SEARCH HERE

Friday 9 April 2021

ನಂದಿ nandi





ಶಿವನ ವಾಹನ ನಂದಿಯ ಕಥೆ - ಶಿವನ ದೇವಸ್ಥಾನಕ್ಕೆ ಹೋದಾಗ ನಾವು ಮೊದಲು ನಂದಿಯನ್ನು ದರ್ಶನ ಮಾಡುತ್ತೇವೆ.ನಂದಿಯ ಎರಡು ಕೊಂಬುಗಳ ಮಧ್ಯದಲ್ಲಿ, ಶಿವನ ದರ್ಶನ ಮಾಡುತ್ತೇವೆ. ಜನರು ತಮ್ಮ ಆಸೆಗಳನ್ನು ಆತನ ಕಿವಿಯಲ್ಲಿ ಹೇಳುತ್ತಾರೆ ಇದನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ .ನಂದಿಯು ಪರಮೇಶ್ವರನಿಗೆ, ದ್ವಾರಪಾಲಕನಾಗಿ ಇರುವುದರಿಂದ ನಂದಿಗೆ ಅಷ್ಟೊಂದು ಪ್ರಾಮುಖ್ಯತೆ ಇದೆ. ಶಿವನ ವಾಹನ ನಂದಿಯ ಬಗೆಗಿನ ರೋಚಕ ಕಥೆ ಇಲ್ಲಿದೆ.
ಶೀಲಾದು ಎಂಬ ಋಷಿ ಮುನಿಯ ಅತ್ಯಂತ ಹೆಚ್ಚಿನ ಜ್ಞಾನವನ್ನು ಸಂಪಾದನೆ ಮಾಡಿದರೂ, ಎಷ್ಟು ಗೌರವವನ್ನು ಸಂಪಾದನೆ ಮಾಡಿದರೂ, ಸಹ ಮಕ್ಕಳಿಲ್ಲದ ಕೊರಗು ಅವರನ್ನು ಸದಾಕಾಲ ಕಾಡುತ್ತಲೇ ಇರುತ್ತಿತ್ತು .ಹೇಗಾದರೂ ಸರಿಯೇ ಸಂತಾನ ಪ್ರಾಪ್ತಿ ಗೋಸ್ಕರ ಪರಮೇಶ್ವರನನ್ನು ಕುರಿತು ತಪಸ್ಸು ಮಾಡಲು ಶಿಲಾದು ಪ್ರಾರಂಭಿಸಿದನು.
ದಿನಗಳು ಕಳೆದರೂ, ವರ್ಷಗಳು ಉರುಳಿದರೂ, ಎಲ್ಲಾ ಋತುಗಳು ಕಾಲಚಕ್ರದಲ್ಲಿ ಲೀನವಾದವು. ಆದರೆ ಶಿಲಾದುವಿನ ತಪಸ್ಸು ಮಾತ್ರ ನಿಲ್ಲಲಿಲ್ಲ. ಶಿಲಾದುವಿನ ಶರೀರದ ಪೂರ್ತಿ ಹುತ್ತ ಬೆಳೆದರೂ ಈತನ ತಪಸ್ಸು ಮಾತ್ರ ನಿಲ್ಲಲಿಲ್ಲ .
ಈತನ ಕಠೋರ ತಪಸ್ಸಿಗೆ, ಮೆಚ್ಚಿ ಪರಮೇಶ್ವರನು ಪ್ರತ್ಯಕ್ಷನಾದನು.ಶಿಲಾದುವು ಪರಮೇಶ್ವರನ ಬಳಿ ಪುತ್ರನನ್ನು ದಯಪಾಲಿಸು ಎಂದು ಬೇಡಿಕೊಂಡನು. ಶೀಲಾದು ಈತನ ಕಠೋರ ತಪಸ್ಸಿಗೆ ಮೆಚ್ಚಿ,ಪರಮೇಶ್ವರನು ತಥಾಸ್ತು ಎಂದು ವರವನ್ನು ಅನುಗ್ರಹಿಸಿದನು.
ಶಿವನು ವರವನ್ನು ಪಡೆದ ಶಿಲಾದವು ಒಂದು ದಿನ ಯಜ್ಞವನ್ನು ಮಾಡುತ್ತಿರಬೇಕಾದರೆ, ಅಗ್ನಿಯಿಂದ ಒಬ್ಬ ಬಾಲಕನು ಉದ್ಭವಿಸಿದನು.
ಆ ಬಾಲಕನಿಗೆ ನಂದಿ ಎಂದು ನಾಮಕರಣ ಮಾಡಿ ಅತಿ ಸಲುಗೆಯಿಂದ, ಪ್ರೀತಿಯಿಂದ ಸಾಕುತ್ತಿದ್ದರು. ನಂದಿ ಎಂದರೆ ಸಂತೋಷವನ್ನು ಕೊಡುವವನು ಎಂದರ್ಥ. ಬಾಲಕನ ಬೆಳವಣಿಗೆಯಂತೆ ನಂದಿಯ ಮೇದಸ್ಸು ಅಸಾಧಾರಣವಾಗಿತ್ತು.ನಂದಿಯೂ ಬಾಲಕನಿರುವಾಗಲೇ ಸಕಲ ವೇದಗಳನ್ನೂ ಮನನ ಮಾಡಿಕೊಂಡಿದ್ದನು. ಹೀಗೆ ಇರಬೇಕಾದರೆ, ಒಂದು ದಿನ ಇವರ ಆಶ್ರಮಕ್ಕೆ ಮಿತ್ರ ವರ್ಣರು ಎಂಬ ದೇವತೆಗಳು ಇವರ ಆಶ್ರಮಕ್ಕೆ ಬರುತ್ತಾರೆ.
