SEARCH HERE

Tuesday, 1 January 2019

ಸುಬ್ರಮಣ್ಯ ಷಷ್ಠಿ subramanya shasti margarshira shukla shashti


Subramanya Shasti - Margashira Shudda Shasti

Skanda Mantra

sEnaavidaaraka skandha mahaasEna mahaabala |
rudrOmaagnija Shadvaktra gaMgaagarbha namOstu tE |
ಸೇನಾವಿದಾರಕ ಸ್ಕಂಧ ಮಹಾಸೇನ ಮಹಾಬಲ | ರುದ್ರೋಮಾಗ್ನಿಜ ಷಡ್ವಕ್ತ್ರ ಗಂಗಾಗರ್ಭ ನಮೋಸ್ತು ತೇ | सेनाविदारक स्कंध महासेन महाबल । रुद्रोमाग्निज षड्वक्त्र गंगागर्भ नमोस्तु ते ।

 Skanda Shasti  / Subramanya Shasti / Champa Shasti

Who is Skanda? –

Skanda is the avatara of Manmatha.
He is in the same kakshya of Indra.
He is the lord of War.  Indra did the abhisheka of him as the devasenaadhipathi after he killed Tarakasura. 
During Srinivasa Kalyana Srinivasa devaru nominated him to invite the audience, as he has six faces and can see all six directions.
He is the pravartaka for Skaanda matha
We have to worship Skanda with the antaryami roopa of Pradyamuna roopa of Srihari.

What are his other names ? –
Kumara, Skanda,  Shanmukha, Subramanya or Kartikeya

Subramanya Shasti is termed as “Champa Shasti” if Margashira Shukla Shasti falls on Sunday, Vishaka Nakshatra, and vaidhruti yoga.

He is called as Kumara – as he always looks like a small boy

He is called as Shanmukha as he has six faces
He is called as Kartikeya as he was brought up by six sisters named Kruttika.

He is called as Shanmatura as he was brought up by six mothers.

He is called as SharavaNabava –  When he was born out of the tejasstu of Shiva, Agni held it. Even Agni, could not sustain the tejassu of Shiva tejassu, who kept it in Ganga.  Ganga also could not sustain, who kept it on the grass (Shara), that is why he is called as SharavanaBava. 
It is on this day that Sri Subramanya, who was born on Margashira shudda Panchami killed Tarakasura on the next day, shasti.

When is this Skanda Shasti celebrated? –
It will be celebrated on Margashira Shukla Shasti. This day is also called as Subrayana Shasti.

Why is Skanda Shasti celebrated? –
Subramanya likes this day very much, because it is on this that he killed Tarakasura.  If one does the skanda darshana, snaana  and daana on this, he will be  from  all his  brahma hatyaadi sins.  If one does this vratha, they have Sarpa bhaya nivruthi, satsantaana yoga, from skin diseases.

Why naagaaradhane on Subramanya Shasti ? How is  Subrayana Shasti celebrated? –

On this day we have to perform the pooja of  Subramanya. Subramanya  is worshipped in the form of five-hooded snake.   While doing the Subraya Shasti we have to do the pooja to mainly to Shankapaala, one of the serpant.

Subramanya protected the snakes,when they were in life trouble.  He then ordered that the snakes shall never be killed.  He also blessed them that the pooja of Skanda shall be done in the form of snakes only.    That is why on Subramanya Shasti day, naagaaradhane is being done.   On this day we have to remember and worship 8 snakes, viz.,  ಶೇಷವಾಸುಕಿತಕ್ಷಾಖ್ಯಾ: ಕರ್ಕೋಟೋಽಭೋ ಮಹಾಂಬುಜ: | ಶಂಖಪಾಲಶ್ಚ ಕುಲಿಶ: ಇತ್ಯಷ್ಟೌ ನಾಗವರ್ಯಕಾ: |
शेषवासुकितक्षाख्या: कर्कोटोऽभो महांबुज: । शंखपालश्च कुलिश: इत्यष्टौ नागवर्यका: ।
SheSha, Vaasuki, takShaka, karkOTaka, padma, mahaapadma, shaMKapaala, kulisha.

In the brahmachaari, we have to do the avaahana of sankarshana roopi paramathma.

ಶೇಷಾದಿ ಸಕಲ ಸರ್ಪಾಂತರ್ಗತ ಪ್ರಾಣಸ್ಥ ಸಂಕರ್ಷಣ ಪ್ರೀತ್ಯರ್ಥಂ ಬ್ರಹ್ಮಚಾರ್ಯಾರಾಧನಂ ಕರಿಷ್ಯೇ | ಶೇಷಾಯ ನಮ: ಶೇಷಂ ಸ್ವಾಗತಂ | ಶೇಷಸ್ಯ ಇದಮಾಸನಂ | ಶೇಷ ಇದಂ ತೇ ಪಾದ್ಯಂ | ಶೇಷಂ ಭವತ್ಸು ಆವಾಹಯಿಷ್ಯೇ | ಶೇಷಾಯ ನಮ: | ಗಂದಾದಿ ಸಕಲಾರಾಧನೈ: ಸ್ವರ್ಚಿತಂ |

शेषादि सकल सर्पांतर्गत प्राणस्थ संकर्षण प्रीत्यर्थं ब्रह्मचार्याराधनं करिष्ये । शेषाय नम: शेषं स्वागतं । शेषस्य इदमासनं । शेष इदं ते पाद्यं । शेषं भवत्सु आवाहयिष्ये । शेषाय नम: । गंदादिसकलाराधनै: स्वर्चितं |
Shankapalantargata bharatiramana mukyapranantargatha sri Sankarshanaya nama: |

We have to chant “Om ram skandhaaya nama: Om” while inviting Subramanya.

In this way, we have to do the avaahana of Sheshantargata sankarshana roopi paramathma in the brahmachaari, do the paada prakshalana, give him gopichandana, yajnopaveeta, panchapaatre, phala, vastre, dakshine.

We have to chant “Dhanu:shaktidharO dhyEya: kaamadO bhayanaashana:” for dhyana shloka.

Subramanya's vehicle – Mayura

Why on this day, Brahmacharis will be invited for bhojana?–

Subramanya has the other name Kumara.   He likes young brahmacharis as they will not be having any dwesha-asuya, and their heart will be pure.  Skanda will be invited to have avaahana on Subramanya on these brahmacharies, and will take the sampoorna pooja done to brahmacharies.  Major bhakshyas done on this day will be from Urid dall.  Brahmachari to be given Vastra, Dakshine, etc.

Birth of Skanda –
Satidevi, after having immolated herself in the Daksha Yagna, was reborn as Parvathidevi, as the daughter of Himavanta.  In the meantime, Rudradevaru did a yogic penance  in the Himalayas.

Who is Tarakasura?
Tarakasura is the son of Vajranga (Son of Kashyapa - Diti) and Varangi.    He did severe penance to Brahma and pleased him and sought the boon that no one shall be more powerful than him and with the second boon was that his death could come only from a son born to Shiva.  Tarakasura knew that Rudradevaru had already lost his wife Satidevi and he was in deep penance and he thought Rudra can’t have son all of a sudden.  After getting the great boons, Taraka was killing all the kings and spoiling the hermitages of sages.

All sages, devategalu, unable to sustain the hindrance by Tarakasura, went to Brahmadevaru, who in turn sent Bruhaspati to negotiate with Tarakasura, but he refused and war was fought between Gods and demons, in which Gods were defeated.

As Shiva was in a severe penance, he was not ready to accept the pleading of Parvati for her marriage with Shiva.

Then Devategalu approached Kamaputra Manmatha, with a plan to stop the meditation of Shiva.  Kamadeva arrived in front of Shiva alongwith Ratidevi, and shot five arrows of flowers at the heart of Shiva.  His intention was to make Shiva look at Parvathi and enable their marriage, which in turn would result in a son for the killing of Tarakasura (as per boon).

But when Rudra devaru’s penance was broken, he was terribly angry and opened his third eye on his forehead, and a fierce blazing flame came out of his third eye and Manmatha was burnt to ashes.

The spark of fiery seed of Rudradevaru was unbearable and even Agnideva could not bear them, who threw to River Ganga, wherein it was born as six children.  Parvathi combined these six children to one with six faces and six  Kruttikaas came forward to feed the child (each kruttika feeding six different faces of Skanda).  That is why Skanda is called as Karthikeya, and as Shanmukha.

He then killed Tarakasura and helped the devategalu.

****

Subramanya in Tirtha prabandha by Sri Vadirajaru –

ಸುಬ್ರಹ್ಮಣ್ಯ ಕ್ಷೇತ್ರ

ಸುಬ್ರಹ್ಮಣ್ಯಸ್ಯ ಮಹಿಮಾ ವರ್ಣಿತುಂ ಕೇನ ಶಕ್ಯತೇ |
ಯತ್ರೋಚ್ಚಿಷ್ಠಮಪಿ ಸ್ಪಷ್ಠಂ ಶ್ವಿತ್ರಿಣ: ಶೋಧಯತ್ಯಹೋ || ೩೭ ||

ಬ್ರಹ್ಮಹತ್ಯಾದೋಷಶೇಷಂ ಬ್ರಾಹ್ಮಣಾನಾಂ ಹರನ್ನಯಂ |
ವಿರೋಧೇ ತು ಪರಂ ಕಾರ್ಯಮಿತಿ ನ್ಯಾಯಮಮಾನಯತ್ || ೩೮ ||

ಸುಬ್ರಹ್ಮಣ್ಯ ಸ್ತುತಿ –

ಸುಬ್ರಹ್ಮಣ್ಯ ಸುರಾಗ್ರಗಣ್ಯ ಕುಜನಾರಣ್ಯಜ್ವಲತ್ಪಾವಕ ಪ್ರಬ್ರೂಯಾತ್ ತವ ವಿಕ್ರಮಂ ಭುವಿ ಕವಿ: ಕೋ ವಾsಮರೋ ವಾ ದಿವಿ |

ಯ: ಪ್ರಾಗಪ್ರತಿಮಲ್ಲತಾರಕಮಹಾದೈತ್ಯಂ ಸುದೃಪ್ತಂ ಭವಾನ್ ವಿಪ್ರೌಘಪ್ರಿಯ ಸುಪ್ರಭಾವ ಸಮರೇ ಕ್ರೀಡನ್ನಜೈಷೀದ್ದ್ವಿಷಂ || ೩೯ ||

ಅನ್ನಂ ದದಾಸಿ ವಿದಧಾಸ್ಯಖಿಲಸ್ಯ ರಕ್ಷಾಂ ಕ್ಲಿನ್ನಂ ಪುನಾಸಿ ವಿಲುನಾಸಿ ಸಮಸ್ತದೋಷಾನ್ |

ಹೇ ಸ್ಕಂದ ವಂದ್ಯ ಭವತೋ ಭುವನೇ ಭವಾನೀಸೂನೇ ಕೃಪಾಜಲನಿಧೇ ಕತಮ: ಸಮ: ಸ್ಯಾತ್ || ೪೦ ||

ಪ್ರವರ್ತಿತಸ್ಕಾಂದಮತ: ಪೃಥಿವ್ಯಾಂ ಜಗತ್ಪತಿಂ ಶ್ರೀಪತಿಮಾತ್ಮನಾಥಂ |
ರಹಸ್ಯುಪಾರಾಧಯಿತುಂ ಗುಹಾದ್ಯ ಗುಹಾಂಶ್ರಿತೋsಸೀತಿ ಮಮ ಪ್ರಕರ್ಕ: || ೪೧ ||

ಶ್ರೀವಿಷ್ಣುತೀರ್ಥಮುನಿಮಿತ್ರ ಸುರಾರಿಜೈತ್ರ ಶ್ರೀಕೃಷ್ಣಪಜ್ಜಲಜಭೃಂಗ ಕೃತಾಘಭಂಗ |
ಸಹ್ಯೇಶ ದೇಹಿ ಸಕಲೈರುಪಜೀವ್ಯಮನ್ನಂ ಸಂಹರ್ತೃ ಸರ್ವಭುವನಸ್ಯ ಕುಮಾರಮಹ್ಯಂ || ೪೨ ||

सुब्रह्मण्य क्षेत्र–

सुब्रह्मण्यस्य महिमा वर्णितुं केन शक्यते । यत्रोच्चिष्ठमपि स्पष्ठं श्वित्रिण: शोधयत्यहो ॥ ३७ ॥

ब्रह्महत्यादोषशेषं ब्राह्मणानां हरन्नयं । विरोधे तु परं कार्यमिति न्यायममानयत् ॥ ३८ ॥

सुब्रह्मण्य स्तुति–

सुब्रह्मण्य सुराग्रगण्य कुजनारण्यज्वलत्पावक प्रब्रूयात् तव विक्रमं भुवि कवि: को वाsमरो वा दिवि ।

य: प्रागप्रतिमल्लतारकमहादैत्यं सुदृप्तं भवान् विप्रौघप्रिय सुप्रभाव समरे क्र्‍ईडन्नजैषीद्द्विषं ॥ ३९ ॥

अन्नं ददासि विदधास्यखिलस्य रक्षां क्लिन्नं पुनासि विलुनासि समस्तदोषान् ।

हे स्कंद वंद्य भवतो भुवने भवानी- सूने कृपाजलनिधे कतम: सम: स्यात् ॥ ४० ॥

प्रवर्तितस्कांदमत: पृथिव्यां जगत्पतिं श्रीपतिमात्मनाथं ।

रहस्युपाराधयितुं गुहाद्य गुहांश्रितोsसीति मम प्रकर्क: ॥ ४१ ॥

श्रीविष्णुतीर्थमुनिमित्र सुरारिजैत्र श्रीकृष्णपज्जलजभृंग कृताघभंग ।

सह्येश देहि सकलैरुपजीव्यमन्नं संहर्तृ सर्वभुवनस्य कुमारमह्यं ॥ ४२ ॥

The kshetra Subramanya (kukke subramanya) is situated in South Kanara District of Karnataka, which is about 33 km from Puttur.   It is on the banks of the river Kumaradhaara.   The  kshetra is said to have the importance in historical and philosophically.    Sri Vadirajaru in his Tirtha prabandha says that the varNana of Subramanya kshetra is very very difficult to explain.It is said that even the “kushta” disease (Leprosy) can also be cured, if one rolls over the leftovers of food consumed by brahmin, which is popularly called as “Made snaana”.  But the present day maDe snaana refers to roll over the food consumed by people (but it should be branhmins).

Vadirajaru prays Subramanya as the leader amongst the “Suraas”.He is like the fire which burns the durjanaas,   He is the annaprada.  He is the protector of all.

Some important Subramanya kshetras – Kukke, Ghati,  Ramanathapuram
********


ಹಿಂದು ಪಂಚಾಂಗದ ಪ್ರಕಾರ ಮಾರ್ಗಶಿರಮಾಸ ಶುಕ್ಲಪಕ್ಷದ ಷಷ್ಠಿಯನ್ನು ‘ಸುಬ್ರಹ್ಮಣ್ಯ ಷಷ್ಠಿ’ ಎಂದು ಕರೆಯುವರು. ಇದಕ್ಕೆ ಚಂಪಾ ಷಷ್ಠೀ ಎಂಬ ಹೆಸರೂ ಇದೆ. ಇದು ಸುಬ್ರಹ್ಮಣ್ಯ ಜನಿಸಿದ ದಿನ.


