SEARCH HERE

Tuesday, 1 January 2019

ದ್ವೈತ ಅದ್ವೈತ ವಿಶಿಷ್ಟಾದ್ವೈತ ಎಂದರೇನು dwaita advaita vishistadwaita

Dwaita Advaita Vishistadvaita

Acharya Pranamagalu 

The concept of Visesha is beautifully mentioned by Srimadacharya.

visesha means a principle of Identity in difference... 

preconditions before we specify about VISESHA is 

1) There should not be any difference as a matter of fact
2)the Abhedha (non difference) should be authoritative.

3)But there should be  usage (Vyavahara) as though there is a difference... 

FOR Example ; Lord Rama married Sita.Lord Krishna married Rukmini. 

We dont say Lord Rama married Rukmini. As a matter of fact there is no difference between Lord Rama and Lord Krishna as well asa Sita and Rukmini.

But still we say the above statement as though there is a difference between them.

So the Vyavahara is done with the help of VISESHA.Its a substitute for difference.. It is called Bhedha Prathinidhi.

As there is no avatara bheda, there is no difference between the Lord and His attributes.Lord and His actions,Lord and His Limbs.
*********


ಕಾಖಂಡಕಿ ಶ್ರೀ ಮಹಿಪತಿರಾಯರು
(ದ್ವೈತ ಅದ್ವೈತಗಳ ಬಗ್ಗೆ)

ದ್ವೈತ ಅದ್ವೈತೆಂದು ಹೊಡದಾಡದಿರೊ ಪ್ರಾಣಿ
ಚೇತಿಸಿ ಬ್ಯಾರಿಹ ವಸ್ತುಗಾಣಿ 
ದ್ವೈತ ಎನಲಿಕ್ಕೆ ತಾಂ ಆದೆವೆ ಅದ್ವೈತ ಅ-
ದ್ವೈತ ಎನಲಿಕ್ಕೆ ಅದೆನೆ ತಾಂ ದ್ವೈತ 
ಹಿಂದು ಮುಂದಾಗಿ ಆಡಿಸುತಿಹ್ಯ ನಿಜಖೂನ
ಎಂದಿಗಾದರು ತಿಳಿಯಗುಡದು ಪೂರ್ಣ 
ಅತಿಸೂಕ್ಷ್ಮ ತಿಳುವಾದರಲ್ಲೆ ಬಿದ್ದದ ಮಲಕು
ನೇತಿ ನೇತೆಂದು ಸಾರುತಿದೆ ಶ್ರುತಿ ಇದಕೆ ತಿಳಿಕೊ 
ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ, ಅ-
ದ್ವೈತನೆಂದವನೆ ತಾಮ ಪರಮ ಸ್ಮಾರ್ತನಲ್ಲ 
ಸ್ಮಾರ್ತ ವೈಷ್ಣವ ಮತ ಗುರು ಮಧ್ವಮುನಿಬಲ್ಲ
ಅರ್ತು ಸ್ಥಾಪಿಸುವದು ಮನುಜಗಲ್ಲ 
ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ
ದೋರುವರೆ ತರ್ಕಸ್ಯಾಡುವ ಸೊಲ್ಲ 
ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು
ಚಿತ್ತ ಶುದ್ದಾಗಿ ಮಹಿಪತಿಯ ಮುಟ್ಟು

