ನ್ಯಾಷನಲ್ ಕಾಲೇಜಿನ ವಿದಾರ್ಥಿಯಾದರು. ಬಿ.ಎಸ್ಸಿ, ಬಿ.ಎಲ್ ಓದಿದ ಅವರು ತಾವು ತಮ್ಮ ಹಲವು ಧಾರಾವಾಹಿಗಳಲ್ಲಿ ಕಂಡಂತೆಯೇ ನ್ಯಾಯವಾದದ ಕಾಯಕವನ್ನು ಒಂದಷ್ಟು ನಡೆಸಿದರಾದರೂ, ಆಂತರ್ಯದ ತುಡಿತ ಅವರನ್ನು ಬರಹಗಾರನನ್ನಾಗಿಸಿತು. ಲೋಹಿಯಾ ತತ್ತ್ವಗಳನ್ನು ನಂಬಿದವರಾದ ಸೀತಾರಾಂ, ತಮ್ಮ ಬದುಕು ಮತ್ತು ಕಾರ್ಯ ಕ್ಷೇತ್ರಗಳೆಲ್ಲದರಲ್ಲಿ ಉತ್ತಮ ಸ್ವಾಸ್ಥ್ಯ ಕಾಪಾಡಿಕೊಂಡು ಬಂದ ಅಪೂರ್ವ ವ್ಯಕ್ತಿತ್ವದವರು.

1969ರ ಸುಮಾರಿನಲ್ಲಿ ಟಿ. ಎನ್. ಸೀತಾರಾಂ ಅವರ ಪ್ರಥಮ ಬರಹ ಪ್ರಕಟಗೊಂಡಿತು. ಸಣ್ಣಕತೆ ಮತ್ತು ನಾಟಕ ಪ್ರಕಾರಗಳಲ್ಲಿ ಚಿಗುರಿದ ಅವರ ಪ್ರಥಮ ನಾಟಕ ‘ಯಾರಾದರೇನಂತೆ?’. ನಂತರದ ದಿನಗಳಲ್ಲಿ ಮೂಡಿ ಬಂದಿದ್ದ ‘ಮನ್ನಿಸು ಪ್ರಭುವೆ’. ಈ ಎರಡೂ ನಾಟಕಗಳು ಅವರಿಗೆ ಹೆಸರು ಮತ್ತು ಪ್ರಶಸ್ತಿಗಳನ್ನು ತಂದಿತು. ಮುಂದೆ ಬಂದ ಅವರ ಆಸ್ಫೋಟ, ನಮ್ಮೊಳಗೊಬ್ಬ ನಾಜೂಕಯ್ಯ ನಾಟಕಗಳು ನೂರಾರು ಪ್ರಯೋಗಗಳನ್ನು ಕಂಡು ಜನಪ್ರಿಯಗೊಂಡಿವೆ. ಈ ನಾಟಕಗಳು ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳಿಗೆ ಅನುವಾದಗೊಂಡಷ್ಟು ವ್ಯಾಪ್ತಿ ಪಡೆದಂತಹವು. 300ಕ್ಕೂ ಹೆಚ್ಚು ಯಶಸ್ವೀ ಪ್ರಯೋಗ ಕಂಡ ‘ಆಸ್ಪೋಟ’ ನಾಟಕ, ರಾಜ್ಯ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಪಾತ್ರವಾದ ಕೃತಿಯೂ ಹೌದು. ಅದು ಬೆಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯವಾಗಿ, ದೂರದರ್ಶನದ ಟೆಲಿ ಧಾರಾವಾಹಿಯಾಗಿ ಸಹಾ ಹೆಸರಾಗಿತ್ತು. ನಮ್ಮೊಳಗೊಬ್ಬ ನಾಜೂಕಯ್ಯ ನಾಟಕವೂ ಕೂಡ ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ನಾಟಕ ಅಕಾಡೆಮಿಯ ಪ್ರಶಸ್ತಿಗಳಿಗೆ ಪಾತ್ರವಾದ ಕೃತಿ.

ಸೀತಾರಾಂ ಅವರ 22 ಸಣ್ಣ ಕತೆಗಳು ಪ್ರಕಟವಾಗಿವೆ. ಅವುಗಳಲ್ಲಿ ಕ್ರೌರ್ಯ ಸಣ್ಣ ಕತೆಯನ್ನು ಅದೇ ಹೆಸರಿನಲ್ಲಿ ಗಿರೀಶ್ ಕಾಸರವಳ್ಳಿಯವರು ಚಲನಚಿತ್ರವನ್ನಾಗಿ ನಿರ್ಮಿಸಿದ್ದರು. ಆ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು.

ಎಲ್ಲೆಲ್ಲಿಯೂ ಸಂದ ಸೀತಾರಾಂ ರಂಗಭೂಮಿ, ಚಲನಚಿತ್ರ, ಕಿರುತೆರೆಯ ನಟರಾಗಿಯೂ ಸಾಕಷ್ಟು ಹೆಸರು ಮಾಡಿದವರು. ಆದ್ದಾಗ್ಯೂ ಪಿ. ಲಂಕೇಶರನ್ನು ಗುರುಗಳನ್ನಾಗಿ ಭಾವಿಸಿದ್ದ ಸೀತಾರಾಂ, ಲಂಕೇಶರ ಮಾರ್ಗದರ್ಶನದಂತೆ ತಮ್ಮನ್ನು ವ್ಯಾಪಾರೀ ಚಲನಚಿತ್ರಗಳಲ್ಲಿ ಕಳೆದುಹೋಗದಂತೆ ಎಚ್ಚರವಹಿಸಿಕೊಂಡವರು. ಲಂಕೇಶ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಪಲ್ಲವಿ’ ಚಿತ್ರದ ನಾಯಕರಾಗಿ ಅಭಿನಯಿಸಿದ್ದ ಸೀತಾರಾಂ, ಆ ಚಿತ್ರಕ್ಕೆ ಲಂಕೇಶರೊಂದಿಗೆ ಚಿತ್ರಕತೆ ಮತ್ತು ಸಂಭಾಷಣೆ ರಚನೆಯಲ್ಲೂ ಕಾರ್ಯನಿರ್ವಹಿಸಿದ್ದರು.

ಸೀತಾರಾಂ ಪುಟ್ಟಣ್ಣ ಕಣಗಾಲರ ಮೂರು ಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆಗಳನ್ನು ರಚಿಸಿದ ಕೀರ್ತಿಗೆ ಪಾತ್ರರಾದವರು. ಪುಟ್ಟಣ್ಣನವರ ‘ಮಾನಸ ಸರೋವರ’ ಹಾಗೂ ಪಿ.ಎಚ್.ವಿಶ್ವನಾಥ್ ನಿರ್ದೇಶನದ ‘ಪಂಚಮವೇದ’ ಚಿತ್ರಗಳ ಸಂಭಾಷಣೆಗಾಗಿ ಇವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು. ಟಿ.ಎಸ್. ನಾಗಾಭರಣ ಅವರ ನಿರ್ದೇಶನದ ಆರ್. ಕೆ ನಾರಾಯಣ್ ಅವರ ಇಂಗ್ಲಿಷ್ ಕಾದಂಬರಿ ಆಧಾರಿತ ‘ಬ್ಯಾಂಕರ್ ಮಾರ್ಗಯ್ಯ’ ಚಿತ್ರಕ್ಕೂ ಸೀತಾರಾಂ ಅವರ ಸಂಭಾಷಣೆಯಿತ್ತು. 1991ರಲ್ಲಿ ಆ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿತು.

ಸೀತಾರಾಮ್ ನಿರ್ದೇಶಿಸಿದ ಮೊದಲ ಚಲನಚಿತ್ರ ಎಸ್. ಎಲ್. ಭೈರಪ್ಪನವರ ‘ಮತದಾನ’ ಕಾದಂಬರಿ ಆಧರಿಸಿದ ಅದೇ ಹೆಸರಿನ ಚಿತ್ರ. ಈ ಚಿತ್ರ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಭಾಷಾಚಿತ್ರವೆಂಬ ಮನ್ನಣೆ – ಪ್ರಶಸ್ತಿಗೆ ಪಾತ್ರವಾಯಿತು. ಅವರ ನಿರ್ದೇಶನದ ಮತ್ತೊಂದು ಸದಭಿರುಚಿಯ ಚಲನಚಿತ್ರ ‘ಮೀರಾ, ಮಾಧವ, ರಾಘವ’.

ಮುಂದಿನದು ಸೀತಾರಾಂ ಅವರು ಎಲ್ಲೆಲ್ಲೂ ಹೆಸರಾಗಿರುವ ಕಿರುತೆರೆಯ ಬೃಹತ್ ಕ್ಷೇತ್ರ. ಸೀತಾರಾಂ ಅವರು ಕಿರುತೆರೆಗೆ ನಿರ್ಮಿಸಿದ ಟಿ.ಪಿ. ಕೈಲಾಸಂ, ಆಸ್ಫೋಟ, ಮುಖಾಮುಖಿ, ಪತ್ತೇದಾರ ಪ್ರಭಾಕರ, ಕಾಲೇಜುತರಂಗ, ಎಲ್ಲ ಮರೆತಿರುವಾಗ, ನಾವೆಲ್ಲರೂ ಒಂದೇ, ದಶಾವತಾರ, ಕಾಮನಬಿಲ್ಲು, ಕತೆಗಾರ, ಜ್ವಾಲಾಮುಖಿ ಧಾರಾವಾಹಿಗಳು ಅತ್ಯಂತ ಮೆಚ್ಚುಗೆ ಗಳಿಸಿದಂತಹವು.

ಸೀತಾರಾಂ ಅವರು ಬೆಂಗಳೂರು ದೂರದರ್ಶನಕ್ಕಾಗಿ ನಿರ್ದೇಶಿಸಿದ ‘ಮಾಯಾಮೃಗ’ ಧಾರಾವಾಹಿ 435 ಕಂತುಗಳಲ್ಲಿ ಪ್ರಸಾರವಾಗಿ ಅತ್ಯಂತ ಜನಪ್ರಿಯಗೊಂಡಿದೆ. ಇಂದಿನ ದಿನಗಳಲ್ಲೂ ಪುನಃ ಪ್ರದರ್ಶನಗೊಳ್ಳುವಷ್ಟು ಜನಪ್ರಿಯ ಧಾರಾವಾಹಿ ಇದಾಗಿದೆ.

ಮುಂದೆ ಖಾಸಗಿ ವಾಹಿನಿಯಲ್ಲಿ 484 ಕಂತುಗಳಲ್ಲಿ ಪ್ರಸಾರಗೊಂಡು ಜನಪ್ರಿಯವಾದಂತಹವು ‘ಮನ್ವಂತರ’ ಮತ್ತು ‘ಮುಕ್ತ’ ಜನಪ್ರಿಯವಾದ ಧಾರಾವಾಹಿಗಳು. ಪ್ರಸಕ್ತದಲ್ಲಿ ಅವರ ‘ಮಗಳು ಜಾನಕಿ’ ಧಾರಾವಾಹಿ ಜನಪ್ರಿಯ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಗಳಲ್ಲಿನ ಚುರುಕಿನ ಸಂಭಾಷಣೆ, ಸಮಕಾಲೀನ ಸಮಸ್ಯೆಗಳನ್ನು ಚರ್ಚಿಸುವ ವಿಧಾನ ವೀಕ್ಷಕರನ್ನು ಸಾಮಾಜಿಕ ಸಮಸ್ಯೆಗಳತ್ತ ಗಂಭೀರವಾಗಿ ಚಿಂತಿಸುವಂತೆ ಮಾಡುವಲ್ಲಿ ಪರಿಣಾಮಕಾರಿಯಾಗಿವೆ. ಸೀತಾರಾಂ ಅವರು ನ್ಯಾಯಾಲಯದ ದೃಶ್ಯಗಳನ್ನು ಜೋಡಿಸುವ ವಿಧಾನ, ಜಾಣ್ಮೆಯ ಮಾತುಗಳು ಪ್ರಜ್ಞಾವಂತರಲ್ಲಿ ಸಹಾ ಸಂಚಲನೆಯನ್ನು ತರುವಂಥವು.

ಇಂದು ಕಲಾರಂಗದಲ್ಲಿರುವ ಅನೇಕರು ಟಿ.ಎನ್. ಸೀತಾರಾಂ ಅವರ ಗರಡಿಯಲ್ಲಿ ಬೆಳೆದಂತಹವರು. ತಾವಿರುವ ಸಮಾಜಕ್ಕೆ ಸದಭಿರುಚಿಯಲ್ಲಿ ಮತ್ತು ಸೃಜನಶೀಲತೆಯಲ್ಲಿ ಬದ್ಧರಾಗಿರುವ ನಮ್ಮ ಟಿ. ಎನ್. ಸೀತಾರಾಂ ಅವರ ಕಾರ್ಯ ನಮ್ಮ ಬದುಕನ್ನು ನಿರಂತರ ಪ್ರೇರಿಸುತ್ತಿರಲಿ ಮತ್ತು ಅವರ ಬದುಕು ಸುಂದರವಾಗಿರಲಿ ಎಂದು ಆಶಿಸುತ್ತ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು ಹೇಳೋಣ.

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)

*****


ಎಸ್. ಎಲ್. ಭೈರಪ್ಪ

ನಮ್ಮ  ಕಾಲದ  ಮಹಾನ್  ಕಾದಂಬರಿಕಾರರಾದ  'ಡಾ.ಎಸ್.ಎಲ್. ಭೈರಪ್ಪ'ನವರು ಜನಿಸಿದ್ದು 1931ರ ಆಗಸ್ಟ್ 20ರಂದು ಜನಿಸಿದರು.   

ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಇವೆರಡನ್ನೂ ಕಾಯ್ದುಕೊಂಡ ಅಪೂರ್ವ ಬರಹಗಾರರು.  1961ರಲ್ಲಿ ಜನಪ್ರಿಯವಾದ ಅವರ 'ಧರ್ಮಶ್ರೀ' ಕಾದಂಬರಿಯಿಂದ ಮೊದಲ್ಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ 'ಉತ್ತರಕಾಂಡ'ದವರೆಗೆ ಅವರ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರನ್ನು ಪಡೆದಿದ್ದು, ಜೀವನದ ವಿವಿಧ ಸ್ಥರಗಳ ಬಗೆಗೆ ಚಿಂತನೆ ಮಾಡುವಂತಹ ಬೃಹತ್ ಕಥಾನಕಗಳನ್ನು ಕನ್ನಡಿಗರಿಗೆ ನೀಡಿವೆ. ಅವರ ಪ್ರತಿ ಕಾದಂಬರಿಯೂ ಪುನರ್ ಮುದ್ರಣಗಳನ್ನು ಕಾಣುತ್ತಲೇ ಇರುವುದು ಅವರ ಜನಪ್ರಿಯತೆಗೆ ಅಷ್ಟೇ ಅಲ್ಲ, ಅವರ ಬರಹಗಳಲ್ಲಿನ ಸತ್ವದ ಸಾರ್ವಕಾಲಿಕತೆಯ ಪ್ರತೀಕವೂ ಆಗಿದೆ. ಭೈರಪ್ಪನವರ ಬರಹಗಳಲ್ಲಿ ಒಬ್ಬ ಶ್ರೇಷ್ಠ ಸಂಶೋಧನಕಾರನ ಸತ್ಯಾನ್ವೇಷಣೆ, ಇತಿಹಾಸದ ಬಗೆಗಿನ ಸುದೀರ್ಘ ಅಧ್ಯಯನ, ಭಾರತೀಯ ಸಂಸ್ಕೃತಿಯ ಆಳವಾದ ಪ್ರಜ್ಞೆಗಳು ವಿಶಿಷ್ಟವಾಗಿ ಕಂಗೊಳಿಸುತ್ತಿದ್ದು,  ಸಾಮಾನ್ಯ ಓದುಗನಿಗೆ ಅದರ ಅನುಭಾವದ ಸಿಂಚನ ನೀಡುವುದರ ಜೊತೆಗೆ  ವಿದ್ವಾಂಸರ ಮನಮೆಚ್ಚುಗೆಯನ್ನೂ ಪಡೆದಿವೆ.   

ಚನ್ನರಾಯಪಟ್ಟಣದ ಬಳಿಯ ಸಂತೆ ಶಿವರದಲ್ಲಿ ಜನಿಸಿದ ಸಂತೆ ಶಿವರದ ಭೈರಪ್ಪನವರು, ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರ ಈ ಎಲ್ಲಾ ಪ್ರತೀಕೂಲ ಸಂದರ್ಭಗಳ ನಡುವೆಯೂ ಸಣ್ಣವಯಸ್ಸಿನಿಂದಲೇ, ಅವರ  ‘ಗೃಹಭಂಗ’ ಕಾದಂಬರಿಯಲ್ಲಿ  ನಂಜಮ್ಮನ ಪಾತ್ರದಲ್ಲಿ ಕಾಣಬಹುದಾದ,  ತಮ್ಮ ತಾಯಿಯಲ್ಲಿದ್ದ  ಧೀಮಂತತೆಯನ್ನು ಮೈಗೂಡಿಸಿಕೊಂಡರು. ವಯಸ್ಸು 5ರ ಆಸು ಪಾಸಿನಲ್ಲಿ ಅವರ ತಾಯಿಯೂ ಬಡತನ - ಪ್ಲೇಗ್‍ಗಳಿಗೆ ಜೀವವನ್ನು ಬಿಟ್ಟುಕೊಟ್ಟಾಗ, ಬದುಕಿನ ವಿಶ್ವ ವಿಶಾಲತೆಯ ಈ ರಂಗದಲ್ಲಿ ತಮ್ಮ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಳ್ಳತೊಡಗಿದರು. ಅವರ ಗೃಹಭಂಗ, ಅನ್ವೇಷಣ ಕಾದಂಬರಿಗಳು ಮತ್ತು ಭಿತ್ತಿ ಎಂಬ ಅವರ ಆತ್ಮಚರಿತ್ರೆಯಲ್ಲಿನ ಅವರ ಬದುಕಿನ ಈ ಭಾಗಗಳನ್ನು ಓದುವುದೇ ಒಂದು ರೋಮಾಂಚನಕಾರಿ  ಅನುಭವ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಬರುವ ಕಷ್ಟಗಳನ್ನು ಅನುಭವಗಳನ್ನಾಗಿ ಪರಿವರ್ತಿಸಿಕೊಂಡು, ಇಡೀ ವ್ಯವಸ್ಥೆಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಬದುಕಬಹುದು  ಎಂಬುದಕ್ಕೆ ಭೈರಪ್ಪನವರ ಸಾಧನೆಗಳು ಒಂದು ಮಹಾನ್ ನಿದರ್ಶನವಾಗಬಲ್ಲವು.

ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಾವು ಹುಟ್ಟಿದ ಹಳ್ಳಿಯಲ್ಲಿ ಹಾಗೂ ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಭೈರಪ್ಪನವರು ಸಾಗಿಸಿದರು.  ಶುದ್ಧಮೌಲ್ಯಗಳ ದೃಷ್ಟಿಯಿಂದ ಗಾಂಧೀಜಿ ಒಬ್ಬರನ್ನೇ ಮಹೋನ್ನತ ನಾಯಕರೆಂದು ಪರಿಗಣಿಸುವ ಭೈರಪ್ಪನವರು ಕೇವಲ ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ಸ್ವಾತಂತ್ರ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೆಂಡದ ಲಾರಿಗಳನ್ನು ತಡೆದು ಪೋಲೀಸ್ ಸ್ಟೇಷನ್ನಿಗೆ ಹೋದವರೂ, ಭಾಷಣಗಳನ್ನು ಮಾಡಿದವರೂ ಆಗಿದ್ದಾರೆ.  

ಮೈಸೂರಿನ ಹಲವು ಹಾಸ್ಟೆಲುಗಳು ಮತ್ತು ಅಂದಿನ ಕೆಲವೊಂದು ಸಜ್ಜನರ ಕೃಪೆಗಳಲ್ಲಿ ಬದುಕು ಸಾಗಿಸಿದ ಎಸ್. ಎಲ್. ಭೈರಪ್ಪನವರು ಮೈಸೂರಿನ ಶಾರದ ವಿಲಾಸ  ಪ್ರೌಢಶಾಲೆಯಲ್ಲಿ ಓದಿದ ಮೇಲೆ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ 1957ರಲ್ಲಿ ಬಿ.ಎ. ಆನರ್ಸ್ ಪದವಿ ಗಳಿಸಿದರು.  1958ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯಲ್ಲಿ ಪ್ರಥಮ ಶ್ರೇಣಿಯ ಸಾಧನೆ ಮಾಡಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.  ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಿಂದ ‘ಸತ್ಯ ಮತ್ತು ಸೌಂದರ್ಯ’ ಎಂಬ ಇಂಗ್ಲಿಷಿನಲ್ಲಿ ರಚಿಸಿದ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿಗಳಿಸಿದರು.  ಎಂ. ಎ. ವಿದ್ಯಾಭ್ಯಾಸದ ನಂತರ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರದ ಅಧ್ಯಾಪಕರಾಗಿ, ಅನಂತರ 1960ರಿಂದ 1966ರವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.  1967ರಿಂದ 1971ರ ವರೆಗೆ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸಾ ವಿಷಯದಲ್ಲಿ ಉಪಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾಗಿ ತತ್ವಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ 1991ರಲ್ಲಿ ನಿವೃತ್ತರಾದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ, ನಾಡಿನಲ್ಲಿ ಸಾಮಾಜಿಕ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿರುವ ಡಾ. ಎಸ್. ಎಲ್. ಭೈರಪ್ಪನವರ ಹೆಚ್ಚಿನ ಆಸಕ್ತಿ ಕ್ಷೇತ್ರವೆಂದರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ.  ಅವರ ‘ಮಂದ್ರ’ ಕಾದಂಬರಿಯಲ್ಲಿ ಸಂಗೀತದ ಕುರಿತಾದ ಆಸಕ್ತಿಗಳ ಸುದೀರ್ಘ ವಿಸ್ತಾರವನ್ನೇ ಕಾಣಬಹುದು.  ಅವರು  ‘ಗಂಗೂಬಾಯ್ ಹಾನಗಲ್’ ಎಂಬ ಗ್ರಂಥದ ಸಂಪಾದನೆಯನ್ನು ಮಾಡಿದ್ದಾರೆ ಎಂಬುದನ್ನು ಕೂಡಾ ಇಲ್ಲಿ ಸ್ಮರಿಸಬಹುದಾಗಿದೆ.  