ಹಿಂದೆ ತಾರಕಾಸುರನೆಂಬ ರಾಕ್ಷಸನು ಸಕಲ ಲೋಕದ ಜನರಿಗೆ ಮತ್ತು ದೇವತೆಗಳಿಗೆ ಹಿಂಸಿಸುತ್ತಿದ್ದರ ಕುರಿತು ದೇವತೆಗಳು ಬ್ರಹ್ಮನಲ್ಲಿ ಮೊರೆಯಿಟ್ಟರು. ಅದಕ್ಕೆ ಬ್ರಹ್ಮನು, ಶಿವನು ಪಾರ್ವತಿಯನ್ನು ವಿವಾಹವಾಗಿ ಅವರಿಗೆ ಜನಿಸುವ ಕುಮಾರನು ತಾರಕಾಸುರನನ್ನು ಸಂಹಾರ ಮಾಡುವನು ಎಂದನು. ಪಾರ್ವತಿಯನ್ನು ವಿವಾಹ ಮಾಡಿಕೊಂಡ ನಂತರ ಶಿವನ ತೇಜಸ್ಸು ನೆಲಕ್ಕೆ ಬಿದ್ದಿತು. ಭೂಮಿಯು ಅದನ್ನು ಭರಿಸಲಾಗದೆ ಅಗ್ನಿಯೊಳಗೆ ಹಾಕಿತು. ಅದನ್ನು ಅಗ್ನಿ ಭರಿಸಲಾಗದೆ ಗಂಗೆಯಲ್ಲಿ ಹಾಕಿತು. ಗಂಗೆಯು ತನ್ನ ದಡದಲ್ಲಿದ್ದ ಶರವಣ ಮುನಿಗೆ ನೀಡಿದಳು. ಅಲ್ಲಿಯೇ ಸುಬ್ರಹ್ಮಣ್ಯಸ್ವಾಮಿ ಜನಿಸಿದನು. ಆದ್ದರಿಂದ ಸುಬ್ರಹ್ಮಣ್ಯನಿಗೆ ಇನ್ನೊಂದು ಹೆಸರು ಶರವಣಭವ.

ಈ ಹೆಸರಿನ ಒಂದೊಂದು ಅಕ್ಷರಕ್ಕೂ ವಿಶೇಷ ಅರ್ಥವಿದೆ. ‘ಶ’ ಎಂದರೆ ಲಕ್ಷಿ ್ಮ, ‘ರ’ ಎಂದರೆ ಅಗ್ನಿಬೀಜ, ‘ವ’ ಎಂದರೆ ಅಮೃತಬೀಜ, ‘ಣ’ ಎಂದರೆ ಯಕ್ಷಬೀಜ, ‘ಭ’ ಎಂದರೆ ಅರುಣಬೀಜ, ‘ವ’ ಎಂದರೆ ಅಮೃತಬೀಜ ಎಂದು. ಸುಬ್ರಹ್ಮಣ್ಯನು ಆರು ಮುಖ ಹೊಂದಿರುವುದರಿಂದ ಈತನನ್ನು ಷಣ್ಮುಖ ಎನ್ನುವರು. ಆರು ಮುಖಗಳ ಬಣ್ಣಗಳು ಬಿಳಿ, ಕಪ್ಪು, ಕೆಂಪು, ಕಂದು, ಚಿತ್ರವರ್ಣ ಮತ್ತು ಹಳದಿ. ಖಡ್ಗ, ತ್ರಿಶೂಲ, ಧನುಸ್ಸು, ಚಕ್ರ, ಪಾಶ, ವಜ್ರ, ಅಂಕುಶ ಬಾಣಗಳನ್ನು ಆಯುಧಗಳನ್ನಾಗಿ ಹೊಂದಿ ಅಭಯಹಸ್ತ ತೋರಿಸುತ್ತಾ ದರ್ಶನ ಕೊಡುವ ಸುಬ್ರಹ್ಮಣ್ಯಸ್ವಾಮಿಯು ಸುಬ್ರಹ್ಮಣ್ಯಷಷ್ಠಿಯ ದಿನ ಮಾತ್ರ ಸರ್ಪದ ರೂಪದಲ್ಲಿ ದರ್ಶನ ನೀಡುವನು.

ಕುಜನಾದ ಸುಬ್ರಹ್ಮಣ್ಯ: ಸುಬ್ರಹ್ಮಣ್ಯನ ಎಲ್ಲಾ ಗುಣಗಳನ್ನು ಪರಾಶರ ಮುನಿಯರು ಕುಜನಲ್ಲಿ (ಅಂಗಾರಕನಲ್ಲಿ) ತುಂಬಿದರು. ಸುಬ್ರಹ್ಮಣ್ಯನ ಉಪಾಸನೆಗೆ ಕುಜನು ಕಾರಕನೆಂದು ಕಶ್ಯಪರು, ಅತ್ರಿಗಳು ಮತ್ತು ಕಣ್ವರು ತಿಳಿಸಿದ್ದಾರೆ. ಅಗ್ನಿಯಿಂದ ಜನಿಸಿದ ಸುಬ್ರಹ್ಮಣ್ಯ ಅಗ್ನಿತತ್ತ ್ವ ಜಲದಿಂದ ಜನಿಸಿದ್ದರಿಂದ ಜಲತತ್ತ ್ವ ಭೂಸ್ಪರ್ಶದಿಂದ ಜನಿಸಿದ್ದರಿಂದ ಭೂತತ್ತ ್ವ ಆಕಾಶಮಾರ್ಗದಿಂದ ಬಂದ ಆಕಾಶತತ್ತ ್ವ ವಾಯುವಿನಿಂದ ಬಂದಿರುವುದರಿಂದ ವಾಯುತತ್ತ ್ವ – ಹೀಗೆ ಪಂಚಭೂತ ಹುಟ್ಟಿದ್ದರಿಂದ ಅವನನ್ನು ಉಪಾಸನೆ ಮಾಡಿದರೆ ಪಂಚವಾತಕ ದೋಷಗಳು ನಿವಾರಣೆ ಆಗುವವು.  - by ಮಂಡಗದ್ದೆ ಪ್ರಕಾಶಬಾಬು
***********

ಚಂಪಾಷಷ್ಠೀ

ಮಾರ್ಗಶಿರ ಶುಕ್ಲಪಕ್ಷದ ಷಷ್ಠಿಯನ್ನು ಸುಬ್ರಹ್ಮಣ್ಯ ಷಷ್ಠಿಯೆಂದು, ಸುಬ್ರಾಯನ ಷಷ್ಠಿಯೆಂದೂ, ಚಂಪಾಷಷ್ಠೀ ಎಂದೂ ಕರೆಯುತ್ತಾರೆ.

ಯಾಕೆ ಅಂದು ಈ ಉತ್ಸವವನ್ನು ಆಚರಿಸಬೇಕು? ಎಂದು ವಿಚಾರ ಮಾಡೋಣ.

ಶಿವ ಹಾಗೂ ಪಾರ್ವತಿಯರು ಏಕಾಂತದಲ್ಲಿ ಇರಬೇಕಾದರೆ ಅಗ್ನಿಯು ಪಾರಿವಾಳರೂಪದಿಂದ ಬಂದು ಅದನ್ನು ನೋಡುತ್ತಾನೆ. ಆಗ ಪಾರ್ವತಿಯು ಲಜ್ಜಿತಳಾಗಲು ಶಿವನು ಸಿಟ್ಟಿನಿಂದ ತನ್ನ ವೀರ್ಯವನ್ನು ಆಕಾಶಕ್ಕೆ ಏಸೆಯುತ್ತಾನೆ. ಅದನ್ನು ಅಗ್ನಿಯು ಸ್ವೀಕರಿಸಿದರೂ ಅವನಿಗೆ ಅದನ್ನು ಇಟ್ಟುಕೊಳ್ಳಲಾಗದೆ ಗಂಗೆಯಲ್ಲಿ ವಿಸರ್ಜಿಸುತ್ತಾನೆ. ಗಂಗೆಗೂ ಅದನ್ನು ಸಹಿಸಿಕೊಳ್ಳಲಾಗದೇ ಅವಳು ಅದನ್ನು ಜೊಂಡಿನ ಮೇಲೆ ವಿಸರ್ಜಿಸುತ್ತಾಳೆ. ಆಗ ಉತ್ಪತ್ತಿಯಾದವನೇ ಸುಬ್ರಹ್ಮಣ್ಯ. ಅವನು ಅತ್ತಾಗ ಅವನಿಗೆ ಹಾಲುಣಿಸುವ ಸಲುವಾಗಿ ಆರುಜನ ಕೃತ್ತಿಕಾ ದೇವತೆಗಳು ಬರುತ್ತಾರೆ. ಆಗ ಸುಬ್ರಹ್ಮಣ್ಯನು ಆರುಮುಖದಿಂದ ಅವರು ಉಣಿಸಿದ ಹಾಲನ್ನು ಕುಡಿಯುತ್ತಾನೆ.

ನಂತರ ಅವನು ದೇವಸೇನಾನಿಯಾಗಿ ತಾರಕಾಸುರನನ್ನು ಸಂಹರಿಸುತ್ತಾನೆ. ಹೀಗೆ ಸ್ಕಂದನು ತಾರಕಾಸುರನನ್ನು ಸಂಹರಿಸಿದ ದಿನ ಮಾರ್ಗಶಿರ ಶುಕ್ಲಪಕ್ಷದ ಷಷ್ಠಿ. ಅಂದು ವಿಶೇಷ ಯೋಗವಾದ ಚಂಪಾ

ಎಂಬ ಯೋಗವೂ ಇತ್ತು. ಹಾಗಾಗಿ ಅಂದು ಚಂಪಾಷಷ್ಠೀ.

ನಿಹತ್ಯ ತಾರಕಂ ಷಷ್ಠ್ಯಾಂ ಗುಹಸ್ತಾರಕರಾಜವತ್
ರರಾಜ ದಯಿತಾ ತೇನ ತಾರಕೇಯಸ್ಯ ಸಾ ತಿಥಿಃ

ಎಂದು ಸುಬ್ರಹ್ಮಣ್ಯನ ತಿಥಿಯು ಷಷ್ಠಿಯೆಂದು ತಿಳಿಸಿದ್ದಾರೆ.

ಅಂದರೆ ಅಂದು ತಾರಕಾಸುರನನ್ನು ಸಂಹರಿಸಿದ ಸುಬ್ರಹ್ಮಣ್ಯನನ್ನು ದೇವತೆಗಳು ಸಂತೋಷದಿಂದ ಪೂಜಿಸಿ ಅಂದಿನಿಂದ ಸುಬ್ರಹ್ಮಣ್ಯನನ್ನು ಸರ್ವಕಾಲದಲ್ಲೂ ದೇವಸೇನಾನಿಯಾಗಿ ಅಭಿಷೇಕಿಸಿದರು. ಆದ್ದರಿಂದ ಈ ಷಷ್ಠಿಯಂದು ಸ್ಕಂದನು ಪ್ರಸನ್ನನಾಗಿ ಸಕಲರಿಗೂ ವಿಶೇಷಾನುಗ್ರಹವನ್ನು ಮಾಡುತ್ತಾನೆ.

ಚಂಪಾ ಎಂಬುದು ಒಂದು ಯೋಗವಿಶೇಷದ ಹೆಸರು. ಅಂದರೆ ಒಂದೊಂದು ತಿಥಿಗೆ ಕೆಲವೊಂದು ಯೋಗವಿಶೇಷಗಳಿರುತ್ತವೆ. ಅವುಗಳು ಆ ಸಂದರ್ಭದಲ್ಲಿ ವಿಶೇಷ ಫಲಗಳನ್ನು ಕೊಡುತ್ತವೆ. ಅದರಂತೆ ಷಷ್ಠಿ ತಿಥಿಗೆ ಚಂಪಾ, ಮಂದಾರ, ವರ ಎಂಬಂತಹ ಯೋಗವಿಶೇಷಗಳಿವೆ. ಅದರಲ್ಲಿ ಚಂಪಾ ಯೋಗವಿದ್ದರೆ ಸಕಲಕಾರ್ಯಗಳಲ್ಲಿಯೂ ಜಯ ಪ್ರಾಪ್ತಿಯಾಗುತ್ತದೆ.

ಈ ಚಂಪಾ ಯೋಗವು ಹೇಗೆ ಬರುತ್ತದೆ ಎಂದು ನೋಡೋಣ.

ಮಾರ್ಗೇ ಭಾದ್ರಪದೇ ಶುಕ್ಲಾ ಷಷ್ಠೀ ವೈಧೃತಿಸಂಯುತಾ।
ರವಿವಾರೇಣ ಸಂಯುಕ್ತಾ ಸಾ ಚಂಪೇತಿ ಕೀರ್ತಿತಾ॥
ವಿಶಾಖಾ ಭೌಮಯೋಗೇನ ಸಾ ಚಂಪೇತೀಹ ಕೀರ್ತಿತಾ ॥

ಎಂದು ಎರಡು ವಿಧವಾಗಿ ಚಂಪಾ ಯೋಗವು ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ.

1.ಮಾರ್ಗಶಿರ ಅಥವಾ ಭಾದ್ರಪದ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಭಾನುವಾರ ಹಾಗೂ ಅಂದೇ ವೈಧೃತಿಯೆಂಬ ಯೋಗವೂ ಸೇರಿದರೆ "ಚಂಪಾಷಷ್ಠೀ" ಎಂದೆನಿಸುತ್ತದೆ. ಅಥವಾ ಮಂಗಳವಾರದಂದು ವಿಶಾಖಾ ನಕ್ಷತ್ರವಿದ್ದರೂ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯು ಚಂಪಾಷಷ್ಠೀ ಎಂದೆನಿಸಿಕೊಳ್ಳುತ್ತದೆ.

ಈ ಎರಡು ವಿಧವಾದ ದಿನಗಳಲ್ಲಿ ಒಂದು ದಿನ ಸ್ಕಂದನು ತಾರಕಾಸುರನನ್ನು ಸಂಹರಿಸಿದನು. ಆದ್ದರಿಂದ ಆ ಷಷ್ಠಿಗೆ ಚಂಪಾಷಷ್ಠೀ ಎಂದು ಹೆಸರು.

ಈ ದಿನದಂದು ದೇವತೆಗಳು ವಿಶೇಷವಾಗಿ ಸುಬ್ರಹ್ಮಣ್ಯನ ಪೂಜೆಯನ್ನು ಮಾಡುತ್ತಾರೆ. ಆದ್ದರಿಂದ ನಾವೆಲ್ಲ ಅಂದು ಚಂಪಾ ಯೋಗವಿಲ್ಲದಿದ್ದರೂ ಅಂದು ಮಾಡುವ ಪೂಜೆಯು ಚಂಪಾಷಷ್ಠೀಯ ಪೂಜಾಫಲ.

