SEARCH HERE

Showing posts with label ಆರೋಗ್ಯ- ಹೀರೆ ಕಾಯಿ ಹುರಳಿ ಕಾಯಿ ಬೀನ್ಸ್‌ ಸೋರೆ ಕಾಯಿ ಹಸಿರು ಬದನೆಕಾಯಿ. Show all posts
Showing posts with label ಆರೋಗ್ಯ- ಹೀರೆ ಕಾಯಿ ಹುರಳಿ ಕಾಯಿ ಬೀನ್ಸ್‌ ಸೋರೆ ಕಾಯಿ ಹಸಿರು ಬದನೆಕಾಯಿ. Show all posts

Friday, 1 October 2021

ಹೀರೆ ಕಾಯಿ ಹುರಳಿ ಕಾಯಿ ಬೀನ್ಸ್‌ ಸೋರೆ ಕಾಯಿ ಹಸಿರು ಬದನೆಕಾಯಿ

 ನಮ್ಮ ಹಿರಿಯರು ಹಾಗೂ ವೈದ್ಯರೇ ಹೇಳುವ ಹಾಗೆ ಆರೋಗ್ಯಕರವಾದ ಯಾವುದೇ ಆಹಾರ ಪದಾರ್ಥಗಳಲ್ಲಿ ಪೌಷ್ಟಿಕಾಂಶ ಸತ್ವಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ಇದರಿಂದ ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲದೆ, ಅನೇಕ ರೀತಿಯ ಕಾಯಿಲೆಗಳು ಕೂಡ ದೂರವಾಗುತ್ತದೆ. ಉದಾಹ ರಣೆಗೆ ಹಸಿರೆಲೆ ತರಕಾರಿಯಾದ ಹೀರೆಕಾಯಿ, ಬೀನ್ಸ್, ಸೋರೆಕಾಯಿ ಸೇವನೆಯಿಂದ ಆರೋಗ್ಯಕಾರಿ ಜೀವನ ನಡೆಸಬಹುದು.

 ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಿದೆ. ಇದರ ಅರ್ಥ ಇಷ್ಟೇ ಒಳ್ಳೆಯ ಆರೋಗ್ಯವಿದ್ದರೆ, ಜೀವನ ದಲ್ಲಿ ಏನು ಬೇಕಿದ್ದರೂ ಸಾಧಿಸಬಹುದು. ಹಾಗಂತ ಆರೋಗ್ಯ ಅನ್ನುವುದು ಹಾಗೆ ಸಿಗುವುದೇ? ಖಂಡಿತ ವಾಗಿಯೂ ಇಲ್ಲ! ಇದಕ್ಕಾಗಿ ಸರಿಯಾದ ಆಹಾರ ಪದ್ಧತಿ ಜೊತೆಗೆ ದೈನಂದಿನ ಜೀವನಶೈಲಿ ಅನುಸರಿಸಿ ಕೊಂಡು ಹೋದರೆ ಮಾತ್ರ ಆರೋಗ್ಯಕಾರಿ ಜೀವನ ನಡೆಸಲು ಸಾಧ್ಯ.

ಇನ್ನು ಮುಖ್ಯವಾಗಿ ಕೆಲವೊಂದು ಹಸಿರು ತರಕಾರಿಗಳನ್ನು ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ, ಇದರಿಂದ ಆರೋಗ್ಯ ವೃದ್ಧಿಯಾಗವುದು ಮಾತ್ರವಲ್ಲದೆ, ಅನೇಕ ರೀತಿಯ ಕಾಯಿಲೆ ಗಳಿಂದ ಕೂಡ ದೂರವಾಗಲು ನೆರವಾಗುತ್ತದೆ. ಬನ್ನಿ ಅಂತಹ ಆರೋಗ್ಯಕಾರಿ ತರಕಾರಿಗಳು ಯಾವುದು ಎನ್ನುವುದನ್ನು ನೋಡೋಣ..

1.ಹೀರೆಕಾಯಿ

ಹೀರೆಕಾಯಿಯಮೇಲ್ಮೈ ನೋಡುವುದಕ್ಕೆ ಸ್ವಲ್ಪ ಒರಟಾಗಿ ಕಂಡು ಬಂದರೂ ಕೂಡ, ಇದರ ಒಳಭಾಗದ ಬಿಳಿ ತಿರುಳು ಮತ್ತಗೆ ಇದ್ದು, ಸಖತ್ ಆರೋಗ್ಯ ಪ್ರಯೋಜನಗಳನ್ನು ತನ್ನಲ್ಲಿ ಒಳ ಗೊಂಡಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಹೀರೆಕಾಯಿ ಸಿಕ್ಕರೆ ಮರೆಯದೇ ಖರೀದಿಸಿ, ಯಾಕೆಂದರೆ ಇದರಲ್ಲಿ ಲೆಕ್ಕಕ್ಕೆ ಸಿಗದಷ್ಟು ಆರೋಗ್ಯಕಾರಿ ಪ್ರಯೋಜನಗಳು ಅಡಗಿದೆ.