ಭೈರಪ್ಪನವರ ಕಾದಂಬರಿಗಳಲ್ಲಿ ಕಾಣುವ ಬದುಕಿನ ಪಾತ್ರಗಳು ಎಲ್ಲೆಲ್ಲೂ ನಮ್ಮ ಕಣ್ಣ ಮುಂದೆ ಕಾಣುತ್ತಿರುವ ವ್ಯಕ್ತಿಗಳ ಹಾಗೇ ಇರುತ್ತವೆ. ಇದು ಅವರ ಮಹಾಭಾರತವನ್ನು ಇಂದಿನ ಕಾಲಕ್ಕೆ ಹೊಂದಿಸಿ ನೋಡುವಂತಹ 'ಪರ್ವ' ಕಾದಂಬರಿಯಂತಹ ಪಾತ್ರಗಳಲ್ಲೂ ಕಾಣಬರುತ್ತವೆ. ಅವರ ಕಾದಂಬರಿಗಳ ಭಾಷೆಯಲ್ಲಿರುವ ಗ್ರಾಮೀಣ, ನಗರ ಮತ್ತು ಇತ್ತೀಚಿನ ಆಧುನಿಕತೆಯವರೆಗಿನ ವರಸೆಯ ಸೊಗಡುಗಳಂತೂ ನಮ್ಮನ್ನು ಅಪೂರ್ವ ರೀತಿಯಲ್ಲಿ ಹಿಡಿದಿಟ್ಟುಕೊಂಡುಕೊಂಡು ಬಿಡುತ್ತವೆ. ಅವರ ಪ್ರತಿಯೊಂದು ಕಾದಂಬರಿಯೂ ನಾವು  ಅದನ್ನು ತೆರೆದಾಗಿನಿಂದ ಅದನ್ನು ಓದು ಮುಗಿಸುವ ತನಕ ಕೆಳಗಿರಿಸಲು ಬಿಡುವುದೇ ಇಲ್ಲ. ಅಂತಹ ಭಾಷೆಯ ಸೊಗಸು, ಪಾತ್ರ ವ್ಯವಸ್ಥೆ ಮತ್ತು ಅಪೂರ್ವ ಕಥಾನಕಗುಣ ಅವರ ಬರಹಗಳಲ್ಲಿದೆ. ಇಷ್ಟು ತೀವ್ರವಾಗಿ ಓದುಗರನ್ನು ಆವರಿಸುವ ಕಥಾ ಶೈಲಿ, ಓದುಗರನ್ನು ಯಾವುದೋ ಭಾವುಕತೆ, ತಲ್ಲೀನತೆ, ಚಿಂತನೆಗೆ ಒಡ್ಡುವ ಮನೋಜ್ಞತೆ, ಸಾಹಿತ್ಯ ಲೋಕದಲ್ಲಿಯೇ ಅಪರೂಪವಾಗಿದ್ದು, ಈ ವಿಷಯಗಳಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ. 

ಆಧ್ಯಾತ್ಮ, ಮನಃ ಶಾಸ್ತ್ರ, ಮತ್ತು ತರ್ಕ ಶಾಸ್ತ್ರ, ಸಮಾಜ ಶಾಸ್ತ್ರ, ನ್ಯಾಯಮೀಮಾಂಸೆ, ಸೌಂದರ್ಯ ಮೀಮಾಂಸೆ, ಇತಿಹಾಸ, ವಿಜ್ಞಾನ, ರಾಜಕೀಯ ಘಟನೆಗಳು, ವೇದ ಪುರಾಣಗಳು ಇವು ನಮ್ಮ ಚಿಂತನೆಗಳಲ್ಲಿ ಹುಟ್ಟಿಸುವ ತಾದ್ಯಾತ್ಮಗಳು  ಮತ್ತು ಅವುಗಳು ವಿವಿಧ ಮನಸ್ಸುಗಳ ನಡುವೆ ತರುವ ಸಂಘರ್ಷಗಳನ್ನು ಓದುಗನ ಅನುಭಾವಕ್ಕೆ ತರುವ ಎಸ್. ಎಲ್. ಭೈರಪ್ಪನವರ  ಮೋಡಿಗೆ ಸಿಗದ ಓದುಗ ಮನಸ್ಸುಗಳೇ ಇಲ್ಲವೆನ್ನಬೇಕು. ಕನ್ನಡವಲ್ಲದೆ ಗುಜರಾತಿ, ಹಿಂದಿ, ಸಂಸ್ಕೃತ, ಮಲಯಾಳ, ತಮಿಳು, ತೆಲುಗು, ಇಂಗ್ಲೀಷ್ ಭಾಷೆಗಳಿಗೂ ತರ್ಜುಮೆಗೊಂಡ ಅವರ ಕೃತಿಗಳ ಸಾಲು ಸಾಲುಗಳು ಅವು ಹೇಗೆ ಭಾಷೆಯ ಗಡಿಯನ್ನೂ ದಾಟಬಲ್ಲವು ಎಂಬುದಕ್ಕೆ ಸಾಕ್ಷಿ.

ಭಾರತದಂತಹ ಹಲವು ಧರ್ಮಗಳ ಪರಂಪರೆಯ, ಮಾರ್ಕ್ಸ್, ಕಮ್ಯುನಿಸ್ಟ್, ಸಮಾಜವಾದ, ಪ್ರಜಾಪ್ರಭುತ್ವ, ಬಂಡವಾಳಶಾಹಿ, ಬಹು ರಾಜಕೀಯ ವ್ಯವಸ್ಥೆ, ಅಂತರರಾಷ್ಟ್ರೀಯ ಮಾರುಕಟ್ಟೆ ಪರಿಣಾಮ ಇತ್ಯಾದಿ ಹತ್ತು ಹಲವು ಚಿಂತನೆಗಳ ಬದುಕಿನ ರೀತಿ ಮತ್ತು ವೈರುಧ್ಯಗಳ ಸಮಾಜದಲ್ಲಿ, ಭೈರಪ್ಪನವರು ಎಲ್ಲ ರೀತಿಯ ವಿಚಾರಗಳನ್ನು ಮುಕ್ತತೆ, ಸತ್ಯದ ಆಧಾರತೆ ಮತ್ತು ನಿಷ್ಠುರತೆಗಳೊಂದಿಗೆ ಮಂಡಿಸುವುದರೊಂದಿಗೆ ಹಲವು ರೀತಿಯ ಟೀಕಾಕಾರರಿಗೆ ಯಾವುದೇ ರೀತಿಯ ಸೊಪ್ಪು ಹಾಕದೆ ಸ್ಪಷ್ಟ ಉತ್ತರಗಳನ್ನೂ ನೀಡುತ್ತಾ  ಸಾಗಿದ್ದಾರೆ.

ಭೈರಪ್ಪನವರ ಸಾಹಿತ್ಯಸೃಷ್ಟಿಯ ಕಾರ್ಯ ಅವರು ಹೈಸ್ಕೂಲಿನಲ್ಲಿದ್ದಾಗ ಹಾಸ್ಟೆಲ್ ಮ್ಯಾಗಜೈನಿಗೆ ಕೆಲವು ಕಥೆಗಳನ್ನು ಬರೆಯುವುದರಿಂದ ಪ್ರಾರಂಭವಾಯಿತು.  ಇಂಟರ್ ಮೀಡಿಯಟ್ ಓದುತ್ತಿದ್ದಾಗಲೇ ‘ಗತಜನ್ಮ’ ಎಂಬ ನೀಳ್ಗತೆ, ‘ಭೀಮಕಾಯ’ ಮತ್ತು ‘ಬೆಳಕು ಮೂಡಿತು’ ಎಂಬ ಎರಡು ಕಾದಂಬರಿಗಳನ್ನು ಅವರು  ಬರೆದಿದ್ದರು.  ಈ ಕೃತಿಗಳು ಅಪಕ್ವವಾಗಿದ್ದವು, ಅಲ್ಲದೆ ಅನಕೃ ಅವರ ಪ್ರಭಾವವಿತ್ತು ಎಂದು ಸ್ವತಃ ಅಭಿಪ್ರಾಯ ಪಡುವ ಭೈರಪ್ಪನವರು, ಅವರ ಬರಹದ ಲೋಕವನ್ನು 1961ರಲ್ಲಿ ಪ್ರಕಟವಾದ ‘ಧರ್ಮಶ್ರೀ’ಯಿಂದ ಪರಿಗಣಿಸುತ್ತಾರೆ.

ಬದುಕು ಮತ್ತು ಅನುಭವಗಳ ಸಂಕೀರ್ಣತೆಯನ್ನು ಗ್ರಹಿಸಲು ಮತ್ತು ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸಲು ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಕಾದಂಬರಿ ಉಪಯುಕ್ತ ಮಾಧ್ಯಮ ಎಂದು ಭಾವಿಸುವ ಭೈರಪ್ಪನವರು ‘ಧರ್ಮಶ್ರೀ’ಯಿಂದ ಮೊದಲ್ಗೊಂಡು 'ಉತ್ತರಕಾಂಡ'ದವರೆಗೆ ಇಪ್ಪತ್ಮೂರು ಮಹತ್ವಪೂರ್ಣ  ಕಾದಂಬರಿಗಳನ್ನು ಬರೆದಿದ್ದಾರೆ.  ‘ಧರ್ಮಶ್ರೀ’, ‘ದೂರ ಸರಿದರು’, ‘ಮತದಾನ’, ವಂಶವೃಕ್ಷ’, ‘ಜಲಪಾತ’, ‘ನಾಯಿ ನೆರಳು’, ‘ತಬ್ಬಲಿಯು ನೀನಾದೆ ಮಗನೆ’, ‘ಗೃಹಭಂಗ’, ‘ನಿರಾಕರಣ’, ‘ಗ್ರಹಣ’, ‘ದಾಟು’, ‘ಅನ್ವೇಷಣ’, ‘ಪರ್ವ’, ‘ನೆಲೆ’, ‘ಸಾಕ್ಷಿ’, ‘ಅಂಚು’, ‘ತಂತು’, ‘ಸಾರ್ಥ’, ‘ಮಂದ್ರ’, ‘ಆವರಣ’, ‘ಕವಲು’ , 'ಯಾನ', 'ಉತ್ತರಕಾಂಡ' ಇವು ಡಾ. ಎಸ್. ಎಲ್. ಭೈರಪ್ಪನವರ ಇದುವರೆಗಿನ ಪ್ರಕಟಿತ ಕಾದಂಬರಿಗಳು.    ಭೈರಪ್ಪನವರ ಬಹುತೇಕ ಕೃತಿಗಳು ಇತರ ಭಾಷೆಗಳಿಗೆ ಅನುವಾದಗೊಂಡು ಎಲ್ಲೆಡೆ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ.  ಮರಾಠಿಯಂತಹ ಹಲವು ಭಾಷಿಗರಂತೂ ಭೈರಪ್ಪನವರನ್ನು ತಮ್ಮ ಭಾಷೆಯ ಶ್ರೇಷ್ಠ ಕೃತಿಗಾರರಂತೆಯೇ ಅಭಿಮಾನಿಸುತ್ತಾರೆ.

ಭೈರಪ್ಪನವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ಸಹಾ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಿ ಜನಪ್ರಿಯಗೊಂಡಿವೆ.  ‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ಎಲ್ಲಾ ಸಹೃದಯರ ಹೃದಯದಲ್ಲಿ ನೆಲೆಗಟ್ಟಿನಿಂತಿದೆ. 

ಡಾ. ಎಸ್. ಎಲ್. ಭೈರಪ್ಪನವರ ಇತರ ಕನ್ನಡ ಗ್ರಂಥಗಳೆಂದರೆ ಸಾಹಿತ್ಯ ಮೀಮಾಂಸೆಗೆ ಸೇರಿದ ‘ಸಾಹಿತ್ಯ ಮತ್ತು ಪ್ರತೀಕ’, ‘ಕಥೆ ಮತ್ತು ಕಥಾವಸ್ತು’, ‘ನಾನೇಕೆ ಬರೆಯುತ್ತೇನೆ’ ಎಂಬ ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಗ್ರಹ; ಪ್ರೌಢ ಪ್ರಬಂಧವಾದ ಸೌಂದರ್ಯ ಮತ್ತು ಮೀಮಾಂಸೆಗೆ ಸಂಬಂಧಿಸಿದ ‘ಸತ್ಯ ಮತ್ತು ಸೌಂದರ್ಯ’ ಕೃತಿ ಮತ್ತು ಆತ್ಮವೃತ್ತಾಂತವಾದ ‘ಭಿತ್ತಿ’.  ಬಹಳಷ್ಟು  ಸಂಶೋಧನಾ ಲೇಖನಗಳನ್ನೂ ಭೈರಪ್ಪನವರು ಬರೆದಿರುವುದಲ್ಲದೆ ‘ವಿದ್ಯಾಭ್ಯಾಸದಲ್ಲಿ ಸಮಾನಾವಕಾಶ’, ‘ಭಾರತೀಯ ಶಿಕ್ಷಣದಲ್ಲಿ ಮೌಲ್ಯಗಳ ಸ್ಥಾನ ಮತ್ತು ವ್ಯಕ್ತಿತ್ವ’, ‘ಚಾರಿತ್ರಿಕ ವಿಕಾಸದಲ್ಲಿ ತತ್ವಶಾಸ್ತ್ರ’ ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ. ‘ಸಾಕ್ಷೀಭಾವ’ ಎಂಬ ಭೈರಪ್ಪನವರ ಅಂಕಣದಲ್ಲಿ ಮೂಡಿದ  ನಮ್ಮ ಕಾಲದ ರಾಜಕೀಯ, ಆರ್ಥಿಕ, ಸಾಮಾಜಿಕ, ಚಾರಿತ್ರಿಕ ಚಿಂತನೆಗಳು ವಿವಿಧ ರೀತಿಯಲ್ಲಿ ಓದುಗರ ಗಮನ ಸೆಳೆದು ಜನಪ್ರಿಯಗೊಂಡಿವೆ.  

ಇತ್ತೀಚಿನ  ವರ್ಷದಲ್ಲಿ   ಸಂದಿರುವ ಪದ್ಮಶ್ರೀ  ಪ್ರಶಸ್ತಿ,  ಸಾಹಿತ್ಯಕ ಹಿರಿಯ ಪ್ರಶಸ್ತಿ 'ಸರಸ್ವತಿ ಸಂಮಾನ್' ಸೇರಿದಂತೆ  ಹಲವು ರೀತಿಯ ಮನ್ನಣೆಗಳು, ಪ್ರಶಸ್ತಿಗಳು ಭೈರಪ್ಪನವರಿಗೆ ಬಂದಿವೆ. ಜ್ಞಾನಪೀಠ ಅವರಿಗೆ  ಇನ್ನೂ ಸಂದಿಲ್ಲ ಎಂಬ ಬಗ್ಗೆ ಅವರ ಸಾಹಿತ್ಯ ಪ್ರೇಮಿಗಳಿಗೆ ಅಸಹನೆಯಿದೆ.  ಪ್ರಶಸ್ತಿಗಳು ಕೇವಲ ಒಂದೆರಡು ದಿನದ ಉತ್ಸವಗಳಿಗಿಂತ ಮೇಲೆ ಮುಟ್ಟಲಾರವು. ಆದರೆ ಓದುಗರ ಹೃದಯಾಂತರಾಳವನ್ನು ಇಷ್ಟು ಅದಮ್ಯವಾಗಿ ಆಕ್ರಮಿಸಿಕೊಂಡಿರುವ ಮತ್ತೊಬ್ಬ ಬರಹಗಾರರಿಲ್ಲ ಎಂಬುದು ಮಾತ್ರ ಸಾರ್ವಕಾಲಿಕ ಸತ್ಯ.

ಭೈರಪ್ಪನವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ಮಾಡುವ ಪೂರ್ವ ಭಾವಿ ತಯಾರಿ, ನಡೆಸುವ ಅಧ್ಯಯನ, ವ್ಯಾಪಕ ಸಂಚಾರ, ಕಂಡುಕೊಳ್ಳುವ ಅನುಭಾವ ಇದರ ಬಗ್ಗೆಯೇ ಹಲವಾರು ಗ್ರಂಥಗಳು ಮೂಡಬಹುದಾದಷ್ಟು ಸಾಹಿತ್ಯ ವಲಯದಲ್ಲಿ ವಿವಿಧ ಚಿಂತಕರ ಅಭಿಪ್ರಾಯಗಳು ಪ್ರಚಲಿತವಿದೆ.  

ಭೈರಪ್ಪನವರ ಕಾದಂಬರಿಗಳನ್ನು ಅವಲೋಕಿಸಿದವರಿಗೆ, ಅವರು ಕನ್ನಡ ಕಾದಂಬರಿ ಲೋಕಕ್ಕೆ ವಿಶಿಷ್ಟ ಕಾಣಿಕೆಗಳನ್ನು ನೀಡಿ, ಕಾದಂಬರಿಯನ್ನು ಲಘು ಮನರಂಜನೆಯ ಮಟ್ಟದಿಂದ ಮಹಾಕಾವ್ಯದ ಮಟ್ಟಕ್ಕೆ ಕರೆದೊಯ್ದ ಬೆರಳೆಣಿಕೆಯಷ್ಟು ಮಹಾನ್ ಲೇಖಕರಲ್ಲಿ ಒಬ್ಬರಾಗಿದ್ದಾರೆ ಎನಿಸದಿರದು.  ಕನ್ನಡದಲ್ಲಿ ಚದುರಂಗ, ಕುವೆಂಪು, ಗೋಕಾಕ್, ರಾವ್ ಬಹದ್ದೂರ್, ಅನಕೃ, ಕಟ್ಟೀಮನಿ, ದೇವುಡು, ಶ್ರೀರಂಗ, ಮೊದಲಾದವರು ತಮ್ಮ ಬಾಳಿನ ಒಂದೆರಡು ಉತ್ಕಟ ಕ್ಷಣಗಳ ಪರಿಣಾಮವಾಗಿ ಒಂದು ಅಥವಾ ಎರಡು ಮೇರು ಕೃತಿಗಳನ್ನು ಕನ್ನಡ ಕಾದಂಬರಿ ಲೋಕಕ್ಕೆ ನೀಡಿದ್ದರೆ, ಕಾರಂತರಂತೆ ಭೈರಪ್ಪನವರು ಹಲವಾರು  ಬೃಹತ್ತಾದ, ಮಹತ್ತಾದ ಅತಿ ಶ್ರೇಷ್ಠ ಗದ್ಯ ಮಹಾಕಾವ್ಯಗಳನ್ನು ಅರ್ಥಾತ್ ಕಾದಂಬರಿಗಳನ್ನು ನೀಡಿದವರು.   

ಪ್ರಾದೇಶಿಕ ಭಾಷೆಯನ್ನು ವೈವಿಧ್ಯಮಯವನ್ನಾಗಿ, ಗ್ರಾಂಥಿಕ ಭಾಷೆಯನ್ನು ಚಿಂತನದ ಎಲ್ಲ ಹಂತಗಳನ್ನೂ ನಿರೂಪಿಸುವ ಹಾಗೆ ಬಳಸಿರುವುದು ಭೈರಪ್ಪನವರ ಕೃತಿಗಳ ವೈಶಿಷ್ಟ್ಯವಾಗಿವೆ.  ಶ್ರೇಷ್ಠ ತತ್ವಶಾಸ್ತ್ರ ಗ್ರಂಥಗಳು ಕಾದಂಬರಿ ರೂಪದಲ್ಲಿ ಕಾಣಿಸಿಕೊಂಡಿವೆಯೇನೋ ಎಂಬಷ್ಟರಮಟ್ಟಿಗೆ ವೈಚಾರಿಕತೆ ದಟ್ಟವಾಗಿ, ವಿಪುಲವಾಗಿ ಭೈರಪ್ಪನವರ ಬರಹಗಳಲ್ಲಿ  ಚಿತ್ರಿತವಾಗಿವೆ.

ಈ ಮಹಾನ್ ಕಾದಂಬರಿಕಾರರು ಕಳೆದ ಆರು ದಶಕಗಳಲ್ಲಿ ಕನ್ನಡದ ಓದುಗರ ಹೃದಯ ಸಿಂಹಾಸನವನ್ನು ಆಳುತ್ತಿರುವ ಪರಿ ಅನನ್ಯವಾದದ್ದು.   ಈ ಬರಹಗಳು ಮುಂದೂ ನಿರಂತರವಾಗಿ  ಮೂಡುತ್ತಿರಲಿ.   ಭೈರಪ್ಪನವರು  ನಮ್ಮೊಂದಿಗೆ ಸುಧೀರ್ಘ ಕಾಲ, ನಿತ್ಯ ಸಂತಸದಲ್ಲಿ ರಾರಾಜಿಸುತ್ತಿರಲಿ.  ಈ ಮಹಾನ್ ಬರವಣಿಗೆಯ ಸರಸ್ವತೀ ಶಕ್ತಿಗೆ ಶಿರಬಾಗಿ ನಮನಗಳು.  ಈ ಪುಣ್ಯ ನಮ್ಮೊಂದಿಗೆ ಬಹುಕಾಲದವರೆಗೆ ನೆಲೆ ನಿಂತಿರಲಿ ಎಂದು ಆಶಿಸುತ್ತಾ ಡಾ. ಎಸ್. ಎಲ್. ಭೈರಪ್ಪನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳನ್ನು

*********


ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನ

ಜನನ - ೧೮೯೬ ಜನವರಿ ೩೧, ಧಾರವಾಡ
ಮರಣ - ೧೯೮೧ ಅಕ್ಟೋಬರ ೨೬, ಮುಂಬಯಿ
ಕಾವ್ಯನಾಮ - ಅಂಬಿಕಾತನಯದತ್ತ
ವೃತ್ತಿ - ವರಕವಿ, ಶಿಕ್ಷಕರು
ರಾಷ್ಟ್ರೀಯತೆ - ಭಾರತೀಯ 🇮🇳
ಕಾಲ - (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿ - ಕಥೆ, ಕವನ, ವಿಮರ್ಷೆ, ಅನುವಾದ
ವಿಷಯ - ಕರ್ನಾಟಕ, ಜನಪದ, ಶ್ರಾವಣ, ಜೀವನ, ಧಾರವಾಡ
ಸಾಹಿತ್ಯ ಚಳುವಳಿ - ನವೋದಯ
ಪ್ರಭಾವಗಳು - ಖಲೀಲ್ ಗಿಬ್ರಾನ್, ಶ್ರೀ ಅರವಿಂದರು, ರವಿಂದ್ರನಾಥ ಟಾಗೂರ್

"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ. ಬೇಂದ್ರೆಯವರ ಕುರಿತೊಂದು ಸಾಕ್ಷ್ಯಚಿತ್ರ ತಯಾರಾಗಿತ್ತು.

                      🌹 ಜೀವನ 🌹

ಬೇಂದ್ರೆ ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ). ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪಟ್ಟಣದ ಸಮೀಪದ ಶಿರಹಟ್ಟಿಯಲ್ಲಿ ಬಂದು ನೆಲೆಸಿದರು. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಂ.ಎ. ಮಾಡಿಕೊಂಡು ಕೆಲಕಾಲ (೧೯೪೪ - ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ  ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ "ಕೃಷ್ಣ ಕುಮಾರಿ"-ಯು ಆಗಲೇ ಪ್ರಕಟಿಸಲ್ಪಟ್ಟಿತ್ತು.