ಅದರಂತೆ ಇಂದು ಇನ್ನೂ ಒಂದು ವಿಶೇಷವಿದೆ.

ಹಿಂದೆ ಪಾತಾಳದಲ್ಲಿ ವಾಸಿಸುವ ನಾಗದೇವತೆಗಳ ಮೇಲೆ ಸುತಲಲೋಕದ ದೈತ್ಯರ ಆಕ್ರಮಣವಾದಾಗ ನಾಗದೇವತೆಗಳ ಪ್ರಾರ್ಥನೆಯಂತೆ ಸುಬ್ರಹ್ಮಣ್ಯನು ಅಲ್ಲಿಗೆ ಬಂದು ದೈತ್ಯರೊಂದಿಗೆ ಹೋರಾಡಿ ನಾಗದೇವತೆಗಳಿಗೆ ಜಯ ತಂದಿತ್ತನು. ಆಗ ನಾಗರು ತಮ್ಮ ಪ್ರತೀಕದಲ್ಲಿ ಸದಾ ಕಾಲ ಸುಬ್ರಹ್ಮಣ್ಯನು ನಮ್ಮಲ್ಲಿ ಇದ್ದು ದೈತ್ಯರ ಭಯ ಇಲ್ಲದಂತೆ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಅದರಂತೆ ಸುಬ್ರಹ್ಮಣ್ಯನು ಸರ್ಪಗಳಿಗೆ ಅಭಯವನ್ನು ನೀಡುತ್ತಾನೆ. ಆಗ ಸಂತುಷ್ಟರಾದ ನಾಗಗಳು ತಮ್ಮ ಪ್ರತೀಕದಲ್ಲಿ ಸುಬ್ರಹ್ಮಣ್ಯನ ಆರಾಧನೆಯೂ ನಡೆಯುವಂತೆ ಅನುಗ್ರಹಿಸುತ್ತಾರೆ. ಅಂದಿನಿಂದ ಸುಬ್ರಹ್ಮಣ್ಯ ಷಷ್ಠಿಯಂದು ನಾಗನ ಪ್ರತೀಕದಲ್ಲಿ ಸುಬ್ರಹ್ಮಣ್ಯನ ಆರಾಧನೆಯು ನಡೆಯುವ ಸಂಪ್ರದಾಯ ಬಂದಿತು. 
*********

ಸುಬ್ರಮಣ್ಯ (ಸ್ಕಂದ) ಷಷ್ಠಿಯ ದಿನ ನೀವು ಏನು ಮಾಡಬೇಕು?

ಸುಬ್ರಮಣ್ಯ (ಸ್ಕಂದ) ಷಷ್ಠಿಯ ದಿನ ನೀವು ಕೆಂಪು ಹೂವುಗಳನ್ನು ಸುಬ್ರಹ್ಮಣ್ಯನಿಗೆ ಅರ್ಪಿಸಬೇಕು, ಅದರ ಜೋತೆಗೆ ಭಸ್ಮವನ್ನು ತೆಗೆದುಕೊಂಡು ಹೋಗಿ ಸುಬ್ರಮಣ್ಯನ ದೇವಾಲಯಕ್ಕೆ ಅರ್ಪಿಸಿ. ನಿಮ್ಮ ಹೆಸರಿನಲ್ಲಿ ಅರ್ಚನೆಯನ್ನು ಮತ್ತು ಸೇವೆಗಳನ್ನು ಮಾಡಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ. ಸ್ಕಂದ ದೇವ ಈ ಭೂಮಿಯ ಮೇಲೆ ಜೀವಿಸುವುದಕ್ಕೆ ನಿನ್ನ ಅನುಗ್ರಹ ಬೇಕು, ನಿನ್ನ ಅನುಗ್ರಹ ಸದಾ ನಮ್ಮ ಇರಲಿ ಎಂದು ಪ್ರಾರ್ಥನೆ ಮಾಡಿ.

ದಕ್ಷಿಣ ಭಾರತದಲ್ಲಿ ನಡೆಯುವ ಅತ್ಯಂತ ಅದ್ಧೂರಿ ಹಬ್ಬಗಳಲ್ಲಿ ಇದೂ ಕೂಡ ಒಂದು. ಬಹಳಷ್ಟು ಸ್ಥಳಗಳಲ್ಲಿ ಈ ಹಬ್ಬ ಷಷ್ಠಿಗೂ ಆರು ದಿನ ಮುನ್ನ ಶುರು ಆಗಿ ಷಷ್ಠಿಯ ದಿನ ಮುಕ್ತಾಯಗೊಳ್ಳುತ್ತದೆ. ಈ ದಿನಗಳಲ್ಲಿ ಭಕ್ತರು, ಸುಬ್ರಹಮಣ್ಯನ ಸ್ತೋತ್ರಗಳನ್ನು, ಕಥೆಗಳನ್ನು ಓದುತ್ತಾರೆ ಹಾಗು ದೇವರ ಕಥೆಗಳನ್ನು ವೇದಿಕೆಯ ಮೇಲೆ ನಿರ್ವಹಿಸುತ್ತಾರೆ. ಸಾವಿರಾರು ಜನ ಅಂದಿನ ವಿಶೇಷವಾದ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರಖ್ಯಾತ ಸುಬ್ರಹಮಣ್ಯನ ದೇವಸ್ಥಾನಗಳಿರುವುದು ಉಡುಪಿ, ತಿರುಚೆಂದೂರ್, ಪಳನಿ, ತಿರುಪರನ್ಕುಂದ್ರಮ್, ಕಾತಿರ್ಗಮಮ್ ಮುಂತಾದ ಹಲವು ಕಡೆಗಳಲ್ಲಿ. ಈ ದೇವಸ್ಥಾನಗಳಲ್ಲಿ ಸ್ಕಂದ ಷಷ್ಠಿಯಂದು ಜಾತ್ರೆ ಹಾಗು ಉತ್ಸವಗಳು ನಡೆಯುತ್ತವೆ.

ಸ್ಕಂದ ಷಷ್ಠಿಯ ದಿನ ಭಕ್ತಾದಿಗಳು ಜಪವನ್ನು ಮಾಡಿ, ಕಾವಡಿಯನ್ನು ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.

ಸ್ಕಂದ ಷಷ್ಠಿ ಹಾಗೂ ಸೂರ ಸಂಹಾರ

ಸ್ಕಂದ ಷಷ್ಠಿ, ಶಿವನ ಮಗನಾದ ಸುಬ್ರಹ್ಮಣ್ಯ/ಕಾರ್ತಿಕೇಯ/ಮುರುಗನ್ ದೇವರಿಗೆ ಸಂಬಂಧ ಪಟ್ಟ, ಆರು ದಿನಗಳ ಕಾಲ ನಡೆಯುವ ಹಬ್ಬ ಆಚರಿಸಲಾಗುತ್ತದೆ. ಕಾರ್ತೀಕ ಮಾಸದ(ಅಕ್ಟೋಬರ್- ನವೆಂಬರ್) ಹುಣ್ಣಿಮೆಯಂದು ಪ್ರಾರಂಭವಾಗುವ ಈ ಹಬ್ಬದಲ್ಲಿ ದೇವರಿಗೆ ರಥೋತ್ಸವ ಹಾಗು ವಿಶೇಷ ಪೂಜೆಗಳು ನಡೆಯುತ್ತವೆ. ಸ್ಕಂದ ಅಥವಾ ಸುಬ್ರಹ್ಮಣ್ಯನು ತನ್ನ ಆಯುಧವನ್ನು(ಭರ್ಜಿಯನ್ನು) ಪಡೆಯುವ ಮೂಲಕ ಕತ್ತಲೆಯ ಮೇಲೆ ಆಧ್ಯಾತ್ಮದ ಬೆಳಕಿನ ಗೆಲ್ಲುವ ಹಬ್ಬ. ಜಪ, ಸಂಯಮ, ಉಪವಾಸ ಹಾಗು ಭಕ್ತಿಯನ್ನು ಈ ಸಮಯದಲ್ಲಿ ನಿಷ್ಠೆಯಿಂದ ಆಚರಿಸುವುದರಿಂದ ಒಳ್ಳೆಯ ಫಲಗಳು ದೊರೆಯುತ್ತವೆ.

ಸ್ಕಂದ ಷಷ್ಠಿಯ ಹಿಂದಿನ ಕಥೆ

ಅತಿ ದೊಡ್ಡದಾದ ಹಾಗು 18 ಮಹಾಪುರಾಣಗಳಲ್ಲಿ ಒಂದಾದ ಸ್ಕಂದ ಪುರಾಣದ ಪ್ರಕಾರ, ಸುರಪದ್ಮ, ಸಿಂಹಮುಖ ಹಾಗು ತಾರಕಾಸುರ ರಾಕ್ಷಸರ ನಾಯಕತ್ವದಲ್ಲಿ ರಾಕ್ಷಸರು ದೇವತೆಗಳನ್ನು ಸೋಲಿಸಿ ಧರೆಯನ್ನು ಆಕ್ರಮಿಸುತ್ತಾರೆ. ದೇವತೆಗಳನ್ನು ಹಾಗು ಮನುಷ್ಯರನ್ನು ಹಿಂಸಿಸಿ, ದೇವತೆಗಳಿಗೆ ಸಂಬಂಧ ಪಟ್ಟದ್ದನ್ನೆಲ್ಲಾ ಧ್ವಂಸ ಮಾಡುತ್ತಾರೆ. ಆದರೆ ಸುರಪದ್ಮನಿಗೆ, ಶಿವನು ಸತಿಯ ನಂತರ ಐಹಿಕ ಜೀವನವನ್ನು ತ್ಯಜಿಸಿ, ಗಂಭೀರವಾದ ತಪ್ಪಸ್ಸಿನಲ್ಲಿ ಮುಳುಗಿದ್ದಾನೆಂಬುದನ್ನು ಅರಿತು, ತನಗೆ ಶಿವನ ಮಗನಿಂದಲೇ ಸಾವಾಗ ಬೇಕು ಎಂಬ ವರವನ್ನು ತೆಗೆದುಕೊಂಡಿರುತ್ತಾನೆ.

ದೇವತೆಗಳು ತಪ್ಪಸ್ಸಿನಲ್ಲಿದ್ದ ಶಿವನ ಪಾದಕ್ಕೆ ಬಿದ್ದು ಅವನ ಆಶ್ರಯ ಪಡೆಯುತ್ತಾರೆ. ಬ್ರಹ್ಮ ದೇವನ ಸಲಹೆಯ ಮೇರೆಗೆ ದೇವತೆಗಳು ಮನ್ಮಥನ ಸಹಾಯದದಿಂದ ಶಿವನಲ್ಲಿ ಕಾಮದ ಇಚ್ಚೆಯನ್ನು ಪ್ರಚೋದಿಸುತ್ತಾನೆ. ಇದರಿಂದ ಕೋಪಗೊಂಡ ಶಿವನು ಮನ್ಮಥನನ್ನು ಸುಟ್ಟು ಬೂದಿ ಮಾಡುತ್ತಾನೆ.

ಶಿವನಿಂದ ಬಂದ ವೀರ್ಯಗಳು ಆರು ಭಾಗಗಳಾಗಿ ಗಂಗೆಯಲ್ಲಿ ಲೀನವಾಗುತ್ತದೆ. ಗಂಗೆಯು, ಆ ಆರು ಭಾಗಗಳನ್ನು ಒಂದು ಕಾಡಿನಲ್ಲಿ ಸ್ಥಾಪಿಸಿದಾಗ ಅದು ಆರು ಮಕ್ಕಳ ರೂಪ ಪಡೆದುಕೊಳ್ಳುತ್ತದೆ. ಆ ಮಕ್ಕಳನ್ನು ಆರು ಕಾರ್ತಿಕೇಯ ನಕ್ಷತ್ರಗಳ ಹೆಣ್ಣು ಮಕ್ಕಳು ನೋಡಿಕೊಳ್ಳುತ್ತಿದ್ದಾಗ ಪಾರ್ವತಿ ದೇವಿಯು ಆ ಆರು ಮಕ್ಕಳನ್ನು ಒಂದಾಗಿ ಮಾಡಿದಾಗ ಆರು ತಲೆಯುಳ್ಳ ಒಂದು ಮಗುವಾಗುತ್ತದೆ. ಹಾಗಾಗಿ ಸುಬ್ರಹ್ಮಣ್ಯ ಅಥವಾ ಕಾರ್ತಿಕೇಯ ಆರು ತಲೆಯುಳ್ಳ ದೇವರಾಗಿ ಚಿತ್ರಿಸಲಾಗುತ್ತದೆ.

ರಾಕ್ಷಸರು ತಮ್ಮ ಅಟ್ಟಹಾಸ ಮುಂದುವರೆಸಿದ್ದರು. ಸುರಪದ್ಮ ಇಂದ್ರನ ಮಗನನ್ನು, ಋಶಿಗಳನ್ನು ಹಾಗು ದೇವತೆಗಳನ್ನು ಒತ್ತೆಯಾಗಿಟ್ಟುಕೊಂಡಿರುತ್ತಾನೆ. ಸುಬ್ರಹಮಣ್ಯ ಸ್ವಾಮಿಯು ಶೀಘ್ರವಾಗೆ ದೇವತೆಗಳ ಸೇನಾಪತಿಯಾಗಿ ರಾಕ್ಷಸರನ್ನು ಸೋಲಿಸುತ್ತಾನೆ. ಕೊನೆಯ ಯುದ್ಧದಲ್ಲಿ, ಸುಬ್ರಹ್ಮಣ್ಯ ಸ್ವಾಮಿಯು ಸೂರಪದ್ಮನನ್ನು ತನ್ನ ಆಯುಧದಿಂದ ಕೊಲ್ಲುತ್ತಾನೆ. ಈ ಪ್ರಕ್ರಿಯೆಗೆ ‘ಸೂರಸಂಹಾರ’ ಎಂದು ಹೆಸರು ಬಂತು. ಮುಖ್ಯ ಸ್ಕಂದ ಷಷ್ಠಿ ಇಂದೇ ಆಚರಿಸಲಾಗುತ್ತದೆ.
***********
#ಸುಬ್ರಹ್ಮಣ್ಯಕ್ಷೇತ್ರಗಳು
    
ಮಾರ್ಗಶಿರ ಮಾಸದ ಶುದ್ಧ ಷಷ್ಠಿ ದಿನವನ್ನು ಚಂಪಾಷಷ್ಠಿ ಅಥವಾ ಕುಕ್ಕೆ ಷಷ್ಠಿಯೆಂದೇ ಕರೆಯುತ್ತಾರೆ. ಇದು ಸುಬ್ರಹ್ಮಣ್ಯನಿಗೆ ಪ್ರಿಯವಾದ ದಿನ. ಈ ದಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿಶ್ರೀ ಸ್ವಾಮಿಯನ್ನು ಶುಭ ಮುಹೂರ್ತದಲ್ಲಿಬ್ರಹ್ಮರಥಾರೋಹಣ ಮಾಡಿಸುತ್ತಾರೆ. ಇದಕ್ಕಿಂತ ಮೊದಲು ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿವಿರಾಜಮಾನರಾಗುತ್ತಾರೆ. ಶ್ರೀ ದೇವರ ಬ್ರಹ್ಮರಥಾರೋಹಣವಾದ ನಂತರ ಸುವರ್ಣವೃಷ್ಟಿಯಾಗುತ್ತದೆ. ಈ ಸಂದರ್ಭದಲ್ಲಿಗರುಡನು ಬಂದು ಮೂರು ಪ್ರದಕ್ಷಿಣೆ ಹಾಕುತ್ತಾನೆ ಎಂಬ ನಂಬಿಕೆ ಇದೆ.

