ಸಂಖ್ಯಾ ಗಣನೆಯ ತ್ರಯಃ ಎನ್ನುವ 3 ಸಂಖ್ಯೆಯ ಮಹತ್ವ ಹಾಗೂ ವಿಶೇಷತೆ
ತ್ರಯಃ ಎನ್ನುವ ಮೂರನೆಯ ಸಂಖ್ಯೆಯ ಮಹತ್ವ ಹಾಗೂ ವಿಶೇಷತೆಗಳು :
ಸಂಖ್ಯಾ ರೇಖೆಯಲ್ಲಿನ ಕ್ರಮಾಗತ ( ಅನು ಕ್ರಮ ) ದಲ್ಲಿ ಸೊನ್ನೆಯ ನಂತರದಲ್ಲಿ ಬರುವ ಮೂರನೆಯ ಸಂಖ್ಯೆಯು ಆಗಿರುತ್ತದೆ.
ಮೂರರ ಸಂಖ್ಯೆಯು ಧರ್ಮ ಸೂಚಕವಾಗಿದೆ - ಅ ಕಾರ , ಉ ಕಾರ ಮತ್ತು ಮ ಕಾರಗಳ ತ್ರ ಯಕ್ಷರಗಳು ಸಂಯೋಜನೆಗೊಂಡಂತೆ ವ್ಯುತ್ಪತ್ತಿಯಾಗಿ ಒಟ್ಟಾರೆ ಓಂಕಾರ ವಾಗು ವುದರಿಂದ ಇದು ದೈವಸಂಖ್ಯೆ ಎಂದೂ ಕೂಡ ಪರಿಗಣಿತವಾಗಿರುತ್ತದೆ.
ವೇದವ್ಯಾಸ ಮಹರ್ಷಿಗಳು ವೇದಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ ನಂತರ ಮಹಾಭಾರತ , ಭಾಗವತ ಮತ್ತಿತರ ಪುರಾಣಗಳನ್ನು ಬರೆದರು. ಇದಕ್ಕೆ ಮುನ್ನವೇ ವಾಲ್ಮೀಕಿ ಮಹರ್ಷಿಗಳು ರಾಮಾಯಣ ಮಹಾಕಾವ್ಯವನ್ನು ಬರೆದಿದ್ದರು.
ಏಕವಾಗಿದ್ದ ಪರಬ್ರಹ್ಮ ಚೈತನ್ಯ ಶಕ್ತಿಯನ್ನು (ಸೃಷ್ಟಿ, ಸ್ಥಿತಿ, ಲಯ) ತ್ರಿಶಕ್ತಿಗಳಾಗಿ ವೇದ ವ್ಯಾಸರು ಕಂಡು ಪುರಾಣಗಳಲ್ಲಿ ಪೌರಾಣಿಕ ಶಕ್ತಿಗಳಾಗಿ ಬ್ರಹ್ಮ - ವಿಷ್ಣು - ಮಹೇಶ್ವರರಾಗಿ ತೋರಿದರು. ಇವರಲ್ಲಿ ಶಿವ ಮತ್ತು ವಿಷ್ಣುರವರು ಪ್ರಧಾನ ಆರಾಧಕ ದೇವರಾದರು. ಕ್ರಮೇಣ ಅವರಿಗೆ ಆಲಯಗಳಾದವು. ಆದರೆ ಬ್ರಹ್ಮನು ಏಕೆ ಪೂಜನೀಯನಾಗಲಿಲ್ಲ , ಅವನಿಗೇಕೆ ಆಲಯ ಗಳಿಲ್ಲ ಎಂಬುವುದು ಪುರಾಣೇತಿಹಾಸಗಳಿಂ ದ ತಿಳಿದು ಬರುತ್ತದೆ.
ಮೂರರ ಸಂಖ್ಯೆಯನ್ನು ಸನಾತನ ಧರ್ಮ ವು ಬಹಳ ಪವಿತ್ರವಾಗಿ ಪರಿಗಣಿಸುತ್ತದೆ.
