SEARCH HERE

Wednesday 14 April 2021

ಪ್ರಾರಬ್ದಕರ್ಮ

ಪ್ರಾರಬ್ದಕರ್ಮದ ತೀವ್ರತೆಯ ಮೌಲ್ಯಮಾಪನ ಹೇಗೆ ಸಾಧ್ಯ??? ಪ್ರಾರಬ್ದಕರ್ಮವೆಂದರೆ ನಮ್ಮ ಅನೇಕ ಜನ್ಮಗಳ ಕರ್ಮದ ಬೆಟ್ಟವಾದ ‘ಸಂಚಿತ ಕರ್ಮ’ದ  ಸಂಗ್ರಹಾಲಯದಿಂದ ಯಾವುದೇ ವ್ಯಕ್ತಿ ಒಂದು ಜನ್ಮದಲ್ಲಿ ಅನುಭವಿಸಬೇಕಾದ ಒಂದಿಷ್ಟು ಒಳ್ಳೆಯ ಮತ್ತು ಒಂದಿಷ್ಟು ಕೆಟ್ಟ ಕರ್ಮಫಲಗಳ ಮಿಶ್ರಣ. ನಮ್ಮ ಪೂರ್ವಕರ್ಮಗಳೇ ಇದಕ್ಕೆ ಆಧಾರ.
ನಾವು ಮಾಡುವ ದಾನ, ಧರ್ಮ, ಪೂಜೆ, ಜಪತಪ, ಹೋಮ ಹವನಗಳು, ಯಜ್ಞ ಯಾಗಾದಿಗಳು, ನಿಷ್ಕಾಮಕರ್ಮಗಳು ಇತ್ಯಾದಿಗಳು ಪುಣ್ಯಕರ್ಮಗಳು.
ಪರಪೀಡನೆ, ಶೋಷಣೆ, ಹಿಂಸೆ, ಮೋಸ,ವಂಚನೆ,ಅನ್ಯಾಯ, ಅಧರ್ಮ,ಅತ್ಯಾಚಾರ,ಅನಾಚಾರ, ದಬ್ಬಾಳಿಕೆ, ಅಧಿಕಾರ ದುರುಪಯೋಗ ಮುಂತಾದವು ಪಾಪಕರ್ಮಗಳು.
ಪ್ರತಿಯೊಂದು ಕರ್ಮಕ್ಕೂ ತಕ್ಕ ಪ್ರತಿಫಲವಿದ್ದೇ ಇರುತ್ತದೆ. ನಾವು ನಂಬಲಿ ಬಿಡಲಿ, ಒಪ್ಪಲಿ ಒಪ್ಪದಿರಲಿ ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತ ತನ್ನ ಪಾಡಿಗೆ ತಾನು ಕೆಲಸ ಮಾಡಿಯೇ ತೀರುತ್ತದೆ.
ಏಕೆಂದರೆ, ಇದು ಪರಮಾತ್ಮನ ಅನುಲ್ಲಂಘನೀಯ ಶಾಸನ! ನಮ್ಮ ಒಪ್ಪಿಗೆ ಅಥವಾ ಅನುಮತಿಯ ಅಗತ್ಯವಿಲ್ಲ!
ಯಾವಾಗ ಒಳ್ಳೆಯ ಫಲ, ಯಾವಾಗ ಕೆಟ್ಟ ಫಲ ಎಂದು ತಿಳಿಸುವುದೇ ಜಾತಕ. ದಶಾಭುಕ್ತಿ, ಗ್ರಹಗಳ ಗೋಚಾರಗಳಿಂದ ಇದನ್ನು ತಿಳಿಯಬಹುದು.

     ಕರ್ಮಫಲಗಳ ಮೌಲ್ಯಮಾಪನ ಹೇಗೆ?
      —————————————-
ಕರ್ಮಫಲಗಳ ತೀವ್ರತೆಯನ್ನು ಅಳೆಯಲು ಸಾಧ್ಯವಾದರೆ ಅದಕ್ಕೆ ತಕ್ಕಂತೆ ಪರಿಹಾರ ಮಾರ್ಗೋಪಾಯಗಳನ್ನು ಕಂಡುಹಿಡಿಯಬಹುದು.
99 ಡಿಗ್ರಿಯಿಂದ 104 ಡಿಗ್ರಿ ಜ್ವರಕ್ಕೆ ವಿವಿಧ ರೀತಿಯ ಚಿಕಿತ್ಸೆ ಹೇಗೆ ಅವಶ್ಯಕವೋ ಹಾಗೇ ಕರ್ಮಗಳ ತೀವ್ರತೆಯನ್ನು  ಸರಿಯಾಗಿ ಅಳೆದರೆ ಮಾತ್ರ ಯಶಸ್ವೀ ಪರಿಹಾರ ಸಾಧ್ಯ.