#ಕುಕ್ಕೆಶ್ರೀಸುಬ್ರಹ್ಮಣ್ಯದೇವಸ್ಥಾನನಾಗಕ್ಷೇತ್ರ. 

ಸರ್ಪರಾಜ ವಾಸುಕಿ ಸುಬ್ರಹ್ಮಣ್ಯನೊಂದಿಗೆ ಸನ್ನಿಹಿತನಾಗಿ ಇಲ್ಲಿಪೂಜೆ ಪಡೆಯುತ್ತಾನೆ. ಆದ್ದರಿಂದಲೇ ನಾಗದೋಷ ಪರಿಹಾರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಪ್ರಸಿದ್ಧಿ. ಮಕ್ಕಳಾಗದವರು, ಚರ್ಮರೋಗಗಳ ಸಮಸ್ಯೆ ಇರುವ ಸರ್ವ ಧರ್ಮೀಯರೂ ಕ್ಷೇತ್ರಕ್ಕೆ ಹರಕೆ ಹೊತ್ತು, ಸಲ್ಲಿಸಿ ಕೃತಾರ್ಥರಾಗುತ್ತಾರೆ.

ಶ್ರೀ ಸುಬ್ರಹ್ಮಣ್ಯಷಷ್ಠಿ ಮಹೋತ್ಸವಗಳ ಕಾಲದಲ್ಲಿಭಕ್ತರು ತಮ್ಮ ಅನೇಕ ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳ ನಿವಾರಣೆಗಾಗಿ ಹೇಳಿಕೊಂಡಿರುವ ಹರಕೆ ಬೀದಿ ಮಡೆಸ್ನಾನ (ಉರುಳು ಸೇವೆ) ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೇ ಸಂತರ್ಪಣೆಯ ಉಚ್ಚಿಷ್ಠದಲ್ಲಿಹೊರಳಾಡಿಕೊಂಡು ಅಂಗಣದಲ್ಲಿಪ್ರದಕ್ಷಿಣೆ ಬರುವ ಮಡೆಸ್ನಾನ ಸೇವೆಯು ಮುಖ್ಯ ಹರಕೆಯಲ್ಲಿಒಂದು.

ಮೊದಲು ಪಂಚಮಿರಥವನ್ನು ಎಳೆದರೆ ನಂತರ ಚಂಪಾಷಷ್ಠಿ ಬ್ರಹ್ಮರಥೋತ್ಸವವು ಜರಗುತ್ತದೆ. ಭಕ್ತರು ತಮ್ಮ ಹರಕೆಯಂತೆ ರಥವನ್ನು ಎಳೆಯುವುದರ ಮೂಲಕ ಹಾಗೂ ಕಾಳುಮೆಣಸು, ನಾಣ್ಯ, ದವಸ ಧಾನ್ಯಗಳನ್ನು ರಥಕ್ಕೆ ಎಸೆದು ಕೃತಾರ್ಥರಾಗುತ್ತಾರೆ.

#ಕುಡುಪುಶ್ರೀಅನಂತಪದ್ಮನಾಭಕ್ಷೇತ್ರ

ಷಷ್ಠಿ ದಿನದಂದು ಇಲ್ಲೂಬ್ರಹ್ಮರಥೋತ್ಸವ ನಡೆಯಲಿದೆ. ಸಾವಿರಾರು ಭಕ್ತರು ಭಾಗಿಯಾಗಿ ಹರಕೆಯನ್ನು ತೀರಿಸಿಕೊಳ್ಳುತ್ತಾರೆ. ದೇವರ ಬಲಿ ಉತ್ಸವ ನಡೆದ ಬಳಿಕ ರಥೋತ್ಸವ, ನಾಗಬನದಲ್ಲಿತಂಬಿಲ ಸೇವೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕಗಳು ನಡೆಯುತ್ತವೆ.

ಶ್ರೀಕ್ಷೇತ್ರ ಕುಡುಪು ಮಂಗಳೂರಿನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ, ಮಂಗಳೂರು - ಮೂಡಬಿದ್ರೆ ರಾಜ್ಯ ಹೆದ್ದಾರಿಯಲ್ಲಿರುವ ಕುಡುಪು ಎಂಬ ಗ್ರಾಮದಲ್ಲಿದೆ. ಈ ಕ್ಷೇತ್ರದ ಮುಖ್ಯ ಆರಾಧ್ಯ ದೇವರು ಶ್ರೀ ಅನಂತ ಪದ್ಮನಾಭ. ಹಾಗೂ ನಾಗದೇವರನ್ನು ಇಲ್ಲಿಪೂಜಿಸಲಾಗುತ್ತಿರುವುದು ಇಲ್ಲಿನ ವೈಶಿಷ್ಟ್ಯ. ಪ್ರತಿ ವರ್ಷವು ಷಷ್ಠಿ ಉತ್ಸವವು ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ನಾಗರಪಂಚಮಿಯಂದು ಈ ಕ್ಷೇತ್ರದಲ್ಲಿಭಕ್ತರು ನಾಗ ದೇವರ ಮೂರ್ತಿಗೆ ಹಾಲೆರೆದು ತಮ್ಮ ಭಕ್ತಿಪೂರ್ವಕ ಸೇವೆ ಸಲ್ಲಿಸುತಾರೆ.

#ಮಂಜೇಶ್ವರಶ್ರೀಮದ್‌ಅನಂತೇಶ್ವರದೇವಸ್ಥಾನ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿನಡೆಯುವ ಸೇವೆಗಳನ್ನು ಮಂಜೇಶ್ವರ ಶ್ರೀಮದ್‌ ಅನಂತೇಶ್ವರ ದೇವಸ್ಥಾನದಲ್ಲಿಕೂಡ ನಡೆಸಲಾಗುತ್ತಿದೆ. ಇಲ್ಲಿವಿಷ್ಣು, ಈಶ್ವರ ಹಾಗೂ ನಾಗದೇವರ ಸಾನ್ನಿಧ್ಯವಿದೆ. ಶೈವರು ಹಾಗೂ ವೈಷ್ಣವರ ಸಮಾಗಮ ಈ ಕ್ಷೇತ್ರದಲ್ಲಿಆಗುತ್ತದೆ. ಇನ್ನೊಂದು ವಿಶೇಷವೆಂದರೆ ಶಂಕರಾಚಾರ್ಯರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ಇತಿಹಾಸ ಹೇಳುತ್ತದೆ. ಈ ನಿಟ್ಟಿನಲ್ಲಿಶಂಕರಾಚಾರ್ಯರಿಗಿಂತ ಮೊದಲೇ ಈ ದೇವಸ್ಥಾನವಿತ್ತು ಎಂಬುದು ಇಲ್ಲಿನ ವಿಶೇಷತೆ. ನಾಗರ ಪಂಚಮಿ ಹಾಗೂ ಷಷ್ಠಿ ಮಹೋತ್ಸವ ಇಲ್ಲಿನ ಪ್ರಮುಖ ಆಚರಣೆಗಳು.

ಕಾರ್ಪಾಡಿ, ಕೆಮ್ಮಿಂಜೆ #ಶ್ರೀಷಣ್ಮುಖಸುಬ್ರಹ್ಮಣ್ಯದೇವಸ್ಥಾನ

ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕಾರ್ಪಾಡಿ ಹಾಗೂ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿಷಷ್ಠಿ ಆಚರಣೆ ನಡೆಯುತ್ತದೆ. ಷಣ್ಮುಖ ಸುಬ್ರಹ್ಮಣ್ಯ ದೇವರನ್ನು ಇಲ್ಲಿಆರಾಧಿಸಲಾಗುತ್ತಿರುವುದರಿಂದ ನಾಗರ ಪಂಚಮಿ ಮತ್ತು ಷಷ್ಠಿ ಆಚರಣೆ ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.

ಬಳ್ಳಮಂಜ #ಶ್ರೀಅನಂತೇಶ್ವರದೇವಸ್ಥಾನ

ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪದ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನ ಬಹಳ ಪುರಾತನ ದೇವಳಗಳಲ್ಲೊಂದು. ಇಲ್ಲಿಕೂಡ ಷಷ್ಠಿ ಆಚರಣೆ ಬಹಳ ಪ್ರಸಿದ್ಧಿ ಪಡೆದಿದೆ.

ಪಾವಂಜೆ #ಶ್ರೀಜ್ಞಾನಶಕ್ತಿಸುಬ್ರಹ್ಮಣ್ಯಸ್ವಾಮಿದೇವಸ್ಥಾನ

ಮಾರ್ಗಶಿರ ಶುದ್ಧ ಚತುರ್ಥಿಯಂದೇ ಇಲ್ಲಿಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಷಷ್ಠಿವರೆಗೆ ಸಂಭ್ರಮದಿಂದ ನಡೆಯುತ್ತದೆ. ನಾಗವೃಜ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಇಲ್ಲಿಚತುರ್ಥಿಯಂದು ಬೆಳಗ್ಗಿನಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು, ನಾನಾ ಸೇವೆಗಳು, ಅಭಿಷೇಕಗಳು, ಪೂಜೆಗಳು ಸಮರ್ಪಣೆಯಾಗಲಿವೆ. ಮೂಡುಗಣಪತಿ ಸೇವೆ, ವೈದಿಕ ನಾಗಮಂಡಲ ಸೇವೆ, ಸುಬ್ರಹ್ಮಣ್ಯ ವ್ರತ ಬಹಳ ಪ್ರಮುಖವಾದವುಗಳು.

ಉಡುಪಿ ಜಿಲ್ಲೆಯ ಸಗ್ರಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ, ಕಾಳಾವರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅತ್ಯಂತ ಪುರಾತನ ದೇವಸ್ಥಾನಗಳಾಗಿದ್ದು, ಷಷ್ಠಿ ಆಚರಣೆ ಇಲ್ಲಿಪ್ರಮುಖವಾಗಿವೆ.
**********



