SEARCH HERE

Friday 1 October 2021

ಸೂರ್ಯ ಪೂಜಾ ಪದ್ಧತಿ

ಸೂರ್ಯ ಪೂಜಾ ಪದ್ಧತಿ 


ನಮ್ಮ ಸನಾತನ ಹಾಗೂ ಹಿಂದೂ ಧರ್ಮದ ಪ್ರಕಾರ ಸೂರ್ಯಮಂಡಲದ ಗ್ರಹಗಳಲ್ಲಿ ಸೂರ್ಯನು ಪ್ರಧಾನವಾದ ಗ್ರಹ . ಹಿನ್ನೆಲೆ : 


ನಮ್ಮ ಸನಾತನ ಹಾಗೂ ಹಿಂದೂ ಧರ್ಮದ ಪ್ರಕಾರ ಸೂರ್ಯಮಂಡಲದ ಗ್ರಹಗಳಲ್ಲಿ ಸೂರ್ಯನು ಪ್ರಧಾನವಾದ ಗ್ರಹ . ಸೂರ್ಯನನ್ನು ನೀರು ಮತ್ತು ಸರಳವಾದ ನಮಸ್ಕಾರಗಳಿಂದ ಒಲಿಸಿಕೊಳ್ಳಬಹುದು . ಸೂರ್ಯನ ಚಿತ್ರ ಅಥವಾ ಸೂರ್ಯಯಂತ್ರವನ್ನು ಮನೆಯ ದ್ವಾರದಲ್ಲಿ ಇರಿಸಿದರೆ ಅದೃಷ್ಟ ಒಲಿಯುತ್ತದೆ ಎಂದು ನಂಬಿಕೆ ಇದೆ . ಸೂರ್ಯನನ್ನು ನಾವೆಲ್ಲರೂ ಪ್ರತ್ಯಕ್ಷ ದೇವತೆ ಎಂದು ಪೂಜಿಸುತ್ತೇವೆ . ಸೂರ್ಯನು ಸಪ್ತಾಶ್ವ ( ಏಳು ಕದುರೆ ) ರಥಾ ರೂಢನಾಗಿರುತ್ತಾನೆ . ಈ ಏಳು ಕುದುರೆಗಳು ಮನುಷ್ಯನ ಏಳು ಚಕ್ರಗಳನ್ನು ಪ್ರತಿಬಿಂಬಿಸುತ್ತದೆ , ಹಾಗೂ ಏಳು ಬಣ್ಣಗಳನ್ನು ಸೂಚಿಸುತ್ತದೆ . ಶನಿ ಮತ್ತು ಯಮನು ಸೂರ್ಯನ ಇಬ್ಬರು ಮಕ್ಕಳು . ಈ ಎರಡು ದೇವತೆಗಳಾದಂಥ ಶನಿ ಮತ್ತು ಯಮನು ಮನುಷ್ಯನ ಜೀವನವನ್ನು ನಿರ್ಧರಿಸುವಲ್ಲಿ ಪ್ರಮುಖ ಕಾರಣಕರ್ತರಾಗಿರುತ್ತಾರೆ . ಸೂರ್ಯನು ಮನೋಬಲ ಮತ್ತು ಕೀರ್ತಿ , ಧೈರ್ಯ , ರಾಜತ್ವ , ಅಧಿಕಾರ ಇವೆಲ್ಲವನ್ನು ನೀಡುತ್ತಾನೆ . ಸೂರ್ಯನು ಮೇಷ ರಾಶಿಗೆ ಅಧಿಪತಿ ಆಗಿರುತ್ತಾನೆ . ಸೂರ್ಯನ ಅನುಗ್ರಹಕ್ಕಾಗಿ ಚಿನ್ನ , ಮಾಣಿಕ್ಯ , ಕೆಲವು ರತ್ನ ಇವುಗಳನ್ನು ಧರಿಸುತ್ತಾರೆ . ಗೋಧಿ ಧಾನ್ಯವನ್ನು ದಾನ ಮಾಡುವುದರಿಂದ ಸೂರ್ಯನಿಗೆ ಸಂಬಂಧಪಟ್ಟ ದೋಶಗಳು ಪರಿಹಾರವಾಗುತ್ತವೆ . ಸೂರ್ಯೋದಯದ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ಅಭಿವೃದ್ಧಿ ಆಗಿ ಮನುಷ್ಯನು ಆರೋಗ್ಯದಿಂದ ಇರುತ್ತಾನೆ . ಈಗ ` ಅಷ್ಟ ಮೂರ್ತಿಗಳಲ್ಲಿ ಸೂರ್ಯನು ಒಬ್ಬ . ಆದುದರಿಂದ ಈ ಆದಿತ್ಯಾತ್ಮಕ ರುದ್ರ ಎಂದು ಕರೆಯುತ್ತಾರೆ . ಸೂರ್ಯನನ್ನು ರ ಆದಿತ್ಯ , ಭಾನು ಎಂಬ ಹೆಸರುಗಳಿಂದಲೂ ಕರೆಯುತ್ತಾರೆ . ಈ ಕಾರಣಕ್ಕೆ ರವಿವಾರದಂದು ಸೂರ್ಯನ ಆರಾಧಿಸಿ ಶುಭ ಫಲಗಳನ್ನು ಪಡೆಯಬಹುದು


