ಸರ್ವ ಕಾಮ ಫಲಾವಾಪ್ತೈ ಸಾಧನೈಕ ಸುಖಾವಹಂ//.
ಪದ್ಮಪ್ರಿಯೇ ಪದ್ಮಿನಿ ಪದ್ಮಹಸ್ತೇ ಪದ್ಮಾಲಯೇ ಪದ್ಮದಳಾಯತಕ್ಷಿ/
ವಿಶ್ವಪ್ರಿಯೇ ವಿಷ್ಣು ಮನೋನುಕೂಲೇ ತ್ವತ್ಪಾದಪದ್ಮಂ
ಮಯೀಸನ್ನಿಧಸ್ತ್ವ//
ಉತ್ತಿಷ್ಟೋತ್ತಿಷ್ಟ ಗೋವಿಂದ ಉತ್ತಿಷ್ಠ ಗರುಡ ಧ್ವಜ/
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು//
ಅಮೃತ ಮಂಥನ - ಶ್ರೀ ಮಹಾಲಕ್ಷ್ಮಿ ಯ ಅವತಾರ.
ಭಗವಂತನು ಸೃಷ್ಟಿ ಯ ಆದಿ ಯಲ್ಲಿ ಲೋಕ ಪಿತಾಮಹ ನಾಗಿ ನಾರಾಯಣ ನೇ ಬ್ರಹ್ಮ ನಾಗಿ ಜನಿಸುತ್ತಾನೆ.
ಶ್ರೀ ಮನ್ನಾನಾರಾಯಣನಿಗೆ ಜನ್ಮವೆಂಬುದು ಇಲ್ಲ .ಅನಾದಿನಿತ್ಯನಾದ ಭಗವಂತನು ಬ್ರಹ್ಮ ನಾಗಿ ಪ್ರಜೆಗಳನ್ನು ಸೃಷ್ಟಿ ಸಿದನು.
ಯೋಗನಿದ್ರೆ ಯಿಂದ ಎಚ್ಚತ್ತ ಗೊಂಡ ನಾರಾಯಣ ನಿಗೆ ಲೋಕವೇ ಶೂನ್ಯ ವಾಗಿತ್ತು.
ನಾರಾಯಣ ನಿಗೆ ಆದಿ,ಅಂತ್ಯ ವಿಲ್ಲ.ಜಗತ್ತಿನ ಹುಟ್ಟು, ಸಾವುಗಳಿಗೆ ಕಾರಣ ನಾರಾಯಣ .
" ನೀರು ನಾರಾಯಣ ನ ಸೃಷ್ಟಿ ಅದರಿಂದ ಲೇ "ನಾರಾ"
ಯೆಂದು ಹೆಸರು.
ಸೃಷ್ಟಿ ಯ ಆದಿಯಲ್ಲಿ ನೀರು ಭಗವಂತನ ಶಯನಕ್ಕೆ ಆಶ್ರಯ ವಾಗಿದ್ದರಿಂದ ಭಗವಂತನಿಗೆ " ನಾರಾಯಣ "ನೆಂದು ಹೆಸರು.
ಲೋಕವೆಲ್ಲಾ ಶೂನ್ಯ ವಾಗಿದ್ದು ,ಜಗತ್ತು ಪ್ರಳಯಜಲದಿಂದ ತುಂಬಿದೆ.ಆಗ ಭಗವಂತನು ನೀರಿನಲ್ಲಿ ಮುಳುಗಿದ್ದ ಭೂಮಿ ಯನ್ನು ಮೇಲಕ್ಕೆ ಎತ್ತಲು ನಿರ್ಧರಿಸಿ " ವರಾಹಾವತಾರ' ವನ್ನು ತಾಳಿ ಭೂಮಿ ದೇವಿಯನ್ನು ರಕ್ಷಣೆ ಮಾಡಿದನು. ವರಾಹನಾಗಿ ಬಂದ ನಾರಾಯಣ ನು ತನ್ನ ಕೋರೆ ದಾಡೆಯಲ್ಲಿ ಭೂಮಿಯನ್ನು ಎತ್ತಿ ಪಾತಾಳದಿಂದ ಮೇಲೆ ಬಂದನು.
