SEARCH HERE

Friday 1 October 2021

ಪ್ರೋಷ್ಟಪದೀ ಭಾಗವತ proshtapadi bhadrapada shukla paksha days

 #ಪ್ರೋಷ್ಟಪದೀ #ಭಾಗವತ #ಪುರಾಣ

Prostapadi : PrOshTa means - Bhadrapada maasa, which usually falls during Aug-Sept. Padi means smarane or recite. Therefore, Bhaagawata shravana is very important during Bhaadrapada maasa hence it is called as PROSTHAPADI. 


ಪ್ರೋಷ್ಠಪದ ಎನ್ನುವುದು  ಭಾದ್ರಪದ ಮಾಸದ ಹೆಸರು. ಅದರಲ್ಲಿಯೂ ಭಾದ್ರಪದ ಮಾಸದ ಶುಕ್ಲಪಕ್ಷದ ಹದಿನೈದು ದಿವಸಗಳಲ್ಲಿ ಮತ್ಸ್ಯರೂಪೀ ಪರಮಾತ್ಮನ  ವಿಶೇಷ ಸನ್ನಿಧಾನವಿರುದರಿಂದ ಇದಕ್ಕೆ ಪ್ರೋಷ್ಠಪದ ಎಂದು ಹೆಸರು ಬಂದಿದೆ. ಪ್ರೋಷ್ಠ ಎಂದರೆ ಶ್ರೇಷ್ಠಜಾತಿಗೆ ಸೇರಿದ ಮೀನು ಎಂದರ್ಥ. ಪರಮಾತ್ಮನು ಮತ್ಸ್ಯಾವತಾರ ಮಾಡಿದ್ದು ಪ್ರೋಷ್ಠ ಜಾತಿಯ ಮೀನು ಆಗಿ. ಮತ್ತೆ  ಪದ ಅಂದರೆ ಆ ಭಗವಂತನ ಪಾದ..  ಪಾದ ಅಂದರೇ ಕೇವಲ ಪಾದ ಅಂತ ಅರ್ಥ ಅಲ್ಲ,  ಭಗವಂತನಿಗೂ ಆತನ ಅವಯವಗಳಿಗೂ ಭೇದವಿಲ್ಲವಾದ್ದರಿಂದ ಪ್ರೋಷ್ಠನಾಮಕ ಭಗವಂತನ ಸ್ವರೂಪ ಅಲ್ಲದೇ ಪರಮಾತ್ಮನ ಪದಗಳಲ್ಲಿ ಮೋಕ್ಷಸ್ಥಾನ ಆದ್ದರಿಂದ ಮೋಕ್ಷಪ್ರಾಪ್ತಿಯ ಕಾಲವೂ.... ಇಂತಹಾ ಪ್ರೋಷ್ಠ ನಾಮಕನಾದ ಭಗವಂತನ ಸ್ವರೂಪವನ್ನು ತಿಳಿಸಿಕೊಡುವ ಶ್ರೀಮದ್ಭಾಗವತವನ್ನು ಪ್ರೋಷ್ಠಪದ ಎಂದು ಕರೆಸಿಕೊಳ್ಳುವ ಭಾದ್ರಪದ ಮಾಸದ ಶುಕ್ಲಪಕ್ಷದ ಹದಿನೈದು ದಿವಸಗಳಲ್ಲಿ ಹೇಳುವ, ಕೇಳುವ, ಅಧ್ಯಯನ ಮಾಡುವುದರಿಂದ ಪ್ರೋಷ್ಠವಾದ ಅರ್ಥಾತ್ ಶ್ರೇಷ್ಠವಾದ ತನ್ನ ಪಾದದ್ವಯದ ದರ್ಶನ ಭಾಗ್ಯವನ್ನು ಕರುಣಿಸುತ್ತಾನೆ ಪರಮಾತ್ಮ, ಅಂದರೆ ತನ್ನ ಪದಯುಗಗಳ ದರ್ಶನಕ್ಕೆ ಮಾಡಬೇಕಾದ ಸಾಧನೆಯನ್ನು ನಮ್ಮಿಂದ ಮಾಡಿಸಿ ತನ್ನ ಪ್ರಸಾದವನ್ನು ಕರುಣಿಸುತ್ತಾನೆ ಆದ್ದರಿಂದ ಪ್ರೋಷ್ಠಪದ ಕೇಳಬೇಕು. ಅಲ್ಲದೇ ಶುಕ್ಲಪಕ್ಷದ ಹದಿನೈದು ದಿವಸದ ಅವಧಿಗೆ ಪ್ರೋಷ್ಠಪದ ಎಂದು ಹೆಸರಿರುವದರಿಂದ ಆ ಅವಧಿಯಲ್ಲಿ ಶ್ರೀಮದ್ಭಾಗವತ ಶ್ರವಣ ಅವಶ್ಯವಾಗಿ ಮಾಡಲೇಬೇಕು , ಈ ವಿಷಯವನ್ನು ಸ್ವತಃ ಶ್ರೀಮದ್ ವೇದವ್ಯಾಸದೇವರೇ ಶ್ರೀಮದ್ಭಾಗವತದಲ್ಲಿ ಹೇಳಿರುವರಾದ್ದರಿಂದ ಇಂದಿನಿಂದ ಬಿಡದೆ ಶ್ರೀಮದ್ಭಾಗವತದ ಶ್ರವಣಾಸಕ್ತರಾಗೋಣ... 


ಭಾದ್ರಪದ ಮಾಸದಲ್ಲಿ ಪ್ರೋಷ್ಟಪದೀ ಭಾಗವತ ಪುರಾಣ ಶ್ರವಣ ಅತ್ಯಂತ #ಶ್ರೇಷ್ಠದಾಯಕ : 


ಶ್ರೀಮದ್ಭಾಗವತ ಮಹಾಪುರಾಣದ ಮಂಗಲಪದ್ಯ

ಜನ್ಮಾದ್ಯಸ್ಯ ಯತೋSನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್

ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ ।

ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ

ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ॥೧॥

“ಜನ್ಮ ಆದ್ಯಸ್ಯ ಯತಃ”-ಜಗತ್ತಿನ ಆದಿಪುರುಷನ ಜನ್ಮ ಎಲ್ಲಿ ಆಯಿತೋ ಅಲ್ಲಿಂದ-“ಇತರತ್ರ ಅನ್ವಯಾತ್” - ಬೇರೆ ಕಡೆಗ ಹೋದವ. ಅಂದರೆ ಕೃಷ್ಣನ ಜನ್ಮ ಸೆರೆಮನೆಯಲ್ಲಿ ಆಯಿತು. ಆತ ಅಲ್ಲಿಂದ ನಂದಗೋಪ-ಯಶೋದೆಯನ್ನು ಸೇರಿದ. ಅಷ್ಟೇ ಅಲ್ಲ “ಪುನಶ್ಚ ಇತರತಃ”- ಅಂದರೆ ಮರಳಿ ಎಲ್ಲಿ ಹುಟ್ಟಿದನೋ ಅಲ್ಲಿಗೆ ಕಂಸನನ್ನು ಕೊಲ್ಲಲು ಬಂದವ. ಹೀಗೆ “ಜನ್ಮಾದ್ಯಸ್ಯ ಯತೋSನ್ವಯಾದಿತರತಶ್ಚ” ಎನ್ನುವ ಈ ಶ್ಲೋಕದ ಸಾಲು ಕೃಷ್ಣಾವತಾರದಲ್ಲಿನ ಕೃಷ್ಣನ ಸಮಸ್ತ ಓಡಾಟವನ್ನು ಹೇಳುತ್ತದೆ.

