1. ಈ ವ್ರತವನ್ನು ಯಾವದಿನ ಆಚರಣೆ ಮಾಡಲಾಗುತ್ತದೆ? When we have to observe the Rushi Panchami?
ಉತ್ತರ -- ಭಾದ್ರಪದ ಶುಕ್ಲ ಪಂಚಮಿ It is to be observed on Bhadrapada Masa Shukla paksha panchami.
2.Who can perform Rushi Panchami?
ಯಾರು ಈ ವ್ರತವನ್ನು ಮಾಡಬೇಕು?
ಉತ್ತರ : ಹೆಂಗಸರು
೫೦ ಕ್ಕಿಂತ ಹೆಚ್ಚಿನ ವಯಸ್ಸಾದವರು ಮತ್ತು ತಮ್ಮ ಋತು ಚಕ್ರ ನಿಂತಿರುವವರು. ಮತ್ತು ಆಕೆ ಮುತ್ತೈದೆ ಅಥವಾ ಮಡಿಹೆಂಗಸರಾಗಿರಬೇಕು. ಅಥವಾ
ಗಂಡಸರು ತಮ್ಮ ತಾಯಿಯ / ಹೆಂಡತಿಯ ಪರವಾಗಿ (ಅವರಿಗೆ ಆರೋಗ್ಯ ಇಲ್ಲದಿದ್ದರೆ)
Ladies . a) Any lady who has passed 50 years and above (Monthly menses period process having been completed) have to perform Perform Rushi Panchami.
b) That lady may be either Muthaide or widow (Madi hengasu – i.e., following sampradaya of getting shaving her head and following daily madi achaara, etc).
Gents – Gents can do for on and behalf of their mother, grand mother, if they are not there or if they are not capable of doing it.
ಋಷಿ ಪಂಚಮಿಯ ವಿಧಾನವೇನು?
ಉತ್ತರ -. ಭಾದ್ರಪದ ಶುಕ್ಲ ಪಂಚಮಿ ದಿನ ಅವರು ಪವಿತ್ರ ನದಿಗಳಲ್ಲಿ/ಸರೋವರದಲ್ಲಿ/ಬಾವಿಯಲ್ಲಿ ಸ್ನಾನ ಮಾಡಿ ಶುದ್ಧರಾಗಬೇಕು. ಮತ್ತು ಸಪ್ತರ್ಷಿಗಳನ್ನು ವಿಶೇಷ ಪೂಜೆ ಮಾಡಬೇಕು.
3. What is the procedure of performing Rushi Panchami?
On the Rushi Panchami Day, devotees perform bath in holy rivers or wells or sarovaras. On this day, we have to worship Saptarishis alongwith Arundathi, the wife of Vasistaru.
ಋಷಿ ಪಂಚಮಿ ವ್ರತವನ್ನು ಎಷ್ಟು ವರ್ಷ ಮಾಡಬೇಕು?
ಉತ್ತರ - ೭ (ಏಳು) ವರ್ಷ ಮಾಡಬೇಕು. ಆರಂಭದಲ್ಲೋ, ಮಧ್ಯದಲ್ಲೋ, ಅಂತ್ಯದಲ್ಲೋ ಉದ್ಯಾಪನೆ ಮಾಡಬೇಕು.
4. How many years this Vratha to be observed? –
Seven Years. Udyaapane to be done in the initial period of Vratha or in the middle or in the last period. They have to fast the whole day. They have to do the pooja of saptarshis and Arundathi.
ಋಷಿ ಪಂಚಮಿ ವ್ರತವನ್ನು ಮಾಡುವುದರಿಂದ ಲಾಭವೇನು?
ಉತ್ತರ - ಹತ್ತು ಸಾವಿರ ಯಙ್ಯಫಲ ಮತ್ತು ಸಕಲ ತೀರ್ಥಯಾತ್ರೆಯ ಫಲ ದೊರೆಯುತ್ತದೆ. ಆದರೆ ವ್ರತ ಮಾಡುವುದನ್ನು ನೋಡಿದರೂ ನಮ್ಮ ಪಾಪಗಳೆಲ್ಲ ನಾಶವಾಗುತ್ತದೆ.
5. What will we get by doing this vratha?
By doing this vratha, one will get 10000 Yagna phala. Sakala Theertha yathra phala also will be available by doing this vratha. Even if we have the darshana of Saptarshi on this, we will get all our sins destroyed.
ಆದರೆ ಸುಪ್ತ ಋಷಿಗಳು ಮತ್ತವರ ಪತ್ನಿಯಾರು ಯಾರು?
ಉತ್ತರ
ಅ) ಕಶ್ಯಪರು ಮತ್ತವರ ಪತ್ನಿಯರಾದ ರಿತಿ, ಅದಿತಿ,
ಆ) ಅತ್ರಿ ಅನಸೂಯಾ
ಇ) ಭಾರದ್ವಾಜ ಸುಶೀಲಾ
ಈ) ವಿಶ್ವಾಮಿತ್ರ ಕುಮುದ್ವತಿ
ಉ) ಗೌತಮ ಅಹಲ್ಯೆಯರು
ಊ) ಜಮದಗ್ನಿ ರೇಣುಕಾ
ಋ) ವಸಿಷ್ಠ ಅರುಂಧತಿ
6. Who are those sapta Rushees, their father and their wives?
Rushi Father Wife Children
Kashyapa Mareechi Diti, Aditi, etc Hiranyakashipu, Vamana, Indra
Atri Brahma Anusuya Datta, Soma, Durvasa
Bharadwaja Brahaspatyacharya Susheela Dronacharya
Vishwamitra Gadhiraja Kumudhwathi
Gautama Rahogana Maharaja Ahalya Vamadeva, Nodha
Jamadagni Brugu Renuka Parashurama
Vasista Brahma Arundati Shakthi
7. Is there any story which tells the importnce of Rushi Panchami?
Once Dharmaraja asked Krishna to tell him a Vratha which can purify one from all the sins. Then Krishna told Dharmaraja, the vratha which if performed by ladies can free them from all their sins, which is termed as “Rushi Panchami”.
Krishna tells – Ladies during their menses period are not supposed to do any work pertaining to the house/family. They have to take rest for the all the four days invariably. If a lady does all these works, she is sure of going to Naraka. That is why the ladies during their menses period should be kept far from us irrespective of whether he is Brahmana or Kshatriya or Vaishya or Shoodra. All the four varnaas must follow the rules. That is why if one does Rushi Panchami pooja, their sins during Rajaswala Dosha will be purified.
What is this menses period– Earlier once Indra had a terrible fight with Vrutrasura and he finally killed that Asura. Indra got Brahmahatya dosha, as Vrutrasura, though he was a daithya, he was a son of a brahmana. Killing a brahmana will fetch us Brahmahatya dosha. Indra got the dosha. Then Indra went to Brahma seeking some remedy to remove the Brahmahatya dosha.
Then Brahma removed his Brahmahatya dosha as follows : He divided the Brahmahatya dosha into four parts.
1. First part in Fire flame.
2. Second part in river water
3. Third in Mountain and trees
4. In the Rajas of ladies.
That is why Rajaswala ladies are supposed to be far from all the chaturvarna people. On the first day of her menses period she will be impure like a Chandala stree. On the second day, she is impure like a Brahma Ghatini and on the third day impure like a dobhi. Fourth day, she will be pure – but can’t do all the puja, pitru karya, cooking, etc. However, she can attend to her daily duties other than god’s seva, cooking. Fifth day only, she will be pure.
Krishna tells one more story. In Vidarba desha, there lived a king called Shenajith. There was a Brahmin called Sumitra in his kingdom, whose wife was Jayashree, who was also looking farming work. Once she had menses period. Still, she did all her regular work, and she touched everything and every one without informing others that she was on the menses period. After some time, she died. And her husband also died after some time. After some time, in the same house these Sumitra and Jayashree were born as Ox and Dog respectively and they had the remembering capacity of their previous janma.
Second story – Sumitra’s son was Sumathi and his wife Chandravathi. She was a sahadharmini wife for her husband.
One day, Sumathi’s father Shradha day came and he told his wife Chandravathi to cook for the brahmana suvasini bhojana, which she did. She had kept the payasam vessel on the stove itself. A snake and kept its poison in the payasam. The dog which saw that the payasam has been poisoned, thought that if the Brahmans eat the payasam, they may die and their son would get Brahmahatya dosha. So, the dog came and touched the payasam vessel. Seeing that the dog had touched the vessel, Chandravathi got angry and beat the dog, threw the payasam in the vessel and prepared separate dishes for the shraddha. Sumathi did the shraddha with enthusiasm and the brahmanas had good bhojana. Chandramathi dig a pit and kept all the left overs after the bhojana in the pit without even giving to the dog or the ox.
But the dog was not given anything on that day. Similarly the ox was also not given anything on that day even after ploughing the land. The Ox was telling the dog, that their son had done the shraddha but not given anything to them. Their conversation was heard by Sumathi, their son, who went to some sages nearby and asked them to tell what is behind the conversation between the dog and the ox.
Then the sage told Sumathi that his mother had ignored her menses period and done everything of her daily work, so she has been born again as dog. His father even after knowing that his wife was in menses period had the samparka dosha, so he has been born as an ox.
Then Sumathi asked the sages as to what is the remedy to free his parents from the sins. The sages suggested the vratha titled “Rushi Panchami”, doing the pooja of saptarshees, if done will purify them.
Rushi Namaskara Stotra
***
Rushi Name - Father - Wife- Children
1. Kashyapa - Mareechi = Diti, Aditi, etc - Hiranyakashipu, Vamana, Indra
2. Atri - Brahma - Anusuya - Datta, Soma, Durvasa
3. Bharadwaja - Brahaspatyacharya - Susheela - Dronacharya
4. Vishwamitra - Gadhiraja - Kumudhwathi
5. Gautama - Rahogana Maharaja -Ahalya - Vamadeva, Nodha
6. Jamadagni - Brugu - Renuka - Parashurama
7. Vasista - Brahma - Arundati - Shakthi
***
Kashyapa ಕಶ್ಯಪ
ಕಶ್ಯಪ: ಸರ್ವಲೋಕಾಡ್ಯ: ಸರ್ವಭೂತಹಿತೇ ರತ: |
ನರಾಣಾಂ ಪಾಪನಾಶಾಯ ಋಷಿರೂಪೇಣ ತಿಷ್ಯತಿ |
कश्यप: सर्वलोकाड्य: सर्वभूतहिते रत: ।
नराणां पापनाशाय ऋषिरूपेण तिष्यति ।
kashyapa: sarvalOkaaDya: sarvabhUtahitE rata: |
naraaNaaM paapanaashaaya RuShirUpENa tiShyati |
Kashyapa is a Brahmarshi and a son of Kala, the daughter of Kardama Prajapathi. and Mareechi, the son of Chaturmukha Brahma. Kashyapa married the thirteen daughters of Daksha Prajapathi. From Kashyapa all the prajas, creatures were born. The thirteen wives of Kashyapa are Aditi, Diti, Danu, Kaala, Danau, Simhika, Krodha Pradha, Viswa, Vinata, Kapila, Muni and Kadru.
From Aditi Kashyapa had Dwadasha Adityaas, and saakshaat Srihari was born as the son of Aditi – Kashyapa in the roopa of Vamana to control the daithya Balichakravarthi.
