SEARCH HERE

Showing posts with label ವಿಶ್ವಾಸ- ವಿಧುಶೇಖರ ಭಾರತೀ ಮಹಾಸ್ವಾಮೀಜಿ. Show all posts
Showing posts with label ವಿಶ್ವಾಸ- ವಿಧುಶೇಖರ ಭಾರತೀ ಮಹಾಸ್ವಾಮೀಜಿ. Show all posts

Friday, 20 August 2021

vidushekhara bharati mahaswamiji sringeri mutt ವಿಧುಶೇಖರ ಭಾರತೀ ಮಹಾಸ್ವಾಮೀಜಿ

 ಶ್ರಾವಣ ಶುಕ್ಲ ಪಂಚಮಿ 

ಶೃಂಗೇರಿ ಶ್ರೀ ಶಾರದಾಪೀಠದ (ನಿಯೋಜಿತ ಉತ್ತರಾಧಿಕಾರಿ) ಜಗದ್ಗುರು ಅನಂತ ಶ್ರೀ ವಿಭೂಷಿತ  ವಿಧುಶೇಖರ ಭಾರತೀ ಮಹಾಸ್ವಾಮೀಜಿ (24-07-1993, ಶ್ರೀಮುಖ ನಾಮ ಸಂವತ್ಸರ, ಶನಿವಾರ) ಅವರ ವರ್ಧಂತಿ... ಪೂರ್ವಾಶ್ರಮದಲ್ಲಿ, ಶ್ರೀ ಸೀತಾನಾಗಲಕ್ಷ್ಮೀ ಮತ್ತು ಶ್ರೀ ಕುಪ್ಪಾ ಶಿವಸುಬ್ರಮಣ್ಯ ಅವಧಾನಿ ಎಂಬ ಪುಣ್ಯ ದಂಪತಿಗಳ ಪುತ್ರರಾಗಿ,  ಶ್ರೀ ಕುಪ್ಪಾ ವೆಂಕಟೇಶ್ವರ ಪ್ರಸಾದ ಶರ್ಮಾ ಎಂಬ ಹೆಸರಿನಿಂದ, ತಿರುಪತಿಯಲ್ಲಿ ಜನಿಸಿದರು...2015 ರ ಜನವರಿ 23 & 24 ರಂದು, ಶೃಂಗೇರಿಯಲ್ಲಿ ನಡೆದ ಶುಭ ಕಾರ್ಯಕ್ರಮದಲ್ಲಿ, ಶೃಂಗೇರಿ ಶಾರದಾಪೀಠದ ಶಂಕರಾಚಾರ್ಯ, ಅನಂತಶ್ರೀ ವಿಭೂಷಿತ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮೀಜಿ ಅವರು, ಶ್ರೀ ವೆಂಕಟೇಶ್ವರ ಪ್ರಸಾದ ಶರ್ಮಾ ಅವರಿಗೆ ಸನ್ಯಾಸ ದೀಕ್ಷಾ ನೀಡಿ ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿಕೊಂಡರು... ತಮ್ಮ ಜನ್ಮದಿನವಾದ  24/7 ನಂತೆ, ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು, 24×7 ಧಾರ್ಮಿಕ -ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸದಾ ತಲ್ಲಿನರು...  ವಿದ್ಯಾ ವಿನಯಸಂಪನ್ನಮ್ ವೀತರಾಗಮ್ ವಿವೇಕಿನಮ್ | ವಂದೇ ವೇದಾಂತ ತತ್ವಜ್ಞಮ್  ವಿಧುಶೇಖರ ಭಾರತೀಮ್||

***


***

new shankaracharya idol in Sringeri