ಮಹಾಲಯ ತರ್ಪಣ ಸಂಕಲ್ಪ
🌺🌺🌺🌺🌺🌺🌺
ತಿಲತರ್ಪಣಕ್ಕೆ ಬೇಕಾದ ಸಾಮಗ್ರಿಗಳು: ಪಂಚಪಾತ್ರೆ, ಉದ್ಧರಣೆ, ಕರೀ ಎಳ್ಳು, ದರ್ಭೆ, ನಿರ್ಮಾಲ್ಯ ತುಳಸಿ, ನಿರ್ಮಾಲ್ಯ ತೀರ್ಥ, ತರ್ಪಣಕ್ಕೆ ನೀರು, ತಂಬಿಗೆ,
ನೀರಿಗೆ ನಿರ್ಮಾಲ್ಯ ಸೇರಿಸಿ ಅದರಿಂದಲೇ ತರ್ಪಣ ಕೊಡಬೇಕು
೧. ಆಚಮನ
೨. ಪವಿತ್ರ ಧಾರಣ (ಪವಿತ್ರ ಮಾಡಲು ಬರದಿದ್ದರೆ ಪವಿತ್ರದ ಉಂಗುರವಿದ್ದರೂ ಪರವಾಗಿಲ್ಲ)
೩. ಪುನರಾಚಮನ
೪. ಪ್ರಾಣಾಯಾಮ
ನಂತರ ಸಂಕಲ್ಪ —
ಶ್ರೀ ಗೋವಿಂದ ಗೋವಿಂದ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ, ಆದ್ಯ ಬ್ರಹ್ಮಣ:, ದ್ವಿತೀಯ ಪರಾರ್ಧೇ, ಶ್ರೀ ಶ್ವೇತವರಾಹಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೋ ದ್ವೀಪೇ, ದಂಡಕಾರಣ್ಯೇ, ಗೋದಾವರ್ಯಾ: ದಕ್ಷಿಣೇ ತೀರೇ ಶಾಲೀವಾಹನ ಶಕೇ, ಬೌದ್ಧಾವತಾರೇ, ರಾಮಕ್ಷೇತ್ರೇ (ಪರಶುರಾಮಕ್ಷೇತ್ರೇ), ಶ್ರೀ ಪರಮವೈಷ್ಣವ ಸನ್ನಿಧೌ, ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ ಶುಭಕೃತ್ ನಾಮ ಸಂವತ್ಸರೇ, ದಕ್ಷಿಣಾಯನೇ, ವರ್ಷ ಋತೌ, ಭಾದ್ರಪದ ಮಾಸೇ, ಕೃಷ್ಣ ಪಕ್ಷೇ, ಅಷ್ಟಮ್ಯಾಂ ಶುಭತಿಥೌ, ಉತ್ತರಾ ನಕ್ಷತ್ರೇ, ಶುಭ ಯೋಗೇ, ಚತುಷ್ಪಾಥ ಕರಣೇ, ಆದಿತ್ಯವಾಸರಯುಕ್ತಾಯಂ, ಕನ್ಯಾಗತೇ ಸವಿತರಿ ಆಷಾಢ್ಯಾದಿ ಪಂಚಮಹಾ ಅಪರ ಪಕ್ಷೇ ಸಕೃನ್ ಮಹಾಲಯ ಪರ್ವಕಾಲೇ/ ಮಹಾಲಯ ಪ್ರಯುಕ್ತ ಮಹಾಲಯ ಶ್ರಾದ್ಧಾಂಗ ಪಿತ್ರಾದಿ ಸಮಸ್ತ ಪಿತ್ರೂಣಾಂ ಅಕ್ಷಯ ಪುಣ್ಯ ಲೋಕಾ ವಾಪ್ತ್ಯರ್ತಂ ಪಿತ್ರಾದಿ ಸಮಸ್ತ ಪಿತೃಣಾಂ ಅಂತರ್ಗತ, ಮನು ನಾಮಕ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೇರಣಯಾ, ಶ್ರೀಮನ್ಮಧ್ವವಲ್ಲಭ ಜನಾರ್ಧನ ವಾಸುದೇವ ಪ್ರೀತ್ಯರ್ಥಂ, ವಿಷ್ಣು ನಕ್ಷತ್ರ, ವಿಷ್ಣುಯೋಗ, ವಿಷ್ಣು ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಪುಣ್ಯತಿಥೌ (ಪ್ರಾಚೀನಾವೀತಿ), (ಜನಿವಾರವನ್ನು ಎಡಕ್ಕೆ ಹಾಕಿಕೊಂಡು) ಸದ್ಯ: ತಿಲತರ್ಪಣಂ ಕರಿಷ್ಯೇ –
೧. ಪಿತ್ರು, ಪಿತಾಮಹ, ಪ್ರಪಿತಾಮಹ
೨. ಮಾತ್ರು, ಪಿತಾಮಹಿ, ಪ್ರಪಿತಾಮಹಿ
೩.ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ
೪. ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ
ಈ ಮೇಲ್ಕಂಡ 12 ಜನಕ್ಕೂ ಅಲ್ಲದೆ ಸರ್ವಪಿತೃಗಳಿಗೂ ತರ್ಪಣ ಕೊಡಬೇಕು. (ಅಕಸ್ಮಾತ್ ಇವರುಗಳಲ್ಲಿ ಯಾರಾದರೂ ಬದುಕಿದ್ದರೆ ಅವರನ್ನು ಬಿಟ್ಟು)
ಜೊತೆಗೆ ನಿಮ್ಮ ಬಳಿ ಸರ್ವಪಿತೃಗಳ ವಿವರದ ಲಿಸ್ಟ್ ಇಟ್ಟುಕೊಂಡು ತರ್ಪಣ ಕೊಡಿ ( ಸತ್ತವರಿಗೆ)
ಕೊನೆಗೆ ಈ ಕೆಳಗಿನ ಮಂತ್ರ ಹೇಳಿಕೊಂಡು ಒಂದು ತರ್ಪಣವನ್ನು ಕ್ರಮಬದ್ಧವಾದ ಸಂಸ್ಕಾರವಿಲ್ಲದೆ ಮೃತರಾದವರಿಗಾಗಿ ಕೊಡಬೇಕು.
ಆಬ್ರಹ್ಮಸ್ತಂಬಪರ್ಯಂತಂ ದೇವರ್ಷಿಪಿತೃಮಾನವಾ: |
ತೃಪ್ಯಂತು ಪಿತರಸ್ಸರ್ವೇ ಮಾತೃಮಾತಾಮಹಾದಯ:||
ಅತೀತಕುಲಕೋಟೀನಾಂ ಸಪ್ತದ್ವೀಪನಿವಾಸಿನಂ |
ಆಬ್ರಹ್ಮಭುವನಾದಿಲ್ಲೋಕಾದಿಮಸ್ತು ತಿಲೋದಕಂ ||
ಕೈಯಲ್ಲಿ ಎಳ್ಳನ್ನು ಹಾಕಿಕೊಂಡು ಬಿಡುವುದು.