“ಅರ್ಥೇಷ್ವಭಿಜ್ಞಃ ಸ್ವರಾಟ್”- ಪೂತನಿ, ಕಂಸ, ಶಕಟಾಸುರ, ಗೋಪಿಕಾ ಸ್ತ್ರೀಯರು, ಯಶೋಧೆ-ನಂದಗೋಪ, ವಸುದೇವ-ದೇವಕಿ, ಇಂದ್ರ, ಹೀಗೆ ಯಾರೇ ಇರಲಿ, ಅವರ ಬಳಿ ಯಾವ ರೀತಿ ನೆಡೆದುಕೊಳ್ಳಬೇಕೋ ಹಾಗೆ ನಡೆದುಕೊಂಡು[ಅರ್ಥೇಷು] ತನ್ನ ಸಾರ್ವಜ್ಞವನ್ನು ಕೃಷ್ಣ ಪ್ರಕಟಪಡಿಸಿದ. ಎಲ್ಲಾ ಕಡೆಯಿಂದಲೂ ಎಲ್ಲರಿಗಿಂತ ಹೆಚ್ಚು ಪ್ರಕಾಶಮಾನನಾಗಿ ತನ್ನ ಪೂರ್ಣ ಅವತಾರದ ಮಹಿಮೆಯನ್ನು ತೋರಿದ ಕೃಷ್ಣ ‘ಸ್ವರಾಟ್’ ಎನಿಸಿದ.

“ತೇನೇ ಬ್ರಹ್ಮ ಹೃದಾ ಯ ಆದಿ ಕವಯೇ”- ಯುದ್ಧ ಪ್ರಾರಂಭವಾದ ಆದಿಯಿಂದ, ಯುದ್ಧದ ನಂತರವೂ ಕೂಡಾ ಕೃಷ್ಣ ಆ ಕಾಲದ ಅಪರೋಕ್ಷಜ್ಞಾನಿ(ಕವಿ) ಇಂದ್ರ ಅವತಾರವಾದ ಅರ್ಜುನನ ಮೂಲಕ, ನಮಗೆ ಉಪನಿಷತ್ತಿನ ಸಾರಭೂತವಾದ ಬ್ರಹ್ಮವಿದ್ಯೆ, ಅಧ್ಯಾತ್ಮ ವಿದೆಯನ್ನು ಬಿತ್ತರಿಸಿದ. ತನ್ನ ವಿಶ್ವರೂಪವನ್ನು ಬಿತ್ತರಿಸಿ ತೋರಿದ. ಆದರೂ ಕೂಡಾ-“ಮುಹ್ಯಂತಿ ಯಂ ಸೂರಯಃ”. ಆ ಕಾಲದ ಮಹಾನ್ ಜ್ಞಾನಿಗಳೇ ಕೃಷ್ಣನನ್ನು ಅರಿಯದೆ ಮೋಹಕ್ಕೊಳಗಾದರು! ಪಾಂಡವರು ಕೃಷ್ಣನನ್ನು ತಮ್ಮ ಸಂಬಂಧಿ ಎಂದು ಮೋಹಪಟ್ಟರು. ಗರ್ಗಾಚಾರ್ಯರು,

ಅಶ್ವತ್ಥಾಮ(ರುದ್ರಾವತಾರ), ಬಲರಾಮ(ಶೇಷಾವತಾರ) ಕೂಡಾ ಭಗವಂತನ ಲೀಲೆಯನ್ನು ಕಂಡು ಮೋಹಕ್ಕೊಳಪಟ್ಟರು ಅಥವಾ ಭಗವಂತನನ್ನೇ ಮರೆತರು!

“ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸಗಃ”. ಅಂದಿನ ಕಾಲದ ಎಲ್ಲಾ ಜ್ಞಾನಿಗಳೂ ಕೂಡಾ ಕೃಷ್ಣನನ್ನು ಪಾಂಚಭೌತಿಕ ಶರೀರೀ ಎಂದೇ ತಿಳಿದರು. ಆದರೆ ಅವರ ತಿಳುವಳಿಕೆ ನಿಜವಲ್ಲ[ಮೃಷಾ]. ಭಗವಂತ ತ್ರಿಗುಣಾತೀತ. ಆತನ ದೇಹ ಜ್ಞಾನಾನಂದ ಸ್ವರೂಪವಾದುದು. ಆದರೆ ಇದು ಜನರಿಗೆ ತಿಳಿಯಲಿಲ್ಲ ಅಷ್ಟೇ.

“ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ”: ಇನ್ನೊಂದು ತಪ್ಪು ತಿಳುವಳಿಕೆ ಎಂದರೆ ಕೃಷ್ಣ ಒಬ್ಬ ಸುಳ್ಳುಗಾರ, ಆತ ಕಪಟ ನಾಟಕ ಸೂತ್ರಧಾರಿ ಎಂಬಿತ್ಯಾದಿ ತಪ್ಪು ತಿಳುವಳಿಕೆ. ಆದರೆ ನಿರಸ್ತಕುಹಕನಾಗಿ ಸಾತ್ವಿಕರಿಗೆ, ಸಜ್ಜನರಿಗೆ ಯಾವುದು ಹಿತವೋ ಅದು ‘ಸತ್ಯ’ ಎಂದು ತೋರಿಸಿಕೊಟ್ಟವ ಶ್ರೀಕೃಷ್ಣ. ಇಂತಹ ಸತ್ಯಃ ನಾಮಕ ಭಗವಂತನ ಸರ್ವವಿಲಕ್ಷಣವಾದ(ಪರಮ್) ಹಾಗೂ ನಮಗೆ ಅತ್ಯಂತ ಸಮೀಪದ ಅವತಾರ ಕೃಷ್ಣಾವತಾರ.