ಪೂಜಾ ಸಮಯ

ಈ ಪೂಜೆಗೆ ಬೇಕಾಗುವ ಸಮಯ 15 ರಿಂದ 20 ನಿಮಿಷಗಳು . ಭಾನುವಾರದ ದಿವಸ ಸೂರ್ಯನಿಗೆ ವಿಶೇಷವಾಗಿದ್ದರೂ ಕೂಡ , ಪ್ರತಿ ದಿವಸ ಸೂರ್ಯೋದಯದ ಕಾಲದಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಆರೋಗ್ಯ ವೃದ್ಧಿಯಾಗಿ ದೇಹದಲ್ಲಿ ಚೈತನ್ಯ ಉಂಟಾಗುತ್ತದೆ . 


ಪೂಜಾ ಬೇಕಾದ ಸಾಮಗ್ರಿಗಳು

* ಸೂರ್ಯನ ಫೋಟೋ - 1 


ಅರಶಿನ 



* ಕುಂಕುಮ 


* ಅಕ್ಷತೆ 


* ಹೂವು 


ಹಣ್ಣುಗಳು 


* ವೀಳ್ಯದೆಲೆ 


ಅಡಿಕೆ 


# ಊದಿನ ಕಡ್ಡಿ - 2 ರಿಂದ 5 


* ಕರ್ಪೂರ - 2 ರಿಂದ 5 


ದೀಪಗಳು - 1 ರಿಂದ 2 


* ಗಂಧ 




ಆರತಿ - 1 


* ಘಂಟೆ - 1 


* ಪಂಚಪಾತ್ರೆ , ಉದ್ಧರಣೆ - 1 ಜೊತೆ 


ನೀರು - 1 ತಂಬಿಗೆ 



ಪೂಜಾ ಐಚ್ಛಿಕ ಸಾಮಗ್ರಿಗಳು : 


# ಅರ್ಕ ಪುಷ್ಪ ( ಎಕ್ಕೆಯ ಹೂವು ) 


# ಗೆಜ್ಜೆವಸ್ತ್ರ 


# ಉಪವೀತ 


1 ) ಪ್ರಾರ್ಥನೆ , ಪೂಜಾ ಪ್ರಾರಂಭ 


ಸೂರ್ಯಾಯ ನಮಃ : 


● 




ಧ್ಯಾಯಾಮಿ ಆವಾಹಯಾಮಿ 


( ಅಕ್ಷತೆಯನ್ನು ಹಾಕುವುದು ) 


ರತ್ನಮಯ ಸಿಂಹಾಸನಂ ಸಮರ್ಪಯಾಮಿ ಸ್ವಾಗತಂ ( ಹೂವು ಅಕ್ಷತೆಯನ್ನು ಹಾಕುವುದು ) ಪಾದಾರವಿಂದಯೋಃ ಪಾದ್ಯಂ ಪಾದ್ಯಂ 


ಸಮರ್ಪಯಾಮಿ 


ಹಸ್ತಯೋಃ ಅರ್ಘಂ ಅರ್ಥ್ಯಂ ಸಮರ್ಪಯಾಮಿ 



ಮುಖೇ ಆಚಮನೀಯಂ ಸಮರ್ಪಯಾಮಿ 


( ಈ ಮೂರು ಮಂತ್ರಗಳನ್ನು ಹೇಳಿ ಮೂರು ಉದ್ಧರಣೆ ( ಚಮಚ ) ನೀರನ್ನು ತಟ್ಟೆಯಲ್ಲಿ ಬಿಡುವುದು ) 


2 ) ಅಲಂಕಾರ 


ಸೂರ್ಯಾಯ ನಮಃ : 


● 


● 




ಸ್ನಾನಂ ಸಮರ್ಪಯಾಮಿ 


( ದೇವರಿಗೆ ನೀರಿನಲ್ಲಿ ಅಥವಾ ಪಂಚಾಮೃತದಲ್ಲಿ ಸ್ನಾನವನ್ನು ಮಾಡಿಸುವುದು ) ವಸ್ತ್ರಂ ಸಮರ್ಪಯಾಮಿ 


( ಗೆಜ್ಜೆ ವಸ್ತ್ರ ಅಥವಾ ಅಕ್ಷತೆಯನ್ನು ಹಾಕುವುದು ) 