ಭೂಮಿದೇವಿಯನ್ನು ರಕ್ಷಿಸಿದ ಭಗವಂತನ ನ್ನು ದೇವಾನುದೇವತೆಗಳು ಸ್ತುತಿ ಸಿದರು.
ಹೀಗೆ ದೇವತೆಗಳಿಂದ ,ಋಷಿಗಳಿಂದ ಸ್ತುತಿ ಸಲ್ಪಟ್ಟ ವರಾಹಸ್ವಾಮಿಯು ಭೂಮಿಯನ್ನು ಕಡಲ ಮೇಲೆ ತೇಲಿಸಿದನು.
ಕಡಲಿನ ನೀರಿನ ರಾಶಿಯಲ್ಲಿ ಭೂಮಿ ದೋಣಿ ಯಂತೆ
ತೇಲಾಡುತ್ತಾ ,ಅದು ನೀರಿನಲ್ಲಿ ಮುಳುಗದೇ ಮೇಲೆ ನಿಂತಿದೆ.
ಮುಂದೆ ಅನೇಕ ಜೀವಿಗಳು, ಜಲಚರ ಗಳೂ ಸೃಷ್ಟಿ ಯಾಯಿತು.
ದೇವ - ದಾನವರಿಗೂ ಯುಧ್ಧಗಳಾಯಿತು.ದಾನವರ ಬಲವು ಜಾಸ್ತಿಯಾಗಿ ದೇವತೆಗಳು ನಿಸ್ಸಾಯಹಕರಾಗಿ ಭಗವಂತನ ಮೊರೆ ಹೊಕ್ಕರು.
ಭಗವಂತನು ಅಭಯವಿತ್ತು ಕಡಲನ್ನು ಕಡೆಯುವ ಉಪಾಯ ಹೇಳಿ ಮಂದರ ಪರ್ವತ ವೇ ಕಡಗೋಲು, ವಾಸುಕಿಯನ್ನೇ ಹಗ್ಗ ಮಾಡಿಕೊಂಡು ಕಡಲ ಕಡೆಯಲು ಹೇಳಿ, ಕಡಲಿನಿಂದ ಮೂಡಿಬಂದ ಅಮೃತ ವನ್ನು ಕುಡಿಯಲು ಹೇಳಿದನು.
ಹೀಗೆ ದೇವತೆಗಳು, ದಾನವರು ಸೇರಿಕೊಂಡು ಕಡಲು ಕಡೆಯತೊಡಗಿದಾಗ ಮೊದಲು ಯಾಗಧೇನು ಸುರಭಿ,ನಂತರ ವಾರುಣೀದೇವಿ,ಪಾರಿಜಾತ ಪರಿಮಳ ಬೀರುತ್ತಾಮೇಲೇರಿ ಬಂದವು.
ನಂತರ ಚಂದ್ರ, ಶ್ವೇತಾಂಬರಧಾರಿ ಧನ್ವಂತರಿ ಕೈಯಲ್ಲಿ ಅಮೃತ ಕಲಶವನ್ನು ಹಿಡಿದು ಬಂದಾಗ ದೇವತೆಗಳು, ದಾನವರೂ,ಮುನಿಗಳು ಸಂತೋಷ ಪಟ್ಟರು.
ಅನಂತರ ದಿವ್ಯ ಕಾಂತಿ ಸೂಸುವ ಶ್ರೀದೇವಿ ಕಮಲಪಾಣಿಯಾಗಿ ಅರಳಿದ ತಾವರೆಯ ಮೇಲೆ ಕುಳಿತು ಬಂದಳು.
ಸಂತಸದಿಂದ ಮಹರ್ಷಿಗಳು ಶ್ರೀ ಸೂಕ್ತ ದಿಂದ ಸ್ತುತಿ ಸಿದರು.ಗಂಗಾದೇವಿ ಯರು ಅಭೀಷೇಕ ಮಾಡಿದರು.