ಮುಖ್ಯವಾಗಿ ಈ ತರಕಾರಿಯಲ್ಲಿ ವಿಟಮಿನ್ 'ಎ' ಅಂಶ ಯಥೇಚ್ಛವಾಗಿ ಕಂಡುಬರುವುದರಿಂದ, ಕಣ್ಣಿನ ದೃಷ್ಟಿ ಸಮಸ್ಯೆ ಇರುವವರಿಗೆ, ಇದೊಂದು ಆರೋಗ್ಯಕ್ಕಾಗಿ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಅಷ್ಟೇ ಅಲ್ಲದೆ, ಈ ತರಕಾರಿಯಲ್ಲಿ ಕಬ್ಬಿಣಾಂಶದ ಪ್ರಮಾಣ, ಯಥೇಚ್ಛವಾಗಿ ಸಿಗುವುದರಿಂದ, ವಾರದಲ್ಲಿ ಒಮ್ಮೆಯಾದರೂ ಸಾಂಬಾರ್ ಅಥವಾ ಸಾಗು ತಯಾರಿಕೆಯಲ್ಲಿ ಈ ತರಕಾರಿ ಯನ್ನು ಕೂಡ ಸೇರಿಸಿ ಸೇವನೆ ಮಾಡುವುದರಿಂದ ದೇಹದಲ್ಲಿನ ಕಬ್ಬಿಣದ ಅಂಶದ ಸಮಸ್ಯೆ ದೂರ ವಾಗುತ್ತದೆ, ಇದರಿಂದ ರಕ್ತಹೀನತೆ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

2.ಬೀನ್ಸ್‌ ಹುರಳಿ ಕಾಯಿ 

ಮಾರ್ಕೆಟ್‌ನಲ್ಲಿ ಬೀನ್ಸ್‌ ಬೆಲೆ ಇಳಿಯುವುದು ತುಂಬಾನೇ ಅಪರೂಪ ಅಂತಲೇ ಹೇಳಬಹುದು. ಯಾವತ್ತೂ ನೋಡಿದರೂ ಕೂಡ, ಈ ತರಕಾರಿಯ ಬೆಲೆ ಗಗನಕ್ಕೆ ಏರಿರುತ್ತದೆ. ಆದರೆ ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ, ಇದರ ಬೆಲೆ ಹೆಚ್ಚಾಗಿದ್ದರೂ ಕೂಡ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ಪೌಷ್ಟಿಕ ಸತ್ವಗಳು ಇದರಲ್ಲಿ ಸಿಗುತ್ತದೆ.

ಮುಖ್ಯವಾಗಿ ಬೀನ್ಸ್‌ಗಳಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಕೆ ಅಂಶ ಯಥೇಚ್ಛವಾಗಿ ಕಂಡು ಬರುವುದರ ಜೊತೆಗೆ ಅಪಾರ ಪ್ರಮಾಣದ ನಾರಿನ ಅಂಶ ಕೂಡ, ಈ ತರಕಾರಿಯಲ್ಲಿ ಅಡಗಿದೆ. ಇನ್ನು ಮಧುಮೇಹ ಇರುವವರು ಈ ತರಕಾರಿಯನ್ನು ಮಿತವಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣ ಮಾಡಲು ಸಹಾಯವಾಗುತ್ತದೆ.

ಇದಕ್ಕೆ ಮುಖ್ಯಕಾರಣ ಇದರಲ್ಲಿ ಆರೋಗ್ಯಕ್ಕೆ ಬೇಕಾಗುವ ನಾರಿನಾಂಶ, ನೈಸರ್ಗಿಕವಾದ ಸಕ್ಕರೆ ಅಂಶಗಳು ಯಥೇಚ್ಛವಾಗಿ ಸಿಗುವುದರಿಂದ, ಸಕ್ಕರೆಕಾಯಿಲೆ ಇರುವ ರೋಗಿಗಳಿಗೆ ಹೇಳಿ ಮಾಡಿಸಿದ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ!