ಉಪವೀತಂ ಸಮರ್ಪಯಾಮಿ 


( ಉಪವೀತ , ಕಂಚುಕ , ಅಕ್ಷತೆಯನ್ನು ಹಾಕುವುದು ) ಗಂಧಂ ಸಮರ್ಪಯಾಮಿ 


( ಗಂಧ , ಅರಶಿನ , ಕುಂಕುಮಗಳನ್ನು ದೇವರಿಗೆ ಅರ್ಪಿಸುವುದು ) 


ಅಕ್ಷತಾನ್ ಸಮರ್ಪಯಾಮಿ 


( ಅಕ್ಷತೆಯನ್ನು ಹಾಕುವುದು ) ಪುಷ್ಪಾಣಿ ಸಮರ್ಪಯಮಿ 


( ಹೂವಿನಲ್ಲಿ ದೇವರಿಗೆ ಅಲಂಕಾರ ಮಾಡುವುದು ) 


ಧೂಪಂ ಆಘ್ರಾಪಯಾಮಿ 


( ಊದಿನ ಕಡ್ಡಿಯನ್ನು ಬೆಳಗುವುದು ) ದೀಪಂ ದರ್ಶಯಾಮಿ 


( ದೀಪವನ್ನು ಬೆಳಗುವುದು ) 



3 ) ಅರ್ಚನೆ ಮತ್ತು ಆರಾಧನೆ : - ನಾಮ ಪೂಜಾಂ ಕರಿಷ್ಯ ( 108 ಹೆಸರುಗಳಿಂದ ಹೂವು , ಅಕ್ಷತೆ , ಕುಂಕುಮಗಳಿಂದ ದೇವರಿಗೆ ಅರ್ಚನೆ ಮಾಡುವುದು ) 


5:55 AM 


← ಸೂರ್ಯ ಪೂಜಾ ಪದ್ಧತಿ 


ಸೂರ್ಯಾಯ ನಮಃ : 


● 


ಧೂಪಂ ಆಘ್ರಾಪಯಾಮಿ ( ಊದಿನ ಕಡ್ಡಿಯನ್ನು ಬೆಳಗುವುದು ) 


ದೀಪಂ ದರ್ಶಯಾಮಿ 


4G 


( ದೀಪವನ್ನು ಬೆಳಗುವುದು ) 


ನೈವೇದ್ಯಾರ್ಥೈ 


( ತೆಂಗಿನಕಾಯಿ , ಹಣ್ಣುಗಳು , ವೀಳ್ಯದೆಲೆ , ಅಡಿಕೆ ಅಥವಾ ಯಾವುದೇ ತಯಾರಿಸಿದಂತಹ 


ನೈವೇದ್ಯಂ ನಿವೇದಯಾಮಿ 


ಮಂಗಳ ನೀರಾಜನಂ ಸಮರ್ಪಯಾಮಿ 


( ಕರ್ಪೂರದಿಂದ ಆರತಿಯನ್ನು ಮಾಡುವುದು ) 


4 ) ಪ್ರಾರ್ಥನೆ ಮತ್ತು ಸಮಾಪ್ತಿ . 


ಸೂರ್ಯಾಯ ನಮಃ : 


ಖಾದ್ಯಗಳನ್ನು ನೈವೇದ್ಯ ಮಾಡಿ ಹೂವು ಅಕ್ಷತೆಗಳನ್ನು ಹಾಕುವುದು ) 


ಮಂತ್ರ ಪುಷ್ಪಾಂಜಲಿಂ ಕರಿಷ್ಯ ( ಕೈ ತೊಳೆದುಕೊಂಡು ಹೂವು ಅಕ್ಷತೆಗಳನ್ನು ಹಾಕುವುದು ) 


ಪ್ರದಕ್ಷಿಣ ನಮಸ್ಕಾರಾನ್ ಸಮರ್ಪಯಾಮಿ . ( ಮೂರು ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡುವುದು ) 




ಪ್ರಸನ್ನಾರ್ಥ್ಯಂ ಸಮರ್ಪಯಾಮಿ . ( ಹೂವು ಅಕ್ಷತೆಗಳನ್ನು ಒಂದು ಚಮಚ ನೀರಿನ ಜೊತೆ ತಟ್ಟೆಯಲ್ಲಿ ಬಿಡುವುದು ) 


ಪ್ರಾರ್ಥನಾಂ ಕರಿಷ್ಯ . 

( ಹೂವು ಅಕ್ಷತೆ ಹಿಡಿದುಕೊಂಡು ಪ್ರಾರ್ಥನೆ ಮಾಡಿ ಹಾಕುವುದು ) 


ತೀರ್ಥ ಪ್ರಸಾದವನ್ನು ಕೊಟ್ಟು , ತಾನೂ 


ತೆಗೆದುಕೊಳ್ಳುವುದರೊಂದಿಗೆ ಪೂಜೆ ಸಮಾಪ್ತಿಯಾಗುವುದು.