ಮಿತ್ರವರ್ಣರು ಆಶ್ರಮದಲ್ಲಿ ಬೆಳೆಯುತ್ತಿರುವ ನಂದಿ ಎಂಬ ಹೆಸರಿನ ಬಾಲಕನನ್ನು ನೋಡಿ ತುಂಬಾ ಸಂತೋಷಪಟ್ಟರು. ಶಿಲಾದು ಋಷಿ ಮುನಿಯು ಮಾಡಿದ ಅತಿಥಿ ಸತ್ಕಾರಕ್ಕೆ ಸಂತೋಷಭರಿತರಾಗಿ, ಹೊರಡುವಾಗ ಆ ಬಾಲಕನಿಗೆ ದಿರ್ಘಾಯುಷಿ ಎಂದು ಆಶೀರ್ವಾದ ಮಾಡಲು ಹೋದಾಗ ಒಂದು ಕ್ಷಣ ಹಾಗೆಯೇ ನಿಂತುಬಿಟ್ಟರು.ನಂದಿಯ ಕಡೆ ಹಾಗೆ ಒಂದು ಕ್ಷಣ ನೋಡಿ ನೋಡುತ್ತಾ ದುಃಖ ಪಡುತ್ತಾ ನಿಂತುಬಿಟ್ಟರು .
ಯಾಕೆ ಈ ರೀತಿ ನೋವು ಪಡುತ್ತಿದ್ದಾರೆ ಎಂದು ಅರ್ಥವಾಗಲಿಲ್ಲ. ಶಿಲಾದುವು ಬೇಡಿ ಕೇಳಿಕೊಂಡನು ನಂತರ ಅವರು ನಂದಿಯ ಆಯಸ್ಸು ತೀರುತ್ತದೆ. ಎಂದು ಹೇಳಿದರು.ಇದನ್ನು ಕೇಳಿದ ಶಿಲಾದುವು ಚಿಂತೆಗೀಡಾದನು ಆದರೆ ನಂದಿಯು ಸ್ವಲ್ಪವೂ ಭಯ ಪಡಲೇ ಇಲ್ಲ. ಶಿವನ ಅನುಗ್ರಹದಿಂದ ಹುಟ್ಟಿದ್ದೇನೆ ಇದಕ್ಕೆ ಪರಶಿವನೇ ದಾರಿ ತೋರಿಸುತ್ತಾನೆ. ಎಂದು ಶಿವನಿಗೋಸ್ಕರ ತಪಸ್ಸು ಮಾಡಲು ನಂದಿಯೂ ಶುರು ಮಾಡುತ್ತಾನೆ
. ನಂದಿಯ ತಪಸ್ಸಿನ ಸ್ವಲ್ಪ ಕಾಲದಲ್ಲಿಯೇ, ಶಿವನು ಪ್ರತ್ಯಕ್ಷನಾದನು. ಶಿವನನ್ನು ನೋಡಿದ ನಂದಿಗೆ, ಬಾಯಿಂದ ಮಾತೇ ಬರಲಿಲ್ಲ. ಶಿವನ ಪಾದದ ಬಳಿ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ನಂದಿಯೂ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾನೆ. ತನ್ನ ಆಯುಷ್ಯದ ಬಗ್ಗೆಯಾಗಲಿ, ಐಶ್ವರ್ಯದ ಬಗ್ಗೆಯಾಗಲಿ, ವರವನ್ನು ಕೇಳದೆ ಚಿರಕಾಲ ನಿನ್ನ ಸೇವೆಯನ್ನೇ ಮಾಡುವ ವರವನ್ನು ಕರುಣಿಸು ಸ್ವಾಮಿ ಎಂದು ವರವನ್ನು ಕೇಳುತ್ತಾನೆ.
ಇಂತಹ ಭಕ್ತನು ಬಳಿ ಇದ್ದರೆ ಶಿವನಿಗೆ ಸಂತೋಷವಾಗದೆ ಇರುವುದೇ? ಆದ್ದರಿಂದ ನಂದಿಯನ್ನು ವೃಷಭದ ರೂಪದಲ್ಲಿ ತನ್ನ ವಾಹನವಾಗಿ ತನ್ನ ಬಳಿಯೇ ಇರು ಎಂದು ವರವನ್ನು ಕರುಣಿಸುತ್ತಾನೆ.ಪರಮೇಶ್ವರನು ಅಂದಿನಿಂದ ಇಂದಿನವರೆಗೂ ನಂದಿಯನ್ನು ತನ್ನ ದ್ವಾರಪಾಲಕನಾಗಿಯೇ ಕಾಯುತ್ತಾ ಪ್ರಮುಖ ಗಣಗಳಲ್ಲಿ ಒಬ್ಬನಾಗಿ ಕೈಲಾಸಗಿರಿಗೆ ರಕ್ಷಕನಾಗಿ ಮಾಡಿಕೊಂಡನು. ನಂದಿ ಮತ್ತು ಶಿವನಿಗೆ ಸಂಬಂಧಪಟ್ಟ ಅನೇಕ ಕಥೆಗಳು ಪುರಾಣಗಳಲ್ಲಿಇವೆ. ಅವುಗಳಲ್ಲಿ ಶಿವನ ಮೇಲೆ ಇರುವ ಗೌರವ, ಸ್ವಾಮಿ ಭಕ್ತಿಯು ಉಲ್ಲೇಖವಾಗಿದೆ.
ಅದರಲ್ಲಿ ಉದಾಹರಣೆಗೆ ಕ್ಷೀರಸಾಗರವನ್ನು ಕಡೆಯುವಾಗ ಹಾಲಾಹಲ ಎಂಬ ವಿಷವೂ ಬಂದಾಗ ಆ ವಿಷದಿಂದ ತ್ರಿಲೋಕವನ್ನು ಕಾಪಾಡಲು ಶಿವನು ಆ ವಿಷವನ್ನು ಸೇವಿಸಿ ವಿಷ ಕಂಠನಾಗಿ ಮಾರ್ಪಾಡಾದಾಗ
ಆ ಸಮಯದಲ್ಲಿ ಸ್ವಲ್ಪ ಪ್ರಮಾಣದ ವಿಷ ಕೆಳಗೆ ಬಿದ್ದಿತು.

