SEARCH HERE

Showing posts with label ಪರಿಹಾರ- ಮದುವೆ ಉಪನಯನ marriage. Show all posts
Showing posts with label ಪರಿಹಾರ- ಮದುವೆ ಉಪನಯನ marriage. Show all posts

Tuesday, 30 November 2021

ಮದುವೆ ಉಪನಯನ marriage

 ಬಂಧುಗಳೇ ತುಂಬಾ ಜನ ಜ್ಯೋತಿಷ್ಯ ಹೇಳುವವರು ಜಾತಕದಲ್ಲಿ ಆ ದೋಷ ಇದೆ, ಈ ದೋಷ ಇದೆ ಅಂತ ಹೆದರಿಸ್ತಾರೆ..

ನಾವು ಬ್ರಾಹ್ಮಣರು, ನಮಗೆ ಮುಂಚೆನೇ ದೇವರು,ಋಷಿಮುನಿಗಳು ಎಲ್ಲಾ ದೋಷ ಹೋಗೋಕೆ ದಾರಿ ಮಾಡಿದಾರೆ,

ಮತ್ತೆ ಯಾಕೆ ಹೆದರಬೇಕು..

ಗಾಯತ್ರೀ ಜಪ

ತುಳಸೀಪೂಜೆ

ಸುಮಂಗಲಿಯರಿಗೆ ಅರಿಸಿನ ಕುಂಕುಮ ಕೊಡೋದು ತುಂಬಾ ತುಂಬಾ ದೋಷ ತೆಗೆದುಹಾಕುತ್ತೆ..

"ನಾವು ಮದುವೆಗೆ ಮುಂಚೆ "ದೇವರಸಮಾರಾಧನೆ " ಮಾಡುತ್ತೇವೆ, ಒಬ್ಬಟ್ಟು ತುಂಬಾ ವಿಶೇಷ ಅದರಲ್ಲಿ..

ಈ ಒಬ್ಬಟ್ಟು

೧. ಕುಜದೋಷ ತೆಗೆದುಹಾಕುತ್ತೆ..

೨. ಮಾಂಗಲ್ಯದೋಷ ನಿವಾರಿಸುತ್ತದೆ

೩.ಸ್ತ್ರೀ ಶಾಪ ನಿವಾರಿಸುತ್ತೆ..

೪. ಕಾಳಸರ್ಪದೋಷ ನಿವಾರಿಸುತ್ತದೆ..

"ನಿಮ್ಮ ಜನ್ಮ ಜಾತಕದಲ್ಲಿ ಸಾವಿರ ದೋಷ ಇದ್ದರೂ, ಆ ದೋಷ ತೆಗೆದುಹಾಕೋಕೆ ತುಂಬಾ ದಾರಿಗಳಿವೆ..

ಉಪನಯನದ ಸಮಯದ  ಲಗ್ನ,

ರಜಸ್ವಲೆಯಾದ ನಂತರದ ಸಮಯ..

ದೇವರ ಸಮಾರಾಧನೆ ಮತ್ತು ನಾಂದೀ ಪೂಜೆ ಸಮಯ..

ಮದುವೆಯ ಲಗ್ನ.

ಈ ಸಮಯಗಳು ತುಂಬಾ ತುಂಬಾ ಮಹತ್ವ ಇವೆ..

ಎಂಥಾ ದೋಷಗಳಿದ್ದರೂ, ಈ ಸಮಯಗಳಲ್ಲಿ ತೆಗೆಯಬಹುದು..

ಬಂಧುಗಳೇ

ಸ್ವಲ್ಪ ತಿಳಿದವರಿಂದ ಜ್ಞಾನಿಗಳಿಂದ ಲಗ್ನ ಇಡಿಸಿ..

"ಬ್ರಾಹ್ಮಣರಿಗೆ ತುಂಬಾ ದಾರಿ ಇವೆ,

ಹೂವಿಳ್ಯ -, ಗಾಯತ್ರೀ ಜಪ, 

ಇದು ಎಲ್ಲಾ ತರಹದ ದೋಷ ತೆಗೆಯುತ್ತದೆ..

