SEARCH HERE

Showing posts with label ವಿಶ್ವಾಸ- ವರ್ಷ 2020 ಹೇಗಿತ್ತು how was year 2020. Show all posts
Showing posts with label ವಿಶ್ವಾಸ- ವರ್ಷ 2020 ಹೇಗಿತ್ತು how was year 2020. Show all posts

Wednesday, 14 April 2021

ವರ್ಷ 2020 ಹೇಗಿತ್ತು how was year 2020

 ಎಲ್ಲರೂ ಹೇಳ್ತಾ ಇದ್ದಿದ್ದು 2020 ಮರೆಯಲಿಕ್ಕಾಗದಷ್ಟು ಕೆಟ್ಟ ವರ್ಷ ಎಂದು. ಆದರೆ ಹಾಗೆ ಅನಿಸುತ್ತಿಲ್ಲ.


  • ತಂದೆ ತಾಯಿ ಜೊತೆಗೆ, ಹೆಂಡತಿ ಮಕ್ಕಳೊಡನೆ ಅತಿ ಹೆಚ್ಚು  ಕಳೆದಿದ್ದು, 2020 ರಲ್ಲಿ. 
  • ದುಶ್ಚಟಗಳಾದ ಧೂಮಪಾನ ಮದ್ಯಪಾನ ಗಳನ್ನು ನಿಯಂತ್ರಿಸಿದ ವರ್ಷ 2020.
  • ಮೀನು ಮಾಂಸವನ್ನು ತಿನ್ನದೇ ಸುಖವಾಗಿ ಜೀವಿಸಬಹುದೆಂದು ಕಲಿಸಿಕೊಟ್ಟ ವರ್ಷ 2020.
  • ಸಣ್ಣ ಸಣ್ಣ ರೋಗಗಳಿಗೆ ಡಾಕ್ಟರಿಗೆ ತೋರಿಸದಯೇ ಮನೆಯ ಮದ್ದಿನಲ್ಲೇ ಗುಣಪಡಿಸಬಹುದೆಂದು ಕಲಿಸಿಕೊಟ್ಟ ವರ್ಷ 2020.
  • ವಿಜೃಂಭಣೆಯಿಲ್ಲದೇ ಅತಿ ಸರಳವಾಗಿ ಅತಿ ಕಡಿಮೆ ಜನಗಳನ್ನು  ಕರೆದು ಮದುವೆ ಮಾಡಬಹುದೆಂದು  ತೋರಿಸಿಕೊಟ್ಟ ವರ್ಷ 2020.
  • ಬೇಕಾಬಿಟ್ಟಿ ರಸ್ತೆ ಗಳಲ್ಲಿ ಬಿಸಿಲಿನಲ್ಲಿ ಸುತ್ತದೇ  ಹಾಯಾಗಿ ಮನೆಯಲ್ಲಿ ಹೇಗೆ ಕಾಲ ಕಳೆಯಬಹುದೆಂದು ಕಲಿಸಿಕೊಟ್ಟ ವರ್ಷ 2020.
  • ದೇವಸ್ಥಾನಗಳಿಗೆ ಹೋಗದೆ ಅತ್ಯಂತ ಭಕ್ತಿಯಿಂದ ಮನೆಯಲ್ಲೇ ಕುಳಿತು ಪ್ರಾರ್ಥಿಸಿದ ವರ್ಷ 2020.
  • ಅದೆಷ್ಟೋ ಓದುವ ಹವ್ಯಾಸ ಇಲ್ಲದ ಜನರಿಗೆ ಧರ್ಮ ಗ್ರಂಥ ಗಳನ್ನು ಕೈಗೆತ್ತಿಕೊಳ್ಳುವಂತೆ ಪ್ರೇರಣೆ ತಂದುಕೊಟ್ಟ ವರ್ಷ 2020.
  • ದುಂದುವೆಚ್ಚ ಮಾಡದೇ ಕಡಿಮೆ ಖರ್ಚಿನಲ್ಲಿ ಹೇಗೆ ಜೀವನ ನಡೆಸ ಬಹುದೆಂದು ಎಚ್ಚರಿಸಿದ ವರ್ಷ 2020.
  • ವ್ಯಕ್ತಿ ಶುಚಿತ್ವದ ಬಗ್ಗೆ ಗೊತ್ತಿದ್ದರೂ ಅಷ್ಟಾಗಿ ಪಾಲಿಸದಿದ್ದ ನಾವು ಈಗ ಶುಚಿತ್ವದ ಬಗ್ಗೆ ಗಮನ ಕೊಡುವಂತಹ ಮಾಡಿದ್ದು 2020.
  • ಮಕ್ಕಳು ಮೊಬೈಲ್ ಫೋನ್ ಮುಟ್ಟಿದರೆ ಕೋಪಿಸಿಕೊಳ್ಳುತಿದ್ದ ತಂದೆ ತಾಯಿಗಳೇ ಅದೇ ಮಕ್ಕಳಿಗೆ ಆಂಡ್ರಾಯಿಡ್ ಫೋನ್ ಕೊಡಿಸಿದ ವರ್ಷ 2020.
  • ಹೀಗೆ ನಮ್ಮ ಬದುಕಿಗೆ ಅನೇಕ ಬೆಳಕನ್ನು ತಂದು ಕೊಟ್ಟ 2020 ನ್ನು ಹೇಗೆ ಮರೆಯುವುದು.

******