1. ಓಂ ಅರುಣಾಯ ನಮಃ । 


2. ಓಂ ಶರಣ್ಯಾಯ ನಮಃ । 


3. ಓಂ ಕರುಣಾರಸಸಿಂಧವೇ ನಮಃ । 


4. ಓಂ ಅಸಮಾನಬಲಾಯ ನಮಃ । 


5. ಓಂ ಆರ್ತರಕ್ಷಕಾಯ ನಮಃ । 


6. ಓಂ ಆದಿತ್ಯಾಯ ನಮಃ । 


7. ಓಂ ಆದಿಭೂತಾಯ ನಮಃ । 


8. ಓಂ ಅಖಿಲಾಗಮವೇದಿನೇ ನಮಃ । 


9. ಓಂ ಅಚ್ಯುತಾಯ ನಮಃ । 


10. ಓಂ ಅಖಿಲಜ್ಜಾಯ ನಮಃ || 


11. ಓಂಅನಂತಾಯ ನಮಃ । 


12. ಓಂ ಇನಾಯ ನಮಃ । 


13. ಓಂ ವಿಶ್ವರೂಪಾಯ ನಮಃ । 


14. ಓಂ ಇಜ್ಯಾಯ ನಮಃ । 


15. ಓಂ ಇಂದ್ರಾಯ ನಮಃ । 


16. ಓಂ ಭಾನವೇ ನಮಃ । 


17. ಓಂ ಇಂದಿರಾಮಂದಿರಾಪ್ತಾಯ ನಮಃ । 


18. ಓಂ ವಂದನೀಯಾಯ ನಮಃ । 


19. ಓಂ ಈಶಾಯ ನಮಃ । 


20. ಓಂ ಸುಪ್ರಸನ್ನಾಯ ನಮಃ 


21. ಓಂ ಸುಶೀಲಾಯ ನಮಃ । 


22. ಓಂ ಸುವರ್ಚಸೇ ನಮಃ । 


23. ಓಂ ವಸುಪ್ರದಾಯ ನಮಃ । 


24. ಓಂ ವಸವೇ ನಮಃ । 


25. ಓಂ ವಾಸುದೇವಾಯ ನಮಃ । 


26. ಓಂ ಉಜ್ವಲಾಯ ನಮಃ । 


27. ಓಂ ಉಗ್ರರೂಪಾಯ ನಮಃ । 


28. ಓಂ ಊರ್ಧ್ವಗಾಯ ನಮಃ । 


29. ಓಂ ವಿವಸ್ವತೇ ನಮಃ । 


30. ಓಂ ಉದ್ಯರಣಜಾಲಾಯ ನಮಃ ।। 


31. ಓಂ ಹೃಷೀಕೇಶಾಯ ನಮಃ । 


32. ಓಂ ಊರ್ಜಸ್ವಲಾಯ ನಮಃ । 


33. ಓಂ ವೀರಾಯ ನಮಃ । 


34. ಓಂ ನಿರ್ಜರಾಯ ನಮಃ । 


35. ಓಂಜಯಾಯ ನಮಃ । 


36. ಓಂ ಊರುದ್ವಯಾಭಾವರೂಪಯುಕ್ತಸಾರಥಯೇ ನಮಃ



37. ಓಂ ಋಷಿವಂದ್ಯಾಯ ನಮಃ । 


38. ಓಂ ರುಗ್ರಂತೇ ನಮಃ । 


39. ಓಂ ಋಕ್ಷಚಕ್ರಾಯ ನಮಃ । 


40. ಓಂ ಋಜುಸ್ವಭಾವಚಿತ್ತಾಯ ನಮಃ || 


41. ಓಂ ನಿತ್ಯಸ್ತುತ್ಯಾಯ ನಮಃ । 


42. ಓಂ ಋಕಾರಮಾತೃಕಾವರ್ಣರೂಪಾಯ ನಮಃ । 


43. ಓಂ ಉಜ್ವಲತೇಜಸೇ ನಮಃ । 


44. ಓಂ ಋಕ್ಷಾಧಿನಾಥಮಿತ್ರಾಯ ನಮಃ । 


45. ಓಂ ಪುಷ್ಕರಾಕ್ಷಾಯ ನಮಃ । 


46. ಓಂ ಲುಪ್ತದಂತಾಯ ನಮಃ । 


47. ಓಂ ಶಾಂತಾಯ ನಮಃ । 



48. ಓಂ ಕಾಂತಿದಾಯ ನಮಃ । 



49. ಓಂಘನಾಯ ನಮಃ । 


50. ಓಂ ಕನತ್ಕನಕಭೂಷಾಯ ನಮಃ ।। 


51. ಓಂ ಖದ್ಯೋತಾಯ ನಮಃ । 


52. ಓಂ ಲೂನಿತಾಖಿಲದೈತ್ಯಾಯ ನಮಃ | 