ಪವಿತ್ರ ಗಾಯತ್ರಿಯನ್ನು (ಯಜೋಪವೀತ) ಮೂರು ಗಂಟುಗಳಾಗಿ ಧಾರಣ ಮಾಡು ತ್ತಾರೆ. ಶಿವನಿಗೂ ಸಹ ತ್ರಿಶೂಲದ ಆಯುಧವನ್ನು ಕೊಟ್ಟಿದ್ದಲ್ಲದೆ, ತ್ರಿನೇತ್ರನಾಗಿ ಯೂ ಸನಾತನ ಧರ್ಮವು ಹೇಳುತ್ತದೆ.
ತ್ರಿಕರಣ ( ಮನೋ - ವಾಕ್ - ಕಾಯ ) , ತ್ರಿಕಾಲ ( ಭೂತ - ಭವಿಷ್ಯ - ವರ್ತಮಾನ) , ತ್ರಿಸಮಯ ( ಉದಯ - ಮಧ್ಯಾಹ್ನ - ಸಂಜೆ) , ತ್ರಿನಾಡಿ ( ಇಡ - ಪಿಂಗಳ - ಸುಷುಮ್ನ) ಹೀಗೆ ತ್ರಿಸಂಖ್ಯಾ ಪದಗಳು ನೂರಾರು ಇರುತ್ತವೆ. ಹಾಗೆಯೇ , ಪ್ರಕೃತಿಯೇ ತ್ರಿಗುಣಾತ್ಮಕವಾಗಿರುತ್ತದೆ. ಚಳಿ, ಮಳೆ, ಬಿಸಿಲು ಈ ಮೂರರಿಂದಲೇ ಸೃಷ್ಟಿನಿಯಮವು ಯಾವಾಗಲೂ ಕೂಡ ನಡೆಯುತ್ತಿರುತ್ತದೆ.
ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮೋಕ್ಷೀಯ ಮಾಮೃತಾತ್ ||
ಈ ಶ್ಲೋಕ ಮಂತ್ರವು ಋದ್ವೇದದ ಏಳನೆಯ ಮಂಡಲದಲ್ಲಿರುತ್ತದೆ. ಈ ಮಂತ್ರಕರ್ತರು ವಶಿಷ್ಠ ಮಹರ್ಷಿಗಳು ಆಗಿರುತ್ತಾರೆ.
ವಿಭೂತಿಯಲ್ಲಿನ ಮೂರು ರೇಖೆಗಳ ಪರಮಾರ್ಥ :
ಜೀವಾತ್ಮ - ಪ್ರಕೃತಿ - ಪರಮಾ ತ್ಮಗಳ ಸಂಕೇತವಾಗಿ ಮೂರು ರೇಖೆಗಳನ್ನು ಸ್ವೀಕರಿಸಿದ್ದಾರೆ. ಸೃಷ್ಟಿ , ಸ್ಥಿತಿ ಮತ್ತು ಲಯಗಳ ಸಂಕೇತವಾಗಿಯೂ ಮೂರು ರೇಖೆಗಳನ್ನು ಸ್ಥಿರೀಕರಿಸಿದ್ದಾರೆ. ಪರಮಾತ್ಮ ಸತ್ಯವೆಂದು ಒಂದು ರೇಖೆ , ಜೀವಾತ್ಮ ಸತ್ಯವೆಂದು ಒಂದು ರೇಖೆ ಹಾಗೂ ಜಗತ್ತು ಸತ್ಯವೆಂದು ಒಂದು ರೇಖೆಯ ಸಂಕೇತವಾಗಿರುತ್ತದೆ.