by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ

" ಶ್ರೀ ಸುಬ್ರಹ್ಮಣ್ಯ -  1 "
" ಸುಬ್ರಹ್ಮಣ್ಯಸ್ಯ ಮಹಿಮಾ೦ 
ವರ್ಣಿತುಂ ಕೇನ ಶಕ್ಯತೇ " 
" ಈದಿನ - ದಿನಾಂಕ : 17.02.2021 ಮಾಘ ಶುದ್ಧ ಷಷ್ಟೀ ಬುಧವಾರ  - ಕೊನೆಯ ಸುಬ್ರಹ್ಮಣ್ಯ ಷಷ್ಟೀ" 
" ಪ್ರಸ್ತಾವನೆ " 
" ವೈಷ್ಣವ ನಾಗಾರಾಧನೆ ಹೇಗೆ? " 
ಸುಬ್ರಹ್ಮಣ್ಯದಲ್ಲಿ ವಾಸುಕಿ ನೆಲೆಸಿರುವನು. 
ಹರಿಯೊಬ್ಬನನ್ನು ಬಿಟ್ಟರೆ ಇನ್ನೆಲ್ಲರೂ ಪರಿವಾರದವರಲ್ಲವೇ? 
ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯದಲ್ಲೂ ವೈಷ್ಣವ ನಾಗಾರಾಧನೆಯನ್ನು ( ಸರ್ಪೋಪಾಸನೆ ) ಸರಿಯಾಗಿ ತಿಳಿದು ಮಾಡಿದರೆ - ಸರ್ಪ ದೋಷದ ನಿವೃತ್ತಿಯಾಗಿ ಧನ - ಸಂತಾನ ಪ್ರಾಪ್ತಿ ಮೋಟಾದವುಗಳ ಜೊತೆಗೆ ದುರ್ಲಭವಾದ ತತ್ತ್ವಜ್ಞಾನವೂ ಪ್ರಾಪ್ತವಾಗುವುದು. 
" ಛಕ್ರೀ ( ತ್ರೀ ) ಭೂತ ಫಣೀಂದ್ರ-
ಮಿಂದುಧವಳ೦ ಲಕ್ಷ್ಮೀ ನೃಸಿಂಹಂ ಭಜೇ " 
ಸರ್ಪದಿಂದ ಸುತ್ತುವರೆಯಲ್ಪಟ್ಟ ( ಅಥವಾ ಸರ್ಪದ ಛತ್ರಿಯಿಂದ ಶೋಭಿಸುತ್ತಿರುವ ) ಶ್ರೀ ಲಕ್ಷ್ಮೀ ನೃಸಿಂಹದೇವರ ಚಿಂತನೆಯಿಂದ ಸರ್ಪ ದೋಷವು ನಾಶವಾಗುವುದಲ್ಲದೇ ನಾಗಾರಾಧನೆಯೂ ಶ್ರೀ ಹರಿ ಪೂಜೆಯಾಗುವುದು. 
ನಾಗ ಸುಬ್ರಹ್ಮಣ್ಯನಲ್ಲ. 
ಸುಬ್ರಹ್ಮಣ್ಯ ನಾಗನೂ ಅಲ್ಲ. 
ನಾಗ ಸ್ಥಳಗಳಲ್ಲಿ ಸುಬ್ರಹ್ಮಣ್ಯನ ಸನ್ನಿಧಾನ. 
ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹೇಳಿದ ಸ್ಕಂದ ವಚನದಂತೆ ವಾಸುಕಿಯಲ್ಲಿ ಸ್ಕಂದನ ವಿಶೇಷ ಸನ್ನಿಧಾನವಿದೆ. 
ಈ ಮಾತಿನಿಂದ ಎಲ್ಲೆಡೆ ಸ್ಕಂದ ಸಂನಿಧನವನ್ನು ಹೇಳುವಂತಿಲ್ಲ. 
ಕುಕ್ಕೆಯಲ್ಲಿ ಮಾತ್ರ ವಾಸುಕಿಯೊಡನೆ ಸ್ಕಂದನ ಆರಾಧನೆ. 
ಸರ್ವೇ ಶೃಣ್ವ೦ತು ಮದ್ವಾಕ್ಯಮೃ-
ಷಯೋ ದೇವ ಮಾನವಾಃ ।
ಮದಂಗೇನಾಹಿರಾಟ್ ಸಾಕಂ 
ಧಾರಾತೀರೇ ಮನೋರಮೇ ।।
ವಾಸುಕಿರ್ವೋ ಮಯೂರಸ್ಥಃ 
ಪೂಜಾರ್ಹಃ ಸಂಭವೇತ್ಸದಾ ।। 
ಸರ್ಪಗಳ ಮತ್ತು ನಾಗಗಳ ಉಲ್ಲೇಖ ಭಗವದ್ಗೀತೆಯಲ್ಲಿ ಬಂದಿದೆ. 
ಆಯುಧಾನಾಮಹಂ ವಜ್ರಂ 
ಧೇನೂನಾಮಸ್ಮಿ ಕಾಮಧುಕ್ ।
ಪ್ರಜನಶ್ಚಾಸ್ಮಿ ಕಂದರ್ಪಃ 
ಸರ್ಪಾಣಾಮಸ್ಮಿ ವಾಸುಕಿಃ ।। 
ಆಯುಧಗಳಲ್ಲಿ ಸರ್ವ ಶ್ರೇಷ್ಠ ಆಯುಧ ಭಗವಂತ ಧರಿಸಿದ ಸುದರ್ಶನ.
ಭಗವಂತನ ಆಯುಧ ಬಿಟ್ಟರೆ ಶ್ರೇಷ್ಠ ಆಯುಧ ವಜ್ರಾಯುಧ. 
ಶ್ರೀ ಕೃಷ್ಣ ಹೇಳುತ್ತಾನೆ... 
ಆಯುಧಗಳಲ್ಲಿ ವಜ್ರಾಯುಧ ನಾನು. 
ಈ ಆಯುಧದಲ್ಲಿ ಭಗವಂತ " ವಜ್ರಃ " ನಾಮಕನಾಗಿ ಸನ್ನಿಹಿತನಾಗಿದ್ದಾನೆ. 
" ವಜ್ರನಾತ್ ಇತಿ ವಜ್ರಃ " 
 ಸಮಸ್ತ ಶತ್ರುಗಳನ್ನೂ, ದೋಷಗಳನ್ನೂ ವರ್ಜನೆ ಮಾಡುವ ಭಗವಂತ " ವಜ್ರಃ ". 
ಪ್ರಾಣಿಗಳಲ್ಲೇ ಅತಿ ಶ್ರೇಷ್ಠ ಪ್ರಾಣಿ ಹಸು. 
ನಮ್ಮ ಜೀವನವಿಡೀ ನಮಗೆ ಹಾಲನ್ನು ಉಣಿಸಿ ಪೋಷಿಸುವ ಭಗವಂತನ ವಿಶಿಷ್ಟ ವಿಭೂತಿ ಹಸು. 
ಹಸುವಿನ ಮಲ - ಮೂತ್ರ ಕೂಡಾ ತ್ಯಾಜ್ಯವಲ್ಲ. 
ಯಾರಿಂದಲೂ ಗುಣವಾಗದ ವ್ಹರ್ಮ ರೋಗ ಗೋಮಯ ಮತ್ತು ಕೆಂಪು ಮಣ್ಣುನಿಂದ ಸ್ನಾನ ಮಾಡಿದರೆ ಆ ರೋಗ ಗುಣವಾಗುತ್ತದೆ. 
ಮನೆ ಮುಂದೆ ಸಗಣಿಯಿಂದ ಸಾರಿಸಿದರೆ ಅಲ್ಲಿ ಕ್ರಿಮಿ ಕೀಟಗಳು ಇಲ್ಲವಾಗುತ್ತದೆ. 
ಗೋಮಯದಲ್ಲಿ ಶ್ರೀ ಮಹಾಲಕ್ಷ್ಮೀಯ ಸನ್ನಿಧಾನವಿದೆ. 
ಹೀಗೆ ಅನೇಕಾನೇಕ ಉಪಯೋಗ ಹಸುವಿನಿಂದ. 
ಭಗವಂತನು ಬಯಸಿದ್ದನ್ನು ಕೊಡುವ " ಕಾಮಧುಕ್ " ನಾಮಕನಾಗಿ ಕಾಮಧೇನುವಿನಲ್ಲಿ ವಿಭೂತಿಯನ್ನಾಗಿ ನಿಂತಿದ್ದಾನೆ. 
ಈ ಪ್ರಪಂಚದಲ್ಲಿರುವ ಗಂಡು - ಹೆಣ್ಣಿನ ನಡುವೆ ಹುಟ್ಟಿನ ಹುಟ್ಟಿನ ಸೆಳೆತವಾಗಿ ನಿಂತಿರುವವ ಸಂತಾನವನ್ನೀಯುವ ಕಾಮದೇವ. 
ಈ ಕಾಮದೇವನಲ್ಲಿ ಭಗವಂತನ ವಿಶಿಷ್ಟ ಶಕ್ತಿ ಇದೆ. 
ಭಗವಂತ " ಕಂದರ್ಪಃ " ನಾಮಕನಾಗಿ ಕಾಮದೇವನಲ್ಲಿ ತುಂಬಿದ್ದಾನೆ. 
ಮನುಷ್ಯನಿಗೆ ಅನೇಕ ವಿಧ ಬಯಕೆಗಳನ್ನು ಕೊಟ್ಟು, ಆ ಬಯಕೆಯಿಂದ ಅವರನ್ನು ಸಂತೃಪ್ತಿಗೊಳಿಸಿ ವಿಚಿತ್ರ ಸುಖದ ಸುಪ್ಪತಿಗೆಯಲ್ಲಿ ಓಲಾಡಿಸುವ ಭಗವಂತ " ಕಂದರ್ಪಃ ".
***
" ಶ್ರೀ ಸುಬ್ರಹ್ಮಣ್ಯ -  2 " 
ಕಾಮದ ಸಂಕೇತವಾದ ಸರ್ಪದ ಬಗ್ಗೆ ಶ್ರೀ ಕೃಷ್ಣ ವಿವರಿಸುತ್ತಾನೆ.. 
ಹೊಟ್ಟೆಯನ್ನು ಹೊಸೆದುಕೊಂಡು ಹೋಗುವ ಸರೀಸೃಪವನ್ನು " ಸರ್ಪ " ಎನ್ನುತ್ತಾರೆ. 
ಸರೀ ಸೃಪಗಳಿಗೆಲ್ಲ ರಾಜ " ವಾಸುಕೀ ". 
ಭಗವಂತ " ವಾಸುಕಿಃ " ನಾಮಕನಾಗಿ ನಿಂತು ವಾಸುಕಿಗೆ ಆ ಸ್ಥಾನ ಕೊಟ್ಟನು. 
ಭಗವಂತ ಇಲ್ಲದ ಸ್ಥಳವಿಲ್ಲ. 
ಎಲ್ಲಡೆ ವಾಸ ಮಾಡುವ ಭಗವಂತ " ವಾಸುಕಿಃ ". 
ಅನಂತಾಶ್ಚಾಪಿ ನಾಗಾನಾಂ 
ವರುಣೋ ಯಾದಸಾಮಹಂ ।
ಪಿತೃಣಾಮರ್ಯಮಾಚಾಸ್ಮಿ 
ಯಮಃ ಸಂಯಮತಾಮಹಮ್ ।। 
ನಾಗರ ಹಾವುಗಳಲ್ಲಿ " ಶೇಷ " ನಾನು ( ಅಳಿವಿರದ್ದರಿಂದ " ಅನಂತ " ಎನ್ನಿಸಿ ಶೇಷನಲ್ಲಿದ್ದೇನೆ ). 
ಜಲಚರಗಳ ಒಡೆಯ " ವರುಣ " ( ವರ = ಹಿರಿದಾದ; ಣ = ಆನಂದ ಸ್ವರೂಪನಾದ್ದರಿಂದ " ವರುಣ ಎನ್ನಿಸಿ ಅವನಿಗೆ ಜಲಚರಗಳ ಒಡೆತನವನ್ನಿತ್ತವನು ).
ಪಿತೃ ದೇವತೆಗಳಲ್ಲಿ " ಆರ್ಯಮ " ನಾನು
( ಆರ್ಯ = ಅರಿಯಬೇಕಾದವನು; ಮಾ = ಅರಿತವನು. ಆದ್ದರಿಂದ " ಅರ್ಯಮಾನ್ " ಎನ್ನಿಸಿ ಪಿತೃ ಪತಿಯಾದ " ಆರ್ಯಮ " ನೆಂಬ ಆದಿತ್ಯನಲ್ಲಿದ್ದೇನೆ. 
ದಂಡಿಸುವವರಲ್ಲಿ " ಯಮ " ನಾನು. 
( ನಿಯಿಮಿಸುವುದರಿಂದ " ಯಮ " ಎನ್ನಿಸಿ ; ಯಮನಲ್ಲಿದ್ದು ಅವನಿಗೆ ಪಾಪಿಗಳನ್ನು ದಂಡಿಸುವ ಹೊಣೆ ಯಿತ್ತವನು ನಾನು ) 
ಶ್ರೀ ಕೃಷ್ಣನು ಹೇಳುತಾನೆ... ಸರ್ಪಗಳಲ್ಲಿ ವಾಸುಕಿ ನನ್ನ ವಿಭೂತಿ. 
ನಾಗಗಳಲ್ಲಿ ಶೇಷ! 
ಏನು ಹಾಗೆಂದರೆ? 
ಯಾವುದು ಸರ್ಪ? 
ಯಾವುದು ನಾಗ? 
ಏನು ವ್ಯತ್ಯಾಸ ಇವುಗಳಲ್ಲಿ? 
ಹಿರಿಯರ ವಚನದಂತೆ... 
ಸರ್ಪಾಃ ಏಕ ಶಿರಸಃ 
ನಾಗಾಃ ಬಹು ಶಿರಸಃ ।। 
ಒಂದು ಹೆಡೆಯ ಹಾವು ಸರ್ಪ.
ಒಂದಕ್ಕಿಂತಾ ಹೆಚ್ಚು ತಲೆಯ ಹಾವು ನಾಗ ಎಂದು. 
" ವಾಚಸ್ಪತಿ ಕೋಶದಲ್ಲಿ ನಾಗ ಎಂಬ ಶಬ್ದದ ವಿವರಣೆ ".... 
ನಾಗಃ ಮನುಷ್ಯಾಕಾರಃ 
ಫಣಾಲಾಂಗೂಲಯುಕ್ತಃ 
ಕರ್ಕೋಟಕಾದಿರ್ದ್ದೇ-
ವಯೋನಿಭೇದಃ ।। 
ಇದರನ್ವಯ " ನಾಗ " ಎಂದರೆ ಮನುಷ್ಯ ದೇಹವುಳ್ಳ, ಜೊತೆಗೆ ಹೆಡೆ - ಬಾಲವುಳ್ಳ ದೇವ ಜಾತಿಯ ಒಂದು ಪ್ರಭೇದ. 
ಇದು ಪೂರ್ತಿ ಸರಿಯಲ್ಲಿ ಮೂಲ ನಾಗಗಳಿಗೆ ಇದು ಅನ್ವಯ ಆಗಬಹುದಾದರೂ ಎಲ್ಲಾ ನಾಗಗಳಿಗೂ ಮನುಷ್ಯ ದೇಹ ಇರಬೇಕಾಗಿಲ್ಲ.
ಹೆಡೆ ಇರುವ ಅಥವಾ ಇರದ; ವಿಷ ಇರುವ ಅಥವಾ ಇರದ ಎಲ್ಲಾ ಸರೀಸೃಪವೂ " ಸರ್ಪ ". 
ಹರೆದಾಡುವ ಎರೆಹುಳ ಮುಂತಾದ ಕ್ರಿಮಿಗಳು ಕೂಡಾ. 
ಹೆಡೆ ಮತ್ತು ವಿಷವಿರುವ ಹಾವು ಮಾತ್ರ ನಾಗ. 
ಅದಕ್ಕೆ ಅದನ್ನು ಕನ್ನಡದಲ್ಲಿ " ನಾಗರಹಾವು " ಎಂದು ಕರೆಯುತ್ತಾರೆ.
***
" ಶ್ರೀ ಸುಬ್ರಹ್ಮಣ್ಯ - 3 "

ನಾಗಾರಾಧನೆ - ನಾಗರಕಲ್ಲು - ನಾಗ ಪೂಜೆ - ನಾಗಮಂಡಲ ಹೇಗೆ ಎಲ್ಲಾ ಕಡೆ " ನಾಗ ಶಬ್ದ " ಬಳಕೆಯಾಗುವುದಕ್ಕೆ ಇದೇ ಕಾರಣ.

ಕೆಲವೊಮ್ಮೆ ಸರ್ಪ ಶಬ್ದವೂ ಬಳಕೆ ಆಗುವುದುಂಟು.

ಸರ್ಪ ಸಂಸ್ಕಾರ. ತಪ್ಪೇನಿಲ್ಲ!

ಏಕೆಂದರೆ ಎಲ್ಲಾ ನಾಗಗಳೂ ಸರ್ಪಗಳು.

ಆದರೆ ಎಲ್ಲಾ ಸರ್ಪಗಳು ನಾಗಗಳಲ್ಲ!

ಈಗ ಶ್ರೀ ಕೃಷ್ಣನ ಮಾತು ಸ್ಫುಟವಾಯಿತು.

ಸರೀಸೃಪಗಳಿಗೆ ರಾಜ ವಾಸುಕಿ.

ಹೆಡೆಯಿರುವ ನಾಗಗಳಲ್ಲಿ ಪ್ರಧಾನನಾದವನು ಅನಂತ ಅಥವಾ ಶೇಷ.

" ಸರ್ಪ್ಪಣಾದಭವನ್ ಸರ್ಪ್ಪಾಃ "

ಎಂಬ ಪುರಾಣ ವಚನವೂ ಇದನ್ನೇ ಸಮರ್ಥಿಸುತ್ತದೆ.

ಕದ್ರೂ ಮತ್ತು ಕಾಶ್ಯಪ ದಂಪತಿಗಳಿಂದ 8 ಪ್ರಧಾನ ನಾಗದೇವತೆಗಳ ಸೃಷ್ಠಿಯಾಯಿತು.

ಇದರ ಉಲ್ಲೇಖ " ವರಾಹ ಪುರಾಣ " ದಲ್ಲಿದೆ.

ಸೃಜತಾಃ ಬ್ರಹ್ಮಣಾಃ ಸೃಷ್ಠಿ೦
ಮರೀಚಃ ಸೂರಿಕಾರಣಂ ।
ಪ್ರಥಮಂ ಮನಸಾ ಧ್ಯಾತ-
ಸ್ತಸ್ಯ ಪುತ್ರಸ್ತು ಕಾಶ್ಯಪಃ ।।

ತಸ್ಯ ದಾಕ್ಷಾಯಣೀ ಭಾರ್ಯಾ
ಕದ್ರೂರ್ನಾಮ ಶುಚಿಸ್ಮಿತಾ ।
ಮಾರೀಚೋ ಜನಯಾಮಾಸಾ
ತಸ್ಯಾಂ ಪುತ್ರಾನ್ ಮಹಾ ಬಲಾನ್ ।।

ನಂತಂ ವಾಸುಕಿಂ ಚೈವ
ಕಂಬಳಂ ಚ ಮಹಾಬಲಂ ।
ಕರ್ಕೋಟಕಂ ಚ ರಾಜೇಂದ್ರ
ಪದ್ಮಂ ಜಾನ್ಯಂ ಸರೀಸೃಪಮ್ ।।

ಮಹಾ ಪದ್ಮಂ ತಥ ಶಂಖಂ
ಕುಲಿಕಂ ಚಾಪರಾಜಿತಂ ।
ಏತೇ ಕಶ್ಯಪದಾಯದಾಃ
ಪ್ರಧಾನಾಃ ಪರಿಕೀರ್ತಿತಾಃ ।।

ವಿಶ್ವದ ಸೃಷ್ಟಿಗೆ ತೊಡಗಿದ ಶ್ರೀ ಬ್ರಹ್ಮದೇವರು ಮಾನಸ ಧ್ಯಾನದಿಂದ ಸೃಷ್ಠಿಸಿದರು.

