SEARCH HERE

Tuesday 1 January 2019

ದೇವರಿಗೆ ಯಾವ ಪುಷ್ಪ offer which flower to god


ದೇವರಿಗೆ ಯಾವ ಪುಷ್ಪವನ್ನು ಅರ್ಪಿಸಿ ಪ್ರಸಾದ ಸ್ವೀಕರಿಸುವುದರಿಂದ ಯಾವ ಫಲ ಬರುತ್ತದೆ

*  ದೇವರಿಗೆ ಜಾಜಿ ಹೂ : ಅರ್ಪಿಸಿ ಪ್ರಸಾದ ಸ್ವೀಕರಿಸಿದರೆ, ನಿಮ್ಮಲ್ಲಿರುವ ದುಷ್ಟಗುಣಗಳು ಹೋಗಿ ಸದ್ಗುಣಗಳು ಬರುತ್ತವೆ ಹಾಗೂ ಉದ್ಯೋಗದಲ್ಲಿನ ತೊಂದರೆಗಳು ನಿವಾರಣೆಯಾಗುತ್ತದೆ ..

*  “ಸಂಪಿಗೆ ಹೂವು” ಕೊಟ್ಟು ಪ್ರಸಾದ ಸ್ವೀಕರಿಸದರೆ, ಮಾಂತ್ರಿಕ ಪ್ರಯೋಗಗಳು ನಡೆಯುವುದಿಲ್ಲ, ಹಾಗೂ ಶತೃಗಳ ನಿರ್ಮೂಲನೆಯಾಗುತ್ತದೆ..

*  ಪಾರಿಜಾತದದ ಹೂವು : ಕಾಳಸರ್ಪದೋಷ ನಿವಾರಣೆಯಾಗುತ್ತದೆ, ಮನಸ್ಸಿಗೆ ಶಾಂತಿ ದೊರೆಯುತ್ತದೆ..

*  ರುದ್ರಾಕ್ಷಿ ಹೂವು : ಎಂತಹ ಕಷ್ಟಬಂದರೂ ಜಯಶಾಲಿಯಾಗುತ್ತೀರಿ..

*  “ಮಲ್ಲಿಗೆ ಪುಷ್ಪ” ಸಮಸ್ತ ರೋಗ ನಿವಾರಣೆ ಹಾಗೂ ಆರೋಗ್ಯ ಪ್ರಾಪ್ತಿ..

*  ತುಂಬೆಹೂವು : ಈಶ್ವರನಿಗೆ ಪೂಜೆ ಮಾಡಿದರೆ ದೇವರಲ್ಲಿ ಭಕ್ತಿಯು ಜಾಸ್ತಿಯಾಗುತ್ತದೆ ..

*. ನಂದಿಬಟ್ಟಲು ; ಶಿವನಿಗೆ ಪೂಜೆ ಮಾಡಿದರೆ ಜೀವನದಲ್ಲಿ ಸುಖ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ..

. ಕಣಗಲೆ ಹೂವು : ಕಣಗಲೆ ಹೂವಿನಿಂದ ಪೂಜೆ ಮಾಡಿದರೆ ನಮ್ಮಲ್ಲಿ ಕಾಣಿಸುವ ಭಯ ಭೀತಿಗಳು ನಿವಾರಣೆಯಾಗುತ್ತದೆ .. *ಗಣಪತಿ ದೇವರಿಗೆ ಪೂಜೆ ಮಾಡಿದರೆ ಮಾಂತ್ರಿಕ ಭಾದೆ ನಿವಾರಣೆ ಮತ್ತು ವಿದ್ಯಾಪ್ರಾಪ್ತಿ”
 “ದುರ್ಗಾದೇವಿ”ಗೆ ಪೂಜೆ ಮಾಡಿದರೆ ಸಕಲ ಶತೃ ನಿರ್ಮೂಲನೆ ಮತ್ತು ಇಷ್ಟಾರ್ಥ ಸಿದ್ಧಿ..

*. “ಬಿಳಿ ಎಕ್ಕದ ಹೂವು”: ಗಣೇಶನಿಗೆ, ಶಂಕರನಿಗೆ, ಸೂರ್ಯ ದೇವರಿಗೆ ಪೂಜೆ ಮಾಡಿದರೆ ಸಮಸ್ತ ರೋಗ ನಿವಾರಣೆ ಹಾಗೂ ಆರೋಗ್ಯ ಭಾಗ್ಯ ಸಿಗುತ್ತದೆ..
ಇಷ್ಟಾರ್ಥ ಸಿದ್ಧಿಯಾಗುತ್ತದೆ..
*  “ಪುನ್ನಾಗ ಪುಷ್ಪ”: ನಾಗದೇವತೆಗಳಿಗೆ ಪುನ್ನಾಗ ಪುಷ್ಪದಿಂದ ಪೂಜೆ ಮಾಡಿದರೆ “ಸರ್ಪದೋಷ ” ನಿವಾರಣೆಯಾಗುತ್ತದೆ ..
*  ಪದ್ಮ ಅಥವಾ ಕಮಲದ ಹೂವು : ಈ ಹೂವಿನಿಂದ ಪೂಜಿಸಿದರೆ, ದಾರಿದ್ರ್ಯ ನಿವಾರಣೆ ಹಾಗೂ ಶ್ರೀಮಂತಿಕೆ ದೊರೆಯುತ್ತದೆ..
ಪುಷ್ಪ ಪೂಜೆಗಳನ್ನು ಬೆಳಗಿನ ಜಾವ ೫.೩೦ ರಿಂದ ೬.೩೦ ರ ಒಳಗೆ ಮಾಡಿದರೆ ಸರ್ವ ಕಾರ್ಯ ಸಿದ್ಧಿಯಾಗುತ್ತದೆ.., ಸಂಕಲ್ಪಗಳು ಈಡೇರುತ್ತವೆ..

ಸಾಯಂಕಾಲ. ೫.೪೫ ರಿಂದ ೬.೧೫ ರ ಒಳಗೆ ಪೂಜಿಸಿದರೆ, ಸಕಲ ಕಷ್ಟ ನಿವಾರಣೆ, ಸಮಸ್ತ ದುಃಖ ಮತ್ತು ರೋಗ ನಿವಾರಣೆಯಾಗುತ್ತದೆ ..

ಸರಳ ಪರಿಹಾರ ಶ್ರೀ ಸುಧಾಕರ 
*******


No comments:

Post a Comment