ನಂತರ ಯಜ್ಞೋಪವೀತವನ್ನು ಮಾಲಾಕಾರವಾಗಿ ಹಾಕಿಕೊಂಡು ಅದರ ಬ್ರಹ್ಮಘಂಟನ್ನು ತರ್ಪಣ ಕೊಟ್ಟು ಉಳಿದ ನೀರಿನಲ್ಲಿ ಅದ್ದಿ ಈ ಕೆಳಗಿನ ಮಂತ್ರವನ್ನು ಹೇಳಿ ಕಣ್ಣಿಗೆ ಒತ್ತಿಕೊಳ್ಳಿ.
ಯೇ ಕೇ ಚಾಸ್ಮತ್ಕುಲೇ ಜಾತಾ ಅಪುತ್ರಾ ಗೋತ್ರಿಣೋ ಮೃತಾ:|
ತೇ ಗೃಹ್ಣಂತು ಮಯಾ ದತ್ತಂ ಸೂತ್ರನಿಷ್ಪೀಡನೋದಕಂ||
ಸಮರ್ಪಣ :
ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ತರ್ಪಣ ಕ್ರಿಯಾದಿಷು |
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ||
ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||
ತರ್ಪಣಕಾಲೇ ಮಧ್ಯೇ ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಜಪಮಹಂ ಕರಿಷ್ಯೆ ||
ಓಂ ಅಚ್ಯುತಾಯ ನಮಃ || ಓಂ ಅನಂತಾಯ ನಮಃ || ಓಂ ಗೋವಿಂದಾಯ ನಮಃ || ಓಂ ಅಚ್ಯುತಾನಂತ ಗೋವಿಂದೇಭ್ಯೋ ನಮ: ||
ಅನೇನ ತಿಲತರ್ಪಣೇನ ಪಿತ್ರಂತರ್ಯಾಮಿ ಪಿತ್ರಾದಿ ಸಮಸ್ತ ಪಿತೃಣಾಂ ಅಂತರ್ಗತ ಮನುನಾಮಕ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮಧ್ವವಲ್ಲಭ ಜನಾರ್ದನ ವಾಸುದೇವ ಪ್ರೀಯತಾಂ ಪ್ರೀತೋ ವರದೋ ಭವತು||
***
cc
ಈ ಮಹಾಲಯ ಕಾಲದಲ್ಲಿ ಮನೆಯಲ್ಲಿ ಗತಿಸಿದ ನಮ್ಮ ಎಲ್ಲಾ ಹಿರಿಯರಿಗೆ (ಪಿತೃಗಳಿಗೆ) ಗೌರವವನ್ನು ಕೊಡುವುದು ನಮ್ಮ ಆದ್ಯ ಕರ್ತವ್ಯ. ಅವರೆಲ್ಲರಿಗೂ ತರ್ಪಣದ ಮುಖಾಂತರ ಆರಾಧನೆಯನ್ನು ನಡೆಸುವುದು ಶಾಸ್ತ್ರಸಮ್ಮತ
*ತರ್ಪಣ ಎಂದರೆ ತೃಪ್ತಿಪಡಿಸುವ ಪ್ರಕ್ರಿಯೆ.
ಗತಿಸಿ ಹೋದ ನಮ್ಮ ಸರ್ವ ಪಿತೃಗಳಿಗೂ
ಗೋತ್ರ ನಾಮ ಉಚ್ಚಾರ ಮಾಡುತ್ತಾ ನೆನಪಿಸಿಕೊಳ್ಳುವ
ಭಾವನಾತ್ಮಕವಾದ ಒಂದು ಆರಾಧನೆ*
ಮನೆಯಲ್ಲಿಯೇ ಸುಲಭವಾಗಿ ತರ್ಪಣವನ್ನು ಕೊಡಲು ಈ ತರ್ಪಣ ವಿಧಿಯನ್ನು ಕೊಡಲಾಗಿದೆ
ಆಚಮನ 2 ಸಲ
ಆಚಮನಮ್
ಓಂ ಶ್ರೀ ಕೇಶವಾಯ ಸ್ವಾಹಾ
ಓಂ ಶ್ರೀ ನಾರಾಯಣಾಯ ಸ್ವಾಹಾ
ಶ್ರೀ ಮಾಧವಾಯ ಸ್ವಾಹಾ
ಶ್ರೀ ಗೋವಿಂದಾಯ ನಮಃ
ಓಂ ಶ್ರೀ ವಿಷ್ಣವೇ ನಮಃ
ಓಂ ಶ್ರೀ ಮಧುಸೂದನಾಯ ನಮಃ
ಓಂ ಶ್ರೀ ತ್ರಿವಿಕ್ರಮಾಯ ನಮಃ
ಓಂ ಶ್ರೀ ವಾಮನಾಯ ನಮಃ
ಓಂ ಶ್ರೀ ಶ್ರೀಧರಾಯ ನಮಃ
ಶ್ರೀ ಹೃಷಿಕೇಶಾಯ ನಮಃ
ಓಂ ಶ್ರೀ ಪದ್ಮನಾಭಾಯ ನಮಃ
ಓಂ ಶ್ರೀ ದಾಮೋದರಾಯ ನಮಃ
ಓಂ ಶ್ರೀ ಸಂಕರ್ಷಣಾಯ ನಮಃ
ಐಓಂ ಶ್ರೀ ವಾಸುದೇವಾಯ ನಮಃ
ಓಂ ಶ್ರೀ ಪ್ರದ್ಯುಮ್ಯಾಯ ನಮಃ
ಓಂ ಶ್ರೀ ಅನಿರುದ್ಧಾಯ ನಮಃ
ಓಂ ಶ್ರೀ ಪುರುಷೋತ್ತಮಾಯ ನಮಃ
ಓಂ ಶ್ರೀ ಅಧೋಕ್ಷಜಾಯ ನಮಃ
ಓಂ ಶ್ರೀ ನಾರಸಿಂಹಾಯ ನಮಃ
ಓಂ ಶ್ರೀ ಅಚ್ಯುತಾಯ ನಮಃ
ಓಂ ಶ್ರೀ ಜನಾರ್ದನಾಯ ನಮಃ
ಓಂ ಶ್ರೀ ಉಪೇಂದ್ರಾಯ ನಮಃ
ಓಂ ಶ್ರೀ ಹರಯೇ ನಮಃ
ಓಂ ಶ್ರೀ ಕೃಷ್ಣಾಯ ನಮಃ
ಪುನರಾಚಮನಮ್
[ ಪುನಃ ಆಚಮನ ಮಾಡುವುದು]2 ಸಲ
ಪ್ರಾಣಾಯಾಮಃ
ಓಂ | ಪ್ರಣವಸ್ಯ | ಪರಮೇಷ್ಠಿ | ಪರಬ್ರಹ್ಮ ಋಷಿಃ | ಪರಮಾತ್ಮಾ ದೇವತಾ | ದೈವೀಗಾಯತ್ರೀ ಛಂದಃ | ಪ್ರಾಣಾಯಾಮೇ ವಿನಿಯೋಗಃ||
ಓಂ ಭೂಃ || ಓಂ ಭುವಃ || ಓಂ ಸ್ವಃ || ಓಂ ಮಹಃ || ಓಂ ಜನಃ ||ಓಂ ತಪಃ || ಓಂ ಸತ್ಯಮ್ ||
ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧಿಯೋ ಯೋ ನಃ ಪ್ರಚೋದಯಾತ್ ||
ಓಂ ಆಪೋಜ್ಯೋತಿ ರಸೋಮೃತಂ ಬ್ರಹ್ಮ ಭೂರ್ಭುವಃ ಸ್ವರೋಮ್ | (ಕಣ್ಣಿಗೆ ನೀರನ್ನು ಹಚ್ಚಿಕೊಳ್ಳುವುದು)
ಪವಿತ್ರ ಇದ್ದಲ್ಲಿ ಧರಿಸುವುದು
ದೇಶಕಾಲೌ ಸಂಕೀರ್ತ್ಯ , ಶ್ರೀ ವಿಷ್ಣು ಪ್ರೇರಣಯಾ , ಶ್ರೀ ವಿಷ್ಣು ಪ್ರೀತ್ಯರ್ಥಂ ದೇವ - ಋಷಿ - ಆಚಾರ್ಯ - ಪಿತೃ ತರ್ಪಣಾಖ್ಯಂ ಕರ್ಮ ಕರಿಷ್ಯೇ (ಪಿತೃ ತರ್ಪಣ ಅಧಿಕಾರ ಇದ್ದವರಿಗೆ ಮಾತ್ರ)ಎಂದು ನೀರು ಬಿಡುವುದು.
ತೀರ್ಥವನ್ನು ತೆಗೆದುಕೊಂಡು ಅದರಲ್ಲಿ ನಿರ್ಮಾಲ್ಯ ಮತ್ತು ಹೂವನ್ನು, ಎರಡು ಚಿಕ್ಕ ದರ್ಬೆಯನ್ನು ತೀರ್ಥದಲ್ಲಿ ಹಾಕಿ( ದರ್ಬೆ ಇದ್ದಲ್ಲಿ ಮಾತ್ರ) ಬ್ರಹ್ಮಾಂಜಲಿ ಮಾಡಿಕೊಂಡು{ ಬಲಕೈನ್ನು ಮೇಲ್ಮುಖವಾಗಿ ಎಡಗೈಯನ್ನು ಕೆಳಮುಖವಾಗಿ ಬಲಗಾಲ ಮೇಲೆ ಇಟ್ಟುಕೊಂಡು} ಗಾಯತ್ರಿ ಮಂತ್ರ ದಿಂದ ಅಭಿ ಮಂತ್ರಣ ಮಾಡಿ. ನಂತರ ಅಭಿ ಮಂತ್ರಣ ಮಾಡಿದ ತೀರ್ಥದಿಂದ
ಮೊದಲಿಗೆ ದೇವ ತರ್ಪಣ
|| ದೇವತರ್ಪಣಮ್ ||
(ವಿಧಿಃ - ಪ್ರಾಙ್ಮುಖಃ ಸವ್ಯೇನ ಕುಶಾಗ್ರೈಃ ಅಂಗುಲ್ಯಗ್ರೈ: ದೇವ ತೀರ್ಥೇನ ಶಾಲಗ್ರಾಮತೀರ್ಥೋದಕಿನ ಏಕೈಕಮಂಜಲಿಂ ದದ್ಯಾತ್ .)
ಪೂರ್ವಾಭಿಮುಖವಾಗಿ ಕುಳಿತುಕೊಂಡು
ಬಲಗೈಯಲ್ಲಿ ನಿರ್ಮಾಲ್ಯ ಹೂವು
( ಮನೆಯ ದೇವರ ಕೋಣೆಯಲ್ಲಿ ದೇವರಿಗೆ ಇಟ್ಟಂತಹ ಹೂವು ಮತ್ತು ತುಳಸಿಯನ್ನು ತೆಗೆದುಕೊಳ್ಳುವುದು)
ಹಿಡಿದುಕೊಂಡು
೧ ತೀರ್ಥದೇವತಾ ......... ಸ್ತೃಪ್ಯಂತು
೨ ಅಗ್ನಿ...........ಸ್ತೃಪ್ಯಂತು
೩ ವಿಷ್ಣು ..... ಸ್ತೃಪ್ಯಂತು
೪ ಪ್ರಜಾಪತಿ ... ...ಸ್ತೃಪ್ಯಂತು
೫ ಬ್ರಹ್ಮಾ ........ ತೃಪ್ಯತು
೬ ವೇದಾ ......... ಸ್ತೃಪ್ಯಂತು
೭ ದೇವಾ ......... ಸ್ತೃಪ್ಯಂತು
೮ ಋಷಯ ....... ಸ್ತೃಪ್ಯಂತು
೯ ಸರ್ವಾಣಿಛಂದಾಂಸಿ ........ತೃಪ್ಯಂತು
೧೦ ಓಂಕಾರ ........ಸ್ತೃಪ್ಯಂತು
೧೧ ವಷಟ್ಕಾರ........ಸ್ತೃಪ್ಯಂತು
೧೨ ವ್ಯಾಹೃತಯ.......... ಸ್ತೃಪ್ಯಂತು
೧೩ ಸಾವಿತ್ರೀ ..........ತೃಪ್ಯತು
೧೪ ಯಜ್ಞಾ........... ಸ್ತೃಪ್ಯಂತು
೧೫ ದ್ಯಾವಾಪೃಥಿವೀ .........ತೃಪ್ಯತಾಂ
೧೬ ಅಂತರಿಕ್ಷಂ.......... ತೃಪ್ಯತು
೧೭ಅಹೋರಾತ್ರಾಣಿ .....ತೃಪ್ಯಂತು
೧೮ಸಾಂಖ್ಯಾ.......... ಸ್ತೃಪ್ಯಂತುl
೧೯ಸಿದ್ಧಾ .........ಸ್ತೃಪ್ಯಂತು
೨೦ ಸಮುದ್ರಾ ..........ಸ್ತೃಪ್ಯಂತು
೨೧ ನದ್ಯ............ ಸ್ತೃಪ್ಯಂತುp
೨೨ ಗಿರಯ ಸ್ತೃಪ್ಯಂತು
೨೩ಕ್ಷೇತ್ರೌಷಧಿ ವನಸ್ಪತಿ
ಗಂಧರ್ವ ಅಪ್ಸರಸ... .ಸ್ತೃಪ್ಯಂತು
೨೪ ನಾಗ .........ಸ್ತೃಪ್ಯಂತು
೨೫ ವಯಾಂಸಿ......... ಸ್ತೃಪ್ಯಂತು
೨೬ ಗಾವ ......... ಸ್ತೃಪ್ಯಂತು
೨೭ಸಾಧ್ಯಾ ....... ಸ್ತೃಪ್ಯಂತು
೨೮ ವಿಪ್ರಾ........... ಸ್ತೃಪ್ಯಂತು
೨೯ಯಕ್ಷಾ ..........ಸ್ತೃಪ್ಯಂತು
೩೦ ರಕ್ಷಾಂಸಿ ..........ಸ್ತೃಪ್ಯಂತು
೩೧ ಭೂತಾನಿ.......... ಸ್ತೃಪ್ಯಂತು
೩೨ ಏವಮಂತಾನಿ........ ಸ್ತೃಪ್ಯಂತು.