         ಗೀತೆಯ ಮಾರ್ಗದರ್ಶನ
        —————————-
ಗೀತೆ 3-10 ,11,12 ಶ್ಲೋಕಗಳು ತಿಳಿಸುವಂತೆ ಸೃಷ್ಟಿಯ ಆದಿಯಲ್ಲೇ ಪ್ರಜೆಗಳ ಜೊತೆಯಲ್ಲೇ ಬೇಡಿದ್ದನ್ನು ಕೊಡುವ ಕಾಮಧೇನುವಾಗಿ ಯಜ್ಞ ಯಾಗಾದಿಗಳನ್ನು ಸೃಷ್ಟಿಸಿ, ಮನುಷ್ಯ ಹಾಗೂ ದೇವತೆಗಳು ಪರಸ್ಪರರನ್ನು ಗೌರವಿಸಿ ಬದುಕುವ ವ್ಯವಸ್ಥೆಯನ್ನು ಮಾಡಿದ್ದಾನೆ  ಪರಮಾತ್ಮ!

ಕರ್ಮಬೆಲೆ / ಕರ್ಮ ವಿನಿಮಯ
Karmic value or karmic exchange
———————————————
Anything that can be measured only can be corrected or cured. 
ಈ ಆಧಾರದ ಮೇಲೆ ನಾನು ಮಾಡಿದ ಅನೇಕ ಪ್ರಯೋಗಗಳಿಂದ  ಸಿದ್ಧವಾದ ಸೂತ್ರವೇ ಕರ್ಮಬೆಲೆಯ ಸಿದ್ಧಾಂತ!
ಈ ಆವಿಷ್ಕಾರ ನೂರಾರು ಘಟನೆಗಳಲ್ಲಿ ನನಗೆ ನಿರೀಕ್ಷಿತ ಧನಾತ್ಮಕ ಫಲಗಳನ್ನು ನೀಡಿವೆ. ನನ್ನ ಸಂಶೋಧನೆ ಸರಿಯಾದ ಮಾರ್ಗದಲ್ಲಿ ನಡೆದಿದೆ ಎಂಬುದನ್ನು ಖಚಿತಪಡಿಸಿವೆ.
10000 ಹೋಮಗಳನ್ನು ಇದುವರೆಗೂ ಮಾಡಲು ಸಾಧ್ಯವಾಗಿರುವುದು ಈ ಖಚಿತ ಫಲಕಾರಿ ಸೂತ್ರದಿಂದಲೇ!

ಜಾತಕದ ಯಾವುದೇ ದೋಷಗಳಿಗೂ ಈ ಸೂತ್ರದಿಂದಲೇ ಯಶಸ್ವೀ ಪರಿಹಾರ ಕಂಡುಕೊಂಡಿದ್ದೇನೆ.
ವಿವಿಧ ರೀತಿಯ ನಾಗದೋಷ, ಸರ್ಪದೋಷ, ಶಾಪ, ದೈವಾಗ್ರಹ, ವಾಮಾಚಾರ , ಪ್ರೇತಭಾಧೆ, ಕ್ಷುದ್ರಶಕ್ತಿಗಳ ಕಾಟ, ಜನ್ಮಾಂತರದ ಕರ್ಮಗಳು ಇತ್ಯಾದಿಗಳಿಗೆ ರಾಮಬಾಣ ಪರಿಹಾರ ಸಾಧ್ಯ.

                         ಯಾವುದೀ ಸೂತ್ರ?
                   ———-////—//-//////——-

ಎಷ್ಟು ಹೋಮಗಳು * ಪ್ರತಿ ಹೋಮದ ಖರ್ಚು= ಕರ್ಮಬೆಲೆ / KARMIC VALUE 

     ನಿರ್ಧರಿಸುವವರು ಯಾರು ?
 —-/////////////———————
ಪ್ರತಿಯೊಂದು ಗ್ರಹಕ್ಕೂ ಅಧಿದೇವತೆಗಳುಂಟು.
ಅವರನ್ನು ಭಕ್ತಿಯಿಂದ ಪ್ರಾರ್ಥಿಸಿ, ಪರಿಹಾರ ಸೂಚಿಸಿ, ಸಹಾಯಮಾಡಿ ಎಂದು ಬೇಡಿಕೊಂಡಾಗ  ಆಯಾ ದೇವತೆಗಳಿಂದ ನನಗೆ ಸೂಚನೆ ಬರುತ್ತದೆ. ಇದೇ ಪರಿಹಾರಸೂತ್ರ.
     