Dwadashadityas, the 12 sons of Kashyapa from Aditi are 1.Dhata, 2. Mitra,
3. Aryaman, 4. Shakra, 5. Varuna, 6. Amsa, 7.Bhaga, 8.Vivaswan, 9. Pusha, 10.Saavitri, 11.Tvashtri, 12.Vishnu.
Kashyapa – Diti Santaana – Children of Diti are all daithyaas – like Hiranyakashipu, Hiranyaksha. His daughter Sinhika was married to Viprachitti.
Kashyapa – Danu – They had forty sons – All are called as Daanavaas
Kashyapa – Kaala – They had many sons like Vinasana, Krodha, Krodhashanthri, Krodasatru.
Kashyapa– Vinuta –The sons of Vinuta are Tarkshya, Aristanemi, Garuda, Aruna, Aruni & Varuni
Kashyapa – Kadru – From Kadru Kashyapa Rushi had Shesha, Vasuki, Tashaka, etc., snakes.
Kashyapa got from Muni – Apsaraas
There is a tradition that whenever if a person does not know to which Gotra he belongs, it is said that he would be treated as from Kashyapa Gotra.
********
atri ಅತ್ರಿ
ಅತ್ರಯೇ ಚ ನಮಸ್ತುಭ್ಯಂ ಸರ್ವಭೂತಹಿತೇಷಿಣೇ |
ತಪೋರೂಪಾಯ ಸತ್ಯಾಯ ಬ್ರಹ್ಮಣೇಮಿತತೇಜಸೇ |
अत्रये च नमस्तुभ्यं सर्वभूतहितेषिणे ।
तपोरूपाय सत्याय ब्रह्मणेमिततेजसे ।
atrayE cha namastubhyaM sarvabhUtahitEShiNE |
tapOrUpaaya satyaaya brahmaNEmitatEjasE |
ಅಗ್ನಿಹೋತ್ರರತಂ ಶಾಂತಂ ಸದಾ ವ್ರತಪರಾಯಣಂ |
ಸತ್ಕರ್ಮನಿರತಂ ದಾಂತಂ ಚಿಂತಯೇದತ್ರಿಮವ್ಯಯಂ |
Atri’s father – Brahma
Atri’s wife – Anusuya (recognised as sati Anusuya (daughter of Kardama prajapathi)
Atri’s sons – Datta, Durvasa and Chandra
Atri is included in the saptarshi Mandala
Atri Rushi is also a Brahmarshi married Anusuya, the daughter of Kardama Rishi and had three sons viz., Datta (saakshaat Srihari), Durvasa (Rudramsha) and Chandra (with the amsha of Brahma). All the three sons were born when prayed by Anusuya worshipped the Brahma-Vishnu-Maheshwara to be born as her children.
Patrivratya of Sati Anusuya, the wife of Atri – Once the Brahma – Vishnu and Maheshwara, the trio decided to test the pativratya of Anusuya, when Atri was away.. They know her pativratya prabhava. But in order to make the world know of her importance only, then did like that, not with any other ajnaana. The trio came in the disguise of Brahmins and asked for the Bhiksha from Anusuya with the condition that she shall serve the bhiksha nude. Anusuya agreed. Now, Anusuya was confused as to what to do.. She prayed her’s idol, which she was worshipping when he was away and with her paativratya prabhaava, she converted the Brahmins trio (in disguise) into Children and offered them food without her dress (in nude style). After some time, the wives of the trio, Lakshmi, Saraswathi and Parvathi came in search of their husbands to the house of Saraswathi. They told that the Brahmins who had come were none other than Brahma, Vishnu and Maheshwara. Then she pleaded with her paativratya prabhaava once again and the trio got the original roopa.
Once sage Atri was doing penance severely. The yogaagni, which came out of the penance was burning the three lokaas. In order to cool the yogaagni, Hari – Hara and Brahma came on Garuda, Rushaba and Hamsava vaahana respectively. Here Atri was worshipping sarvaantaryaami Srihari only, but came the trio. Because, Atri was worshipping Brahma Rudraantaryaami Vishnu. He was worshipping Vaikunta vaasi Vishnu separately. He was pleading for sons like Brahma Rudra Vishnu. When the trio came, Atri asked. I had asked for Jagadeeshwara only, but how come the trio have come. Vishnu replied, – ” you have done the dhyana of Srihari in Trimurthy. That is why we have come. But like Vishnu roopa, the roopaas of Brahma and Shiva will not be seen separately. While sage Atri got Srihari in the Datta roopa. Shiva was born as Durvaasa. As Brahma has no avatara, Chandra who has the special avesha of Brahma was born. As such, Brahma – Shiva – and Hari were born as the children of Atri.
*******
Bharadhvaaja ಭರಧ್ವಾಜ
ಭರಧ್ವಾಜ ನಮಸ್ತುಭ್ಯಂ ಸದಾ ಧ್ಯಾನಪರಾಯಣ |
ಮಹಾಜಟಿಲಧರ್ಮಾತ್ಮನ್ ಪಾಪಂ ಸಂಹರ ಮೇ ಸದಾ |
भरध्वाज नमस्तुभ्यं सदा ध्यानपरायण ।
महाजटिलधर्मात्मन् पापं संहर मे सदा ।
bharadhvaaja namastubhyaM sadaa dhyaanaparaayaNa |
mahaajaTiladharmaatman paapaM saMhara mE sadaa |
Bharadhwaja’s father – Bruhaspatyacharya
Bharadhwaja’s mother – Mamatha
Bharadhwaja’s wife – Suseela
Bharadhwaj’a son – Gargacharya
Bharadhwaja was brought up by – Bharatha Chakravarthi, the son of Dushyanta – Shakuntala.
In the vamsha of Bharadhwaja, there are many veda drashtaara Rushees.
Ramachandra had stayed in Bharadhwaja;s ashrama during his vanavaasa
In Pancharatra, there is one grantha named Bharadhwaja samhita
There is Bharadhwaja smruti referred in Padmapurana
ಜಟಿಲಂ ತಪಸಾ ಸಿದ್ಧಂ ಯಜ್ಞಸೂತ್ರಾಕ್ಷಧಾರಿಣಂ |
ಕಮಂಡಲುಧರಂ ನಿತ್ಯಂ ಭರದ್ವಾಜಂ ನತೋಽಸ್ಮ್ಯಹಂ |
Bharadhwaja Rushi was born as the son of Brihaspatyacharya, the guru of Devataas. Later Brihaspatyacharya himself was born as the son of Bharadhwaja with the name Dronacharya, the guru for Pandavas-Kauravas.
Bharadhwaja Rushi was born to the relationship of Bruhaspatyacharyaru and Mamatha. After his birth, the mother Mamatha refused to take care of the child. Even the father Bruhaspatyacharya refused to take care of the child. So, the Marud Gana came forward to look after the child and was handed over to Bharata Chakravarthi. Bharata Chakravarthi had three wives, all had one child each, but none was so smart as Dushyanta. To ensure that Bharatha Chakravarthi is not angry at them, they killed the children. As such, Bharatha Chakravarthi was issuless and he was worried that his successor will not be there. Then the gods gave the child Bharadhwaja to the king, who brought him up like his son only and he was declared as successor. But Bharadhwaja was not interested in the political affairs, he made the king Bharatha do several yajna and yagaas and he got one more son by name Brumanyu, for whom the kingdom was given and Bharadhwaj left for penance.
********
vishvaamitra ವಿಶ್ವಾಮಿತ್ರ –
ವಿಶ್ವಾಮಿತ್ರ ನಮಸ್ತುಭ್ಯಂ ಜ್ವಲನ್ಮುಖ ಮಹಾಬಲ |
ಪ್ರತ್ಯಕ್ಷೀಕೃತಗಾಯತ್ರ ತಪೋರೂಪೇಣ ಸಂಸ್ಥಿತ: |
विश्वामित्र नमस्तुभ्यं ज्वलन्मुख महाबल ।
प्रत्यक्षीकृतगायत्र तपोरूपेण संस्थित: ।
vishvaamitra namastubhyaM jvalanmuKa mahaabala |
pratyakShIkRutagaayatra tapOrUpENa saMsthita: |
Sage Vishwamitra had the distinction of becoming the guru for Sri Ramachandra in Ayodhya. Vishwamitra was born as a Kshatriya to Gadhiraja and obtained the status of a Brahmana . He is termed as “vishwa mitra” – the friend of the world. Took Ramachandra and Lakshmana to Siddashrama and did the samarpana of all his vidyas to him and requested Ramachandra to kill Tataki, Maricha, Subahu. He is known for his very hard, steady and tremendous tapas.
*********
Gautama ಗೌತಮ –
ಗೌತಮ: ಸರ್ವಲೋಕಾನಾಂ ಋಷೀಣಾಂ ಚ ಸದಾ ಪ್ರಿಯ: |
ಶ್ರೌತಾನಾಂ ಕರ್ಮಣಾಂ ಚೈವ ಸಂಪ್ರದಾಯಪ್ರವರ್ತಕ: |
गौतम: सर्वलोकानां ऋषीणां च सदा प्रिय: ।
श्रौतानां कर्मणां चैव संप्रदायप्रवर्तक: ।
gautama: sarvalOkaanaaM RuShINaaM cha sadaa priya: |
shroutaanaaM karmaNaaM chaiva saMpradaayapravartaka: |
Gauthama is the author of Tarka – Logic and wrote sutras called “Gautama Sutras” pertaining to Nyayashastra. Sri Ramachandra by virtue of just touching his foot on the rock turned Ahalya, the wife of Gautama, who had become a stone as a human again. Gauthama had done excess penance, beyond his capacity, Srihari made him to curse at Indra and loose his tapa phala and he cursed Indra and Ahalya.
**
Jamadagni ಜಮದಗ್ನಿ
ಅಕ್ಷಸೂತ್ರಧರಂ ಶಾಂತಂ ಜಮದಗ್ನಿಮೃಷೀಶ್ವರಂ |
ದರ್ಭಪಾಣಿಂ ಜಟಾಯುಕ್ತಂ ಮಹಾತೇಜಸ್ವಿನಂ ಭಜೇ |
ಜಮದಗ್ನಿರ್ಮಹಾತೇಜಾ: ತಪಸಾ ಕಲ್ಪಿತಂ ಧನಂ |
ಲೋಕೇಷು ಧರ್ಮಸಿದ್ದ್ಯರ್ಥಂ ಸರ್ವಪಾಪಂ ನಿವರ್ತಯ |
जमदग्निर्महातेजा: तपसा कल्पितं धनं ।
लोकेषु धर्मसिद्द्यर्थं सर्वपापं निवर्तय ।
jamadagnirmahaatEjaa: tapasaa kalpitaM dhanaM |
lOkEShu dharmasiddyarthaM sarvapaapaM nivartaya |
Jamadagni’s father – Sage Rucheeka
Jamadagni’s mother – Satyavathi
Jamadagni’s wife – Renuka
Jamadagni’s sons – Parashurama, Rumanvanta, SuShENa, Vasu, Vishvavasu
Jamadagni’s asset – Kaamadhenu & his penance
Birth of Jamadagni –
Once there lived a king named Gadhi Maharaaja. He had a beautiful daughter by name Satyavathi. Rucheeka Muni asked the king to get her married to him. For this Gadhi Raaja asked for kanyaa shulka. (kanyaa dakshine) – which is as follows – One who wish to marry his daughter must bring in 1000 horse, which has one of its ears black colour and the remaining body of the horse shall be white. Rucheeka agreed and went to Varuna, who in turn agreed to give the required number of horses in the desired quality. Then Sage Rucheeka handed over all the horses to the Gadhi Maharaja and got his daughter married to him.