ದ್ವೈತ - ಅದ್ವೈತ - ವಿಶಿಷ್ಟಾದ್ವೈತ ಎಂದರೇನು? ಈ ಮೂರೂ ಸಿದ್ಧಾಂತಗಳಿಗೂ ಇರುವ ವ್ಯತ್ಯಾಸವೇನು?
ಉತ್ತರ : ಈ ಮೂರೂ ಮತಗಳು ಉಪನಿಷತ್ , ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಎಂಬ ಪ್ರಸ್ಥಾನತ್ರಯಗಳಿಂದ ಮೂಡಿಬಂದವು. ಶ್ರೀಮನ್ಮಧ್ವಾಚಾರ್ಯರು , ಶ್ರೀಶಂಕರಭಗವತ್ಪಾದಾಚಾರ್ಯರು ಹಾಗೂ ಶ್ರೀಮದ್ರಾಮಾನುಜಾಚಾರ್ಯರು ಈ ಮೂರೂ ಸಿದ್ಧಾಂತಗಳ ಪ್ರವರ್ತಕರು, ಪ್ರಸ್ಥಾನತ್ರಯವನ್ನು ಈ ಮೂವರೂ ಆಚಾರ್ಯರು ಮೂರು ಬಗೆಯಾಗಿ ಅರ್ಥೈಸಿ ಭಾಷ್ಯ ಬರೆದು, ಈ ಮೂರು ಮತಗಳನ್ನು ಸ್ಥಾಪಿಸಿದರು. ಈ ಮೂವರು ಆಚಾರ್ಯರಿಗೂ ಮೂಲ ಗುರು ಒಬ್ಬರೇ. ಅವರೇ ಪುರಾಣಪ್ರಸಿದ್ಧರಾದ ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸರು.