53. ಓಂಸತ್ಯಾನಂದಸ್ವರೂಪಿಣೇ ನಮಃ । 


54. ಓಂ ಅಪವರ್ಗಪ್ರದಾಯ ನಮಃ । 



55. ಓಂ ಆರ್ತಶರಣ್ಯಾಯ ನಮಃ । 


56. ಓಂ ಏಕಾಕಿನೇ ನಮಃ । 


57. ಓಂ ಭಗವತೇ ನಮಃ । 


58.  ಓಂ ಸೃಷ್ಟಿಸ್ಥಿತ್ಯಂತಕಾರಿಣೇ ನಮಃ । 


59. ಓಂ ಗುಣಾತ್ಮನೇ ನಮಃ । 


60. ಓಂ ಘ್ರಣಿಧೃತೇ ನಮಃ || 


61. ಓಂ ಬೃಹತೇ ನಮಃ । 


62. ಓಂ ಬ್ರಹ್ಮಣೇ ನಮಃ । 


63. ಓಂ ಐಶ್ವರ್ಯದಾಯ ನಮಃ । 


64. ಓಂ ಶರ್ವಾಯ ನಮಃ । 


ಸೃಷ್ಟಿಸ್ಥಿತ್ಯಂತಕಾರಿಣೇ ನಮಃ । 


65. ಓಂ ಹರಿದಶ್ವಾಯ ನಮಃ । 


66. ಓಂ ಶೌರಯೇ ನಮಃ । 


67. ಓಂ ದಶದಿಕ್ಸಂಪ್ರಕಾಶಾಯ ನಮಃ । 


68. ಓಂ ಭಕ್ತವಶ್ಯಾಯ ನಮಃ । 


69. ಓಂ ಓಜಸ್ಕರಾಯ ನಮಃ । 


70. ಓಂ ಜಯಿನೇ ನಮಃ ।। 


71. ಓಂ ಜಗದಾನಂದಹೇತವೇ ನಮಃ । 


72. ಓಂ ಜನ್ಮಮೃತ್ಯುಜರಾವ್ಯಾಧಿವರ್ಜಿತಾಯ ನಮಃ । 


73. ಓಂ ಉಚ್ಚಸ್ಥಾನಸಮಾರೂಢರಥಸ್ಥಾಯ ನಮಃ । 


74. ಓಂ ಅಸುರಾರಯೇ ನಮಃ । 


75. ಓಂ ಕಮನೀಯಕರಾಯ ನಮಃ । 


76. ಓಂ ಅಬ್ಬವಲ್ಲಭಾಯ ನಮಃ । 


77. ಓಂ ಅಂತರ್ಬಹಿಃಪ್ರಕಾಶಾಯ ನಮಃ । 


78. ಓಂ ಅಚಿಂತ್ಯಾಯ ನಮಃ । 


79. ಓಂ ಆತ್ಮರೂಪಿಣೇ ನಮಃ । 


80. ಓಂ ಅಚ್ಯುತಾಯ ನಮಃ ॥ 


81. ಓಂ ಅಮರೇಶಾಯ ನಮಃ । 


82. ಓಂ ಪರಜ್ಯೋತಿಷೇ ನಮಃ । 


83. ಓಂ ಅಹಸ್ಕರಾಯ ನಮಃ । 


84. ಓಂ ರವಯೇ ನಮಃ । 


85. ಓಂ ಹರಯೇ ನಮಃ । 


86. ಓಂ ಪರಮಾತ್ಮನೇ ನಮಃ । 


87. ಓಂ ತರುಣಾಯ ನಮಃ । 


88. ಓಂ ವರೇಣ್ಯಾಯ ನಮಃ । 


89. ಓಂ ಗ್ರಹಾಣಾಂಪತಯೇ ನಮಃ । 


90. ಓಂ ಭಾಸ್ಕರಾಯ ನಮಃ ।। 



91. ಓಂ ಆದಿಮಧ್ಯಾಂತರಹಿತಾಯ ನಮಃ । 


92. ಓಂ ಸೌಖ್ಯಪ್ರದಾಯ ನಮಃ । 


93. ಓಂ ಸಕಲಜಗತಾಂಪತಯೇ ನಮಃ । 


94. ಓಂ ಸೂರ್ಯಾಯ ನಮಃ । 


95. ಓಂ ಕವಯೇ ನಮಃ । 


96. ಓಂ ನಾರಾಯಣಾಯ ನಮಃ । 


97. ಓಂ ಪರೇಶಾಯ ನಮಃ । 


98. ಓಂ ತೇಜೋರೂಪಾಯ ನಮಃ । 


99. ಓಂ ಶ್ರೀಂ ಹಿರಣ್ಯಗರ್ಭಾಯ ನಮಃ । 


100. ಓಂ ಕ್ರೀಂ ಸಂಪತ್ಕರಾಯ ನಮಃ ॥ 


101. ಓಂ ಐಂ ಇಷ್ಟಾರ್ಥದಾಯ ನಮಃ | 


102. ಓಂ ಅನುಪ್ರಸನ್ನಾಯ ನಮಃ । 


