SEARCH HERE

Tuesday, 1 January 2019

ಗಣೇಶ ಮಂತ್ರಗಳು ganapati ganesha mantra parihara


ಸರ್ವ ವಿಘ್ನಗಳನ್ನು ದೂರಮಾಡುವ ಶಕ್ತಿ ಸ್ವರೂಪ ಗಣೇಶ ಮಂತ್ರಗಳು


🔸ಮಂತ್ರಗಳು ಹೆಚ್ಚಿನ ಶಕ್ತಿಯನ್ನು ಪಡೆದುಕೊಂಡಿದ್ದು ಇದು ದೇವರ ಬಗೆಗೆ ನಮ್ಮ ಭಕ್ತಯನ್ನು ವೃದ್ಧಿಗೊಳಿಸಲು ಸಹಾಯ ಮಾಡುವ ಅಂಶಗಳಾಗಿವೆ. ಪರಿಸರದಲ್ಲಿ ಈ ಮಂತ್ರಗಳು ಹೆಚ್ಚಿನ ಶಕ್ತಿಯನ್ನು ಉಂಟುಮಾಡಿ ದೈವಿಕ ಅಂಶವನ್ನು ನಮ್ಮಲ್ಲಿ ಉದ್ದೀಪನಗೊಳಿಸುತ್ತದೆ. ನಮ್ಮಲ್ಲಿ ಶಾಂತಿ ಸಮಾಧಾನವನ್ನುಂಟು ಮಾಡಲು ಮಂತ್ರಗಳು ನಮಗೆ ಸಹಾಯ ಮಾಡುತ್ತವೆ. 

🔸ಹೆಚ್ಚು ಶಕ್ತಿಶಾಲಿಯಾಗಿರುವ ಗಣೇಶ ಮಂತ್ರಗಳು ಹೆಚ್ಚಿನ ಶಕ್ತಿಯನ್ನು ತುಂಬಿಕೊಂಡಿದ್ದು ನೀವು ಶ್ರದ್ಧೆ ಭಕ್ತಿಯಿಂದ ಈ ಮಂತ್ರಗಳನ್ನು ಪಠಿಸಿದಲ್ಲಿ ನಿಮಗೆ ಹೆಚ್ಚಿನ ಸಿದ್ಧಿ ಉಂಟಾಗುತ್ತದೆ. ನಿಮ್ಮ ಕಷ್ಟಕರ ಸಂದರ್ಭಗಳಲ್ಲಿ ಈ ಮಂತ್ರಗಳು ನಿಮ್ಮಲ್ಲಿ ಹೆಚ್ಚಿನ ಶಕ್ತಿಯನ್ನು ಉಂಟುಮಾಡಲಿವೆ. ಹಾಗಿದ್ದರೆ ಬನ್ನಿ ಇಂದಿನ ಲೇಖನದಲ್ಲಿ ಈ ಮಂತ್ರಗಳ ವಿಶೇಷತೆಗಳೇನು ಎಂಬುದನ್ನು ಅರಿತುಕೊಳ್ಳೋಣ. 

🔸ಇಲ್ಲಿ ನಾವು ನೀಡಿರುವ ಗಣೇಶನ ಮಂತ್ರಗಳು ಹೆಚ್ಚು ಸಿದ್ಧಿಯನ್ನು ಪಡೆದುಕೊಂಡಿದ್ದು ನಿಮ್ಮ ಮನಸ್ಸಿನಲ್ಲಿರುವ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವುದು ಖಂಡಿತ. ಸ್ನಾನಾದಿಗಳನ್ನು ಮಾಡಿ, ಊಟಕ್ಕೂ ಮುನ್ನ ಈ ಮಂತ್ರವನ್ನು ನೀವು ಪಠಿಸಬೇಕು. ನಿಮ್ಮ ಅಂತರಾಳದ ಶಕ್ತಿಯನ್ನು ಬಲಪಡಿಸಲು ಈ ಮಂತ್ರಗಳು ಸಹಕಾರಿಯಾಗಿದ್ದು, ಈ ಮಂತ್ರಗಳನ್ನು ಬೆಳಗ್ಗೆ ಮತ್ತು ಸಾಯಂಕಾಲ ಪಠನೆ ಮಾಡಬೇಕು. 


💠ಓಂ ಗಮ್ ಗಣಪತಯೇ ನಮಃ💠

🔸ಇದನ್ನು ಬೀಜ ಮಂತ್ರವೆಂದೂ ಕರೆಯಲಾಗುತ್ತದೆ. ಇದನ್ನು ಯೋಗಸಾಧಕ ಮಂತ್ರವೆಂಬುದಾಗಿ ಕೂಡ ಕರೆಯಲಾಗುತ್ತದೆ ಮತ್ತು ಗಣಪನನ್ನು ಒಲಿಸಿಕೊಳ್ಳಲು ಈ ಮಂತ್ರವು ಸಹಕಾರಿಯಾಗಿದೆ.