ಹೂವಿಳ್ಯ ಎಲ್ಲರೂ ಮಾಡಬಹುದು..

ಸುಮಂಗಲಿಯರಿಗೆ ಹಿರಿಯ ದಂಪತಿಗಳು ನಮಸ್ಕಾರ ಮಾಡೋದ್ರಿಂದ ಆ ಮನೆಯ ಸರ್ವ ದೋಷ ನಿವಾರಣೆಯಾಗುತ್ತದೆ ..

ಸ್ವಲ್ಪ ಯೋಚಿಸಿ, ತಿಳಿದು ದೇವರ ಮೇಲೆ ನಂಬಿಕೆ ಇಟ್ಟು ಮಾಡಿ..

ಶುಭವಾಗಲಿ..

by @ಮುರಳಿಕೃಷ್ಣಾಚಾರ್ಯ@

***


ಪ್ರಶ್ನೆ:

ವಿವಾಹ ಕಾಲದಲ್ಲಿ ಅಂತರ್ಪಟ ಹಿಡಿದು ಅಕ್ಷತೆಗೂ ಮುನ್ನ  ವಧು ವರರು ಯಾವ ಮಂತ್ರಗಳನ್ನು ಫಠಿಸುತ್ತಿರಬೇಕು.



ಉತ್ತರ:

ವರನು ಹೇಳಬೇಕಾದ ಮಂತ್ರ - ಶ್ರೀವೇಂಕಟೇಶಂ ಲಕ್ಷ್ಮೀಶಂ ಅನಿಷ್ಟಘ್ನಮಭೀಷ್ಟದಮ್|ಚತುರ್ಮುಖೇರತನಯಂ ಶ್ರೀನಿವಾಸಂ ಭಜೇsನಿಶಮ್|| 


ವಧು ಹೇಳಬೇಕಾದ ಮಂತ್ರ - ನಮಃ ಶ್ರಿಯೈಃ ಲೋಕಧೃತ್ಯೈ ಬ್ರಹ್ಮಮಾತೇ ನಮೋನಮಃ|ನಮಸ್ತೇ ಪದ್ಮನೇತ್ರಾಯೈ ಪದ್ಮಮುಖ್ಯೈ ನಮೋ ನಮಃ||ಪ್ರಸನ್ನಮುಖಪದ್ಮಾಯೈ ಪದ್ಮಕಾಂತ್ಯೈಃ ನಮೋ ನಮಃ|ನಮೋ ಬಿಲ್ವವನಸ್ಥಾಯೈ ವಿಷ್ಣುಪತ್ನ್ಯೈ ನಮೋನಮಃ|| 🙏

***


ನವವಧುವಿನಿದ ಯಾಕೆ ಸಿದ್ದೆ ಒದೆಸುವುದು ಎನ್ನುವುದು ಬಲು ಜಿಜ್ಞಾಸೆಯ ವಿಷಯವಾಗಿದೆ.

    ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ನವ ವಧುವನ್ನು ಪ್ರಧಾನ ಹೊಸಿಲ ಮೇಲೆ ಇಟ್ಟ ಸಿದ್ದೆ ಅಕ್ಕಿ,ಬೆಲ್ಲ ಒದ್ದು ಒಳಗೆ ಕಾಲಿಡಿಸಿ ಮನೆ ತುಂಬಿಸಿ ಕೊಳ್ಳುತ್ತಾರೆ ಇದು ಯಾವುದಕ್ಕೆ ಸಂಪ್ರದಾಯ ಎನ್ನುವುದು ರೋಚಕ ಸಂಗತಿ.

         ಸಿದ್ದೆಯಲ್ಲಿ ಅಕ್ಕಿ ಹಾಕಿ ಮೇಲೆ ಬೆಲ್ಲದ ಅಚ್ಚು ಇಟ್ಟು ಹೊಸ್ತಿಲ ಮೇಲೆ ಇಟ್ಟು ಯಾವ ಕಾರಣಕ್ಕೆ ನವ ವಧು ಅದನ್ನು ಒದ್ದು ಗೃಹ ಪ್ರವೇಶ ಮಾಡುತ್ತಾಳೆ?

       ಈ ಶಾಸ್ತ್ರವನ್ನು ಯಾಕೆ ಈ ರೀತಿಯಾಗಿ ಮಾಡಿದ್ದಾರೆ ಇದರ ಅರ್ಥವಾದರು ಏನು ಇರಬಹುದು ಯೋಚಿಸಿ ನೋಡೋಣ.

ಸಿದ್ದೆಗೆ ಕಾರಕ = ಶನಿ

ಅಕ್ಕಿಗೆ ಕಾರಕ =ಚಂದ್ರ

ಬೆಲ್ಲಕ್ಕೆ ಕಾರಕ = ಗುರು

 ಬೆಲ್ಲ ಅಂದ್ರೆ ಮೃತ್ಯುಂಜಯ. ನವವಧು ಮನೆಗೆ ಬಂದ ಮೇಲೆ ಯಾವುದೇ ಸಾವು ನೋವು ಸಂಭವಿಸದೆ ಇರಲಿ ಎಂದು ಒಂದು ಕಡೆಯಾದರೆ ಎಲ್ಲರ ಮನಸ್ಸು ಸಿಹಿಯಾಗಿ ಇರಲಿ ಎಂದು ಇನ್ನೊಂದು ಕಡೆ.

ಚಂದ್ರ + ಗುರು = ಗಜಕೇಸರಿ ಯೋಗ

ಅಂದರೆ ಇವರ ಮನೆಯಲ್ಲಿ ಯಾವಾಗಲೂ ಗಜಕೇಸರಿ ಯೋಗ ತುಂಬಿರಲಿ ಎಂದು ಸಿದ್ದೆ  ಯನ್ನು ಮದುಮಗಳ ಬಲಗಾಲಿನಿಂದ ಒದೆ

ಸುವರು .

ನವವಧು = ಶುಕ್ರ

ಸಿದ್ದೆಗೆ ಕಾರಕ = ಶನಿ

ಅಕ್ಕಿ =ಚಂದ್ರ

ಬೆಲ್ಲ=ಗುರು

ಒದೆಯುವ ಕಾಲಿನ ಪಾದ = ಶನಿ

ಒದೆಯುವ ಕಾಲಿನ ಬೆರಳು =ಗುರು

ಸಿದ್ದೆ ಅಂದರೆ ಶನಿ= ಮಾವನಿಗೆ ಕಾರಕ

ಸಿದ್ದೆಯೊಳಗೆ ಇರುವ ಅಕ್ಕಿ  ,ಬೆಲ್ಲ ಅಂದರೆ = ಚಂದ್ರ, ಗುರು ಅತ್ತೆಗೆ ಹಾಗು ಉತ್ತಮ ಭಾಂಧವ್ಯಕ್ಕೆ ಕಾರಕ.

ಅತ್ತೆ ಮಾವನೊಂದಿಗೆ ನವವಧುವು ಉತ್ತಮ ಸಂಬಂಧ ಇಟ್ಟು ಕೊಳ್ಳಬೇಕು ಎನ್ನುವ ಸಂಕೇತ ಈ ಸಂಪ್ರದಾಯ.

ಶನಿ =ಎಂದರೆ ಋಣ, ರೋಗ,ದಾರಿದ್ರ್ಯ.

ಗುರು =ಎಂದರೆ ಪರಿಹಾರ ಹಾಗು ಅಭಿವೃದ್ಧಿ

ಶುಕ್ರ = ಎಂದರೆ ಲಕ್ಷ್ಮೀ ಹಾಗು ಗೃಹ.