Gadhi Maharaja realised the “Tapas” of the sage Rucheeka and he sought the sage to get a male child through yajna, as he did not had male issues. Sage Rucheeka agreed and did different abhimantrana of “charu” and gave one for his wife and one for his mother in law. Both the wife and mother in law took the “charu” separately meant for them. Here Rucheeka’s mother in law thought – As the husband has more love for his wife, he would have kept more mantrashakthi for his wife and she asked his daughter to interchange the same, which she agreed. So, Gadhi Maharaja’s wife took the charu meant for Satyavathi and Satyavathi took the charu meant for her mother.
Sage Rucheeka came to know about this later. He had done the abhimantrana of charu with the intention of kshatriya quality son for his father in law and Brahma varchasvi son for him. He didnot liked the interchange which his wife and her mother had done. However, with his mantra power, he got Brahma varchasvi son in the form of Jamadagni. In this way, Sage Rucheeka got sage Jamadagni as his son, who in turn got Parashurama with Kshatriya Tejassu. Gadhi maharaja got son by name Kaushika, who is famous as sage Vishwamitra.
Jamadagni Rushi had the distinction of becoming the father of Srihari roopa of Parashurama.
Jamadagni & Parashurama – Once Renuka had gone for bringing water. At the same time, Chitraratha named Gandharva who had come with his wives for jalakreede in the river. Renuka on seeing them also dreamed of such a sukha, for a fraction of a second. Sage Jamadagni on seeing her realised that she had maanasika vyabhichaara. Jamadagni rejected Renuka and asked his sons to remove her head. The first four sons refused to do so. As they refused the pitru vaakya paripaalana, sage Jamadagni cursed them to die. So, all the first four sons of Jamadagni died. Now, came the fifth son, Parashurama, who had gone to forest for bringing samittu. Jamadagni ordered to do kill his mother. Parashurama, without hesitation removed his mother’s head. Jamadagni was pleased, asked his son to seek boon. Parashurama sought the boon that his mother and brothers to get re-life. He also sought the boon that his mother shall not have the sin of vyabhichaara and his brothers shall not have the sin of having pitru vaakya refusal. Jamadagni offered the book and all their sins were removed and they got life again.
Jamadagni & Karthaveeryarjuna –
Once the king by name Karthaveeryarjuna, who had the blessings of Dattatreya, went for hunting to forests. There he was tired and to take rest, went to the ashrama of Jamadagni, who called his Kamadhenu cow and gave him a very good treatment with food and other athithya. The king asked the sage as to how he could give such a great treatment to them all. Sage told the importance of the kaamadhenu with him, which has the powers to offer all that is required. Karthaveeryarjuna wished to have the cow for him. Then he took the Kamadhenu and calf with him to his palace. Sage Jamadagni could not do any thing and he was still in the peace of mind. Parashurama, who came later, went to the King and killed them all and brought back the Kamadhenu and the calf. Karthaveeryarjuna’s sons then came to Sage Jamadagni’s house and killed the sage Jamadagni, who was on his penance. This time also Parashurama was not there in the house. Later Parashurama on his return, took the oath that the entire Kshatriya parampare would be killed. He did the same by killing all the “dusta kshtriyas” and constructed the “samantapanchaka” named pond for Rakta tarpane for the pitrus in Kurukshetra.
In this way, sage Jamadagni was included in the saptarshi group.
*********
******
ಶಂಖಾಂಭೋಜಕರದ್ವಂದ್ವ |
shankhAmbhOjakaradwandwa /
पदपरिचयशास्त्रम्: -
शङ्खाम्भोजकरद्वन्द्व - अकारान्तपुल्लिङ्गस्य शङ्खाम्भोजकरद्वन्द्व शब्दस्य सम्बोधनाविभक्तेः एकवचनान्तं पदमिदम् ।
अम्भस्सु जायते इति अम्भोजः । शङ्खः च अम्भोजः च शङ्खाम्भोजौ । द्वयोः करयोः समाहारः करद्वन्द्वम् । शङ्खाम्भोजौ करद्वन्द्वे यस्य सः शङ्खाम्भोजकरद्वन्द्वः । ततसम्बुद्धिः ।
हुङ्कारार्दितदानव - अकारान्तपुल्लिङ्गस्य हुङ्कारार्दितदानव शब्दस्य सम्बोधनाविभक्तेः एकवचनान्तं पदमिदम् ।
हुं इति ध्वनिकरणं हुङ्कारम् । हुङ्कारेण अर्दिताः हताः दानवाः असुराः यस्य सः हुङ्कारार्दितदानवः । तत्सम्बुद्धिः ।
शङ्कातङ्कहर - अकारान्तपुल्लिङ्गस्य शङ्कातङ्कहर शब्दस्य सम्बोधनाविभक्तेः एकवचनान्तं पदमिदम् ।
शङ्का च आतङ्कः च शङ्कातङ्कौ । शङ्कातङ्कौ हरति इति शङ्कातङ्कहरः । तत्सम्बुद्धिः ।
अहम् - त्रिषुलिङ्गेषु समस्य दकारान्तस्य अस्मद् शब्दस्य प्रथमाविभक्तेः एकवचनान्तं सर्वनामकसंज्ञकं पदमिदम् ।
ते - त्रिषुलिङ्गेषु समस्य दकारान्तस्य युष्मद् शब्दस्य षष्ठीविभक्तेः एकवचनान्तं सर्वनामकसंज्ञकं पदमिदम् ।
किङ्करः - अकारान्तपुल्लिङ्गस्य किङ्कर शब्दस्य प्रथमाविभक्तेः एकवचनान्तं पदमिदम् ।
अस्मि - अस भुवि इति धातोः अकर्मकरूपस्य कर्तरीप्रयोगस्य परस्मैपदिनः वर्तमानकालस्य लट् लकारस्य उत्तमपुरुषस्य एकवचनान्तं क्रियापदमिदम् ।
त्रिविक्रम - अकारान्तपुल्लिङ्गस्य त्रिविक्रम शब्दस्य सम्बोधनाविभक्तेः एकवचनान्तं पदमिदम् ।
अन्वयः (संस्कृतवाक्यरचनापद्धतिः)
हे शङ्खाम्भोजकरद्वन्द्व, हुङ्कारार्दितदानव, शङ्कातङ्कहर, त्रिविक्रम, अहं ते किङ्करः अस्मि ।
ಅನ್ವಯ: (ಸಂಸ್ಕೃತವಾಕ್ಯರಚನಾಪದ್ಧತಿ)
ಹೇ ಶಂಖಾಂಭೋಜಕರದ್ವಂದ್ವ ಹುಂಕಾರಾರ್ದಿತದಾನವ, ಶಂಕಾತಂಕಹರ, ತ್ರಿವಿಕ್ರಮ, ಅಹಂ ತೇ ಕಿಂಕರಃ ಅಸ್ಮಿ |
ಪ್ರತಿಪದಾರ್ಥ:
ವಿವರಣೆ:
ಕ್ರಿಶ ೧೬ ನೇ ಶತಮಾನದಲ್ಲಿ ಭೂಮಂಡಲಕ್ಕೆ ಮಂಡನಪ್ರಾಯರಾದ ಭಾವಿಸಮೀರರಾದ ಶ್ರೀಮದ್ವಾದಿರಾಜತೀರ್ಥಯತಿಗಳ ಕರಕಮಲಳಿಂದ ವಿರಚಿತವಾದ "ತ್ರಿವಿಕ್ರಮಸ್ತೋತ್ರಮ್" ಎಂಬ ಸ್ತೋತ್ರಕಾವ್ಯದ ಎರಡನೇ ಶ್ಲೋಕವಿದು. ಯತಿವರ್ಯರು ಅತಿ ಸುಲಭವಾದ "ಅನುಷ್ಟುಪ್" ಛಂದಸ್ಸನ್ನು ಉಪಯೋಗಿಸಿ ಸುಂದರವೂ, ಉಚ್ಚಾರಣೆಗೆ ಸುಲಭವೂ, ಸರಳವೂ ಆದ ಹಾಗೆಯೇ ಪ್ರಾಸಬದ್ಧವಾದ ಶ್ಲೋಕಗಳನ್ನು ರಚಿಸುವುದರಲ್ಲಿ ಅಗ್ರಗಣ್ಯರು. ಇಂತಹ ಪ್ರಾಸಬದ್ಧವಾದ ಸುಂದರ ಸಾಹಿತ್ಯವನ್ನು ಹೆಚ್ಚು ರಚಿಸುವುದರಲ್ಲಿ ಪ್ರಾಯಶಃ ಈ ಯತಿವರ್ಯರನ್ನು ಬಿಟ್ಚರೆ ಬೇರೇ ಯಾರೂ ಸಂಸ್ಕೃತವಾಙ್ಮಯದಲ್ಲಿ ರಚಿಸಿರಲಿಕ್ಕಿಲ್ಲ.
ಶ್ರೀತ್ರಿವಿಕ್ರಮದೇವರು ತಮ್ಮ ಕೈಯಲ್ಲಿ ಶಂಖ ಹಾಗೂ ಪದ್ಮಗಳನ್ನು ಧರಿಸಿದ್ದಾರೆ. ಕೇವಲ ತಮ್ಮ ಹುಂಕಾರದಿಂದ ಅಸುರರನ್ನು ನಾಶಮಾಡುವ ಈ ದೇವರು ಭಕ್ತರ ಸಂಶಯ ಹಾಗೂ ಭಯಗಳನ್ನು ನಿವಾರಿಸುತ್ತಾರೆ. ಅಂತಹ ಹೇ ತ್ರಿವಿಕ್ರಮದೇವರೇ, ನಾನು ನಿಮ್ಮ ದಾಸ ಎಂದು ವಾದಿರಾಜತೀರ್ಥರು ಇಲ್ಲಿ ವಿವರಿಸಿದ್ದಾರೆ.
"ತ್ರೀಣಿ ಜಗಂತಿ ವಿಶೇಷೇಣ ಕ್ರಮತೇ ಇತಿ ತ್ರಿವಿಕ್ರಮಃ" ಎಂದು ತ್ರಿವಿಕ್ರಮ ಪದದ ವಿಗ್ರಹವಾಕ್ಯ. ಎಂದರೆ ಮೂರೂ ಲೋಕಗಳನ್ನು ವಿಶೇಷವಾಗಿ ಒಂದೇ ಪಾದದಿಂದ ಅಳೆದವರು ಎಂದು ಅರ್ಥ.
