SEARCH HERE

Showing posts with label ವಿಶ್ವಾಸ- ಜಾಗೃತ ಕಾಂತೇಶ ಬ್ರಾಂತೇಶ ಮತ್ತು ಶಾಂತೇಶ kadaramandalagi kantesha. Show all posts
Showing posts with label ವಿಶ್ವಾಸ- ಜಾಗೃತ ಕಾಂತೇಶ ಬ್ರಾಂತೇಶ ಮತ್ತು ಶಾಂತೇಶ kadaramandalagi kantesha. Show all posts

Friday, 12 March 2021

ಜಾಗೃತ ಕಾಂತೇಶ ಬ್ರಾಂತೇಶ ಮತ್ತು ಶಾಂತೇಶ kadaramandalagi kantesha

 ಜಾಗೃತ ಆಂಜನೇಯರ ಕಾರಣಿಕ ಕ್ಷೇತ್ರಗಳು :-


ಸನಾತನ ಧರ್ಮದಲ್ಲಿ ಹಿಂದೂಗಳು ತೀರ್ಥಯಾತ್ರೆ ಮಾಡಿ ಪುಣ್ಯ ಸಂಪಾದನೆ ಮಾಡಿಕೊಳ್ಳುವುದು ಪುರಾಣ ಇತಿಹಾಸ ಗಳಿಂದಲೂ ಬಂದಿದೆ ಕಾಶಿ, ರಾಮೇಶ್ವರ, ಬದರಿ, ಕೆದಾರ, ತಿರುಪತಿ, ಧರ್ಮಸ್ಥಳ, ಶೃಂಗೇರಿ, ಹೀಗೆ ಕ್ಷೇತ್ರಗಳಿಗೆ ಹೋಗಿ

ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿ  ಬರುವುದು ಸಂಪ್ರದಾಯದಂತೆ ಆಗಿದೆ. ನಮ್ಮ ಹಿಂದೂ ಗಳಿಗೆ ಜೀವಮಾನದಲ್ಲಿ ಒಮ್ಮೆ ಕಾಶಿಯಾತ್ರೆ ಮಾಡಬೇಕು ಎಂಬ ಹಂಬಲ ಇರುತ್ತದೆ. ಅಂದುಕೊಂಡಂತೆ ಎಲ್ಲರಿಗೂ ಒದಗಿ ಬರುವುದು ಕಷ್ಟ. ಆಸೆ ಹಾಗೆಯೇ ಇರುತ್ತದೆ. ಅಂಥ ವರು ಕಾಶಿಯಾತ್ರೆಯ ಪುಣ್ಯ ಪಡೆಯುವ ಅಪೇಕ್ಷಿತರು, ಒಂದೇ ದಿನ ಜಾಗೃತ “ಆಂಜನೇಯರ” ಕಾರಣಿಕ ಕ್ಷೇತ್ರಗಳಿಗೆ ಹೋಗಿ ಬಂದರೆ ಕಾಶಿಯಾತ್ರೆ ಮಾಡಿದಷ್ಟೇ ಪುಣ್ಯ ಸಂಪಾ ದಿಸಬಹುದು ಎಂಬ ನಂಬಿಕೆ. ಈ ಕ್ಷೇತ್ರಗಳು ಕರ್ನಾಟಕದಲ್ಲಿ ಇರುವುದು ವಿಶೇಷ. ಈ ಆಂಜನೇಯರ ಹೆಸರು ಈಶ್ವರನ ಹೆಸರಿನಂತೆ ಇದೆ. ಕಾಂತೇಶ, ಬ್ರಾಂತೇಶ ಮತ್ತು ಶಾಂತೇಶ.

ಈ ಮೂರು ಆಂಜನೇಯರ ದೇಹದಲ್ಲಿ ಸಾಲಿಗ್ರಾಮ ಸೇರಿರುವುದು ವಿಶೇಷವಾಗಿದೆ. ಮೂರು ಆಂಜನೇಯರು

ಬೇರೆ ಬೇರೆ ಕ್ಷೇತ್ರದಲ್ಲಿ ನೆಲೆಸಿದ್ದಾರೆ. 