ನಮ್ಮಲ್ಲಿ ಇಂದೂ ಕೂಡಾ ಹೆಚ್ಚಿನವರು ಕೃಷ್ಣ ಒಬ್ಬ ಸುಳ್ಳುಗಾರ, ಆತ ಮೋಸದಿಂದ ದ್ರೋಣ-ಕರ್ಣರನ್ನು ಕೊಲ್ಲಿಸಿದ, ಧರ್ಮರಾಯನಿಂದ ಸುಳ್ಳು ಹೇಳಿಸಿದ, ಬೆಣ್ಣೆ ಕದ್ದ, ಗೋಪಿಯರ ಸೀರೆ ಕದ್ದ, ಇತ್ಯಾದಿಯಾಗಿ ತಿಳಿದು ಗೊಂದಲಕ್ಕೊಳಗಾಗುವವರಿದ್ದಾರೆ. ಇದು ಯಾವುದು ಧರ್ಮ ಹಾಗೂ ಯಾವುದು ಅಧರ್ಮ; ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎನ್ನುವ ಪರಿಜ್ಞಾನವಿಲ್ಲದಾಗ ಆಗುವ ಗೊಂದಲ. ಸಂಕ್ಷಿಪ್ತವಾಗಿ ಕೆಲವು ಘಟನೆಗಳನ್ನು ಹೇಳಬೇಕೆಂದರೆ: ಮೊದಲನೆಯದಾಗಿ ದ್ರೋಣಾಚಾರ್ಯರನ್ನು ಧರ್ಮರಾಯನಿಂದ ಸುಳ್ಳು ಹೇಳಿಸಿ ಕೊಲ್ಲಿಸಿರುವುದು. ದ್ರೋಣಾಚಾರ್ಯ ಒಬ್ಬ ಬ್ರಹ್ಮರ್ಷಿ. ಅದೊಂದು ಮಹಾನ್ ಚೇತನ. ಆದರೆ ಅದ್ಯಾವುದೋ ಪ್ರಾರಾಬ್ಧಕ್ಕೊಳಗಾಗಿ ಅವರು ಅಧರ್ಮದ ಪರ ಯುದ್ಧಕ್ಕೆ ನಿಂತಿದ್ದರು. ದಿನಕ್ಕೆ ಕನಿಷ್ಠ ಹತ್ತುಸಾವಿರ ಸೈನಿಕರನ್ನು ಕೊಲ್ಲುವುದಾಗಿ ಶಪತತೊಟ್ಟು, ಅದಕ್ಕಾಗಿ ಹಗಲೂ ರಾತ್ರಿ ಹೋರಾಟದಲ್ಲಿ ತೊಡಗಿದ್ದರು. ಇದು ಅವರಿಗೆ ಇನ್ನೆಂದೂ ಮೇಲಕ್ಕೇಳಲು ಅಸಾಧ್ಯವಾದ ತಮಸ್ಸಿನ ಮಾರ್ಗವಾಗಿತ್ತು. ಹೀಗಿರುವಾಗ ದ್ರೋಣಾಚಾರ್ಯರ ಉದ್ಧಾರ ಇದ್ದದ್ದು ಅವರ ಬದುಕಿನಲ್ಲಲ್ಲ, ಬದಲಿಗೆ ಅವರ ಸಾವಿನಲ್ಲಿ. ಅವರೊಬ್ಬರ ಸಾವಿನಿಂದ ದಿನಕ್ಕೆ ಹತ್ತುಸಾವಿರ ಸೈನಿಕರ ಪ್ರಾಣಹಾನಿ ತಪ್ಪುತ್ತದೆ ಮತ್ತು ಅವರು ಕೊಲೆಪಾತಕದಿಂದ ಪಾರಾಗುತ್ತಾರೆ. ಇಂತಹ ಮಹಾನ್ ಚೇತನವನ್ನು ಉದ್ಧಾರಮಾಡಬೇಕು ಎಂದು ಬಯಸಿದ ಕೃಷ್ಣ, ಧರ್ಮರಾಯನಿಂದ ಸುಳ್ಳು ಹೇಳಿಸಿದ. ಇದು ಸಜ್ಜನರ ಉದ್ಧಾರಕ್ಕೋಸ್ಕರ ಭಗವಂತ ನುಡಿಸಿದ ದೊಡ್ಡ ಸತ್ಯ. ತಿರುಳನ್ನು ನೋಡದೇ ಮೇಲ್ನೋಟದಲ್ಲಿ ನಿಂತರೆ ಈ ಸತ್ಯ ನಮಗೆ ಅರ್ಥವಾಗುವುದಿಲ್ಲ ಅಷ್ಟೇ. ಇನ್ನೊಂದು ಘಟನೆ ದುರ್ಯೋಧನನ ತೊಡೆಯನ್ನು ಭೀಮನಿಂದ ಕೃಷ್ಣ ಮುರಿಸಿರುವುದು. ಇದನ್ನು ಬಲರಾಮ ಕೂಡಾ ಅಧರ್ಮ ಎಂದು ವಿರೋಧಿಸುತ್ತಾನೆ. ಆಗ ಕೃಷ್ಣ ಕೊಟ್ಟ ಉತ್ತರ ರೋಚಕ. ಕೃಷ್ಣ ಹೇಳುತ್ತಾನೆ: ಧರ್ಮ ಆಚರಣೆ ಶ್ರೇಯಸ್ಸನ್ನು ತರುತ್ತದೆ ನಿಜ. ಆದರೆ ಯಾವುದು ಧರ್ಮ, ಯಾವುದು ಅಧರ್ಮ ಎಂದು ತೀರ್ಮಾನ ಮಾಡುವುದು ಕಷ್ಟ” ಎಂದು. ಕೃಷ್ಣ ದುರ್ಯೋಧನನನ್ನು ಉದ್ಧೇಶಿಸಿ ಹೇಳುತ್ತಾನೆ: “ನಿನ್ನ ತೊಡೆ ಮುರಿದದ್ದು ಅಧರ್ಮ ಎಂದಿಯಲ್ಲ, ಆ ತೊಡೆ ಎಂತಹ ತೊಡೆ? ತುಂಬಿದ ಸಭೆಗೆ ಒಬ್ಬ ಸ್ತ್ರೀಯನ್ನು ಅರೆನಗ್ನಾವಸ್ತೆಯಲ್ಲಿ ಎಳೆದು ತಂದು, ತೊಡೆತಟ್ಟಿ, ‘ನನ್ನ ತೊಡೆಯಮೇಲೆ ಬಂದು ಕೂಡು’ ಎಂದು ಹೇಳಿದೆಯಲ್ಲ; ಪರಸ್ತ್ರೀಗೆ ತಟ್ಟಿದ ತೊಡೆಗೆ ಇದು ಕನಿಷ್ಠ ಶಿಕ್ಷೆ. ಇಷ್ಟು ಮಾಡದೇ ಹೋದರೆ ಈ ದೇಶದಲ್ಲಿ ಧರ್ಮದ ಸ್ಥಿತಿ ಏನಾದೀತು” ಎಂದು ಕೇಳುತ್ತಾನೆ ಕೃಷ್ಣ. ಈ ರೀತಿ ಮೇಲ್ನೋಟಕ್ಕೆ ಎಲ್ಲವೂ ವ್ಯತಿರಿಕ್ತವಾಗಿ ಕಂಡರೂ, ಅದಕ್ಕಿಂತ ಬೇರೆ ಆಯಾಮದಲ್ಲಿ ಸತ್ಯ-ಧರ್ಮವನ್ನು ನಮ್ಮ ಮುಂದೆ ತೆರೆದು ತೋರಿಸಿದ ಭಗವಂತನ ಅಪೂರ್ವ ಅವತಾರ ಕೃಷ್ಣಾವತಾರ. ಈ ಸತ್ಯ ತಿಳಿದಾಗ ಮಾತ್ರ ನಮಗೆ ಕೃಷ್ಣಾವತಾರ ಅರ್ಥವಾಗುತ್ತದೆ. ಬನ್ನಿ, ಇಂತಹ ಸತ್ಯ ಸ್ವರೂಪನಾದ ಕೃಷ್ಣನನ್ನು ಧ್ಯಾನ ಮಾಡುತ್ತಾ ಭಾಗವತವ ಪುರಾಣವನ್ನು ಎಲ್ಲರೂ ಶ್ರವಣ ಮಾಡೋಣ.

🌺🌺🌺🌺🌺🌺

Very much thankful to Pujya Bannanje Govindacharyaru

🌺🌺🌺🌺🌺🌺🌺

Prostapadi Shabdarth :

*******

sanskritadalli purva bhadrapada haagu uttara bhadrapada nakshatragalige prostapada anta karitare mattondu hesaraduyaava hunnimeyolage prostapada ideyo adu prostapadi (pournima shabda streelinga iruvudarinda prostapadi aagutte) vattare bhadhrapada hunnimege aa hesru bantu....