103. ಓಂ ಶ್ರೀಮತೇ ನಮಃ । 


104. ಓಂ ಶ್ರೇಯಸೇ ನಮಃ । 


105. ಓಂ ಭಕ್ತಕೋಟಿಸೌಖ್ಯಪ್ರದಾಯಿನೇ


106. ಓಂ ನಿಖಿಲಾಗಮವೇದ್ಯಾಯ ನಮಃ | 


107. ಓಂ ನಿತ್ಯಾನಂದಾಯ ನಮಃ । 


108. ಓಂ ಸೂರ್ಯಾಯ ನಮಃ ||

***

ಸೂರ್ಯನ ಜನನ:- 


ಸೂರ್ಯದೇವನ ಕುರಿತಾದ ವಿಷಯಗಳು ಋಗ್ವೇದದಲ್ಲಿ ಉಲ್ಲೇಖಿಸಿದೆ. ಅನೇಕ ಪುರಾಣಗಳ ಪ್ರಕಾರ  ಬ್ರಹ್ಮನ ಮಾನಸ ಪುತ್ರ  ಮರೀಚಿ, ಇವರ ಮಗ ಕಶ್ಯಪ. ಇವರು ದಕ್ಷಬ್ರಹ್ಮನ ಮಕ್ಕಳಾದ ಅದಿತಿ  ಮತ್ತು  ದಿತಿಯನ್ನು  ವಿವಾಹವಾಗುತ್ತಾರೆ. ಕಶ್ಯಪ ರಿಂದ ಅದಿತಿಗೆ  ದೇವತೆಗಳು ಹುಟ್ಟಿದರೆ, ದಿತಿಗೆ ಅಸುರರು ಹುಟ್ಟುತ್ತಾರೆ. ಋಷಿಮುನಿಗಳು ಬ್ರಾಹ್ಮಣರು ಮಾಡಿದ  ಯಾಗಾದಿಗಳ ಫಲ ದೇವತೆಗಳಿಗೆ ಹೋಗಿ ಅವರಿಗೆ ಹೆಚ್ಚು ಶಕ್ತಿ ಬರುತ್ತದೆ.

ಇದರಿಂದಾಗಿ ಅಸುರರು ತಮಗೆ ಫಲ ದೊರಕುವುದಿಲ್ಲ ವೆಂದು ದೇವತೆಗಳ ಮೇಲೆ ದ್ವೇಷ ಬೆಳೆಯುತ್ತದೆ. ಬರಬರುತ್ತಾ ಇದು ಇಷ್ಟಕ್ಕೆ ನಿಲ್ಲದೆ ದೇವತೆಗಳಿಗೆ ಹಿಂಸೆ ಕೊಡುವುದಲ್ಲದೆ, ಅವರ ಮೇಲೆ ಯುದ್ಧಮಾಡಿ ಸ್ವರ್ಗ ಲೋಕದಿಂದ ಹೊರಗೆ ತಳ್ಳುತ್ತಾರೆ. ಸ್ವರ್ಗವನ್ನು ಅಸುರರು ಆಕ್ರಮಿಸುತ್ತಾರೆ. 


ದೇವತೆಗಳ ತಾಯಿಯಾದ ಅದಿತಿಗೆ ಇದನ್ನೆಲ್ಲಾ ನೋಡಿ ಸಂಕಟವಾಗಿ ತನ್ನ ಮಕ್ಕಳಾದ ದೇವತೆಗಳನ್ನು ರಕ್ಷಿಸಲು ಈಶ್ವರನ ಕುರಿತು ಘೋರವಾದ ತಪಸ್ಸು ಮಾಡುತ್ತಾಳೆ.  ಅವಳ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಪ್ರತ್ಯಕ್ಷವಾಗಿ ಏನು ವರ ಬೇಕೆಂದು ಕೇಳುತ್ತಾನೆ.  ಅದಿತಿಯು ಕೈಮುಗಿದು  ದೇವಾ,  ನನ್ನ ತಂಗಿ 'ದಿತಿ' ಯ  ಮಕ್ಕಳಾದ ಅಸುರರು ನನ್ನ ಮಕ್ಕಳಿಗೆ ಚಿತ್ರಹಿಂಸೆಗಳನ್ನು ಕೊಟ್ಟು ಸ್ವರ್ಗದಿಂದ ದಬ್ಬಿ, ನಿಲ್ಲಲು ನೆಲೆಯಿಲ್ಲದೆ ಒದ್ದಾಡುವಂತೆ ಮಾಡಿದ್ದಾರೆ. ದೇವ ನೀವು ಕರುಣೆಯಿಟ್ಟು ನನ್ನ ಮಕ್ಕಳಿಗೆ ಎಂದಿನಂತೆ ಸ್ವರ್ಗವು ದೊರಯುವಂತೆ ಆಶೀರ್ವದಿಸಬೇಕು ಎಂದು ಬೇಡಿದಳು.  ಆಗ ಶಿವನು ನನ್ನ ಅಂಶದಿಂದ ನಿನಗೆ ಒಬ್ಬ ಮಗ ಜನಿಸುತ್ತಾನೆ ಅವನು ರಾಕ್ಷಸರನ್ನು ಸೋಲಿಸಿ ಸ್ವರ್ಗವನ್ನು ನಿನ್ನ ಮಕ್ಕಳಿಗೆ ಕೊಡಿಸುತ್ತಾನೆ ಎಂದು ಅದಿತಿಗೆ  ಹರಸಿದನು. 


