SEARCH HERE

Showing posts with label ವಿಶ್ವಾಸ- ಮೋಕ್ಷ ಸಾಧನ moksha sadhana. Show all posts
Showing posts with label ವಿಶ್ವಾಸ- ಮೋಕ್ಷ ಸಾಧನ moksha sadhana. Show all posts

Friday, 14 May 2021

ಮೋಕ್ಷ ಸಾಧನ moksha sadhana

ಮೋಕ್ಷ ಸಾಧನ

ಮೋಕ್ಷಕ್ಕೆ ಸಾಧನವಾದ ಮುಖ್ಯ

ಭಗವದಪರೋಕ್ಷಜ್ಞಾನ  ಸಂಪಾದಿಸುವಸಾಧನಗಳು


೧] ವಿವಿಧ ಸಂಸಾರದ ದುಃಖ ಅನುಭೋಗಿಸಿ ಸಂಸಾರ ಹೇಯವೆಂಬ ವಿರಾಗಪೊಂದಿ ಸಜ್ಛನ ಸಮಾಗಮದಿಂದ ಇಹಪಾರತ್ರಿಕದಲ್ಲಾಗುವ ಫಲ ಭೋಗ ವಿಚಾರ. 

೨] ಶಮದಮಾದಿ ಭಗವಿನ್ನಿಷ್ಠತಾ ಬುದ್ಧಿ ಇಂದ್ರಿಯ ನಿಗ್ರಹಾದಿಗಳು.

೩]ಅಧ್ಯಯನ ಸಂಪತ್ತು ಪೊಂದಲು ಗುರುಗಳಲ್ಲಿ ಶರಣು ಪೋಗೋಣ.

೪] ಗುರುಗಳಲ್ಲಿ ವಾಸ ಮಾಡೋಣ.

೫] ಗುರುಗಳ ಉಪದೇಶದಿಂದ ಸಮೀಚೀನವಾದ ಸಚ್ಛಾಸ್ತ್ರಶ್ರವಣ.

೬] ಗುರುಗಳಿಂದ ಕೇಳಿದ್ದು ದೃಢೀಕರಣವಾದ ಮನನ.

೭] ತಾರತಮ್ಯದಿಂದ ಗುರುಭಕ್ತಿ. 

೮] ಸರ್ವತೋಮತ್ವೇನ ಹರಿಭಕ್ತಿ. 

೯] ಸ್ವಾಧಮರಲ್ಲಿ ದಯಾ. 

೧೦] ಸಮಾನಿಕರಲ್ಲಿ ತನ್ನಂತೆ ಸ್ನೇಹ ಪ್ರೀತಿ. 

೧೧] ಉತ್ತಮರಲ್ಲಿ ಭಕ್ತಿ. 

೧೨] ಫಲರಹಿತವಾಗಿ ನಿವೃತ್ತ ಕರ್ಮಾಚರಣೆ. 

೧೩] ನಿಷಿದ್ಧ ಕರ್ಮತ್ಯಾಗ .

೧೪] ಸರ್ವ ಕರ್ಮ ಸಮರ್ಪಣೆ.

೧೫] ತಾರತಮ್ಯ ಪಂಚಭೇದ ಜ್ಞಾನ. 

ಪ್ರಕೃತಿ ಜಡ, ಮತ್ತು ಚಿತ್ಪ್ರಕೃತಿ. 

ಪುರುಷರೂಪಿ ಪರಮಾತ್ಮನ ವಿವೇಚನ ಜ್ಞಾನ. 

೧೬] ಅಯೋಗ್ಯರ ನಿಂದಾ.

೧೭] ಉಪಾಸನಾ.

ಹೀಗೆ ಪಾರಂಪರ್ಯದಿಂದ ಒಂದೊಂದು ಪಾವಟಿಗೆ ಏರುತ್ತಾ ಕೊನೆಗೆ ನಿಯತ ಗುರು ಉಪದೇಶದಿಂದ ಬಿಂಬರೂಪಿಯಾದ ಹರಿಯ ಅಪರೋಕ್ಷ ಇವೆಲ್ಲವೂ ಕ್ರಮೇಣ ಬ್ರಹ್ಮಾದಿ ಸರ್ವಯೋಗ್ಯ ಜೀವರಿಗೆ ಸಾಧನವಾದವುಗಳು.