ವಿಭೂತಿಯಲ್ಲಿನ ಮೂರು ರೇಖೆಗಳು ಸತ್ಯ , ಧಮ೯ ಮತ್ತು ನ್ಯಾಯಗಳನ್ನು ಪ್ರತಿನಿಧಿ ಸುವ ಸಂಕೇತಗಳು ಆಗಿರುತ್ತವೆ ಹಾಗೂ ವಿಭೂತಿ ಧಾರಣೆಯ ಮೂರು ರೇಖೆಗಳ ಭಾವಾಥ೯ವು ಗುರು - ಲಿಂಗ - ಜಂಗಮದ ಪ್ರತೀಕವು ಆಗಿರುತ್ತದೆ ಎಂದೂ ಕೂಡ ಕೆಲವರ ವಿಶ್ಲೇಷಣೆಗಳು ಇರುತ್ತದೆ .
ಅದರಂತೆ ಮಸ್ತಕದ ಮೇಲೆ ಧರಿಸುವ ವಿಭೂತಿಯು ಮೂರು ರೇಖೆಗಳನ್ನು ಹೊಂದಿರುವಂತೆ ಅದನ್ನು ಧಾರಣ ಮಾಡಿ ಕೊಳ್ಳುವ ಸನಾತನ ಸಂಸ್ಕೃತಿಯ ಸತ್ ಸಂಪ್ರದಾಯವು ಬಹಳ ಪ್ರಾಚೀನ ಕಾಲ ದಿಂದಲೂ ಕೂಡ ಇರುತ್ತದೆ.
ತ್ರಯಃ ಆಧರಿತ ಶಿವನ ಹಲವು ನಾಮಗಳು :
ಮಂಗಳಕರನಾಗಿರುವ ಶಿವನು ಮೂರು ಕಣ್ಣುಗಳನ್ನುಳ್ಳ ಮುಕ್ಕಣ್ಣನಾಗಿ ತ್ರಿನೇತ್ರ ಧಾರಿ , ಮೂರು ಮೊನೆಯ ಶೂಲಗಳ ಆಯುಧವನ್ನು ತನ್ನ ಕೈಯಲ್ಲಿ ಧರಿಸಿ ತ್ರಿಶೂಲಪಾಣಿ ( ತ್ರಿಶೂಲಧಾರಿ ), ದಕ್ಷಿಣಾ ಮೂತಿ೯ಯ ರೂಪದಲ್ಲಿ ಸಾರಂಗವನ್ನು ತನ್ನ ಕೈಯಲ್ಲಿ ಧರಿಸಿ ಸಾರಂಗಪಾಣಿ , ಪಿನಾಕ ಧನಸ್ಸನ್ನು ಧರಿಸಿ ಪಿನಾಕಿ ( ಪಿನಾಕಪಾಣಿ ), ತಪಸ್ಸಿನಿಂದಾಗಿ ಜಟೆಯನ್ನು ಹೊಂದಿ ಧೂಜ೯ಟಿ , ಕಾಮನನ್ನು ದಹಿಸಿದಂತೆ ಆತನನ್ನು ಗೆದ್ದು ಕಾಮಾರಿ , ಸಮುದ್ರ ಮಂಥನದಲ್ಲಿನ ಹಾಲಾಹಲವನ್ನು ಸೇವಿಸಿ ತನ್ನ ನೀಲ ಕಂಠದ ಶ್ರೀಕಂಠ, ತನ್ನ ಮಸ್ತಕದಲ್ಲಿ ಮೂರು ರೇಖೆಗಳ ವಿಭೂತಿಯನ್ನು ಧರಿಸಿ ತ್ರಿಪುಂಡ್ರಧಾರಿ, ತ್ರಿಪುರಾಸುರನನ್ನು ಸಂಹರಿಸಿದಂತೆ ತ್ರಿಪುರಗಳನ್ನು ದಹಿಸಿದ ತ್ರಿಪುರಾರಿ, ಸಕಲ ಸಂಪತ್ತನ್ನು ಕರುಣಿಸು ವವನಾಗಿ ಶಂಕರ, ಸಮಸ್ತ ಎಲ್ಲಾ ದೇವತೆಗಳ ದೇವ ಮಹಾದೇವನಾಗಿ ಈಶ್ವರ , ತ್ರ್ಯಯಂಭಕ , ತ್ರಿಕಾಲ ಜ್ಞಾನಿ, ಕಾಲಾಗ್ನಿ , ತ್ರಿದಳದ ಬಿಲ್ವಪತ್ರೆಯ ಅತ್ಯಂತ ಪ್ರಿಯನಾದ ತ್ರಿಬಿಲ್ವದಳಪ್ರಿಯ -.....ಇನ್ನೂ ಮುಂತಾದ ತ್ರಯಃ ಅಕ್ಷರ ಗಳ ಹಲವು ನಾಮಗಳಿಂದ ತನ್ನನ್ನು ಕರೆಯಿಸಿಕೊಳ್ಳುತ್ತಿರುತ್ತಾನೆ.