||ಋಷಿ ತರ್ಪಣಮ್||
ಉತ್ತರಾಭಿಮುಖವಾಗಿ ಉಪವೀತವನ್ನು ಋಷಿ ಮಾಲೆ ಅಂದರೆ ಮಾಲಾಕಾರವಾಗಿ ಹಾಕಿಕೊಂಡು ಎರಡಾವರ್ತಿ (ಎರಡು ಸಲ) ತರ್ಪಣವನ್ನು ಋಷಿಗಳಿಗೆ ಕೊಡುವುದು
೧ ಶತರ್ಚಿನ.......ಸ್ತೃಪ್ಯಂತು
೨ ಮಾಧ್ಯಮಾ ..........ಸ್ತೃಪ್ಯಂತು
೩ ಗೃತ್ಸಮದ.........ಸ್ತೃಪ್ಯತು
೪ ವಿಶ್ವಾಮಿತ್ರ ....... ಸ್ತೃಪ್ಯತು
೫ ವಾಮದೇವ..............ಸ್ತೃಪ್ಯತು
೬ ಅತ್ರಿ . ...........ಸ್ತೃಪ್ಯತು
೭ ಭರದ್ವಾಜ ... ......ಸ್ತೃಪ್ಯತು
೮ ವಸಿಷ್ಠ .........ಸ್ತೃಪ್ಯತು
೯ ಪ್ರಗಾಥಾ .........ಸ್ತೃಪ್ಯಂತು
೧೦ ಪಾವಮಾನ್ಯ......... ಸ್ತೃಪ್ಯಂತು
೧೧ ಕ್ಷುದ್ರಸೂಕ್ತಾ ......... ಸ್ತೃಪ್ಯಂತು
೧೨ ಮಹಾಸೂಕ್ತಾ ........ಸ್ತೃಪ್ಯಂತು
ಆಚಾರ್ಯ ತರ್ಪಣಂ
(ವಿಧಿಃ - ದಕ್ಷಿಣಾಭಿಮುಖಃ ಕುಶಮೂಲಾಗ್ರೆ ; ತರ್ಜನ್ಯಂಗುಷ್ಠ ಮಧ್ಯ ಪಿತೃತೀರ್ಥೇನ ಸಕೃನ್ಮಂತ್ರೇಣ ತ್ರೀನ್ ತ್ರೀನ್ ಅಂಜಲೀನ್ ದದ್ಯಾತ್)
ದಕ್ಷಿಣಾಭಿಮುಖವಾಗಿ ಜನಿವಾರವನ್ನು ಅಂಗುಷ್ಟ ದಲ್ಲಿ ಹಿಡಿದುಕೊಂಡು ಮೂರು ಸಲ ತರ್ಪಣವನ್ನು ಕೊಡುವುದು
೧.ಸುಮಂತು - ಜೈಮಿನಿ - ವೈಶಂಪಾಯನ - ಪೈಲ - ಸೂತ್ರ ಭಾಷ್ಯ -ಭಾರತ - ಮಹಾಭಾರತ – ಧರ್ಮಾಚಾರ್ಯ..... ಸ್ತೃಪ್ಯಂತು
೨.ಜಾನಂತಿ - ಬಾಹವಿ - ಗಾರ್ಗ್ಯ - ಗೌತಮ - ಶಾಕಲ್ಯ - ಬಾಭ್ರವ್ಯ -ಮಾಂಡವ್ಯ - ಮಾಂಡೂಕೇಯಾ
........ಸ್ತೃಪ್ಯಂತು
೩ ಗರ್ಗೀವಾಚಕ್ನವಿ........ ತೃಪ್ಯತು
೪ ವಡವಾಪ್ರಾತೀಥೆಯೀ .......ತೃಪ್ಯತು
೫ ಸುಲಭಾಮೈತ್ರೇಯೀ ........ತೃಪ್ಯತು
೬ ಕಹೋಳಂ ...........ತರ್ಪಯಾಮಿ
೭ ಕೌಷೀತಕಂ ........ತರ್ಪಯಾಮಿ
೮ ಮಹಾಕೌಷೀತಕಂ......... ತರ್ಪಯಾಮಿ
೯ ಪೈಂಗ್ಯಂ .........ತರ್ಪಯಾಮಿ
೧೦ ಮಹಾಪೈಂಗ್ಯಂ ........ತರ್ಪಯಾಮಿ
೧೧ ಸುಯಜ್ಞಂ " ........ತರ್ಪಯಾಮಿ
೧೨ ಸಾಂಖ್ಯಾಯನಂ........ತರ್ಪಯಾಮಿ
೧೩ .ಐತರೇಯಂ ತರ್ಪಯಾಮಿ
೧೪ ಮಹೈತರೇಯಂ........ ತರ್ಪಯಾಮಿ
೧೫ ಶಾಕಲಂ........ತರ್ಪಯಾಮಿ
೧೬ ಬಾಷ್ಕಲಂ .......ತರ್ಪಯಾಮಿ
೧೭ ಸುಜಾತವಸಕ್ತ್ರಂ ........ತರ್ಪಯಾಮಿ
೧೮ ಔದವಾಹಿಂ ........ತರ್ಪಯಾಮಿ
೧೯ ಮಹೌದವಾಹಿಂ.........ತರ್ಪಯಾಮಿ
೨೦ ಸೌಜಾಮಿಂ......ತರ್ಪಯಾಮಿ
೨೧ ಶೌನಕಂ ........ತರ್ಪಯಾಮಿ
೨೨ ಆಶ್ವಲಾಯನಂ......... ತರ್ಪಯಾಮಿ
ಯೇಚಾನ್ಯೇ ಆಚಾರ್ಯಾಸ್ತೇ ಸರ್ವೆ
ತೃಪ್ಯಂತು ತೃಪ್ಯಂತು ತೃಪ್ಯಂತು
||ಪಿತೃ ತರ್ಪಣ||
ಕೈಯಲ್ಲಿರುವ ನಿರ್ಮಾಲ್ಯ ದರ್ಬೆಯನ್ನು ಕೆಳಗಿಟ್ಟು ತಿಲವನ್ನು ಬಲಗೈಯಲ್ಲಿ ಹಾಕಿಕೊಂಡು ಅಪಸವ್ಯ ಮಾಡಿಕೊಂಡು ದಕ್ಷಿಣಾಭಿಮುಖವಾಗಿ ನಾಮ ಗೋತ್ರ ಉಚ್ಚಾರ ಮಾಡಿಕೊಂಡು ಅಂಗುಷ್ಟ ತೋರುಬೆರಳು ಮಧ್ಯದಿಂದ ತರ್ಪಣವನ್ನು ಕೊಡುವುದು
ತಂದೆ .......3 ವಸು
ಅಜ್ಜ .........3 ರುದ್ರ
ಮುತ್ತಜ್ಜ......3 ಆದಿತ್ಯ
ತಾಯಿ.......3
ಅಜ್ಜಿ (ತಂದೆಯ ತಾಯಿ).......3
ಮುತ್ತಜ್ಜಿ (ತಂದೆಯ ತಂದೆಯ ತಾಯಿ)....3
(ತಂದೆಯ ಎರಡನೇ ಹೆಂಡತಿ ಇದ್ದಲ್ಲಿ)......