****


ಮೋಕ್ಷಸಾಧನ

ಮುಖ್ಯ ಪ್ರತಿಮೆ ಮುಖ್ಯಪ್ರಾಣ

ಛಾನ್ದೋಗ್ಯ ಉಪನಿಷತ್ತಿನಲ್ಲಿ ಒಂದು ಕತೆ. ದೇವಾಸುರ ಸಂಗ್ರಾಮದಲ್ಲಿ ಅಸುರರ ಮೇಲೆ ವಿಜಯ ಸಾಧಿಸಲು ದೇವತೆಗಳು ಉದ್ಗೀಥ ನಾಮಕ ಪರಮಾತ್ಮನ ಉಪಾಸನೆಗೆ ಪವಿತ್ರವಾದ ಪ್ರತಿಮೆಯನ್ನು ಹುಡುಕುತ್ತಿದ್ದರು. ವಿವಿಧ ಇಂದ್ರಿಯ ಮತ್ತು ಮನೋಭಿಮಾನಿ ದೇವತೆಗಳನ್ನು ಕ್ರಮವಾಗಿ ಪ್ರತಿಮೆಯಾಗಿ ಪ್ರಯತ್ನಿಸಿದಾಗ ಅಸುರರು ಅವುಗಳನ್ನು ದೂಷಿತಗೊಳಿಸಿದರು. ಅಶುದ್ಧ ಪ್ರತಿಮೆಗಳಲ್ಲಿ ಪರಮಾತ್ಮನನ್ನು ಉಪಾಸಿಸಲು ದೇವತೆಗಳಿಗೆ ಸಾಧ್ಯವಾಗದೇ ಕೊನೆಗೆ ಮುಖ್ಯಪ್ರಾಣನನ್ನು ಭಗವಂತನ ಪ್ರತಿಮೆಯೆಂದು ಪರಿಗ್ರಹಿಸಿ ಅಲ್ಲಿ ಉಪಾಸನೆ ಮಾಡಲು ಪ್ರವೃತ್ತರಾದರು. ಅಸುರರು ಅಲ್ಲಿಯೂ ಕೂಡ ತಮ್ಮ ಆಕ್ರಮಣವನ್ನು ಪ್ರಾರಂಭಿಸಿದರು. ಆದರೆ ಕಲ್ಲಿನ ಗೋಡೆಯೆಡೆಗೆ ಎಸೆದ ಮಣ್ಣಿನ ಹೆಂಟೆಗಳು ಪುಡಿಪುಡಿಯಾಗುವಂತೆ ಅಸುರರು ನುಚ್ಚುನೂರಾದರು. ಹೀಗೆ ಮುಖ್ಯಪ್ರಾಣನಿಗೆ ಅಖಣಾಶ್ಮಸಮ ಎಂಬ ಹೆಸರು ಬಂತು. ಅಲ್ಲಿ ದೇವತೆಗಳು ಪರಮಾತ್ಮನ ಉಪಾಸನೆ ನಡೆಸಿ ವಿಜಯಿಗಳಾದರು. ಅಸುರರ ಪ್ರಭಾವಕ್ಕೆ ಒಳಗಾಗದ ಮುಖ್ಯಪ್ರಾಣನೇ ಪರಿಶುದ್ಧ ಪ್ರತಿಮೆ. ನಾವೂ ಅವನನ್ನು ಪ್ರತಿಮೆಯಾಗಿ ಬಳಸಬೇಕು ಎಂಬುದು ತಾತ್ಪರ್ಯ.