ಹಾಗೆಯೇ, ಪದ್ಮಾಸನದ ಭಂಗಿಯಲ್ಲಿ ಧ್ಯಾನಧಾರಿಯಾಗಿ ಕುಳಿತಿರುವ, ಜಟಾಧಾರಿ ಯಾದ ಶಿವನ ರೂಪವು ತ್ರಿಕೋನಾಕೃತಿ ಯಾಗಿಯೇ ಇರುವುದು ಕಂಡು ಬರುತ್ತದೆ.
ಈ ರೀತಿಯಲ್ಲಿ ತ್ರಯಃ ಎನ್ನು ವ ಮೂರನೆ ಯ ಸಂಖ್ಯೆಯು ಸಾಕ್ಷಾತ್ ಪರಶಿವನಿಗೆ ಅತ್ಯಂತ ಪ್ರಿಯವಾಗಲು ಕಾರಣವಾಗಿ, ಆದು ಶಿವನೊಂದಿಗೆ ಅತ್ಯಂತ ಅವಿನಾಭಾವದ , ನಿಕಟವಾದ ಸಂಬಂಧವನ್ನು ಹೊಂದಿರುತ್ತ ದೆ ಎಂದು ತಿಳಿದುಬರುತ್ತದೆ.
ತ್ರಯಃ - ಮೂರರ ಆಧರಿತ ಕೆಲವು ಕೂಟಗಳು :
ಅಕ್ಷರ ತ್ರಯಗಳು :
ಅ ಕಾರ , ಉ ಕಾರ , ಮ ಕಾರ - ಒಟ್ಟಾರೆಯಾಗಿ ಓಂಕಾರ.
ತ್ರಿಮೂರ್ತಿಗಳು :
ಬ್ರಹ್ಮ , ವಿಷ್ಣು , ಮಹೇಶ್ವರ
ತ್ರಿನೇತ್ರ :
ಮೂರು ಕಣ್ಣುಗಳನ್ನು ಉಳ್ಳ ವನು ಮುಕ್ಕಣ್ಣ ( ಶಿವ )
ತ್ರಿ ಸಮಯಗಳು - ತ್ರಿ ಸಂಧ್ಯೆಗಳು :
ಮುಂಜಾನೆ ( ಪೂವಾ೯ಹ್ನ - ಬೆಳಿಗ್ಗೆ ) , ಮಧ್ಯಾಹ್ನ , ಸಂಜೆ ( ಅಪರಾಹ್ನ - ಸಾಯಂಕಾಲ )
ತ್ರಿಜಗಗಳು :
ಸ್ವರ್ಗ ( ದೇವತೆಗಳು ) , ಮರ್ತ್ಯ ( 84 ಲಕ್ಷ ಜೀವಿಗಳು ) , ಪಾತಾಳ ( ವಿವಿಧ ಜೀವಿಗಳು )
ತ್ರಿಕರಣಗಳು :
ಕಾಯ ( ದೇಹ ) , ವಾಚ ( ಮಾ ತು ) , ಮನ ( ಮನಸ್ಸು)
ಶರೀರದ ತ್ರಿರೂಪಗಳು :
ಸ್ಥೂಲ , ಸೂಕ್ಷ್ಮ , ಕಾರಣ
ತ್ರಿ ಜೀವಿಗಳು :
ವಿಶ್ವ , ತೇಜ , ಪ್ರಜ್ಞಾ
ತ್ರಿ ಗಣಗಳು :