2
ಇನ್ನು ಎಲ್ಲರಿಗೂ ಒಂದೇ ಸಲ ತರ್ಪಣ ಕೊಡುವುದು
ಅಮ್ಮನ ತಂದೆ......
ಅಮ್ಮನ ತಂದೆಯ ತಂದೆ..
ಅಮ್ಮನ ಅಜ್ಜನ ತಂದೆ....
ಅಮ್ಮನ ಅಮ್ಮ
ಅಮ್ಮನ ಅಜ್ಜಿ
ಅಮ್ಮನ ಮುತ್ತಜ್ಜಿ
ಹೆಂಡತಿ ....ಮಗ....ಮಗಳು
ತಂದೆಯ ಕಡೆಯಿಂದ
ನಿಮ್ಮ ದೊಡ್ಡಪ್ಪ -ಹೆಂಡತಿ-ಮಕ್ಕಳು (ತಂದೆಯ ಅಣ್ಣ)
ನಿಮ್ಮ ಚಿಕ್ಕಪ್ಪ -ಹೆಂಡತಿ-ಮಕ್ಕಳು (ತಂದೆಯ ತಮ್ಮ)
ನಿಮ್ಮ ತಂದೆಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮತ್ತು ಮಕ್ಕಳು
ನಿಮ್ಮ ಒಡಹುಟ್ಟಿದವರು
ನಿಮ್ಮ ಅಣ್ಣ ಅಥವಾ ತಮ್ಮ ಅವರ ಹೆಂಡತಿ ಮತ್ತು ಮಕ್ಕಳು
ನಿಮ್ಮ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮತ್ತು ಮಕ್ಕಳು
ತಾಯಿಯ ಕಡೆಯಿಂದ
ತಾಯಿಯ ಅಣ್ಣ ಅಥವಾ ತಮ್ಮ ಅವರ ಹೆಂಡಂದಿರು ಮಕ್ಕಳು
ತಾಯಿಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು ಮಕ್ಕಳು
ಹೆಂಡತಿ ಕಡೆಯಿಂದ
ಹೆಂಡತಿಯ ತಂದೆ-ತಾಯಿ
ಹೆಂಡತಿಯ ಅಣ್ಣ ಅಥವಾ ತಮ್ಮ ಅವರ ಹೆಂಡಂದಿರು
ಹೆಂಡತಿಯ ಅಕ್ಕ ಅಥವಾ ತಂಗಿ ಅವರ ಗಂಡಂದಿರು
ಮಾತೃ ಸಂಬಂಧಿನಾಂ
ಪಿತೃ ಸಂಬಂಧಿನಾಂ
ಗುರು ಸಪತ್ನೀಕಂ (ವಿದ್ಯೆ ಕೊಟ್ಟ ಗುರು)
ಆಚಾರ್ಯಾಂ (ಸಪತ್ನೀಕಂ ಪುರೋಹಿತರು ಇತ್ಯಾದಿ)
ಸ್ವಾಮಿನಂ ಸಪತ್ನೀಕಂ (ಪೋಷಕರು ಮಾಲೀಕರು)
ಸಖಾಯಾಂ ಸಪತ್ನೀಕಂ( ಸ್ನೇಹಿತರು)
ಜನಿವಾರವನ್ನು ಸವ್ಯ ಮಾಡಿ
ಸೂತ್ರ ನಿಷ್ಪೀಡನಂ
ಜನಿವಾರವನ್ನು ಮಾಲಾಕಾರವಾಗಿ ಮಾಡಿ ನೀವು ಬಿಟ್ಟಂತಹ ತರ್ಪಣದ ನೀರಿನಲ್ಲಿ ಒಮ್ಮೆ ಮುಳುಗಿಸಿ ಅದನ್ನು ಹಿಂಡಬೇಕು
ಪೂರ್ವಕ್ಕೆ ಮುಖ ಮಾಡಿಕೊಂಡು ಹೂವು ಮತ್ತು ನಿರ್ಮಾಲ್ಯ ವನ್ನು ತೆಗೆದುಕೊಂಡು ಕೃಷ್ಣಾರ್ಪಣ ಮಾಡಿ
ಕಾಯೇನ ವಾಚಾ ಮನಸೇಂದ್ರಿಯೆರ್ವಾ ಬುದ್ಧಾತ್ಮನಾವಾ ಪ್ರಕೃತೇ ಸ್ವಭಾವಾತ್ ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ | ಅನೇನ ದೇವ-ಋಷಿ-ಆಚಾರ್ಯ-ಪಿತೃ ತರ್ಪಣೇನ
ಭಗವಾನ್ ಶ್ರೀ ಜನಾರ್ದನ-ವಾಸುದೇವಮೂರ್ತಿ ಪ್ರಿಯತಾಮ ಪ್ರೀತೋ ಭವತು ಶ್ರೀಕೃಷ್ಣಾರ್ಪಣಮಸ್ತು
ಎಂದುಚ್ಚರಿಸಿ ಪವಿತ್ರ ಹಾಕಿಕೊಂಡಲ್ಲಿ ಗಂಟುನ್ನು ಬಿಚ್ಚಿ ನೀರಿನಲ್ಲಿ ಹಾಕಿ ಆಚಮನ ಮಾಡುವುದು
ನ್ಯೂಯಾತಿರಿಕ್ತ ದೋಷ ಪ್ರಾಯಶ್ಚಿತಾರ್ಥಂ
ನಾಮ ತ್ರಯ ಜಪ ಮಹಂ ಕರಿಷ್ಯೇ
ಅಚ್ಯುತಾಯ ನಮಃ | ಅನಂತಾಯ ನಮಃ | ಗೋವಿಂದಾಯ ನಮಃ ಎಂದುಚ್ಚರಿಸುವುದು .