🌟 ಓಂ ಶ್ರೀ ಗಣೇಶಾಯ ನಮಃ🌟

🔸ಗಣೇಶನಿಗೆ ಜಯವಾಗಲಿ ಎಂಬುದು ಈ ಮಂತ್ರದ ಸಾರವಾಗಿದೆ. 


⚛ಓಂ ಏಕದಂತಾಯ ನಮಃ⚛

🔸ಗಣಪನಿಗೆ ಇರುವ ಒಂದು ದಂತವನ್ನು ಇದು ಪ್ರತಿನಿಧಿಸುತ್ತದೆ. ಏಕ ಮನಸ್ಸಿನಲ್ಲಿ ಗಣಪನನ್ನು ಪ್ರಾರ್ಥಿಸಬೇಕು. ಶ್ರದ್ಧೆ ಭಕ್ತಿ ನಿಮ್ಮಲ್ಲಿ ತುಂಬಿರಲಿ. 


🔯ಓಂ ಸುಮುಖಾಯ ನಮಃ🔯

🔸ಈ ಮಂತ್ರವು ಸರಳ ಅರ್ಥವನ್ನು ಹೊಂದಿದೆ. ಮುಖ, ಆತ್ಮ ಎಲ್ಲವೂ ಸುಂದರವಾಗಿದೆ ಎಂಬ ಅರ್ಥವನ್ನು ಇದು ನೀಡುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮಲ್ಲಿ ಒಂದು ಸುಂದರತೆ ಮೂಡುತ್ತದೆ. ನಿಮ್ಮಲ್ಲಿ ಮಾತನಾಡುವವರು ಹೆಚ್ಚಿನ ಪ್ರೀತಿಯಿಂದ ನಿಮ್ಮಲ್ಲಿ ಸಂವಾದ ನಡೆಸುತ್ತಾರೆ. 


☸ಓಂ ಕ್ಷಿಪ್ರ ಪ್ರಸಾದಾಯ ನಮಃ☸


🔸ಕ್ಷಿಪ್ರವೆಂದರೆ ಶೀಘ್ರ ಎಂಬ ಅರ್ಥವನ್ನು ನೀಡುತ್ತದೆ. ನಿಮ್ಮ ದಾರಿಯಲ್ಲಿ ಬರುವ ಯಾವುದೇ ಅಪಾಯವನ್ನು ತೊಡೆದುಹಾಕುವಲ್ಲಿ ಇದು ಸಮರ್ಥವಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಮನಸ್ಸು ದೇಹ ಪರಿಶುದ್ಧವಾಗುತ್ತದೆ. 

⭐ಓಂ ಬಾಲಚಂದ್ರಾಯ ನಮಃ⭐

🔸ಸಂಸ್ಕೃತದಲ್ಲಿ ಬಾಲವೆಂದರೆ ಹಣೆಯ ಮಧ್ಯಭಾಗವಾಗಿದೆ. ಚಂದ್ರ ಎಂದರೆ ಚಂದ್ರದೇವನಾಗಿದ್ದಾನೆ. ಹಣೆಯ ಮಧ್ಯಭಾಗದಲ್ಲಿ ಚಂದ್ರನನ್ನು ಇರಿಸಿಕೊಂಡವರು ಎಂದರೆ ನಿಮ್ಮೊಳಗಿನ ಅಂತರಾಳವನ್ನು ಪರಿಶೋಧಿಸುವುದು ಎಂಬ ಅರ್ಥವನ್ನು ನೀಡುತ್ತದೆ. ಇದು ಬೆಳವಣಿಗೆ ಮತ್ತು ಶಾಂತಿಯ ಸಂಕೇತವಾಗಿದೆ. 

☀ಓಂ ಗಣಾಧ್ಯಕ್ಷಾಯ ನಮಃ☀

🔸ನೀವು ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮಲ್ಲಿ ಒಂದು ರೀತಿಯ ಚೈತನ್ಯ ಉಂಟಾಗುತ್ತದೆ. 


💥ಓಂ ವಿನಾಯಕಾಯ ನಮಃ💥

🔸ವಿನಾಯಕ ಎಂಬುದು ಗಣೇಶನ ಇನ್ನೊಂದು ಹೆಸರಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಜೀವನದಲ್ಲಿ ಸ್ವರ್ಣಯುಗ ತೊಡಗುತ್ತದೆ ಎಂದಾಗಿದೆ. ನಿಮ್ಮ ಕಚೇರಿ, ಮನೆಯಲ್ಲಿ ನೀವೇ ಬಾಸ್ ಆಗುತ್ತೀರಿ. 