ದೇವಗಣ , ಮನುಷ್ಯಗಣ , ರಾಕ್ಷಸಗಣ
ತ್ರಿಕಾಲಗಳು :
ಭೂತ, ವರ್ತಮಾನ , ಭವಿಷ್ಯತ್
ತ್ರಿ ಮುಹೂರ್ತಗಳು :
ಬ್ರಾಹ್ಮಿ , ಗೋಧೂಳಿ , ಅಭಿಜಿತ್
ತ್ರಿಲೋಕಗಳು :
ಭೂಃ , ಭುವಃ , ಸುವಃ
ತ್ರಿಭಂಗಿಗಳು :
ಮೊಣಕಾಲು, ಸೊಂಟ, ಕತ್ತು
ತ್ರಿದೋಷಗಳು :
ವಾತ , ಪಿತ್ತ, ಕಫ
ಅವಸ್ಥಾನ ತ್ರಯಗಳು :
ಜಾಗೃತ, ಸ್ವಪ್ನ , ಸುಷುಪ್ತಿ
ತ್ರಿಲಿಂಗಗಳು :
ಪುಲ್ಲಿಂಗ, ಸ್ತ್ರೀ ಲಿಂಗ, ನಪುಂಸಕ ಲಿಂಗ
ತ್ರಿಕರ್ಮಗಳು :
ಆಗಮಿ, ಸಂಚಿತ , ಪ್ರಾರಬ್ಧ
ತ್ರಿವಿಧ ಪ್ರಾರಬ್ಧಗಳು :
ಇಚ್ಛಾ ಪ್ರಾರಬ್ಧ (ಇಚ್ಛಾ ಶಕ್ತಿ, ಸತ್ವಗುಣ ), ಅನಿಚ್ಛಾ ಪ್ರಾರಬ್ಧ ( ಜ್ಞಾನ ಶಕ್ತಿ, ರಜೋ ಗುಣ ) ಮತ್ತು ಪರೆಚ್ಛಾ ಪ್ರಾರಬ್ಧ.( ಕ್ರಿಯಾ ಶಕ್ತಿ , ತಮೋಗುಣ ).
ತ್ರಿವಿಧ ಭಕ್ತಿಗಳು :
ಗುರು, ಲಿಂಗ , ಜಂಗಮ
ತಾಪ ತ್ರಯಗಳು :
ಆದಿ ಭೌತಿಕ, ಆದಿ ದೈವಿಕ , ಆಧ್ಯಾತ್ಮಿಕ
ತ್ರಿವಿಧ ಶಕ್ತಿಗಳು :
ಜ್ಞಾನ ಶಕ್ತಿ, ಕ್ರಿಯಾಶಕ್ತಿ, ಇಚ್ಛಾಶಕ್ತಿ
ತ್ರಿವಿಧಾಂಗಗಳು - ತ್ರಿವಿಧ ಶರೀರಗಳು :
ತ್ಯಾಗಾಂಗ, ಭೋಗಾಂಗ, ಯೋಗಾಂಗ
ತ್ರಿಗುಣ ಆಹಾರಗಳು :
ಸಾತ್ವಿಕ, ರಾಜಸ, ತಾಮಸಿಕ
ತ್ರಿ ವಿಕ್ರಮಗಳು :
ಧ್ಯಾನ , ಯೋಗ , ತಪಸ್ಸು
ತ್ರಿಪದಿಗಳು :
ಮೂರು ಸಾಲುಗಳುಳ್ಳ ಒಂದು ಬಗೆಯ ವಿಶೇಷ ಪದ್ಯ.