ದ್ವೈತ ಮತದ ಪ್ರಕಾರ #ಹರಿಯೇ ಸರ್ವೋತ್ತಮನು.
( ವೇದಗಳಲ್ಲಿ ಹೇಳಿರುವ ಬ್ರಹ್ಮ ಶಬ್ದವು ಶ್ರೀ ಹರಿಯ ಕುರಿತೇ ಆಗಿದೆ )
ಈ ಜಗತ್ತು ಸತ್ಯವೇ ಹೊರತು ಮಿಥ್ಯೆಯಲ್ಲ , ಜೀವರು ಎಂದೆಂದಿಗೂ ಶ್ರೀ ಹರಿಗೆ ಅನುಚರರಾಗಿದ್ದು ಬೇರೆ - ಬೇರೆಯೇ ಆಗಿ ಇರುವವರು. ಜೀವನಿಗೆ ಸ್ವರೂಪದ ಆನಂದ ದೊರೆತಾಗ ಅದೇ ಮುಕ್ತಿಯೆನಿಸಿಕೊಳ್ಳುತ್ತದೆ. ಅಂತಹಾ ಮುಕ್ತಿಗೆ ಭಕ್ತಿಯೇ ಪ್ರಧಾನ ಸಾಧನ. ಪ್ರತ್ಯೇಕ , ಅನುಮಾನ , ಆಗಮ ಎಂಬ ಮೂರು ಪ್ರಮಾಣಗಳು ಹಾಗು ನಾಲ್ಕು ವೇದಗಳಲ್ಲೂ ಶ್ರೀಹರಿಯೇ ಸರ್ವೋತ್ತಮನೆಂದು ವೇದ್ಯವಾಗಿದೆ.
ಅದ್ವೈತ ಮತದ ಪ್ರಕಾರ #ಸರ್ವಂ_ಖಲ್ವಿದಂ_ಬ್ರಹ್ಮ. ಎಂದರೆ ಏನಿದೆಯೋ ಅದೆಲ್ಲವೂ ಸಚ್ಚಿದಾನಂದ ಬ್ರಹ್ಮ. "ಜೀವೋ ಬ್ರಹ್ಮೈವ ನಾಪರಃ " _ ಎಂದರೆ ಜೀವನು ಬ್ರಹ್ಮನೇ ಹೊರತು ಬೇರಲ್ಲ, ಜೀವ ಜಗತ್ತಾಗಿ ಏನೇನು ಗೋಚರಿಸುತ್ತಿದೆಯೋ ಅವೆಲ್ಲವೂ ಪರಬ್ರಹ್ಮದ ಮಾಯಾವಿಲಾಸ, ಜೀವಿಗಳ ಬುದ್ಧಿಗೆ ಕವಿದ ಭ್ರಮೆಯ ಕಾರಣದಿಂದ ಈ ಜಗತ್ತು - ಜನನ - ಮರಣ, ಸುಖ - ದುಃಖಾದಿದ್ವಂದಗಳು ಕಾಣಿಸಿಕೊಳ್ಳುತ್ತವೆ. ಭ್ರಮೆಯು ಹರಿದಾಗ ಎಲ್ಲವೂ ಮಾಯವಾಗಿ ಬ್ರಹ್ಮವೊಂದೇ ವಿರಾಜಿಸುತ್ತದೆ. ಈ ಭ್ರಮೆಯ ಪೊರೆಯನ್ನು ಹರಿಯುವುದೇ ಸಾಧನೆಯ ಉದ್ದೇಶ.
ವಿಶೇಷಣಗಳಿಂದ ಕೂಡಿದ ಅದ್ವೈತವೇ #ವಿಶಿಷ್ಟಾದ್ವೈತ#ಚಿತ್_ಮತ್ತು_ಅಚಿತ್ ಎಂಬುವುಗಳೇ ವಿಶೇಷಣಗಳು. ಚಿತ್ ಎಂದರೆ ಚೇತನ, ಅಚಿತ್ ಎಂದರೆ ಜಡವಸ್ತು. ಈ ಚಿತ್ ಮತ್ತು ಅಚಿತ್ ಸೇರಿ ಪರಮಾತ್ಮನ ಶರೀರವೆನಿಸಿಕೊಳ್ಳುತ್ತದೆ. ಹೀಗೆ ಚಿತ್ ಮತ್ತು ಅಚಿತ್ ಗಳು ಬೇರೆ ಬೇರೆಯಾಗಿ ಕಂಡರೂ ಪರಮಾತ್ಮನೊಂದಿಗೆ ಸೇರಿಕೊಂಡಿವೆ. ಅಂಶ - ಅಂಶೀ ಭಾವದಿಂದ; ಶೇಷ - ಶೇಷೀ ಸಂಭಂದಿಂದ..
ತಂತಮ್ಮ ಮತದ ಪ್ರಕಾರ ಆಧ್ಯಾತ್ಮಿಕ ಸಾಧನೆಯನ್ನು ಮಾಡಬೇಕೆನ್ನುವವರು ಆಯಾ ಸಂಪ್ರದಾಯದ ಗುರುಗಳ‌ ಬಳಿಗೆ ಹೋಗಬೇಕು. ಸಾಧನೆಯ ವಿವರಗಳನ್ನು ಸ್ಪಷ್ಟವಾಗಿ ಅರಿತು ಧೃಢಪಡಿಸಿಕೊಳ್ಳದೇ ಮುಂದುವರೆಯಲಾಗದು. ಈ ಮತಗಳು ಇರುವುದು ತನ್ನ ಮತದಲ್ಲಿ ತಿಳಿಸಲಾದ ಆಧ್ಯಾತ್ಮಿಕ ಸಾಧನಾ ವಿಧಾನವನ್ನು ಅರಿತು ತತ್ವವನ್ನು ಅಂದರೆ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲೇ ಹೊರತು ವಾದ - ವಿವಾದ ಮಾಡುತ್ತಾ ಗೊಂದಲವೆಬ್ಬಿಸುವುದಕ್ಕಲ್ಲ.*
ಅದ್ವೈತಕ್ಕೂ - ವಿಶಿಷ್ಟಾದ್ವೈತಕ್ಕೂ ಮತ್ತು ದ್ವೈತಕ್ಕೂ ನಡುವೆ ಇರುವ ವ್ಯತ್ಯಾಸವೇನು?
ಉತ್ತರ :