ಕದರಮಂಡಲಗಿ ಕಾಂತೇಶ:- ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಎಂಬ ಗ್ರಾಮದಲ್ಲಿ “ಕಾಂತೇಶ” ನೆಲೆಸಿದ್ದಾನೆ. ಈ ಆಂಜನೇಯನ ಮುಖ ಎಲ್ಲ ದೇವರಂತೆ ಎದುರಿಗೆ ಇದೆ. ಕದರಗಿ ಅರ್ಥ- ಕದರ- ಕಿರಣ, ಗೀ ಅಂದರೆ ಗಮನ ಕೊಡುವವನು,ಮಂಡಲ ಅಂದರೆ ಸೂರ್ಯ ಮಂಡಲ. ಕಾಂತೇಶ ಆಂಜನೇಯನಿಗೆ ಮೂರು ಅವತಾರ ವಿದೆ ಎನ್ನುತ್ತಾರೆ. ಬೆಳಗ್ಗೆ ಹನುಮನ ಬಾಲ್ಯ, ಮಧ್ಯಾಹ್ನ ಯೌವ್ವನ ( ಭೀಮಾವತಾರ) ರಾತ್ರಿಗೆ ಮದ್ಭಾವತಾರ

ಪಡೆದಿರುತ್ತಾನೆ. ದ್ವಾಪರಯುಗದಲ್ಲಿ ಪಾಂಡವರ ಮೊಮ್ಮಗ ಜನಮೇಜಯರಾಯ ಆಂಜನೇಯನನ್ನು ಸ್ಥಾಪಿಸಿದ್ದಾನೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಈ ಆಂಜನೇಯನ ಕಣ್ಣುಗಳಲ್ಲಿ ಸಾಕ್ಷಾತ್ ಪರಮೇಶ್ವರನಿಂದ ಪಡೆದ ಸೂರ್ಯ ಸಾಲಿಗ್ರಾಮವಿದೆ. ಇದು ಗಂಡಕಿ ನದಿಯಲ್ಲಿ ದೊರಕಿದ್ದು.  “ಸೂರ್ಯ ಸಾಲಿಗ್ರಾಮ” ಆದುದರಿಂದ ಇದರ ಪ್ರಭೆ ಕಾಂತಿ ಯುತವಾಗಿದ್ದು ಕಣ್ಣುಗಳಿಂದ ಅದು ಹೊರ ಹೊಮ್ಮುತ್ತದೆ ಹೀಗಾಗಿ ಈ ಸ್ವಾಮಿಗೆ “ಕಾಂತೇಶ” ಎಂಬ ಹೆಸರು ಬಂದಿತು. ಈ ದೇವಾಲಯದಲ್ಲಿ ದಾಸ ಸಾಹಿತ್ಯದ ಪ್ರಮುಖ ದಾಸರು ‘ಕನಕ ದಾಸ’ ರು ಕೆಲವು ಕಾಲ ಇಲ್ಲಿ ನೆಲೆಸಿದ್ದು “ಮೋಹನ ತರಂಗಿಣಿ” ಎಂಬ ಕಾವ್ಯವನ್ನು ರಚಿಸಿದ್ದಾರೆ. ಎಂಬ ಕಾರಣ 

ಇದು ಪವಿತ್ರ ಕ್ಷೇತ್ರ ಎನ್ನುವುದಕ್ಕೆ ಮತ್ತಷ್ಟು ಒತ್ತು ನೀಡಿದೆ  ಇಲ್ಲಿ ನಿತ್ಯ ಪೂಜೆ, ಹಬ್ಬ ಹರಿ ದಿನಗಳಲ್ಲಿ  ವಿಶೇಷ ಆಚರಣೆ ಗಳು ನಡೆಯುತ್ತವೆ. ಈ ಆಂಜನೇಯನನ್ನು  ನಂಬಿ ಬಂದು ಆರಾಧಿಸಿದ ಭಕ್ತರ ಇಷ್ಟಾರ್ಥಗಳು ನೆರವೇರಿದ ಸಂಗತಿಗಳು ಎಲ್ಲರ ಬಾಯಲ್ಲೂ ಕೇಳಿ ಬರುತ್ತದೆ.