ಸಮುದ್ರ ರಾಜನು ತಾವರೆ ಮಾಲೆಯನ್ನು ಅರ್ಪಿಸಿ, ದಿವ್ಯವಾದ ಚಿನ್ನದ ಆಭರಣಗಳನ್ನು ತೊಡಿಸಿದನು..
ಮಿಂದು ,ದಿವ್ಯ ವಾದ ಮಾಲಿಕೆಯಲ್ಲಿ ಅಲಂಕೃತ ಳಾದ ತಾಯಿ ಲಕ್ಷ್ಮೀ ದೇವಿಯು ಎಲ್ಲಾ ದೇವತೆಗಳು ನೋಡುತ್ತಿದ್ದಂತೆ ಶ್ರೀ ಹರಿಯ ವಕ್ಷಸ್ಥಳದಲ್ಲಿ ಹೋಗಿ ನೆಲೆಸಿದಳು.
ಹರಿಯ ಎದೆಯಲ್ಲಿ ನೆಲಿಸಿದ ಲಕ್ಷ್ಮೀ ಕಟಾಕ್ಷದಿಂದ ದೇವತೆಗಳು ಸಂತೋಷ ದಿಂದ ನಲಿದರು.
ಭಗವಂತನು ಮೋಹಿನೀ ರೂಪದಲ್ಲಿ ಅಮೃತವನ್ನು ದೇವತೆಗಳಿಗೆ ಹಂಚಿದನು.
ದೇವೇಂದ್ರ ನು ಮತ್ತೆ ಪದವಿ ಯನ್ನು ಪಡೆದು ಸಿರಿಯನ್ನು ಪಡೆದು ಶ್ರೀ ಮಹಾಲಕ್ಷ್ಮಿ ಯನ್ನು ಸ್ತುತಿ ಮಾಡಿದನು.
ಇಂದ್ರನ ಸ್ತುತಿ ಯಿಂದ ಸಂತುಷ್ಡಗೊಂಡ ಶ್ರೀ ಮಹಾಲಕ್ಷ್ಮಿ ಯು ನಿನ್ನ ಸ್ತೋತ್ರ ದಿಂದ ಸಂತೋಷ ವಾಗಿದೆ..ನಿನ್ನ ಈ ಸ್ತೋತ್ರ ದಿಂದ ಸಂಜೆ -ಮುಂಜಾನೆ ನನ್ನನ್ನು ಯಾರು ನನ್ನನ್ನು ಸ್ತುತಿ ಸುವರೋ ಅವರು ನನ್ನ ಅನುಗ್ರಹ ಪಡೆಯುತ್ತಾರೆ "
ಎಂದು ವರವನ್ನು ಕೊಟ್ಟರು.
ಹೀಗೆ ಭೃಗು ಮುನಿಯ ಮಗಳಾದ ಲಕ್ಷ್ಮೀ ದೇವಿಯು ಕಡಲನ್ನು ಕಡೆದಾಗ ಕಡಲಿನಲ್ಲಿ ಮೂಡಿ ಬಂದಳು.
ಜಗನ್ನಾಥ, ಜನಾರ್ದನ ನು ಅವತರಿಸಿದಾಗಲೆಲ್ಲಾ ಲಕ್ಷ್ಮೀ ದೇವಿಯು ಅಂತದೇ ಅಂಶಗಳನ್ನು ಹೊಂದಿ ಅವತರಿಸಿದರು.
ಭಗವಂತ ಆದಿತ್ಯ ನಾದಾಗ ಅವಳು ಪದ್ಮೆ ಯಾದಳು.
ಭಗವಂತ ಭಾರ್ಗವ ನಾದಾಗ ಧರಣೀದೇವಿ ಯಾದಳು..
ರಾಮ ನಾದಾಗ ಸೀತೆಯಾದಳು.ಕೃಷ್ಣ ನಾದಾಗ ರುಕ್ಮಿಣಿ ಯಾದಳು.