ಈ ಮೂರೂ ಮತಗಳು ವೈದಿಕ ಸಂಪ್ರದಾಯದಲ್ಲೇ ಬರುತ್ತದೆ. ಇವು ವೇದಾಂತ ದರ್ಶನಗಳು.‌ ಅನುಭವದ ಆಧಾರದ ಮೇಲೆ ಆಚಾರ್ಯರು ಜನರಿಗೆ ಇವನ್ನು ತಿಳಿಸಿದ್ದಾರೆ. ಮೊದಲು ಶಂಕರಾಚಾರ್ಯರು ಅದ್ವೈತ ದರ್ಶನವನ್ನು ಸಾದರಪಡಿಸಿದರು, ಆನಂತರ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತವನ್ನೂ ; ಮಧ್ವಾಚಾರ್ಯರು ದ್ವೈತವೇದಾಂತವನ್ನು ಮುಂದಿಟ್ಟರು.
#ಜೀವ_ಜಗತ್ತು_ಈಶ್ವರ ಇವುಗಳ ಮೇಲೆ ಈ ಮತಗಳು ನಿಂತಿವೆ. ಅದ್ವೈತ ಪ್ರಕಾರ ಬ್ರಹ್ಮವೊಂದೇ ಸತ್ಯ ; ಜಗತ್ತು ಮಿಥ್ಯ ; ಜೀವವು ಬ್ರಹ್ಮವೇ ಹೊರತು ಬೇರಲ್ಲ , ಜ್ನಾನಬಲದಿಂದ ಜೀವವು ಬ್ರಹ್ಮಸಾಕ್ಷಾತ್ಕಾರ ಮಾಡಿಕೊಳ್ಳಬಹುದು.
ದ್ವೈತವೆಂದರೆ ಎರಡು ; ಜಗತ್ತು ಸತ್ಯ , ಜೀವಾತ್ಮ ಪರಮಾತ್ಮ ಬೇರೆ - ಬೇರೆ ಎಂಬುದು ಇಲ್ಲಿನ ಮುಖ್ಯ ತತ್ವ , ಅದ್ವೈತದ ಪ್ರಕಾರ ಪಾರಮಾರ್ಥಿಕವಾಗಿ ಜಗತ್ತು ಮಿಥ್ಯೆ ಎಂದಿದೆ, ಅದೇ ವ್ಯವಾಹಾರಿಕವಾಗಿ ಅದು ಸತ್ಯವೆಂದರೆ ದ್ವೈತವು ಎರಡೂ ಅರ್ಥದಲ್ಲಿ ಅದನ್ನು ಸತ್ಯವೆಂದಿದೆ. ಹರಿಯೇ ಸರ್ವೋತ್ತಮ , ಅವನನ್ನು ಭಕ್ತಿಮಾರ್ಗದಿಂದ ಭಜಿಸಿ ಅವನ ಸಾಯಜ್ಯದಲ್ಲಿರುವುದೇ ಮೋಕ್ಷ ಎಂದಿದೆ.
ವಿಶಿಷ್ಟಾದ್ವೈತ ಎಂದರೆ ಪರಮಾತ್ಮನು ವಿಶಿಷ್ಟನಾಗಿದ್ದಾನೆ , ಶ್ರೀಮನ್ನಾರಯಣನೇ ಪರಬ್ರಹ್ಮ , ಅವನು ಚಿತ್ ಮತ್ತು ಅಚಿತ್ ನಿಂದ ತುಂಬಿದ್ದಾನೆ. ಜೀವಾತ್ಮ ಅದರ ಒಂದು ಅಂಶ. ಶರಣಾಗತಿಯಿಂದ ಭಕ್ತಿಯಿಂದ ಪರಮಾತ್ಮ ನೊಡನೆ ಇರುವುದೇ ಮೋಕ್ಷ. ಅವರವರ ಅನುಭವ ಅವರವರಿಗೆ ನಿಜ, ಅದೇ ಪ್ರಮಾಣ , ಇವೆಲ್ಲಾ ಒಂದಕ್ಕೊಂದು ವಿರೋಧವಲ್ಲ ; ಪೂರಕವಾಗಿದೆ. ಭಗವಂತನ ಉಪಾಸನೆಯ ವಿಷಯದಲ್ಲಿ ‌ನಮಗೆ ಸ್ವಾತಂತ್ರ್ಯವಿದೆ. ಅದರಂತೆ ನಮ್ಮ ಅನುಭೂತಿ - ಅನುಭವ - ಅಭಿರುಚಿ ಸಿದ್ಧಿಸುತ್ತದೆ. ಇದು ವಿಶಿಷ್ಟಾದ್ವೈತ.
ನಮಗೆ ದೇಹಭಾವವಿದೆ ; ಜೀವಭಾವವಿದೆ ; ಆತ್ಮ ಭಾವವಿದೆ; ದೇಹಬುದ್ಧಿ - ಜೀವಬುದ್ಧಿ - ಆತ್ಮಬುದ್ಧಿ ನಮಗಿದೆ. ಆಯಾಯ ದೃಷ್ಟಿಕೋನದಿಂದ ಅನುಭವವೂ ಭಿನ್ನವಾಗುತ್ತದೆ. " ದೇಹಬುಧ್ಯಾತು ದಾಸೋಹಂ ಜೀವಬುಧ್ಯಾ ತ್ವದಂಶಕಃ | ಆತ್ಮಬುಧ್ಯಾ ತ್ವಮೇವಾಹಂ ಇತಿ ಮೇ ನಿಶದಚಿತಾಮತಿಃ ||"
ಅಂದರೆ ದೇಹ ಬುದ್ಧಿಯಿಂದ ನಾನು ದಾಸ ; ನೀನು ಈಶ , ಇದು ದ್ವೈತ.
ಜೀವಬುದ್ಧಿ ಇರುವಾಗ ನಾನು ಅಂಶ; ನೀನು ಅಂಶಿ , ಇದು ವಿಶಿಷ್ಟಾದ್ವೈತ.
ಆತ್ಮಬುದ್ಧಿ ಬಂದಾಗ ನೀನು - ನಾನು ಎಂಬ ಬೇಧವಿಲ್ಲ ಇದು ಅದ್ವೈತ.