NOTE:

Nakshatra suktadalliyu saha Prostapadaso...prostapada idara ullekha ide (Nakshatra sukta image uploaded in the comment box)


अ॒ज एक॑पा॒दुद॑गात्पु॒रस्ता॓त् । विश्वा॑ भू॒तानि॑ प्रति॒ मोद॑मानः । तस्य॑ दे॒वाः प्र॑स॒वं य॑न्ति॒ सर्वे॓ । प्रो॒ष्ठ॒प॒दासो॑ अ॒मृत॑स्य गो॒पाः । वि॒भ्राज॑मानस्समिधा॒ न उ॒ग्रः । आ‌உन्तरि॑क्षमरुह॒दग॒न्द्याम् । तग्ं सूर्यं॑ दे॒वम॒जमेक॑पादम् । प्रो॒ष्ठ॒प॒दासो॒ अनु॑यन्ति॒ सर्वे॓ ॥ 25 ॥

---- Taitthariya samhitha : Kaanda 3

तैत्तिरीय ब्रह्मणम् । अष्टकम् – 3 प्रश्नः – 1

तैत्तिरीय संहिताः । काण्ड 3 प्रपाठकः – 5 अनुवाकम् – 1


Prostapadi : PrOshTa means - Bhadrapada maasa, which usually falls during Aug-Sept. Padi means smarane or recite. Therefore, Bhaagawata shravana is very important during Bhaadrapada maasa hence it is called as PROSTHAPADI.

heegu naavu adannu arthaisabahudu

🌺🌺🌺🌺🌺🌺

#ಪುರುಷ #ಧರ್ಮ-೭

[ ಶ್ರವಣ ]

ಶ್ರೋತೃಗಳಲ್ಲಿ ತ್ರಿವಿಧ

ಊರು ಬೊಮ್ಮಲಾಪುರ.

ಬೊಂಬೆಗಳನ್ನು ಮಾಡುವವ ಒಬ್ಬನಿದ್ದ.

ಒಂದೆ ತರಹದ ಮೂರು ಗೊಂಬೆಗಳನ್ನು ಮಾಡಿದ.

ಎಲ್ಲವು ಒಂದೆ ತರಹ- ಬಣ್ಣ ಮುಖ,ವರ್ಚಸ್ಸು,ತಲೆಗೂದಲು ಮುಂತಾದುವುಗಳು.

ವ್ಯತ್ಯಾಸವನ್ನು ಕಂಡು ಹಿಡಿಯಲು ಕಷ್ಟ.

ಒಬ್ಬ ರಾಜನ ಆಸ್ಥಾನಕ್ಕೆ ಮಾರಲು ಹೋದ.

ಮೂರು ಗೊಂಬೆಗಳು ಗಾತ್ರದಲ್ಲಿ,ಸೌಂದರ್ಯದಲ್ಲಿ ಎಲ್ಲದರಲ್ಲೂ ಒಂದೆ ತರಹವಾಗಿತ್ತು.

ರಾಜನು ಆ ಗೊಂಬೆಯ ಬೆಲೆ ಏನೆಂದು ಕೇಳಲು,

ಆ ಕಲಾಕಾರ ಕ್ರಮವಾಗಿ ಮೂರು ಬೊಂಬೆಗಳನ್ನು ತೋರಿಸುತ್ತಾ ಹೇಳಿದ.

ಮೊದಲಯದಕ್ಕೆ ಐನೂರು ರೂಪಾಯಿಗಳು,

ಎರಡನೆಯದಕ್ಕೆ ಐವತ್ತು ರೂಪಾಯಿಗಳು,

ಮೂರನೆಯದು ಐದು ರೂಪಾಯಿಗಳು ಎಂದ.

ಆಗ ರಾಜನಿಗೆ ಆಶ್ಚರ್ಯವಾಯಿತು.

ಮೂರು ಗೊಂಬೆಗಳು ಆಕೃತಿಯಲ್ಲಿ ಒಂದೆ ರೀತಿಯಲ್ಲಿಇದೆ.

ಮತ್ತೆ ವ್ಯತ್ಯಾಸವೇಕೆ? ಎಂದು ಪ್ರಶ್ನಿಸಿದ.

ಆ ಕಲಾಕಾರ ಒಂದು ಗೊಂಬೆಯನ್ನು ಎತ್ತಿ ಹಿಡಿದು ಅವರ ಬಲ ಕಿವಿಯೊಳಗೆ ಒಂದು ಕಡ್ಡಿ ತುರುಕಿಸಲು

ಅದು ನೇರವಾಗಿ ಎಡಕಿವಿಯಿಂದ ಹೊರಗೆ ಬಂದಿತು. ಇದರ ಬೆಲೆ ಐದು ರೂಪಾಯಿಗಳು ಎಂದನು.

ಎರಡನೆಯ ಗೊಂಬೆಯನ್ನು ತೆಗೆದುಕೊಂಡು ಕಿವಿಯೊಳಗೆ ಕಡ್ಡಿಯನ್ನು ತುರುಕಿಸಲು ಅದು

ಬಾಯಿಂದ ಹೊರಗೆ ಬಂದಿತು.

ಇದರ ಬೆಲೆ ಐವತ್ತು ರೂಪಾಯಿಗಳು ಎಂದನು.

ಬಳಿಕ ಆತ ಮೂರನೆಯ ಗೊಂಬೆಯನ್ನು ತೆಗೆದುಕೊಂಡು ಕಿವಿಯೊಳಗೆ ಕಡ್ಡಿ ತೂರಿಸಲು

ಅದು ಹೊರಗೆ ಬಾರದೇ ಗೊಂಬೆಯ ಎದೆಯೊಳಗಿಳಿಯಿತು. ಇದರ ಬೆಲೆ ಐನೂರು

ರೂಪಾಯಿಗಳು ಎಂದನು.

ಕಲಾಕಾರನ ಚಮತ್ಕಾರವನ್ನು ನೋಡಿದ ರಾಜ ಆಶ್ಚರ್ಯಚಕಿತನಾದನು.

ಇದೇ ಶ್ರೊತೃಗಳ ತ್ರಿವಿಧ ಸ್ವರೂಪ.

ಕೆಲವರು ಹರಿಕಥೆ/ಪ್ರವಚನವನ್ನು ಕೇಳುತ್ತಾರೆ,

ಬಲಗಿವಿಯಲ್ಲಿ ಕೇಳಿಸಿಕೊಂಡಿದ್ದನ್ನು ಎಡಗಿವಿಯಿಂದ ಬಿಟ್ಟು ಬಿಡುತ್ತಾರೆ.

ಇನ್ನು ಕೆಲವರು ಕೇಳುತ್ತಾರಾದರೂ ಮಧ್ಯೆ ಮಧ್ಯೆ ಮಾತನಾಡುತ್ತಾ ಇರುತ್ತಾರೆ.

ಮತ್ತೆ ಕೆಲವರು ಮಾತ್ರ ಕೇಳಿದ್ದನ್ನು ನೇರವಾಗಿ ಮನನ ಗೈದು ತಮ್ಮೋಳಗೆ (ಹೃದಯದೊಳಗೆ)

ಇಳಿಸಿಕೊಳ್ಳುವರು

ಭಾದ್ರಪದ ಮಾಸ. ಪ್ರೋಷ್ಟಪದಿ ೭-೩೦ಕ್ಕೆ ರಾಯರ ಮಠದಲ್ಲಿರಬೇಕು.

ಪ್ರವಚನ ಕೇಳಲು ಅಸಕ್ತಿ ಇದೆ. ವಿಧಾನ ಸೌಧದಲ್ಲಿ ಕೆಲಸಮಾಡುವ ಗುಮಾಸ್ತೆ.

ಹೋಗಿ ಕುಳಿತು ಕೇಳಿಸಿಕೊಳ್ಳುತ್ತಿರುವಾಗ

ಕೇಳಿದ್ದನ್ನು ಮನಸ್ಸಿನಲ್ಲಿ ನಿಲ್ಲಿಸಿಕೊಳ್ಳಲು ಸಾಧ್ಯವಿಲ್ಲ ಆತಂಕ.ಆಫೀಸ್ ಯೋಚನೆ.

ಹತ್ತು ಗಂಟೆಗೆ

ವಿಧಾನ ಸೌಧದಲ್ಲಿರಬೇಕು. ಸ್ಕೂಟರ್ ಇಲ್ಲ. ಬೈಸಿಕಲ್ಲು ಮುಳ್ಳು ತಗಲಿ ಪಂಕ್ಚರ್ ಆಯಿತು.