ಶಿವನು ಪಕ್ಕದಲ್ಲಿ ಇದ್ದ ನಂದಿಯೂ ಯಾವುದೇ, ಯೋಚನೆ ಮಾಡದೆ ಆ ವಿಷವನ್ನು ಸೇವಿಸಿಯೇ ಬಿಟ್ಟನಂತೆ ದೊಡ್ಡ ದೊಡ್ಡ ದೇವ ಸಮೂಹವೇ, ಆ ವಿಷದ ಭಯದಿಂದ ಓಡಿ ಹೋಗುತ್ತಿದ್ದಾಗ ನಂದಿ ಮಾತ್ರ ಶಿವನ ಮೇಲಿನ ನಂಬಿಕೆಯಿಂದ ಆ ವಿಷವನ್ನು ಚಪ್ಪರಿಸಿ ಸೇವಿಸಿ ನಿಶ್ಚಿಂತೆಯಿಂದ ನಿಂತಿರುತ್ತಾನೆ. ನಂದಿಯ ಹಿಂದೆ ಇಂತಹ ಚರಿತ್ರೆ ಇದೆ. ಆದ್ದರಿಂದ ಶಿವನಿಗೆ ಸೇವಕನಾಗಿದ್ದು ಅಲ್ಲದೆ ಶಿವನ ಭಕ್ತ ನಾಗಿಯೂ ನ೦ದಿಯು ಶಿವನಿಗೆ ಪ್ರೀತಿ ಪಾತ್ರನಾಗಿ ಕಾಣಿಸಿಕೊಳ್ಳುತ್ತಾನೆ.
******



No comments:

Post a Comment