ಓಂ ಶಾಂತಿ: ಶಾಂತಿ: ಶಾಂತಿ:
"ಓಂ" ಎನ್ನುವುದು ಅತ್ಯಂತ ಮೂಲಭೂತವಾದ ಬೀಜಾಕ್ಷರ ಇದು ಭಗವಂತನ ಹೆಸರು.
"ಶಂ" ಎಂದರೆ ಆನಂದ
"ಅಂತ"ಎಂದರೆ ತುತ್ತ ತುದಿ
"ಇ" ಎಂದರೆ ಜ್ಞಾನ
"ಓಂ ಶಾಂತಿ:"ಎಂದರೆ "ಭಗವಂತ ಜ್ಞಾನಾನಂದಗಳ ತುತ್ತ ತುದಿ ಯಲ್ಲಿರುವವ "ಎಂದರ್ಥ.
ಮೂರು ವೇದಗಳಲ್ಲಿ ಪ್ರತಿಪಾದ್ಯನಾಗಿರುವ ಮೂರು ಕಾಲಗಳಲ್ಲಿರುವ ಎಲ್ಲಾ ಕಡೆ ಇರುವ ಭಗವಂತ ಜ್ಞಾನಾನಂದ ಪೂರ್ಣ ಎಂದು ಮೂರು ಬಾರಿ ಹೇಳಲಾಗಿದೆ
ಈ ಅನುಸಂಧಾನದ ಮೂಲಕ ನಮ್ಮ ಬದುಕಿನಲ್ಲಿ ಕೂಡ ಶಾಂತಿಯನ್ನು ಕೊಡು ಎನ್ನುವ ಪ್ರಾರ್ಥನೆ ಇಲ್ಲಿದೆ.
ನಮಗೆ ಜ್ಞಾನಾನಂದದ ಪೂರ್ಣತೆಯನ್ನು ಕೊಡು ನಮಗೆ ಆ ಮೋಕ್ಷದ ಸ್ಥಿತಿಯನ್ನು ಕೊಡು
ಸದಾ ನಿನ್ನೊಂದಿಗಿರುವ ಜ್ಞಾನಾನಂದದ ಅನುಭವವನ್ನು ಕೊಡು;
ಅಲ್ಲಿ ತನಕ ಇನ್ನೊಬ್ಬರನ್ನು ದ್ವೇಷಿಸದೆ ನೆಮ್ಮದಿಯಿಂದ ಬದುಕುವ ಶಾಂತಿಮಯವಾದ ಬದುಕನ್ನು ಕೊಡು ;
ಎಲ್ಲರೂ ಶಾಂತಿ ನೆಮ್ಮದಿಯಿಂದ ಬದುಕಲು ಬಿಡೋಣ. ಮತ್ತು ನಾವು ನೆಮ್ಮದಿಯಿಂದ ಬದುಕೋಣ .ಯಾರೂ ಯಾರನ್ನೂ ದ್ವೇಷಿಸುವುದು ಬೇಡ ಎನ್ನುವುದು ಈ ಶಾಂತಿ ಮಂತ್ರದ ಮೂಲ ಸಂದೇಶ.
(ಬನ್ನಂಜೆ ಗುರುಗಳ ಉಪನ್ಯಾಸ ಆಧಾರಿತ)
***