ಮರೀಚಿಯ ಮಗನೇ ಕಾಶ್ಯಪ.

ದಕ್ಷ ಪುತ್ರಿಯಾದ ಕದ್ರೂ ಅವನ ಮಡದಿ.

ಮರೀಚ ಪುತ್ರ ಕಾಶ್ಯಪ ಅವಳಲ್ಲಿ ಬಲಿಷ್ಠರಾದ ನಾಗರಗಳನ್ನು ಹುಟ್ಟಿಸಿದನು.

ಅನಂತ ಅಥವಾ ಶೇಷ; ವಾಸುಕಿ; ಕಂಬಳ ಅಥವಾ ತಕ್ಷಕ; ಕರ್ಕೋಟಕ, ಪದ್ಮ; ಮಹಾಪದ್ಮ; ಶಂಖ ಅಥವಾ ಶಂಖಪಾಲ ಮತ್ತು ಕುಲಿಕ ಇವರೇ ಎಂಟು ಮಂದಿ ಪ್ರಧಾನ ನಾಗರು.

" ಅಗ್ನಿ ಪುರಾಣ "

ಇವರ ಹೆಡೆಗಳ ಸಂಖ್ಯೆಯನ್ನು ಹೇಳುತ್ತದೆ...

ಶೇಷನಿಗೆ ಮತ್ತು ವಾಸುಕಿಗೆ 1000 ತಲೆಗಳೂ; ತಕ್ಷಕ ಮತ್ತು ಕರ್ಕೋಟಕನಿಗೆ 800 ತಲೆಗಳೂ; ಪದ್ಮ ಮತ್ತು ಮಹಾಪದ್ಮನಿಗೆ 500 ತಲೆಗಳೂ; ಶಂಖಪಾಲ ಮತ್ತು ಕುಲಿಕನಿಗೆ 300 ತಲೆಗಳು.

ಇದೇ " ಅಗ್ನಿ ಪುರಾಣ "

ಇವರನ್ನು 4 ವರ್ಣಗಳಿಗೆ ಸಂಬಂಧ ಪಟ್ಟಂತೆ 4 ಗುಂಪು ಮಾಡುತ್ತದೆ.

ವಿಪ್ರೌ ನೃಪೌ ವಿಶೌ ಶ್ರಾದ್ರೌ
ದ್ವೌ ದ್ವೌ ನಾಗೇಷು ಕೀರ್ತಿತೌ ।।

ಇವರು ಕ್ರಮವಾಗಿ ಇಬ್ಬಿಬ್ಬರು ಒಂದೊಂದು ವರ್ಣಕ್ಕೆ ಸಂಬಂಧ ಪಟ್ಟವರು.

ಅನಂತ, ಕುಲಿಕ = ಬ್ರಾಹ್ಮಣ ವರ್ಣ ವಾಸುಕಿ,

ಶಂಖಪಾಲ = ಕ್ಷತ್ರೀಯ ವರ್ಣ

ತಕ್ಷಕ, ಮಹಾಪದ್ಮ = ವೈಶ್ಯ

ಪದ್ಮ - ಕರ್ಕೋಟಕ = ಶೂದ್ರ ವರ್ಣ

ಈ ಎಂಟು ನಾಗಗಳಿಂದ ಅನೇಕ ನಾಗ ಪ್ರಭೇದಗಳು ಬೆಳೆದು ಬಂದವು.

ಇವುಗಳ ಒಂದು ವಿಶೇಷ ಶಕ್ತಿಯೆಂದರೆ ನಮ್ಮ ಮನಸ್ಸಿನ ಭಾವನೆಗಳನ್ನು ಗ್ರಹಿಸುವ ಶಕ್ತಿ.

ಅವುಗಳಿಗೆ ಕಿವಿಯಿಲ್ಲ.

ನಮ್ಮ ಮಾತುಗಳನ್ನು ಕೇಳಿಸಿಕೊಳ್ಳುವ ಶಕ್ತಿ ಅವುಗಳಿಗಿಲ್ಲ.

ಅದಕ್ಕೆಂದೇ ಅವುಗಳಿಗೆ " ಚಕ್ಷುಃಶ್ರವ " ಎಂದು ಹೆಸರು.

ಕೆಣ್ಣೆ ಕಿವಿಯಾಗಿ ಉಳ್ಳವು ಎಂದು ಅದರ ಅರ್ಥ.

ಇದು ನಿಜ ಆದರೂ ಅವು ನಮ್ಮ ಮಾತನ್ನು ಗ್ರಹಿಸಬಲ್ಲವು.

ಕಿವಿಯ ಮೂಲಕ ಅಲ್ಲ.

ಮನಸ್ತರಂಗಗಳ ಮೂಲಕ.

ನಾವು ಮಾನಸಿಕವಾಗಿ ಏನಾದರೂ ಸೂಚನೆಯಿತ್ತರೆ ನಾಗಗಳು ಎಷ್ಟೇ ದೂರದಲ್ಲಿದ್ದರೂ ಆ ಸಂದೇಶವನ್ನು ಗ್ರಹಿಸಬಲ್ಲವು.

ಗ್ರಹಿಸಿ ಪ್ರತಿಕ್ರಿಯೆ ನೀಡಬಲ್ಲವು.

ನಾಗಾರಾಧನೆ ಜಾನಪದ ಸಂಸ್ಕೃತಿ ಎಂದು ಕೆಲವು ಹೇಳುತ್ತಾರೆ.

ಇದು ಪೂರ್ತಿ ನಿಜವಾದ ಸಂಗತಿಯಲ್ಲ.

ಜಾನಪದದ ಪ್ರಭಾವವು ಅದರಲ್ಲಿ ಸೇರಿಕೊಂಡಿದ್ದರೂ, ಮೂಲತಃ ನಾಗಾರಾಧನೆ ವೈದಿಕವೇ!

ಶ್ರೀ ಸುಬ್ರಹ್ಮಣ್ಯನಿಗೆ ಆಧ್ಯಾತ್ಮ ಪ್ರಪಂಚದಲ್ಲಿ ವಿಶಿಷ್ಟವಾದ ಸ್ಥಾನ ಉಂಟು.