ಸರ್ವ ಪಿತೃ ರನ್ನು ಈ ಕೆಳಗಿನ ಪ್ರಾರ್ಥನೆಯ ಮುಖಾಂತರ ಮನಸ್ಸಿನಿಂದ ಪ್ರಾರ್ಥನೆ ಮಾಡುವುದು
ಗತಿಸಿದ ಹಿರಿಯರ ಅನುಗ್ರಹದಿಂದ ವಂಶವು ಅಭಿವೃದ್ಧಿಯಾಗುತ್ತದೆ.
ಪಿತೃಪ್ರಾರ್ಥನೆ :
ಅಮೂರ್ತಾನಾಂ ಸುಮೂರ್ತಾನಾಂ ಪಿತೃಣಾಂ ದೀಪ್ತತೇಜಸಾಮ್ |
ನಮಸ್ಯಾಮಿ ಸದಾ ಭಕ್ತ್ಯಾ ಧ್ಯಾಯಿನಾಂ ಯೋಗಚಕ್ಷುಸಾಮ್ ||
ದೇವತಾಭ್ಯಃ ಪಿತೃಭ್ಯಶ್ಚ ಮಹಾಯೋಗಿಭ್ಯ ಏವ ಚ |
ನಮಃ ಸ್ವಧಾಯೈ ಸ್ವಾಹಾಯೈ ನಿತ್ಯಮೇವ ನಮೋ ನಮಃ
***
*ಸರ್ವಪಿತೃ ಅಮಾವಾಸ್ಯೆ*🕉️ 🪔🪔🪔🪔🪔🪔🪔🪔🪔
*ಅಮಾವಾಸ್ಯೆ ಶುಭ ಮುಹೂರ್ತ, ಮಹತ್ವ ಮತ್ತು ಆಚರಣೆ ವಿಧಾನ ಹೀಗಿದೆ..!*
ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮಾವಾಸ್ಯೆ, ಪಿತೃ ಮೋಕ್ಷ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆ ಎಂದೂ ಕರೆಯಲ್ಪಡುವ ಹಿಂದೂ ಸಂಪ್ರದಾಯವು 'ಪಿತೃಗಳು' ಅಥವಾ ಪೂರ್ವಜರಿಗೆ ಸಮರ್ಪಿತವಾಗಿದೆ. ದಕ್ಷಿಣ ಭಾರತದಲ್ಲಿ ಅನುಸರಿಸುವ ಪ್ರಕಾರ ಇದನ್ನು 'ಭಾದ್ರಪದ' ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಮಹಾಲಯ ಅಮಾವಾಸ್ಯೆಯು 15 ದಿನಗಳ ಸುದೀರ್ಘ ಶ್ರಾದ್ಧ ಆಚರಣೆಗಳ ಕೊನೆಯ ದಿನವಾಗಿದೆ. ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಈ ದಿನದಂದು ಯಾವುದೇ ಮರಣ ಹೊಂದಿದ ವ್ಯಕ್ತಿಯ ತಿಥಿಯನ್ನು ಲೆಕ್ಕಿಸದೆ ಶ್ರಾದ್ಧ ಆಚರಣೆಯನ್ನು ಮಾಡಬಹುದು.
*ಮಹಾಲಯ ಅಮಾವಾಸ್ಯೆ ಮಹತ್ವ*
ಪಿತೃ ಪಕ್ಷವು 15 ದಿನಗಳ ಅವಧಿಯಾಗಿದ್ದು ಅದು ಎಲ್ಲಾ ಪೂರ್ವಜರಿಗೆ ಅಥವಾ ಪಿತೃಗಳಿಗೆ ಸಂಪೂರ್ಣವಾಗಿ ಸಮರ್ಪಿತವಾಗಿದೆ. ಈ ದಿನಗಳಲ್ಲಿ ಜನರು ಪಿತೃ ತರ್ಪಣ ಮತ್ತು ಪಿಂಡ ದಾನ ಮಾಡುತ್ತಾರೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ 15 ದಿನಗಳ ಅವಧಿಯಲ್ಲಿ ಪಿತೃಗಳು ಭೂಮಿಗೆ ಬರುತ್ತಾರೆ ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ, ಒಬ್ಬ ವ್ಯಕ್ತಿಯು ಈ 15 ದಿನಗಳಲ್ಲಿ ತಮ್ಮ ಪೂರ್ವಜರ ಶ್ರಾದ್ಧವನ್ನು ಮಾಡಲು ವಿಫಲವಾದರೆ ಅಥವಾ ಪಿತೃಗಳ ಮರಣದ ತಿಥಿಯ ಬಗ್ಗೆ ಅವರಿಗೆ ತಿಳಿದಿಲ್ಲದಿದ್ದರೆ, ಅವರು 'ಸರ್ವಪಿತೃ ಮೋಕ್ಷ ಅಮಾವಾಸ್ಯೆ' ದಿನದಂದು ಎಲ್ಲಾ ತರ್ಪಣ ಆಚರಣೆಗಳನ್ನು ಮಾಡಬಹುದು.
*ನವರಾತ್ರಿ ಹಬ್ಬದ ಆರಂಭ*
ಮಹಾಲಯ ಅಮವಾಸ್ಯೆ ತರ್ಪಣ ಅಥವಾ ಪಿಂಡದಾನ ಮತ್ತು ಆಚರಣೆಗಳನ್ನು ಪೂರ್ವಜರ ಆಶೀರ್ವಾದವನ್ನು ಕೋರಲು ಮತ್ತು ಶಾಂತಿಯುತ ಮತ್ತು ಸಮೃದ್ಧ ಜೀವನಕ್ಕಾಗಿ ಅವರ ಆಶೀರ್ವಾದವನ್ನು ಪಡೆಯಲು ಮಾಡಲಾಗುತ್ತದೆ. ಮಹಾಲಯ ಅಮವಾಸ್ಯೆಯನ್ನು ಪಿತೃಪಕ್ಷದ ಕೊನೆಯ ದಿನದಂದು ಆಚರಿಸಲಾಗುತ್ತದೆ ಮತ್ತು ಈ ಅವಧಿಯು ಅತ್ಯಂತ ಮಹತ್ವದ ದಿನವೂ ಆಗಿದೆ. ಬಂಗಾಳದಲ್ಲಿ ಇದನ್ನು 'ಮಹಾಲಯ' ಎಂದು ಆಚರಿಸಲಾಗುತ್ತದೆ, ಇದು ಭವ್ಯವಾದ ದುರ್ಗಾ ಪೂಜೆ ಆಚರಣೆಗಳ ಆರಂಭವನ್ನು ಸೂಚಿಸುತ್ತದೆ. ಈ ದಿನವು ಭೂಮಿಯ ಮೇಲೆ ದುರ್ಗಾ ದೇವಿಯ ಅವರೋಹಣವನ್ನು ಸಂಕೇತಿಸುತ್ತದೆ. ಈ ದಿನವನ್ನು ಅಪಾರ ಭಕ್ತಿ ಮತ್ತು ಉತ್ಸಾಹದಿಂದ ಪೂರ್ವಜರಿಗೆ ಗೌರವವನ್ನು ಸಲ್ಲಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ.
