SEARCH HERE

Showing posts with label ವಿಶ್ವಾಸ- ಮಡಿ madi. Show all posts
Showing posts with label ವಿಶ್ವಾಸ- ಮಡಿ madi. Show all posts

Wednesday, 14 April 2021

ಮಡಿ madi


ಭಗವಂತನನ್ನು ಕಾಣಲು ವೇದಾನುಭವಗಳಿಂದ ಪ್ರಾಚೀನ ಋಷಿಗಳು ಕಂಡುಕೊಂಡ ಕೆಲವು ಮೂಲಸೂತ್ರಗಳು :-

೧. ಶರೀರವನ್ನು ನೀರು ಮತ್ತು ಯೋಗದಿಂದ ಮಡಿಮಾಡಿ

೨. ಉಸಿರನ್ನು ಪ್ರಾಣಾಯಾಮದಿಂದ ಮಡಿಮಾಡಿ

೩. ಮನಸ್ಸನ್ನು ಧ್ಯಾನದಿಂದ ಮಡಿಮಾಡಿ

೪. ಬುದ್ಧಿಯನ್ನು ಆಧ್ಯಾತ್ಮಿಕ ಚಿಂತನೆಗಳಿಂದ ಮಡಿಮಾಡಿ

೫. ನೆನಪುಗಳನ್ನು ಮನನ, ಸಚ್ಚಿಂತನೆಗಳಿಂದ ಮಡಿಮಾಡಿ

೬. ಅಹಂಕಾರವನ್ನು ಸೇವೆಯಿಂದ ಮಡಿಮಾಡಿ

೭. ಆತ್ಮವನ್ನು ಮೌನದಿಂದ ಮಡಿಮಾಡಿ

೮. ಆಹಾರವನ್ನು ತಯಾರಿಸುವಾಗ, ಬಡಿಸುವಾಗ ಮತ್ತು ಭುಂಜಿಸುವಾಗ ಸಕಾರಾತ್ಮಕ ಚಿಂತನೆಗಳಿಂದ ಮಡಿಮಾಡಿ

೯. ಸಂಪತ್ತನ್ನು ದಾನದಿಂದ ಮಡಿಮಾಡಿ

೧೦. ಭಾವನೆಗಳನ್ನು ಭಗವಂತನಲ್ಲಿ ನಿಷ್ಕಾಮ ಪ್ರೇಮ ಹಾಗು ಶರಣಾಗತಿ ಮೂಲಕ ಮಡಿಮಾಡಿ

ಮಡಿ ಅಂದರೆ ಈ ರೀತಿ ಮಡಿ ಮಾಡಬೇಕು. ಅದು ನಿಜವಾದ ಮಡಿ. ಮನಸ್ಸಲ್ಲಿ ಬೇರೆ ಅಶಾಸ್ತ್ರೀಯ ವಿಚಾರಗಳನ್ನು ತುಂಬಿಕೊಂಡು ಗಂಗಾದಿ ತೀರ್ಥಗಳಲ್ಲಿ ೧೦೦೮ ಸಲ ಮುಳುಗಿದರೂ ಅದು ಮಡಿ ಅಲ್ಲ. ಶಾಸ್ತ್ರಗಳಲ್ಲಿ ಹೇಳಿದ ಹಾಗೆ ಮಾಡಿ ನಿಜವಾದ ಮಡಿವಂತರಾಗೋಣ. 

ಸರ್ವೇ ಜನಾಃ ಸುಖಿನೋ ಭವಂತು !
******