ಸಾತೇನಹಳ್ಳಿ ಶಾಂತೇಶ:- ಕದರಮಂಡಲಗಿಯಿಂದ 12 ಕಿಲೋಮೀಟರ್ ದೂರದಲ್ಲಿ ಇದೆ. ಹಿರೇಕೆರೂರು ತಾಲೂ ಕಿನ ‘ಸಾತೇನಹಳ್ಳಿ’ ಪುಟ್ಟ ಗ್ರಾಮ.ಇಲ್ಲಿ ನೆಲೆಸಿರುವ ಆಂಜನೇಯ ಶಕ್ತಿಶಾಲಿಯಾದ ಸಾಲಿಗ್ರಾಮವನ್ನು ನೆತ್ತಿಯ ಮೇಲೆ ಧರಿಸಿದ್ದಾನೆ. ಈ ಆಂಜನೇಯ ವಿಗ್ರಹವು ಬ್ರಹ್ಮಣ್ಯ ತೀರ್ಥರಿಂದ ಸ್ಥಾಪಿಸಲ್ಪಟ್ಟಿದೆ. ನೆತ್ತಿಯ ಮೇಲೆ ಸಾಲಿಗ್ರಾಮ ಇರುವ ಈ ಆಂಜನೇಯನ ಮುಖ ಭಾವ ತುಂಬಾ ಶಾಂತ

ವಾಗಿದೆ ಆದ್ದರಿಂದ ಈತ “ಶಾಂತೇಶ” ಎಂಬ ಹೆಸರಿನಿಂದ ಕರೆಸಿಕೊಂಡಿದ್ದಾನೆ.  ಮತ್ತು ಎಲ್ಲರ ಮನೋಭಿಲಾಷೆ 

ಬಹಳ ಬೇಗ ಈಡೇರುವುದರಿಂದ, ಮಹಾ ಮಹಿಮಾನ್ವಿತ 

“ಶಾಂತೇಶಸ್ವಾಮಿ” ಎಂಬುದು ಭಕ್ತರ ನಂಬಿಕೆ.  


ಇಲ್ಲಿನ ವಿಶೇಷ ಅಂದರೆ, ಆಶ್ವೀಜ ಮಾಸದ  ನವರಾತ್ರಿ ಉತ್ಸವ ಅದ್ಧೂರಿಯಾಗಿ ಮಾಡುತ್ತಾರೆ. ಇಲ್ಲಿಗೆ ಬಂದ ಸಂತಾನಾಪೇಕ್ಷೆತ ದಂಪತಿಗಳ ಬಯಕೆ ಈಡೇರಿದೆ. ಶ್ರವಣ ನಕ್ಷತ್ರದ (ವಿಜಯ ದಶಮಿ) ದಿನ ಗಿಡಮೂಲಿಕೆಗಳಿಂದ ವೈದ್ಯ ಪದ್ಧತಿಯಲ್ಲಿ ತಯಾರಿಸಿದ ಔಷಧಿಯನ್ನು ಬಾಳೆ ಹಣ್ಣಿನ ಜೊತೆ ಪ್ರಸಾದದ ರೂಪದಲ್ಲಿ ದಂಪತಿಗಳಿಗೆ ಕೊಡುತ್ತಾರೆ. ಮಕ್ಕಳ ಹಂಬಲದಿಂದ ಬಂದ  ದಂಪತಿಗಳು ಆಂಜನೇಯನ ಸೇವೆ ಮಾಡಿ ಇಲ್ಲಿ ಕೊಡುವ ಪ್ರಸಾದ ಸೇವನೆ ಮಾಡಿದ ಎಷ್ಟೋ ತಾಯಂದಿರು ಮಕ್ಕಳನ್ನು ಪಡೆದು ತೃಪ್ತಿಯ ನಗೆ ಬೀರಿದ್ದಾರೆ. ಹಾಗೆ ಪಂಚಮಶನಿ, ಸಾಡೇ ಸಾತಿಯಂಥ  ಶನಿ ಕಾಟ, ಗ್ರಹ ದೋಷ ಗಳಿಗೆ  ಪರಿಹಾರ ಪಡೆದಿದ್ದಾರೆ. ಇಲ್ಲಿ ಹರಕೆ ಹೊತ್ತವರು ತೆಂಗಿನ ಕಾಯಿಯನ್ನು ಅರ್ಪಿಸುತ್ತಾರೆ. ಈ ದೇವಸ್ಥಾನದಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ದರ್ಶನ ಮಾಡುವ ಸೌಲಭ್ಯವಿದೆ.