     ಎಲ್ಲರಿಗೂ ಪರಿಹಾರ ಸಾಧ್ಯವೇ ?
       ——————————-
ಖಂಡಿತ ಸಾಧ್ಯವಿಲ್ಲ !!!  ಶ್ರೀಮಂತರಿಗೆ  ಮಾತ್ರ ಈ ಸೂತ್ರದಿಂದ ಪರಿಹಾರ ಸಾಧ್ಯ!
ಕರ್ಮಬೆಲೆ ಹೆಚ್ಚಾದಾಗ ಬಡವರು, ಜನಸಾಮಾನ್ಯರು ಆ ಅಗಾಧ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲ. ಸೂಕ್ತ ಹಣಕಾಸಿನ ಅನುಕೂಲವಿಲ್ಲದಿರುವುದೂ ಕೂಡ ಕರ್ಮಫಲದ ಭಾಗವೇ.  ಹಣ ಖರ್ಚು ಮಾಡುವುದು ಮಾತ್ರವಲ್ಲದೆ ಮಾಡಿದ ಪಾಪಕರ್ಮಗಳಿಗಾಗಿ ತಕ್ಕ ಪ್ರಾಯಶ್ಚಿತ್ತ , ಮನೋಭಾವ ಬದಲಾವಣೆ, ಮಂತ್ರಜಪ, ಪೂಜೆ, ಮತ್ತೆಂದಿಗೂ ಅಂತಹ ಕೆಟ್ಟ ಕರ್ಮಗಳನ್ನು ತಿಳಿದೋ ತಿಳಿಯದೆಯೋ ಮಾಡದಿರುವ ದೃಢಸಂಕಲ್ಪ, ದೇವತೆಗಳಿಗೆ ಆ ಬಗ್ಗೆ ಪ್ರಮಾಣ ಮಾಡುವುದು ಇತ್ಯಾದಿಗಳೂ ಅತ್ಯಗತ್ಯ.