ಸ್ವಲ್ಪ ದಿನಗಳಲ್ಲಿ ಪರಮೇಶ್ವರನ ಅನುಗ್ರಹದಿಂದ ಅದಿತಿಗೆ ಒಬ್ಬ ಮಗ ಜನಿಸುತ್ತಾನೆ. ಅವನು ಹುಟ್ಟುವಾಗಲೇ ಫಳಫಳ ಹೊಳೆಯುತ್ತಿದ್ದು ಬೆಂಕಿಯಂತೆ ಪ್ರಜ್ವಲಿಸುತ್ತಿದ್ದನು  ಆದುದರಿಂದ ಮಗುವಿಗೆ 'ಸೂರ್ಯ' ಎಂದು ಹೆಸರಿಟ್ಟರು. ಇವನು ಮುಂದೆ ಬೆಳೆದು  ದೊಡ್ಡವನಾಗಿ  ಸಹೋದರರೊಂದಿಗೆ ಅಸುರರ ಮೇಲೆ ಯುದ್ಧ ಸಾರಿ, ಸ್ವರ್ಗದಿಂದ ಅಸುರರನ್ನು ಹೊರಗೆ ದಬ್ಬಿ  ತನ್ನ ಸಹೋದರರಿಗೆ  ಅವರ ಸ್ವರ್ಗವನ್ನು ಅವರಿಗೆ ಕೊಡಿಸುತ್ತಾನೆ.  ಅಂದಿನಿಂದಲೇ ಸೂರ್ಯದೇವನು ಜಗತ್ತಿಗೆ ಬೆಳಕನ್ನು ಕೊಡುತ್ತಾ ಅನೇಕ ಜೀವ ಕೋಟಿಗಳಿಗೆ ಕಾರಣನಾಗುತ್ತಾನೆ. 


ಸೂರ್ಯನು ಹುಟ್ಟುವ ಮೊದಲು, ಸೃಷ್ಟಿಯು ಆರಂಭವಾಗುವ ಸಮಯ ಮೊದಲು ಜಗತ್ತು ಕತ್ತಲಲ್ಲಿ ತುಂಬಿತ್ತು.  ಆಗ ವಿಷ್ಣು ತಾನೊಬ್ಬನೇ ಇದ್ದು ಅವನಿಗೆ ಜೊತೆ ಬೇಕು ಎನಿಸಿ ಹಲವಾರು ದೇವತೆಗಳನ್ನು ಸೃಷ್ಟಿಸಲು ಯೋಚಿಸುತ್ತಾನೆ.  ಹೀಗೆ ಯೋಚಿಸಿದಾಗ ಅವನ ನಾಭಿಯಿಂದ ಒಂದು ಕಮಲದ ಹೂವು ಹೊರಬರುತ್ತದೆ ಅದರೊಳಗಿಂದ ಬ್ರಹ್ಮ ಸೃಷ್ಟಿಯಾದನು. ಬ್ರಹ್ಮ ಹುಟ್ಟಿದಾಗ ಜಗತ್ತೆಲ್ಲ ಕತ್ತಲೆ ಮಯವಾಗಿತ್ತು ಬ್ರಹ್ಮಾಂಡದಲ್ಲಿನ ನೀರು ತುಂಬಿತ್ತು. ಬ್ರಹ್ಮನು ಈ ಕತ್ತಲ ಪ್ರಪಂಚದಲ್ಲಿ ಸಾವಿರಾರು ವರುಷ ಕಳೆದನು. 