3.ಸೋರೆಕಾಯಿ

ನೋಡಲು ಒಂದು ರೀತಿಯಾಗಿ ಸಣ್ಣ ದೊಣ್ಣೆಯ ಆಕರದಲ್ಲಿರುವ ಈ ಸೋರೆಕಾಯಿ, ತನ್ನಲ್ಲಿ ಹಲವಾರು ಬಗೆಯ ಪೌಷ್ಟಿಕ ಸತ್ವಗಳನ್ನು ಒಳಗೊಂಡಿದೆ. ಮುಖ್ಯವಾಗಿ ಈ ತರಕಾಯಲ್ಲಿ ನೀರಿ ನಾಂಶ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದರ ಜೊತೆಗೆ ಗಣನೀಯ ಪ್ರಮಾಣದಲ್ಲಿನಾರಿನಾಂಶ, ಕೂಡ ಕಂಡು ಬರುತ್ತದೆ.

ಇದರ ಜೊತೆಗೆ, ಈ ತರಕಾರಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಇರುವುದರಿಂದ, ಚಯಾಪಚಯ ಸುಧಾರಣೆ ಮಾಡುವುದು, ಜೀರ್ಣಕ್ರಿಯೆ ಮತ್ತು ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಇನ್ನೂ ಮುಖ್ಯವಾಗಿ ಸಕ್ಕರೆಕಾಯಿಲೆ ಇರುವವರು ಪ್ರತಿದಿನ ಒಂದೊಂದು ಲೋಟ ಈ ತರಕಾರಿಯ ಜ್ಯೂಸ್‌ನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ರಕ್ತದಲ್ಲಿ ಸಕ್ಕರೆಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುವುದು.

4.ಹಸಿರುಬದನೆಕಾಯಿ

ಬದನೆಕಾಯಿ ಎಂದಾಗ ಹೆಚ್ಚಿನವರು ಮುಖ ಸಿಂಡರಿಸಿ ಬಿಡುತ್ತಾರೆ! ಯಾಕೆಂದರೆ ಹೆಚ್ಚಿನವರಿಗೆ ಈ ತರಕಾರಿ ಎಂದರೆ ಅಷ್ಟಕಷ್ಟೇ! ಆದರೆ ನಿಮಗೆ ಗೊತ್ತಿರಲಿ, ನಮ್ಮ ಆರೋಗ್ಯ ದೃಷ್ಟಿಯಿಂದ ನೋಡುವು ದಾದರೆ ಬದನೆಕಾಯಿಗಳಲ್ಲಿ ಮೂಗಿನ ಮೇಲೆ ಬೆರಳಿಡುವಂತಹ ಅಚ್ಚರಿಯ ಸಂಗತಿಗಳು ಕಂಡು ಬರುತ್ತವೆ.

ಮುಖ್ಯವಾಗಿ ಈ ತರಕಾರಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಸಹಕಾರಿಯಾಗುವಂತಹ ಹಲವಾರು ಬಗೆಯ ವಿಟಮಿನ್ಸ್‌ಗಳು, ಖನಿಜಾಂಶಗಳು ಹಾಗೂ ನಾರಿನಾಂಶಗಳು ಯಥೇಚ್ಛವಾಗಿ ಕಂಡು ಬರುತ್ತದೆ, ಹಾಗೂ ಕ್ಯಾಲೋರಿ ಅಂಶಗಳನ್ನು ಮಾತ್ರ ಕಡಿಮೆ ಹೊಂದಿವೆ. ಇದರಿಂದ ದೇಹದ ತೂಕ ಇಳಿಸಲು ಬಯಸು ವವರು ಈ ತರಕಾರಿಯನ್ನು ಕಣ್ಣುಮುಚ್ಚಿ ಸೇವನೆ ಮಾಡಬಹುದು!

ಇನ್ನು ಈ ತರಕಾರಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಅಧಿಕ ಪ್ರಮಾಣದಲ್ಲಿ ಸಿಗುವುದರಿಂದ ಹೃದಯದ ಆರೋಗ್ಯಕ್ಕೆ ಬಹಳಷ್ಟು ಸಹಕಾರಿ ಆಗಿರುತ್ತವೆ. ಇನ್ನೂ ಮೊದಲೇ ಹೇಳಿದ ಹಾಗೆ ಇದರಲ್ಲಿ ನಾರಿನಾಂಶದ ಪ್ರಮಾಣ ಹೆಚ್ಚಾಗಿ ಸಿಗುವುದರಿಂದ, ಮಧುಮೇಹ ಇರುವ ರೋಗಿಗಳು, ವಾರಕ್ಕೆ ಒಮ್ಮೆ ಯಾದರೂ ಈ ಬದನೆಕಾಯಿ ಸಾಂಬರ್ ಮಾಡಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಿಕೊಳ್ಳಬಹುದು.

***