ಮುಖ್ಯಪ್ರಾಣ ಮಾಧ್ಯಮದಲ್ಲಿ ಉಪಾಸನೆಯಿಂದ ಸಿಗುವ ವಿಶೇಷ ಮೋಕ್ಷೋಪಯೋಗಿ ಸಿದ್ಧಿ

ಮುಖ್ಯಪ್ರಾಣ ಮಾಧ್ಯಮದಲ್ಲಿ ಹರಿ ಉಪಾಸನೆ ಮತ್ತೊಂದು ವಿಶೇಷ ರೀತಿಯಲ್ಲೂ ತೆರೆದುಕೊಳ್ಳುತ್ತದೆ. ಅದೇನೆಂದರೆ ಬ್ರಹ್ಮಸೂತ್ರ ತೃತೀಯ ಅಧ್ಯಾಯ ಉಪಾಸನಾ ಪಾದದಲ್ಲಿ ಹೇಳಿದಂತೆ ಅಧಿಕಾರಿಗಳು ಸರ್ವ ವೇದಶಾಖೆಗಳನ್ನುಅಧ್ಯಯನ ಮಾಡಿ ಆ ಜ್ಞಾನದ ಮೂಲಕ ಉಪಾಸನೆ ಮಾಡಬೇಕು ಎಂದು ವಿಧಿಸುತ್ತದೆ (ಓಂ ಅಧ್ಯಯನಸ್ಯ ತಥಾ ತ್ವೇನ ಹಿ ಸಮಾಚಾರೇ ಅಧಿಕಾರಾಚ್ಛ ಓಂ). ಮಂದರಿಗೆ ಸರ್ವಶಾಖಾ ಅಧ್ಯಯನ ಅಶಕ್ಯವಾದ್ದರಿಂದ ಶಕ್ತ್ಯಾನುಸಾರ ವೇದಜ್ಞಾನ ಬೇಕು ಎಂದು ಅದರ ಮುಂದಿನ ಸೂತ್ರ ಸ್ಪಷ್ಟೀಕರಿಸುತ್ತದೆ (ಓಂ ಸಲಿಲವಚ್ಚ ತನ್ನಿಯಮಃ ಓಂ). ವೇದವೋ ಅನಂತ (ಅನಂತಾ ವೈ ವೇದಾ:). ನಾವೋ ಮಂದರು. ಸರ್ವಮೂಲವನ್ನೇ ಅರಗಿಸಿಕೊಳ್ಳಲಾಗದ ನಮಗೆ ನಮ್ಮ ಒಂದು ವೇದ ಶಾಖೆಯ ಅಧ್ಯಯನ ಮತ್ತು ಅದನ್ನು ಉಪಾಸನೆಯಲ್ಲಿ ಬಳಸಿಕೊಳ್ಳುವಿಕೆ ಗಂಟು. ಇದು ನಮ್ಮ ಹೀನಾಯ ಶೋಚನೀಯ ಸ್ಥಿತಿ. ಇಂತಹ ನಮಗೆ ಆಸರೆ ಮತ್ತು ಭರವಸೆಯ ಆಶಾಕಿರಣವೇ ಮುಖ್ಯಪ್ರಾಣ ಮಾಧ್ಯಮದಲ್ಲಿ ಮಾಡುವ ಹರಿ ಉಪಾಸನೆ. ಇದನ್ನು ಭಾಗವತ ತಿಳಿಸುತ್ತದೆ. ಏಕಾದಶ ಸ್ಕಂಧದ ಹದಿನೈದನೇ ಅಧ್ಯಾಯ ಸಿದ್ಧಿಗಳ ಕುರಿತು ಬಹಳ ವಿವರವಾಗಿ ತಿಳಿಸಿಸುತ್ತದೆ. ಆಚಾರ್ಯರು ಕೂಡ ಇದಕ್ಕೆ ಬಹಳಷ್ಟು ತಾತ್ಪರ್ಯ ಬರೆದಿದ್ದಾರೆ. ಅಷ್ಟ ಸಿದ್ಧಿಗಳ ಕುರಿತು ಹೇಳುವಾಗ ಆಯಾ ಸಿದ್ಧಿಯನ್ನು ಪಡೆಯಲು ಯಾವ ಯಾವ ಮಾಧ್ಯಮದಲ್ಲಿ ಹರಿಯ ಉಪಾಸನೆ ನಡೆಸಬೇಕು ಎಂದು ತಿಳಿದು ಬರುತ್ತದೆ.

ಮೋಕ್ಷಸಾಧನಗಳಲ್ಲಿ ನಿಧಿಧ್ಯಾಸನವು ಎರಡು ವಿಧ. ಒಂದು ಧ್ಯಾನ. ಮತ್ತೊಂದು ವಿಷ್ಣು ಸ್ಮರಣ ಪೂರ್ವಕವಾದ  ಸಚ್ಛಾಸ್ತ್ರ ಅಧ್ಯಯನ ಮತ್ತು ವಿಮರ್ಶೆ. 

ಕೇವಲ ಸಚ್ಛಾಸ್ತ್ರ ಅಧ್ಯಯನ ಮತ್ತು ವಿಮರ್ಶೆಗೆ  ಸ್ವಾಧ್ಯಾಯ ಎನ್ನುತ್ತಾರೆ 

ಗಮನಿಸಬೇಕಾದ ಅಂಶ: ಕೇವಲ ಸ್ವಾಧ್ಯಾಯದಿಂದಲೇ ಅಪರೋಕ್ಷ ಸಾಧ್ಯವಿಲ್ಲ.