🌠ಓಂ ವಿಘ್ನನಾಶಾಯ ನಮಃ🌠

🔸ನಿಮ್ಮ ಜೀವನ ಮತ್ತು ಕೆಲಸದಲ್ಲಿನ ವಿಘ್ನಗಳನ್ನು ನಿವಾರಿಸಲು ಈ ಮಂತ್ರ ಸಹಾಯ ಮಾಡಲಿದೆ. ಈ ಮಂತ್ರವನ್ನು ನಿತ್ಯವೂ ಪಠಿಸುವುದರಿಂದ ನಿಮ್ಮ ಎಲ್ಲಾ ದುರಿತಗಳು ನಿವಾರಣೆಯಾಗುತ್ತದೆ. 

🎆ಓಂ ಲಂಬೋಧರಾಯ ನಮಃ🎆


🔸ಈ ವಿಶ್ವದಲ್ಲಿ ನೀವಿದ್ದೀರಿ ಎಂಬುದನ್ನು ಇದು ನಿಮಗೆ ನೆನಪಿಸುತ್ತದೆ. ನೀವೇ ಸಂಪೂರ್ಣ ವಿಶ್ವ ಎಂಬ ಭಾವನೆ ನಿಮ್ಮಲ್ಲಿ ಉಂಟಾಗುತ್ತದೆ. ಈ ಮಂತ್ರವು ನಿಮ್ಮಲ್ಲಿ ಹೊಸದೊಂದು ಚೇತನವನ್ನು ಪುನರುಜ್ಜೀವನಗೊಳಿಸುತ್ತದೆ. 


✨ಓಂ ಗಜಕರ್ಣಿಕಾಯ ನಮಃ✨

🔸ನಿಮ್ಮ ಬಗ್ಗೆ ಜನರು ಏನೇ ಕೆಟ್ಟದ್ದು ಮಾತನಾಡಿದರೂ ಅದು ನಿಮ್ಮನ್ನು ತಾಗುವುದಿಲ್ಲ ಏಕೆಂದರೆ ಗಣೇಶನ ಈ ಮಂತ್ರವು ನಿಮ್ಮನ್ನು ರಕ್ಷಣೆ ಮಾಡುತ್ತಿರುತ್ತದೆ ಎಂದಾಗಿದೆ. 


🎇ಓಂ ಕಪಿಲಾಯ ನಮಃ🎇

🔸ಕಪಿಲ ಎಂದರೆ ನಿಮ್ಮ ಸುತ್ತ ಮತ್ತು ಇತರರ ಸುತ್ತ ಬಣ್ಣವನ್ನು ತುಂಬುವುದು ಎಂಬ ಅರ್ಥವನ್ನು ನೀಡುತ್ತದೆ. ಈ ಮಂತ್ರವನ್ನು ಪಠಿಸುವುದು ಎಂದರೆ ಬಣ್ಣವನ್ನು ರಚಿಸುವುದಾಗಿದೆ ಎಂದಾಗಿದೆ. ನೀವು ಮನಸ್ಸಿನಲ್ಲಿ ನೆನೆಯುವುದು ಕಾರ್ಯರೂಪಕ್ಕೆ ತರುವುದು ಎಂದಾಗಿದೆ.

⚜ಓಂ ವಿಕ್ರತ್ರಾಯಯ ನಮಃ⚜
🔸ಈ ವಿಶ್ವವನ್ನು ಒಂದು ನಾಟಕದಂತೆ ಕಾಣುವುದಾಗಿದೆ. ಈ ಸಂಪೂರ್ಣ ವಿಶ್ವವೇ ಒಂದು ಕನಸು ಎಂಬಂತೆ ಕಾಣುವುದಾಗಿದೆ  ಮಂತ್ರ ಪಠಣೆ ಹೇಗೆ 
ಸ್ನಾನದ ನಂತರ ಊಟಕ್ಕೂ ಮುನ್ನ ಈ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಸರ್ವ ಸಿದ್ಧಿಗಳು ನಿಮಗೆ ಉಂಟಾಗುತ್ತದೆ. ಬೆಳಗ್ಗೆ ಮತ್ತು ಸಾಯಂಕಾಲ ಒಂಭತ್ತು ಬಾರಿ ಕೂಡ ಈ ಮಂತ್ರವನ್ನು ಪಠಿಸುವುದರಿಂದ ನಿಮಗೆ ಶ್ರೇಯಸ್ಸು ಉಂಟಾಗುತ್ತದೆ.
*******




No comments:

Post a Comment