*ಮಹಾಲಯ ಅಮಾವಾಸ್ಯೆಯ ಆಚರಣೆಗಳು*
ಈ ದಿನ, 'ಚತುರ್ದಶಿ', 'ಅಮಾವಾಸ್ಯೆ' ಅಥವಾ 'ಪೂರ್ಣಿಮಾ' ತಿಥಿಯಂದು ಮರಣ ಹೊಂದಿದ ಕುಟುಂಬದ ಸದಸ್ಯರಿಗೆ ತರ್ಪಣ ಮತ್ತು ಶ್ರಾದ್ಧ ವಿಧಿಗಳನ್ನು ಆಚರಿಸಲಾಗುತ್ತದೆ.
ಈ ಬಣ್ಣದ ಬಟ್ಟೆಯನ್ನು ಧರಿಸಿ
ಪಿತೃ ಮೋಕ್ಷ ಅಮಾವಾಸ್ಯೆಯ ದಿನ, ಜನರು ಬೇಗನೆ ಎದ್ದು ಬೆಳಗಿನ ಆಚರಣೆಗಳನ್ನು ಮುಗಿಸಬೇಕು. ಅವರು ಈ ದಿನ ಹಳದಿ ಬಟ್ಟೆಗಳನ್ನು ಧರಿಸಬೇಕು ಮತ್ತು ಬ್ರಾಹ್ಮಣರನ್ನು ತಮ್ಮ ಮನೆಗೆ ಆಹ್ವಾನಿಸಬೇಕು. ಶ್ರಾದ್ಧ ಸಮಾರಂಭವನ್ನು ಕುಟುಂಬದ ಹಿರಿಯ ಪುರುಷ ಆಚರಿಸುತ್ತಾರೆ.
*ಶ್ರಾದ್ಧ ಮಾಡುವ ದಿಕ್ಕು*
ಬ್ರಾಹ್ಮಣರು ಬರುತ್ತಿದ್ದಂತೆ, ಶ್ರಾದ್ಧವನ್ನು ಮಾಡುವವರು ಅವರ ಪಾದಗಳನ್ನು ತೊಳೆದು ಅವರಿಗೆ ಕುಳಿತುಕೊಳ್ಳಲು ಸ್ವಚ್ಛವಾದ ಸ್ಥಳವನ್ನು ಒದಗಿಸಬೇಕು. ಹಿಂದೂ ಧರ್ಮಗ್ರಂಥಗಳಲ್ಲಿ ಆಸನಕ್ಕೆ ನಿರ್ದಿಷ್ಟ ದಿಕ್ಕುಗಳಿವೆ. ದೇವ ಪಕ್ಷ ಬ್ರಾಹ್ಮಣರು ಪೂರ್ವಾಭಿಮುಖವಾಗಿ ಕುಳಿತಿದ್ದರೆ, ಪಿತ್ರ ಪಕ್ಷ ಮತ್ತು ಮಾತೃಪಕ್ಷ ಬ್ರಾಹ್ಮಣರು ಉತ್ತರ ದಿಕ್ಕಿಗೆ ಮುಖಮಾಡಿ ಕುಳಿತಿರಬೇಕು.
*ಇವುಗಳನ್ನು ದಾನ ಮಾಡಿ*
ಮಹಾಲಯ ಅಮಾವಾಸ್ಯೆಯಂದು ಪೂರ್ವಜರು ಅಥವಾ 'ಪಿತೃಗಳನ್ನು' ಧೂಪ, ದೀಪ ಮತ್ತು ಹೂವುಗಳಿಂದ ಪೂಜಿಸಲಾಗುತ್ತದೆ. ಪೂರ್ವಜರನ್ನು ಮೆಚ್ಚಿಸಲು ನೀರು ಮತ್ತು ಬಾರ್ಲಿಯ ಮಿಶ್ರಣವನ್ನು ಸಹ ನೀಡಲಾಗುತ್ತದೆ. ಬಲ ಭುಜದ ಮೇಲೆ ಪವಿತ್ರ ದಾರವನ್ನು ಧರಿಸಲಾಗುತ್ತದೆ. ಈ ವಿಧಿ - ವಿಧಾನಕ್ಕಾಗಿ ವಿಶೇಷವಾದ ಆಹಾರವನ್ನು ತಯಾರಿಸಲಾಗುತ್ತದೆ ಮತ್ತು ಪೂಜಾ ವಿಧಿಗಳನ್ನು ಮುಗಿಸಿದ ನಂತರ ಬ್ರಾಹ್ಮಣರಿಗೆ ಆಹಾರವನ್ನು ನೀಡಲಾಗುತ್ತದೆ. ಬ್ರಾಹ್ಮಣರು ಕುಳಿತುಕೊಳ್ಳುವ ನೆಲದ ಮೇಲೆ ಎಳ್ಳನ್ನು ಕೂಡ ಚಿಮುಕಿಸಲಾಗುತ್ತದೆ.
*ಈ ಕೆಲಸಗಳನ್ನು ಮಾಡಲಾಗುತ್ತದೆ*
ಈ ದಿನವನ್ನು ಪೂರ್ವಜರ ಗೌರವಾರ್ಥವಾಗಿ ಆಚರಿಸಲಾಗುತ್ತದೆ ಮತ್ತು ಕುಟುಂಬದ ಸದಸ್ಯರು ಅವರ ಸ್ಮರಣೆಯಲ್ಲಿ ದಿನವನ್ನು ಕಳೆಯುತ್ತಾರೆ. ಪೂರ್ವಜರ ಆಶೀರ್ವಾದವನ್ನು ಪಡೆದುಕೊಳ್ಳಲು ಮಂತ್ರಗಳನ್ನು ಪಠಿಸಲಾಗುತ್ತದೆ. ಈ ದಿನದಂದು, ಜನರು ತಮ್ಮ ಜೀವನಕ್ಕಾಗಿ ಕೊಡುಗೆ ನೀಡಿದ ತಮ್ಮ ಪೂರ್ವಜರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ. ಅವರು ತಮ್ಮ ಪೂರ್ವಜರಿಂದ ಕ್ಷಮೆ ಯಾಚಿಸುತ್ತಾರೆ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾರೆ.