ಋಣ,ರೋಗ,ದಾರಿದ್ರ್ಯಗಳನ್ನೂ ಪರಿಹಾರ ಎನ್ನುವ ಬೆರಳಿನಿಂದ ಒದ್ದು ಆ ಗೃಹದಲ್ಲಿ ಸಮೃದ್ಧಿ, ಪ್ರೀತಿ ಉತ್ತಮ ಬಾಂಧವ್ಯ ಅಭಿವೃದ್ಧಿ ಬೆಳಸಬೇಕು ಎನ್ನುವ ಸಂಕೇತ.

ಶನಿ +ಚಂದ್ರ ಅತ್ತೆ,ಮಾವ ಹಾಗು ಗುರು, ಹಿರಿಯರ ಸಲಹೆ ಹಾಗು ಆಶೀರ್ವಾದ ಇವು ಉತ್ತಮ ಬಾಂಧವ್ಯಕ್ಕೆ ಅಗತ್ಯ.

ಶನಿ =ಕರ್ಮ 

ಗುರು =ಬೆರಳು ,ಅಭಿವೃದ್ಧಿ.

ಶುಕ್ರ = ವಧು

ಈ ಹೆಣ್ಣು ಮಾಡುವ ಪ್ರತಿ ಕೆಲಸವು ಗಂಡನ ಮನೆಗೆ ಅಭಿವೃದ್ಧಿಯನ್ನು ತರಲಿ ಎಂಬ ಸಂಕೇತ.

ಶುಕ್ರ =ಹೆಣ್ಣು, ವೈವಾಹಿಕ ಜೀವನ

ಶನಿ= ಅಡೆತಡೆ

ಗುರು =ನಿವಾರಣೆ ಹಾಗು ತಾಳ್ಮೆ

ಚಂದ್ರ =ಶುದ್ಧ ಮನಸ್ಸು ಹಾಗು ಆಕರ್ಷಣೆ.

ವೈವಾಹಿಕ ಜೀವನದಲ್ಲಿ ಏನೇ ಅಡೆ ತಡೆ ಬಂದರು ತಾಳ್ಮೆಗೆಡದೆ ನಿವಾರಿಸಿ ಕೊಂಡು ಪರಸ್ಪರ ಆಕರ್ಷಣೆಯಿಂದ ಶುದ್ಧ ಮನಸ್ಸಿನ ಉತ್ತಮ ವೈವಾಹಿಕ ಜೀವನ ನೇಡೆಸಬೇಕು ಎನ್ನುವ ಸಂಕೇತವೆ ಈ ಸಿದ್ದೆ ಒದ್ದೆಸುವುದು ಹಾಗು ಮನೆ ತುಂಬಿಸಿ ಕೊಳ್ಳುವುದು.

     ಈ ಪದ್ಧತಿ ಉತ್ತರ ಕರ್ನಾಟಕದಲ್ಲಿಲ್ಲ ಸಿದ್ದೆ, ಬೆಲ್ಲ, ಅಕ್ಕಿ ಇವು ಶ್ರೀ ಲಕ್ಷ್ಮೀ, ಅನ್ನಪೂರ್ಣೇಶ್ವರಿ ಅಮ್ಮನವರ ಪ್ರತೀಕ ವಾಗಿದ್ದು ಭಕ್ತಿ ಗೌರವದಿಂದ ಕಾಣಬೇಕು. ನವವಧುವಿಗೆ ಆರತಿ ಬೆಳಗಿ ತೆಂಗಿನಕಾಯಿ ಒಡೆದು ಗೃಹ ಲಕ್ಷ್ಮಿಯಂತೆ ಮನೆ ತುಂಬಿಸು ವುದು ಸಂಪ್ರದಾಯ.(ಹರ್ಷ ಅಡ್ಕಳ್ಳಿ)

(ವಾಟ್ಸ್ ಆ್ಯಪ್ ಕೃಪೆ)

***