ದೇಹ ಭಾವದಲ್ಲಿ ಸಖ್ಯ , ಜೀವಭಾವದಲ್ಲಿ ದಾಸ್ಯ , ಆತ್ಮ ಭಾವದಲ್ಲಿ ಸಾಮರಸ್ಯ ಸಿದ್ಧಿಸುತ್ತದೆ. ಮೂರು ವೇದವಿಹಿತ ಅನುಭವ. ಕರ್ಮ, ಭಕ್ತಿ, ಜ್ನಾನಗಳು ಅನುಕ್ರಮವಾಗಿ ಮುಖ್ಯವಾಗುತ್ತದೆ. ನಾವು ಯಾರೂ ಒಮ್ಮಲೆ ದ್ವೈತಿಗಳು, ಅದ್ವೈತಿಗಳು, ಅಥವಾ ವಿಶಿಷ್ಟಾದ್ವೈತಿಗಳು ಆಗಲು ಸಾಧ್ಯವಿಲ್ಲ. ಒಬ್ಬನಿಗೆ ಈ ಮುರೂ ಅನುಭವ ಆಗಬಹುದು.
*********

 "ಅಹಂ ಬ್ರಹ್ಮಾಸ್ಮಿ" ಏನಿದರ ಗೂಢವಾದ ಅರ್ಥ? ಇಲ್ಲಿ ಕೇಳಿರಿ

*******

https://drive.google.com/drive/folders/0B1giLrdkKjfRallkZ0VIWnRPVjA

|| Saffron e-Library ||

This eLibrary contains lots of original texts of Sanathana Dharma. Its free for download. Please make use of this and share this with others. 