ಹೀಗೆ ಕಳೆಯುತ್ತಿರುವಾಗ ಸಮುದ್ರದ ನೀರಿನಲ್ಲಿ ಬರುವ ತೊರೆಗಳೆಲ್ಲ ಒಂದೆಡೆ ಸಂಗ್ರಹವಾಗಿ ಮೊಟ್ಟೆಯ ರೂಪ ತಾಳುತ್ತದೆ. ಬ್ರಹ್ಮನು ಆ ಮೊಟ್ಟೆಯನ್ನು ಒಡೆದಾಗ ಸೂರ್ಯದೇವನು ಹೊರಬರುತ್ತಾನೆ. ಸೂರ್ಯದೇವನು ಹುಟ್ಟುತ್ತಿದ್ದಂತೆಯೇ ಶಾಖ ಮತ್ತು ಬೆಳಕನ್ನು ಉತ್ಪತ್ತಿಮಾಡುತ್ತ ಬಂದನು. ಶಾಖ ಮತ್ತು ಬೆಳಕು ದಿನೇ ದಿನೇ ಹೆಚ್ಚಾಗತೊಡಗಿತ್ತು. ಇದರಿಂದ ನೀರೆಲ್ಲಾ ಬತ್ತಿತು.  ಶಾಖ ತಡೆದುಕೊಳ್ಳಲಾಗದೆ ಎಲ್ಲಾ ಜೀವಿಗಳು ಒದ್ದಾಡಿದವು.

ಬ್ರಹ್ಮನಿಗೂ ಈ ತಾಪ ತಾಳಲಾರದೆ ಸೂರ್ಯದೇವನನ್ನು ಸಂಹರಿಸಿದನು.

ಇದರಿಂದ ಬೆಳಗ್ಗೆ ಇಲ್ಲದಂತಾಗಿ ದೇವತೆಗಳಿಗೆ ಹೀಗೆ ಬದುಕುವುದು ಅಸಾಧ್ಯವೆನಿಸಿತು.  ಅವರೆಲ್ಲರೂ ಬೆಳಕು ಬೇಕೆಂದು ಶಿವನ ಮೊರೆ ಹೊಕ್ಕರು. ಶಿವನು ಸೂರ್ಯದೇವನಿಗೆ ಸಾಮಾನ್ಯ  ಶಾಖ ವಿರುವಂತೆ ಮಾಡಿ ಅದಿತಿಯ ಹೊಟ್ಟೆಯಲ್ಲಿ ಜನಿಸುವಂತೆ ಮಾಡುತ್ತಾನೆ. 


ಸೂರ್ಯ ಎಂದರೆ ಬೆಳಕು. ನವಗ್ರಹಗಳಲ್ಲಿ ಸೂರ್ಯ ಪ್ರಮುಖನಾದವನು. ಸೂರ್ಯನ ದೇವತೆ ಆದಿತ್ಯ. ಸೂರ್ಯನಿಗೆ  ಹೊಂಬಣ್ಣದ ಕೂದಲುಗಳಿವೆ. ಬಂಗಾರ ಬಣ್ಣದ ಕೈಗಳಿವೆ. ಸೂರ್ಯನು ತನ್ನ ವಿಜಯೋತ್ಸವದ ರಥದಲ್ಲಿ ಸ್ವರ್ಗದಿಂದ ಇಳಿದು ಬರುತ್ತಾನೆ. ಏಳು ಕುದುರೆಗಳು ರಥವನ್ನು ಎಳೆಯುತ್ತವೆ.  ಅವುಗಳ ತಲೆಯು ಕಾಮನಬಿಲ್ಲಿನ ಬಣ್ಣಗಳನ್ನು ಪ್ರತಿನಿಧಿಸುತ್ತವೆ. ಸೂರ್ಯ ಪ್ರತಿನಿಧಿಸುವ ವಾರ ರವಿವಾರ.  ಕಣ್ಣಿಗೆ ಕಾಣುವ ದೇವರು ಸೂರ್ಯ. ಪ್ರತಿದಿನ ಮುಂಜಾನೆ ಸೂರ್ಯೋದಯ ನೋಡಿ ಸ್ತುತಿಸಿ ನಮಸ್ಕರಿಸುತ್ತಾರೆ.  ಸೂರ್ಯರಾಧನೆ ಬಹಳ ಪ್ರಾಮುಖ್ಯ ಪಡೆದಿದೆ. ಸೂರ್ಯ ಜಗತ್ತಿಗೆ ಆಧಾರ.

💐🙏💐

ಈ ಪಿತೃ ಪಕ್ಷದಲ್ಲಿ ಪ್ರತಿದಿನ ಸೂರ್ಯ ದೇವನಿಗೆ ಅರ್ಘ್ಯ ಪ್ರದಾನ ಮಾಡಿ, ಆದಿತ್ಯ ಹೃದಯ ಪಠಿಸುವುದು ತುಂಬಾನೇ ಒಳ್ಳೆಯ ಫಲವನ್ನು ಕೊಡುತ್ತದೆ.

( ವಾಟ್ಸ್ ಅಪ್ ಸಂಗ್ರಹ )

***


No comments:

Post a Comment