ಅದನ್ನು ಹಾಕಿಸಲು ತಳ್ಳಿಕೊಂಡು ಬಹಳ ದೂರ ಹೋಗಬೇಕು.

ತಾನು ಇಟ್ಟು ಕೊಂಡಿದ್ದ ಸೈಕಲ್ ಪಂಪ್ನಿಂದ ಗಾಳಿ ಹೊಡೆದ. ಸೈಕಲ್ಲು ಹತ್ತಿದ

ಹಾಗೂ ಹೀಗು ಸೌಥ್ ಎಂಡ್ಗೆ ಬಂದ. ಇಲ್ಲೂ ಸೈಕಲ್ಲು ಶಾಪ್ ಇಲ್ಲ. ಮತ್ತೆ ಪಂಪ್ ಹೊಡೆದ.

ಮಾವಳ್ಳಿತನಕ ಬಂದ. ನಂತರ ಗಾಳಿ ತುಂಬಿ ಕಾರ್ಪೊರೇಶನ್ ತನಕ.. ಮರುವಿಡಿ ಹೈಕೋರ್ಟ್ ತನಕ.

ಇವನು ವಿಧಾನ ಸೌಧ ತಲಪಲು ೧೨ ಘಂಟೆಯಾಯಿತು. ಮೇಲಧಿಕಾರಿಗಳು ಇವನು ಲೇಟ್ ಆಗಿ ಬಂದಿದ್ದಕ್ಕೆ

ತರಾಟೆಗೆ ತೆಗೆದುಕೊಂಡರು. ತನ್ನ ಕಷ್ಟವನ್ನು ಅವನು ಎಷ್ಟೋ ಹೇಳಿದರೂ ಪ್ರಯೊಜನವಾಗಲಿಲ್ಲ.

ಎಲ್ಲಿ ತೂತುಬಿದ್ದಿತ್ತೊ ಅದನ್ನು ಮುಚ್ಚಿಸಿ ಗಾಳಿತುಂಬಿದ್ದರೆ ಗಾಳಿ ನಿಲ್ಲುತ್ತಿತ್ತು .ತೂತಿನಷ್ಟಕ್ಕೆ ತೂತು ಬಿಟ್ಟು

ಗಾಳಿ ತುಂಬಿಸಿದರೆ ನಿಲ್ಲುವುದೆ. ಅದು ವ್ಯರ್ಥವಾಗುತ್ತಿತ್ತು.

ಭಕ್ತಿಯಿಂದ ಕೇಳುವವರು ಮನೆಗೆ ಬರುವಾಗ ಪಂಕ್ಚರ್ ಆಗಿರುತ್ತದೆ

ಮತ್ತೆ ಮರುದಿನ ಕೇಳುತ್ತಾರೆ ಕೇಳಿದುದೆಲ್ಲಾ ಮನಸ್ಸಿನಲ್ಲಿ ಉಳಿಯುವುದಿಲ್ಲ.

ನಾವು ಕೇಳುವ ವಿಷಯ, ಆಧ್ಯಾತ್ಮ,.ಚಿಂತಿಸುವುದು ವಿಷಯ ಸಾಕ್ಷಾತ್ಕಾರ ದುಃಖ.

ಪ್ರವಚನ ಎಲ್ಲರೂ ಕೇಳಬಹುದಾದರೊ ಸುಜೀವಿಗಳಿಗೆ ಮಾತ್ರ ಅದು ರಂಜಿಸುವುದಲ್ಲದೆ

ದುರುಳ ಮೂಢರು ಬಲ್ಲರೇ ಎಂಬ ಶ್ರೀ ಪುರಂದರ ದಾಸರ ಒಂದು ಕೀರ್ತನೆಯ ಮಾದರಿ ಇದು.

ಹರಿಕಥಾಮೃತ ಸೇವೆ ಹರಿದಾಸರಲ್ಲದಲೇ

ದುರುಳ ಮೂಢರು ಬಲ್ಲರೆ!

* * *

ಶ್ರವಣದಿ ಶ್ರವಣೇಂದ್ರಿಯ ಪವಿತ್ರವು

ಶ್ರವಣವೇ ಮುಖ್ಯ ಜ್ಞಾನ ಸಾಧನವು!!

ಶ್ರೀ ವಿಷ್ಣು ತೀರ್ಥರು ಭಾಗವತ ಕಥಾ ಶ್ರವಣದಿಂದ ಕಿವಿಗಳು ಪವಿತ್ರವಾಗುವುವು.

ಕಲುಷಿತವಾದ ಮನಸ್ಸು ಬಿಟ್ಟು , ಶುದ್ಧವಾಗಿ ಕೇಳಿದವರು ಕೊನೆಗೆ ಭಗವಂತನ

ಪಾದಾರವಿಂದವನ್ನು ಸೇರುತ್ತಾರೆಂದು ಭಾಗವತ ಸಾರೋದ್ಧಾರದಲ್ಲಿ ಭಾಗವತ

ವಚನವನ್ನೇ ಉದ್ಧರಿಸಿ ಹೀಗೆ ಹೇಳಿದ್ದಾರೆ.

ಪಿಬಂತಿ ಯೆ ಭಗವತ ಆತ್ಮನಃ ಸತಾಂ

ಕಥಾಮೃತಂ ಶ್ರವಣ ಪುಟೇಷು ಸಂಭೃತಂ!!

ಪುನಂತಿ ತೇ ವಿಷಯ ವಿದೂಷಿತಾಶಯಂ

ವ್ರಜಂತಿ ತಚ್ಚರಣ ಸರೋರುಹಾಂತಿಕಂ!!

(ಭಾಗವತ ೨-೨-೪೦)

ಪ್ರವಚನಕ್ಕೆ, ಹರಿಕಥೆಗೆ ಇಷ್ಟೇಲ್ಲ ಮಹಿಮೆ ಇದ್ದರೂ ಕೂಡ ಕೇವಲ

ಹೊತ್ತು ಕಳೆಯಲು ಯಾಂತ್ರಿಕವಾಗಿ ಕೇಳಿದರೆ ಪ್ರಯೋಜನವಿಲ್ಲ. ಟಿ ವಿ ನೋಡಿದಹಾಗೆ.

ಒಬ್ಬ ರಾಜನು ಕಥೆ ಹೇಳಲು ಒಬ್ಬ ಮಂತ್ರಿಯನ್ನು ನಿಯೋಜಿಸಿದ್ದ,

ರಾಜನಿಗೆ ಕಥೆ ಕಡೆಗೆ ಲಕ್ಷ್ಯ ಪೂರೈಸುತ್ತಿರಲಿಲ್ಲ.

ಇದನ್ನು ಗಮನಿಸಿದ ಮಂತ್ರಿ ರಾಜನಿಗೆ ಹೇಳಿದ

"ನೀವು ಮಧ್ಯೆ ಮಧ್ಯೆ ಹೂಂ ಗುಟ್ಟಬೇಕು.

ಆವಾಗಲೆ ನಿಮಗೆ ಸ್ಪೂರ್ತಿ ಬರುತ್ತದೆ", ಎಂದ,

ಮಂತ್ರಿ ಕಥೆ ಹೇಳುತ್ತಿದ್ದ ರಾಜಾ ಮಾತ್ರ ಸುಮ್ಮನೆ ಹೂಂ ಗುಟ್ಟುತ್ತಿದ್ದ.

ರಾಜನನ್ನು ಪರೀಕ್ಷಿಸಲೋಸಗ

"ಹೇ ರಾಜರೆ ಒಂದು ಊರಿನಲ್ಲಿ ಅಣ್ಣತಮ್ಮಂದಿರು ಇಬ್ಬರಿದ್ದರು. ಕಾಲಾಂತರದಲ್ಲಿ

ಆ ಅಣ್ಣ ತಮ್ಮನಿಗೆ ಸರಿಯಾದ ಪಾಲು ಕೊಡಲು ನಿರ್ಧರಿಸಿದ. ಅದಕ್ಕಾಗಿ ಒಂದು ಬಾವಿ ತೋಡಿದ.