⭕ ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು.



⭕ ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೆ ಶ್ರೀಮಂತಗೊಳಿಸಿವೆ ಎಂದರೆ ತಪ್ಪಲಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ "ಧಾರವಾಡ ದ ಅಜ್ಜ" ಅವರ ಕೆಲವೊಂದು ಮಕ್ಕಳ ಕವಿತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.

                         ಸಾಹಿತ್ಯ 🖊

⭕ ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದಾಚೆಗೆ ಅವರು ಕಾವ್ಯ ರಚನೆ ಮಾಡುತ್ತಲೇ ಬಂದರು. "ಗರಿ", "ಕಾಮಕಸ್ತೂರಿ ", "ಸೂರ್ಯಪಾನ", "ನಾದಲೀಲೆ", "ನಾಕುತಂತಿ" ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕೃತಿಗೆ ೧೯೭೪ ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕವಿತೆಗಳನ್ನಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ವಿಮರ್ಶೆಗಳನ್ನು ಬೇಂದ್ರೆ ಬರೆದಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು.

⭕ ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಏರಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು. ಅವರು 1954ನೇ ಇಸವಿಯಲ್ಲಿ ತಯಾರಾದ ವಿಚಿತ್ರ ಪ್ರಪಂಚ ಎಂಬ ಚಿತ್ರಕ್ಕೆ ಸಾಹಿತ್ಯ ಹಾಗೂ ಗೀತೆಗಳನ್ನು ರಚಿಸಿದ್ದರೆಂದು ಆ ವರ್ಷದ ನವೆಂಬರ್ ತಿಂಗಳ ಚಂದಮಾಮ ಪತ್ರಿಕೆಯ ಜಾಹೀರಾತೊಂದು ತಿಳಿಸುತ್ತದೆ.

⭕ ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಕನ್ನಡದಲ್ಲಿಯೇ ಅಲ್ಲದೆ ಮರಾಠಿ ಭಾಷೆಯಲ್ಲೂ ಬೇಂದ್ರೆ ಕೆಲವು ಕೃತಿಗಳನ್ನು ರಚಿಸಿದರು.

⭕ ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ.

ಇವರು ಬರೆದ "ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ" ಇಂದಿಗೂ ಚಿಣ್ಣರ ಅತ್ಯಂತ ಪ್ರೀತಿಪಾತ್ರ ಕವನವಾಗಿದೆ.

⭕ ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿನಲ್ಲಿ, ನಿಮ್ಮ ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ, ಎಲ್ಲೆಲ್ಲೂ ಲೆಕ್ಕಾಚಾರವಿದೆ ಅನ್ನುತ್ತಾ ಕೊನೆ ಕೊನೆಗೆ ದ.ರಾ.ಬೇಂದ್ರೆಯವರು ಗಣಿತದ ಲೆಕ್ಕಾಚಾರದಲ್ಲೇ ಮುಳುಗಿದ್ದರು. ಇವರನ್ನು ಕನ್ನಡದ "ಕನ್ನಡದ ಠಾಗೋರ್" ಎಂದು ಕರೆಯಲಾಗುತ್ತದೆ. "ನಮನ" ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದದ್ವವು. ಬೇಂದ್ರೆ ಮನಸಿಗೆ 441 ಹಾಗೂ ಹೃದಯಕ್ಕೆ 881 ಎಂದು ಸಂಖ್ಯೆ ನೀಡಿದ್ದರು.

             👇 ಬೇಂದ್ರೆಯವರ ಸಾಹಿತ್ಯ 👇

                    🌹 ಕವನ ಸಂಕಲನ 🌹

(ಪ್ರಥಮ ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು
▪೧೯೨೨: ಕೃಷ್ಣಾಕುಮಾರಿ;
▪೧೯೩೨: ಗರಿ;
▪೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
▪೧೯೩೭: ಸಖೀಗೀತ;
▪೧೯೩೮: ಉಯ್ಯಾಲೆ;
▪೧೯೩೮: ನಾದಲೀಲೆ;
▪೧೯೪೩: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)
▪೧೯೪೬: ಹಾಡುಪಾಡು;
▪೧೯೫೧: ಗಂಗಾವತರಣ;
▪೧೯೫೬: ಸೂರ್ಯಪಾನ;
▪೧೯೫೬: ಹೃದಯಸಮುದ್ರ;
▪೧೯೫೬: ಮುಕ್ತಕಂಠ;
▪೧೯೫೭: ಚೈತ್ಯಾಲಯ;
▪೧೯೫೭: ಜೀವಲಹರಿ;
▪೧೯೫೭: ಅರಳು ಮರಳು;
▪೧೯೫೮: ನಮನ;
▪೧೯೫೯: ಸಂಚಯ;
▪೧೯೬೦: ಉತ್ತರಾಯಣ;
▪೧೯೬೧: ಮುಗಿಲಮಲ್ಲಿಗೆ;
▪೧೯೬೨: ಯಕ್ಷ ಯಕ್ಷಿ;
▪೧೯೬೪: ನಾಕುತಂತಿ;
▪೧೯೬೬: ಮರ್ಯಾದೆ;
▪೧೯೬೮: ಶ್ರೀಮಾತಾ;
▪೧೯೬೯: ಬಾ ಹತ್ತರ;
▪೧೯೭೦: ಇದು ನಭೋವಾಣಿ;
▪೧೯೭೨: ವಿನಯ;
▪೧೯೭೩: ಮತ್ತೆ ಶ್ರಾವಣಾ ಬಂತು;
▪೧೯೭೭: ಒಲವೇ ನಮ್ಮ ಬದುಕು;
▪೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
▪೧೯೮೨: ಪರಾಕಿ;
▪೧೯೮೨: ಕಾವ್ಯವೈಖರಿ;
▪೧೯೮೩: ತಾ ಲೆಕ್ಕಣಕಿ ತಾ ದೌತಿ;
▪೧೯೮೩: ಬಾಲಬೋಧೆ;
೧೯೮೬: ಚೈತನ್ಯದ ಪೂಜೆ;
▪೧೯೮೭: ಪ್ರತಿಬಿಂಬಗಳು;

ವಿಮರ್ಶೆ
▪೧೯೪೦: ಸಾಹಿತ್ಯಸಂಶೋಧನೆ;
▪೧೯೪೫: ವಿಚಾರ ಮಂಜರಿ;
▪೧೯೫೪: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;
▪೧೯೫೯: ಮಹಾರಾಷ್ಟ್ರ ಸಾಹಿತ್ಯ;
ಸಾಯೋ ಆಟ (ನಾಟಕ)
▪೧೯೬೨: ಕಾವ್ಯೋದ್ಯೋಗ;
▪೧೯೬೮: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;
▪೧೯೭೪: ಸಾಹಿತ್ಯದ ವಿರಾಟ್ ಸ್ವರೂಪ;
▪೧೯೭೬: ಕುಮಾರವ್ಯಾಸ ಪುಸ್ತಿಕೆ;

            ಪ್ರಶಸ್ತಿ, ಪುರಸ್ಕಾರ, ಬಿರುದು 💐
▪೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
▪೧೯೫೮ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
▪೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
▪೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
▪೧೯೬೮ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
▪೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್
ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.

*****

ಶ್ರೀಅಜಿತ್ಧೋವಲ್
ಯಾರಿವರು?  ಸ್ವಲ್ಪದರಲ್ಲೇ ಪರಿಚಯ
ಮಾಡಹೊರಟರೂ ಜಾಗ ಸಾಲದು. 
ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ,
"ಚಾಣಕ್ಯನಂತಹ ತಲೆ, ಬಾಜೀರಾವ್ ನಂತಹ ಧೈರ್ಯ".

1945 ರಲ್ಲಿ ಉತ್ತರಾಖಂಡದಲ್ಲಿರುವ ಗಢವಾಲಿ ಎಂಬಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನ್ಮ. ತಂದೆ ಭಾರತೀಯ ಸೈನ್ಯದಲ್ಲಿ ಬ್ರಿಗೇಡಿಯರ್ ಆಗಿದ್ದರು.

1968 ರಲ್ಲಿ IPS ಪರೀಕ್ಷೆ ಯಲ್ಲಿ ಟಾಪರ್. ಪ್ರಾರಂಭದಲ್ಲಿ ಕೇರಳ batch ನಲ್ಲಿ IPS ಅಧಿಕಾರಿ.

ಹದಿನೇಳು ವರ್ಷಗಳ ಅವಧಿಯ ನಂತರವೇ ಸಿಗಬಹುದಾದ ಮೆಡಲ್, ಕೇವಲ ಆರು ವರ್ಷಗಳಲ್ಲೇ ಪಡೆದಿದ್ದು ಅಸಾಮಾನ್ಯ ಸಾಧನೆ.

ಪಾಕಿಸ್ತಾನದಲ್ಲಿ ಗೂಢಚಾರನಾಗಿ ನೇಮಕಾತಿ. ಪಾಕಿಸ್ತಾನದ ಸೈನ್ಯದಲ್ಲಿ ಮಾರ್ಷಲ್ ಹುದ್ದೆ ಯು ವರೆಗೂ ಬಡ್ತಿ ಹಾಗೂ ಆರು ವರ್ಷಗಳ ಕಾಲ ಭಾರತದ ಪರ ಗೂಢಚಾರಿಕೆ. ಪಾಕಿಸ್ತಾನಕ್ಕೆ ಇದರ ವಾಸನೆಯೇ ಹತ್ತಲಿಲ್ಲ.

1987 ರಲ್ಲಿ, ಖಲಿಸ್ತಾನ ಆತಂಕದ ವೇಳೆ,
ಪಾಕಿಸ್ತಾನದ ಪರ ಗೂಢಚಾರನಾಗಿ ದರ್ಬಾರ್ ಸಾಹೀಬ್ ನಲ್ಲಿ ಪ್ರವೇಶ. ಮೂರು ದಿನ ಆತಂಕವಾದಿಗಳ ಜೊತೆ ವಾಸ. ಆತಂಕವಾದಿಗಳ ಎಲ್ಲ ಮಾಹಿತಿ ಸಂಗ್ರಹಿಸಿ operation black thunder ನ ಸಫಲತೆಗೆ ಮುಖ್ಯ ಕಾರಣರಾದದ್ದು.

1988 ರಲ್ಲಿ 'ಕೀರ್ತಿಚಕ್ರ' ಪ್ರಶಸ್ತಿ. ಈ ಪ್ರಶಸ್ತಿ ಪಡೆದ ಭಾರತದ ಏಕಮೇವ ಸೈನ್ಯೇತರ ವ್ಯಕ್ತಿ.

ನಂತರ ಆಸ್ಸಾಂ ಗೆ ರವಾನೆ. ಉಲ್ಫಾ ಆತಂಕವಾದಿಗಳ ದಮನ.

1999 ರಲ್ಲಿ ವಿಮಾನ ನಡೆದ ಅಪಹರಣದ ವೇಳೆ ಆತಂಕವಾದಿಗಳ ಜೊತೆ ಸಂಧಾನಕ್ಕಾಗಿ ಕಳಿಸಿದ್ದು ಇವರನ್ನೇ.

ನರೇಂದ್ರ ಮೋದಿ ಪ್ರಧಾನಿ ಆದ ತಕ್ಷಣ ಮಾಡಿದ ಮೊದಲ ಕೆಲಸ, ಅಜಿತ್ ರನ್ನು ರಾಷ್ಟ್ರೀಯ ರಕ್ಷಣಾ ಸಲಹಾಗಾರರನ್ನಾಗಿ
(National Security Advisor) ನೇಮಿಸಿದ್ದು.
ಅಜಿತ್ ಮೊದಲು ಕೈಗೆತ್ತಿಕೊಂಡಿದ್ದು ಪಾಕಿಸ್ತಾನದಲ್ಲಿರುವ ಬಲೋಚಿಸ್ತಾನದಲ್ಲಿ RAW ಮತ್ತೆ ಸಕ್ರಿಯ ಮಾಡಿದ್ದು. ಬಲೋಚಿಸ್ತಾನದ ವಿದ್ಯಮಾನವನ್ನ ಅಂತರ್ರಾಷ್ಟ್ರೀಯ ವಿಷಯ ವನ್ನಾಗಿ ಮಾಡಿದ್ದು.

ಕೇರಳದ 45 ಇಸಾಯೀ ನರ್ಸ್ ಗಳನ್ನು ಇರಾಕ್ ನಲ್ಲಿ ISIS ಉಗ್ರವಾದಿಗಳು ಬಂಧಿಸಿ ಇಟ್ಟಾಗ, ಧೋಬಲ್ ಸ್ವತಃ ಇರಾಕ್ ಗೆ ಹೋಗಿ ಸಂಧಾನ ನಡೆಸಿ, ಅವರೆಲ್ಲರ ಕೂದಲೂ ಕೊಂಕದಂತೆ ವಾಪಸ್ ಕರೆದು ತಂದರು.

2015 ರಲ್ಲಿ ಭಾರತದ ಪ್ರಥಮ ಸರ್ಜಿಕಲ್
operation ಗೆ ಚಾಲನೆ ಕೊಟ್ಟರು. ಭಾರತದ ಸೈನ್ಯ ಮ್ಯಾನ್ಮಾರ್ ದ ಗಡಿಯ ಒಳಗೆ 5 ಕಿಲೋ ಮೀಟರ್ ವರೆಗೆ ನುಗ್ಗಿ 50 ಉಗ್ರರನ್ನ ಕೊಂದಿತು. ನಾಗಾಲ್ಯಾಂಡ್ ನ
ಉಗ್ರವಾದಿಗಳು ಭಾರತ ಸರ್ಕಾರದೊಂದಿಗೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿಸಿ ಅವರು ಶಸ್ತ್ರಾಸ್ತ್ರ ತ್ಯಜಿಸುವದಕ್ಕೆ ಕಾರಣರಾದರು.

ಭಾರತದ ರಕ್ಷಣಾ ನೀತಿಯನ್ನು ಆಕ್ರಾಮಕ ವಾಗುವಂತೆ ಮಾರ್ಪಾಡಿಸಿದರು. ಭಾರತದ ಗಡಿಗೆ ನುಗ್ಗಿದ ಪಾಕಿಸ್ತಾನದ ನಾವೆಯನ್ನ ಮುನ್ಸೂಚನೆ ಕೊಡದೇ ಉಡಾಯಿಸಿದರು.

ಕಾಶ್ಮೀರದಲ್ಲಿ ಸೇನೆಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟರು. ಕಲ್ಲು ತೂರುವ ಕಿಡಿಗೇಡಿಗಳನ್ನು ಹದ್ದುಬಸ್ತಿಗೆ ತರಲು ಸೈನಿಕರ ಕೈಗೆ pallet gun ಕೊಟ್ಟರು. ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರಗಳಿಂದ ದೂರ ಮಾಡಿದರು.

2016 ರ ಸೆಪ್ಟೆಂಬರ್, ಸ್ವತಂತ್ರ ಭಾರತದ ಇತಿಹಾಸದಲ್ಲಿ 1971 ರ ನಂತರ ನೆನೆಪಿಡುವ ಕಾಲ.  ಡೋಬಲ್ ಹೆಣೆದ ಸರ್ಜಿಕಲ್ ಸ್ಟ್ರೈಕ್ ಗೆ ಭಾರತೀಯ ಸೇನೆ ರೂಪು ಕೊಟ್ಟಿದ್ದು  ಯಾರು ಮರೆತಾರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮೂರು ಕಿಲೋಮೀಟರ್ ಒಳಗೆ ನುಗ್ಗಿ 40 ಉಗ್ರ ರು ಹಾಗೂ 9 ಪಾಕ್ ಸೈನಿಕರ ಹತ್ಯೆಗೈದ ಭಾರತೀಯ ಸೇನೆ ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತೆ ಮಾಡಿತು.
26 ಫೆಬ್ರವರಿ ಯ ಬಾಲಾಕೋಟ್ ವೈಮಾನಿಕ ದಾಳಿ ಯೂ ಅಜಿತ್ ರ ತಂತ್ರಗಾರಿಕೆಯಿಂದ ಮೂಡಿದ್ದು. ಈ ಎರಡೂ ದಾಳಿಯಲ್ಲೂ ಭಾರತೀಯ ಸೈನಿಕರ ಪ್ರಾಣಹಾನಿ - 'ಶೂನ್ಯ'

 ಶ್ರೀ ಅಜಿತ್ ಧೋವಲ್, ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ನೀವು ನಿಜವಾಗಿಯೂ ಅಸಾಮಾನ್ಯರು.

ಜೈಹಿಂದ್. ಜೈ ಭಾರತ.
****


26 nov 2021 - ಸುಪ್ರಸಿದ್ಧ ಲೇಖಕರೂ ಮೇರು ವಿದ್ವಾಂಸರೂ ಹಿಂದುತ್ವ-ರಾಷ್ಟ್ರೀಯತೆಯ ಪ್ರಖರ ಪ್ರತಿಪಾದಕರೂ ಆಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರು ಬೆಳಗಿನ ಜಾವಾ 2 ಗಂಟೆ  ಸುಮಾರಿಗೆ  ಬೆಂಗಳೂರು ನ್ಯೂ ಬಿ ಇ ಎಲ್ ಲೇ ಔಟ್ ನ  ಮನೆಯಲ್ಲಿ  ನಿಧನರಾದರು. ಅವರ ಮರಣದಿಂದಾಗಿ ವಿದ್ವತ್ ಲೋಕಕ್ಕಷ್ಟೇ ಅಲ್ಲ, ಸಾಮಾನ್ಯ ಜನತೆಗೂ ಅಪಾರ ನೋವು ಹಾಗೂ ನಷ್ಟ ಉಂಟಾಗಿದೆ.  ರಾಷ್ಚ್ರಭಕ್ತಿ, ಸಂಸ್ಕೃತಿಗಳ ಪರಮ ಆರಾಧಕರಾಗಿದ್ದು ಅವುಗಳ ಬಗ್ಗೆ ಆಗ್ರಹದಿಂದ ಅಧಿಕಾರಪೂರ್ವಕವಾಗಿ ಹೇಳುತ್ತಿದ್ದ ಆಚಾರ್ಯರ ನಿಧನದಿಂದ ನಾಡಿಗೆ ಅಪಾರ ನಷ್ಟವಾಗಿದೆ.


****

ಹರಿದಿನದಂದು ಶ್ರೀಹರಿಯ ಪಾದವನ್ನು ಸೇರಿರುವ ಹಿರಿಯ ವಿದ್ವಾಂಸರಾದ ಶ್ರೀಮಳಗಿಜಯತೀರ್ಥಾಚಾರ್ಯರನ್ನು ಕುರಿತು ಹಿಂದೆ ಪ್ರಕಟವಾಗಿದ್ದ ಲೇಖನದ ಪರಿಷ್ಕೃತ ಆವೃತ್ತಿ.
demised in 2022 karteeka bahula ekadashi