Aadi Shankaracharya - आद्य शंकराचार्य :-

https://drive.google.com/open?id=0B1giLrdkKjfRallkZ0VIWnRPVjA

Sri Aurobindo - श्री अरविंदो :-

https://drive.google.com/open?id=0B1giLrdkKjfRSWktaVFPa2tSa2s

Swami Dayananda - स्वामी दयानंद :-

https://drive.google.com/folder/d/0B1giLrdkKjfRZnUxOEpPSVBHVzQ/edit

Swami Vivekanand - स्वामी विवेकानन्द :-

https://drive.google.com/open?id=0B1giLrdkKjfRMFAtTi1yUFAzdW8

Swami Shivanand - स्वामी शिवानंद :- 

https://drive.google.com/open?id=0B1giLrdkKjfRYXJDclQwYTBfWFk

Swami Ramteerth - स्वामी रामतीर्थ :-

https://drive.google.com/open?id=0B1giLrdkKjfRNGlYZzhqTEQtcU0

Sitaram Goel - सीताराम गोयल :-

https://drive.google.com/open?id=0B1giLrdkKjfRT19aT3pnZ0tvODA

Veer Savarkar - वीर सावरकर :-

https://drive.google.com/open?id=0B1giLrdkKjfRbE0wQng5YVZmb1E

P.N.Oak - पी.एन. ओक :-

https://drive.google.com/open?id=0B1giLrdkKjfRRUVTTHpHVGhMVmM

हिन्दू, राष्ट्र:-

https://drive.google.com/folder/d/0B1giLrdkKjfRNW1scHdGMHQzZ0U/edit

Basic Hinduism - 

https://drive.google.com/open?id=0B1giLrdkKjfRTXdpN29OTUQ0Q3c

Hindutva and India :-

https://drive.google.com/open?id=0B1giLrdkKjfRNzh0MXhyRVpiVEE

Islam Postmortem - इस्लाम की जांच पड़ताल :-

https://drive.google.com/open?id=0B1giLrdkKjfRdjB2R1VNTTk2Q3M

Christianity Postmortem - बाइबिल पर पैनी दृष्टि :-

https://drive.google.com/open?id=0B1giLrdkKjfRcHJfRnFkRGFQcFk

Autobiography - आत्मकथाएं :-

https://drive.google.com/open?id=0B1giLrdkKjfRbEpPUGcydTZlWDQ

धर्म एवं आध्यात्म - 

https://drive.google.com/folder/d/0B1giLrdkKjfRRzViUEdGMnI2Smc/edit

यज्ञ Yajna - 

https://drive.google.com/folder/d/0B1giLrdkKjfRUThPYWlldEd6NVE/edit

Brahmcharya - ब्रह्मचर्य :-

https://drive.google.com/open?id=0B1giLrdkKjfRNzJmbWpSYmg5bjQ

Yog - योग :-

https://drive.google.com/open?id=0B1giLrdkKjfRcWZ1NzBoWER2Tkk

Upanishad - उपनिषद  :- 

https://drive.google.com/folder/d/0B1giLrdkKjfRNDJiQVFDbVFjbGc/edit

Geeta - श्रीमद्भगवद्गीता :-

https://drive.google.com/open?id=0B1giLrdkKjfRWk9KVno2V3NNLXM

Manusmriti - मनुस्मृति :-

https://drive.google.com/open?id=0B1giLrdkKjfRTXlYQUJhUXNWM00

Valmeeki and Kamba Ramayan - वाल्मीकि व कम्ब रामायण :-

https://drive.google.com/open?id=0B1giLrdkKjfRa18yTE5EM1Z3Zk0

Puran - पुराण :-

https://drive.google.com/open?id=0B1giLrdkKjfRZnB1NnBCblVoUm8

Books on Vedas - वेदों पर किताबें :-

https://drive.google.com/folder/d/0B1giLrdkKjfRSU9OVzBfbENTcDg/edit

Maharshi Dayananda - महर्षि दयानंद :-

https://drive.google.com/folder/d/0B1giLrdkKjfRN2RzYVdFZWI1a0U/edit

*********

Complete commentaries on Veda - सम्पूर्ण वेद भाष्य 

RigVeda - ऋग्वेद सम्पूर्ण - 

https://drive.google.com/folder/d/0B1giLrdkKjfROXl0b3B0RFpkWEE/edit

YajurVeda - यजुर्वेद सम्पूर्ण - 

https://drive.google.com/folder/d/0B1giLrdkKjfRby02cXFWbnQ2b2M/edit

SamaVeda - सामवेद सम्पूर्ण - 

https://drive.google.com/folder/d/0B1giLrdkKjfRNnh4ZG5PdUJ2bkU/edit

AtharvaVeda - अथर्ववेद सम्पूर्ण - 

https://drive.google.com/folder/d/0B1giLrdkKjfRMFFXcU9waVl4aDQ/edit

***********


No comments:

Post a Comment