ಆಮೇಲೆ ಅವನಿಗೆ ಅನಿಸಿತು. ಆ ಬಾವಿಯನ್ನು ಏಕೆ ತಮ್ಮನಿಗೆ ಬಿಡಬೇಕೆಂದು ಯೋಚಿಸಿ

ಅಣ್ಣ ಆ ಬಾವಿಯನ್ನು ಎತ್ತಿ ತನ್ನ ಎತ್ತಿನ ಬಂಡಿಯಲ್ಲಿ ಹಾಕಿಕೊಂಡು ಹೊರಟ ಎಂದಾಗ-"

ರಾಜನು ಅಭ್ಯಾಸಬಲದಿಂದ " ಹೂಂ" ಅಂದನೇ ಹೊರತು ಬಾವಿಯನ್ನು ಎತ್ತಿ ಎತ್ತಿನ ಬಂಡಿಯ ಮೇಲೆ

ಇಡಲು ಸಾಧ್ಯವೇ- ಇಲ್ಲವೇ " ಎಂಬ ಬಗ್ಗೆ ವಿವೇಚನೆಯೇ ಇರಲಿಲ್ಲ.

ರಾಜನ ಪ್ರತಿಕ್ರಿಯೆ ಏನೇನು ಇಲ್ಲ. ಮಂತ್ರಿಯು ಇವನಿಗೆ ಕಥೆ ಹೇಳಿ ಪ್ರಯೋಜನವಿಲ್ಲವೆಂದು

ತನ್ನ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟು ಹೊರಟುಹೋದ.

ಹೀಗೆ ಶ್ರವಣವು ಒಂದು ತಾಂತ್ರಿಕ ಕ್ರಿಯೆಯಾಗಬಾರದು.

ಒಟ್ಟಿನಲ್ಲಿ ಶ್ರವಣ ಮಾಡಿದ ವಿಷಯವು ಮನನವಾಗಿ ಜ್ಞಾನ ಹಾಗೂ ಧ್ಯಾನಕ್ಕೆ

ವಿಷಯವಾಗಬೇಕು.

ಧ್ಯಾನವೆಂದರೆ- ಧ್ಯಾನಕ್ಕೆ ಕುಳಿತ ವ್ಯಕ್ತಿಯ ಮೈಮೇಲೆ ಒಂದು ಹಾವು ಹರಿದರೆ ತನ್ನ

ಮೈಮೇಲೆ ಹರಿಯುತ್ತಿದೆ ಎಂಬುದು ಅವನಿಗೆ ತಿಳಿಯಬಾರದು. ಇದು ಸಾಧ್ಯವೇ. ಬೊಂಬಡ

ಬಡಿದುಕೊಂಡ ಊರೆಲ್ಲರೂ ಸೇರುವ ಹಾಗೆ ಮಾಡುವನು. ಅದು ಅವನ ಧ್ಯಾನ. ಅಂತಹ ಸಂದರ್ಭದಲ್ಲಿ.

ಮತ್ತೆ ನಾನು ಒಬ್ಬನ ಮೈಮೇಲೆ ಹರಿಯುತ್ತಿದ್ದೇನೇ ಎಂಬುದು ಹಾವಿಗೆ ತಿಳಿಯಬಾರದಂತೆ.

ಹಾಗಾದರೆ ಮಾತ್ರ ಅದು ದಿಟವಾದ ಧ್ಯಾನ.

ಪುರಂದರ ದಾಸರ ಕೀರ್ತನೆಯ ಚರಣದಲ್ಲಿ ಬರುತ್ತದೆ

"ನಾನು" ಎಂಬುದ ಬಿಟ್ಟು ಜ್ಞಾನಿಗಳೊಡಗೂಡಿ

ಏನಾದರೂ ಹರಿ ಪ್ರೇರಣೆಯೆಂದು

ಧ್ಯಾನಿಸಿ ಮೌನದಿ ಪುರಂದರ ವಿಠಲನ...

ಕೀರ್ತನೆ ಮತ್ತು ಧ್ಯಾನ ಅದರದರ ಪರಿಪಕ್ವಾವಸ್ಥೆಯಲ್ಲಿ

ಒಂದೇ ವಿಧದ ಹಂತವನ್ನು ಮುಟ್ಟುತ್ತದೆ

ಧ್ಯಾನದಲ್ಲಿ ನಾವು ಸುಮ್ಮನಿರಬೇಕು

ದೇವರು ನಮ್ಮಲ್ಲಿ ಮಾತನಾಡಬೇಕು ಅದು ಧ್ಯಾನ.

ಕೀರ್ತನೆಯಲ್ಲಿ ದೇವರು ಸುಮ್ಮನಿರಬೇಕು

ನಾವು ಅವನಲ್ಲಿ ಮಾತನಾಡಬೇಕು. ಅದು ಕೀರ್ತನೇ.

ಇಂತಹ ಈ ದಿವ್ಯ ಅವಸ್ಥೆಯ ಪ್ರಾಪ್ತಿಗಾಗಿಯೇ ನಾವು ಸಾಧನೆ ಮಾಡುತ್ತಿರಬೇಕು.

ನಮ್ಮಲ್ಲಿ ಎರಡು ಇಲ್ಲ.

" ಸಂತತಂ ಚಿಂತಯೇನಂತಂ ಅಂತ ಕಾಲೆ ವಿಶೇಷತಃ"

ಸಂತತವು ಅನಂತನನ್ನು ಚಿಂತಿಸಿರಿ.

ಅಂತ್ಯಕಾಲದಲ್ಲಿ ವಿಶೇಷವಾಗಿ ಚಿಂತಿಸಿರಿ ಎಂಬುದೇ ಶ್ರೀ ಮಧ್ವರ ಆದೇಶ.

ಅಂತಹ ಧ್ಯಾನ ಮಾಡುವ ಚಿಂತನೆ ಮಾಡುವ ಜ್ಞಾನಿಯೆ ಪರಮಾತ್ಮನಿಗೆ

ಬಹಳ ಪ್ರಿಯನಾಗುವನು.

ಧ್ಯಾನ ಎಂಬ ಶಬ್ದ ಬಂದು ವಿಷಯ ಎತ್ತಲೆತ್ತಲಿಗೋ ಹೋಗಿಬಿಡುತ್ತದೆ

ವಿಷಯಕ್ಕೆ ಬರೋಣ..

ಶ್ರವಣ ಮಾಡಿದ ವಿಷಯ ಸ್ವಲ್ಪವಾದರೂ ಅದು ಮನನವಾಗಿ

ಅನುಷ್ಠಾನಕ್ಕೆ ಬರಬೇಕು ಎಂಬಲ್ಲಿಗೆ ಚರ್ಚಿಸುತ್ತಾ ಇದ್ದೇವು.

ಈ ಮುಂದಿನ ಕಥೆ ಬಹುಶಃ ಇದನ್ನು ಪುಷ್ಟಿಕರಿಸುತ್ತದೆ .