ಸಚ್ಛಾಸ್ತ್ರ ಅಧ್ಯಯನ ಮತ್ತು ವಿಮರ್ಶೆಯ ಪರಿಪಕ್ವ ಹಂತವಾಗಿ ಮೂಡಿ ಬರುವ ಶಾಸ್ತ್ರ ಪ್ರತಿಪಾದ್ಯ ನಾರಾಯಣನ ಗುಣ ಕ್ರಿಯೆ ರೂಪಗಳ ಅವಿಚ್ಚಿನ್ನವಾದ ಆಲೋಚನೆಯೇ ಧ್ಯಾನ. ಇದರಿಂದಲೇ ಭಗವದ್ದರ್ಶನ.

ಗಮನಿಸಬೇಕಾದ ಅಂಶ: ಸ್ವಾಧ್ಯಾಯದ ಬಲ ಇಲ್ಲದೆ ಧ್ಯಾನ ಸಾಧ್ಯವಿಲ್ಲ.

ಅದೊಂದು ದಿನ ಜಗನ್ನಾಥದಾಸರು ಪೂಜೆಗೆ ಕುಳಿತವರು ತುಂಬಾ ಹೊತ್ತಾದರೂ ಏಳಲೇ ಇಲ್ಲ. ಕೊನೆಗೂ ಪೂಜೆ ಮುಗಿಯಿತು. 

ಬಂದವರಿಗೆ ಎಂದಿಗಿಂತ ಇಂದೇನು ವಿಶೇಷ ಎಂಬ ಕುತೂಹಲ. ಕೇಳಿಯೇ ಬಿಟ್ಟರು.

ದಾಸರೆಂದರು “ಇವತ್ತು ಪಾಯಸದಲ್ಲಿ ವಾಸುದೇವನ ಬದಲಿಗೆ ಜನಾರ್ದನ ಇದ್ದ. ಅವನ ಜಾಗದಲ್ಲಿ ವಾಸುದೇವನನ್ನು ಇಡಲು ಸಮಯ ತಗುಲಿತು”.

ಅಷ್ಟರಲ್ಲಿ ಅಡುಗೆಯವ ಓಡೋಡಿ ಬಂದ. “ದಾಸರೇ, ಇವತ್ತು ಸಕ್ಕರೆಯ ಜಾಗದಲ್ಲಿ ಪಾಯಸಕ್ಕೆ ಉಪ್ಪು ಹಾಕಿದೆ” ಎಂದು ಕ್ಷಮೆ ಯಾಚಿಸಿದ.

“ಎಲ್ಲ ಸರಿಯಾಗಿದೆ. ಬಂದವರಿಗೆ ಬಡಿಸಿ” ಎಂದರು ದಾಸರು. ಬಂದವರೆಲ್ಲ ಚೆನ್ನಾಗಿ ಊಟ ಮಾಡಿ ಸಿಹಿ ಪಾಯಸ ಚಪ್ಪರಿಸಿ ತಿಂದರು.

ಇಂತಹುದೇ ಘಟನೆಯನ್ನು ನಾವು ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಚರಿತ್ರೆಯಲ್ಲೂ ಕಾಣುತ್ತೇವೆ. ತುರುಕ ರಾಜ ತಂದ ಪಲ (ಮಾಂಸ) ಫಲವಸ್ತುಗಳಾದವು.

ಊಹೆಗೂ ಮೀರಿದ ಪವಾಡಗಳಿವು. ಏನಿದರ ರಹಸ್ಯ? 

ಉಪ್ಪಿನಲ್ಲಿ ಜನಾರ್ದನ ರೂಪ ಎಂದು ನಮಗೆ ಓದಿ ತಿಳಿದಿದೆ. ಸಕ್ಕರೆಯಲ್ಲಿ ವಾಸುದೇವ ರೂಪ ಎಂದು ಕೂಡ ನಮಗೆ ಓದಿ ತಿಳಿದಿದೆ. ಆದರೆ ನೋಡಿ ತಿಳಿದಿಲ್ಲ. ದಾಸರಿಗೋ ಇದು ಪ್ರತ್ಯಕ್ಷ ಅನುಭವ ಸಿದ್ಧ. 

