SEARCH HERE

Tuesday 13 April 2021

ಕರ್ಮ ಸಮರ್ಪಣೆ karma samarpane

ಕರ್ಮ ಸಮರ್ಪಣೆ ಮಾಡುವ ರೀತಿ
(ಶ್ರೀಮತ್ ಜಗನ್ನಾಥದಾಸರ ಶ್ರೀಹರಿಕಥಾಮೃತಸಾರ ಪ್ರಕಾರ)

ಹೇ ಸ್ವಾಮೀ! ತತ್ವಾಭಿಮಾನಿಗಳ ಅಂತರ್ಯಾಮಿ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಬಿಂಬ ಮೂರ್ತೇ!
ಹಿಂದಿನ ಸಕಲ ಜನ್ಮಗಳಲ್ಲಿ ಹಾಗೂ ಮುಂದಿನ ಸಕಲ ಜನ್ಮಗಳಲ್ಲಿ ಹಾಗೆಯೇ ಈ ಜನ್ಮದ ಮೊದಲನೇ ಕ್ಷಣ ಮೊದಲು  ಕೊನೆಯ ಕ್ಷಣ ವರೆಗೂ, ನನ್ನ ದೇಹ,ಇಂದ್ರಿಯ,ಮನಸ್ಸು,ಪ್ರಾಣ ಗಳಲ್ಲಿ ನೀನೇ ನಿಂತು ತತ್ವಾಭಿಮಾನಿ ದೇವ ದೈತ್ಯರ ಮೂಲಕ,ಜಾಗ್ರತ್ ಸ್ವಪ್ನ ಸುಷುಪ್ತಿಗಳಲ್ಲಿ,ಮನೋ ವಾಕ್ ಕಾಯದಿಂದ,ಸಕಲ ಇಂದ್ರಿಯಗಳ ಮೂಲಕ,ನನ್ನಿಂದ ಒಳ್ಳೆಯ ಹಾಗೂ ಕೆಟ್ಟ ಕೆಲಸಗಳನ್ನು,ನನ್ನ ಹಿಂದಿನ ಕರ್ಮಾನುಸಾರವೇ, ಮಾಡಿಸಿದ್ದೀಯ,ಮಾಡಿಸುತ್ತಾ ಇದ್ದೀಯ ಹಾಗೂ ಮಾಡಿಸುತ್ತೀಯ
ಆದರೇ ಆ ಎಲ್ಲಾ ಕರ್ಮಗಳು ನಿನ್ನಿಂದ ನಡೆಯುವಾಗ,ನಿನ್ನ ಎಚ್ಚರವಿಲ್ಲದೇ ಇರೋದರಿಂದ, ನಾನೇ ಮಾಡಿದೆ ಎನ್ನುವ ಭಾವನೆ ಬಂದಿದೆ.
ಇದರಿಂದ, 
ನನ್ನಲ್ಲಿ ಇಲ್ಲದ ಸ್ವತಂತ್ರ ಕರ್ತೃತ್ವ ನಾನು ಹೇಳಿಕೂಂಡಿದ್ದಾಯಿತು.
ಸ್ವತಂತ್ರ ಕರ್ತೃತ್ವ  ಎರಡುನಿನ್ನ ಸೊತ್ತು.ನಿನ್ನ ಮರೆತು ನಾನೇ ಮಾಡಿದೆ ಎಂದಾಗಲಿ ಅಥವಾ ನಾನು ಮಾಡಿದೆ ಎಂದಾಗಲಿ ನನ್ನ ಮನಸ್ಸಿಗೆ ಬಂದಿದ್ದರಿಂದ ನಿನ್ನ ಸ್ವಾತಂತ್ರ್ಯ ನನ್ನಲ್ಲಿ ಇದ್ದಂತೆ ಹೇಳಿಕೊಂಡಿದ್ದಾಯಿತು.
ಅಂದರೇ ನಿನ್ನ ಸ್ವಾತಂತ್ರ್ಯ ಕದ್ದಿದ್ದಾಯಿತು. 