ಬಲಿಚಕ್ರವರ್ತಿಯು ಪ್ರಲ್ಹಾದನ ಮೊಮ್ಮಗ, ವಿರೋಚನನ ಮಗ. ಇವನಲ್ಲಿ ಕಲಿಯ ಅಥವಾ ಬಲಿ ಎಂಬ ಅಸುರನ ಪ್ರವೇಶವಾಗಿತ್ತು. ಇವನು ಜೀವನದಲ್ಲಿ ಸಾಧನೆ ಮಾಡಿಕೊಂಡು ಇಂದ್ರಪದವಿಗೆ ನಿಯುಕ್ತನಾಗಬೇಕಾಗಿತ್ತು. ಆದರೆ ಬಲಿ ಎಂಬ ಅಸುರನ ಪ್ರವೇಶವು ಈತನ ದೇಹದಲ್ಲಿ ಆಗಿದ್ದರಿಂದ ಇವನು ತನ್ನ ಇಂದ್ರಪದವಿಯು ಲಭಿಸುವ ಸಮಯಕ್ಕಿಂತ ಮುಂಚೆಯೇ ಪುಣ್ಯ ಹೆಚ್ಚು ಗಳಿಸುವುದಕ್ಕೋಸ್ಕರ ದಾನಧರ್ಮಾದಿಗಳನ್ನು ಮಾಡತೊಡಗಿದನು. ಈಗಿರುವ ಸ್ವರ್ಗಾಧಿಪತಿಯಾದ ಇಂದ್ರದೇವರಿಗೆ ಇದರಿಂದ ಭಯವಾಗಿ ಶ್ರೀಮನ್ಮಹಾವಿಷ್ಣುವಿನ ಮೊರೆ ಹೋದರು. ಆದ್ದರಿಂದ ಶ್ರೀಮನ್ಮಹಾವಿಷ್ಣುವು ವಾಮನದೇವರ ಅವತಾರವನ್ನು ತಾಳಿ ಬಲಿಚಕ್ರವರ್ತಿಯ ಬಳಿ ದಾನಕ್ಕೆ ಹೋದನು. ಚಕ್ರವರ್ತಿಯು ಶುಕ್ರಾಚಾರ್ಯರ ಬುದ್ಧಿಯ ಮಾತನ್ನು ತಿರಸ್ಕರಿಸಿ ವಾಮನನೆಂಬ ವಟುವಿನ ವೇಷಧಾರಿಯಾದ ವಿಷ್ಣುವಿಗೆ ದಾನ ಕೊಡಲು ಮುಂದಾದನು. ದಾನಕ್ಕೆ ಆ ವಟುವು ಕೇಳಿದ್ದು ಮೂರು ಅಡಿ ಜಾಗ ಮಾತ್ರ. ಆದ್ದರಿಂದ ಬಲಿಯ ಆವೇಶದಿಂದ ಅಹಂಕಾರಭರಿತನಾದ ಚಕ್ರವರ್ತಿಯು ದಾನಕೊಡಲು ಒಪ್ಪಿಯೇ ಬಿಟ್ಟ. ಆದರೆ ಆ ವಟುವಿನ ಮೊದಲ ಪಾದವು ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ ಮತ್ತು ಪಾತಾಳಲೋಕಗಳನ್ನು ಆವರಿಸಿತು. ಎರಡನೇ ಪಾದವನ್ನು ಇಟ್ಟಾಗ ಭಗವಂತನು ತ್ರಿವಿಕ್ರಮದೇವರಾಗಿ ಭೂಮಿ, ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನಲೋಕ, ತಪೋಲೋಕ ಹಾಗೂ ಸತ್ಯಲೋಕದ ವರೆಗೂ ಪಾದವನ್ನು ವಿಸ್ತರಿಸಿದ. ಅದನ್ನು ಕಂಡು ಆ ಚಕ್ರವರ್ತಿಯು ಪಾದವನ್ನು ಬೇಡಿದ ವಟುವು ಸಾಕ್ಷಾತ್ ವಿಷ್ಣುವೇ ಎಂದು ಮನವರಿಕೆ ಮಾಡಿಕೊಂಡು ತನ್ನ ಅಸುರಾವೇಶವನ್ನು ಬಿಟ್ಟು ಶರಣಾದ. ಆತನನ್ನು ಕೊಲ್ಲಲು ಮುಂದಾದ ಮಹಾವಿಷ್ಣುವನ್ನು ಪ್ರಲ್ಹಾದನು ಪರಿಪರಿಯಾಗಿ ಬೇಡಿದ್ದರಿಂದ ಚಕ್ರವರ್ತಿಗೆ ಚಿರಂಜೀವತ್ವವನ್ನು ದಯಪಾಲಿಸಿ ಮೂರನೇ ಪಾದವನ್ನು ಶಂಖಚಕ್ರಾದಿ ಚಿನ್ಹೆಗಳಿರುವ ಪಾದದಿಂದ ಆತನ ತಲೆಯ ಮೇಲೆ ಇಟ್ಟು ಆತನನ್ನು ಪಾತಾಳಕ್ಕೆ ತಳ್ಳಿ ಅವನನ್ನೇ ಅಲ್ಲಿ ಅಧಿಪತಿಯನ್ನಾಗಿ ಮಾಡಿ ಆತನ ರಕ್ಷಕನಾಗಿ ಭಗವಂತನು ಪಾತಾಳದಲ್ಲಿ ತ್ರಿವಿಕ್ರಮರೂಪದಲ್ಲಿದ್ದಾನೆ.
ಈ ಪೋಸ್ಟ್ ಜೊತೆ ಸೇರಿಸಿದ ಚಿತ್ರವು ಉತ್ತರಕರ್ನಾಟಕದ ಪ್ರಸಿದ್ಧ ಬಾದಾಮಿಯ ಗುಹಾಂತರ್ದೇವಾಲಯಗಳಲ್ಲೊಂದರಲ್ಲಿ ಕೆತ್ತಲ್ಪಟ್ಟಿದೆ. ಚಾಲುಕ್ಯರೆಂಬ ರಾಜಮನೆತನದವರು ಕ್ರಿ. ಶ. 590 ರಲ್ಲಿ ಈ ಬೃಹತ್ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಮಂಗಳೇಶನೆಂಬ ಇಮ್ಮಡಿ ಪುಲಿಕೇಶಿಯ ಚಿಕ್ಕಪ್ಪನೇ ಈ ಗುಹಾಂತರ್ದೇವಾಲಯಗಳನ್ನು ರಚಿಸಿದ್ದು ಎಂದು ಶಿಲಾಶಾಸನಗಳಿಂದ ತಿಳಿದುಬರುತ್ತದೆ.
ಓಂ ನಮೋ ಭಗವತೇ ಹಯಾನನಾಯ ||
ಶ್ರೀ ಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿ
ಶ್ರೀ ಚಂದ್ರದೇವನ ಸ್ತುತಿ
ಕ್ಷೀರಾಬ್ಧಿಜಾತ ಮಾರಾರಿಮಸ್ತಕಸದನ
ವಾರಿಜೋದ್ಭವನ ಆವೇಶ । ಆವೇಶಪಾತ್ರ ಪರಿ -
ಹಾರಗೈಸೆನ್ನ ಭವತಾಪ ॥ 2 ॥ ॥ 10 ॥
ಅರ್ಥ :- ಕ್ಷೀರಾಬ್ಧಿಜಾತ = ಕ್ಷೀರಸಮುದ್ರದಲ್ಲಿ (ದೇವದೈತ್ಯರು ಅಮೃತಕ್ಕಾಗಿ ಮಥನ ಮಾಡಿದ ಕಾಲದಲ್ಲಿ) ಉತ್ಪನ್ನವಾದ , ಮಾರಾರಿಮಸ್ತಕಸದನ = ಕಾಮವೈರಿಯಾದ ಶಿವನ ಶಿರಸ್ಸಿನಲ್ಲಿ ವಾಸಿಸುವ , ವಾರಿಜೋದ್ಭವನ = ಕಮಲಸಂಭವನಾದ ಚತುರ್ಮುಖ ಬ್ರಹ್ಮನ , ಆವೇಶಪಾತ್ರ = ಆವೇಶಕ್ಕೆ ಯೋಗ್ಯನೆನಿಸಿದ ಹೇ ಚಂದ್ರದೇವ! ಎನ್ನ = ನನ್ನ , ಭವತಾಪ = ಸಂಸಾರದುಃಖವನ್ನು , ಪರಿಹಾರಗೈಸು = ಪರಿಹಾರಗೊಳಿಸು.
ವಿಶೇಷಾಂಶ : (1) ತಾಪವನ್ನು ಪರಿಹರಿಸಿ ಆಹ್ಲಾದವನ್ನುಂಟು ಮಾಡುವುದು ಚಂದ್ರನ ಸ್ವಾಭಾವಿಕ ಗುಣ.
(2) ಅತ್ರಿ ಋಷಿಗಳ ಪತ್ನಿ ಅನಸೂಯಾದೇವಿಯಲ್ಲಿ ಬ್ರಹ್ಮ , ವಿಷ್ಣು , ರುದ್ರರು ಪುತ್ರರಾಗಿ ಅವತರಿಸಿದಾಗ , ವಿಷ್ಣುವು ' ದತ್ತ ' ನಾಗಿಯೂ , ರುದ್ರನು ' ದೂರ್ವಾಸ ' ನಾಗಿಯೂ ಅವತರಿಸಿದರು. ಭಗವದಾಜ್ಞೆಯಂತೆ ಬ್ರಹ್ಮನಿಗೆ ಅವತಾರವೇ ಇಲ್ಲದಿರಲು , ಚಂದ್ರನಲ್ಲಿ ಆವಿಷ್ಟನಾಗಿ ಅವತರಿಸಿದನು. ಬ್ರಹ್ಮನು ತನ್ನ ಆವೇಶಕ್ಕೆ ಯೋಗ್ಯನೆಂದು ಚಂದ್ರನನ್ನು ಆರಿಸಿಕೊಂಡನು . ' ದತ್ತಂ ದೂರ್ವಾಸಸಂ ಸೋಮಂ ಆತ್ಮೇಶಬ್ರಹ್ಮ ಸಂಭವಾನ್ ' ಎಂದು ಭಾಗವತದಲ್ಲಿ ಈ ಮಹಿಮೆಯು ಉಕ್ತವಾಗಿದೆ.
ವ್ಯಾಖ್ಯಾನ :
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
****
ಸಪ್ತ ಋಷಿಗಳು ಯಾರು ಗೊತ್ತಾ. *ವೈದಿಕ ಕ್ಷೇತ್ರದಲ್ಲಿ ಇವರ ಮಹತ್ವವೇನು ತಿಳಿಯಿರಿ
ವೈದಿಕ ಕ್ಷೇತ್ರದಲ್ಲಿನ ಏಳು ಪ್ರಮುಖ ಮಹರ್ಷಿಗಳನ್ನು ಅಥವಾ ಋಷಿಗಳನ್ನು ಸಪ್ತ ಋಷಿಗಳು ಎನ್ನಲಾಗುತ್ತದೆ. ಸಪ್ತ ಋಷಿಗಳು ಯಾರು ಗೊತ್ತಾ..? ಇಲ್ಲಿದ್ದಾರೆ ನೋಡಿ ಸಪ್ತ ಋಷಿಗಳೆನ್ನಲಾಗುವ ಪ್ರಮುಖ ಏಳು ಋಷಿಗಳು.
ಸಾಮಾನ್ಯವಾಗಿ ಹೆಚ್ಚಿನವರು ಸಪ್ತ ಋಷಿ ಎನ್ನುವ ಶಬ್ಧವನ್ನು ಕೇಳಿರುತ್ತಾರೆ. ಆದರೆ ಸಪ್ತ ಋಷಿಗಳು ಯಾರು..? ಅವರ ಕೆಲಸವೇನು..? ಎಂಬುದರ ಕುರಿತು ಹೆಚ್ಚಿನವರಿಗೆ ಅರಿವಿಲ್ಲ. ಸಪ್ತ ಋಷಿಗಳೆಂದರೆ ವೈದಿಕ ಕ್ಷೇತ್ರದ 7 ಶ್ರೇಷ್ಠ ಋಷಿಗಳು. ಅವರು ಯೋಗದ ಶಕ್ತಿಯಿಂದ ದೀರ್ಘಾಯುಷ್ಯವನ್ನು ಹೊಂದಿದವರು. ಈ 7 ಋಷಿಗಳನ್ನು ಅಮರರು ಎನ್ನಲಾಗುತ್ತದೆ. ಭೂಮಿಯ ಮೇಲಿನ ಸಮತೋಲನವನ್ನು ಕಾಪಾಡಿಕೊಳ್ಳಲು, ಮಾನವ ಜನಾಂಗಕ್ಕೆ ಮಾರ್ಗದರ್ಶನ ನೀಡಲು, ದೇವರುಗಳ ಪ್ರತಿನಿಧಿಯಾಗಿ ಸೇವೆಸಲ್ಲಿಸಲು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಅವರನ್ನು ಭೂಮಿಯಲ್ಲಿ ನೇಮಿಸುತ್ತಾರೆ. ಬೃಹದಾರಣ್ಯಕ ಉಪನಿಷತ್‌ನ ಪ್ರಕಾರ, ಪ್ರಸ್ತುತ ಮನ್ವಂತರದ ಸಪ್ತ ಋಷಿಗಳ ಮಾಹಿತಿ....