ಭೋಜನದಲ್ಲಿ ಪರಮಾತ್ಮನ ರೂಪಗಳು. ಷಡ್ರಸದಲ್ಲಿ ಪರಮಾತ್ಮನ ರೂಪಗಳು. ಸುತ್ತಮುತ್ತಲಿನ ದ್ರವ್ಯಗಳಲ್ಲೆಲ್ಲಾ ಪರಮಾತ್ಮನ ರೂಪಗಳು. ದಾಸರು  ಇದೆಲ್ಲವನ್ನೂ ಹರಿಕಥಾಮೃತಸಾರದಲ್ಲಿ ಬರೆದಿಟ್ಟಿದ್ದಾರೆ. ಬರಿಯ ಪುಸ್ತಕದ ಬದನೇಕಾಯಿ ಅಲ್ಲ ದಾಸರು. ಪಂಚರಾತ್ರೋಕ್ತವಾದ ಅವೆಲ್ಲವನ್ನೂ ಕಂಡವರು. ದ್ರವ್ಯಗತವಾದ ಪರಮಾತ್ಮನ ರೂಪವನ್ನು ಕಂಡು ಅದನ್ನು ಬದಲಿಸುವ ಮೂಲಕ ದ್ರವ್ಯವನ್ನೇ ಮೂಲಭೂತವಾಗಿ ಬದಲಿಸುವ ತಪೋಬಲ ಹೊಂದಿದ್ದರು. 

ಅದ್ಭುತವಾದ ಪವಾಡವಿದು. ಲೌಕಿಕದಲ್ಲಿ ನಾವು ವಿಜ್ಞಾನದ ಚೌಕಟ್ಟಿನಲ್ಲಿ ಎಲ್ಲವನ್ನೂ ಅಳೆಯುತ್ತೇವೆ. ಇಲ್ಲೂ ಅಂತಹದ್ದೇ ಪ್ರಯತ್ನ ಮಾಡಿ ನೋಡೋಣ. 

ಉಪ್ಪಿನ ರಾಸಾಯನಿಕ ಸೂತ್ರ NaCl. ಅಂದರೆ ಒಂದು ಸೋಡಿಯಂ ಪರಮಾಣು (Atom) ಮತ್ತು ಒಂದು ಕ್ಲೋರಿನ್ ಪರಮಾಣು ಸೇರಿ ಒಂದು ಸೋಡಿಯಂ ಕ್ಲೋರೈಡ್ ಅಣು (Molecule).

ಸಕ್ಕರೆಯ ರಾಸಾಯನಿಕ ಸೂತ್ರ C12H22O11.

ಸಾಮಾನ್ಯವಾದ ರಾಸಾಯನಿಕ ಪ್ರಕ್ರಿಯೆಯಲ್ಲಿ (Chemical Reaction) ಬಾಂಡಿಂಗ್ ಆಧಾರದಲ್ಲಿ ಅಣುಗಳ ಮೂಲಭೂತ ವಸ್ತುವಿನ (Element) ಪರಮಾಣುಗಳು ಅದಲು ಬದಲಾಗುವವು. ಆದರೆ ಇಲ್ಲಿ ಮೂಲಭೂತ ವಸ್ತುವೇ ಬದಲಾಗಿದೆ. ಉಪ್ಪಿನಲ್ಲಿದ್ದ ಮೂಲಭೂತ ಪರಮಾಣುಗಳು ಬದಲಾಗಿ ಸಕ್ಕರೆಯ ಮೂಲಭೂತ ಪರಮಾಣುಗಳಾದಂತಿದೆ. 

ಸಾಮಾನ್ಯ  ರಾಸಾಯನಿಕ ಪ್ರಕ್ರಿಯೆಗೆ Chemical Equation ಬರೆಯುತ್ತಾರೆ. ಇಲ್ಲಿ ಮೂಲಭೂತ ವಸ್ತುವೇ ಬದಲಾಗಿರುವುದರಿಂದ Nuclear Equation ಬರೆಯಬೇಕು. ಭಾರವುಳ್ಳ ಪರಮಾಣುಗಳು Nuclear Fission ಮೂಲಕ ಕಡಿಮೆ ಭಾರದ ಪರಮಾಣುಗಳು ಆಗುವವು. ಅದನ್ನೇ ಇಲ್ಲಿ ಬಳಸಿಕೊಂಡು ಎರಡೂ ಕಡೆಯ atomic weight ಹೊಂದಿಸಿದಾಗ ಹೀಗಿರುತ್ತದೆ.