ನಾನೇ ದೇವರೆಂದು ಹೇಳಿಕೊಂಡಂತೆ ಆಯಿತು.ಯಾರು ನಾನೇ ದೇವರು ಎಂದು ಹೇಳುತ್ತಾರೋ ಅವರು ನಾನೇ ಲಕ್ಷ್ಮೀಪತಿ ಎಂದು ಹೇಳಿಕೂಂಡಂತೆ ಅಲ್ಲವೇ!
ಜನ್ಮ ಜನ್ಮಗಳಿಂದ ಈ ಕ್ಷಣದ ವರೆಗೂ ಪ್ರತಿಯೊಂದು ಕರ್ಮದಲ್ಲೂ ಹೀಗೆಯೇ ನಿನ್ನ ಮರೆತು, ನಾ ಮಾಡಿದೆ ಎಂದು ನನ್ನ ಮನಸಿಗೆ ಬರ್ತಾಯಿದೆ.
ಈ ರೀತಿಲಿ ಸದಾ ನಿನ್ನ ಸ್ವಾತಂತ್ರ್ಯ ಕದ್ದ ದೋಷ ನನ್ನ ಕಾಡುತ್ತಾ,ಎಲ್ಲಾ ದುಃಖಗಳಿಗೆ ಹಾಗೂ ನಿನ್ನ ಮರೆವಿಗೂ ಕಾರಣವಾಗಿ ನನ್ನ ಕಾಡುತ್ತಾಯಿದೆ.
ಇದರಿಂದ ಬಿಡುಗಡೆ ನೀನೇ ಮಾಡ ಬೇಕು.
ಶರಣಾಗಿದ್ದೇನೆ ದಯದಿಂದ ಸಲಹೋ ಸ್ವಾಮೀ!
ನಿನ್ನ ಮರೆತು ನಾನು ಮಾಡಿದೆ ಎಂಬ ಭಾವನೆಯಿಂದ , ನಿನ್ನ ಸ್ವಾತಂತ್ರ್ಯ ಕದ್ದಂತಾಗಿ, ಆ ದೋಷದ ಮೂಲಕ ನಾನು ಗಳಿಸಿದ, ಒಳ್ಳೆಯ ಹಾಗೂ ಕೆಟ್ಟ ಕರ್ಮಗಳ ಫಲವೆಲ್ಲಾ
 "ಕಳ್ಳ ಕದ್ದು ಸಂಪಾದಿಸಿದ ಧನದಂತೆ" ಆಯಿತು.
ನಿನ್ನ ಪಾದಕ್ಕೆ ಈ ಸಂಪತ್ತೆಲ್ಲಾ "ನಿನ್ನ ಅಧೀನವೆಂದು" ಸಮರ್ಪಣೆ ಮಾಡುತ್ತಿದ್ದೇನೆ.
ನಿನ್ನ ಸ್ವಾತಂತ್ರ್ಯ ಕದ್ದ ದೋಷದಿಂದ ಪಾರುಮಾಡು ಹರಿಯೇ!
ಇದಾದರೂ ನಿನ್ನ ದಾಸರಾದ ಶ್ರೀಮಜ್ಜಗನ್ನಾಥ ದಾಸರೆಂಬ ಗುರುಗಳ ,ತತ್ವಾಭಿಮಾನಿಗಳ ಮೂಲಕ ನೀನೇ ಕರುಣಿಸಿದ ಜ್ಞಾನದಿಂದ ,ಸಮರ್ಪಣೆ ಮಾಡಬೇಕೆಂಬ ನಿನ್ನ ಬಲವತ್ತರ ಪ್ರೇರಣೆಯಿಂದ,ನೀನೇ ನಡೆಸಿದ ನನ್ನ ಪ್ರಯತ್ನದ ಮೂಲಕ ನಿನ್ನಿಂದಲೇ ನಿನ್ನಿಂದಲೇ ನಿನ್ನಿಂದಲೇ ನಾನು ಸಮರ್ಪಣೆ ಮಾಡಿದ್ದಾಯಿತು.
ಈ ಜ್ಞಾನ ಸದಾ ದಯಪಾಲಿಸು ಹರಿಯೇ!
🙏🙏🙏