ಭಾರಧ್ವಜ ಮರ್ಹಷಿ
ಭಾರಧ್ವಜ ಋಷಿಗಳು ವೈದಿಕ ಕಾಲದ ಶ್ರೇಷ್ಠ ಋಷಿಗಳಲ್ಲೊಬ್ಬರಾಗಿದ್ದರು ಮತ್ತು ಇವರು ಅಂಗೀರಸ ಮುನಿಯವರ ವಂಶಸ್ಥರಾಗಿದ್ದರು. ಭಾರಧ್ವಜ ಋಷಿಗಳ ತಂದೆ ದೇವಗುರು ಬೃಹಸ್ಪತಿ. ಋಷಿ ಭಾರಧ್ವಜರನ್ನು ಆಯುರ್ವೇದದ ಲೇಖಕ ಎಂದು ಪರಿಗಣಿಸಲಾಗುತ್ತದೆ. ಭಾರಧ್ವಜ ಋಷಿಗಳು ದ್ರೋಣಾಚಾರ್ಯರ ತಂದೆ ಹಾಗೂ ಇವರ ಆಶ್ರಮವನ್ನು ಇಂದಿಗೂ ನಾವು ಅಲಹಾಬಾದ್‌ನಲ್ಲಿ ನೋಡಬಹುದು. ಭಾರಧ್ವಜ ಋಷಿಗಳು ದೇವಾಸ್ತ್ರಗಳ ಹಾಗೂ ಯುದ್ಧ ಕಲೆಯ ಪ್ರವೀಣರಾಗಿದ್ದರು. ಭಾರಧ್ವಜ ಋಷಿಗಳ ಪತ್ನಿ ಸುಶೀಲಾ ಹಾಗೂ ದೇವವರ್ಣಿನಿ ಎನ್ನುವ ಮಗಳು ಮತ್ತು ಗರ್ಗಾ ಎನ್ನುವ ಮಗನಿದ್ದನು. ದ್ರೋಣಾಚಾರ್ಯರು ಅಪ್ಸರ ಮತ್ತು ಭಾರಧ್ವಜ ಋಷಿಗಳ ಮಗನಾಗಿದ್ದಾನೆ. ಕೆಲವು ಪುರಾಣಗಳ ಪ್ರಕಾರ, ಭಾರಧ್ವಜ ಋಷಿಯು ಗಂಗಾ ನದಿಯ ದಡದಲ್ಲಿ ಭರತ ಎನ್ನುವ ರಾಜನಿಗೆ ಸಿಕ್ಕಿದನು. ಅಲ್ಲಿಂದ ಆತನನ್ನು ಭರತ ರಾಜನು ದತ್ತುಮಗನಾಗಿ ಸಾಕಿದನೆಂದು ಹೇಳಲಾಗುತ್ತದೆ಼.
ವಿಶ್ವಾಮಿತ್ರ ಮಹರ್ಷಿ
ಸಪ್ತ ಋಷಿಗಳಲ್ಲಿ ವಿಶ್ವಾಮಿತ್ರ ಮುನಿಯು ಅತ್ಯಂತ ಪ್ರಸಿದ್ಧ ಋಷಿಯಾಗಿದ್ದರು. ಗಾಯತ್ರಿ ಮಂತ್ರವನ್ನು ಕಂಡುಹಿಡಿದ ವೇದಗಳ ಕಾಲದ ಪ್ರಮುಖ ಋಷಿಮುನಿಗಳಲ್ಲಿ ವಿಶ್ವಾಮಿತ್ರರು ಒಬ್ಬರಾಗಿದ್ದಾರೆ. ಬ್ರಹ್ಮರ್ಷಿಯ ಮಟ್ಟಕ್ಕೆ ಏರಲು ಕೇವಲ ಆತನ ಅರ್ಹತೆ ಮಾತ್ರವಲ್ಲ, ಅದಕ್ಕೆ ಬ್ರಹ್ಮ ದೇವನ ಅನುಮತಿಯೂ ಬೇಕಾಗುತ್ತದೆ. ಆದರೆ ವಿಶ್ವಾಮಿತ್ರರ ವಿಷಯದಲ್ಲಿ ಇದು ಸುಳ್ಳಾಗಿದೆ. ವಿಶ್ವಾಮಿತ್ರರು ಕೇವಲ ತಮ್ಮ ಸ್ವ ಅರ್ಹತೆಯಿಂದ ಬ್ರಹ್ಮರ್ಷಿಗಳಾದವರು.
ವಸಿಷ್ಠರೊಂದಿಗಿನ ವಿಶ್ವಾಮಿತ್ರರ ಹೋರಾಟ ಗಣನೀಯವಾಗಿದೆ. ವಿಶ್ವಾಮಿತ್ರರು ಬ್ರಾಹ್ಮಣರಾಗಿರಲಿಲ್ಲ. ಬದಲಾಗಿ ಇವರು ಕ್ಷತ್ರಿಯ ಧರ್ಮದಲ್ಲಿ ಜನಿಸಿದವರಾಗಿದ್ದರು. ಒಮ್ಮೆ ವಿಶ್ವಾಮಿತ್ರರ ನಡುವೆ ಮತ್ತು ವಸಿಷ್ಠರ ನಡುವೆ ಹೋರಾಟ ನಡೆದಾಗ ವಿಶ್ವಾಮಿತ್ರರು ಇದರಲ್ಲಿ ಸೋಲನ್ನು ಅನುಭವಿಸುತ್ತಾರೆ಼. ವಸಿಷ್ಠರ ವಿರುದ್ಧದ ಸೋಲಿನಿಂದ ವಿಶ್ವಾಮಿತ್ರರು ತಪಸ್ಸಿನಿಂದ ಪಡೆದ ಶಕ್ತಿಯು ದೈಹಿಕ ಶಕ್ತಿಗಿಂತ ಮಿಗಿಲಾದದ್ದು ಎಂದು ಅರಿತುಕೊಂಡರು. ಆಗ ವಿಶ್ವಾಮಿತ್ರರು ತನ್ನ ರಾಜ್ಯವನ್ನು ದಾನ ಮಾಡಿ ವಸಿಷ್ಢರಿಗಿಂತಲೂ ದೊಡ್ಡ ಋಷಿಯಾಗಬೇಕೆಂದು ಹೊರಡುತ್ತಾರೆ. ಅಂದಿನಿಂದ ಅವರ ವಿಶ್ವಾಮಿತ್ರ ಎನ್ನುವ ಹೆಸರನ್ನು ಪಡೆದರು. ವಿಶ್ವಾಮಿತ್ರರ ಮೂಲ ಹೆಸರು ಕೌಶಿಕ. ಸಾವಿರಾರು ವರ್ಷಗಳ ಕಠಿಣ ತಪಸ್ಸಿನಿಂದ, ಜ್ಞಾನದಿಂದ, ಪ್ರಯೋಗಗಳಿಂದ ಕೊನೆಗೂ ವಿಶ್ವಾಮಿತ್ರರು ಬ್ರಹ್ಮ ಮತ್ತು ವಸಿಷ್ಠರಿಂದ ಬ್ರಹ್ಮರ್ಷಿ ಎನ್ನುವ ಬಿರುದನ್ನು ಪಡೆದುಕೊಂಡರು.
ವಸಿಷ್ಠ ಮರ್ಹಷಿ
ವಸಿಷ್ಠ ಮುನಿಗಳು ಮನ್ವಂತರದಲ್ಲಿನ ಸಪ್ತಋಷಿಗಳಲ್ಲಿ ಒಬ್ಬರು ಮತ್ತು ಅರುಂಧತಿಯ ಪತಿ. ವಸಿಷ್ಠ ಮಹರ್ಷಿಯು ಬ್ರಹ್ಮನ ಮಾನಸಪುತ್ರದಿಂದ ಜನಿಸಿದ ಮಗ. ಹಾಗೂ ಸೂರ್ಯ ವಂಶದ ಅಥವಾ ಸೌರ ರಾಜವಂಶದ ರಾಜಗುರುವಾಗಿದ್ದವರು. ವಸಿಷ್ಠರು ಚುನಾವಣಾ ಜ್ಯೋತಿಷ್ಯ ಕುರಿತ ಗ್ರಂಥವಾದ ವಸಿಷ್ಠ ಸಂಹಿತೆಯ ಲೇಖಕರು. ಋಗ್ವೇದದ ಸ್ತೋತ್ರಗಳಲ್ಲಿ ವಸಿಷ್ಠ ಬ್ರಹ್ಮರ್ಷಿಯನ್ನು ಮತ್ತು ಆತನ ಕುಟುಂಬವನ್ನು ವೈಭವೀಕರಿಸಲಾಗಿದೆ. ಭಗವಾನ್ ರಾಮನು ಕೇಳಿದ ಲೌಕಿಕ ಪ್ರಶ್ನೆಗಳಿಗೆ ವಸಿಷ್ಠ ಮಹರ್ಷಿ ಉತ್ತರವನ್ನು ನೀಡುತ್ತಾನೆ. ಇವುಗಳೇ ಯೋಗ ವಸಿಷ್ಠ ಎನ್ನುವ ಗ್ರಂಥದ ಸಂದರ್ಭ ಮತ್ತು ವಿಷಯವಾಗಿದೆ.