ವೈಧಿಕ ತ್ರಿಮತ ಸಿದ್ಧಾಂತಗಳು :
ದ್ವೈತ , ಅದ್ವೈತ , ವಿಶಿಷ್ಟಾ ದ್ವೈತ
ತ್ರಿವೇಣಿಯರು :
ಗಂಗೆ, ಯಮುನೆ , ಸರಸ್ವತಿ
ತ್ರಿಶೂಲ :
ಮೂರು ಮೊನೆಯುಳ್ಳ ಶಿವನ ಆಯುಧ
ವೇದ ತ್ರಯಗಳು :
ಋಗ್ವೇದ, ಯಜುರ್ವೇದ, ಸಾಮವೇದ
ತ್ರಿಪಿಟಕಗಳು :
ಸೂತ್ರ , ವಿನಯ , ಅಭಿಧರ್ಮ
ತ್ರಿಪುಟಗಳು :
ಜ್ಞಾತೃ , ಜ್ಞಾನ, ಜ್ಞೇಯ
ತ್ರಿ ವರ್ಗಗಳು :
ಧರ್ಮ, ಅರ್ಥ, ಕಾಮ
ಪ್ರಸ್ಥಾನ ತ್ರಯಗಳು :
ಉಪನಿಷತ್ತು , ಬ್ರಹ್ಮಸೂತ್ರ , ಭಗವದ್ಗೀತೆ
ತ್ರಿ ರಾಮರು :
ಶ್ರೀರಾಮ , ಪರಶುರಾಮ , ಬಲರಾಮ
ಶಕ್ತಿ ತ್ರಯಗಳು :
ಪ್ರಭು ಶಕ್ತಿ, ಮಂತ್ರ ಶಕ್ತಿ, ಉತ್ಸಾಹ ಶಕ್ತಿ
ತೇಜ ತ್ರಯಗಳು :
ಸೂರ್ಯ, ಚಂದ್ರ , ಅಗ್ನಿ
ಋಣ ತ್ರಯಗಳು :
ದೇವ ಋಣ, ಋಷಿ ಋಣ, ಪಿತೃ ಋಣ
ಸ್ಥಾನ ತ್ರಯಗಳು :
ನೇತ್ರ, ಕಂಠ, ಹೃದಯ
ಗುರು ತ್ರಯರು :
ಮಾತಾ, ಪಿತೃ , ಆಚಾರ್ಯ
ತ್ರಿ ಅವಸ್ಥೆಗಳು :
ಬಾಲ್ಯ, ಯೌವನ, ವೃದ್ಧಾಪ್ಯ
ತ್ರಿವಿಧ ಶೋತೃಗಳು :
ಮುಕ್ತಿ, ಮುಮುಕ್ಷು, ವಿಷಯ
ಜಗತ್ತಿನ ತ್ರಿವಿಧ ನಿಯಮ ಕಾಯ೯ಗಳು :
ಸೃಷ್ಟಿ , ಸ್ಥಿತಿ, ಲಯ
ತ್ರಿ ಲೋಹಗಳು :
ಚಿನ್ನ, ಬೆಳ್ಳಿ, ತಾಮ್ರ
ತ್ರಿಫಲಗಳು :
ತಾರಿ, ಅಣಿಲೆ, ನೆಲ್ಲಿ
ಸೂತ್ರ ತ್ರಯಗಳು :
ಸಾಂಖ್ಯ, ಯೋಗ, ಬ್ರಹ್ಮ
ಗುಣ ತ್ರಯಗಳು :
ಸತ್ವಗುಣ , ರಜೋಗುಣ ( ರಜ - ರಜಸ್ಸು) , ತಮೋಗುಣ ( ತಮ - ತಮಸ್ಸು)
ತ್ರಿವಿಧ ಅರ್ಥಗಳು :
ಶಬ್ದಾರ್ಥ, ವಾಚ್ಯಾರ್ಥ, ಭಾವಾರ್ಥ
ಆತ್ಮ ತ್ರಯಗಳು :
ಪರಮಾತ್ಮ , ಅಂತರಾತ್ಮ , ಜೀವಾತ್ಮ
ಕಾಯ೯ ತ್ರಯಗಳು :
ಪಾಪ , ಪುಣ್ಯ , ಮಿಶ್ರ
ಅಗ್ನಿ ತ್ರಯಗಳು :
