SEARCH HERE

Showing posts with label ಆಚಾರ- ತೋರಣ torana. Show all posts
Showing posts with label ಆಚಾರ- ತೋರಣ torana. Show all posts

Tuesday, 1 January 2019

ತೋರಣ torana


ಹಿಂದುಗಳಿಗೆ ಅಮಾವಾಸ್ಯೆ ಹುಣ್ಣಿಮೆಯಿಂದ ಹಿಡಿದು ಪ್ರತಿದಿನವೂ ಒಂದು ರೀತಿಯ ಹಬ್ಬವೇ ಸರಿ. 

ವರ್ಷದಲ್ಲಿ ಹೆಚ್ಚಿನ ಹಬ್ಬಗಳನ್ನ ಆಚರಿಸುವವರು ಕೂಡ ಇವರೇ, ಪ್ರತಿ ಹಬ್ಬಗಳು ಸಹ ಒಂದೊಂದು ವಿಶೇಷತೆಯನ್ನ ಹೊಂದಿವೆ ಎಂದರೆ ಖಂಡಿತ ತಪ್ಪಾಗಲಾರದು.

ಹಿಂದೂಗಳು ಹೆಚ್ಚಾಗಿ ಸಂಪ್ರದಾಯಗಳನ್ನ ಇನ್ನು ಸಹ ಆಚರಣೆಯಲ್ಲಿಟ್ಟಿದ್ದರೆ, ಒಂದೊಂದು ಆಚರಣೆಗಳಿಗೂ ಸಹ ಒಂದೊಂದು ಮಹತ್ವವಿದೆ.

ಮಾವು ನಿದ್ರಾಹೀನತೆಯನ್ನು ದೂರ ಮಾಡುತ್ತದೆ. ಹಬ್ಬದ ಸಂದರ್ಭದಲ್ಲಿ ಕೆಲಸದ ಒತ್ತಡವನ್ನು, ಶ್ರಮವನ್ನು ಹೋಗಲಾಡಿಸುವುದು ಮಾವಿನ ತೋರಣ. ಮಾವು ಬಯಕೆಗಳನ್ನು ತೀರಿಸುತ್ತದೆ ಎಂದು ಭಾವಿಸುತ್ತಾರೆ.

ಪರ್ವದಿನಗಳಲ್ಲಿ, ಯಜ್ಞಯಾಗಗಳಲ್ಲಿ ಧ್ವಜಾರೋಹಣ ಮಾಡುವುದು ಅನಾದಿಯಾಗಿ ಬರುತ್ತಿರುವ ಸಂಪ್ರದಾಯ. ಇದನ್ನು ಅನುಸರಿಸಿ ತೋರಣಗಳನ್ನು ಕಟ್ಟುವ ಆಚಾರ ಬಂದಿದೆ.

ಹಬ್ಬ ಹರಿದಿನಗಳಲ್ಲಿ ಹೂವು, ಹಣ್ಣು, ಕಾಯಿ. ವಿಲ್ಯೆದೆಲೆ, ಬಾಳೆಎಲೆ, ಇವುಗಳೊಂದಿಗೆ ಬಾಗಿಲಿಗೆ ವಿಶೇಷವಾಗಿ ತೋರಣಗಳನ್ನ ಸಹ ಕಟ್ಟುತ್ತಾರೆ. ಅಶ್ವತ್ಥ, ಅತ್ತಿ, ಕಿರ್ಗೋಳಿ, ಮಾವು, ಹಲಸು ಎಲೆಗಳನ್ನು ಪಂಚಪಲ್ಲವಗಳು ಎಂದು ಕರೆಯುತ್ತಾರೆ. ಶುಭಕಾರ್ಯಗಳಲ್ಲಿ ಇವನ್ನು ಯತೇಚ್ಛವಾಗಿ ಬಳಸುತ್ತಾರೆ. ತೋರಣಕ್ಕಾಗಿ ಮಾತ್ರ ಮಾವಿನ ಎಲೆಗಳನ್ನು ಬಳಸುತ್ತಾರೆ.
********