ಹೀಗೆ ಎಲ್ಲಾ ಅವತಾರ ದಲ್ಲಿಯೂ ಭಗವಂತನ ಸಂಗಾತಿಯಾದಳು.ದೇವ ರೂಪದಲ್ಲಿ ದೇವತೆಯಾದ ಲಕ್ಷ್ಮೀ ದೇವಿಯು ಮನುಷ್ಯನಾದಾಗ ಮಾನುಷಿಯಾಗಿ ರೂಪ ತಾಳುವ ಲಕ್ಷ್ಮೀ ದೇವಿಯ ಜನ್ಮಕಥೆಯನ್ನು ಓದಿದರೆ ,ಕೇಳಿದರೆ ಮೂರು ತಲೆಮಾರಿನ ವರೆಗೂ ಸಿರಿ ಸಂಪದವಿರುತ್ತದೆ.
ಇಂದ್ರನಿಂದ ಸ್ತುತಿ ಸಲ್ಪಟ್ಟ ಲಕ್ಷ್ಮೀ ದೇವಿಯು ಸಕಲ ಸಂಪತ್ತು ನೀಡುವಳು.
*****
ವಿಷ್ಣುಸರ್ವೋತ್ತಮತ್ತ್ವದ ಅರ್ಥ🙏
ಶ್ರೀಹರಿಯು ಸರ್ವೋತ್ತಮ ಎಂಬುದು ಸಕಲ ಶಾಸ್ತ್ರಗಳ ಸಾರ ಎಂಬುದು ಮಧ್ವಸಿದ್ದಾಂತದ ಮಹಾ ಪ್ರಮೇಯ; ಈ ಮಾತಿಗೆ ಶ್ರೀಹರಿಯು ಸಕಲ ದೇವತೆಗಳಲ್ಲಿ ಯೂ ಉತ್ತಮನಾದವನು ಎಂಬುದು ಸಾಮಾನ್ಯವಾದ ಅರ್ಥ, ಶ್ರೀಮದಾಚಾರ್ಯರು ಕಾಠಕೋಪ ನಿಷದ್ಭಾಷ್ಯದಲ್ಲಿ ಉಲ್ಲೇಖಿಸಿರುವ ಈ ಕೆಳಗಿನ ಪ್ರಮಾಣವಚನದಿಂದ ಇದರ ಅರ್ಥ ಮತ್ತಷ್ಟು ವಿಶಾಲವಾಗಿ ತೆರೆದುಕೊಳ್ಳುತ್ತದೆ.
ತಾರತಮ್ಯಪರಿಜ್ಞಾನಪೂರ್ವಕಂ ಸರ್ವತೋ ಹರೇಃ|
ಆಧಿಕ್ಯೇ ಸರ್ವವಾಕ್ಯಾನಾಂ ತಾತ್ಪರ್ಯಂ ಮಹದಿಷ್ಯತೇ||
ಇದರಿಂದ ಸರ್ವೋತ್ತಮ ಎಂಬುದಕ್ಕೆ ಉತ್ತಮಃ ಸರ್ವೇಷಾಂ ಉತ್ತಮಃ ಎಂಬ ಅರ್ಥಗಳೊಂದಿಗೆ ಸರ್ವತ್ರ ಉತ್ತಮಃ {ಸರ್ವದೇಶೇಷು ಉತ್ತಮಃ} ಸರ್ವದಾ ಉತ್ತಮಃ {ಸರ್ವಕಾಲೇಷು ಉತ್ತಮಃ} ಸರ್ವಥಾ ಉತ್ತಮಃ { ಸರ್ವಪ್ರಕಾರೇಷು ಉತ್ತಮಃ} ಮೊದಲಾದ ಮತ್ತಷ್ಟು ಅರ್ಥಗಳು ಸ್ಪುರಿಸುತ್ತವೆ,: ಸರ್ವದೇಶೇಷು ಕಾಲೇಷು ಸ ಏಕಃ ಪರಮೇಶ್ವರಃ ಎಂಬ ಅಣುಭಾಷ್ಯದ ಮಾತಿನಲ್ಲಿ ಸರ್ವತ್ರ ಸರ್ವದಾ ಎಂಬ ಅರ್ಥಗಳು ನಿರೂಪಿತವಾಗಿವೆ. ಅದರಂತೆ ಸರ್ವವತಾರೇಷು ಉತ್ತಮಃ ಸರ್ವಾವಯವೇಷು ಉತ್ತಮಃ ಸರ್ವಗುಣೇಷು ಉತ್ತಮಃ ಸರ್ವಕ್ರಿಯಾಸು ಉತ್ತಮಃ ಮೊದಲಾದ ಮತ್ತಷ್ಟು ಅರ್ಥಗಳು ಸಹ ಇದಕ್ಕೆ ಸೇರಿಕೊಂಡು ಶ್ರೀಹರಿಯು ಸರ್ವೋತ್ತಮತ್ತ್ವದ ಚಿಂತನೆ ಮತ್ತಷ್ಟು ಆಳವಾಗಿ ಮನಸ್ಸಿಗೆ ಮುಟ್ಟುವಂತಾಗುವುದು ಸರ್ವಶಾಸ್ತ್ರಗಳಲ್ಲೂ ಉತ್ತಮ ಎಂಬುದಾಗಿಯೇ ಪ್ರತಿಪಾದಿತನಾ ದವನು ಎಂಬುದು ಮತ್ತೊಂದು ಅರ್ಥ: ಆಲೋಡ್ಯ ಸರ್ವಶಾಸ್ತ್ರಾಣಿ ವಿಚಾರ್ಯ ಚ ಪುನಃ ಪುನಃ| ಇದಮೇಕಂ ಸುನಿಷ್ಪನ್ನಂ ಧ್ಯೇಯೋ ನಾರಾಯಣಃ ಸದಾ||
ವಿಷ್ಣುಸರ್ವೋತ್ತಮತ್ತ್ವವನ್ನು ಮಾತ್ರ ಒಪ್ಪವ ವಿಶಿಷ್ಟಾದ್ವೈತಮತ ಮೊದಲಾದವುಗಳಲ್ಲಿ ಈ ಬಗೆಯ ಸರ್ವೋತ್ತಮತ್ತ್ವದ ವಿವೇಚನೆ ಕಂಡುಬರುವುದಿಲ್ಲವಾದ್ದರಿಂದ ಅವರು ನಿಜ ಅರ್ಥದಲ್ಲಿ ವೈಷ್ಣವರು ಎನ್ನಲಾಗುವುದಿಲ್ಲ ಎಂಬ ತತ್ತ್ವವೂ ಸೂಚಿತವಾಗುವುದು.
ಸರ್ವೋತ್ತಮ ಎಂಬುದಕ್ಕೆ ಸರ್ವಶ್ವಸೌ ಉತ್ತಮಶ್ಚ ಎಂಬ ಅರ್ಥವೂ ವಿವಕ್ಷಿತ ಸರ್ವ ಹಾಗೂ ಉತ್ತಮ ಎಂಬ ಎರಡು ಪದಗಳು ಸಹ ವಿಷ್ಣುಸಹಸ್ರನಾಮ ದಲ್ಲಿ ಬಂದಿದೆ: ಸರ್ವ ಶರ್ವಃ... ಧರ್ಮೋ ಧರ್ಮವಿತ್ ಉತ್ತಮಃ ಇದರಿಂದ ಶ್ರೀಹರಿಯು ಸರ್ವ ಎಂದರೆ ಪೂರ್ಣ - ಆದುರಿಂದಾಗಿವಯೇ ಉತ್ತಮ ಎಂಬ ವಿಶೇಷಾರ್ಥವು ಲಭಿಸುವುದು. ಈ ರೀತಿಯಾಗಿ ಇನ್ನು ಅನೇಕಬಗೆಯಲ್ಲಿ ವಿಶೇಷವಾದ ಅರ್ಥಗಳನ್ನು ಹೊಂದಿರುವ ಅಪೂರ್ವವಾದ ಪದ ಸರ್ವೋತ್ತಮ ಎಂಬ ಪದ