ದಕ್ಷಿಣಾಗ್ನಿ , ಗಾರ್ಹಪತ್ಯ , ಆಹವನಿಯ
ವೈಧಿಕ ಮತ ತ್ರಯಗಳು :
ಸ್ಮಾರ್ತ, ವೈಷ್ಣವ, ಶ್ರೀವೈಷ್ಣವ
ತ್ರಿವಿಧ ಕರ್ಮಗಳು :
ಯಜನ, ವೇದಾಧ್ಯಯನ, ದಾನ
ಈಷಣ ತ್ರಯಗಳು :
ಲೋಕ ಪ್ರಶಂಸೆ, ಧನರಾಜ್ಯದಿ, ಸ್ತ್ರೀಪುತ್ರ
ತ್ರಿ ವಿಧಾಂಗಗಳು :
ತನು , ಮನ , ಭಾವ
ತ್ರಿವಿಧ ಪ್ರಸಾದಗಳು :
ಶುದ್ಧ , ಸಿದ್ಧ , ಪ್ರಸಿದ್ಧ
ತ್ರಿವಿಧ ಪ್ರಜ್ಞೆಗಳು :
ಶುದ್ಧ , ದೇವ , ಪ್ರಸಾದ
ತ್ರಿ ಕಲಗಳು :
ನಿಃಕಲ, ಸಕಲಾಸಕಲ, ಸಕಲ
ತ್ರಿಕರಣ ಶುದ್ಧಿಗಳು :
ತನು ಶುದ್ಧಿ, ಮನ ಶುದ್ಧಿ, ಭಾವ ಶುದ್ಧಿ.
ತ್ರಿವಿಧ ದೀಕ್ಷಾ ಸಂಸ್ಕಾರಗಳು :
ಕ್ರಿಯಾದೀಕ್ಷೆ , ವೇದಾದೀಕ್ಷೆ , ಮಂತ್ರದೀಕ್ಷೆ
ತ್ರಿವಿಧ ಲಿಂಗಗಳು :
ಇಷ್ಟಲಿಂಗ , ಭಾವಲಿಂಗ , ಪ್ರಾಣಲಿಂಗ
ತ್ರಿವಿಧ ಧಮ೯ ದಾಸೋಹಗಳು :
ಗುರುವಿಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ.
ತ್ರಿವಿಧ ನಿತ್ಯ ದಾಸೋಹಗಳು :
ಜ್ಞಾನ ( ಅಕ್ಷರ ) ದಾಸೋಹ , ಪ್ರಸಾದ ( ಅನ್ನ) ದಾಸೋಹ , ವಸತಿ ( ಸ್ಥಳ ) ದಾಸೋಹ.
ವೈಧಿಕ ಮತ ಆಚಾರ್ಯ ತ್ರಯರು :
ಶಂಕರಾಚಾರ್ಯರು, ರಾಮಾನುಜಾಚಾರ್ಯ ರು, ಮಧ್ವಾಚಾರ್ಯರು.
ರತ್ನ ತ್ರಯರು :
ರನ್ನ , ಪೊನ್ನ , ಪಂಪ
ತ್ರಿವಣ೯ಗಳು :
ಕೇಸರಿ , ಬಿಳಿ , ಹಸಿರು
ತ್ರಿಭುಜ - ತ್ರಿಕೋನ :
ಒಟ್ಟು ಮೂರು ಬಾಹುಗಳು ಮತ್ತು ಮೂರು ಒಳಕೋನಗಳನ್ನು ಹೊಂದಿರುವ ಆಕೃತಿ.
ತ್ರಿವಿಧ ಮಲಗಳು :
ಅಣವ ಮಲ , ಮಾಯೀ ಮಲ , ಕಾಮಿ೯ಕ ಮಲ
ತ್ರಿವಿಧ ತಪಸ್ಸುಗಳು :
ಶಾರೀರಿಕ ತಪಸ್ಸು , ವಾಙ್ಮಯ ತಪಸ್ಸು, ಮಾನಸಿಕ ತಪಸ್ಸು
***