ಗೌತಮ ಮಹರ್ಷಿ
ಮಹರ್ಷಿ ಗೌತಮರು ಸಪ್ತ ಋಷಿಗಳಲ್ಲಿ ಒಬ್ಬರು ಹಾಗೂ ಇವರು ಅಂಗೀರಸ ವಂಶಕ್ಕೆ ಸೇರಿದವರಾಗಿದ್ದರು. ಗೌತಮ ಮಹರ್ಷಿಗಳು ಗವತಮ ಧರ್ಮ ಸೂತ್ರವನ್ನು, ಋಗ್ವೇದದ ಮತ್ತು ಸಾಮವೇದದ ಮಂತ್ರಗಳನ್ನು ಬರೆದಿದ್ದಾರೆ. ಗೌತಮ ಮುನಿಗಳು ಬ್ರಹ್ಮ ದೇವನ ಮಗಳಾದ ಅಹಲ್ಯಾಳನ್ನು ವಿವಾಹವಾಗುತ್ತಾರೆ. ಬ್ರಹ್ಮನು ಸೂಕ್ತ ಸಮಯದಲ್ಲಿ ಯಾರು ಭೂಮಿಯನ್ನು ಸುತ್ತುತ್ತಾರೋ ಅವರಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುವುದಾಗಿ ಘೋಷಿಸುತ್ತಾನೆ. ಆಗ ಎಲ್ಲಾ ಋಷಿ, ಮುನಿಗಳು ಷರತ್ತನ್ನು ಗೆಲ್ಲಲು ಮುಂದಾಗುತ್ತಾರೆ ಆದರೆ ಗೌತಮ ಮಹರ್ಷಿಗಳು ಒಂದು ದೈವಿಕ ಹಸುವಿನ ಸುತ್ತಲೂ ಸುತ್ತುತ್ತಾರೆ. ಆಗ ಅವರ ಬುದ್ಧಿವಂತಿಕೆಯನ್ನು ಹಾಗೂ ಷರತ್ತಿನಲ್ಲಿ ಗೆಲುವನ್ನು ನೋಡಿದ ಬ್ರಹ್ಮನು ತನ್ನ ಪುತ್ರಿ ಅಹಲ್ಯಾಳನ್ನು ಗೌತಮ ಮುನಿಗಳಿಗೆ ವಿವಾಹ ಮಾಡಿಕೊಡುತ್ತಾರೆ. ಗೌತಮ ಋಷಿ ಅಹಂಕಾರವಿಲ್ಲದ ವ್ಯಕ್ತಿ. ದೇಶದಲ್ಲಿ ಬರಗಾಲ ಬಂದಾಗ ಅವರು ಮಳೆಗಾಗಿ ವರುಣ ದೇವನನ್ನು ಕಠಿಣ ಧ್ಯಾನದ ಮೂಲಕ ಒಲಿಸಿಕೊಂಡು ಜನರನ್ನು ಬರಗಾಲದಿಂದ ಮುಕ್ತಿಗೊಳಿಸಿದವರು.
ಗೌತಮ
ಸಪ್ತರ್ಷಿಗಳಲ್ಲಿ ಒಬ್ಬ. ದೀರ್ಘತಮ ಮತ್ತು ಪ್ರದ್ವೇಷಿಣಿಯರ ಮಗ. ಈತನ ತಂದೆ ಆಂಗಿರಸ ಕುಲದವನಿದ್ದು ಬೃಹಸ್ಪತಿಯ ಶಾಪದ ಮೂಲಕ ಹುಟ್ಟುಕುರುಡನಾಗಿದ್ದ. ಎಷ್ಟೋ ಕಡೆಗಳಲ್ಲಿ ದೀರ್ಘತಮ ತಾನೇ ಗೌತಮ ಎಂದು ಹೇಳಿಕೊಂಡಿದ್ದಾನೆ. ಗೌತಮನಿಗೆ ಔಶೀನರೀ ಎಂಬ ಶೂದ್ರ ಸ್ತ್ರೀಯಲ್ಲಿ ಕಕ್ಷೀವಾನ ಮುಂತಾದ ಮಕ್ಕಳು ಹುಟ್ಟಿದರು. ಸನತ್ಕುಮಾರ ಈತನಿಗೆ ಬ್ರಹ್ಮವಿದ್ಯೆ ಹೇಳಿಕೊಟ್ಟ ಗುರು. ಗೌತಮನಿಗೆ ಹಂಸ ಮತ್ತು ಪರಮಹಂಸ ಧ್ಯಾನವನ್ನು ಹೇಗೆ ಮಾಡಬೇಕೆಂದು ಗುರು ಹೇಳಿಕೊಟ್ಟ. ಗೌತಮನನ್ನು ಬ್ರಹ್ಮರ್ಷಿ ಎಂದು ಕರೆಯಲಾಗಿದೆ. ಬ್ರಹ್ಮದೇವನ ಮಾನಸಕನ್ಯೆ ಅಹಲ್ಯೆ ಈತನ ಹೆಂಡತಿ. ಗೌತಮೀ ಎಂಬುದು ಈಕೆಯ ಒಂದು ಹೆಸರು. ಶತಾನಂದ ಈಕೆಯ ಮಗ. ಈಕೆಯ ಹೆಸರಿನಿಂದಲೇ ಗೋದಾವರಿ ನದಿಗೆ ಗೌತಮೀ ಎಂಬ ಹೆಸರು ಬಂದಿದೆ. ವೃಷಾದರ್ಭಿ ಎಂಬ ರಾಜ ತನ್ನ ರಾಜ್ಯದಲ್ಲಿ ಅನ್ನಕ್ಷಾಮ ಒದಗಿದ್ದರಿಂದ ಋಷಿಗಳಿಗೆ ದಾನ ಕೊಡಲು ನಿಶ್ಚಯಿಸಿದಾಗ ಆ ದಾನವನ್ನು ನಿರಾಕರಿಸಿದ ಏಳು ಋಷಿಗಳಲ್ಲಿ ಗೌತಮನೂ ಒಬ್ಬ. ತನ್ನ ಶಿಷ್ಯ ಉದಂಕನಿಗೇ ಮಗಳನ್ನು ಕೊಟ್ಟು ಲಗ್ನ ಮಾಡಿದನೆನ್ನಲಾಗಿದೆ.
ಗೌತಮನ ಆಶ್ರಮ ಪಾರಿಯಾತ್ರ (ವಿಂಧ್ಯ) ಪರ್ವತದ ಹತ್ತಿರ ಇತ್ತೆಂದು ಹೇಳಲಾಗಿದೆ. ಅಲ್ಲಿ ಈತ ಅರುವತ್ತು ಸಾವಿರ ವರ್ಷಗಳವರೆಗೆ ತಪಸ್ಸು ಮಾಡಿದನೆಂದು ಪ್ರತೀತಿ. ಆಗ ಅಲ್ಲಿ ಪ್ರತ್ಯಕ್ಷನಾದ ಯಮನನ್ನು ಪಿತೃಋಣದಿಂದ ಮುಕ್ತನಾಗುವ ಬಗೆಯನ್ನು ವಿವರಿಸುವಂತೆ ಈತ ಕೇಳಿಕೊಂಡ. ಸತ್ಯ, ಧರ್ಮ, ತಪಸ್ಸು ಮತ್ತು ಶುಚಿತ್ವಗಳನ್ನವಲಂಬಿಸಿ ತಂದೆತಾಯಿಗಳ ಸೇವೆ ಮಾಡಿದರೆ ಪವಿತ್ರಲೋಕ ಪ್ರಾಪ್ತಿಯಾಗುತ್ತದೆಂದು ಯಮ ಈತನಿಗೆ ಉತ್ತರವಿತ್ತ. ಹನ್ನೆರಡು ವರ್ಷದ ಬರಗಾಲ ಪ್ರಾಪ್ತವಾದರೂ ಗೌತಮ ಅಲ್ಲಿನ ಋಷಿಗಳಿಗೆ ಊಟವನ್ನು ಒದಗಿಸಿ ಬದುಕಿಸಿದ.
ಗೌತಮನೆಂಬ ಇನ್ನೊಬ್ಬ ಋಷಿ ಆಂಗಿರಸ ಕುಲದಲ್ಲಿನ ಋಷಿಯೂ ಪ್ರವರವೂ ಆಗಿದ್ದಾನೆ. ವೈವಸ್ವತ ಮನ್ವಂತರದಲ್ಲಿ ಈತ 20ನೆಯ ಪರ್ಯಾಯದ ವ್ಯಾಸ.
ಶಾಕ್ಯರಿಗೆ ಪೂಜ್ಯನಾದ ಬುದ್ಧದೇವನಿಗೂ ಗೌತಮನೆಂಬ ಹೆಸರಿದೆ.
ಅತ್ರಿ ಮಹರ್ಷಿ
ಅತ್ರಿ ಮಹರ್ಷಿ ಕೂಡ ಬ್ರಹ್ಮ ದೇವನ ಮಗ ಹಾಗೂ ಮನ್ವಂತರದ ಸಪ್ತ ಋಷಿಗಳಲ್ಲಿ ಒಬ್ಬರು. ಪವಿತ್ರ ದಾರಗಳನ್ನು ಪ್ರತಿಪಾದಿಸಿದ ಋಷಿಗಳಲ್ಲಿ ಇವರೂ ಕೂಡ ಒಬ್ಬರು. ಅನುಸೂಯಾ ಅತ್ರಿ ಮಹರ್ಷಿಗಳ ಪತ್ನಿಯಾಗಿದ್ದಳು. ಅತ್ರಿಯವರನ್ನು ಪವಿತ್ರ ಮಂತ್ರಗಳ ಮಹಾನ್ ಅನ್ವೇಷಕರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ವನವಾಸದಲ್ಲಿದ್ದ ಶ್ರೀರಾಮನು ಇವರ ಆಶ್ರಮಕ್ಕೆ ಬಂದಾಗ ಅನೇಕ ಧರ್ಮರಹಸ್ಯಗಳನ್ನು ಶ್ರೀರಾಮನಿಗೆ ಬೋಧಿಸಿದ್ದರು. ಅಷ್ಟು ಮಾತ್ರವಲ್ಲ ಕೆಲವು ಕಾಲಗಳವರೆಗೆ ಬ್ರಹ್ಮರ್ಷಿ ಪಟ್ಟದಲ್ಲೂ ಕೂಡ ಕುಳಿತಿದ್ದರು. ಅತ್ರಿ ಮಹರ್ಷಿಗಳು ಅತ್ರಿ ಸಂಹಿತಾ ಮತ್ತು ಅತ್ರಿ ಸ್ಮೃತಿ ಎನ್ನುವ ಎರಡು ಮಹಾನ್ ಕೃತಿಗಳನ್ನು ಬರೆದಿದ್ದರು. ಗುರು ದತ್ತಾತ್ರೇಯರು ಇವರ ಪುತ್ರರು.
ಕಶ್ಯಪ ಮಹರ್ಷಿ
ಕಶ್ಯಪ ಮಹರ್ಷಿಗಳು ಅತ್ಯಂತ ಜನಪ್ರಿಯ ಹಾಗೂ ಪ್ರಾಚೀನ ಋಷಿಗಳು ಮತ್ತು ಸಪ್ತಋಷಿಗಳಲ್ಲಿ ಒಬ್ಬರಾಗಿದ್ದರು. ಕಶ್ಯಪ ಮಹರ್ಷಿಗಳು ಋಷಿ ಮಾರೀಚಿಯ ಮಗ ಮತ್ತು ಬ್ರಹ್ಮನ ಮೊಮ್ಮಗ. ಕಶ್ಯಪ ಮಹರ್ಷಿಗಳು ದೇವರ, ಅಸುರರ, ನಾಗರ, ಗರುಡರ, ವಾಮನ, ಅಗ್ನಿ, ಆದಿತ್ಯ, ದೈತ್ಯರ, ಆರ್ಯಮಾನ್‌ರ, ಮಿತ್ರ, ಪುಸಾನ, ವರುಣ ಮತ್ತು ಎಲ್ಲಾ ಮಾನವೀಯತೆಯ ತಂದೆ ಎಂದು ಹೇಳಲಾಗುತ್ತದೆ. ಕಶ್ಯಪ ಮಹರ್ಷಿಗಳು ಕಶ್ಯಪ ಸಂಹಿತೆಯ ಲೇಖಕರಾಗಿದ್ದರು. ಬ್ರಹ್ಮನ ಸೃಷ್ಟಿ ಕರ್ತವ್ಯದಲ್ಲಿ ಕಶ್ಯಪನ ಪಾತ್ರ ಮಹತ್ತರವಾದುದ್ದಾಗಿದೆ.