ಬ್ರಾಂತೇಶ:- ಈ ದೇವಸ್ಥಾನ ಶಿವಮೊಗ್ಗ  ಜಿಲ್ಲೆಯ ಶಿಕಾರಿ ಪುರ ತಾಲೂಕಿನಲ್ಲಿ ಇದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ಇದ್ದ ದೇವಸ್ಥಾನವನ್ನು ಕಿಡಿಗೇಡಿಗಳು ಕೆಡವಿ ಆಂಜನೇಯನ ನ್ನು ಸಮೀಪದ ಕೆರೆಯಲ್ಲಿ ಹಾಕಿದ್ದರಂತೆ,ಊರಿನ ಪಾಳೇ ಗಾರನ ಕನಸಿನಲ್ಲಿ ಸ್ವಾಮಿ ಬಂದು ನನ್ನನ್ನು ಕೆರೆಯಿಂದ  ಹೊರತೆಗೆದು ಗುರು ವ್ಯಾಸರಾಯರ ಮೂಲಕ ಪ್ರತಿಷ್ಠಾಪಿಸು ಎಂದು ಹೇಳಿದಂತಾಯಿತು. 


ಅದೇ ಪ್ರಕಾರ ದೇವಸ್ಥಾನದ ಹತ್ತಿರದ ದೊಡ್ಡ ಕೆರೆಯಲ್ಲಿ ಕಲ್ಲಿನ ದೋಣಿಯಲ್ಲಿ ವಿರಾಜಮಾನನಾಗಿದ್ದ ಆಂಜನೇಯನ ನ್ನು ದೋಣಿ ಸಮೇತ ತಂದರು. (ಆಗ ತಂದ ಕಲ್ಲಿನ ದೋಣಿ ಯನ್ನು  ದೇವಸ್ಥಾನದ ಹೊರಪ್ರಕಾರದಲ್ಲಿ ಇಟ್ಟಿದ್ದಾರೆ.)  ಕೆರೆಯಿಂದ ತೆಗೆದು ತರುವಾಗ ಆಂಜನೇಯನ ಮೂಗಿನ ಬಳಿ ಸ್ವಲ್ಪ ಭಿನ್ನವಾಯಿತು. ಭಿನ್ನ ವಿಗ್ರಹವನ್ನು ಪ್ರತಿಷ್ಠಾಪಿ ಸುವುದಿಲ್ಲ ಎಂದು ಹೇಳಿದಾಗ ಗುರುಗಳ ಸ್ವಪ್ನದಲ್ಲಿ ಆಂಜ ನೇಯನೇ ಬಂದು ಕೃಷ್ಣಾ ನದಿಯಲ್ಲಿ ಮುಳುಗು ಹಾಕಿದರೆ ಸಾಲಿಗ್ರಾಮ ಸಿಗುತ್ತದೆ. ಅದನ್ನು ಮೂಗಿನ ಭಾಗಕ್ಕೆ ಸೇರಿಸಿ ಪ್ರತಿಷ್ಠಾಪಿಸು ಎಂದನಂತೆ. ಸ್ವಪ್ನದಂತೆ ಕೃಷ್ಣಾ ನದಿಯಿಂದ ತಂದ ಸಾಲಿಗ್ರಾಮವನ್ನು  ಹನುಮನ  ಮೂಗಿಗೆ ಜೋಡಿಸಿ ಪ್ರತಿಷ್ಠಾಪಿಸಿದರು ಎಂಬುದು ದಂತಕಥೆ. 


ಇಲ್ಲಿನ ಆಂಜನೇಯಗೆ “ಹುಚ್ಚರಾಯಸ್ವಾಮಿ”ಎಂದು ಕರೆಯುತ್ತಾರೆ.  ಈ ಹೆಸರು ಬರಲು ಕಾರಣ. ಪ್ರತಿಷ್ಠಾಪನೆ ಮಾಡಿದ ಜಾಗ ವೀರಶೈವ ಜಂಗಮ “ಹುಚ್ಚಪ್ಪ” ಎಂಬುವ ರಿಗೆ ಸೇರಿದ್ದು. ಅವರಲ್ಲಿ ಜಾಗ ಕೇಳಿದಾಗ ಆಂಜನೇಯನಿಗೆ ನನ್ನ ಹೆಸರು  ಇಟ್ಟರೆ ಕೊಡುತ್ತೇನೆ ಎಂಬ ಅಭಿಮತದಂತೆ ಆಂಜನೇಯಗೆ  'ಹುಚ್ಚರಾಯಸ್ವಾಮಿ' ಎಂದು  ಹೆಸರಿಟ್ಟರು.