ಪಂಡಿತ ಮಳಗಿ ಜಯತೀರ್ಥಾಚಾರ್ಯರು
ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ವೇದವ್ಯಾಸ ವಿದ್ಯಾಪೀಠದ ಸ್ಥಾಪಕ ಅಧ್ಯಕ್ಷರಾಗಿ, ಅನೇಕ ಗ್ರಂಥಗಳ ಕರ್ತೃವಾಗಿ, ಧಾರ್ಮಿಕ ಪತ್ರಿಕೆಗಳ ಸಂಪಾದಕರಾಗಿ, ಪ್ರವಚನಕಾರರಾಗಿ ಮಾಧ್ವವಾಙ್ಮಯಕ್ಕೆ ವಿಶೇಷವಾಗಿ ಸೇವೆ ಸಲ್ಲಿಸಿದ ವಿದ್ವಾಂಸರು ಪಂಡಿತ ಮಳಗಿ ಜಯತೀರ್ಥಾಚಾರ್ಯರು. ಧಾರವಾಡನಗರವನ್ನು ಮಾಧ್ವಸಿದ್ಧಾಂತದ ಮಹಾಕೇಂದ್ರವನ್ನಾಗಿ ರೂಪಿಸಿದ ಮಹನೀಯರಲ್ಲಿ ಪ್ರಮುಖರಾದ ಶ್ರೀಮಳಗಿ ಜಯತೀರ್ಥಾಚಾರ್ಯರು ಜನಿಸಿದ್ದು 1949ರ ಜೂನ್ 5ರಂದು. ಜವಾಹರಲಾಲ್ ಸಂಸ್ಕೃತವಿದ್ಯಾಲಯದಿಂದ ಸಾಹಿತ್ಯ ಶಿರೋಮಣಿ, ಭಾರತೀಯ ವಿದ್ಯಾಭವನ, ಮುಂಬಯಿಯಿಂದ ಸಂಸ್ಕೃತಕೋವಿದ, ವಾರಣಾಸಿಯ ಸಂಪೂರ್ಣಾನಂದ ಸಂಸ್ಕೃತವಿಶ್ವವಿದ್ಯಾನಿಲಯದಿಂದ ವೇದಾಂತ ಶಾಸ್ತ್ರಿ, ಧರ್ಮಶಾಸ್ತ್ರಾಚಾರ್ಯ, ಅಲಹಾಬಾದ್ ಹಿಂದಿ ವಿಶ್ವವಿದ್ಯಾಲಯದಿಂದ ದರ್ಶನವಿಶಾರದ, ಹಿಂದಿ ವಿಶಾರದ, ಹಿಂದಿ ಸಾಹಿತ್ಯರತ್ನ, ಭಾರತೀಯ ವಿದ್ಯಾಭವನದಿಂದ ವೇದಾಂತ ವಾಚಸ್ಪತಿ, ಮುಂಬಯಿ ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪಡವಿ, ಪೂನಾ ವಿಶ್ವವಿದ್ಯಾನಿಲಯದಿಂದ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಶ್ರೀಮಳಗಿ ಜಯತೀರ್ಥಾಚಾರ್ಯರು ಮುಂಬಯಿಯ ಶ್ರೀಸತ್ಯಧ್ಯಾನ ವಿದ್ಯಾಪೀಠದಲ್ಲಿ ವೇದಾಂತ, ನ್ಯಾಯ, ಮೀಮಾಂಸಾ, ಸಾಹಿತ್ಯ,ವ್ಯಾಕರಣ ಮೊದಲಾದ ಶಾಸ್ತ್ರಗಳ ಆಳವಾದ ಅಧ್ಯಯನವನ್ನು ನಡೆಸಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಮಾಧ್ವ ವಾಙ್ಮಯಕ್ಕೆ ಹಾಗೂ ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದ ಅಸಂಖ್ಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಶ್ರೀಮಳಗಿ ಜಯತೀರ್ಥಾಚಾರ್ಯರು ರಚಿಸಿರುವ ಗ್ರಂಥಗಳು 43ಕ್ಕೂ ಹೆಚ್ಚು ಎಂಬುದನ್ನು ಗಮನಿಸಿದಾಗ, ಶ್ರೀಆಚಾರ್ಯರ ಸಾರಸ್ವತ ಸೇವೆಯ ಕಿಂಚಿತ್ತು ಪರಿಚಯ ನಮಗಾಗುತ್ತದೆ. ಶ್ರೀಸತ್ಯಧ್ಯಾನರು, ಶ್ರೀಸತ್ಯಧ್ಯಾನರ ನುಡಿಮುತ್ತುಗಳು, ಕುಲಪತಿ, ಕ್ಷೇಮೇಂದ್ರನ ಸುಭಾಷಿತಗಳು, ಲೇಖನ ತರಂಗಿಣಿ, ಷಟ್ ಪ್ರಶ್ನೋಪನಿಷತ್ತು, ಪ್ರಮೋದ ತರಂಗಿಣೀ, ಸತ್ಯಧ್ಯಾನ ಜೀವನ ರಶ್ಮಿ,ಸತ್ಯಧ್ಯಾನ ಚರಿತಾಮೃತ, ಶ್ರೀಮಧ್ವರು ನಿರೂಪಿಸಿದ ರಾಮ, ಮಧ್ವರು ನಿರೂಪಿಸಿದ ಶ್ರೀಸೀತಾ, ಮಾಧವತೀರ್ಥರು, ಉತ್ತರಾದಿ ಮಠದ ಇತಿಹಾಸ, ಹರಿದಾಸಸಾಹಿತ್ಯದ ಇತಿಹಾಸ, ಶ್ರೀಸತ್ಯಬೋಧತೀರ್ಥರು, ಶ್ರೀಸತ್ಯವೀರತೀರ್ಥರು, ಶ್ರೀಸತ್ಯಧ್ಯಾನತೀರ್ಥರು(ಇಂಗ್ಲೀಷ್), ಶ್ರೀಸತ್ಯಸಂಧರು, ಪ್ರಮೋದ ತರಂಗಿಣೀ(ಇಂಗ್ಲಿಷ್), ಹರಿದಾಸರ ಮುಂಡಿಗೆಗಳು, ಹರಿದಾಸರ ಮುಂಡಿಗೆಗಳು ಭಾಗ 2, ಶ್ರೀಜಯತೀರ್ಥವಿಜಯ, ಶ್ರೀಸತ್ಯಧ್ಯಾನ ವಾಣಿ, ಶ್ರೀವ್ಯಾಸ ಮಧ್ವರ ಭೀಮ, ಶ್ರೀಸತ್ಯಧ್ಯಾನ ಲೇಖನತರಂಗಿಣಿ (ಎರಡು ಭಾಗಗಳಲ್ಲಿ), ಶ್ರೀರಾಘವೇಂದ್ರ ವಿದ್ಯಾವೈಭವ, ಕನಕನ ಮುಂಡಿಗೆಗಳು, ಶ್ರೀಪದ್ಮನಾಭತೀರ್ಥರು, ದೇವಲಸ್ಮೃತಿ ಒಂದು ಅಧ್ಯಯನ, ತೊರವಿ ರಾಮಾಯಣ ಪ್ರಶಸ್ತಿ, ಗೋಪಾಲದಾಸರು ಕಂಡ ಗುರುರಾಜರು, ಶ್ರೀಸತ್ಯಜ್ಞಾನತೀರ್ಥರು, ಶ್ರೀಕೃಷ್ಣಾವತಾರ, ವಾಸ್ತುಶಾಸ್ತ್ರದ ಮಹತ್ತ್ವ, ಶ್ರೀಹನುಮಂತದೇವರು, ಶ್ರೀಕೃಷ್ಣ, ಶ್ರೀಜಯತೀರ್ಥರು, ಪೊಡವಿಗೊಡೆಯ ಕಡಗೋಲಶ್ರೀಕೃಷ್ಣ, ಬೆಳಕಿನ ಬರಹಗಳು-ಹೀಗೆ ತಮ್ಮ ವಿದ್ವತ್ಪೂರ್ಣಗ್ರಂಥಗಳಿಂದ ಮಾಧ್ವವಾಙ್ಮಯವನ್ನು ಶ್ರೀಮಂತಗೊಳಿಸಿರುವ ಶ್ರೀಜಯತೀರ್ಥಾಚಾರ್ಯರು ಉತ್ತರಾದಿಮಠದಿಂದ ಪ್ರಕಟವಾಗುತ್ತಿರುವ ಶ್ರೀಸುಧಾ ಮಾಸಿಕದ ಮುಖ್ಯ ಸಂಪಾದಕರಾಗಿ ಮೂವತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಧಾರವಾಡದ ಸತ್ಯಧ್ಯಾನ ಗ್ರಂಥಮಾಲೆ, ಟಿ.ಟಿ.ಡಿಯ ದಾಸಸಾಹಿತ್ಯ ಪ್ರಾಜೆಕ್ಟ್ ನ ಗ್ರಂಥಗಳ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸುಗುಣಮಾಲಾ, ಹರಿದಾಸವಾಹಿನಿ, ಹರಿದಾಸ ಅಧ್ಯಾತ್ಮ ಪೀಠ, ಸತ್ಯಧ್ಯಾನವಿದ್ಯಾಪೀಠ, ವಿಶ್ವಮಾಧ್ವ ಮಹಾಪರಿಷತ್ತಿನ ಗ್ರಂಥಗಳ ಸಂಪಾದಕ ಮಂಡಳಿಯ ಸದಸ್ಯರಾಗಿಯೂ ವಾಙ್ಮಯಸೇವೆಯನ್ನು ಸಲ್ಲಿಸಿದ ಶ್ರೀಜಯತೀರ್ಥಾಚಾರ್ಯರಿಗೆ ವಿವಿಧ ಮಾಧ್ವ ಮಠಾಧೀಶರು ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿ, ಅನುಗ್ರಹಿಸಿದ್ದಾರೆ.
ಶ್ರೀಪಲಿಮಾರು ಶ್ರೀಗಳಿಂದ 'ಪಂಡಿತರತ್ನಂ', ಪ್ರಶಸ್ತಿ, ಸಚ್ಛಾಸ್ತ್ರವಿಚಕ್ಷಣರತ್ನಂ, ಶ್ರೀವಿದ್ಯಾಮಾನ್ಯ ಪ್ರಶಸ್ತಿ,ವಿದ್ಯಾನಿಧಿ ಪ್ರಶಸ್ತಿ, ಶ್ರೀಪೇಜಾವರ ಮಠಾಧೀಶರಿಂದ 'ವಿಜಯಧ್ವಜ ಪ್ರಶಸ್ತಿ', ಶ್ರೀ ಭಂಡಾರಕೇರಿ ಶ್ರೀಗಳಿಂದ 'ವಾಗ್ವೈಖರಿಮಾನ್ಯ'ಪ್ರಶಸ್ತಿ ಹಾಗೂ ಶ್ರೀಉತ್ತರಾದಿಮಠಾಧೀಶರಿಂದ 'ಧ್ಯಾನಪ್ರಮೋದ'ಪ್ರಶಸ್ತಿಗಳು ಇವುಗಳಲ್ಲಿ ಪ್ರಮುಖವಾದವು. ಇದರೊಂದಿಗೆ ತಿರುಚಾನೂರಿನ SMSO ಸಭಾದಿಂದ 'ಪ್ರಧಾನ ಧರ್ಮಾಧಿಕಾರಿ' ಗೌರವ, ವಿದ್ಯಾವರ್ಧಕ ಸಂಘದಿಂದ 'ಪ್ರವಚನ ಸಿಂಹ' ಗೌರವಗಳಿಗೂ ಭಾಜನರಾಗಿರುವ ಶ್ರೀಮಳಗಿ ಜಯತೀರ್ಥಾಚಾರ್ಯರು ಅನೇಕ ನಿಯತಕಾಲಿಕಗಳಲ್ಲಿ, ವೃತ್ತಪತ್ರಿಕೆಗಳಲ್ಲಿ ಶ್ರೀಮಧ್ವಸಿದ್ಧಾಂತವನ್ನು ಕುರಿತ ಲೇಖನಗಳನ್ನು ಬರೆಯುವುದರೊಂದಿಗೆ ಅನೇಕ ರಾಷ್ಟ್ರಮಟ್ಟದ ವಿಚಾರಸಂಕಿರಣಗಳಲ್ಲಿ ಪ್ರಬಂಧಗಳನ್ನೂ ಸಹಾ ಮಂಡಿಸಿದ್ದಾರೆ. ಸಂಸ್ಕೃತಸಾಹಿತ್ಯ ಕುರಿತ ಅನೇಕ ರಾಷ್ಟ್ರೀಯ ವಿಚಾರಸಂಕಿರಣಗಳ ಆಯೋಜನೆಯನ್ನೂ ಮಾಡಿರುವ ಶ್ರೀಮಳಗಿ ಜಯತೀರ್ಥಾಚಾರ್ಯರ ಪ್ರವಚನಗಳೆಂದರೆ ಕಂಚಿನ ಕಂಠದ, ಸ್ಪಷ್ಟವಾದ ವಿಚಾರಮಂಡನೆಯ ವಿದ್ವತ್ಸಮಾರಾಧನೆಯೇ ಸರಿ. ಶ್ರೀಮಾಧವ,ಮಧ್ವರ ಸೇವೆಯನ್ನು ಅಪೂರ್ವವಾಗಿ ಮಾಡಿ ಶ್ರೀಹರಿಯ ಪಾದವನ್ನು ಸೇರಿರುವ ಪೂಜ್ಯ ಆಚಾರ್ಯರಿಗೆ ಅನಂತ ನಮನಗಳು.
***
Little unknown facts about UP Chief Minister
I, like many others felt that he is just a “sanaysi” always in saffron dresses
But read below to know facts about him ….
Ajay Mohan Bisht
                        Alias 
          Yogi Adithyanath

Highest marks in the history of Uttar Pradesh (100%) from H.N.B Garwal University

Ajay Bisht is also known as Ajay Yogi, he is a Mathematics  student who passed with the BSC Mathematics Gold Medal.

Born in 1973 to a very poor family in a backward Panchur village in UP. He is now 49 years old.

A Spiritual Guru of the oldest Gorkha Regiment of the Indian Military.

 Nepali newspapers report that Nepal will merge with India if Yogi becomes PM!!

Huge Pro Yogi demonstrations in Nepal

Amazing excellence in martial arts. 

Well known swimmer from Uttar Pradesh.

An accounting expert who even beat the computer.

 Even Shakuntala Devi has praised Yogi!

Only four hours of sleep a night. Wakes up daily at 3:30 in the morning.

 Has a Yoga routine.

Eats only twice a day ..
Completely vegetarian.

He never hospitalised so far for any reason..

Yogi Aditya Nath alias Ajay is one of the best wildlife trainers in Asia

What a profile of a LEADER ... 
***




Thursday, 29 October 2020

ವಿಶೇಷ ವ್ಯಕ್ತಿ heros of india be proud

 


Do anyone in India know this piece of history? 

Answer must be a firm "No" from most of us! Now please read on. 

Remembered in  Japan, forgotten in India........ 

The day was 12 November, 1948. Tokyo Trials are going on in a huge garden house on the outskirts of Tokyo, the trial of fifty-five Japanese war criminals including Japan's then Prime Minister Tojo, after losing WWII. 

Of these, twenty-eight people have been identified as Class-A (crimes against peace) war criminals. If proved, the only punishment is the "death penalty". 

Eleven international judges from all over the world are announcing......"Guilty".... "Guilty"...... "Guilty"......... Suddenly one thundered, "Not Guilty!"

A silence came down in the hallway. Who was this lone dissenter?

His name was Radha Binod Pal a Judge from India.

Born in 1886 in the Kumbh of East Bengal, his mother made a living by taking care of a household and their cow. For feeding the cow, Radha used to take the cow to the land near a local primary school.

When the teacher taught in school, Radha used to listen from outside. One day the school inspector came to visit the school from the city. He asked some questions of the students after entering the class. Everyone was silent. Radha said from outside the classroom window.... "I know the answer to all your questions."  And he answered all the questions one by one. Inspector said... "Wonderful!.. Which class do you read?"

The answer came, "... I do not read...I graze a cow." 


Everyone was shocked to hear that. Calling the head teacher, the school inspector instructed the boy to take admission in school as well as provide some stipend.

This is how education of Radha Binod Pal started. Then after passing the school final with the highest number in the district, he was admitted to Presidency College. After taking M Sc. from the University of Calcutta, he studied law again and got the Doctorate title. In the context of choosing the opposite of two things he once said, "law and mathematics are not so different after all.”

Coming back again to the International Court of Tokyo. 

In his convincing argument to the rest of the jurists he signified that the Allies, (winners of WWII), also violated the principles of restraint and neutrality of international law. In addition to ignoring Japan's surrender hints, they killed two hundred thousand innocent people using nuclear bombardment.

The judges were forced to drop many of the accused from Class-A to B, after seeing the logic written on twelve hundred thirty-two pages by Radha Binod Pal. These Class-B war criminals were saved by him from a sure death penalty. His verdict in the international court gave him and India a world-famous reputation.

Japan respects this great man. In 1966 Emperor Hirohito awarded him the highest civilian honor of the country, 'Kokko Kunsao'. Two busy roads in Tokyo and Kyotto have been named after him. His verdict has been included in the syllabus of law studies there. In front of the Supreme Court of Tokyo, his statue has been placed. In 2007, Prime Minister Shinzo Abe expressed his desire to meet his family members in Delhi and met his son.

Dr. Radha Binod Pal (27 January 1886 - 10 January 1967) name is remembered in the history of Japan. In Tokyo, Japan, he has a museum and a statue in Yasukuni shrine. 

Japan University has a research center in his name. Because of his judgment on Japanese war criminals, Chinese people hate him. 

He is the author of many books related to law. In India, almost nobody knows him and perhaps not even his neighbors know him! A hindi movie was made on him, Tokyo Trials, starring Irfan Khan but that movie never made headlines.

....just one of the many many underrated & unknown Indians.

Must read article for every self respecting Indian.

******


ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ

ಕೃಪೆ: ಕರ್ಮವೀರ ನವೆಂಬರ್ 4, 2012ರ ಸಂಚಿಕೆ - ಒಮ್ಮೆ ಎಲ್ಲೆಡೆ ಪ್ರಸಿದ್ಧವಾಗಿದ್ದ ಆ ಸಂಸ್ಥೆಗೆ ಹಿರಿಯ ಮಹನೀಯರೊಬ್ಬರು ಅತಿಥಿಗಳಾಗಿ ಆಗಮಿಸುವವರಿದ್ದರು. ರೈಲ್ವೇ ನಿಲ್ದಾಣದಲ್ಲಿ ಅವರನ್ನು ಒಬ್ಬ ಸಾಧಾರಣವಾದ ಕೂಲಿಯಂತಿದ್ದ ವ್ಯಕ್ತಿ ಬಂದು ತಾನು ತಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ಅವರ ಸಾಮಾನು ಸರಂಜಾಮುಗಳನ್ನು ಬಲಭೀಮನಂತೆ ತಾನೇ ಹೊತ್ತ. ಅವರನ್ನು ಸಂಸ್ಥೆಯಲ್ಲಿ ಕರೆದುತಂದು ವಸತಿ ಸೌಕರ್ಯಗಳನ್ನೆಲ್ಲಾ ಪರಿಚಯ ಮಾಡಿಕೊಟ್ಟು ವಿಶ್ರಮಿಸಲು ಹೇಳಿ ಹೊರಡಲನುವಾದ. ಆಗ ಅತಿಥಿಗಳು ಕೇಳಿದರು, "ನಾನು ಬುದ್ಧಿಯವರನ್ನು ಯಾವಾಗ ಭೇಟಿ ಮಾಡಬಹುದು?". "ತಾವು ವಿಶ್ರಮಿಸಿ ಸ್ನಾನ, ತಿಂಡಿ ಮುಗಿಸಿ ಅವರೇ ತಮ್ಮನ್ನು ಕಾಣುತ್ತಾರೆ" ಎಂದ ಈತ ಅಲ್ಲಿಂದ ಹೊರಟ. ಬಂದ ಗಣ್ಯ ಅತಿಥಿಗಳು ತಿಂಡಿ ಮುಗಿಸಿದರು, ಮಧ್ಯಾಹ್ನ ಊಟವೂ ಆಯಿತು, ಸಂಜೆಯೂ ಆಯ್ತು. ಎಲ್ಲಿ ನೋಡಿದರೂ ಬೆಳಿಗ್ಗೆ ಇವರನ್ನು ಕರೆತಂದವ ಎಲ್ಲರೊಂದಿಗೆ ಕೆಲಸ ಮಾಡುತ್ತಿದ್ದನೇ ಹೊರತು ಇವರು ಊಹಿಸಿದ್ದ ಮುಖ್ಯಸ್ಥ ಮಾತ್ರ ಕಾಣಲೇ ಇಲ್ಲ. ಮತ್ತೊಮ್ಮೆ ಆತನನ್ನೇ ಕೇಳಿದರು "ನಾನು ಬುದ್ಧಿಯವರನ್ನು ಭೇಟಿ ಆಗೋದು ಯಾವಾಗ?". ಸಂಜೆ ಪ್ರಾರ್ಥನೆಯ ನಂತರ ಅವರು ನಿಮ್ಮನ್ನು ಭೇಟಿಯಾಗುತ್ತಾರೆ ಉತ್ತರ ಬಂತು. ಪ್ರಾರ್ಥನೆ ಮುಗಿದಾಗ ಇವರು ಕಾಯುತ್ತಿದ್ದ ಹಾದಿಯಲ್ಲಿ ಆ ಬುದ್ಧಿಯವರ್ಯಾರೂ ಕಾಣದೆ, ಇತ್ತ ಬರುತ್ತಿದ್ದುದು ಅದೇ ಕೂಲಿಯವ. ಇವನನ್ನು ನಂಬಿದರೆ ಉಪಯೋಗವಿಲ್ಲ ಎಂದು ಅಲ್ಲೇ ಹತ್ತಿರದಲ್ಲಿದ್ದ ಮತ್ತೊಬ್ಬನನ್ನುಅತಿಥಿಗಳು ಕೇಳಿದರು. ಏನಪ್ಪಾ'ನನಗೆ ಬುದ್ಧಿಯವರು ಬೆಳಗ್ಗಿನಿಂದ ಕಾಣಿಸ್ತಾನೇ ಇಲ್ವಲ್ಲ?" ಆ ವ್ಯಕ್ತಿ ಅಚ್ಚರಿಯಿಂದ ಉತ್ತರಿಸಿದ "ಅವರು ಆಶ್ರಮ ಬಿಟ್ಟು ಎಲ್ಲೂ ಹೊಗಿಲ್ವಲ್ಲ ಸ್ವಾಮಿ, ನೋಡಿ ಇಲ್ಲೇ ಬರುತ್ತಿದ್ದಾರೆ ಎಂದು ಅದೇ ಕೂಲಿಯವನಂತಿದ್ದ ವ್ಯಕ್ತಿಯತ್ತ ಕೈತೋರಿದ." ಬಂದಿದ್ದ ಅತಿಥಿಗಳು ತಲ್ಲಣಿಸಿದರು. "ಬೆಳಗ್ಗೆ ಕೂಲಿಯಂತೆ ಬಂದು ಹಗಲಿರುಳೂ ಎಲ್ಲರೊಂದಿಗೆ ಒಬ್ಬನಾಗಿ ಬಿಡುವಿಲ್ಲದೆ ಶ್ರಮಿಸುತ್ತಿದ್ದ ಇವರೇ ತಾವು ಭೇಟಿಯಾಗಲು ಹಂಬಲಿಸುತ್ತಿದ್ದ 'ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳೇ!" ಅವರ ಮನಸ್ಸು ಮೂಖವಾಗಿತ್ತು.

ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಮಲ್ಲಾಡಿಹಳ್ಳಿ ಸ್ವಾಮಿಗಳೆಂದೇ ಖ್ಯಾತನಾಮರು. ‘ತಿರುಕ’ ಇವರ ಕಾವ್ಯನಾಮ. ಸದಾ ಶ್ವೇತವಸ್ತ್ರಧಾರಿಗಳಾಗಿ, ಹಸನ್ಮುಖರಾಗಿದ್ದವರು. ಎಲ್ಲರಿಗೂ ಯೋಗವನ್ನು ಹೇಳಿಕೊಟ್ಟು ಅವರ ರೋಗಗಳನ್ನು ನಿವಾರಿಸಿದರು. ಒಂದು ವಾಸ್ತವ ಸಂಗತಿಯೆಂದರೆ ತಮ್ಮನ್ನು ಕಾಡುತ್ತಿದ್ದ ಅನೇಕ ಕಾಯಿಲೆಗಳಿಂದ ಮುಕ್ತಿ ಪಡೆಯಲು ಇವರು ಯೋಗಕ್ಕೆ ಮೊರೆಹೋದರು. ನಿರಂತರ ಯೋಗಾಭ್ಯಾಸದಿಂದಾಗಿ ಅವರ ಅನೇಕ ಕಾಯಿಲೆಗಳು ದೂರವಾದವು. ಅವರ ಶಿಸ್ತುಬದ್ಧ ಯೋಗಾಸನಗಳೇ ಅವರ ಆರೋಗ್ಯದ ಗುಟ್ಟು; ಶತಾಯುಷಕ್ಕೆ ಕಾರಣ. ಮಲ್ಲಾಡಿಹಳ್ಳಿಯಲ್ಲಿ ಅನಂತ ಸೇವಾಶ್ರಮವನ್ನು ಸ್ಥಾಪಿಸಿದರು. ಜನರಿಂದ ‘ಸ್ವಾಮೀಜಿ’ ಎಂದು ಕರೆಸಿಕೊಂಡ ಇವರು ನಾವು ಕಾಣುವ ಇತರ ಸ್ವಾಮೀಜಿಗಳಂತಲ್ಲ. ಕಾವಿ ಧರಿಸಲಿಲ್ಲ. ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿ ತಮ್ಮ ಶಿಷ್ಯರೊಡಗೂಡಿ ದುಡಿಮೆ ಮಾಡುತ್ತಿದ್ದರು. ಕಟ್ಟುನಿಟ್ಟಿನ ದಿನಚರಿಯ, ಶಿಸ್ತಿನ ಸಿಪಾಯಿಗಳಾದ ಇವರದು ಸರಳ ಜೀವನ. ಸೇವೆಗಾಗಿನ ಬದುಕು.