ಜಮದಗ್ನಿ ಮಹರ್ಷಿ
ಜಮದಗ್ನಿಯು ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ತಂದೆ. ಜಮದಗ್ನಿ ಋಷಿಯು ಬ್ರಹ್ಮನು ಸೃಷ್ಟಿಸಿದ ಪ್ರಜಾಪತಿಗಳಲ್ಲಿ ಒಬ್ಬನಾದ ಭೃಗು ಋಷಿಯ ವಂಶಸ್ಥನು. ಜಮದಗ್ನಿಯ ಪತ್ನಿ ಹೆಸರು ರೇಣುಕಾದೇವಿ. ಈಕೆ ಯಾವಾಗಲೂ ಪರಿಶುದ್ಧತೆಯ ಶಕ್ತಿಯಿಂದ ತಯಾರಿಸಿದ ಮರಳಿನ ಮಡಿಕೆಯಲ್ಲಿ ನೀರನ್ನು ತರುತ್ತಿದ್ದಳು. ಒಮ್ಮೆ ಈಕೆ ಕೊಳದಿಂದ ನೀರನ್ನು ತರುವಾಗ ಗಂಧರ್ವರನ್ನು ನೋಡುತ್ತಾಳೆ ಹಾಗೂ ಆಕೆಯ ಮನಸ್ಸು ಗಂಧರ್ವರತ್ತ ಆಕರ್ಷಿತವಾಗುತ್ತದೆ. ಇದರಿಂದಾಗಿ ಆಕೆಯ ಕೈಯಲ್ಲಿದ್ದ ಮರಳಿನ ಮಡಕೆಯು ಕರಗುತ್ತದೆ. ಇದನ್ನು ತನ್ನ ಧ್ಯಾನ ಶಕ್ತಿಯಿಂದ ಅರಿತ ಜಮದಗ್ನಿಯು ತನ್ನ ಮಕ್ಕಳನ್ನು ಕರೆದು ತಾಯಿಯನ್ನು ಕೊಲ್ಲಲು ಹೇಳುತ್ತಾನೆ. ಆದರೆ ಆತನ ಯಾವ ಮಕ್ಕಳು ಒಪ್ಪುವುದಿಲ್ಲ. ಆಗ ಜಮದಗ್ನಿಯ ಮಕ್ಕಳಲ್ಲಿ ಒಬ್ಬನಾದ ಪರಶುರಾಮನು ತಂದೆಯ ಮಾತಿಗೆ ಬೆಲೆಕೊಟ್ಟು ತಾಯಿಯ ಶಿರಚ್ಛೇದ ಮಾಡುತ್ತಾನೆ. ಜಮದಗ್ನಿಯು ತನ್ನ ಉಳಿದ ಮಕ್ಕಳು ತನ್ನ ಮಾತನ್ನು ನಿರಾಕರಿಸಿದರೆಂದು ಮಕ್ಕಳನ್ನೇ ಸಾಯಿಸುತ್ತಾನೆ.
ಸಂಗ್ರಹ..
****
#ಋಷಿ #ಪಂಚಮಿವ್ರತ ಮತ್ತು #ಕಥೆ
*ಭಾದ್ರಪದ ಶುಕ್ಲ ಪಕ್ಷ ಪಂಚಮಿ
🌺🌺🌺🌺🌺🌺🌺
ಋಷಿ : ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರು ಸಪ್ತರ್ಷಿಗಳಾಗಿದ್ದಾರೆ.
ತಮ್ಮ ಋತು ಚಕ್ರ ನಿಂತಿರುವವರು. ಮತ್ತು ಆಕೆ ಮುತ್ತೈದೆ ಅಥವಾ ಮಡಿಹೆಂಗಸರಾಗಿರಬೇಕು. ಅಥವಾ
ಗಂಡಸರು ತಮ್ಮ ತಾಯಿಯ / ಹೆಂಡತಿಯ ಪರವಾಗಿ (ಅವರಿಗೆ ಆರೋಗ್ಯ ಇಲ್ಲದಿದ್ದರೆ) ಮಾಡಬಹುದು..
ಉದ್ದೇಶ
ಆ ಯಾವ ಋಷಿಗಳು ತಮ್ಮ ತಪೋಬಲದಿಂದ ಜಗತ್ತಿನಲ್ಲಿರುವ ಮಾನವರ ಮೇಲೆ ಅನಂತ ಉಪಕಾರಗಳನ್ನು ಮಾಡಿದ್ದಾರೆಯೋ, ಮಾನವರ ಜೀವನಕ್ಕೆ ಯೋಗ್ಯ ದಿಶೆಯನ್ನು ಕೊಟ್ಟಿದ್ದಾರೆಯೋ, ಅಂತಹ ಋಷಿಗಳನ್ನು ಈ ದಿನದಂದು ಸ್ಮರಿಸಲಾಗುತ್ತದೆ.
ಆ. ಮಾಸಿಕ ಋತು, ಅಶೌಚ ಮತ್ತು ಸ್ಪರ್ಶಾಸ್ಪರ್ಶದಿಂದ ಸ್ತ್ರೀಯರ ಮೇಲಾಗುವ ಪರಿಣಾಮಗಳು ಈ ವ್ರತದಿಂದ, ಕಡಿಮೆಯಾಗುತ್ತವೆ.
ವ್ರತಮಾಡುವಪದ್ಧತಿ
ಅ. ಈ ದಿನದಂದು ಸ್ತ್ರೀಯರು ಬೆಳಗ್ಗೆ ಆಘಾಡಿಯ ಕಡ್ಡಿಯಿಂದ (ಉತ್ತರಾಯಣಿ ಕಡ್ಡಿ ) ಹಲ್ಲುಜ್ಜಬೇಕು. ನಂತರ ಸ್ನಾನ ಮಾಡುವಾಗ ತಲೆಯ ಮೇಲೆ ನೂರಾಎಂಟು ಉತ್ತರಾಯಣಿ ಕಡ್ಡಿ ಇಟ್ಟುಕೊಂಡು ಸ್ನಾನ. ಮಾಡಬೇಕು..
ಆ. ಸ್ನಾನದ ನಂತರ ಪೂಜೆಯ ಮೊದಲು ‘ಮಾಸಿಕ ಋತುಸ್ರಾವದ ಸಮಯದಲ್ಲಿ ತಿಳಿದು ಅಥವಾ ತಿಳಿಯದೇ ಮಾಡಿದ ಸ್ಪರ್ಶಗಳಿಂದ ಯಾವ ದೋಷಗಳು ತಗಲುತ್ತವೆಯೋ, ಅವುಗಳ ನಿವಾರಣೆಗಾಗಿ ಅರುಂಧತಿಯೊಂದಿಗೆ ಸಪ್ತರ್ಷಿಗಳನ್ನು ಪ್ರಸನ್ನಗೊಳಿಸಲು ನಾನು ಈ ವ್ರತವನ್ನು ಮಾಡುತ್ತಿದ್ದೇನೆ. ಎಂದು ಸಂಕಲ್ಪವನ್ನು ಮಾಡಬೇಕು.
ಈ ಮಣೆಯ ಮೇಲೆ ಅಕ್ಕಿಯ ಎಂಟು ಗುಡ್ಡೆಗಳನ್ನು ಮಾಡಿ ಅವುಗಳ ಮೇಲೆ ಎಂಟು ಅಡಿಕೆಯನ್ನಿಟ್ಟು ಕಶ್ಯಪಾದಿ ಸಪ್ತಋಷಿ ಮತ್ತು ಅರುಂಧತಿಯರ ಆವಾಹನೆ ಮತ್ತು ಷೋಡಶೋಪಚಾರ ಪೂಜೆಯನ್ನು ಮಾಡಬೇಕು.
ಈ. ದಿನದಂದು ಗೆಡ್ಡೆಗೆಣಸುಗಳ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಎತ್ತುಗಳ ಶ್ರಮದಿಂದ ತಯಾರಾದ ಯಾವುದೇ ಆಹಾರವನ್ನು ಸ್ವೀಕರಿಸಬಾರದು ಎಂದು ಹೇಳಲಾಗಿದೆ.
ಮರುದಿನ ಕಶ್ಯಪಾದಿ ಸಪ್ತಋಷಿ ಮತ್ತು ಅರುಂಧತಿಯ ವಿಸರ್ಜನೆಯನ್ನು ಮಾಡಬೇಕು.
ಹನ್ನೆರಡು ವರ್ಷಗಳ ನಂತರ ಅಥವಾ ಐವತ್ತನೆಯ ವಯಸ್ಸಿನ ನಂತರ ಈ ವ್ರತದ ಉದ್ಯಾಪನೆ ಮಾಡಬಹುದು. ಉದ್ಯಾಪನೆಯ ನಂತರವೂ ಈ ವ್ರತವನ್ನು ಮುಂದುವರಿಸಬಹುದು.
ಹೆಣ್ಣು ಮಕ್ಕಳಿಗೆ ಬಾಗಿನ ಸಹ ಕೊಡಲಾಗುತ್ತದೆ.
ಈವ್ರತದ ಮಹತ್ವ
ಈ ವ್ರತವನ್ನು ಮಾಡುವುದರಿಂದ ಇಹಪರಗಳಲ್ಲಿ ಮಾಡಿದ ಪಾಪಗಳು
ನಾಶವಾಗುತ್ತವೆ.
ಋಷಿಪಂಚಮಿ ವ್ರತದ ಬಗ್ಗೆ ಬ್ರಹ್ಮನು ಒಂದು
ಸಂಗತಿಯನ್ನು ಹೇಳುತ್ತಾನೆ.
ಹಿಂದೆ ಉತಾಂಕ್ ಎಂಬ ಬ್ರಾಹ್ಮಣನು
ಸುಶೀಲಎಂಬ ಹೆಂಡತಿಯೊಂದಿಗೆ ವಾಸ ಮಾಡುತ್ತಿದ್ದನು.
ಅವರ
ಜೊತೆಯಲ್ಲಿ ಅವರ ವಿದವೆ ಮಗಳು ವಾಸವಾಗಿದ್ದಳು. ಒಂದು ರಾತ್ರಿ
ಅವಳ ದೇಹವನ್ನು ಇರುವೆಗಳು ಮುತ್ತಿಕೊಂಡಿರುವುದನ್ನು ನೋಡಿ
ಭಯದಿಂದ ಒಬ್ಬ ಋಷಿಯನ್ನು ಪರಿಹಾರವೇನೆಂದು ಕೇಳಿದರು. ಆ
ಋಷಿಗಳು ನಿಮ್ಮ ಮಗಳು ಪೂರ್ವಜನ್ಮದಲ್ಲಿ ಮಾಡಿದ ಪಾಪದ
ಫಲವೇ ಇದಕ್ಕೆ ಕಾರಣವೆಂದು ಹೇಳುತ್ತಾರೆ.
ನಿಮ್ಮ ಮಗಳು ರಜಸ್ವಲೆ ಯಾದಾಗ ಅಡುಗೆ ಮನೆಗೆ ಪ್ರವೇಶಮಾಡಿ ಪಾಪಮಾಡಿದ್ದಾಳೆ. ಅದರ
ಪರಿಣಾಮ ಇದು ಎಂದು ಹೇಳುತ್ತಾರೆ. ಋಷಿಗಳು ಅವಳಿಗೆ ಈ ಪಾಪ
ಪರಿಹಾರಕ್ಕೆ ಋಷಿಪಂಚಮಿ ವ್ರತವನ್ನು ಮಾಡು ಎಂದು ಉಪದೇಶ
ಮಾಡುತ್ತಾರೆ.
ಅದರಂತೆ ಅವಳು ಋಷಿಪಂಚಮಿ ವ್ರತವನ್ನು ಮಾಡಿ
ಪಾಪ ಮುಕ್ತಳಾಗುತ್ತಾಳೆ.