ಒಬ್ಬ ಕಳ್ಳ ಮಗನಿಗೆ ಹೇಳಿದ

ನೋಡು ಮಗ ಯಾವ ಯಾವ ದೇವಸ್ಥಾನಗಳಲ್ಲಿ ಹರಿಕಥೆ ಪ್ರವಚನಗಳು ನಡೆಯುತ್ತವೆಯೋ

ಅಲ್ಲೆಲ್ಲ ನೀನು ಹೋಗಬೇಕು. ಆದರೆ ಅವರು ಹೇಳುವುದನ್ನು ನೀನು ಸ್ವಲ್ಪವಾದರೂ

ಕೇಳಿಸಕೊಳ್ಳಕೂಡದು. ಅಲ್ಲಿ ಸೇರಿದ ಜನರು ಭಾವುಕತೆಯಿಂದ ಮೈಮರೆತು ಕಥಾ ಪ್ರವಚನದಲ್ಲಿ

ಕೇಳುವಾಗ ನೀನು ನಿನ್ನ ಕೈಚಳಕವನ್ನು ತೋರಿಸಬೇಕು.

ಅಲ್ಲಿಯ ವಿಷಯಗಳು ನಿನ್ನ ಕಿವಿಗೆ ಬೀಳದಂತೆ

ನೀನು ನಿನ್ನ ಕಿವಿಗೆ ನಿನ್ನ ಬೆರಳುಗಳನ್ನು ಹಾಕಿಕೊಳ್ಳಬೇಕು ಎಂದು ಬುದ್ಧಿವಾದ ಹೇಳಿದ.

ಒಂದು ದಿನ. ಆ ಹುಡುಗ ದಾರಿಯಲ್ಲಿ ಹೋಗುವಾಗ ಒಂದು ಕಡೆ ರಾಮನವಮಿ ಪ್ರವಚನ ನಡೆಯುತ್ತಿದೆ

ಅದನ್ನು ಕೇಳಬಾರದೆಂದು ಎರಡೂ ಕಿವಿಗಳಿಗೆ ಬೆರಳು ತುರುಕಿಸಿಕೊಂಡ.

ಹಾಗೆ ನಡೆದು ಬರುತ್ತಿದ್ದಾಗ ಕಾಲಿಗೆ ಗಾಜಿನ ಚೂರು ಚುಚ್ಚಿಕೊಂಡಿತು. ಅದನ್ನು ತೆಗೆಯಲು ಕಿವಿಗಿಟ್ಟ

ಬಲಬೆರಳನ್ನು ತೆಗೆದ.

ಆಗ ಪ್ರವಚನಕಾರರು ಹೇಳುವ ಮಾತೋಂದು ಅಕಸ್ಮಾತಾಗಿ ಕಿವಿಗೆ ಬಿದ್ದುಬಿಟ್ಟಿತು.

" ಪರಮಾತ್ಮ ಸರ್ವ ವ್ಯಾಪಿ. ನಾವು ಮಾಡುವ ಎಲ್ಲಾ ಒಳ್ಳೆಯ ಕೆಟ್ಟ ಕೆಲಸಗಳನ್ನು ಅವನು ನೋಡುತ್ತಲೇ

ಇರುತ್ತಾನೆ"

ಇದನ್ನು ಕೇಳಿಸಿಕೊಂಡ ಹುಡುಗ ಮತ್ತೆ ಕಿವಿಗೆ ಬೆರಳನ್ನು ತಗಲಿಸಿ ಮನೆಗೆ ಹೊರಟು ಹೋದ.

ಸ್ವಲ್ಪ ದಿನ ಕಳೆಯಿತು. ಒಂದು ದಿನ ಅಪ್ಪ ಮಗ ಒಂದು ಮನೆಗೆ ನುಗ್ಗಿ ಕೆಲವು ಆಭರಣಗಳನ್ನು

ಕದಿಯುವಾಗ, ಆ ಹುಡುಗನು

" ಅಪ್ಪ ! ಅಪ್ಪ! ಅವನು ನೋಡುತ್ತಾನೆ ಅವನು ನೋಡುತ್ತಾನೆ! ಎಂದು ಕೂಗಿಕೊಂಡ. ಆಭರಣಗಳನ್ನು ಅಲ್ಲೇ

ಬಿಸಟು ಓಟ ಕಿತ್ತು ಹೋದರು ಇಬ್ಬರೂ.

ಕಳ್ಳ ಮಗನನ್ನು ಕೇಳೀದ "ಯಾರುನೋಡಿದರೂ! ಎಲ್ಲಿದ್ದಾನೆ ಅವ!" ಎಂದಾಗ ಆ ಮಗ ಹೇಳಿದ,

ಅಪ್ಪ ಮೊನ್ನೆ ಒಬ್ಬ ಹರಿದಾಸರು " ದೇವರು ಎಲ್ಲ ಕಡೆ ಇದ್ದಾನೆ ಅವನು ಎಲ್ಲವನ್ನು ನೋಡುತ್ತಾನೆ" ಎಂದು

ಹೇಳಿದರು ಎಂದಾಗ ಮಗನ ಮಾತನ್ನು ಕೇಳಿಸಿಕೊಂಡ ಆ ತಂದೆಯಲ್ಲಿ ಅದ್ಭುತ ಪರಿವರ್ತನೆ ಅಯಿತು.

ತಕ್ಷಣ ಆತನು ಚೋರ ವೃತ್ತಿಯನ್ನು ತ್ಯಜಿಸಿದನಂತೆ. ಇದು ನಿಜವಾಗಿ ಸತ್ಕಥಾ ಶ್ರವಣ ಪರಿಣಾಮ.

ಆದುದರಿಂದಲೇ ಶ್ರವಣವೇ ಮುಖ್ಯ ಸಾಧನೆಯಾಗಬೇಕು.

ಶ್ರವಣ ಮಾಡಿದ ವಿಷಯ ವೇಳೆ ಸ್ವಲ್ಪವಾದರೂ ಅದು ಮನನವಾಗಿ ಅನುಷ್ಠಾನಕ್ಕೆ ಬರಬೇಕು.

ಶ್ರವಣ ಮನಕಾನಂದವೀವುದು ಎನ್ನುತ್ತಾರೆ ಶ್ರೀ ಜಗನ್ನಾಥ ದಾಸರು-

ಶ್ರೀ ಹರಿಕಥಾಮೃತಸಾರದ ತಮ್ಮ ಕರುಣಾ ಸಂಧಿಯಲ್ಲಿ

ಹರಿಕಥೆ ಅಥವಾ ಪ್ರವಚನ ಮೋಕ್ಷಕ್ಕೆ ಮುಖ್ಯ ಸಾಧನೆ

ಗುರೂಪದೇಶಬಲದಿಂದ ಹೇಳುತ್ತೇನೆ ಹರಿಯ ಅತ್ಯಂತ ಭಕ್ತರು ಕೇಳತಕ್ಕದ್ದು

ಸ್ವಾಭಾವಿಕವಾಗಿ ಭಕ್ತರು ಸೂಜಿಗಲ್ಲಿಗೆ ಸೂಜಿ ಹೋಗಿ ಹಿಡಿಯುವಂತೆ ದೇವರ ಭಜನೆಯಲ್ಲಿ ಆನಂದಾತಿಶಯದಿಂದ ಆಸ್ತರಾಗುವರು. ಮೋಕ್ಷೋದ್ದೇಶ, ಭಜಿಸುವ ಭಕ್ತರಿಗೆ ಮುಖ್ಯಫಲ ವೈಕುಂಠ,

ಮುಖ್ಯಾ ಮುಖ್ಯಫಲ ಮಹಾರಾದಿಲೋಕ,

ಅಮುಖ್ಯಫಲ ವೈಷಯಿಕವೆಂದು ಮುಂದೆ ಹೇಳುವುದನ್ನು ಸಂಕ್ಷೇಪದಿಂದ ನಿರೂಪಿಸಿಸುತ್ತಾರೆ-

ಶ್ರವಣ ವೆಂಬ ಪದ್ಯದಿಂದ,

ಸ್ವಭಾವ ಭಕ್ತರಿಗೆ ಶ್ರೋತ್ರಮನಸ್ಸುಗಳಿಗೆ ಆನಂದಾತಿಶಯ ದೊರಕುವುದು

ಇತರರಿಗೆ ಜನ್ಮಾದಿ ಸಂಸ್ಕೃತಿಯಲ್ಲಿರುವ ಕಷ್ಟ ಬಿಡಿಸುವುದು.

