ಮೋಕ್ಷ ನಾರಾಯಣ ಬಲಿ ಪೂಜೆಯ ಮಹತ್ವ ಗೊತ್ತಾ?
ಮೋಕ್ಷ ನಾರಾಯಣ ಬಲಿಪೂಜಾಯು ಆತ್ಮಗಳು ಭೂತ ಪ್ರೇತಾವಾಗಿ ಮುಕ್ತಿ ಹೊಂದುವ ವಿಧಾನವಾಗಿದೆ. ಮೋಕ್ಷ ನಾರಾಯಣ ಬಲಿ ಪೂಜೆಯನ್ನು ಅತೃಪ್ತ ಆತ್ಮಗಳ ಮೋಕ್ಷಕ್ಕೋಸ್ಕರ ಮಾಡಲಾಗುತ್ತದೆ. ಮನೆಯಲ್ಲಿನ ಹಣಕಾಸಿನ ಸಮಸ್ಯೆ, ಹೆಣ್ಣು ಮಕ್ಕಳು ಕೂಗಾಡುವುದು ಮಕ್ಕಳಿಂದ ತೊಂದರೆ, ಮದುವೆಗೆ ವಿಘ್ನ, ಅಳಿಯನ ಕಿರಿಕಿರಿ, ಹೀಗೆಲ್ಲ ಆಗುವುದು ಆತ್ಮಗಳು ಅತೃಪ್ತರಾಗಿ ಕಾಡುವಂತಹ ವಿಚಾರ.
ಕಲಿಯುಗದಲ್ಲಿ ಪರಾಶರ ಸ್ಮೃತಿ ಗ್ರಂಥಗಳು ಆಧಾರವಾಗಿದೆ. ಪರಾಶರ ಗ್ರಂಥಗಳಲ್ಲಿ ಹೇಳಿದ ಹಾಗೆ ಕಲಿಯುಗದಲ್ಲಿ ಮನುಷ್ಯನು 60 ವರ್ಷ ಬದುಕಿದರೆ ಅದು ದೀರ್ಘಾಯುಷ್ಯವೆಂದು ಹೇಳಲಾಗಿದೆ. ಯಾರು 60 ವರ್ಷ ಬದುಕುವುದಿಲ್ಲವೋ ಅಂದರೆ ಅರವತ್ತು ವರ್ಷ ಮೊದಲೇ ಸಾವನ್ನಪ್ಪಿದರೆ ಅದು ದುರ್ಮರಣವೆಂದು ಪರಿಗಣಿಸಲ್ಪಡುತ್ತದೆ.
ಈ ರೀತಿ 60 ವರ್ಷ ಮೊದಲು ಸಾವನ್ನಪ್ಪಿದರೆ ದುರ್ಮರಣ ಎಂದು ಪರಿಗಣಿಸಲ್ಪಡುತ್ತದೆ
ಸಾವಿನ ವಿಧಾನಗಳು ಈ ರೀತಿ ಇರಬಹುದು
ವಿಷಪ್ರಾಶನ ಮರಣ
ನೇಣು ಹಾಕಿಕೊಳ್ಳುವುದು
ನೀರಿನಲ್ಲಿ ಸಾಯುವುದು
ಮರದಿಂದ, ಕಟ್ಟಡದಿಂದ ಬಿದ್ದು ಸಾಯುವುದು
ಬೆಂಕಿ ಅವಘಡಗಳಲ್ಲಿ ಸಾವು
ವಿದ್ಯುತ್ ಸ್ಪರ್ಶದಿಂದ
ಮದುವೆ ಆಗದೆ ಬ್ರಹ್ಮಚಾರಿ ಮರಣ
ಪ್ರಸೂತಿಕಾ ಅಂದರೆ ಬಾಣಂತಿ ಮರಣ
ಮಕ್ಕಳು, ಸಂತಾನ ಇಲ್ಲದೆ ಸಾವು
ಕ್ಯಾನ್ಸರ್, ಕುಷ್ಠ, ಇತ್ಯಾದಿ ಮಾರಕ ರೋಗಗಳಿಂದ ಸಾವು
ಕೊಲೆ, ಮರ್ಡರ್ ಇತ್ಯಾದಿ ಮರಣ
ಈ ರೀತಿ ಸಾವನ್ನಪ್ಪಿದರೆ ಇವೆಲ್ಲವೂ ದುರ್ಮರಣ (ಅಕಾಲ ಮರಣ)ವೆಂದಾಗುವುದು.
ಈ ರೀತಿ ಅಕಾಲ ಮರಣ ಹೊಂದಿದರೆ ಅಂತಹ ಆತ್ಮಗಳ ಸದ್ಗತಿಗೋಸ್ಕರ ಮಾಡುವ ಪೂಜೆಯೇ ನಾರಾಯಣ ಬಲಿ.
***