ಶ್ರೀಮಧ್ವೇಶಾರ್ಪಣಮಸ್ತು
ಶ್ರೀಹರಿಃ ಸರ್ವೋತ್ತಮಃ ಶ್ರೀವಾಯುಜೀವೋತ್ತಮಃ
***
ಉದೀಚ್ಯಾಂ ದಿಶಿ ವಿಷ್ಟೋಸ್ತು ಸ್ಯಾದನಂತಾಸನಾಭಿಧಂ । ಘನೋದಕಾಂತೇ ಶ್ರೀರೂಪಂ ಧಾಮ ಮುಕ್ತಜನಾಸ್ಪದಂ ।।
ಲಕ್ಷ ಯೋಜನತೋಽಪ್ಯೂರ್ಧ್ವ೦ ತದ್ವಿದ್ವದ್ವಿರುದಾಹೃತಂ ।।
ತಥಾ ಶ್ವೇತದ್ವೀಪಸಂಜ್ಞಂ ಧಾಮ ಕ್ಷೀರಾಂಬುಧೇ ಹರೇಃ ।
ತಬ್ಬೋಚ್ಛಿತಂ ಭೂಪ್ರದೇಶಾತ್ ಪಂಚಾಶಲಕ್ಷಯೋಜನೈಃ ||
ವಿಷ್ಟೋರ್ಲೋಕಸ್ತು ವಿಶ್ಲೇಯೋ ಯಂ ವೈಕುಂಠಂ ವಿದುರ್ಬುಧಾಃ ||
ಕೋಟೀನಾಂ ಷೋಡಶೈಃ ಪಂಚವಿಂಶಲಕ್ಷಯುತೈಃ ಸ ಚ ।
ಭೂಲೋಕಾದುಚ್ಛ್ರಿತೋ ಜ್ಞೇಯಃ ॥
ಶ್ವೇತದ್ವೀಪ ಅನಂತಾಸನ ವೈಕುಂಠಗಳ ಎತ್ತರ
ಲಕ್ಷ ಯೋಜನ ಮೇಲಿಕ್ಕನಂತಾಸನ
ಲಕ್ಷ್ಮೀಶನಿಹ ಶ್ವೇತದ್ವೀಪ/
ಲಕ್ಷವೈವತ್ತು,ವೈಕುಂಠ ಇಪ್ಪತ್ತೈದು
ಲಕ್ಷ ಷೋಡಶ ಕೋಟಿಯಲ್ಲಿಹುದು//
(---ತತ್ವಸಾರ./ವೈಕುಂಠವರ್ಣನೆ)
ಅನಂತಾಸನವು ಲಕ್ಷಯೋಜನ,ಶ್ವೇತದ್ವೀಪ ಐವತ್ತು ಲಕ್ಷ ಯೋಜನ, ವೈಕುಂಠ ಹದಿನಾರು ಕೋಟಿ ಇಪ್ಪತ್ತೈದು ಲಕ್ಷ ಯೋಜನ ಎತ್ತರದಲ್ಲದೆ.
ಪೃಥಿವಿಸ್ಥೇಷು ಸರ್ವೋಚ್ಚೋ ಲೋಕೋ$ನಂತಾಸನಾತ್ಮಕ: //
ಎಂದು ಭಾಗವತ ತಾತ್ಪರ್ಯದಲ್ಲಿದೆ.
ಅಂದರೆ ಅನಂತಾಸನ ಭೂಲೋಕದಲ್ಲಿಯೇ ಇದೆ.ಆದರೆ ಒಂದು ಲಕ್ಷ ಯೋಜನ ಎತ್ತರದಲ್ಲಿದೆ.
ಶ್ವೇತದ್ವೀಪ ಭೂಲೋಕದಲ್ಲಿಯೇ ಇದೆ ಎಂದು ಬೃಹದಾರಣ್ಯಕ ಭಾಷ್ಯದಲ್ಲಿದೆ--
ತಸ್ಯಾಂ ಪೃಥಿವ್ಯಾಂ ಶ್ವೇತಾಖ್ಯ ದ್ವೀಪೇ ಮುಕ್ತೈರುಪಾಸತೇ//
***
read more