6 NaCl -> C12H22O11

Nuclear Equation ನಲ್ಲಿ ಭಾರ ಮಾತ್ರವಲ್ಲದೆ ಪಾಸಿಟಿವ್ ಚಾರ್ಜ್ ಗಳು ಕೂಡ ಎರಡೂ ಕಡೆ ಹೊಂದಿಸಬೇಕು. ಕ್ಲೋರಿನ್ ನಲ್ಲಿ ಒಂದು ನ್ಯೂಟ್ರಾನ್ ಜಾಸ್ತಿ ಇರುವುದರಿಂದ ಅದನ್ನು ಪ್ರೋಟಾನ್ ಆಗಿ ಪರಿವರ್ತಿಸಿದಾಗ ಬೀಟಾ ಕಣ ಹೊರಬರಬೇಕು. ಬೀಟಾ ಕಣಕ್ಕೆ ಋಣಾತ್ಮಕ ಚಾರ್ಜ್ ಹೊಂದಿದ್ದು ಯಾವುದೇ ಭಾರ ಹೊಂದಿರುವುದಿಲ್ಲ. ಆದರೆ Equation balance ಆಗಿ ಹೀಗೆ ಇರುತ್ತದೆ:

6 NaCl -> C12H22O11 + 14β

ಆದರೆ ಇಲ್ಲೊಂದು ವಿಷಯ. ಈ ರೀತಿಯ equation ಗಳನ್ನು ಬರೆಯಬಹುದೇ ವಿನಃ ಇದು ಯಾವುದೇ ಪ್ರಯೋಗಾಲಯದಲ್ಲಿ ಸಾಧಿಸಲು ಅಸಾಧ್ಯವಾದ ನ್ಯೂಕ್ಲಿಯರ್ ರಿಯಾಕ್ಷನ್. ಪ್ರಯೋಗಾಲಯ ಬಿಡಿ ಹೆಚ್ಚಿನ ನಕ್ಷತ್ರಗಳಲ್ಲಿ ಕೂಡ ಅಸಾಧ್ಯವಾದ ಮಾತು. ಯಾಕೆಂದರೆ ಸೋಡಿಯಂ ಕ್ಲೋರಿನ್ ಗಳು stable elements. ಯುರೇನಿಯಂ ಅಣುಗಳ ಹಾಗೆ unstable ಅಲ್ಲ. ಹಾಗಾಗಿ ಅವುಗಳನ್ನು ಒಡೆಯುವುದಕ್ಕೆ ಬೇಕಾದ ಶಕ್ತಿ  ಮತ್ತು ತಾಪಮಾನ ನ್ಯೂಟ್ರಾನ್ ನಕ್ಷತ್ರಗಳಲ್ಲಿ ಮಾತ್ರವೇ ಕಾಣಸಿಗುವುದು. ಇಂತಹ ಯಾವುದೇ ನ್ಯೂಟ್ರಾನ್ ನಕ್ಷತ್ರ ದಾಸರ ದೇವರ ಕೋಣೆಯಲ್ಲಿ ಇರಲಿಲ್ಲ. ಕೇವಲ ಭಗವಂತನ ಪ್ರಸಾದ ಮಾತ್ರ ಇತ್ತು. ಕಿಮಲಭ್ಯಮ್ ಭಗವತಿ ಪ್ರಸನ್ನೇ ಶ್ರೀನಿಕೇತನೇ. ಭಗವಂತನ ಪ್ರಸಾದ ವಿಜ್ಞಾನವೂ ಯೋಚಿಸಲಾಗದ ಸಾಧಿಸಲಾಗದ ಕಾರ್ಯ ಮಾಡುತ್ತದೆ.