ಜೀವನಾದ ನನಗೆ ಕರ್ತೃತ್ವವೆಂಬ ಧರ್ಮ ಸದಾ ಇದ್ದೇ ಇದೆ.ನನ್ನಿಂದ ಪ್ರಯತ್ನ ಆಗಲೇ ಬೇಕು.
ಆದರೇ ಆ ಪ್ರಯತ್ನ  ನೀನು ಮಾಡಿಸಿದರೇನೇ ನನ್ನಿಂದ ನಡೆಯುತ್ತೆ.
ಇಲ್ಲದಿದ್ದರೇ  
ಉಸಿರಾಟವನ್ನೂ ನಾನಾಗಿ ಮಾಡಲಾರೆನೆಂಬ ಜ್ಞಾನ ಸದಾ ಕೊಡು ಹರಿಯೇ
ನನಗೆ ಎಳ್ಳಷ್ಟೂ ಸ್ವಾತಂತ್ರ್ಯ ಇಲ್ಲವೆಂಬ ಜ್ಞಾನ
ಕೊಡು*
ದಾಸರು ತಿಳಿಸಿದ ದತ್ತ ಸ್ವಾತಂತ್ರ್ಯ ವೆಂದರೇ "ಸ್ವಾತಂತ್ರ್ಯ ನಿನ್ನ ಗುಣ.ನಿನ್ನಿಂದ ಬೇರೇ
ಅಲ್ಲ.ಅದನ್ನು ಇನ್ನೊಬ್ಬರಿಗೆ ಕೊಡುವದಕ್ಕೂ ಅಗಲ್ಲ.
ಕೇವಲ ನೀನೇ ಜೀವರ ಸಕಲೇಂದ್ರಿಯಗಳಲ್ಲಿ, ನಿನ್ನ ಇಂದ್ರಿಯಗಳನ್ನಿಟ್ಟು
ವ್ಯಾಪಿಸಿ ನಿಂತು ,
ಶಕ್ತಿ ಪ್ರಕಟ ಮಾಡಿ, ಅವರಿಂದ  ಸಕಲ ಕಾರ್ಯ ಮಾಡಿಸುತ್ತೀಯ.
ನಿನ್ನಿಂದಾಗಿ ಜೀವರಿಗೆ ಚಟುವಟಿಕೆ ಬರುತ್ತಾ ಇದೆ.ತಾವಾಗಿ ಜೀವರು ಉಸಿರಾಟಕ್ಕೂ ಸಮರ್ಥರಲ್ಲ ಎಂದು ಅರ್ಥ.
ಈ ಚಿಂತನೆ ಸದಾ ಕೊಡು ಸ್ವಾಮೀ!
ಶ್ರೀ ಜಗನ್ನಾಥ ದಾಸರನ್ನು ನಮಗೆ 
ಶ್ರೀ ಗೋಪಾಲದಾಸರ
,ಶ್ರೀ ವಿಜಯದಾಸರ,ಹಾಗು ಶ್ರೀ ರಾಯರ ಅನುಗ್ರಹ ದಿಂದ
ಅವರ ಮೂಲಕ 
ಈ ಜ್ಞಾನ ನಮಗೆ ಕೊಟ್ಟ ನಿನ್ನ ಕರುಣೆಗೆ ನಮೋ ನಮಃ
🙏🙏🙏🙏🙏.
Courtesy.Sri Kurnool srinivas Acharya.
🙏🙏
ಕರುಣಿಸಿ ಪಿಡಿಯೊ ಕೈಯ್ಯಾ
ಗುರು ರಂಗವಲಿದ ರಾಯ
..
ನಿನ್ನ ಸ್ಥಳವು ಪುಣ್ಯ ಕ್ಷೇತ್ರ
ನಿನ್ನಲ್ಲಿ ಸಕಲ ತೀರ್ಥ|
ನಿನ್ನ ಕವನ ಮಧ್ವ ಶಾಸ್ತ್ರ
ನಿನ್ನವರು ನಿಜ ಕೃತಾರ್ಥ||
...
ಮಾನವಿಯ ಸ್ಥಾನದಲ್ಲಿ
 ನೀನಿರಲು ನಿನ್ನ ಮರೆತು|
ತಾ ನೆಲ್ಲಿ ಪೋದರೇನು
ಆ ನರಗೆ ಉಂಟೇ ಮೋದ||
*****

No comments:

Post a Comment