ಒಂದು ಚಿಟಿಕೆ ಉಪ್ಪು ನಿಂದ ಮನೆಯ ನಾಲ್ಕು ಮೂಲೆಯಲ್ಲಿ ಮಹಿಳೆಯರು ಅಂದರೆ ಪ್ರತಿ ಗೃಹಿಣಿಯರು ಸಹ, ಪ್ರತಿನಿತ್ಯ ಈ ಕೆಲಸವನ್ನು ಮಾಡಲೇಬೇಕು. ಒಂದಿಷ್ಟು ಚಿಟಕಿ ಉಪ್ಪನ್ನು ತೆಗೆದುಕೊಂಡು ಮನೆಯ ನಾಲ್ಕು ಮೂಲೆಯಲ್ಲಿಯೂ ಕೂಡ ಸಿಂಪಡಿಸಬೇಕು. ಇದನ್ನು ಹೀಗೆ ಮಾಡಬೇಕು. ಮನೆಯಲ್ಲಿ ಕಸವನ್ನು ಗುಡಿಸಿದ ನಂತರ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ನಾಲ್ಕು ಮೂಲೆಯಲ್ಲಿಯೂ ಸಹ ಸಿಂಪಡಿಸಬೇಕು.
ಹೀಗೆ ಮಾಡಿದ ನಂತರ ಮನೆಯಲ್ಲಿ ನಿಮ್ಮ ಮನೆ ದೇವರಿಗೆ ತುಪ್ಪದ ದೀಪವನ್ನು ಹಚ್ಚಬೇಕು. ತುಪ್ಪ ಇಲ್ಲದೇ ಹೋದರೆ ಎಣ್ಣೆಯ ದೀಪವನ್ನು ಹಚ್ಚಬಹುದು. ಆದರೆ ನೆನಪಿಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಹರಳೆಣ್ಣೆಯ ದೀಪ ಮತ್ತು ಎಳ್ಳೆಣ್ಣೆಯ ದೀಪವನ್ನು ದೇವರಿಗೆ ಹಚ್ಚಬಾರದು. ಸುಗಂಧ ಭರಿತವಾದ ಎಣ್ಣೆ ಮುಖ್ಯವಾಗಿ ತೆಂಗಿನ ಎಣ್ಣೆಯ ದೀಪವನ್ನು ಹಚ್ಚಬಹುದು ಅಥವಾ ಬೆಣ್ಣೆಯ ದೀಪವನ್ನು ತುಪ್ಪದ ದೀಪವನ್ನು ಹಚ್ಚಬಹುದು.ಬೆಳಗ್ಗೆ ಎದ್ದ ತಕ್ಷಣ ಆ ಮನೆಯ ನಾಲ್ಕು ಮೂಲೆಯಲ್ಲಿ ಇರುವಂತಹ ಉಪ್ಪು ಕಸದ ಸಮೇತವಾಗಿ ಗುಡಿಸಿ ಯಾರೂ ದಾಟದ ಹಾಗೆ ಕಸವನ್ನು ಹೊರಗಡೆ ಹಾಕಬೇಕು. ಆ ನಂತರ ಸ್ನಾನ ಮಾಡಿ ಮನೆಯಲ್ಲಿ ಮತ್ತೆ ಬೆಳಗ್ಗೆ ಸೂರ್ಯೋದಯದ ಕಾಲದಲ್ಲಿ ದೇವರಿಗೆ ದೀಪವನ್ನು ಹಚ್ಚಬೇಕು
ಸಂಧ್ಯಾ ಕಾಲದಲ್ಲಿ ಹಾಕಬೇಕು. ನಾಲ್ಕು ಮೂಲೆಯಲ್ಲಿ ಚಿಟಕಿ ಉಪ್ಪನ್ನು ಹಾಕಬೇಕು, ಉಪ್ಪಿನ ಋುಣ, ಸಾಲದ ಋಣ, “ಯಾರು ಜಾಸ್ತಿ ಉಪ್ಪು ತಿನ್ನುತ್ತಾರೋ ಅವರಿಗೆ ಋಣ ಜಾಸ್ತಿ” ಎನ್ನುವ ಒಂದು ಮಾತು ಸಹ ಇದೆ. ಇನ್ನು ನಮ್ಮ ಕೈಯಲ್ಲಿ ಆಗುವುದಿಲ್ಲ ಈ ಸಾಲವನ್ನು ತೀರಿಸಲು ಆಗುವುದಿಲ್ಲ. ಇನ್ನೆಷ್ಟು ಋಣವನ್ನು ನಾವು ತೀರಿಸಬೇಕು ಎಂದು ಕೊರಗುವವರು ಸಹ ಇದ್ದಾರೆ.ಈ ಉಪಾಯವನ್ನು ನಿಮಗೇ ತಿಳಿದ ದಿನದಿಂದಲೇ ಆರಂಭ ಮಾಡಿ ನೋಡಿ ಮುಖ್ಯವಾಗಿ ಒಂದು ಸೋಮವಾರದ ದಿನ ಆರಂಭ ಮಾಡಿ. ಇದರಿಂದ ವಿಶೇಷವಾದ ಫಲ ಬೇಗನೆ ನಿಮಗೆ ದೊರೆಯುತ್ತದೆ.
ಸಂಧ್ಯಾ ಕಾಲದಲ್ಲಿ ದೀಪಕ್ಕೆ ಎಲ್ಲವನ್ನೂ ತಯಾರು ಮಾಡಿಟ್ಟುಕೊಂಡು ಮನೆಯನ್ನು ಸ್ವಚ್ಛವಾಗಿ ಗುಡಿಸಿಕೊಂಡು ಮೂಲೆ ಮೂಲೆಯಲ್ಲಿ ಒಂದು ಚಿಟಿಕೆಯಷ್ಟು ಉಪ್ಪನ್ನು ಹಾಕಿ ಅದು ಕಣ್ಣಿಗೆ ಕಾಣಿಸದೆ ಇರುವಂತೆ ಉಪ್ಪನ್ನು ಹಾಕಿದರೆ ಸಾಕು ನಂತರ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿ ಬೆಳಗ್ಗೆ ಎದ್ದ ತಕ್ಷಣ ಆ ಕಸವನ್ನು ಗುಡಿಸಿ ಹೊರಗೆ ಹಾಕಬೇಕು. ಅದನ್ನು ಯಾರೂ ಬೇರೆಯವರಾಗಲಿ, ಮನೆಯವರಾಗಲಿ, ತುಳಿಯಬಾರದು.ಆ ರೀತಿಯಲ್ಲಿ ಹಾಕಬೇಕು ನಂತರ ಸ್ನಾನಾದಿಗಳನ್ನು ಮಾಡಿಕೊಂಡು, ಈ ಕೆಲಸವನ್ನು ಮಾಡಿ ನಂತರ ನೋಡಿ ನಿತ್ಯ ಗುಣ ಬಾಧೆಗಳಿಂದ ಸಾಲದ ಬಾಧೆಗಳಿಂದ ನೀವು ಹೇಗೆ ಹೊರಬರುತ್ತೀರಿ.
ಸರಳ. ಪರಿಹಾರ ಶ್ರೀ ಸುಧಾಕರ
*******
*******
No comments:
Post a Comment