🌿☘🌱🌳🌱☘🌿
ತೋರಣ ದ ಮಹತ್ವ
🌿 ಮಾವು ನಿದ್ರಾಹೀನತೆ ಯನ್ನು ದೂರಮಾಡುತ್ತದೆ.  ಹಸಿರು ಮಾವಿನ ಎಲೆ - ಹಬ್ಬದ ಸಂದರ್ಭದ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೂ ನಮ್ಮ ಮನೋ ಬಯಕೆಯನ್ನು ತೀರಿಸುತ್ತದೆ, ಎಂದು ಶಾಸ್ತ್ರ ಹೇಳುತ್ತದೆ. 
🌱 ಅಶ್ವಥ್ 
☘ ಅತ್ತಿ
🌿 ಕಿರ್ಗೋಲಿ
🌳 ಮಾವು
☘ ಹಲಸು
ಈ ಐದು ಗಿಡದ ಎಲೆಗಳನ್ನು  ಪಂಚ ಪಲ್ವವ ಗಳು ಎಂದು ಕರೆಯುತ್ತಾರೆ.  ವಿಶೇಷ ಪರ್ವ ದಿನಗಳಲ್ಲಿ ತೋರಣ ಕ್ಕಾಗಿ ಕೇವಲ ಮಾವಿನ ಎಲೆಗಳನ್ನು ಮಾತ್ರ ವೇ ಬಳಸುತ್ತರೆ.
🌿 ಮಾವಿನ ತೋರಣ ವನ್ನು ಬಾಗಿಲಿಗೆ ಕಟ್ಟುವುದರಿಂದ 🌿 *ಕೆಟ್ಟ ದೃಷ್ಟಿಯಿಂದ ರಕ್ಷಣೆ ಯೊಂದಿಗೆ ಸಕಲ ಭಾಗ್ಯವೂ ಒಲಿದು ಬರುತ್ತದೆ ಎಂಬ ನಂಬಿಕೆಯು ಇದೆ.ಆದಾಗ್ಯೂ ಈ  ಹಸಿರು ಮಾವಿನ ಎಲೆ ಸ್ವಲ್ಪ ದಿನಗಳ ಬಳಿಕ ಒಣಗಿ ಹೋಗುತ್ತದೆ ಆಗ ನೋಡಲು ನಮಗೂ ಬೇಸರವಾಗುತ್ತದೆ ಅಲ್ಲವೇ .☘ ಇದರ ಬದಲಿಗೆ ಹಿತ್ತಾಳೆ ಯ ಅಥವಾ ತಾಮ್ರ ದಿಂದ ಮಾಡಿದ ಮಾವಿನ ಎಲೆಯ ತೋರಣ ವನ್ನು ಬಳಸಿದರೆ ಬಹಳ ಒಪ್ಪವಾಗಿಯೂ, ಸುಂದರ ವಾಗಿಯೂ ಕಾಣುತ್ತದೆ.
☘ ಇನ್ನೊಂದು ಮುಖ್ಯವಾದ ಮಾಹಿತಿ  💦 👉 ಮನೆಯ ದೇವರ ಕೋಣೆ ಯ ಬಾಗಿಲ ಹೊಸ್ತಿಲಲ್ಲಿ ಶ್ರೀ ನರಸಿಂಹ ದೇವರು ಸ್ಥಿತ ರಾಗಿರುತ್ತಾರೆ ಎಂಬ ನಂಬಿಕೆಯಿಂದ ಮನೆಯ ಹೊರ ಬಾಗಿಲಿಗೆ / ದೇವರ ಕೋಣೆ ಯ ಬಾಗಿಲಿಗೆ ತೋರಣ ಕಟ್ಟಿ ಹೊಸ್ತಿಲ ಪೂಜೆ ಮಾಡುವುದು ರೂಢಿಯಲ್ಲಿದೆ.
*********