ನಾನಾ ವಿಧ ಸೌಖ್ಯ ವೆಂಬ ಶಬ್ದಾದಿವಿಷಯ ಭೋಗವನ್ನು ಇಲ್ಲಿ ಮತ್ತು ಪರಲೋಕದಲ್ಲಿ ಸಹ ,

ಕೊಟ್ಟು ರಕ್ಷಿಸುವುದು,

ಹೀಗೆ ಕಷ್ಟ ನಿವೃತ್ತಿ, ಇಷ್ಟಪ್ರಾಪ್ತಿ ಎಂಬ ಫಲವು ನಿಷ್ಕಪಟ ಭಕ್ತರಿಗೆ

ಕಂಡಿರುವುದರಿಂದ ಲೋಕಪವಿತ್ರವಾದ ರಮಾಪತಿಯ ಶುಭ ಚರಿತ್ರೆಯನ್ನು ಬ್ರಾಹ್ಮಣರೇ

ಮೊದಲಾದವರು ಮನಃ ಪೂರ್ವಕವಾಗಿ ಶ್ರವಣಾದಿಗಳಿಂದ ನಿತ್ಯದಲ್ಲಿಯೂ ಸೇವಿಸುವುದು,

ಇದರಿಂದ

ನಿವೃತ್ತತರ್ಷ್ಯೆರುಪಗೀಯಮಾನಾದ್ಭವೌಷಧಾಚ್ಛೋತ್ರಮನೋಭಿರಾಮಾತ್!

ಕ ಉತ್ತಮಶ್ಲೋಕಗುಣಾನುವಾದಾತ್ಪುಮಾನ್ವಿರಜ್ಯೇತ ವಿನಾ ಕೃತಘ್ನಾತ್!

ಎಂಬ ಭಾಗವತಾರ್ಥ ವಿವರಿಸಲ್ಪಟ್ಟಿತು.


|| ನಾಹಂ ಕರ್ತಾ ಹರಿಃ ಕರ್ತಾ ||

|| ಶ್ರೀಗುರ್ವಂತರ್ಗತ ಶ್ರೀಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||

ಲೇಕಕರಿಗೆ ನನ್ನ ಅನಂತ #ನಮನಗಳು

***


ಪ್ರೋಷ್ಠಪದಿ ಭಾಗವತ ನಿಮಿತ್ತ 


ಶ್ರೀಮದ್ಭಾಗವತ ದಶಮ ಸ್ಕಂಧಗಳಿಂದ ದ್ವಾದಶ ಮಾತುಗಳನ್ನು ಅನುಷ್ಠಾನ ಮಾಡಬೇಕು 🙏


೧) ಪ್ರಥಮ ಸ್ಕಂಧ

ಪರೀಕ್ಷಿತರಾಜಾ ಮನೆಬಿಟ್ಟು ಗಂಗಾತೀರಕ್ಕೆ ಬಂದ....

ಇದರಿಂದ ತಿಳಯಬೇಕಾದ್ದು

ಅಭಿಮಾನ ಬಿಡಬೇಕು

ಎಂಬ ಮೋಕ್ಷ ಧರ್ಮ ಕಲಿಯತಕ್ಕದ್ದು


೨) ದ್ವಿತೀಯ ಸ್ಕಂಧ

ಯೋಗ್ಯರ‌ ಮೂಲಕ ಭಗವತ್ಕಥಾ ಶ್ರವಣ ಮಾಡಬೇಕು

ಪರೀಕ್ಷಿತ ರಾಜಾ ಶುಕಾಚಾರ್ಯರಿಂದಲೇ ಶ್ರವಣ ಮಾಡಿದ .

ತಾನೇ ನೋಡಿದರೆ (ಓದಿದರೆ) ಬರುತ್ತಿತ್ತಲ್ಲ ಅಂದರೆ ಸಂಪ್ರದಾಯವಿಲ್ಲ


ತೃತೀಯ ಸ್ಕಂಧ

ತತ್ವ ನಿಶ್ಚಯ ಮಾಡಿಕೊ ಅಂತ ಹೇಳಿದರು


ಚತುರ್ಥ ಸ್ಕಂಧ

ತತ್ವ ನಿಶ್ಚಯ ಮಾಡಿಕೊಳ್ಳದಿದ್ದರೆ ಬಾಧಕಾ ಉಂಟು ಅಂತ ಹೇಳಿದರು


ಪಂಚಮ ಸ್ಕಂಧ

ತತ್ವನಿಶ್ಚಯ ಮಾಡಿಕೊಂಡರೆ ಸಾರ್ಥಕವಾಗೋದು ಅಂತ ಹೇಳಿದರು


೬) ಷಷ್ಠ ಸ್ಕಂಧ

ಉದಾಸೀನ ಮಾಡಿದರೆ ಮಹಾ ಅನರ್ಥ ಎಂದು ಹೇಳಿದರು


೭) ಸಪ್ತಮ ಸ್ಕಂಧ 

ಬಹುದಾರಢ್ಯ ಮಾಡಬೇಕೆಂದು ಹೇಳಿದರು


೮) ಅಷ್ಟಮ ಸ್ಕಂಧ

ಪ್ರಯತ್ನ ಬಿಡಬಾರದೆಂದು ಹೇಳಿದರು


೯) ನವಮ ಸ್ಕಂಧ

ವಿರಕ್ತಿ ಮಾಡಬೇಕೆಂದು ಹೇಳಿದರು


೧೦) ದಶಮ ಸ್ಕಂಧ

ಭಕ್ತಿನೇ ಮಾಡಬೇಕೆಂದು ಕರಾರುವಾಕ್ಕಾಗಿ ಹೇಳಿದರು

ಉದಾಹರಣೆಗೆ... ಗೋಪಿಕಾಸ್ತ್ರೀಯರಂತೆ


೧೧) ಏಕಾದಶ ಸ್ಕಂಧ

ಉಪಾಸನೆಯನ್ನೇ  ಮಾಡಬೇಕೆಂದು ಹೇಳಿದರು

ಉದಾಹರಣೆಗೆ...

ಉದ್ಧವನಿಗೆ ಉಪದೇಶಿಸಿದಂತೆ


೧೨) ದ್ವಾದಶ ಸ್ಕಂಧ

ಉಪಾಸನೆಯಿಂದ ಅಪರೋಕ್ಷಜ್ಞಾನ ಪ್ರಾಪ್ತಿಯಾಗುವುದು ಎಂದು ಹೇಳಿದರು

 

ಮಧ್ಯಾರಾಧನಾ ಮಹಾಪರ್ವಕಾಲದ ಮಹಾನುಭಾವರ ಹಿತೋಕ್ತಿಯಂತೆ ದ್ವಾದಶ ಮಾತುಗಳನ್ನು ಯಥಾ ಯೋಗ್ಯತಾನುಸಾರವಾಗಿ

ಪ್ರಯತ್ನಪೂರ್ವಕ ಅನುಷ್ಠಾನಕ್ಕೆ ತಂದುಕೊಳ್ಳುವಂತೆ 

ಶ್ರೀ ದಾಸಾರ್ಯರ ಅಂತರ್ಗತ

ಶ್ರೀ ಹರಿವಾಯುಸಮಸ್ತಗುರುಗಳು ಅನುಗ್ರಹಿಸಲಿ ಕರುಣಿಸಲಿ

***



No comments:

Post a Comment