ಮಲ್ಲಾಡಿಹಳ್ಳಿ ಸ್ವಾಮಿಗಳು ಜನಿಸಿದ ದಿನ 18.03.1891. ಮೂಲತಃ ಕೇರಳದಲ್ಲಿ ಹುಟ್ಟಿದರೂ ಮಲ್ಲಾಡಿಹಳ್ಳಿ ಸ್ವಾಮಿಗಳು ತಮ್ಮ ಸಂಬಂಧವನ್ನು ಮಲ್ಲಾಡಿಹಳ್ಳಿಯಲ್ಲಿ ಮಿಳಿತಗೊಳಿಸಿ, ಕನ್ನಡ ನೆಲದ ಮಣ್ಣಿನ ಮಗನಾದರು. 106 ವರ್ಷಗಳ ಕಾಲ ಸುದೀರ್ಘವಾಗಿ ಬದುಕಿ, ಅನೇಕರನ್ನು ತಮ್ಮ ಮಾರ್ಗದರ್ಶನದಿಂದ ಬದುಕಿಸಿದ ಮಲ್ಲಾಡಿಹಳ್ಳಿಯ ಈ ಸ್ವಾಮಿಗಳು 1996ರಲ್ಲಿ ಬೆಂಗಳೂರಿನಲ್ಲಿ ತಮ್ಮ ಲೌಕಿಕದ ವ್ಯಾಪಾರವನ್ನು ಮುಗಿಸಿದರು.

ಮಲ್ಲಾಡಿಹಳ್ಳಿ ಸ್ವಾಮಿಗಳು ಒಬ್ಬ ಮಹಾಸಾಧಕರು, ತಪಸ್ವಿಗಳು, ಪರಮಯೊಗಾಚಾರ್ಯರು, ಮಹಾಸಂಘಟಕರು, ಸಾರ್ಥಕ ಬದುಕಿನ ನಿಷ್ಕಾಮ ಕರ್ಮಯೋಗಿ. ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು. ‘ಅಭಿನವ ಧನ್ವಂತರಿ’ಯೆಂದೇ ಜನಪ್ರಿಯರು. ಚಿತ್ರದುರ್ಗ ಜಿಲ್ಲೆಯ ‘ಹೊಳಲ್ಕೆರೆ ತಾಲ್ಲೂಕಿರುವ – ಮಲ್ಲಾಡಿಹಳ್ಳಿಗೆ ಅವರು ಬಂದದ್ದು, ಅಲ್ಲಿನ ಜನರ ಪಾಲಿಗೆ ವರದಾನವಾಯಿತು. ತಮ್ಮ ಗುರು ‘ಶಿವಾನಂದ’ರ ಪ್ರೇರಣೆಯಂತೆ, ಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿ, ದಲಿತರು, ಬಡವರು, ಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ‘ಪೂಜೆ’ಯಾಗಿ ಸ್ವೀಕರಿಸಿ, ಅಲ್ಲಿ ಯೋಗ ಶಿಬಿರಗಳನ್ನು, ಆರೋಗ್ಯಕೇಂದ್ರಗಳನ್ನು, ಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನು ಕೈಗೆತ್ತಿಕೊಂಡು ಗ್ರಾಮೀಣರಿಗೆ ಅರಿವು ಕೊಡುವುದರ ಮೂಲಕ, ಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು. 1943ರಲ್ಲಿ ಮಲ್ಲಾಡಿಹಳ್ಳಿಯ ಪ್ರಜೆಗಳ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ 50 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು.

ಮಲ್ಲಾಡಿಹಳ್ಳಿ ಸ್ವಾಮಿಗಳವರ ತಂದೆ ಅನಂತ ಪದ್ಮನಾಭ ನಂಬೂದರಿ, ಮೂಲತಃ ಕೇರಳದ ಜ್ಯೋತಿಷ್ಯ ವಿದ್ವಾಂಸರು, ಮಹಾಪಂಡಿತರು; ತಮ್ಮ ಬಳಿಗೆ ಬರುತ್ತಿದ್ದ ಜನಗಳ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು. ‘ಪದ್ಮಾಂಬಾಳ್’ ಅವರ ತಾಯಿ, ಮಹಾಸಾಧ್ವಿ. ಅವರಿಗೆ ಜನಿಸಿದ ಮಗುವಿನ ಹೆಸರು ‘ಕುಮಾರಸ್ವಾಮಿ’ ಎಂದು. ಹುಟ್ಟಿದಾಗಲೇ ಆ ಶಿಶು, ‘ಬಾಲರೋಗ’ಕ್ಕೆ ತುತ್ತಾಯಿತು. ಸುಮಾರು 14 ವರ್ಷ, ಯಾವ ಭಾವನೆಯನ್ನೂ ಅನುಭವಿಸದ, ಆ ಪ್ರಜ್ಞಾಶೂನ್ಯ ಮಗುವಿನ ಮಾತೆ, ದೂರದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಸೇವಾರ್ಥವಾಗಿ ಕರೆದೊಯ್ಯುತ್ತಾರೆ. ಪದ್ಮಾಂಬ ಹಾಗೂ ನಂಬೂದರಿಯವರು ನಿಶ್ಯಕ್ತಿ, ವೃದ್ಧಾಪ್ಯ ಹಾಗೂ ರೋಗಗಳಿಂದ ಬೆಂಡಾಗಿ ಹೋಗಿದ್ದರು. ಆದರೂ 14 ವರ್ಷದ ಮಗನನ್ನು ಎತ್ತಿಕೊಂಡೇ ಕಾಡಿನ ದುರ್ಗಮ ಹಾದಿಯಲ್ಲಿ ಅವರ ‘ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಯಾತ್ರೆ’ ಸಾಗಿತ್ತು. ದಕ್ಷಿಣ ಕನ್ನಡದ ಬಾರಕೂರು ಎಂಬ ಗ್ರಾಮಕ್ಕೆ ಬಂದು, ಶ್ರೀ ನರಸಿಂಹಯ್ಯನವರ ಮನೆಯಲ್ಲಿ ತಂಗಿದರು.

ಅದೇ ಸಮಯಕ್ಕೆ ಮಂತ್ರಾಲಯದ ಅಂದಿನ ಮಠಾಧಿಪತಿಗಳು, ಬಾರಕೂರಿನಲ್ಲಿ ಬಿಡಾರಮಾಡಿದ್ದು ಈ ಬಾಲಕನಿಗೆ ಆಶೀರ್ವದಿಸಿ ಅನುಗ್ರಹಿಸಿದ ಮೇಲೆ, ತಾಯಿ ಪದ್ಮಾಂಬಾಳ್ ಅವರಿಗೆ ಸ್ವಲ್ಪ ಸಮಾಧಾನವಾಯಿತು. ಮಂತ್ರಾಲಯದ ಯತಿಗಳು ಆ ಬಾಲಕನನ್ನು ‘ರಾಘವೇಂದ್ರ’ ಎಂದು ಕರೆದರು. ಅಷ್ಟು ಹೊತ್ತಿಗೆ ಪದ್ಮಾಂಬಾಳ್ ಅವರ ಆರೋಗ್ಯ ತೀರ ಹದಗೆಟ್ಟಿದ್ದು, ಅವರು ಪ್ರಯಾಣ ಮುಂದುವರೆಸಲು ಸಾಧ್ಯವಾಗದೆ, ಮಗನ ಈ ಸ್ಥಿತಿಯನ್ನು ನೋಡಲಾರದೆ ಕೊರಗುತ್ತಾ ಬಾರಕೂರಿನಲ್ಲೆ ಅಸುನೀಗಿದರು. ನಂಬೂದರಿಯವರು ಆ ಬಾಲಕನನ್ನು ಗೆಳೆಯ ಭಿರ್ತಿಯ ರಾಮಚಂದ್ರಶಾಸ್ತ್ರಿಗಳ ಸಲಹೆಯಂತೆ ಯಕ್ಷಗಾನ ಪಂಡಿತ, ವಾಗ್ಮಿ, ರಾಮಾಯಣ ಮಹಾಭಾರತ ವ್ಯಾಖ್ಯಾನಕಾರ ನರಸಿಂಹಯ್ಯ ಮತ್ತು ಅವರ ಮಡದಿ ಪುತ್ಥಲೀಬಾಯಿಗೆ ಕ್ರಿ.ಶ. 1906ರ ಯುಗಾದಿಯಂದು ಒಪ್ಪಿಸಿ ತಾವು ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟರು.

ಕುಮಾರಸ್ವಾಮಿಯ ಪಾಲನೆ-ಪೋಷಣೆಯಲ್ಲಿ ತಮ್ಮ ಸರ್ವಸ್ವ ತ್ಯಾಗಮಾಡಿ ತಮ್ಮ ಮಾತೃಪ್ರೇಮದ ಅಮೃತವರ್ಷದಿಂದ ಪುತ್ಥಲೀಬಾಯಿ ಅವನಲ್ಲಿ ಗಮನಾರ್ಹ ಬದಲಾವಣೆ ಮೂಡಿಸಿದರು. ದಿನ ಕಳೆದಂತೆ ಹುಡುಗನಲ್ಲಿ ಪವಾಡಸದೃಶ ಬದಲಾವಣೆ ಉಂಟಾಯಿತು. ಕೆಲವೇ ತಿಂಗಳುಗಳಲ್ಲಿ ಎಲ್ಲರಂತಾಗಿದ್ದ.

ರಾಘವೇಂದ್ರರ ಜೀವನದಲ್ಲಿ ಹೊಸ ತಿರುವನ್ನು ಕೊಡುವಲ್ಲಿ ನೆರವಾದವರಲ್ಲಿ, ಅವರ ಬಾಲ್ಯದ ಗುರುಗಳಾದ, ಶಿವರಾಮಯ್ಯ, ‘ತಾರಕಮಂತ್ರ’ ಉಪದೇಶಿಸಿದ ನಿತ್ಯಾನಂದಸ್ವಾಮಿ, ರಂಗನಾಥಭಟ್ಟರು, ವರೂಢದ ಶಿವಾನಂದ ಶ್ರೀಗಳು, ಬರೋಡದ ಪ್ರೊ. ಮಾಣಿಕ್ಯರಾವ್, ಪಳನಿಸ್ವಾಮಿ ಬಹಳ ಮುಖ್ಯರು. ತಾರಕಮಂತ್ರ (ಶಕ್ತಿಪಾತ ಯೋಗ)ವನ್ನು ಉಪದೇಶಿಸುವಾಗ, ಸ್ವಾಮಿ ನಿತ್ಯಾನಂದರು, ರಾಘವರ ಮಸ್ತಕದ ಮೇಲೆ ತಮ್ಮ ಕೈ ಇಟ್ಟರು. ಅನೇಕ ಯೋಗಿವರ್ಯರೂ ಅವರಿಗೆ ಬೋಧಿಸಿದರು. ‘ದೇವರು’ ಎಂಬ ಸ್ಪಷ್ಟ ಕಲ್ಪನೆಯನ್ನು ಮೊದಲು ಅವರಲ್ಲಿ ಮೂಡಿಸಿದವರು ಯತಿವರ್ಯ ಸ್ವಾಮಿ ಶಿವಾನಂದರು. ರೋಗಿಗಳಲ್ಲಿ, ದೀನರಲ್ಲಿ, ಆರ್ತರಲ್ಲಿ ಕೂಡ ದೈವವನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು, ದೇವರು – ಎಂಬುದು ಒಂದು ದೃಷ್ಟಿಕೋನ – ಇಡೀ ಜಗತ್ತನ್ನು ದೈವವೆಂದು ಪರಿಭಾವಿಸಲು ಭಾವಶುದ್ಧಿ ಬೆಳೆಸಿಕೊಳ್ಳಬೇಕಾಗುತ್ತದೆ ಎಂಬುದರ ಅರಿವು ಅವರಿಗಾಗಿತ್ತು.

ರಾಘವೇಂದ್ರರ ಪ್ರೌಢಶಾಲೆಯ ಪದವಿಪೂರ್ವ ವಿದ್ಯಾಭ್ಯಾಸ ಕುಂದಾಪುರದಲ್ಲಾಯಿತು. ಅವರು ಬರೋಡದಲ್ಲಿ ಕಲಿಯುಗದ ಭೀಷ್ಮರೆಂದೇ ಪ್ರಖ್ಯಾತರಾದ, 130 ವರ್ಷ ಬದುಕಿದ್ದ ಜುಮ್ಕಾದಾದಾರವರ ಶಿಷ್ಯ ಬಾಲಬ್ರಹ್ಮಚಾರಿ, ಪ್ರೊಫೆಸರ್ ಮಾಣಿಕ್ಯರಾಯರು ಸ್ಥಾಪಿಸಿದ್ದ ಸುಪ್ರಸಿದ್ಧ ಜುಮ್ಕಾದಾದಾ ವ್ಯಾಯಾಮಶಾಲೆಯಲ್ಲಿ ಶಬ್ಧವೇಧಿ ಕಲೆಯನ್ನು ಕಲಿತರು. ಅಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಲಾಹೋರಿನ ವೈದ್ಯಶ್ರೇಷ್ಠರಾದ, ‘ಆಚಾರ್ಯ ಬಾಬಾ ಲಕ್ಷ್ಮಣದಾಸ’ ಅವರ ಸಮ್ಮುಖದಲ್ಲಿ ಪದವಿ ಪಡೆದರು. ಇದಕ್ಕೆ ಮೊದಲು ಲಕ್ಷ್ಮಣದಾಸ್ ಅವರ ಕೈವಲ್ಯಧಾಮ ಆಶ್ರಮದಲ್ಲಿ ಆಯುರ್ವೇದ, ಸಿದ್ಧವಿದ್ಯೆ, ಅಸ್ತಿ ಸಂಧಾನ ಕಲೆ, ಯುನಾನಿ ವೈದ್ಯ ಪದ್ಧತಿ ಕಲಿತರು. ಲಾಹೋರಿಗೆ ಹೋಗುವ ಮೊದಲೇ ಅವರಿಗೆ 368 ಆಸನಗಳ ಪರಿಪೂರ್ಣ ಜ್ಞಾನಾಭ್ಯಾಸವಿತ್ತು. ಸೂರ್ಯನಮಸ್ಕಾರಗಳು, ಯೋಗಾಸನಗಳು, ಪ್ರಾಣಾಯಾಮ ಮುಂತಾದ ಆತ್ಮವಿದ್ಯೆಯನ್ನು ಬೋಧಿಸುವ ಮಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಟ್ಟಾರೆ, ಯೋಗವಿದ್ಯೆಯಲ್ಲಿ ನಿಷ್ಣಾತರಾದರು. ರಾಘವೇಂದ್ರರಲ್ಲಿ ದಿವ್ಯ ತೇಜಸ್ಸಿತ್ತು. ಯೋಗಾಭ್ಯಾಸದಿಂದ ವಜ್ರಕಾಯರಾಗಿದ್ದರು. ಅವರ ಅಂಗಸೌಷ್ಟವ, ಶರೀರದ ಆಕೃತಿ, ಶಿಲ್ಪಿಗಳಿಗೂ, ಶಿಲ್ಪಚಿತ್ರಕಾರರಿಗೂ ಪ್ರೇರಣೆ ನೀಡುವಂತಿತ್ತು.

ಭಟ್ಕಳದಲ್ಲಿ ಮಾರುತಿ ವ್ಯಾಯಾಮಶಾಲೆ ಉದ್ಘಾಟಿಸಿದರು. ರಾಘವೇಂದ್ರರು ಸ್ಥಾಪಿಸಿದ ‘ಅನಂತ ಸೇವಾಶ್ರಮ’ ಅನಾಥರಿಗೆ, ಬಡಮಕ್ಕಳಿಗೆ, ಒಂದು ‘ಸೇವಾಕುಟೀರ’ವಾಗಿ ಬೆಳೆಯಿತು. ಅವರ ಶಿಷ್ಯ ‘ಸೂರದಾಸ ಜೀ’ (ಪೂರ್ವಾಶ್ರಮದಲ್ಲಿ ಸೂರ್ಯನಾರಾಯಣ) ಅವರೊಡಗೂಡಿ ಅನಾಥಸೇವಾಶ್ರಮದ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದರು.

ತಂತ್ರ ಯೋಗಶಾಸ್ತ್ರದ ‘ಅಷ್ಟಾಂಗ ಯೋಗ’ಗಳನ್ನು ಆಸಕ್ತರಿಗೆ, ಆಸ್ತಿಕರಿಗೆ ತಿಳಿಯಹೇಳಿದರು.

ಪ್ರತೀವರ್ಷವೂ ಶ್ರಾವಣಮಾಸದಲ್ಲಿ ಒಂದು ತಿಂಗಳು ‘ಮೌನವ್ರತ’ ಧಾರಣೆಮಾಡುತ್ತಿದ್ದರು.

ಮಲ್ಲಾಡಿಹಳ್ಳಿಯ ಸ್ವಾಮಿಗಳು ಅನೇಕ ಅತ್ಯಮೂಲ್ಯ ಪುಸ್ತಕಗಳನ್ನು ಈ ಸಮಾಜಕ್ಕೆ ಧಾರೆ ಎರೆದಿದ್ದಾರೆ. 4 ಕಾವ್ಯಗಳು, 9 ಕಾದಂಬರಿಗಳು, 12 ನಾಟಕಗಳು, 2 ಗೀತ ನಾಟಕ, 7 ಏಕಪಾತ್ರಾಭಿನಯ, 1 ವಚನ ಸಾಹಿತ್ಯ 3 ಕಥಾ ಸಂಕಲನ, 4 ಆಯುರ್ವೇದ, 4 ಯೋಗ (ಇದರಲ್ಲಿ “ಬೃಹತ್ ಯೋಗ ದರ್ಶನ” ಯೋಗ ಸಂಪುಟವೂ ಇದೆ) 5 ವ್ಯಾಯಾಮ, 2 ಇತರೆ 1 ಆತ್ಮ ನಿವೇದನೆ 3 ಜೋಳಿಗೆ ಪವಾಡ – ಇದು ರಾಘವೇಂದ್ರರ ಆತ್ಮಚರಿತ್ರೆ.

ಕರ್ನಾಟಕ ಸರ್ಕಾರ, ಇವರನ್ನು ಸನ್ಮಾನಿಸಲು ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳ ಬಗ್ಗೆ ಬಹಳ ಸಾರಿ ಪ್ರಸ್ತಾಪಿಸಿದಾಗ ಅವರ ಉತ್ತರ, “ಅವೆಲ್ಲಾ ನನಗೆ ಬೇಡ; ಆಶ್ರಮದ ಚಟುವಟಿಕೆಗಳಿಗೆ ಹಣದ ಕೊರತೆ ಇದೆ. ಅದನ್ನು ಕೊಡಿ”. ಕುವೆಂಪು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ಬಗ್ಗೆ ತಿಳಿಸಿದಾಗಲೂ ಅವರ ನಿಲುವು ಬದಲಾಗಲಿಲ್ಲ. ಆಶ್ರಮದ ಎಲ್ಲ ಖರ್ಚುಗಳಿಗೂ ಅವರು ದಾನಿಗಳ ಸಹಾಯ ಪಡೆಯಬೇಕಾಗಿತ್ತು. ಯಾವ ನಿರಂತರ ಧನದ ವ್ಯವಸ್ಥೆಯೂ ಇರಲಿಲ್ಲ. ಅವರು ಬರೆದ ಅನೇಕ ಪುಸ್ತಕಗಳ ಮಾರಾಟದಿಂದ ಬಂದರೆ ಅಲ್ಪಸ್ವಲ್ಪ ಹಣ ಅವರ ಸರ್ವೋದಯ ಮುದ್ರಣಾಲಯದಿಂದ ಬರುತ್ತಿತ್ತು. ತಮ್ಮ ಜೋಳಿಗೆ ತಗಲುಹಾಕಿಕೊಂಡು ಭಿಕ್ಷೆಗೆ ಹೋಗುತ್ತಿದ್ದರು.

1991ರಲ್ಲಿ ರಾಘವೇಂದ್ರರ 100ನೇ ಹುಟ್ಟಿದ ಹಬ್ಬವನ್ನು ಊರಿನ ಜನ ಹಾಗೂ ಆಶ್ರಮದ ಹಿತೈಷಿಗಳು ಆಚರಿಸಿದರು. ಆ ಸಮಯದಲ್ಲಿ ಅವರು ಬರೆದ ಪುಟ್ಟ ಪುಸ್ತಕ ‘ಆತ್ಮ ನಿವೇದನೆ’ ಹೊರಗೆ ಬಂತು. ಆತ್ಮಚರಿತ್ರೆ, ‘ಜೋಳಿಗೆಯ ಪವಾಡ’ ಬರೆದರು. ಆಗಲೇ ಹೃದಯಾಘಾತದಿಂದ ನರಳಿದ್ದರು. ಪುನಃ 1996ರಲ್ಲಿ ಅವರಿಗೆ ಮತ್ತೆ ‘ಹೃದಯಾಘಾತವಾಯಿತು.

ತಿಂಗಳ ಮೇಲೆ ‘ಕೋಮಾ’ದಲ್ಲಿದ್ದ ಅವರಿಗೆ ಮತ್ತೆ ಪ್ರಜ್ಞೆ ಬರಲೇ ಇಲ್ಲ. ‘ಬುತ್ತಿ ಗಂಟು ತೀರಿತಿನ್ನು, ಹೊರಟೆ ನನ್ನ ಊರಿಗೆ’ ಎನ್ನುತ್ತಾ ಆಗಸ್ಟ್ 31, 1996ರಂದು ಇಹ ತೊರೆದು ಪರದೆಡೆಗೆ ನಡೆದರು.

ಸಹಸ್ರಾರು ಜನರ ಜೀವನದಲ್ಲಿ ಬೆಳಕು ಮೂಡಿಸಿ, ಸಮಾಜದ ಒಳಿತಿಗಾಗಿಯೇ ತಮ್ಮ ಜೀವನವಿಡೀ ದುಡಿದು, ತಮ್ಮ ಜೀವನವನ್ನು ‘ಸಾರ್ಥಕ’ಗೊಳಿಸಿದ ಮಹಾಚೇತನ, ಅನಂತದಲ್ಲಿ ಲೀನವಾಯಿತು.

ಸ್ವಾಮಿಗಳು ಕಟ್ಟಿ ಬೆಳೆಸಿದ ಪ್ರೌಢಶಾಲೆಗಳು, ಮಕ್ಕಳ ವಸತಿ ಗೃಹಗಳು, ಬನಶಂಕರಿ ಅಮ್ಮನ ದೇವಸ್ಥಾನ, ಕಾಲೇಜುಗಳು, ದೈಹಿಕ ಶಿಕ್ಷಣ ಕಾಲೇಜು, ಆಯುರ್ವೇದ ಕಾಲೇಜು, ಶಿಕ್ಷಕರ ತರಬೇತಿ ಕಾಲೇಜು ಇಂದು ವಿಸ್ತೃತವಾಗಿ ಬೆಳೆದು ಉತ್ತಮ ಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.