ಆಧುನಿಕ ವಿಜ್ಞಾನವು ಅನೇಕ ಪ್ರತ್ಯಕ್ಷ ಸಿದ್ಧ ನಿಯಮಗಳೇ ಆಗಿದೆ. ಮಧ್ವಶಾಸ್ತ್ರ ಪ್ರತ್ಯಕ್ಷವನ್ನು ಅಲ್ಲಗೆಳೆಯುವುದಿಲ್ಲ. ಆಪಾತತಃ ಕಾರಣಗಳು ಮತ್ತು ಕಾಣುವ ನಿಯಮಗಳ ವಿಶ್ಲೇಷಣೆ ವಿಜ್ಞಾನದಿಂದ ಚೆನ್ನಾಗಿ ನಡೆಯುತ್ತದೆ. ಆದರೆ ವಿಜ್ಞಾನದ ಆ ಪ್ರತಿಯೊಂದು ಅಪಾತತಃ ನಿಯಮಗಳಿಗೂ ಮೂಲಭೂತವಾಗಿ ಇರುವ ಕಾರಣ ಭಗವಂತ. ಮತ್ತು ಆಯಾ ದ್ರವ್ಯಗತ ಪರಮಾತ್ಮನ ರೂಪಗಳು. ಅವು ವಿಜ್ಞಾನವನ್ನು ಮೀರಿ ನಿಂತವುಗಳು. ವಿಜ್ಞಾನವು ಮರದ ಎಲೆಗಳಿಗೆ ನೀರು ಹೊಯ್ದರೆ ಅಧ್ಯಾತ್ಮ ಮರದ ಬುಡಕ್ಕೆ ನೀರು ಕೊಡುತ್ತದೆ. ಮೂಲಭೂತವಾಗಿ ತಲಸ್ಪರ್ಶಿಯಾಗಿ ಸಮಸ್ಯೆಯ ಬುಡವನ್ನು ಮುಟ್ಟುತ್ತದೆ. ಕೆಲವೊಮ್ಮೆ ಕಾಫಿ ಗಿಡದಲ್ಲಿ ಹೂ ಬಿಡಲು ಎಲೆಗಳಿಗೆ ನೀರು ಸಿಂಪಡಿಸಲೇ ಬೇಕಲ್ಲವೇ ? ಹಾಗೆ ವಿಜ್ಞಾನ ಇದೆ. ಆದರೆ ಗಿಡದ ಬುಡಕ್ಕೆ ಹಾಕುವ ನೀರುಗೊಬ್ಬರಗಳನ್ನು ಹಾಕದೆ ಕೇವಲ ಎಲೆಗೆಳಿಗೆ ನೀರು ಸಿಂಪಡಿಸಿ ಸುಮ್ಮನಾದರೆ ಏನೂ ಉಪಯೋಗವಿಲ್ಲ. ಹಾಗೆಯೇ ವಿಜ್ಞಾನಕ್ಕೆ ಮೀರಿದ ಈ ಪವಾಡಗಳನ್ನು ಅರಿಯಲು ಆಧುನಿಕ ವಿಜ್ಞಾನವನ್ನು ಮೀರಿದ ಪರಮಾತ್ಮನ ಮಾಹಾತ್ಮ್ಯವನ್ನು ಆಗಮ ಪ್ರಮಾಣಗಳಿಂದ ಪರೋಕ್ಷವಾಗಿ ತಿಳಿಯಬೇಕು. ತಿಳಿದು ಯೋಗ್ಯತಾನುಸಾರವಾಗಿ ಉಪಾಸಿಸಬೇಕು.

ಉಪಾಸನೆಗೆ ಬಳಸಲೆಂದೇ ಬರೆದಿರುವಂತಹ ಅತ್ಯದ್ಭುತ ಉಪಾಸನಾ ಪ್ರಮೇಯಗಳನ್ನು ಒಳಗೊಂಡ ಹರಿಕಥಾಮೃತಸಾರ ಕೃತಿಕಾರರಾದ ಜಗನ್ನಾಥದಾಸರ ಚರಣಾರವಿಂದಗಳಲ್ಲಿ ಸಾಷ್ಟಾಂಗ ಪ್ರಣಾಮಗಳು.

(info from whatsapp)

***

ಭಗವಂತನಲ್ಲಿ ಹೇಗೆ ಐಕ್ಯಚಿಂತನೆ ಮಾಡಬೇಕೆಂದು ಶುಕಾಚಾರ್ಯರು ಹೇಳುತ್ತಾರೆ


ಸಕಲ ಜೀವಿಗಳು ಇಂದ್ರಿಯಾಭಿಮಾನಿಗಳ ಅಧೀನ , ಸಕಲ ಇಂದ್ರಿಯಾಭಿಮಾನಿಗಳು ಇಂದ್ರದೇವರ ಅಧೀನ, ಆ ಇಂದ್ರದೇವರು ಉಮಾದೇವಿಯರ ಅಧೀನ, ಉಮಾದೇವಿಯರು ಮಹಾರುದ್ರ ದೇವರ ಅಧೀನ , ಮಹಾರುದ್ರ ದೇವರು ಭಾರತಿ ದೇವಿಯರು ಮತ್ತು ಮುಖ್ಯ ಪ್ರಾಣದೇವರ ಅಧೀನ, ಈ ವಾಯುದೇವರು ವಾಣಿ ಅಥವಾ ಸರಸ್ವತಿ ದೇವಿಯರ ಅಧೀನ, ವಾಣಿಯು ಬ್ರಹ್ಮದೇವರ ಅಧೀನ, ಬ್ರಹ್ಮ ದೇವರು ಲಕ್ಷ್ಮಿ ದೇವಿಯರ ಅಧೀನ, ಲಕ್ಷ್ಮಿ ದೇವಿಯರು ಸಕಲ ಜೀವಂತರ್ಯಾಮಿ ಯಾದ ಶ್ರೀ ಹರಿಯ ಅಧೀನ. ಈ ರೀತಿ ಶ್ರೀ ಹರಿಯನ್ನು ನಮ್ಮ ದೇಹದಲ್ಲಿರುವ ಬಿಂಬ ರೂಪಿಯಾದ ಶ್ರೀ ಹರಿಯೊಡನೆ ಐಕ್ಯ ಚಿಂತನೆ ಮಾಡಬೇಕು.


