ಎಲ್ಲಾ ರೋಗಕ್ಕೂ ನಮ್ಮ ಹೊಟ್ಟೇನೆ ಕಾರಣ. ನಾವು ಏನು ತಿಂತೀವೋ ಅದಕ್ಕೆ ಸರಿಯಾಗಿ ನಮ್ಮ ಹೊಟ್ಟೆ ಕೆಲಸ ಮಾಡುತ್ತೆ. ಹೊಟ್ಟೆನಾ ಸರಿಯಾಗಿ ನೋಡ್ಕೋಬೇಕು. ನಾವು ದಿನಾ ಒಂದೇ ತಿನ್ನಲ್ಲ. ಪ್ರಕೃತಿ ಕೊಟ್ಟಿರೋ ಅನೇಕ ತರದ ಪದಾರ್ಥಗಳಲ್ಲಿ ಯಾವ ಯಾವ ಪದಾರ್ಥಾನ ಇನ್ಯಾವ ಪದಾರ್ಥದ ಜೊತೆ ತಿನ್ಬಾರ್ದು ಅಂತ ತಿಳ್ಕೊಳೋಣ.
1. ಯಾವುದೇ ಹಣ್ಣು, ತೆಂಗು, ವಾಲ್ನಟ್, ಮಾಂಸ, ಮೊಸರು, ಹುರುಳಿ, ಬೇಳೆಕಾಳುಗಳು ಮತ್ತು ತರಕಾರಿ ಜೊತೆ ಹಾಲು ಬೆರೆಸೋದು ಒಳ್ಳೆದಲ್ಲ. ನಮ್ಮ ಜೀರ್ಣಕ್ರಿಯೆಗೆ ಬೇಕಾದ ಕಿಣ್ವಗಳನ್ನ ನಾಶ ಮಾಡುತ್ತಂತೆ.
2. ಹಣ್ಣುಗಳನ್ನ ಸೆಪರೇಟ್ ಆಗಿ ತಿನ್ನ್ಬೇಕು. ಯಾವುದರ ಜೊತೇನೂ ಮಿಕ್ಸ್ ಮಾಡಿ ತಿನ್ಬಾರ್ದು
3. ಮೂಲಂಗಿ, ಬೆಳ್ಳುಳ್ಳಿ, ಸೊಪ್ಪು ಮತ್ತೆ ನುಗ್ಗೆಕಾಯಿ ತಿಂದ ತಕ್ಷಣ ಹಾಲು ಕುಡೀಬಾರ್ದು
4. ಜೇನುತುಪ್ಪ ಮತ್ತೆ ತುಪ್ಪ ಎರಡೂ ತಿನ್ನೋ ಸಂದರ್ಭ ಬಂದಾಗ ಎರಡನ್ನೂ ಸಮ ಪ್ರಮಾಣ ಮಿಕ್ಸ್ ಮಾಡಿ ತಿಂದ್ರೆ ಅದು ವಿಷಕ್ಕೆ ಸಮ ಅಂತ ಹೇಳ್ತಾರೆ. ಬೇರೆ ಬೇರೆ ಪ್ರಮಾಣದಲ್ಲಿ ಮಿಕ್ಸ್ ಮಾಡಿ ತಿನ್ನಿ.
5. ಜೇನುತುಪ್ಪಾನ ಬಿಸಿ ಮಾಡೊದು, ಕುದಿಸೋದು, ಬೇಯಿಸೋದು ಮಾಡಿದ್ರೆ ಅದು ವಿಷಕ್ಕೆ ಸಮಾನ.
6. ಹಾಲಿನ ಜೊತೆ, ಮೊಸರಿನ ಜೊತೆ, ಸೌತೆಕಾಯಿ ಅಥ್ವಾ ಟೊಮಟೊ ಜೊತೆ ನಿಂಬೆ ರಸ ಸೇರಿದ್ರೆ ಹೈಪರ್-ಅಸಿಡಿಟಿ ಆಗತ್ತೆ.
7. ಒಂದೇ ದಿನ ಅಥ್ವಾ ಯಾವುದೋ ಒಂದು ರೀತಿ ಮಿಕ್ಸ್ ಮಾಡಿ ಚಿಕನ್ ಹಾಗೂ ಪೋರ್ಕ್ ಒಟ್ಟಿಗೆ ತಿನ್ನೋದು ಒಳ್ಳೇದಲ್ಲ.
8. ರಾತ್ರಿ ಹೊತ್ತು ಮೊಸರು ತಿನ್ನೋದು ನಮ್ ಹೊಟ್ಟೆಗೆ ಒಳ್ಳೇದಲ್ಲ. ಹಾಗೆ ಮೊಸರನ್ನ ಬಳಸಬೇಕಾದ್ರೆ ಯಾವುದೇ ಕಾರಣಕ್ಕೂ ಅದನ್ನ ಬಿಸಿ ಮಾಡ್ಬೇಡಿ. ಹೊಟ್ಟೆ ಕೆಡುತ್ತೆ.
9. ಉದ್ದು, ಜೇನುತುಪ್ಪ, ಮೂಲಂಗಿ ಮತ್ತೆ ಮೊಳಕೆ ಕಾಳುಗಳ ಜೊತೆ ಮಾಂಸಾಹಾರಿ ಊಟ ಮಾಡೊದು ಒಳ್ಳೇದಲ್ಲ.
10. ಮೂಲಂಗಿ ಜೊತೆ ಉದ್ದು ಅಥವಾ ಹಲಸಿನ ಹಣ್ಣಿನ ಜೊತೆ ಉದ್ದು ಸೇರಿಸಿ ತಿನ್ನೋದು ಬೇಡ
11. ಬಾಳೆಹಣ್ಣನ್ನ ಮಜ್ಜಿಗೆ ಜೊತೆ, ದ್ರಾಕ್ಷಿನಾ ಮೊಸರಿನ ಜೊತೆ, ಮೀನಿನ ಜೊತೆ ಕಾಳುಮೆಣಸು, ಮತ್ತೆ ಆಲ್ಕೊಹಾಲ್ ಜೊತೆ ಹಾಲು ಕುಡಿಯೋದು ಒಳ್ಳೇದಲ್ಲ.
12. ಊಟ ಅಥವಾ ತಿಂಡೀಲಿ ಬೇಯಿಸಿದ ಪದಾರ್ಥಗಳ ಜೊತೆ ಹಸಿ ಅಹಾರ ತಿನ್ನೋದು ಒಳ್ಳೇದಲ್ಲ. ಹೊಟ್ಟೇಲಿ ಸರ್ಯಾಗಿ ಜೀರ್ಣ ಆಗಲ್ಲ ಯಾಕಂದ್ರೆ ಒಂದೊಂದೂ ಜೀರ್ಣ ಆಗಕ್ಕೆ ಬೇರ್-ಬೇರೆ ಟೈಮ್ ತಗೊಳುತ್ತೆ
ಕೃಪೆ: ವಾಟ್ಸಪ್
***