***********



ಮಾಹುಲಿ ವಿದ್ಯಾಸಿಂಹಾಚಾರ್ಯ

ಪೂಜ್ಯ ಶ್ರೀಮಾಹುಲಿ ವಿದ್ಯಾಸಿಂಹಾಚಾರ್ಯರಿಗೆ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ'ಯ ಗೌರವ ದೊರೆತಸಂದರ್ಭದಲ್ಲಿ ಶ್ರೀಆಚಾರ್ಯರನ್ನು ಕುರಿತು ಹಿಂದೆ 'ಸಾರಸ್ವತಸಾನ್ನಿಧ್ಯ' ಲೇಖನಮಾಲಿಕೆಯಲ್ಲಿ  ಪ್ರಕಟವಾದ ಲೇಖನ- ಅಭಿವಂದನಾ ಪೂರ್ವಕ ವಾಗಿ 

'ಸಾರಸ್ವತ ಸಾನ್ನಿಧ್ಯ'ಲೇಖನ ಮಾಲಿಕೆಯ ತೊಂಬತ್ತೊಂಬತ್ತನೆಯ ಲೇಖನ- ಮಹಾಮಹೋಪಾಧ್ಯಾಯ' ಕುಲಪತಿ ಮಾಹುಲಿ ವಿದ್ಯಾಸಿಂಹಾಚಾರ್ಯರು 

ಅಸಂಖ್ಯವಿದ್ಯಾರ್ಥಿಗಳಿಗೆ ಅಶನ,ವಸನಗಳ ವ್ಯವಸ್ಥೆಯನ್ನು ಮಾಡಿ, ವಿದ್ಯೆಯನ್ನು ಬೋಧಿಸುವ ಗುರುವಿಗೆ 'ಕುಲಪತಿ' ಎಂದುಹೇಳುವ ಪರಿಪಾಠವಿದೆ.  ಮುಂಬಯಿಯಂತಹ ಮಹಾನಗರದಲ್ಲಿ ಅಂತಹ ಒಂದು ವ್ಯವಸ್ಥೆ ಮಾಡುವುದು ಎಷ್ಟು ಕಠಿಣವೆಂದು ಸರ್ವರಿಗೂ ವಿದಿತ.  ಹಾಗಿದ್ದಾಗ್ಯೂ ಮುಂಬಯಿಯ  ಶ್ರೀಸತ್ಯಧ್ಯಾನವಿದ್ಯಾಪೀಠದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಊಟ,ವಸತಿಗಳನ್ನು ನೀಡಿ, ವಿದ್ಯೆಯನ್ನು ಬೋಧಿಸುತ್ತಿರುವ ಮಹಾವಿದ್ವಾಂಸರು 'ಕುಲಪತಿ' ಮಾಹುಲಿ ವಿದ್ಯಾಸಿಂಹಾಚಾರ್ಯರು. ಮುಂಬಯಿಯಲ್ಲಿ ಮಧ್ವಸಿದ್ಧಾಂತದ ವಾಣೀವಿಹಾರವನ್ನು ಮಾಡಿಸಿದ ಪೂಜ್ಯ ಮಾಹುಲಿ ಗೋಪಾಲಾಚಾರ್ಯರು ಹಾಗೂ ಶ್ರೀಮತಿ ವಿದ್ಯಾವತೀದೇವಿಯವರ ಸುಪುತ್ರರಾಗಿ 1960ರಲ್ಲಿ ಜನಿಸಿದ ಶ್ರೀ ವಿದ್ಯಾಸಿಂಹಾಚಾರ್ಯರ ತಂದೆ ಐನಾಪುರದ ಪ್ರತಿಷ್ಠಿತ ಮಾಹುಲಿ ವಂಶದವರಾದರೆ, ತಾಯಿ ಪ್ರತಿಷ್ಠಿತ ಪಾಚ್ಛಾಪುರವಂಶದವರು. ತಂದೆ ಹಾಗೂ ತಾಯಿಯಿಂದ ಬಹಳಷ್ಟು ಪ್ರಭಾವಿತರಾದ ಶ್ರೀವಿದ್ಯಾಸಿಂಹಾಚಾರ್ಯರಿಗೆ ತಮ್ಮ ಜೀವನದ ಪ್ರಾರಂಭಿಕ ಹಂತದಿಂದಲೂ ಅಧ್ಯಯನದಲ್ಲಿ ಅಪಾರವಾದಂತಹ ಶ್ರದ್ಧೆ ಮತ್ತು ಆಸಕ್ತಿ.  ಮಹಾವಿದ್ವಾಂಸರಾಗಿದ್ದ ತಂದೆ ಶ್ರೀಮಾಹುಲಿ ಗೋಪಾಲಾಚಾರ್ಯರು ಹಾಗೂ ಹಿರಿಯ ಬಂಧುಗಳಾದ ಶ್ರೀ ಅಶ್ವತ್ಥಾಮಾಚಾರ್ಯರು ಹಾಗೂ ಶ್ರೀಕೃಷ್ಣಾಚಾರ್ಯರಲ್ಲಿ ಅಧ್ಯಯನಮಾಡಿದ ಶ್ರೀವಿದ್ಯಾಸಿಂಹಾಚಾರ್ಯರು ಕೇವಲ 19 ವರ್ಷದಲ್ಲಿ ಶ್ರೀಮನ್ನ್ಯಾಯಸುಧಾ ಪರೀಕ್ಷೆಯನ್ನು ನೀಡಿದರು. 21 ನೆಯ ವರ್ಷದಲ್ಲಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿದ ಶ್ರೀವಿದ್ಯಾಸಿಂಹಾಚಾರ್ಯರ ಧರ್ಮಪತ್ನಿ ಶ್ರೀಸತ್ಯನಾಥತೀರ್ಥಶ್ರೀಪಾದಂಗಳವರ ವಂಶಸ್ಥರಾದ ಶ್ರೀಮತಿ ಪ್ರಜ್ಞಾದೇವಿಯವರು. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಶ್ರೀಮತಿ ಪ್ರಜ್ಞಾದೇವಿಯವರು ಶಾಸ್ತ್ರ ಹಾಗೂ ಹರಿದಾಸಸಾಹಿತ್ಯದಲ್ಲಿ ಅಪಾರವಾದಂತಹ ಪರಿಣತಿಯನ್ನು ಹೊಂದಿದ್ದಾರೆ. ಪೂಜ್ಯ ಮಾಹುಲಿ ಗೋಪಾಲಾಚಾರ್ಯರು ಶ್ರೀಹರಿಯ ಸಾನಿಧ್ಯವನ್ನು ಸೇರಿದಾಗ ಶ್ರೀವಿದ್ಯಾಸಿಂಹಾಚಾರ್ಯರಿಗೆ ಕೇವಲ 24 ವರ್ಷ. ಅಷ್ಟು ಚಿಕ್ಕ ಹರಯದಲ್ಲಿಯೇ, 'ಕುಲಪತಿ'ಯಾಗಿ  ವಾಣೀವಿಹಾರ ವಿದ್ಯಾಲಯ ಹಾಗೂ ಶ್ರೀಸತ್ಯಧ್ಯಾನ ವಿದ್ಯಾಪೀಠಗಳನ್ನು ನಡೆಸುವ ಮಹತ್ತರವಾದ ಹೊಣೆಗಾರಿಕೆಯನ್ನು ಹೊತ್ತ ಶ್ರೀವಿದ್ಯಾಸಿಂಹಾಚಾರ್ಯರು ಶ್ರೀಹರಿ,ವಾಯುಗಳ ಅನುಗ್ರಹದಿಂದ ಅತ್ಯಂತ ಯಶಸ್ವಿಯಾಗಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಿದರು ಮಾತ್ರವಲ್ಲ ವಿದ್ಯಾಪೀಠಗಳನ್ನು ನಭೂತೋ ನಭವಿಷ್ಯತಿ ಎಂಬಂತೆ ಬೆಳೆಸಿದರು.

 ಒಂದು ಜನ್ಮದಲ್ಲಿ ಒಂದು ಶಾಸ್ತ್ರದ ಪ್ರಾವೀಣ್ಯಪಡೆಯುವುದೇ ಕಷ್ಟವಿರುವಾಗ ಪೂಜ್ಯ ಮಾಹುಲಿ ವಿದ್ಯಾಸಿಂಹಾಚಾರ್ಯರು ನ್ಯಾಯ,ವೇದಾಂತ,ವ್ಯಾಕರಣ, ಸಾಹಿತ್ಯ, ಮೀಮಾಂಸಾ ಮೊದಲಾದ ಅನೇಕಶಾಸ್ತ್ರಗಳ ವೈದುಷ್ಯವನ್ನು ಹೊಂದಿರುವುದು ಮಾತ್ರವಲ್ಲದೆ, ಪೌರಾತ್ಯ,ಪಾಶ್ಚಾತ್ಯ ತತ್ತ್ವಜ್ಞಾನಗಳ ಆಳವಾದ ಅಧ್ಯಯನ ಮಾಡಿದವರು. ವಿದ್ಯಾಪೀಠದಲ್ಲಿರುವ ಸಹಸ್ರಸಹಸ್ರಸಂಖ್ಯೆಯ ವಿವಿಧ ವಿಷಯಗಳಿಗೆ ಸಂಬಂಧಿಸಿದ ಗ್ರಂಥಭಂಡಾರ ಆಚಾರ್ಯರ ವಿದ್ಯಾಪ್ರೇಮಕ್ಕೆ ಸಾಕ್ಷಿಯಾಗಿದೆ. ಅನೇಕ ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳ ಪಂಡಿತರು ಮಾತ್ರವಲ್ಲದೆ, ಶ್ರೀವಲ್ಲಭಾಚಾರ್ಯಸಂಪ್ರದಾಯದ ಮಠಾಧಿಪತಿಗಳು ಸಹಾ ಶ್ರೀವಿದ್ಯಾಸಿಂಹಾಚಾರ್ಯರ ವಿದ್ಯಾ ಶಿಷ್ಯರು ಎಂಬುದನ್ನು ಗಮನಿಸಿದಾಗ ಮಾಹುಲಿ ಆಚಾರ್ಯರ ವಿದ್ಯೆಯ ಮಹತಿ ತಿಳಿಯುತ್ತದೆ. ಒಬ್ಬಗುರು ಎಂತಹ ಗುರು ಎಂದು ತಿಳಿಯಬೇಕಾದರೆ ಆತನ ಶಿಷ್ಯರು ಎಂತಹವರು ಎಂದು ನೋಡಬೇಕು ಎಂಬ ಮಾತಿದೆ. ಸಮಕಾಲೀನ ಮಹಾವಿದ್ವಾಂಸಮಾಧ್ವಮಠಾಧೀಶರಲ್ಲಿ ಒಬ್ಬರೂ,ಪರಮಪೂಜ್ಯ ಶ್ರೀಉತ್ತರಾದಿ ಮಠಾಧೀಶರೂ ಆದ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ತಮ್ಮ ಪೂರ್ವಾಶ್ರಮದಲ್ಲಿ  ಪೂಜ್ಯ ಶ್ರೀಮಾಹುಲಿ ವಿದ್ಯಾಸಿಂಹಾಚಾರ್ಯರಲ್ಲಿ ಅಧ್ಯಯನ ಮಾಡಿದ್ದರು ಎಂದಮೇಲೆ ಶ್ರೀವಿದ್ಯಾಸಿಂಹಾಚಾರ್ಯರ ವಿದ್ಯಾಪ್ರೌಢಿಮೆಯ ಬಗ್ಗೆ ಹೆಚ್ಚಿಗೆ ಹೇಳಬೇಕಾದಂತಹ ಅವಶ್ಯಕತೆಯೇ ಇರುವುದಿಲ್ಲ.

ಹದಿನೆಂಟು ಬಾರಿ ಶ್ರೀಮನ್ನ್ಯಾಯಸುಧಾ ಮಂಗಳವನ್ನು ನೆರವೇರಿಸಿ, 200 ಕ್ಕೂ ಹೆಚ್ಚಿನ ವಿದ್ವಾಂಸರನ್ನು ಸಿದ್ಧಗೊಳಿಸಿ, ವಿಷ್ಣು,ವೈಷ್ಣವಪ್ರಜ್ಞೆಯ ಜಾಗೃತಿಗಾಗಿ ಸಮರ್ಪಿಸಿದ ಧನ್ಯಜೀವಿ ಶ್ರೀಮಾಹುಲಿ ವಿದ್ಯಾಸಿಂಹಾಚಾರ್ಯರು. ಆಚಾರ್ಯರ ಪ್ರವಚನಗಳೆಂದರೆ ಎಲ್ಲಿಯೂ ವಿಷಯಾಂತರವಿಲ್ಲ. ಕೆಲವು ಪಂಡಿತರು ಮಾಡುವಂತೆ ಮನರಂಜನೆಯ ಕಾಲಕ್ಷೇಪವಲ್ಲ. ಪ್ರವಚನದ ಪ್ರತಿಯೊಂದೂ ವಾಕ್ಯವೂ ಅರ್ಥಗರ್ಭಿತ. ಶ್ರುತಿ,ಸ್ಮೃತಿ,ಶ್ರೀಮದಾಚಾರ್ಯರ, ಶ್ರೀಟೀಕಾಕೃತ್ಪಾದರಾದಿ ಅನೇಕ ಪೂರ್ವಾಚಾರ್ಯರ ಉಕ್ತಿಗಳ ಸಂದರ್ಭೋಚಿತ ಉಲ್ಲೇಖ.ತಮ್ಮ ಮಾತಿಗೆ ಪುಷ್ಟಿ ನೀಡುವಂತೆ ಪೌರಾತ್ಯ,ಪಾಶ್ಚಾತ್ಯ ಉದ್ಗ್ರಂಥಗಳ ಉಲ್ಲೇಖ. ಶ್ರೀವೇದವ್ಯಾಸ, ಶ್ರೀಮಧ್ವ, ಜಯತೀರ್ಥರಂತೆ- ಫ್ರಾಯ್ಡ್, ಯೂಂಗ್, ಮಾರ್ಕ್ಸ್ ಮೊದಲಾದ ಪಾಶ್ಚಾತ್ಯ ಚಿಂತಕರೂ ಪ್ರವಚನದಲ್ಲಿ ಸುಳಿಯುವುದುಂಟು. ಪ್ರಪಂಚದಾದ್ಯಂತದ ಚಿಂತನೆಗಳು ಪ್ರವಚನದಲ್ಲಿ ಸುಳಿದರೂ ಪೂರ್ಣಪ್ರಜ್ಞಶಾಸ್ತ್ರದ ಬಗೆಗಿನ ನಿಶ್ಚಿತವಾದ ನಿಷ್ಟೆಗೆ ಕಿಂಚಿತ್ತೂ ವ್ಯತ್ಯಯವಿಲ್ಲ. ಭಾಗವತವಿರಲಿ, ಭಾರತವಿರಲಿ, ರಾಮಾಯಣವಿರಲಿ, ದೇವರು, ಮುಕ್ತಿ, ಭಕ್ತಿಯ ಬಗ್ಗೆ ಚಿಂತನೆಯಿರಲಿ ಆಚಾರ್ಯರ ಚಿಂತನೆ ಸರ್ವಂಕಷ. ಐತರೇಯವಿರಲಿ, ಬೃಹದಾರಣ್ಯಕವಿರಲಿ ಉಪನಿಷತ್ತಿನ ಆಳಕ್ಕಿಳಿದು ಪ್ರವಚನ ಮಾಡುವ ವೈದುಷ್ಯ ಪ್ರಾಯ: ಪೂಜ್ಯ ಬನ್ನಂಜೆಗೋವಿಂದಾಚಾರ್ಯರಿಗೆ ಮತ್ತು ಪೂಜ್ಯ ಶ್ರೀವಿದ್ಯಾಸಿಂಹಾಚಾರ್ಯರಿಗೆ ಮಾತ್ರವೇ ಸಿದ್ಧಿಸಿರುವ ಭಗವತ್ಪ್ರಸಾದವೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. 'ಸೃಷ್ಟಿರಹಸ್ಯ' ಎಂಬ ಕೃತಿಯಲ್ಲಿ ಸೃಷ್ಟಿಯ ಬಗ್ಗೆ ಇರುವ ಪೌರಾತ್ಯ, ಪಾಶ್ಚಾತ್ಯ ಅಭಿಪ್ರಾಯಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಿ, ಸೃಷ್ಟಿಯ ರಹಸ್ಯ ಹೇಗಿರಬಹುದು ಎಂಬುದನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಶ್ರೀಆಚಾರ್ಯರು ಮಾಡಿದ್ದಾರೆ. 'ಪೂಜಾರಹಸ್ಯ'ವೆಂಬ ಕೃತಿಯಲ್ಲಿ ದೇವಪೂಜೆಯಲ್ಲಿ ಬಳಸುವ ಮಂತ್ರಗಳ ಅಧ್ಯಾತ್ಮಿಕವಿವರಣೆಯೊಂದಿಗೆ, ಪೂಜಾಕಾಲದಲ್ಲಿ ಬಳಸುವ ತಂತ್ರಗಳು, ವಿಧಾನಗಳು , ವೈಶ್ವದೇವ, ಬಲಿಹರಣ,ಬ್ರಹ್ಮಯಜ್ಞಗಳ ವಿವರಣೆಯನ್ನೂ ನೀಡಿದ್ದಾರೆ. ಶ್ರೀವಿಷ್ಣುತೀರ್ಥರ 'ಅಧ್ಯಾತ್ಮ ರಸರಂಜನಿ'ಯನ್ನು ಕನ್ನಡಕ್ಕೆ ಅನುವಾದಿಸಿರುವ ಆಚಾರ್ಯರು  'ಸುಧಾವಿಶಾರದ', ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರಿಂದ 'ಶ್ರೀಪೂರ್ಣಪ್ರಜ್ಞಪ್ರಶಸ್ತಿ' ಹಾಗೂ ಕವಿಕುಲಗುರು ಕಾಳಿದಾಸ ವಿಶ್ವವಿದ್ಯಾನಿಲಯದಿಂದ 'ಮಹಾಮಹೋಪಾಧ್ಯಾಯ' ಗೌರವ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಧ್ಯಯನ,ಅಧ್ಯಾಪನ, ಜ್ಞಾನ ಪ್ರಸಾರವನ್ನೇ ಜೀವನದ ಪರಮಮುಖ್ಯವ್ರತವಾಗಿರಿಸಿಕೊಂಡಿರುವ ಋಷಿಸದೃಶ ಆಚಾರ್ಯರಿಗೆ ಅನಂತ ನಮನಗಳು. ಶ್ರೀಕೃಷ್ಣ,ಪೂರ್ಣಪ್ರಜ್ಞರು ಪ್ರೀತರಾಗಲಿ.ವೇಣುಗೋಪಾಲ ಬಿ.ಎನ್.

***

ಕರ್ನಾಟಕ ಸರ್ಕಾರದಿಂದ ಆಯೋಜಿಸಿದ, ಕರ್ನಾಟಕ ಸರ್ಕಾರದ ಅತ್ಯುತ್ತಮ ಪ್ರಶಸ್ತಿ ಎಂದೇ ಪ್ರಸಿದ್ಧವಾದ ರಾಜ್ಯೋತ್ಸವ ಪ್ರಶಸ್ತಿಗೆ ಅತ್ಯಂತ ಅರ್ಹವಾಗಿಯೇ ಭಾಜನರಾದ.....

ಮಹಾರಾಷ್ಟ್ರದಲ್ಲಿ ಇದ್ದುಕೊಂಡೇ ಕನ್ನಡದ ಅಭಿವೃದ್ಧಿಯ ಹರಿಕಾರರಾದ, ಕನ್ನಡ ಹರಿದಾಸಸಾಹಿತ್ಯದ ಹರಿಕಾರರೂ ಆದ, ಸ್ವಯಂ ಕನ್ನಡ ಸಾಹಿತ್ಯದಲ್ಲಿ ವಿಲಕ್ಷಣ ವಿದ್ವಾಂಸರಾದ,  ನೂರಾರು ಪ್ರಶಸ್ತಿಗಳಿಗೆ ಭಾಜನಾರಾದ, 

ನೂರಾರು ವಿದ್ವಾಂಸರನ್ನು ಸಿದ್ಧಪಡಿಸಿ,  ನಾಡಿನ ಉದ್ದಗಲದಲ್ಲಿಯೂ ಆ ವಿದ್ವಾಂಸರುಗಳನ್ನು ಸಂಸ್ಥಾಪಿಸಿ, ಕನ್ನಡ ಸಾಹಿತ್ಯದ ಪರಿಮಳವನ್ನು ಪಸರಿಸುವ ಮಹಾ ಕಸ್ತೂರಿಕಣ್ಮಣಿಗಳಾದ, 

ದೇಶದ ಉದ್ದಗಲದಲ್ಲಿಯೂ  ಕನಿಷ್ಠ ಐದಾರು ಸಾವಿರ ತಾಸುಗಳಲ್ಲಿ ಮಹಾಭಾರತ ಭಾಗವತ ಹರಿಕಥಾಮೃತಸಾರ ಹರಿಭಕ್ತಿ ಸಾರ ಮೊದಲಾದ ಉದ್ಗ್ರಂಥಗಳನ್ನು ಸರಳವಾದ ಕನ್ನಡದಲ್ಲಿ ಉಪನ್ಯಾಸ ಮಾಡುವ ಮುಖಾಂತರ ಜ್ಙಾನಸುಧೆಯೆಂಬ ಗಂಗೆಯನ್ನು ಹರಿಸಿದ.

ಮುಂಬಾಪುರಿಯಲ್ಲಿ ಇರುವ, ಅತ್ಯಂತ ಪ್ರಾಚೀನವಾದ ಸತ್ಯಧ್ಯಾನವಿದ್ಯಾಪೀಠ ದ ಕುಲಪತಿಗಳೂ ಆದ, ಇಂದಿಗೂ ನೂರಾರು ವಿದ್ಯಾರ್ಥಿಗಳಿಗೆ ಪ್ರಾಚೀನ ಸಂಸ್ಕೃತಿಯ ಸಂಸ್ಕಾರ ಹಾಗೂ ವಿದ್ಯೆ ಇವುಗಳನ್ನು ಧಾರೆಯೆರೆಯುವ, ಅನ್ನ ವಸ್ತ್ರ ವಸತಿಗಳನ್ನು ಕೊಟ್ಟು ಹದಿನಾಲ್ಕವರ್ಷಗಳ ಕಾಲ ಪಾಲನೆ ಪೋಷಣೆ ಮಾಡುತ್ತಾರೆ.

********


ಟಿ.ಕೆ. ರಾಮರಾಯ

 ಪತ್ತೇದಾರಿ ಕಾದಂಬರಿ ಕರ್ತೃ ಟಿ.ಕೆ. ರಾಮರಾಯರ ಜನ್ಮದಿನವಿಂದು. ಇವರು ೦೭-೧೦-೧೯೩೧ ರಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ತಂದೆ ಟಿ. ಕೃಷ್ಣಮೂರ್ತಿ ಹಾಗೂ ತಾಯಿ ನಾಗಮ್ಮ ದಂಪತಿಗಳಿಗೆ ಜನಿಸಿದರು.