ದೇವಸ್ಥಾನದ ಪ್ರಾಕಾರದೊಳಗೆ ಮುಖ್ಯ ದೇವರಾದ ಹುಚ್ಚರಾಯಸ್ವಾಮಿ, ಹಾಗೂ ಗಣಪತಿ, ಶ್ರೀ ಸೀತಾರಾಮ ಚಂದ್ರ  ಆಂಜನೇಯ  ವಿಗ್ರಹವನ್ನು  ಪ್ರತಿಷ್ಠಾಪಿಸಿದ್ದು  ನಿತ್ಯ ಪೂಜೆ ಅರ್ಚನೆ, ವಿಶೇಷ ದಿನಗಳಲ್ಲಿ  ಹೋಮ- ಹವನ ಭಜನೆ, ಅನ್ನ ಸಂತರ್ಪಣೆ, ಹಾಗೂ ಹರಿಕಥೆ, ಪ್ರವಚನ,  ನಡೆಸಲಾಗುತ್ತಿದೆ. ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಜಾತ್ರೆ ನಡೆಯುತ್ತದೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಈ ರೀತಿ ಶಿಕಾರಿಪುರ ಹುಚ್ಚರಾಯಸ್ವಾಮಿ ದೇವಸ್ಥಾನ ಪ್ರಸಿದ್ಧಿ ಪಡೆದಿದೆ. 

ಕದರ ಮಂಡಲಗಿ ಕಾಂತೇಶ, ಸಾತೇನಹಳ್ಳಿ ಶಾಂತೇಶ, 

ಮತ್ತು ಶಿಕಾರಿಪುರದ ಬ್ರಾಂತೇಶ. ಈ ಮೂರು ಪುಣ್ಯಕ್ಷೇ ತ್ರಗಳ ಆಂಜನೇಯರ ದರ್ಶನ, ಅದರಲ್ಲೂ ವಿಶೇಷ ಮಾಸ

ಅಧಿಕಮಾಸದಲ್ಲಿ ಒಂದೇ ದಿನ ದರ್ಶನ ಮಾಡಿದರೆ ದುಪ್ಪಟ್ಟು ಪುಣ್ಯ ದೊರೆಯುತ್ತದೆ ಎಂಬುದು ಭಕ್ತ ಜನರ ಅಭಿಪ್ರಾಯವಾಗಿದೆ.


ತ್ವಮಸ್ಮಿನ್ ಕಾರ್ಯನಿರ್ಯೋಗೇ

ಪ್ರಮಾಣಂ ಹರಿ ಸತ್ತಮ!

ಹನುಮಾನ್ ಯತ್ನಮಾಸ್ಥಾಯ 

ದುಃಖ ಕ್ಷಯ ಕರೋ ಭವ!


ಅಸಾಧ್ಯ ಸಾಧಕ ಸ್ವಾಮಿನ್

ಅಸಾಧ್ಯಂ ತವ ಕಿಂ ವಾದ

ರಾಮದೂತ ಕೃಪಾ ಸಿಂಧೋ

ಮತ್ಕಾರ್ಯಂ ಸಾಧಯ ಪ್ರಭೋ !!


ನಿತ್ಯ ಈ ಸ್ತೋತ್ರವನ್ನು ಪಠಿಸಿದರೆ ಬೆಟ್ಟದಂತೆ ಬಂದ ಕಷ್ಟ ಮಂಜಿನಂತೆ ಕರಗಿ ಹೋಗುತ್ತದೆ. ಶನಿವಾರ ತುಪ್ಪದ ದೀಪ ಹಚ್ಚಿ ಅಕ್ಷತೆ ಕಾಳು ಕೈಯಲ್ಲಿ ಹಿಡಿದು ದೀಪ ನೋಡುತ್ತಾ, “ಅಸಾಧ್ಯ ಸಾಧಕ ಸ್ವಾಮಿನ್” ಮೇಲಿರುವ ನಾಲ್ಕು ಸಾಲು 

ಸ್ತೋತ್ರ ಮೂರು ಸಲ ಪಠಿಸಿ ಮನದ ಇಷ್ಟಾರ್ಥ ಬೇಡಿ ಕೊಂಡು ಪ್ರಾರ್ಥಿಸಿ ಅಕ್ಷತೆಯನ್ನು ದೇವರ ಮುಂದೆ 

ಹಾಕಿ ಕೈಮುಗಿದರೆ, ಕೇಳಿಕೊಂಡ ಅಪೇಕ್ಷೆ ನೆರವೇರುತ್ತದೆ.

***