ಶ್ರೀ ಸುಬ್ರಹ್ಮಣ್ಯನು ತ್ರಿಮೂರ್ತಿಗಳಿಗೂ ಸನತ್ಕುಮಾರ - ಸ್ಕಂದ - ಸಾಂಬ ಎಂಬ ಹೆಸರಿನ ಮಗನಾದ್ದರಿಂದ ಸುರಾಗ್ರಣ್ಯನಾಗಿ ಮೆರೆಯುತ್ತಿದ್ದಾನೆ.
***
" ಶ್ರೀ ಸುಬ್ರಹ್ಮಣ್ಯ -  4 " 
ಶ್ರೀ ಇಂದ್ರದೇವರಿಗೆ ಸಮಾನನೂ - ರತಿ ಪತಿಯೂ - ಸಾಕ್ಷಾತ್ ಶ್ರೀ ಹರಿಯ ಮಗನಾದ ಮನ್ಮಥನೂ - 8ನೇ ಕಕ್ಷೆಯಲ್ಲಿ ವಿರಾಜಿತನೂ ಶ್ರೀ ಸುಬ್ರಹ್ಮಣ್ಯನು. 
ಈ ವಿಷಯವನ್ನು ಶ್ರೀ ವಿಜಯರಾಯರು ಮನೋಜ್ಞವಾಗಿ ವರ್ಣಿಸಿದ್ದಾರೆ. 
ರಾಗ : ಕಾಂಬೋಧಿ ತಾಳ : ಝಂಪೆ 
ವರಗಳನು ಕೊಡುವುದು 
ವಾಸುಕಿಯ ಪ್ರಿಯಾ ।
ಕರುಣದಿಂದಲಿ ಒಲಿದು 
ಕಂಡಮಾತುರದಲಿ ।। ಪಲ್ಲವಿ ।। 
ಇಂದ್ರ ಸಮಾನ 
ದೇವತೆಯೆ ರತಿಪತಿಯೇ ।
ಇಂದಿರೇಶನ ನಿಜ 
ಕುಮಾರ । ಮಾರ ।
ಒಂದು ಕಾಲದಲಿ 
ಸುಂದರನೆನಿಸಿಕೊಂಡಿರ್ದ ।
ಬಂಧುವೇ ಅಹಂಕಾರ 
ಪ್ರಾಣಗಿಂದಧಿಕನೇ ।। ಚರಣ ।। 
ವನಜ ಸಂಭವನು 
ಸೃಷ್ಠಿ ಸೃಜಿಪಗೋಸುಗ ।
ಮನದಲ್ಲಿ ಪುಟ್ಟಿಸೆ 
ಚತುರ ಜನರ ।
ಮುನಿಗಳೊಳಗೆ 
ಸನತ್ಕುಮಾರನಾಗಿ ।
ಜನಿಸಿ ಯೋಗ ಮಾರ್ಗದಲ್ಲಿ 
ಚರಿಸಿದ ಕಾಮಾ ।। ಚರಣ ।।
ತಾರಕಾಸುರನೆಂಬ ಬಹು 
ದುರಳ ತನದಲಿ ।
ಗಾರು ಮಾಡುತಿರಲು 
ಸುರಗಣವನು ।
ಗೌರಿ ಮಹೇಶ್ವರರಿಗೆ 
ಮಗನಾಗಿ ಪುಟ್ಟಿ ।
ಧಾರುಣಿಯೊಳಗೆ ಸ್ಕಂಧ 
ನೆನಿಸಿದೆ ।। ಚರಣ ।। 
ರುಕ್ಮಿಣಿಯಲಿ ಜನಿಸಿ 
ಮತ್ಸ್ಯ ಉದರದಲಿ ।
ಪೊಕ್ಕು ಶಿಶುವಾಗಿ 
ಸತಿಯಿಂದ ಬೆಳೆದು ।
ರಕ್ಕಸ ಶಂಬರನೊಡನೆ 
ಕಾದು ಗೆದ್ದು ಮರಳಿ ।
ಚಕ್ಕನೆ ಸಾಂಬ ನೆನಿಸಿದೆ 
ಜಾಂಬವತಿಯಲ್ಲಿ ।। ಚರಣ ।। 
ಜನಪ ದಶರಥನಲ್ಲಿ 
ಭರತನಾಗಿ ಪುಟ್ಟಿದೆ ।
ಮನೋ ವೈರಾಗ್ಯ 
ಚಕ್ರಾಭಿಮಾನಿ ।
ಯೆನಗೊಲಿದ ವಿಜಯ-
ವಿಠ್ಠಲರೇಯನಂಘ್ರಿ ।
ಅರ್ಚನೆ ಮಾಡುವ 
ಸುಬ್ರಹ್ಮಣ್ಯ 
ಬಲು ಧನ್ಯ ।। ಚರಣ ।। 
ತನ್ನ ನಂಬಿ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಅವರ ಪಾಲಿಗೆ ಕಾಮಧೇನು ಕಲ್ಪವೃಕ್ಷದಂತೆ ಸಕಲವನ್ನೂ ಕೊಡುತ್ತಿರುವ ಶ್ರೀ ಸುಬ್ರಹ್ಮಣ್ಯನ ಮಹಿಮಾ ವಿಶೇಷತೆಯನ್ನು ಭಾವಿ ಸಮೀರರಾದ ಶ್ರೀ ವಾದಿರಾಜ ಗುರುಸಾರ್ವಭೌಮರು ಅತ್ಯದ್ಭುತವಾಗಿ ವರ್ಣಿಸಿದ್ದಾರೆ. 
ಸುಬ್ರಹ್ಮಣ್ಯಸ್ಯ ಮಹಿಮಾ೦ 
ವರ್ಣಿತುಂ ಕೇನ ಶಕ್ಯತೇ ।
ಯತ್ರೋಚ್ಛಿಷ್ಠಮಪಿ ಸ್ಪಷ್ಟಂ 
ಶ್ವಿತ್ರಿಣಃ ಶೋಧಯತ್ಯಹೋ ।। 
ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎಂಜಲೆಲೆಯ ಮೇಲೆ ಹೊರಳಿದರೆ ಕುಷ್ಠು ರೋಗ ಪರಿಹಾರವಾಗುವುದೆಂಬ ಪ್ರಸಿದ್ಧಿಯುಂಟು. 
ಆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಉಚ್ಛಿಷ್ಠಕ್ಕೆ ಇಷ್ಟು ಮಹಿಮೆ ಇರುವಾಗ ಆ ಕ್ಷೇತ್ರದ ಮಹಿಮೆಯೂ; ಕ್ಷೇತ್ರಾಧಿಪನಾದ ಶ್ರೀ ಸುಬ್ರಹ್ಮಣ್ಯನ ಮಹಿಮೆಯೂ ಅಪಾರವೆಂಬುದು ಕೈಮುತ್ಯ ಸಿದ್ಧ! 
" ನಾಗನಲ್ಲಿ ಸುಬ್ರಹ್ಮಣ್ಯ ಸನ್ನಿಧಾನ " 
ಪುರಾನಾ ವಚನದಂತೆ ಇಂದ್ರ ಸಮನಾದ ಸುಬ್ರಹ್ಮಣ್ಯ ದೇವತೆಗಳ ಸೇನಾಧಿಪನಾದ. 
ಆದ ಆತನಲ್ಲಿ ದೇವ ಯೋನಿ ಜಾತರೆಲ್ಲಾ ಆಸರೆ ಪಡೆದರು. 
ಅಲ್ಲಿ ನಾಗಗಳೂ ಸ್ಕಂಧನ ಸ್ವಾಮಿತ್ವದಲ್ಲಿ ನೆಲೆ ನಿಂತವು. 
ಇದರಿಂದ ನಾಗಗಳಿಗೆ ಸುಬ್ರಹ್ಮಣ್ಯ ವಿಶೇಷವಾದ ಆಸರೆ ನೀಡಿದ್ದರಿಂದ ನಾಗಗಳಲ್ಲಿ ಸುಬ್ರಹ್ಮಣ್ಯನ ಸನ್ನಿಧಾನ ಬಂತು. 
ಸುಬ್ರಹ್ಮಣ್ಯನಿಗಿಂತ ಎಷ್ಟೋ ಕಡಿಮೆ ಯೋಗ್ಯತೆ ನಾಗಗಳಿರುವುದು. 
" ನಾಗರಾಜ " ನೆನಿಸಿದ " ಶೇಷ " ನಾಗನೊಬ್ಬ ಮಾತ್ರ ಸುಬ್ರಹ್ಮಣ್ಯನ ತಂದೆ ಶಿವನಿಗೆ ಸಮನಾಗಿ ಸುಬ್ರಹ್ಮಣ್ಯನಿಂದಲೂ ಆರಾಧ್ಯನಾಗಿರುವನು. 
ಉಳಿದ ನಾಗಗಳೆಲ್ಲ ಸುಬ್ರಹ್ಮಣ್ಯನ ಆರಾಧಕರು 
ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹೇಳಿದ ಸ್ಕಾಂದ ವಚನದಂತೆ ವಾಸುಕಿಯಲ್ಲಿ ಸ್ಕಂದನ ವಿಶೇಷ ಸನ್ನಿಧಾನವಿದೆ. 
ಈ ಮಾತಿನಿಂದ ಎಲ್ಲೆಡೆ ಸ್ಕಂದ ಸನ್ನಿಧಾನ ಹೇಳುವಂತಿಲ್ಲ. 
ಕುಕ್ಕೆಯಲ್ಲಿ ಮಾತ್ರ ವಾಸುಕಿಯೊಡನೆ ಸ್ಕಂದನ ಆರಾಧನೆ. 
ಇಲ್ಲಿ " ಒಡನೆ " ಎಂದಿದ್ದರಿಂದ ವಾಸುಕೀ ಬೇರೇ ಸ್ಕಂದನೇ ಬೇರೆ ಎಂದು ತಿಳಿಯಬೇಕು. 
ಗುರುವಿನೊಡನೆ ಶಿಷ್ಯನೂ ಮಠದಲ್ಲಿರುವನೆಂದಾಗ ಶಿಷ್ಯನೇ ಗುರುವಾಗನು ತಾನೇ? 
ಕುಕ್ಕೆಯಲ್ಲಿ ನೆಲೆನಿಂತ ಸುಬ್ರಹ್ಮಣ್ಯನ ಕುರಿತು ಶ್ರೀ ವಿಜಯರಾಯರು... 
ರಾಗ : ಕಲ್ಯಾಣಿ ತಾಳ : ಆದಿ 
ಸುಬ್ಬರಾಯ ಶುಭಾಕಾಯಾ ।
ಸುಬ್ಬರಾಯ ನಿಜ 
ಕಾಯಂಗಜ ನೀನೆ ।
ನಿಬ್ಬರ ಮಹಿಮ 
ಮಹಾಂಬುಧಿ ಸ್ಕಂದಾ ।। ಪಲ್ಲವಿ ।। 
ಮಾರ ಭರತನೆ ಶಂಬರಾರಿ । ಸನತ್ಕು ।
ಮಾರ ಕುಮಾರ ಸಾಂಬಾ ।
ಸಾರಿದೇ ನಿನ್ನವತಾರ ಮೂಲರೂಪ ।।
ಸಾರಿ ಸಾರಿಗೆ ಸಂಸಾರಕೆ ಮನ । ವಿ ।
ಸ್ತಾರವಾಗುವಂತೆ । ಹಾರಿಸು ।
ದರ ವ್ಯಾಪಾರ ಗುಣ ಪರಾವಾರಾ ।। ಚರಣ ।। 
ಮಾಡುವೆ ವಂದನೆ ಸತತ । ಸಜ್ಜನರೊಳ ।
ಗಾಡಿಸು ಭಕ್ತ ಪ್ರೀತಾ ।
ಪಾಡಿದವರ ಕಾಪಾಡುವ ರತಿ ಪತಿ ।।
ಈಡಾರು ನಿನಗೀ ನಾಡಿನೊಳಗೆಲ್ಲ ।
ಬೇಡುವೆ ದಯವನ್ನು 
ಮಾಡು ವಿರಕುತಿಯ ।
ನೀಡು ಬಿಡದಲೇ ನೋಡು ।। ಚರಣ ।। 
ಕುಕ್ಕೆಪುರಿಯ ನಿಲಯಾ । 
ಶ್ರೀಧರ ಬೊಮ್ಮ ।
ಮುಕ್ಕಣ್ಣಗಳ ತನಯಾ ।
ಸೊಕ್ಕಿದ ತಾರಕ ರಕ್ಕಸ ಹರ । ದೇ ।।
ವಕ್ಕಳ ನಿಜ ದಳಕೆ ನಾಯಕನಾದೆ ।
ಪಕ್ಷಿವಾಹನ ಸಿರಿ ವಿಜಯವಿಠ್ಠಲನ ।
ಚಕ್ರ ಐದೊಂದು ವಕ್ತ್ರಾ ।। ಚರಣ ।।
" ಮೃತ್ತಿಕಾ ಮಹಿಮೆ " 
ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನ ಮಗನಾದ ಸಾಂಬ ಒಂದು ದಿನ ಸ್ತ್ರೀ ಲೋಲನಾಗಿ ಮೈಮರೆತು ನಾರದ ಮಹರ್ಷಿಗಳು ಬಂದು ನಿಂತರೂ ಗಮನಿಸದೇ ಇದ್ದುದರಿಂದ; ನಾರದರು ಈ ಸಾಂಬನಿಗೆ ಕುಷ್ಠವು ಬರಲೆಂದು ಶಾಪಿಸಿದನು. 
ಈ ಶಾಪ ವಿಚಾರವು ಕಿವಿಗೆ ಬಿದ್ದ ತಕ್ಷಣ ಸಾಂಬನು ಶ್ರೀ ಕೃಷ್ಣನ ಬಳಿ ಹೋಗಿ ರಕ್ಷಣೆ ಬೇಡಲು ನೀನು ನಾರದರನ್ನೇ ಮೊರೆ ಹೋಗು ಎನ್ನಲು ಅದೇ ಪ್ರಕಾರ ಅವರ ಪಾದಗಳನ್ನು ಹಿಡಿದು ಕ್ಷಮಿಸಬೇಕೆಂದು ಪ್ರಾರ್ಥಿಸಲು ಆಗ ನಾರದರು.. 
ನೀನು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಸ್ವಾಮಿಯ ಸೇವೆ ಮಾಡಿ ದೇಹಕ್ಕೆ ಮೃತ್ತಿಕಾ ಲೇಪನ ಮಾಡಿಕೋ ಎಂದು ಹೇಳಿ ಕಳುಹಿಸಿದರು. 
ಅಂತೆಯೇ ಸೇವಾದಿಗಳನ್ನು ಮಾಡಲು ಅವನ ಕುಷ್ಠವು ನಿವಾರಣೆಯಾಗಿ ಮೊದಲಿನಂತಾದನು. 
ಇಂದಿಗೂ ಇಲ್ಲಿ ಪ್ರಸಾದವಾಗಿ ಮಾಮೂಲಿನಂತೆ ಮೃತ್ತಿಕೆಯನ್ನು ವಿಶೇಷವಾಗಿ ಭಕ್ತಾದಿಗಳಿಗೆ ಕೊಡಲಾಗುತ್ತದೆ. 
ಈ ಮೃತ್ತಿಕೆಯಿಂದ ಅನೇಕ ರೋಗ ರುಜಿನಗಳು ದೂರವಾಗಿ ಬಂಜಿತ್ವ ದೋಷವೂ ನಿವಾರಣೆಯಾಗಿ ಪುತ್ರ ಸಂತಾನಗಳಾಗಿ ಸುಖ ಪಡುತ್ತಿರುವವರು. 
" ಉಪ ಸಂಹಾರ " 
ಸುಬ್ರಹ್ಮಣ್ಯನು ಶೇಷನಲ್ಲ! 
ಶೇಷ ಸುಬ್ರಹ್ಮಣ್ಯನಲ್ಲ! 
ಹಾಗೆಯೇ ಸುಬ್ರಹ್ಮಣ್ಯ ನಾಗನಲ್ಲ! 
ಅಲ್ಲದೇ ಸುಬ್ರಹ್ಮಣ್ಯನು ಇಂದ್ರ ಸಮಾನನು. 
8ನೇ ಕಕ್ಷೆಯಲ್ಲಿ ಇಂದ್ರನ ನಂತರ ಬರುವ ದೇವತೆಯು!!!
ಕಾಮದೇವರು ವೈಚಾರಿಕ ರುದ್ರದೇವರ ದೆಸೆಯಿಂದ ರಜ ಮತ್ತು ಸತ್ವ ಗುಣದಿಂದ ಜನಿಸಿದರು. 
ಇಚ್ಛಾ ರೂಪವಾದ ಮನಸ್ಸಿಗೆ ಅಭಿಮಾನಿಯೂ, ಸ್ತ್ರೀ ಸುಖ - ರತಿ ಕ್ರೀಡಾ ಇತ್ಯಾದಿ ಸುಖಪ್ರದನು. 
ಕೇತುಮಾಲಾ ಖಂಡದಲ್ಲಿರುವ ಕೃತಿ ಪತಿ ಪ್ರದ್ಯುಮ್ನ ರೂಪಿ ಶ್ರೀ ಹರಿಯನ್ನು ನಿತ್ಯೋಪಾಸನೆ ಮಾಡುತ್ತಿರುವುದರಿಂದ ಕಾಮನಿಗೆ ಪ್ರದ್ಯುಮ್ನ ಎಂದು ಹೆಸರು ಬಂದಿತು. 
ಪರಮ ಕಾಂತಿಯುಕ್ತನಾದ ಪ್ರದ್ಯುಮ್ನ ನಾಮಕ ಶ್ರೀ ಹರಿಯ ವರ ಪ್ರಸಾದದಿಂದ ಮನ್ಮಥನು ಜಗನ್ಮೋಹಕ ಲಾವಣ್ಯವನ್ನು ಪಡೆದನು. 
ಒಂದು ಬ್ರಹ್ಮ ಕಲ್ಪದಲ್ಲಿ ಕಾಮ ಪದವಿ ಜೀವರು 40 ಮಂದಿ ಇರುತ್ತಾರೆ. 
ಇವರಲ್ಲಿ ಒಬ್ಬನು ಮಾತ್ರ ಕಾಮ ಪದವಿಯಲ್ಲಿರುತ್ತಾನೆ. 
ಇಂದ್ರ ಪದ ಜೀವರಂತೆ ಇವರಿಗೂ ಸಹ 40 ಕಲ್ಪ ಅಪರೋಕ್ಷ ಪೂರ್ವ ಸಾಧನ; ಸಾಧನಾ ನಂತರ 40 ಕಲ್ಪ ಸಾಧನ. 
ಕಾಮದೇವನ ಪುತ್ರನೇ ಅನಿರುದ್ಧನು. 
ಬಾಣಾಸುರನ ಮಗಳಾದ ಉಷಾಪತಿ ಅನಿರುದ್ಧನು. 
10ನೇ ಕಕ್ಷದ ದೇವತೆ. 
ಕಾಮದೇವನ ವರ ಪ್ರಸಾದದಿಂದ " ಪಾಂಚಜನ್ಯ " ವೆಂಬ ಶ್ರೀ ಹರಿಯ ಶಂಖಕ್ಕೆ ಅಭಿಮಾನಿ, ಬ್ರಹ್ಮಾವೇಶಯುಕ್ತನು. 
ಅನಿರುದ್ಧ ರೂಪಿ ಭಗವಂತನ ಉಪಾಸಕನು. 
ಅನಿರುದ್ಧನು ಶತ್ರುಘ್ನನ ಅವತಾರನು!!
*******