ತಂದೆ ಟಿ. ಕೃಷ್ಣಮೂರ್ತಿಯವರು ರೈಲ್ವೆ ಇಲಾಖೆಯಲ್ಲಿ ಸ್ಟೇಷನ್‌ ಮಾಸ್ಟರ್ ಆಗಿದ್ದರು. ಪ್ರಾರಂಭಿಕ ಶಿಕ್ಷಣ ಕಡೂರು, ಅರಸೀಕೆರೆ ಮುಂತಾದೆಡೆ ಆಯಿತು. ಹೈಸ್ಕೂಲಿಗೆ ಸೇರಿದ್ದು ಕೋಲಾರದಲ್ಲಿ. ಹೈಸ್ಕೂಲಿನಲ್ಲಿದ್ದಾಗಲೇ ವಿಪರೀತ ಓದಿನ ಹುಚ್ಚು. ಆಗಲೇ ಬರೆದ ಪತ್ತೇದಾರಿ ಕಾದಂಬರಿ ಭಾಸ್ಕರ ಅಥವಾ ಸೇಡು. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್‌ ಷಾ ಮುಂತಾದವರು ಇವರ ಅಚ್ಚುಮೆಚ್ಚಿನ ಲೇಖಕರು. ಬಿ.ಎಸ್‌ಸಿ. ಆನರ್ಸ್ ಪದವಿ ಪಡೆದ ನಂತರ ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿದರೂ ಎರಡು ತಿಂಗಳಲ್ಲೇ ಅದನ್ನು ಬಿಟ್ಟು ಮದರಾಸಿನಲ್ಲಿ ರೈಲ್ವೆಗಾರ್ಡ್ ಕೆಲಸಕ್ಕೆ ಸೇರಿದರು. ರೈಲ್ವೆಯಲ್ಲಿ ಸ್ಟೇಷನ್‌ಮಾಸ್ಟರಾಗಿದ್ದ ತಂದೆಯವರ ಅಕಾಲ ಮರಣದಿಂದ ಮಾನವೀಯ ದೃಷ್ಟಿಯಿಂದ ದೊರೆತ ಉದ್ಯೋಗವಾಗಿತ್ತದು. ಆದರೆ ಇದಕ್ಕೆ  ಮೊದಲು ಅಣ್ಣನೊಬ್ಬನ ಮರಣದಿಂದ ಸಂಸಾರದ ಹೊಣೆ ಇವರ ಮೇಲೆ ಬಿದ್ದು, ತಮ್ಮ – ತಂಗಿ – ತಾಯಿ. ಇವರೆಲ್ಲರ ಜವಾಬ್ದಾರಿ ಹೊರಲು ಮದರಾಸಿನ ಕೆಲಸ ತೊರೆದು, ಚನ್ನಪಟ್ಟಣದಲ್ಲಿ ನೆಲೆಸಿ ಟ್ಯೂಟೋರಿಯಲ್ಸ್ ತೆರೆದು ತರಗತಿಗಳನ್ನು ಪ್ರಾರಂಭಿಸಿದರು. ಎಸ್‌.ಎಸ್.ಎಲ್‌.ಸಿ., ಪಿ.ಯು., ಪಾಲಿಟೆಕ್ನಿಕ್‌ ತರಗತಿಯ ವಿದ್ಯಾರ್ಥಿಗಳಿಗೆ ೨೦ ವರ್ಷಗಳ ಕಾಲ ಪಾಠ ಹೇಳಿದರು. ನಂತರ ಪ್ರಾರಂಭಿಸಿದ್ದು ಔಷಧಿ ಅಂಗಡಿ. ಇವರು ಬರೆದ ಮೊಟ್ಟಮೊದಲ ಕಾದಂಬರಿ ದೂರ ಗಗನ. ಆಗ ಅವರಿಗೆ ೩೫ರ ಪ್ರಾಯ. ರಂಜನೀಯವಾಗಿ, ಸೊಗಸಾಗಿ ಬರೆದ ಕಾದಂಬರಿ ಓದುಗರ ಗಮನ ಸೆಳೆದ ನಂತರ ಹಲವಾರು ಕಾದಂಬರಿಗಳನ್ನು ಬರೆದರು. ಮೊದಲು ಪ್ರಕಟಿಸಲಾಗದೆಂದು ವಿಷಾದ ಪತ್ರ ಬರೆದ ಸಂಪಾದಕರೆ ಕ್ಯೂನಲ್ಲಿ ಕಾಯ್ದು ಕಾದಂಬರಿ ಬರೆಸಿ ತಮ್ಮ ಪತ್ರಿಕೆಯಲ್ಲಿ ಧಾರಾವಾಹಿಯ ಆಗಿ ಪ್ರಕಟವಾಗಬೇಕೆಂದು ಆಶಿಸಿದರು. ೧೯೬೯ರಲ್ಲಿ ಗ್ರೀಸ್‌, ಸ್ವಿಜರ್ ಲ್ಯಾಂಡ್‌, ಫ್ರಾನ್ಸ್‌, ಇಂಗ್ಲೆಂಡ್‌, ಅಮೆರಿಕಾ, ಕೆನಡಾ, ಜಪಾನ್‌, ಹಾಂಕಾಂಗ್‌, ಥಾಯ್‌ಲ್ಯಾಂಡ್‌, ಸಿಂಗಾಪೂರ್, ಶ್ರೀಲಂಕಾ ಮುಂತಾದ ದೇಶಗಳನ್ನು ಸುತ್ತಿಬಂದು ರಚಿಸಿದ ಪ್ರವಾಸಾನುಭವದ ಕೃತಿ ಗೋಳದ ಮೇಲೊಂದು ಸುತ್ತು, ನಾಲ್ಕು ಮುದ್ರಣಗಳನ್ನು ಕಂಡ ಕೃತಿ. ಕರ್ನಾಟಕ ಸರಕಾರವು ರಾಮರಾಯರನ್ನು ಸಾಹಿತ್ಯ ಅಕಾಡಮಿಯ ಸದಸ್ಯರನ್ನಾಗಿ ನೇಮಿಸಿತು.  ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯದ ಪ್ರಥಮ ಪತ್ತೇದಾರಿ ಲೇಖಕರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮರಳು ಸರಪಳಿ, ಮೂರುಜನ್ಮ, ಸೇಡಿನ ಹಕ್ಕಿ, ಸೀಳು ನಕ್ಷತ್ರ, ವರ್ಣ ಚಕ್ರ, ಹಿಮಪಾತ, ಮಣ್ಣಿನ ದೇೂಣಿ ಮುಂತಾದ ಕಾದಂಬರಿಗಳು ಚಲನಚಿತ್ರವಾಗಿ ಅಪಾರ ಯಶಸ್ಸನ್ನು ತಂದುಕೊಟ್ಟಿದ್ದಲ್ಲದೆ ಬಂಗಾರದ ಮನುಷ್ಯ ಕಾದಂಬರಿಯು ಚಲನಚಿತ್ರವಾಗಿ  ಎರಡು ವರ್ಷಗಳ ಕಾಲ ಪ್ರದರ್ಶಿತಗೊಂಡಿತು. ವರನಟ ಡಾ.ರಾಜ್‌ಕುಮಾರ್ ಅಭಿನಯದಲ್ಲಿ, ಸಿದ್ದಲಿಂಗಯ್ಯ ನಿರ್ದೇಶನದಲ್ಲಿ  ಮೂಡಿಬಂದ ಚಿತ್ರ- ಬಂಗಾರದ ಮನುಷ್ಯ. ಭಾರತೀಯ ಚಿತ್ರರಂಗ ಕಂಡ ಈ ಅತ್ಯುತ್ತಮ ಸಾಮಾಜಿಕ ಚಿತ್ರ, ಬರೆದ ದಾಖಲೆಗಳೂ ಒಂದೆರೆಡಲ್ಲ. ಕುಟುಂಬ ಪರಿಕಲ್ಪನೆಯ ಮಾನವ ಸಂಬಂಧವನ್ನು ಗಟ್ಟಿಗೊಳಿಸಿದ ಈ ಚಿತ್ರಕ್ಕೆ- ಕೃಷಿ ಕ್ಷೇತ್ರಕ್ಕೆ ವಿದ್ಯಾವಂತರನ್ನು ವಾಪಸ್ ಕರೆತಂದ ಶ್ರೇಯವೂ ಸಲ್ಲುತ್ತದೆ. ಇಂಥ ಸಾರ್ವಕಾಲಿಕ ಶ್ರೇಷ್ಠ ಚಿತ್ರ- ಟಿ.ಕೆ.ರಾಮರಾವ್ ಅವರ ಬಂಗಾರದ ಮನುಷ್ಯ ಕಾದಂಬರಿ ಆಧಾರಿತ. ಇವತ್ತು ಬಂಗಾರದ ಮನುಷ್ಯ ಎನ್ನುತ್ತಿದ್ದಂತೆ- ಅಣ್ಣಾವ್ರ ನೆನಪಾಗುತ್ತಾರೆ. ಚಿತ್ರದ ಹಾಡು, ಸಂಭಾಷಣೆ ನೆನಪಾಗುತ್ತದೆ. ಚಿತ್ರ ಸಾರಿದ ಸಂದೇಶವೂ ನಮ್ಮನ್ನು ಚಿಂತೆಗೆ ಹಚ್ಚುತ್ತದೆ. ಆದರೆ, ಇದಕ್ಕೆ ಮೂಲ ಕಾರಣರಾದ ರಾಮರಾವ್ ಬಗ್ಗೆ ಯಾರಿಗೂ ನೆನಪು ಮೂಡುವುದಿಲ್ಲ. 

ಇದೇ ಕಾದಂಬರಿಯು ತೆಲುಗು ಭಾಷೆಯಲ್ಲಿ ದೇವುಡುಲಾಂಟಿ ಮನಿಷಿ ಹೆಸರಿನ ಚಲನಚಿತ್ರವಾಗಿ ಆಂಧ್ರದಾದ್ಯಂತ ಪ್ರದರ್ಶಿತವಾಗಿ ಶತದಿನೋತ್ಸವ ಕಂಡರೆ ಕಾದಂಬರಿ ರೂಪದಲ್ಲಿ ಬಂಗಾರು ಮನಿಷಿ ಹೆಸರಿನಿಂದ ತೆಲುಗು ಭಾಷೆಗೂ ಅನುವಾದಗೊಂಡಿತು. ಹಿಂದಿ ಭಾಷೆಯಲ್ಲಿಯೂ ಚಲನಚಿತ್ರವಾಗಿ ತೆರೆಕಂಡು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿತು. ರಾಮರಾಯರು ಸುಮಾರು ೫೩ ಕಾದಂಬರಿಗಳು, ೧೪ ಕಥಾ ಸಂಕಲನಗಳು, ೫ ಕಿಶೋರ ಸಾಹಿತ್ಯ, (ಜೆ.ಎನ್‌.ಟಾಟಾ, ಲಾಲಾ ಲಜಪತರಾಯ್‌, ಟಿ.ವಿ. ಸುಂದರಂ ಐಯ್ಯಂಗಾರ್, ಶಾಮ ಪ್ರಸಾದ ಮುಖರ್ಜಿ, ಸ್ವಾಮಿ ಶಿವಾನಂದ) ಜಗದೇವರಾಯ ಎಂಬ ಐತಿಹಾಸಿಕ ಕಾದಂಬರಿ ಮತ್ತು ಒಂದು ವಿದೇಶಿ ಪ್ರವಾಸ ಕೃತಿಯೂ ಸೇರಿ ೭೪ ಕೃತಿಗಳನ್ನು ರಚಿಸಿದ್ದಾರೆ.  ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯದ ಪ್ರಥಮ ಪತ್ತೇದಾರಿ ಲೇಖಕರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಆ.ನ.ಕೃ., ತ.ರಾ.ಸು., ಮ. ರಾಮಮೂರ್ತಿ ಮುಂತಾದವರುಗಳಂತೆ ಟಿ.ಕೆ. ರಾಮರಾಯರು ಕನ್ನಡಿಗರಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರಲ್ಲಿ ಯಶಸ್ವಿಯಾಗಿದ್ದರು. ಇವರಿಗೆ ಹಲವು ಪ್ರಶಸ್ತಿ, ಗೌರವಗಳು ಬಂದಿವೆ.

೧೧-೧೧- ೧೯೮೮ ರಂದು ನಿಧನರಾದ, ಕನ್ನಡದ ಪತ್ತೆದಾರಿ ಕಾದಂಬರಿಕಾರರಲ್ಲಿ ಪ್ರಮುಖರಲ್ಲೊಬ್ಬರಾದ, ರೋಚಕ ಶೈಲಿ, ತೀಕ್ಷ್ಣವಾದ, ಲಯಬದ್ಧವಾದ ವಾಕ್ಯಸರಣಿ, ವಿಸ್ಮಯಕಾರಿ ತಿರುವುಗಳು, ರಹಸ್ಯವನ್ನು ಕೊನೆಯವರೆಗೂ ಕಾಯ್ದಿಟ್ಟು ಓದುಗರನ್ನು ಬೆರಗಾಗುವಂತೆ ಮಾಡುವ ತಂತ್ರಗಾರಿಕೆಯ ಬರಹಗಳಿಂದ ಕನ್ನಡದ ಓದುಗರಿಗೆ ಚಿರಪರಿಚಿತರಾಗಿದ್ದ, ವಿಶಿಷ್ಟ ರೀತಿಯ ಪತ್ತೆದಾರಿ ಕಾದಂಬರಿ ಕತೃ ,  ಈ ಪ್ರಕಾರಕ್ಕೊಂದು ಘನತೆ, ಗೌರವಗಳನ್ನು ತಂದುಕೊಟ್ಟ ಟಿ. ಕೆ.ರಾಮರಾಯರಿಗೆ ಗೌರವಪೂರ್ವಕವಾದ ಪ್ರಣಾಮಗಳು.

**********


E Shridharan TN Sheshan KP Unnikrishnan

This is the true story of three friends

 First one was brilliant ,never  gave up the first position in his school . Topper in every exam held in School, College and the University.

 Second one  was average , wouldn't fail but pushed to the next class by default.

 Third one was a trickster , a cheat and was an expert manipulator.

But these three were great friends , thick as thieves.

Once their education  was over.....

 The first one , the brilliant guy as expected became an excellent engineer.  He gave Indian Engineering Services exam, was chosen as Class one officer. He became a Chief Engineer in Indian railways later.

 Second one graduated with Physics major and appeared for Civil Services exam, passed and was appointed as the head of the department (HoD) where his first friend was working at a lower level !!

 Third one didn't bother to study further after school, chose the right party at the right time ,fought the elections , won ,and became an MP , and later became a cabinet minister and under him were the Departments where two of his school friends were working.

This is not a fictional story.

 First one is E Shridharan .. Metro man. 

 Second one is TN Sheshan Chief Election Commissioner.

 Third one is  KP Unnikrishnan who got elected five times as MP for Lok-sabha,and also became a cabinet minister during VP Singh's  tenure as PM.

Three friends- from the same school, the same teachers, but destiny chartered different  paths !!!

********


"ಬಳೆಗಾರನ ಮಗ" ರನ್ನ 


         ಒಂದೇ ಅಳತೆಯ, ಒಂದೇ ಬಣ್ಣಗಳ, ಒಂದೇ ಬಗೆಯ ಬಳೆಗಳನನ್ನು, ಹೊಂದಿಸಿಡಲು ಹೆಂಡತಿಗೆ ಹೇಳಿ, ಸೂಕ್ಷ್ಮ ಮತ್ತು ಚಿಕ್ಕ ಬಳೆಗಳನ್ನು ವಿಂಗಡಿಸಿ ಬೇರೆ ಬೇರೆ ಮಾಡಿ,  ಚಿಕ್ಕ ಹಗ್ಗದಂತಿರುವ ದಪ್ಪ ದಾರದಲ್ಲಿ , ಬಳೆಗಳನ್ನು ಪೋಣಿಸಲು ಮಕ್ಕಳಿಗೆ ಹೇಳಿ, ತಾನು ಎತ್ತಿನ ಮೈತೊಳೆಯಲು ಹೋಗುತ್ತಾನೆ. ಯಜಮಾನ. 

         ಎತ್ತಿನ ಮೈತೊಳೆದು ಸ್ವಚ್ಛವಾಗಿ ಒರೆಸಿ, ಎತ್ತಿನ ಡುಬ್ಬದಮೇಲೆ ದಪ್ಪವಾಗಿದ್ದ ಬಟ್ಟೆಯನ್ನು ಹಾಕಿ, ಪೋಣಿಸಿದ ಬಳೆ ಸರಗಳನ್ನು ಎರಡೂ ಬದಿಗೆ ಸಮನಾಗುವಂತೆ ಎತ್ತಿನ ಮೇಲೆ ಹೊರಿಸಿದನು.

         ಬಳೆ ಮಾರುವುದೇ ಆತನ ಮನೆತನದ ಸಾಂಪ್ರದಾಯಿಕ ವೃತ್ತಿಯಾಗಿದೆ. ನಾಲ್ಕು ಜನ ಗಂಡು ಮಕ್ಕಳು, ತುಂಬು ಸಂಸಾರ, ಬಳೆಗಳನ್ನು ಮಾರಿ, ಬಂದ ಹಣದಲ್ಲಿಯೇ ಬದುಕು ಸಾಗಬೇಕು.  

       ಈ ಸಲ, ಬೇರೆ ಬೇರೆ ಪ್ರಾಂತ್ಯದಲ್ಲಿ ಬಳೆಗಳನ್ನು ಮಾರಿಬರಬೇಕೆಂದು ನಿಶ್ಚಯಿಸಿ, ನಾಲ್ಕೈದು ದಿನ ಕೆಡಲಾರದಂತಹ ಆಹಾರವನ್ನು ಕಟ್ಟಿಸಿಕೊಂಡು, ಹಿರಿಯ ಮಗನನ್ನು ಕರೆದುಕೊಂಡು ಹೊರಡಲು,  ಒಂಭತ್ತು ವರ್ಷದ ಕಿರಿಯ ಮಗ, ತಾನೂ ಬರುವೆನೇಂದು ಹಟಹಿಡಿದನು, ಆಗ ಅವನನ್ನೂ ಜೊತೆಗೆ ಕರೆದುಕೊಂಡು ಬಳೆ ಮಾರಲು ಹೊರಟನು.                            

        ಬಳೇ ಬೇಕಮ್ಮ ಬಳೇ ಎಂದು ಕೂಗುತ್ತಾ ಊರಿಂದ ಊರಿಗೆ ಹೋಗುತ್ತಾ, ರಾತ್ರಿವೇಳೆ  ದೇವಾಲಯದಲ್ಲಿ ತಂಗಿ, ಮಾರನೆ ದಿವಸ ಮತ್ತೆ  ಬಳೇ ಬೇಕಮ್ಮ ಬಳೇ ಎಂದು ಕೂಗುತ್ತಾ , ಕಲ್ಯಾಣ ಚಾಲುಕ್ಯರ ಪ್ರಾಂತ್ಯದ ಲಕ್ಕುಂಡಿಗೆ ಬಂದನು.

         ಬಳೇ ಬೇಕಮ್ಮ ಬಳೇ , ಮಿಂಚು ಬಳೇ , ಸಾಣೆ ಬಳೇ, ರೇಷ್ಮೇ ಬಳೇ, ಮುತ್ತೈದೆ ಬಳೇ   ಬಣ್ಣ ಬಣ್ಣದ ಬಳೇ ಎಂಬ ಕೂಗು ಕೇಳಿ, ಚಾಳುಕ್ಯ ಚಕ್ರವರ್ತಿ, ತೈಲಪನ ಮಹಾಮಂತ್ರಿಯ ಸೊಸೆಯಾದ, ಅತ್ತಿಮಬ್ಬೆಯು, ಸೇವಕಿಯನ್ನು ಕಳೆಸಿ,  ಬಳೆಗಾರನನ್ನು  ತನ್ನ ಮನೆಗೆ ಕರೆಸಿಕೊಂಡಳು.

         ಬಳೆಗಾರನು ತನ್ನ ಹೆಗಲ ಮೇಲಿದ್ದ ಕಂಬಳಿಯನ್ನು ಹಾಸಿ, ಉಸ್ಸಪ್ಪ  ಎಂದು ಕುಳಿತುಕೊಳ್ಳಲು, ಬಹಳ ದೂರದಿಂದ ಬಂದಹಾಗಿದೆ ಎಂದಳು ಅತ್ತಿಮಬ್ಬೆ. ಹೊಟ್ಟೆಪಾಡು ಬರಬೇಕಲ್ಲ ತಾಯಿ ಎಂದ ಬಳೆಗಾರ. ಪಕ್ಕದಲ್ಲಿ ಕುಳಿತ ಮಗು, ಅಪ್ಪಯ್ಯ ಎಂತಹ ವಿಶಾಲವಾದ ದೊಡ್ಡ ಮನೆ. ಎಷ್ಟು ದಪ್ಪ ದಪ್ಪವಾದ ಕಂಬಗಳು ಅಂತಾ, ಅರಮನೆಯಂತಹ ಮನೆಯನ್ನು ದಂಗಾಗಿ ನೋಡುತ್ತಲೇ ಇದ್ದ. ಅತ್ತಿಮಬ್ಬೆಯು ಆ ಬಾಲಕನ ಮಾತು, ನೋಟವನ್ನೆಲ್ಲ, ತದೇಕಚಿತ್ತದಿಂದ ನೋಡುತ್ತ, ಯಾವೂರಿಂದ ಬಂದಿರುವಿರಿ ಅಂದಳು.

   ಬಹುದೂರ ತಾಯಿ,

 " ಜಮಖಂಡಿ ಹತ್ತಿರ ಮುದುವೊಳಲು " ಎಂದ.

   ಅಬ್ಬ ಎಷ್ಟು ದೂರದಿಂದ ಬಂದಿರುವಿರಿ.

   "ನಿಮ್ಮ ಹೆಸರೇನು?"

   "ಜಿನವಲ್ಲಭ ತಾಯಿ " ಎಂದ.

    ಬಳೆಗಳು ಚೆನ್ನಾಗಿವೆ ತಾನೆ ?

    ಅನುಮಾನ ಬೇಡ ತಾಯಿ. ನಮ್ಮ ಮನೆತನದ ಸಾಂಪ್ರದಾಯಿಕ ಕಸುಬೇ ಇದು, ಎಂದ.