****
" ಮಹಾಲಯ ಪಕ್ಷ ವಿಶೇಷ "
" ಶ್ರಾದ್ಧದಲ್ಲಿ ಬರುವ ಕೆಲವು ಶಬ್ದಗಳ ಅರ್ಥ ವಿಶೇಷಗಳು "
1. ಸಂಕಲ್ಪ = " ಸಂಕಲ್ಪ: ಕರ್ಮ ಮಾನಸಂ " ಉಕ್ತಿಯಂತೆ ಇಂಥಹ ಕರ್ಮ ಮಾಡುತ್ತೇನೆಂದು ಮನಸ್ಸಿನಿಂದ ನಿಶ್ಚಯಿಸಿ ಉಚ್ಛಾರ ಮಾಡುವುದು!
2. ಕ್ಷಣ = ದೇವ - ಪಿತೃ ಸ್ಥಾನಗಳಲ್ಲಿರುವ ಬ್ರಾಹ್ಮಣರಿಗೆ ಆಮಂತ್ರಣ ಕೊಡುವುದು " ಕ್ಷಣ " ಎನ್ನಿಸುತ್ತದೆ.
3. ಮಧುಮತೀ ಜಪ = ಮಧುವಾತಾ ಋತಾಯತೇ ಮಂತ್ರದ ೩ ಋಕ್ಕುಗಳನ್ನು ಜಪಿಸುವುದು.
4. ಕುಶ = ದರ್ಭೆ
5. ಯುವ = ಅಕ್ಕಿ ಕಾಳು
6. ತಿಲ = ಕರಿ ಎಳ್ಳು
7. ಭೃಂಗರಾಜ = ಗರಗದ ಸೊಪ್ಪು
8. ನವೀತಿ = ಜನಿವಾರವನ್ನು ಮಾಲಾಕಾರವಾಗಿ ಹಾಕಿಕೊಳ್ಳುವುದು
9. ಪ್ರಾಚೀನಾವೀತಿ = ಜನಿವಾರವು ಬಲ ಹೆಗಲ ಮೇಲಿದ್ದು ಎಡಗೈ ಕೆಳಗೆ ಇರುವಂತೆ ಅಪಸವ್ಯ ಹಾಕಿಕೊಳ್ಳುವುದು. ಇಂದು " ಪಿತೃ ಅರ್ಚನೆ " ಮಾಡುವಾಗ ಇರಬೇಕಾದುದು.
10. ಸವ್ಯ = ಜನಿವಾರವು ಎಡ ಹೆಗಲ ಮೇಲಿರುವ ಬಲಗೈ ಕೆಳಗೆ ಇರುವಂತೆ ಹಾಕಿ ಕೊಳ್ಳುವುದು
11. ದರ್ಭ ಪತ್ರ = ತುಂಡು ಮಾಡಿದ ದರ್ಭೆಗಳು
12. ಕೂರ್ಚ = ಏಳು ( ೭ ) ದರ್ಭೆಗಳಿಂದ ಕೂಡಿಸಿ ಮಾಡಿದ ಸಾಧನ. ಇದು ಪಿಂಡಪ್ರಧಾನದಲ್ಲಿ ಅತಿ ಮುಖ್ಯವಾದುದು.
13. ಪಾಣಿ ಹೋಮ = ಬ್ರಾಹ್ಮಣರ ಕೈಯಲ್ಲಿ ಹೋಮ ಮಾಡುವುದು
14. ವಿಕಿರ = ದೇವ - ಪಿತೃ ಬ್ರಾಹ್ಮಣರ ಎಲೆಯ ಮುಂಭಾಗದಲ್ಲಿ ನೀರು ಹಾಕಿ ಅನ್ನವನ್ನು ಉದುರಿಸುವುದು.
15. ಪಾರ್ವಣ = " ತ್ರಯಾಕೃತಂ ಪಾರ್ವಣಂ " ಎಂಬ ಉಕ್ತಿಯಂತೆ ಪಿತೃ, ಪಿತಾಮಹ, ಪ್ರಪಿತಾಮಹ ಈ ಮೂವರಿಗೆ ಕೊಡಲ್ಪಟ್ಟ ಪಿಂಡಗಳಿಗೆ " ಪಾರ್ವಣ " ಎಂದು ಕರೆಯುತ್ತಾರೆ.
16. ಪಾತ್ರೋಚ್ಚಾಲನ = ದೇವ, ಪಿತೃ ಬ್ರಾಹ್ಮಣರ ಭೋಜನಾನಂತರ ಉಚ್ಛಿಷ್ಟದ ಎಲೆಗಳನ್ನು ತೆಗೆದು ಬಿಡುವುದು.
17. ಬ್ರಹ್ಮಾರ್ಪಣ = ಶ್ರಾದ್ಧದಲ್ಲಿ ದೇವ, ಪಿತೃ ಬ್ರಾಹ್ಮಣರ ಉದ್ಧಿಶ್ಯವಾಗಿ ಕೊಡುವ ಅನ್ನವನ್ನು ಕೃಷ್ಣಾರ್ಪಣ ಪೂರ್ವಕ ಅರ್ಪಿಸುವುದು.
18. ಅಷ್ಟಾರ್ಘ್ಯ ಪದಾರ್ಥಗಳು = ಕುಶ ಪುಷ್ಪ ತಿಲ ವ್ರೀಹಿ ಕ್ಷೀರದಧ್ಯಾಜ್ಯಸರ್ಷಪಾ: । - ದರ್ಭೆ, ತುಳಸೀ ( ಹೂ ). ಎಳ್ಳು, ಅಕ್ಕಿ, ಹಾಲು, ಮೊಸರು, ತುಪ್ಪ, ಬಿಳಿ ಸಾಸುವೆ!
19. ಬ್ರಹ್ಮದಂಡ = ದಕ್ಷಿಣೆ - ದರ್ಭೆ - ಎಳ್ಳು ಇವುಗಳನ್ನು ತಟ್ಟೆಯಲ್ಲಿ ಹಾಕಿರುವುದು.
20. ಶಕಲ = ಎರಡು ಉದ್ದವಾದ ದರ್ಭೆಗಳು.
""""""""""""""""""""""""""""""""""""""'""""""""
ಇದು, ಪಿತೃ ಪಕ್ಷದಲ್ಲಿ ಪಿತೃಗಳಿಗೆ ತರ್ಪಣ ಕೊಡುವವರಿಗೆ ಮಾತ್ರ.
( ಬಂಧುಗಳು, ಸ್ನೇಹಿತರು, ಇತರ ಆತ್ಮೀಯರಿಗೂ ತರ್ಪಣ ಕೊಡಬಹುದು)
**
No comments:
Post a Comment