" ಸುಬ್ಬರಾಯ - 1 "
" ಶಾಲಿವಾಹನ ಶಕೆ 1942  ಶ್ರೀ ಶಾರ್ವರಿ ನಾಮ ಸಂವತ್ಸರ ದಕ್ಷಿಣಾಯನ ಮಾರ್ಗಶಿರ ಮಾಸ ಶುಕ್ಲ ಪಕ್ಷ ಹೇಮಂತ ಋತು ಪಂಚಮೀ ಶನಿವಾರ - 19.12.2020 ಮತ್ತು ಸ್ಕಂದ / ಚಂಪಾ ಷಷ್ಠಿ ಭಾನುವಾರ - 20.12.2020 - " ಶ್ರೀ ನಾಗಾರಾಧನೆ ".
 " ವೈಷ್ಣವ ನಾಗಾರಾಧನೆ ಹೇಗೆ? " 
ಸುಬ್ರಹ್ಮಣ್ಯದಲ್ಲಿ ವಾಸುಕಿ ನೆಲೆಸಿರುವನು. 
ಹರಿಯೊಬ್ಬನನ್ನು ಬಿಟ್ಟರೆ ಇನ್ನೆಲ್ಲರೂ ಪರಿವಾರದವರಲ್ಲವೇ? 
ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯದಲ್ಲೂ ವೈಷ್ಣವ ನಾಗಾರಾಧನೆಯನ್ನು ( ಸರ್ಪೋಪಾಸನೆ ) ಸರಿಯಾಗಿ ತಿಳಿದು ಮಾಡಿದರೆ, ಸರ್ಪ ದೋಷದ ನಿವೃತ್ತಿಯಾಗಿ ಧನ - ಸಂತಾನ ಪ್ರಾಪ್ತಿ ಮೋಟಾದವುಗಳ ಜೊತೆಗೆ ದುರ್ಲಭವಾದ ತತ್ತ್ವಜ್ಞಾನವೂ ಪ್ರಾಪ್ತವಾಗುವುದು. 
" ಛಕ್ರೀ ( ತ್ರೀ ) ಭೂತ ಫಣೀಂದ್ರ-
ಮಿಂದುಧವಳ೦ ಲಕ್ಷ್ಮೀ ನೃಸಿಂಹಂ ಭಜೇ " 
ಸರ್ಪದಿಂದ ಸುತ್ತುವರೆಯಲ್ಪಟ್ಟ ( ಅಥವಾ ಸರ್ಪದ ಛತ್ರಿಯಿಂದ ಶೋಭಿಸುತ್ತಿರುವ ) ಶ್ರೀ ಲಕ್ಷ್ಮೀ ನೃಸಿಂಹದೇವರ ಚಿಂತನೆಯಿಂದ ಸರ್ಪ ದೋಷವು ನಾಶವಾಗುವುದಲ್ಲದೇ ನಾಗಾರಾಧನೆಯೂ ಶ್ರೀ ಹರಿ ಪೂಜೆಯಾಗುವುದು. 
" ವರಾಹ ಪುರಾಣ " ದಲ್ಲಿ.. 
ಹಾಗೆಯೇ ಪಂಚಮೀ ದಿನ ವರಾಹ ಪುರಾಣದಲ್ಲಿ ನಾಗ ಪೂಜೆಯು ಉಲ್ಲೇಖವಾಗಿದೆ. 
ಮಾನವನು ಪಂಚಮೀ ದಿನ ನನ್ನ ( ಶ್ರೀ ವರಾಹ ರೂಪಿ ನಾರಾಯಣನ ) ಪೂಜೆಯ ಅನಂತರದಲ್ಲಿ ನಾಗಗಳ ( ಸರ್ಪಗಳ ) ಪೂಜೆಯನ್ನು ಮಾಡಬೇಕು. 
ಶೇಷ - ವಾಸುಕಿ - ತಕ್ಷಕ ಈ ನಾಗ ದೇವತೆಗಳನ್ನು ಸಕ್ಕರೆ - ತುಪ್ಪ - ಪಾಯಸ - ಉಂಡೆಗಳು ( ನಾನಾ ವಿಧ ಕಜ್ಜಾಯಗಳು ) ಇವುಗಳಿಂದ ಪೂಜಿಸಬೇಕು. 
ಆಗ ನಾಗ ದೇವತಗಳಲ್ಲಿ ಸಂಕರ್ಷಣ ರೂಪಿಯಾದ ನಾನು ( ಶ್ರೀ ಹರಿಯು ) ಸನ್ನಿಹಿತನಾಗಿದ್ದು ಈ ಪೂಜೆಯನ್ನು ನಾನೇ ( ಶ್ರೀ ಹರಿಯು ) ಸ್ವತಃ ಸ್ವೀಕರಿಸುತ್ತೇನೆ. 
ಈ ನಾಗ ಪೂಜೆಯ ಅನಂತರ ಬ್ರಾಹ್ಮಣ ಭೋಜನ ಮಾಡಿಸಿ ಶಕ್ತ್ಯಾನುಸಾರ ಬ್ರಾಹ್ಮಣರಿಗೆ ದಕ್ಷಿಣೆಯನ್ನು ಕೊಡಬೇಕೆಂದು ವರಾಹ ಪುರಾಣದಲ್ಲಿ ಉಕ್ತವಾಗಿದೆ. 
ತಥಾ ಪಂಚಮ್ಯಾ೦ 
ನಾಗಪೂಜಾ೦ ವರಾಹೇ ಉಕ್ತಾ ।
 ತತಃ ಕುರ್ವೀತ ಪಂಚಮ್ಯಾ೦ 
ನಾಗಾನಾಂ ಪೂಜನಂ ನರಃ ।।
ಮತ್ಪೂಜಾನಂತರಂ ಶೇಷ೦ 
ವಾಸುಕಿಂ ತಕ್ಷಕಂ ತಥಾ ।
ಪೂಜಯೇಚ್ಛರ್ಕರಾಕ್ಷೀರ-
ಪಾಯಸಖಾದ್ಯಕೈ: ।।
ಸಾಕ್ಷಾತ್ ಸಂಕರ್ಷಣಾತ್ಮಾಹಂ 
ತಾಂ ಪೂಜಾ೦ ಸ್ವಯಮಾದದೇ ।
ಬ್ರಾಹ್ಮಣಾನ್ ಭೋಜಯೇತ್ ಪಶ್ಚಾದ್ 
ದದ್ಯಾಚ್ಛಕ್ತ್ಯಾ ಚ ದಕ್ಷಿಣಮ್ ।। ಇತ್ಯಾದಿ ।। 
" ಸುಬ್ರಹ್ಮಣ್ಯ ನಾಗ ನಲ್ಲ - ಸುಬ್ರಹ್ಮಣ್ಯ ಶೇಷನಲ್ಲ! 
" ರಾಗ : ಅರಭಿ ತಾಳ : ಆದಿ 
ನಾಗನಾಯಕಾ ಪಾಲಿಸಾನೇಕ ।
ಭೋಗಧಾರಕಾ ।। ಪಲ್ಲವಿ ।। 
ಆಘಮ ಘೋಷಕ 
ರಾಘವನನುಜ । ನ ।
ತಾಘ ನಾಗಹರಿ 
ಭೋ ಗತ ಶೋಕ ।। ಅ. ಪ ।। 
ಚಕ್ಷುಶ್ರವಗಾತ್ರಾ 
ಪೂರ್ವ ತ್ರಿನೇತ್ರ ।
ಪಕ್ಷಿ ಸಮ ಕ್ಷೇತ್ರ ।
ತಕ್ಷಕಪಾನಿಲಭಕ್ಷಕಾ 
ಹರಭುಜ ।
 ರಕ್ಷಾ ಬಂಧ 
ಪರೀಕ್ಷಿತ ಕಾಲ ।। ಚರಣ ।। 
ವರುಣೀವರಾ 
ಪಾತಾಳ ವಿಹಾರಾ ।
ಧಾರುಣೀಧಾರಾ ।
ಪಾರುಗಾಣಿಸೋ 
ತವಾರಾಧನೆ । ಯಿ ।
ತ್ತೀರದ್ವಾರ ಹರಿ 
ತೋರಿಸೋ ತ್ವರದೀ ।। ಚರಣ ।। 
ದೋಷ ಹಾರಕಾ 
ಜೀವಾಭಿದ ಹಲಿ ।
ಶೇಷನಾಮಕಾ ।
ಪೋಷಕ ತಂದೆ 
ವೆಂಕಟೇಶ ವಿಠಲನ ।
ದಾಸರೊಳಿಡು ಬಯ-
ಲಾಸೆಯ ಬಿಡಿಸಿ ।। ಚರಣ ।। 
ವಿವರಣೆ : 
ನಾಗ ನಾಯಕಾ = ಸರ್ಪ ಶ್ರೇಷ್ಠ 
ಅನೇಕ ಭೋಗಾಧಾರಕಾ = ಅನೇಕ ಹೆಡೆಗಳನ್ನು ಹೊಂದಿದವರು 
" ಆಗಮ ಘೋಷಕ "
ವೇದ ಪ್ರತಿಪಾದ್ಯ ಶ್ರೀ ಹರಿಯನ್ನು ತಮ್ಮ 2000 ನಾಲಿಗೆಗಳಿಂದ ವೇದ ಮಂತ್ರಗಳಿಂದ ಸ್ತೋತ್ರ ಮಾಡುತ್ತಾ ಇರುತ್ತಾರೆ. 
ರಾಘವನನುಜ = ಲಕ್ಷ್ಮಣ 
ಗತಶೋಕ = ನಿರ್ದುಃಖನು 
ಚಕ್ಷುಶ್ರವಗಾತ್ರ = ಕಣ್ಣನ್ನೇ ಕಿವಿಯನ್ನಾಗಿ ಉಳ್ಳ ದೇಹ ಉಳ್ಳವನು 
ಪೂರ್ವ ತ್ರಿನೇತ್ರ = ಹಿಂದನ ಕಲ್ಪದ ರುದ್ರದೇವರು 
ಪಕ್ಷಿ ಸಮ ಕ್ಷೇತ್ರಾ = ಗರುಡ ದೇವರಿಗೆ ಸಮಾನರು 
ತಕ್ಷಕಪ = ತಕ್ಷಕನಿಗೆ ರಾಜ 
ಅನಿಲ ಭಕ್ಷಕಾ = ಸರ್ಪಕ್ಕೆ ಗಾಳಿಯೇ ಆಹಾರ 
ವಾರುಣೀ ವರಾ = ವಾರುಣೀ ದೇವಿಯರ ಪತಿ 
" ಧಾರುಣೀ ಧಾರಾ "
 ಶೇಷದೇವರ ಫಣದ ಮೇಲೆ ಭೂಗೋಳವು ಸಾಸುವೆ ಕಾಳಿನಂತೆ ಆಧಾರ ಹೊಂದಿದೆ. 
ಈರ = ಶ್ರೀ ವಾಯುದೇವರು!! 
ನಾಗ ಸುಬ್ರಹ್ಮಣ್ಯನಲ್ಲ. 
ಸುಬ್ರಹ್ಮಣ್ಯ ನಾಗನೂ ಅಲ್ಲ. 
ನಾಗ ಸ್ಥಳಗಳಲ್ಲಿ ಸುಬ್ರಹ್ಮಣ್ಯನ ಸನ್ನಿಧಾನ.
ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹೇಳಿದ ಸ್ಕಂದ ವಚನದಂತೆ....
ವಾಸುಕಿಯಲ್ಲಿ ಸ್ಕಂದನ ವಿಶೇಷ ಸನ್ನಿಧಾನವಿದೆ. 
ಈ ಮಾತಿನಿಂದ ಎಲ್ಲೆಡೆ ಸ್ಕಂದ ಸಂನಿಧನವನ್ನು ಹೇಳುವಂತಿಲ್ಲ. 
ಕುಕ್ಕೆಯಲ್ಲಿ ಮಾತ್ರ ವಾಸುಕಿಯೊಡನೆ ಸ್ಕಂದನ ಆರಾಧನೆ. 
ಸರ್ವೇ ಶೃಣ್ವ೦ತು ಮದ್ವಾಕ್ಯ-
ಮೃಷಯೋ ದೇವ ಮಾನವಾಃ ।
ಮದಂಗೇನಾಹಿರಾಟ್ ಸಾಕಂ 
ಧಾರಾತೀರೇ ಮನೋರಮೇ ।।
ವಾಸುಕಿರ್ವೋ ಮಯೂರಸ್ಥಃ 
ಪೂಜಾರ್ಹಃ ಸಂಭವೇತ್ಸದಾ ।।
***
" ಸುಬ್ಬರಾಯ - 2 "
 " ಶ್ರೀ ಸುಬ್ರಹ್ಮಣ್ಯನ ಪೂಜೆಗೆ ಪಂಚಮೀ ಶ್ರೇಷ್ಠ " 
ಸುಬ್ರಹ್ಮಣ್ಯನ ಪೂಜೆಗೆ ವಿಶೇಷವಾಗಿ " ಪಂಚಮೀ " ಒಳ್ಳೆಯದು. 
ಅದೂ ಷಷ್ಠಿಯುಕ್ತವಾಗಿದ್ದರೆ ಶ್ರೇಷ್ಠ ಎಂದು " ಚಮತ್ಕಾರ ಚಿಂತಾಮಣಿ " ಯಲ್ಲಿ ಉಲ್ಲೇಖಿತವಾಗಿದೆ. 
ಇದು ತಿಥಿಯ ವಿಷಯದಲ್ಲಿ ಹೇಳಿದ್ದೇ ಹೊರತು ಸುಬ್ರಹ್ಮಣ್ಯ ದೇವತೆಗೆ ಸಂಬಂಧಿಸಿ ಹೇಳಿದ್ದು ಎಂದು ತಿಳಿಯಬಾರದು. 
ವರ್ಷದಲ್ಲಿ ಪಕ್ಷಕ್ಕೊಂದು ಪಂಚಮಿಯಂತೆ ತಿಂಗಳಿಗೆರಡರಂತೆ 24 ಪಂಚಮಿಗಳು ಬರುವವು. 
ಮತ್ತಲ್ಲೂ ಶುಕ್ಲ ಪಕ್ಷದ ಪಂಚಮೀ ವಿಶೇಷವಾಗಿದೆ. 
ಅದು 12 ಮಾತ್ರ. 
ಅದರಲ್ಲೂ ಶ್ರಾವಣ ಮತ್ತು ಮಾರ್ಗಶಿರ ಮಾಸದ ಪಂಚಮೀ ಮತ್ತೂ ಶ್ರೇಷ್ಠವೆಂದು ಸ್ಕಂದ ಪುರಾಣ ಹೇಳಿದೆ. 
ಭವಿಷ್ಯ ಪುರಾಣದಲ್ಲಿ ಪಂಚಮೀ ಕಲ್ಪದಲ್ಲಿ ಹೇಳಿದಂತೆ ಹಾವಿಗೆ ಹಾಲೆರದವನ ವಂಶಕ್ಕೆ ಹಾವಿನ ಭಯವಿರದು. 
ಈ ಪುರಾಣವು ನಾಗಗಳ ಬಗ್ಗೆ 7 ಅಧ್ಯಾಯಗಳಲ್ಲಿ ಬಣ್ಣಿಸಿದೆ. 
ಉಚ್ಚ್ರೈಶ್ರವದ ಬಲದ ಬಣ್ಣದ ವಿಷಯದಲ್ಲಿ ನಡೆದು ಕದ್ರು ವಿನಿತೆಯರ ವಿವಾದದ ಕೊನೆಗೆ ನಾಗಗಳಿಗೆ ತಾಯಿಯ ಶಾಪಸಿಕ್ಕಿತು. 
ಮಾತೃ ಶಾಪದ ತಾಪ ಪರಿಹಾರಕ್ಕೆ ಹಾಲು ಹಾಕಬೇಕೆಂದು ಇಲ್ಲಿ ವಿಧಿಸಿದ್ದಾರೆ. 
ನಾಗಗಳು ವಿಧಿಯಿಂದ ಅನುಗ್ರಹ ಪಡೆದ ದಿನ ಪಂಚಮೀ. 
ಹೀಗಾಗಿ ಪಂಚಮಿಯು ನಾಗಪೂಜೆಗೆ ಪ್ರಶಸ್ತವೆನಿಸಿತು. 
ಭವಿಷ್ಯ ಪುರಾಣದಲ್ಲಿ ಆಸ್ತಿಕನ ವಿಷಯವೂ ಬಂದಿದೆ. 
ಸರ್ಪ ಸತ್ರವನ್ನು ನಿಲ್ಲಿಸಿದ ಕೀರ್ತಿ ಆತನಿಗೆ ಸಂದಿದೆ. 
ಸರ್ಪ ಸತ್ರವು ನಿಂತ ದಿನವೂ ಪಂಚಮೀ. 
ಅಂದು ನಾಗಗಳಿಗೆ ಆನಂದ ಸಿಕ್ಕಿತು. 
ಅಂದೇ ನಾಗಗಳ ಪೂಜೆ ವಿಶೇಷವಾಗಿ ವಿಹಿತವಾಯಿತು. 
ಕಲಿಯುಗದಲ್ಲಿ ಪ್ರಶಸ್ತವಾದ ತೀರ್ಥ ಅಶ್ವತೀರ್ಥ. 
ಇದು ಭಗವಂತನು ಕಲ್ಕಿಯಾಗಿ ಮೆರೆಯುವ ತಾಣ. 
ಇದು ಗಯಾ ಕ್ಷೇತ್ರದ ಸನಿಹ ಇದೆ. 
ಇಲ್ಲಿನ ನಾಗ ಕುಂಡದಲ್ಲಿ ಭಗವಂತ ಸನ್ನಿಹಿತನಾಗಿದ್ದಾನೆ. 
ಅಲ್ಲಿ ಮಿಂದು ನಾಗಗಳನ್ನು ಪೂಜಿಸಬೇಕು. 
ಇದರಿಂದ ಪುಣ್ಯಾತ್ಮನಾದ ಆತನಿಗೆ ಸರ್ಪಗಳ ವಿಷದ ಬಾಧೆಯಿಂದ ಮುಕ್ತಿ ದೊರಕುವುದು. 
ವಿಶೇಷವಾಗಿ ಶ್ರಾವಣ ಪಂಚಮೀಯಂದು ಈ ತೀರ್ಥದಲ್ಲಿ ಮಿಂದವನ ವಂಶಕ್ಕೆ ಸರ್ಪ ಬಾಧೆ ಬರದು ಎಂದು " ಯೋಗಿನೀತಂತ್ರ ಪದ್ಮಪುರಾಣದ ಸೃಷ್ಠಿಖಂಡದಿಂದ ಸಂಗ್ರಹಿಸಿ ಹೇಳಿದೆ. 
by ಆಚಾರ್ಯ ನಾಗರಾಜು ಹಾವೇರಿ 
    ಗುರು ವಿಜಯ ಪ್ರತಿಷ್ಠಾನ
***

No comments:

Post a Comment