   ಮೊದಲು ಬಾಯಾರಿಕೆ ತೀರಿಸಿಕೊಳ್ಳಿ , ನೀರುಮಜ್ಜಿಗೆಯನ್ನು  ಕುಡಿದು,    ದಣಿವಾರಿಸಿಕೊಂಡಮೇಲೆ ನಮಗೆಲ್ಲ ಬಳೆ ತೊಡಿಸುವಿರಂತೆ, ನಂತರ ನಮ್ಮಲ್ಲಿಯೇ ಊಟಮಾಡಿಕೊಂಡು ಹೋಗಬೇಕು, ಎಂದಳು ಅತ್ತಿಮಬ್ಬೆ. 

      ಹಿರಿಯ ಮಗ ಎತ್ತಿನ ಮೇಲಿನ ಬಳೆಗಳನ್ನೆಲ್ಲ ತೆಗೆದು, ತಂದೆಯ ಮುಂದೆ ತಂದಿಟ್ಟ . ಅಕ್ಕ ತಂಗಿಯರು ಬಳೆಗಳನ್ನು ಆರಿಸುತ್ತಿರುವಾಗ, ಬಳೆಗಾರನ ಮಗು, ತಂದೆಗೆ ಏನೇನೋ ಪ್ರಶ್ನೆಗಳನ್ನು ಕೇಳುತ್ತಾ ,  ಅಮ್ಮಯ್ಯ ಈ ಬಳೆಗಳು ಚೆನ್ನಾಗಿವೆ, ಈ ಬಳೆಗಳು ಚಂದ ಇವೆ ಅಂತಾ ಸ್ಪುಟವಾಗಿ, ಮುದ್ದು ಮುದ್ದಾಗಿ ಕನ್ನಡವನ್ನು  ಮಾತನಾಡುವುದು ಕಂಡು, ಅತ್ತಿಮಬ್ಬೆಗೆ  ಇಂತಹ ಚುರುಕಾದ ಜಾಣ ಮಗುವಿಗೆ , ವಿದ್ಯಾಭ್ಯಾಸ ಕೊಡಿಸದೆ , ಮಗುವನ್ನು ತಮ್ಮೊಂದಿಗೆ ಕರೆದುಕೊಂಡು ತಿರುಗುತ್ತಿದ್ದಾರಲ್ಲ ಏಕೆ?  ಎಂಬ ಆಲೋಚನೆ ಆಯಿತು.  

         ಬಳೆ ತೊಡಿಸಿಯಾದಮೇಲೆ, ಮಗುವಿಗೆ ವಿದ್ಯಾಭ್ಯಾಸ ಕೊಡಿಸದೆ, ನಿಮ್ಮೊಂದಿಗೇಕೆ ಕರೆದುಕೊಂಡು ತಿರುಗುತ್ತಿದ್ದೀರಿ ಎಂದು ಬಳೆಗಾರನಿಗೆ, ಅತ್ತಿಮಬ್ಬೆ ಕೇಳಿದಳು. ತಾಯಿ  ವಿದ್ಯಾಭ್ಯಾಸ ಕೊಡಿಸುವಷ್ಟು ಧನಿಕನಲ್ಲ ಎಂದ. ನಿಮ್ಮ ಒಪ್ಪಿಗೆ ಇದ್ದರೆ, ಈ ಮುದ್ದಾದ ಮಗುವನ್ನು ನನ್ನ ಹತ್ತಿರ ಬಿಟ್ಟುಹೋಗಿ, ನಾನು ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದಳು. ಹಾಗೆ ಆಗಲಿ ತಾಯಿ   ಅಂತಾ ಬಳೆಗಾರನು, ಒಪ್ಪಿಗೆ ಸೂಚಿಸಿದನು.. ಈ ಎಲ್ಲ ಸಂಭಾಷಣೆ ಕೇಳಿ ಮಗು ಹರುಷಗೊಂಡಿತು.  

         ಮಗುವಿಗೆ ಗುರುಕುಲದ ಆಚಾರ್ಯರಿಂದ ಒಳ್ಳೆಯ ಶಿಕ್ಷಣವನ್ನು ಕೊಡಿಸಿದಳು, ಅತ್ತಿಮಬ್ಬೆ. ಚುರುಕಾಗಿದ್ದ ಮಗು, ಉತ್ಸಾಹದಿಂದ , ಎಲ್ಲ ವಿದ್ಯೆಯನ್ನು ಸಂಪೂರ್ಣವಾಗಿ, ಮನಸಾರೆ ಕಲಿತು, ಕನ್ನಡದಲ್ಲಿ ಮಹಾಕಾವ್ಯಗಳನ್ನು ರಚಿಸಿ 

 " ಕವಿಚಕ್ರವರ್ತಿ " ಎನಿಸಿಕೊಂಡ. ಆ ಕವಿಚಕ್ರವತಿ೯ಯೇ , ಬಳೆಗಾರನ ಮಗ ಮದುವೊಳಲಿನ  " ರನ್ನ ".  

      ( ಮುದುವೊಳಲು ಅಂದರೆ ಈಗಿನ ಮುಧೋಳ )

     ಕವಿಚಕ್ರವತಿ೯ ರನ್ನನು," ಅಜಿತ ತೀಥ೯ಕರ ಪುರಾಣ ", " ಸಾಹಸ ಭೀಮ ವಿಜಯ" " ( ಗದಾಯುದ್ಧ)  ಪರಶುರಾಮ ಚರಿತ, ಚಕ್ರೇಶ್ವರ ಚರಿತ , ಹೀಗೆ ಅನೇಕ ಮಹಾ ಕೃತಿಗಳನ್ನು ರಚಿಸಿ, ಕನ್ನಡದ ರತ್ನವೇ ಆಗಿದ್ದಾನೆ .

          ರನ್ನನನ್ನು ಮಹಾಕವಿಯನ್ನಾಗಿ ಮಾಡಿದ       ಅತ್ತಿಮಬ್ಬೆಯು, ಪಂಪ, ರನ್ನ, ಪೊನ್ನ, ರಾದಿಯಾಗಿ,ಎಲ್ಲರ ಗ್ರಂಥಗಳನ್ನು ಸಾವಿರ ಸಾವಿರ ಪ್ರತಿಗಳನ್ನು ಮಾಡಿಸಿ, ಮುತ್ತೈದೆಯರಿಗೆ, ಬಾಗಿನದ ಜೊತೆಗೆ, ಗ್ರಂಥಗಳನ್ನೂ ಉಡಿತುಂಬಿದಳು. 

      ಮೊಟ್ಟ ಮೊದಲು,  ಕನ್ನಡ ಗ್ರಂಥಗಳನ್ನು ಉಡಿತುಂಬುವ ಪರಿಪಾಠ ಹಾಕಿಕೊಟ್ಟವಳು ಅತ್ತಿಮಬ್ಬೆ. ಹೀಗೆ ಮಹಾದಾನಿಯಾಗಿದ್ದ ಅತ್ತಿಮಬ್ಬೆ, "            " ದಾನಚಿಂತಾಮಣಿ ಅತ್ತಿಮಬ್ಬೆ " ಎಂದೇ ಪ್ರಸಿದ್ದಿಯಾದಳು.

       ವೀರ ಕನ್ನಡಿಗರೆ, ನಾವೂ ಕೂಡ ನಮ್ಮ ಮನೆಯಲ್ಲಿಯ ಸಮಾರಂಭಗಳಲ್ಲಿ  ಕನ್ನಡ ಗ್ರಂಥಗಳನ್ನು ಉಡಿತುಂಬೋಣ.

**********



ವೇದಾಂತ ದೇಶಿಕ 

******



ಭಾರತದ ಹೆಮ್ಮೆಯ ವಿಜ್ಞಾನ ಸಂಸ್ಥೆಯಾದ ಭಾರತೀಯ ವಿಜ್ಞಾನ ಮಂದಿರದಲ್ಲಿ ಪದವಿ, ಅಮೆರಿಕದ ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ, ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಮೂರೂವರೆ ದಶಕಗಳ ಕಾಲ ಇಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪನ, ಪ್ಯಾಟರ್ನ್ ರೆಕಗ್ನಿಷನ್ ಮತ್ತು ಮೆಷಿನ್ ಇಂಟೆಲಿಜೆನ್ಸ್ ವಿಭಾಗಗಳಲ್ಲಿ ಉದ್ದಾಮ ಸಂಶೋಧನೆ, ಅಂತಾರಾಷ್ಟ್ರೀಯ ವಿಜ್ಞಾನ ಜರ್ನಲ್‍ಗಳಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳ ಪ್ರಕಟಣೆ, 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ, ಜೆ.ಸಿ. ಬೋಸ್ ಎವಾರ್ಡ್, ನ್ಯಾಷನಲ್ ಇಲೆಕ್ಟ್ರಾನಿಕ್ಸ್ ಕಾನ್ಫರೆನ್ಸ್ ನಲ್ಲಿ ಬೆಸ್ಟ್ ಪೇಪರ್ ಎವಾರ್ಡ್ ಇತ್ಯಾದಿ ಸಾಲು ಸಾಲು ಪ್ರಶಸ್ತಿ-ಪುರಸ್ಕಾರಗಳು, 50 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಮಾರ್ಗದರ್ಶನ.


ಇಷ್ಟೆಲ್ಲ ಸಾಧನೆ ಮಾಡಿರುವ ಡಾ. ರಂಗಸಾಮಿ ಲಕ್ಷ್ಮೀನಾರಾಯಣ ಕಶ್ಯಪ್ ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಸಂದಿದೆ. 


ಅದು ಬಂದದ್ದು ಅವರ ಮೇಲೆ ಉಲ್ಲೇಖಿಸಿದ ಸಾಧನೆಗಳಿಗಾ? ಅಲ್ಲ! ಮತ್ಯಾವುದಕ್ಕೆ ಎನ್ನುತ್ತೀರಾ? 


ಪ್ರಶಸ್ತಿ ಬಂದಿರುವುದು ಕಶ್ಯಪರ ವೇದ ಸಾಧನೆಗೆ. ಋಗ್ವೇದ, ಕೃಷ್ಣ ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳ ಸಂಹಿತಾ ಭಾಗಗಳಿಗೆ ಇಂಗ್ಲೀಷ್‍ನಲ್ಲಿ ಭಾಷಾಂತರ, ವಿವರಣೆ, ಭಾಷ್ಯ ಬರೆದ ಜಗತ್ತಿನ ಏಕಮೇವ ವ್ಯಕ್ತಿ ಈ ಕಶ್ಯಪರು! ಪರ್ಡ್ಯೂದಲ್ಲಿದ್ದಾಗ ಕಶ್ಯಪರು ಒಮ್ಮೆ ಲೈಬ್ರರಿಯ ಧಾರ್ಮಿಕ ಗ್ರಂಥಗಳ ವಿಭಾಗದತ್ತ ಕಣ್ಣುಹಾಯಿಸಿದರು. ಅಲ್ಲಿ ಬೈಬಲ್, ಖುರಾನ್, ಝೆಂಡ ಅವೆಸ್ತ... ಎಲ್ಲ ಗ್ರಂಥಗಳ ಇಂಗ್ಲೀಷ್ ಅನುವಾದಗಳಿದ್ದವು. ಭಾರತದ್ದೇನಿದೆ ಎಂದು ಹುಡುಕಹೊರವರಿಗೆ ಕವಿದಿದ್ದು ಗಾಢ ನಿರಾಶೆ. ಭಾರತೀಯ ಮೂಲದ ಯಾವ ಕೃತಿಯ ಇಂಗ್ಲೀಷ್ ಅನುವಾದಗಳೂ ಅಲ್ಲಿ ಲಭ್ಯವಿರಲಿಲ್ಲ. ಹೀಗಾದರೆ ನಮ್ಮ ಅಧ್ಯಾತ್ಮ ಸಂಪತ್ತು ವಿದೇಶೀಯರನ್ನು ಮುಟ್ಟುವುದಾದರೂ ಹೇಗೆ ಎಂದು ಚಿಂತಿಸಿದ ಕಶ್ಯಪ್, ಅದಕ್ಕಾಗಿ ಯಾರಾದರೂ ಬಂದು ಆ ಕೆಲಸ ಮಾಡಲಿ ಎಂದು ಕಾಯಲಿಲ್ಲ. ನಾನೇ ಮಾಡುತ್ತೇನೆ ಎಂದು ಸಂಕಲ್ಪಿಸಿ, ಜಿಗಿದೇಬಿಟ್ಟರು. ಹಲವು ವರ್ಷ ಹಗಲಿರುಳು ವೇದಗಳ ಸಮುದ್ರದಲ್ಲಿ ಮುಳುಗಿಹೋದರು. ವೇದಸಂಸ್ಕೃತ ಕಲಿತರು. ಋಕ್ಕುಗಳನ್ನು ಧ್ಯಾನಿಸಿದರು. ಅರ್ಥ ಬರೆದರು. ಅರ್ಥ ಹೇಳುವ ಪಂಡಿತರಲ್ಲಿ ದಿನ-ವಾರಗಳನ್ನು ಕಳೆದರು. ನೂರಾರು ಪುಸ್ತಕಗಳನ್ನು ಎಡತಾಕಿದರು. ಬರೆಯುತ್ತ ಬರೆಯುತ್ತ ಇಪ್ಪತ್ತೈದು ಸಾವಿರ ಮಂತ್ರಗಳಿಗೆ ಅರ್ಥ-ಭಾಷ್ಯ ಬರೆದುಬಿಟ್ಟರು. ಚತುರ್ವೇದಗಳಿಗೂ ಇಂಗ್ಲೀಷಿನಲ್ಲಿ ಭಾಷ್ಯ ಬರೆದ ಮೊದಲ ಮತ್ತು ಇದುವರೆಗಿನ ಏಕೈಕ ವ್ಯಕ್ತಿಯಾಗಿ ಹೊಮ್ಮಿದರು! ವೇದ-ಉಪನಿಷತ್ತುಗಳ ಮೇಲೆ ಕಶ್ಯಪರು ಬರೆದ ಮೂವತ್ತಕ್ಕೂ ಹೆಚ್ಚಿನ ಗ್ರಂಥಗಳನ್ನು ಸುಮ್ಮನೇ ಅಧ್ಯಯನ ಮಾಡಲು ಕೂರುವುದಾದರೂ ಹತ್ತಾರು ವರ್ಷಗಳನ್ನು ಅದಕ್ಕೇ ವಿನಿಯೋಗಿಸಬೇಕು!


ಅಂಥ ಅಪರೂಪದ ವ್ಯಕ್ತಿಯೊಬ್ಬರು ನಮ್ಮ ನಡುವೆ ಇದ್ದಾರೆ, ನಮ್ಮ ಬೆಂಗಳೂರಲ್ಲೇ ಇದ್ದಾರೆ ಎಂಬುದು ನಮ್ಮ ಹೆಮ್ಮೆ. ಅವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರ ಇದೀಗ ಪದ್ಮಶ್ರೀ ನೀಡಿ ಗೌರವಿಸಿದೆ. ಇದು ಕನ್ನಡಿಗರ ಪೇಟಕ್ಕೆ ಸಿಕ್ಕಿರುವ ಹೊಸ ತುರಾಯಿ. ವೇದಗುರುಗಳೊಬ್ಬರಿಗೆ ಪ್ರಶಸ್ತಿ ಬಂದು ಅದರ ಗುರುತ್ವವೂ ಹೆಚ್ಚಾಗಿದೆ.

- ರೋಹಿತ್ ಚಕ್ರತೀರ್ಥ

******


ಶತಾವಧಾನಿ ಗಣೇಶ

'ಬ್ರಾಹ್ಮಣರ ಇಡ್ಲಿ ಹೋಟೆಲ್'ಗೆ ಶತಾವಧಾನಿ ಗಣೇಶ ಅವರು ಉಪಾಹಾರಕ್ಕೆ ಹೋಗಿದ್ದರು. ಮಾಣಿ ಪ್ರತ್ಯಕ್ಷನಾದ. ಅವನಿಗೆ ಇವರ ಮುಖ ಪರಿಚಯ ಇತ್ತು. 'ಸ್ವಾಮಿ, ನೀವು ಶತಾವಧಾನಿಗಳು. ಅಲ್ದಾ?' ಹೌದೆಂದರು ಗಣೇಶ್. ಸಂಭಾಷಣೆ ಹೀಗೆ ಮುಂದುವರೆಯಿತು.

'ನಾನೊಂದು ಸಮಸ್ಯೆ ಕೊಡ್ತೆ. ಉತ್ರ ಕೊಡಿ, ಕಾಂಬ'. 

'ಹೇಳಿ, ಅಪ್ಪಾ'

'ಒಂದು ಪದ್ಯ ಮಾಡಿ. ಅದರಲ್ಲಿ ನಾನು ಹೇಳೋ ಐಟಮ್ ಅಷ್ಟೂ ಇರ್ಲಕ್ಕು. ಅದೇ ಸರದಿಯಲ್ಲೂ ಬಪ್ಲಕ್ಕು'.

'ಹೇಳಿ'.

'ಸಾಂಬಾರು, ಚಟ್ನಿ, ವಡೆ, ಇಡ್ಲಿ'.

ಮಾಣಿಯ ಮುಖದಲ್ಲಿ ಗೆದ್ದ ನಗು. ಶತಾವಧಾನಿಗಳು ಅರ್ಧ ನಿಮಿಷ ಕಣ್ಣುಮುಚ್ಚಿ ಯೋಚಿಸಿ, ಗಂಟಲು ಸರಿಪಡಿಸಿಕೊಂಡು ಮಾತು ಶುರು ಮಾಡಿದರು:


'ಹೇ, ಸಾಂಬಾ, ರುದ್ರಾ!

ಚಟ ಚಟ್ ನಿಟಿಲಾಕ್ಷಾ!

ಜಗದೆಲ್ಲೆಡೆ ನೀನಿರುವಡೆ,

ನಾ ಕಾಲೆಲ್ಲಿಡ್ಲಿ?'

ಸುಸ್ತಾದ ಮಾಣಿ 'ನಿಮಗೆ ಒಂದು ಪೆಷಲ್ ಕಾಪಿ ತರ್ತೆ' ಅಂತ ಓಡಿದ! .    ನಿಜಕ್ಕೂ ಸುಂದರ.

**********

2019

MIRACLE WITNESSED

This interesting scene was in Supreme Court of India where the Bench was hearing the issue of Shree Ram Janma Bhoomi!

There were counsels representing both the sides and each side had their own witnesses to provide the Court with evidences!

While Shri Parasaran was putting forth the justifications for Ayodhya as Shree Rama Janma Bhoomi, the Honourable Judge intervened:

He asked “You quote from the Vedas and Scriptures for proving that Shree Rama existed, and other relevant issues! Is there any evidence in the Scriptures that specify the place of birth of Shri Rama?”

An old gentleman rose from the group of witnesses.  He was one of the Pragyasakshi (Chief Witness) and his parents had named him Giridhar!

He said “Honourable Sir, I request you to refer to Rig Veda!”

He specified the chapter and shloka (verse) and said, “There it is mentioned in Rig Veda, Gaiminiya Samhita!  These shlokas specify the directions and distances from a specific point on the banks of River Sarayu, to reach the birth place of Shri Rama.  If one follows those directions, one reaches a specific spot in Ayodhya!”

The bench ordered for immediate verification, and it was done to realise that Shri Giridhar was very precise and right!

There it was glaring at them from Rig Veda! And this person was quoting the shloka (verse) verbatim from memory!

The bench remarked, “This is a Miracle we have witnessed today.!”

But the witness who was christened Giridhar was very calm and serene, as if it is a chore in the office on a normal working day!

To understand the wonder expressed by the Judge, one has to go back in Indian History, which needs overhauling at the earilest!

The year was 1950.  Month January. 14th day of the month. In the village Jaunpur in Uttar Pradesh! The Mishra couple  - Pandit Rajdev Mishra and Shachidevi (It is nice to note that that child became a main Sakshi later in life, to reclaim Shree Ram Janma Bhoomi) – were waiting for the birth of their child!

A very hale and healthy child was born that day and they named him Giridhar!

Giridhar Mishra was fine, till a cruel hand af fate played with him when he was 2 months old!  That changed the life of the parents and the child!

Imagine a child who was eager to acquire and improve his knowledge, but just could not read or write!  Pandit Rajdev would sit besides the child, and recite shlokas from the Vedas, explaining each word in each shloka! He was delighted to find that Giridhar had a great grasp, memory and retaining capacity, and could memorise every single word taught to him orally!

After imparting whatever knowledge he could, Rajdev admitted his son to one of the Mutts of Ramanand Sampradaya!

He was taken in as a disciple, and he was given a new name - RAMABHADRA!


And the child got a Guru ji who could teach him and encourage him to expand his knowledge beyond the limits of any normal human being!

Ramabhadra, in his zeal to explore the universe of knowledge, learnt and mastered 22 languages, including a few ancient ones! He could not read or write, and had to depend on his memory and its retention power!

He learnt the Scriptures and modern verses, too!  He became a fan of Sant Tulsidas and explored the world of Rama Charit Manas!

Just Imagine! Somebody would read these epics and Scriptures, and he would store them in his memory for further understanding and analysis!  He excelled in his work, often dictating to people, and getting the feedback orally!

At the age of 38, in 1988, he was crowned JAGADGURU RAMABHADRA ACHARYA, one of the four Jagadgurus of Ramananda Ashram!

You must have guessed by this time, why he could not read or write.  Yes. HE LOST HIS EYESIGHT COMPLETELY, WHEN HE WAS TWO MONTHS OLD!

It is really staggering to learn about his achievements!

The blind Jagadguru, in addition to mastering 22 languages, is also famous as a Spiritual Leader, Educator, Sanskrit Scholar, Polyglot, Poet, Author, Textual commentator, Philosopher, Composer, Singer, Playwright and Story Teller (Katha Vachak - Artist)!

He has authored more than 100 books, such as Gita Ramayanam,  Shri Bhargava Raghaviyam,  Arundhati, Ashtavakra, Kaka Vidura among others!

He composed Shri Sitarama Suprabhatam!

As a poet, he produced 28 famous sets of poems (Sanskrit and Hindi) including four epics!

Authored 19 famous commentaries on various Scriptures, the popular ones being on Rama Charit Manas by Sant Tulsidas!

Composer of 5 Music Albums!

And 9 very popular discourses!

Founder of Jagadguru Ramabhadracharya University for the Handicapped!

Lifelong Chancellor of Tulsi Peeth (named after Sant Tulsidas)!

He was decorated with PADMA VIBHUSHAN in 2015!

I was filled with amazement as I was collecting information about him! A child who became blind, and fought his way up, to reach the pinnacle of knowledge and education, and its propagation! 

What a marvellous example to inspire one and all! I felt very very small and insignificant!  I am sharing this with you all as it amazed me no end!

There is a niggling thought, though! How many of us were aware of this great blind man?

While Helen Keller was propagated for her achievements as a blind person, and lessons are taught on her,  Jagadguru Ramabhadra Acharya is a non entity in our education system That's how we are!

*No wonder the Judge remarked “I witnessed a Miracle in my Court!"

*****