             ಹಾಗಾದರೆ ಬಡವರ ಕಥೆ ಏನು ?
               —-—————————
ಬಡತನ ಕೂಡ ಕೆಟ್ಟ ಕರ್ಮಗಳ ಫಲವೇ. ಸಾಕಷ್ಟು ಹಣಬಲವಿದ್ದರೆ ಯಾರು ಬೇಕಾದರೂ ಈ ಸೂತ್ರದಿಂದ ಪರಿಹಾರ ಪಡೆದುಕೊಳ್ಳಬಹುದು. ಸಾಕಷ್ಟು ಧನಪ್ರಾಪ್ತಿಯಿಲ್ಲದಿರುವುದೇ ಹಿಂದಿನ ಕೆಟ್ಟಕರ್ಮಗಳಿಗಾಗಿ ಪರಮಾತ್ಮ ವಿಧಿಸುವ ಶಿಕ್ಷೆ ಅಥವಾ ಮಿತಿ !  ಪರಿಹಾರಕ್ಕೆ ತಡೆ! 
ಕೆಲವರಿಗೆ ಹಣವಿದ್ದರೂ ಇಲ್ಲದಿದ್ದರೂ ನಂಬಿಕೆ, ಮನಸ್ಸಿರುವುದಿಲ್ಲ. ದೇವರಲ್ಲಿ ಭಕ್ತಿ, ಶ್ರದ್ಧೆ, ಗೌರವಗಳಿರುವುದಿಲ್ಲ. 
ಇವು ಉದ್ದೇಶಪೂರ್ವಕವಾಗಿ, ಪೂರ್ವನಿಯೋಜಿತವಾಗಿ ತಿಳಿದೂ ತಿಳಿದೂ  ಮಾಡಿದ ಕೆಟ್ಟ ಕರ್ಮ- ದೃಢಕರ್ಮಗಳ ಫಲ. ಯಾವ ಶಾಂತಿ, ಪೂಜೆ,ಹೋಮ,ದಾನ ಧರ್ಮಗಳಿಗೂ ಬಗ್ಗದ , ಪರಿಹಾರವಿಲ್ಲದ ಕರ್ಮಫಲಗಳು.
ಅನೇಕರಿಗೆ ನನ್ನ ಸಲಹಾ ಶುಲ್ಕವನ್ನು ಕೊಡಲೂ ಅನುಕೂಲವಿರುವುದಿಲ್ಲ. ಅಂತಹವರಿಗೆ ಹೋಮ ಹವನಗಳ ಮೂಲಕ ಮಾಡುವ ಈ ಪರಿಹಾರ 
ಸುತರಾಂ ಸಾಧ್ಯವಿಲ್ಲ. 
ಶಕ್ತಿಯಿದ್ದಷ್ಟು ದಾನ ಧರ್ಮ, ಪೂಜೆ, ಜಪ ತಪ, ಇತ್ಯಾದಿಗಳಷ್ಟೇ ದಾರಿ. ಭಗವಂತನ ಕೃಪೆಗಾಗಿ ಸಹನೆಯಿಂದ ಕಾಯಬೇಕಷ್ಟೇ.
             ಇಂಥವರಿಗಾಗಿಯೇ ಸಾಮೂಹಿಕ ಪೂಜೆ, ಹೋಮಗಳನ್ನು ಮಾಡುತ್ತೇನೆ. ನಿಧಾನವಾಗಿ ಒಳ್ಳೆಯ ಫಲ ಬರುತ್ತದೆ. ವರ್ಷಗಳ ಕಾಲವೂ ಹಿಡಿಯುತ್ತದೆ. 
ಬಡತನವಿದ್ದಾಗಲೇ ಹೆಚ್ಚು ಹೆಚ್ಚಾಗಿ ಪೂಜೆ, ಪರಿಹಾರ, ದಾನ ಧರ್ಮಗಳನ್ನು , ಮಂತ್ರಜಪ, ತೀರ್ಥಯಾತ್ರೆ ಇತ್ಯಾದಿಗಳನ್ನು ಮಾಡುವ ಅವಶ್ಯಕತೆ ಇರುತ್ತದೆ.  ಶಕ್ತಿಮೀರಿ ಮಾಡಬೇಕು ಎಂದರೆ ಯಾರೂ ಸಿಟ್ಟಾಗಬಾರದಲ್ಲವೇ ?
ರೋಗದ ತೀವ್ರತೆ ಹೆಚ್ಚಿದಷ್ಟೂ ಪರಿಹಾರವೂ ಕಠಿಣವಾಗುತ್ತದೆ!
ಇದು ಕಟುಸತ್ಯ. ಟಿವಿ ಜ್ಯೋತಿಷಿಗಳು ಹೇಳುವ ಪರಿಹಾರಗಳು ಫಲಕಾರಿಯಾಗುವುದಿಲ್ಲವೆಂದು ನನ್ನ ಬಳಿ ದೂರುವವರಿಗೆ ನನ್ನ ಸಲಹೆಯಿದು. 
ಬೇರೆಯವರನ್ನು ಬೈಯ್ಯುವ, ಆಕ್ಷೇಪಿಸುವ ಮೊದಲು ನಿಮ್ಮ ಕೆಟ್ಟ ಕರ್ಮಗಳ ತೀವ್ರತೆಯ ಬಗ್ಗೆ ಯೋಚಿಸಿ.   ಪಶ್ಚಾತ್ತಾಪ ಪಡಿ. ದೇವರಲ್ಲಿ ಕ್ಷಮೆ ಯಾಚಿಸಿ . 
ಕೆಲವೇ ನೂರೋ ಸಾವಿರವೋ ಖರ್ಚು ಮಾಡಿದರೆ ಎಲ್ಲ ದೋಷಗಳೂ ನಿವಾರಣೆಯಾಗಬೇಕೆಂದು ಬಯಸುವುದು ಮೂರ್ಖತನ ಮಾತ್ರವಲ್ಲ ಭಗವಂತನ, ಅವನ ಕರ್ಮ - ಪುನರ್ಜನ್ಮ ಸಿದ್ಧಾಂತಗಳ  ಅವಹೇಳನ ಕೂಡ. ಇದರಿಂದ ಶಿಕ್ಷೆ, ನರಳಾಟ, ಸಂಕಟಗಳು ಇನ್ನೂ ಹೆಚ್ಚಾಗುತ್ತವಷ್ಟೇ.

ಎಚ್ಚರ ! ನಿಮ್ಮ ಕರ್ಮಗಳಿಗಷ್ಟೇ  ಅಲ್ಲ  ಕರ್ಮಫಲಗಳಿಗೂ ನೀವೊಬ್ಬರೇ ಜವಾಬ್ದಾರರು.
ಗೀತೆ 2-47.
ಕರ್ಮಣ್ಯೇವಾಧಿಕಾರಸ್ಥೇ ಮಾ ಫಲೇಷು ಕದಾಚನ ...
ಓದಿ ಗೀತೆ 4-17,18 ಕೂಡ . ಕರ್ಮದ ಗತಿ ಅತಿ ಗೂಢ, ಗಹನ. 
ಕರ್ಮಫಲ, ಪುನರ್ಜನ್ಮ ಸುಳ್ಳೆನ್ನುವವರು ಕರ್ಮವಿಪಾಕ ಗ್ರಂಥ ಅಥವಾ ಗೀತೆಯ 16ನೇ ಅಧ್ಯಾಯ ಓದಿ

   ಸಮಸ್ತ ಸನ್ಮಂಗಳಾನಿ ಭವಂತು
******

No comments:

Post a Comment