ಹೀಗೆ ನಿರಂತರ ಚಿಂತನೆಯಿಂದ ಜ್ನ್ಯಾನಿಯು ವಿಷ್ಣು ಲೋಕವನ್ನು ಸೇರುವನು. ಅಪರೋಕ್ಷ ಜ್ನ್ಯಾನಿಯು ಅಪರೋಕ್ಷ ಜ್ನ್ಯಾನವಾಗುವಾಗ ಅವನ ನಡೆ ನುಡಿಗಳು ಹೇಗಿರುತ್ತದೆ ಎಂದು ಹೇಳುತ್ತಾರೆ


ಹಾಸಿಗೆಗಾಗಿ ಅವನು ಶ್ರಮ ಪಡಬೇಕಾಗಿಲ್ಲ, ನೆಲವೇ ಹಾಸಿಗೆ, ತೋಳು ತಲೆದಿಂಬು, ನೀರನ್ನು ಕುಡಿಯಲು ಬೊಗಸೆಯೇ ಪಾತ್ರೆ. ದಿಕ್ಕುಗಳೇ ವಸ್ತ್ರಗಳು, ಆಹಾರಕ್ಕಾಗಿ ಯಾರನ್ನು ಆಶ್ರಯಿಸದೆ ತನ್ನ ಪಾಲಿಗೆ ಬಂದ ಅನ್ನವನ್ನು ಸಂತೋಷದಿಂದ ಉಣ್ಣುವನು, ಮಲಗಲು ಗುಹೆಗಳಿವೆ, ಶ್ರೀ ಹರಿಯೇ ನಮ್ಮ ಕವಾಲಿಗೆ ಇರಬೇಕಾದರೆ ಹುಲಿ ಸಿಂಹಗಳಿಂದ ಏಕೆ ಭಯ, ಹೀಗೆ ಜೀವನಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಕೊಡಬೇಕಾದರೆ ನಮಗೆ ಇನ್ನು ಹೆಚ್ಚಿನದು ಏಕೆ ಬೇಕು ಎಂಬ ಸಂತೃಪ್ತಿ ಬರುತ್ತದೆ ಎಂದು ಹೇಳುತ್ತಾರೆ.


ಈ ವಿಷಯಗಳನ್ನು ನಾವು ಸ್ವಲ್ಪ ಯೋಚಿಸಿದಾಗ Simplicity ಇದರ ಅರ್ಥವಾಗುತ್ತದೆ.


ಸಕಲ ವಾಚ್ಯ ಶಬ್ದಗಳೆಲ್ಲ ಪರಮಾತ್ಮನ ಶಬ್ದಗಳು ಇಂದ್ರ ಎಂದರೆ ನಿರವೈದಿಕ ಐಶ್ವರ್ಯ ಉಳ್ಳವನು ಎಂದು ಅರ್ಥ ಆದರೆ ಶಚಿಪತಿಯಾದ ಇಂದ್ರನಲ್ಲಿ ಈ ಗುಣಗಳು ಇಲ್ಲ, ಅವನು ಸದಾ ಐಶ್ವರ್ಯಕ್ಕಾಗಿ ಪರಮಾತ್ಮನನ್ನೇ ಪ್ರಾರ್ಥಿಸುತ್ತಾನೆ. ಅದೇ ಶ್ರೀ ಹರಿ ಉಪೇಂದ್ರ ನಾಗಿ ಅವತಾರ ಮಾಡಿ ರಾಜ್ಯಭಾರ ಮಾಡುತ್ತಾನೆ. ಇದರಿಂದ ತಿಳಿಯುವುದು ಎಲ್ಲ ಶ್ರೀ ಶಬ್ದಗಳು ಶ್ರೀ ಹರಿಯ ನಾಮಗಳು.

ಜ್ನ್ಯಾನಿಗಳು ಲಯ ಚಿಂತನೆ ಮಾಡಿ ಸ್ವರ್ಗವನ್ನು ಪಡೆಯುತ್ತಾರೆ ಎಂಬುವುದನ್ನು ಶುಕಾಚಾರ್ಯರು ಹೇಳುತ್ತಾರೆ.

****