ಋಷಿಪಂಚಮಿ ವ್ರತಾಚರಣೆ
ಋಷಿಪಂಚಮಿಯದಿನ ಬೆಳಗ್ಗೆ ಬೇಗನೆ ಎದ್ದು ತಮ್ಮ ನಿತ್ಯಕರ್ಮಗಳನ್ನು
ಮುಗಿಸಿ ಎಣ್ಣೆ ಸ್ನಾನವನ್ನು ಮಾಡಬೇಕು.
ನಂತರ ಪಂಚಗವ್ಯವನ್ನು
ತೆಗೆದು ಕೊಳ್ಳಬೇಕು. ಸಪ್ತಋಷಿಗಳನ್ನು ಪೂಜೆಮಾಡಿ ಬ್ರಹ್ಮಣರಿಗೆ
ಭೋಜನ ಹಾಕ ಬೇಕು.
ಋಷಿಪಂಚಮಿ ಕುರಿತು ಇನ್ನೊಂದು ಪ್ರಸಂಗವಿದೆ. ಒಮ್ಮೆ ಜಯಶ್ರೀ
ಎಂಬ ಹೆಂಗಸು ರಜಸ್ವಲಾ ಕಾಲದಲ್ಲಿ ಅನ್ವಯವಾಗುವ ನಿಷಿದ್ದಗಳನ್ನು
ಮೀರಿ ಅಂದರೆ ತಿನ್ನ ಬಾರದ್ದನ್ನು ತಿನ್ನುವುದು, ಹೋಗಬಾರದ ಕಡೆಗೆ
ಹೋಗುವುದು, ಎಲ್ಲರನ್ನು ಮುಟ್ಟುವುದು ಮಾಡಿ ಪಾಪ ಮಾಡುತ್ತಾಳೆ.
ಇವಳು ಮಾಡಿದ ಪಾಪದ ಫಲ ಇವಳ ಗಂಡನ ಮೇಲು
ಪರಿಣಾಮವಾಗಿ ಅವರು ಸತ್ತನಂತರ ಅವರ ಮಗ ಸುಮತಿ
ಮನೆಯಲ್ಲೇ ಹೆಣ್ಣುನಾಯಿಯಾಗಿ,ಎತ್ತಾಗಿ ಹುಟ್ಟುತ್ತಾರೆ.
ಒಂದು ದಿನ ಸುಮತಿಯು ಶ್ರಾದ್ದದ ಸಲುವಾಗಿ ಪಿತೃಗಳಿಗೆ ಅರ್ಪಿಸಲು
ಕೀರನ್ನು ಮಾಡಿಸಿರುತ್ತಾನೆ. ಆಗ ಒಂದು ಹಾವು ಬಂದು ಅದನ್ನು
ವಿಷಪೂರಿತ ವಾಗಿಸುತ್ತದೆ. ಆದರೆ ಇದನ್ನು ನೋಡಿದ ನಾಯಿಯು
ನಾನು ಇದನ್ನು ಕೆಡಿಸಿದರೆ ಯಾರು ಇದನ್ನು ಉಪಯೋಗಿಸುವುದಿಲ್ಲ
ಆಗ ಯಾರಿಗೂ ಏನೂ ತೊಂದರೆ ಯಾಗುವುದಿಲ್ಲವೆಂ ಯೋಚಸಿ
ಅದನ್ನು ಕೆಡಿಸುತ್ತದೆ.
ಇದನ್ನು ತಿಳಿದ ಸುಮತಿಯು ಯಾರಿಗೂ ಕೀರನ್ನು
ಹಾಕುವುದಿಲ್ಲ.
ಇದರಿಂದ ಆಗಬಹುದಾದ ಅನಾಹುತವುವು ತಪ್ಪುತ್ತದೆ.
ಆದರೆ ಸುಮತಿಯು ನಾಯಿಯ ಮೇಲೆ ಕೋಪಗೊಂಡು ಅದಕ್ಕೆ
ಚೆನ್ನಾಗಿ ಹೊಡೆಯುತ್ತಾನೆ. ಇದನ್ನು ರಾತ್ರಿ ತನ್ನ ಗಂಡನಿಗೆ ಹೇಳಿ,
ಬ್ರಾಹ್ಮಣರಿಗೆ ಸರಿಯಾದ ಊಟ ಹಾಕದೇ ಶ್ರಾದ್ದದ ಫಲ
ಬರಲಿಲ್ಲವೆಂದು ದುಃಖ ಪಡುತ್ತಾರೆ.
ಇದನ್ನು ತಿಳಿದ ಸುಮತಿಯು
ಮರುದಿನ ಪೂರ್ಣ ಭೋಜನ ಮಾಡಿಸುತ್ತಾನೆ.
ಮರದಿನ ಋಷಿಪಂಚಮಿದಿನ. ಇಬ್ಬರು ಋಷಿಗಳನ್ನು ಕಂಡು ಅವರನ್ನು
ಈ ಜನ್ಮಗಳಿಗೆ ಕಾರಣವನ್ನು ತಿಳಸಬೇಕೆಂದು ಪ್ರಾರ್ಥಿಸುತ್ತಾರೆ.
ಆಗ ಋಷಿಗಳು ನೀವು ಮಾಡಿದ ಪಾಪದ ಫಲದಿಂದ ಈ ಜನ್ಮ
ಪಡದಿರುವರೆಂದು ಹೇಳುತ್ತಾರೆ.
ನೀವು ಋಷಿಪಂಚಮಿ ವ್ರತ ಮಾಡಿ ಈ ಜನ್ಮದಿಂದ ಮಕ್ತರಾಗಿ ಎಂದು
ಹೇಳುತ್ತಾರೆ.
ಋಷಿಪಂಚಮಿ ಆಚರಣೆಯಿಂದ ಸಕಲ ಪಾಪಗಳೂ ನಿವಾರಣೆಯಾಗಿ
ಧರ್ಘಾಯುಸ್ಸು,ಐಶ್ವರ್ಯ ಮುಂತಾದವು ಲಬಿಸುತ್ತದೆ....
***
ಋಷಿ ಪರಂಪರೆ
🍃🍃🍃🍃🍃🍃🍃🍃🍃🍃
ವೇದಮಂತ್ರಗಳಲ್ಲಿ ಮಂತ್ರ ರಚಯಿತರಾಗಿ ಉಲ್ಲೇಖಗೊಂಡಿರುವ ಈ ಋಷಿಗಳೆಂದರೆ ಯಾರು? ಋಷಿ ಶಬ್ದದ ಅರ್ಥವೇನು? ಅರಿಯುವ ಕಿರು ಪ್ರಯತ್ನ ಇಲ್ಲಿದೆ… ~ ಗಾಯತ್ರಿ
ಋಗ್ವೇದದಲ್ಲಿ ಋಷಿಗಳನ್ನು ಕುರಿತು ವ್ಯಾಖ್ಯಾನಿಸುತ್ತಾ, ‘ಜಗದ ಪರಿವೆಯೇ ಇಲ್ಲದೇ, ಜಗದೀಶನನ್ನು ಧ್ಯಾನಿಸಿ ಅಂತಃ ಪ್ರಕಾಶವನ್ನು ಬೆಳಗಿಸಿದವನು, ಸಾಮಾನ್ಯವಾಗಿ ಮನುಷ್ಯನಿಗೆ ನಿಲುಕದ ಅದಮ್ಯವಾದ ದಿವ್ಯಾನುಭೂತಿಯನ್ನು ಸಾಕ್ಷಾತ್ಕರಿಸಿಕೊಂಡವನು, ಜಗತ್ತಿನ ಸತ್ಯ ವಸ್ತುವನ್ನು ತನ್ನ ಸ್ವಂತ ಅರಿವಿಗೆ ತರಿಸಿಕೊಂಡವನು (ಸ್ವತಃ ಪ್ರಮಾಣ), ಅಂತಹ ಸತ್ಯದ ಸಾಕ್ಷಾತ್ಕಾರವನ್ನು ಭಗವಂತನಿಂದ ನೇರವಾಗಿ ಪಡೆದುಕೊಂಡವನು ಋಷಿ ಎನ್ನಿಸಿಕೊಳ್ಳುತ್ತಾನೆ’ ಎಂದು ವಿವರಿಸಲಾಗಿದೆ.
ಯಜುರ್ವೇದದಲ್ಲಿ ‘ಹಿಂದಿನ ಕಾಲದಲ್ಲಿ ಯಾರು ಗುರುಕುಲದಲ್ಲಿ ಬ್ರಹ್ಮಚರ್ಯ ವ್ರತವನ್ನು ಪಾಲಿಸಿ, ಸ್ತೋಮದಲ್ಲಿ (ಗುಂಪಿನಲ್ಲಿ ಒಟ್ಟಾಗಿ) ಒಬ್ಬರೊಬ್ಬರು ಕೂಡಿಕೊಂಡು ಧರ್ಮದ ಮರ್ಮವನ್ನರಿಯಲು ಯತ್ನಿಸಿದ್ದರೋ, ಆ ಪ್ರಯತ್ನದ ಸಾಫಲ್ಯದಿಂದ ಮಹದಾನಂದ ಪಡೆದಿದ್ದರೋ, ಯಾರು ಅಮಿತವಾದ ಜ್ಞಾನವನ್ನು ಸಂಪಾದಿಸಿದ್ದರೋ, ಯಾರಿಗೆ ಏಳು ತೆರನಾದ ಶಕ್ತಿಗಳು ಒಲಿದಿವೆಯೋ ಅವರೇ ನಿಜವಾದ ಋಷಿಗಳು ಎಂದು ಹೇಳಲಾಗಿದೆ.
‘ಋಷತಿ ಜ್ಞಾನೇನ ಸಂಸಾರ ಪಾರಂ’ ಎಂಬುದು ಒಂದು ಉಕ್ತಿ. ಜ್ಞಾನದಿಂದ ಸಂಸಾರ ಬಂಧನವನ್ನು ದಾಟಿದವರು ಋಷಿಗಳು ಎಂದರ್ಥ. ಇಲ್ಲಿ ಸಂಸಾರ ಎಂದರೆ ಕೇವಲ ಮನೆ ಮಡದಿ ಮಕ್ಕಳು ಅಷ್ಟೇ ಅಲ್ಲ, ಲಾಲಸೆ, ಆಮಿಷ, ಅಭಿಲಾಷೆ, ಆಕಾಂಕ್ಷೆ ಮತ್ತು ಸಮಸ್ತ ತೃಷೆಗಳು ಎಂದಾಗುತ್ತವೆ.
ಉಪನಿಷತ್ತುಗಳ ಅಭಿಪ್ರಾಯದಲ್ಲಿ `ಋಷಯಃ ಅಂತಃ ಪ್ರಕಾಶಕಾ’ – ಅಂದರೆ, ಋಷಿಗಳು ಅಂತರಂಗದಲ್ಲಿ ಸತ್ಯದ ಬೆಳಕು ಕಂಡವರು ಎಂದು ವಿಷದಪಡಿಸಲಾಗಿದೆ. ಮುಂಡಕ ಉಪನಿಷತ್ತಿನಲ್ಲಿ ಸರ್ವಸಮರ್ಥ ಸರ್ವಂತರ್ಯಾಮಿಯಾದ ಭಗವಂತನ ಇರುವಿಕೆಯನ್ನು ಸಾಕ್ಷಾತ್ಕರಿಸಿಕೊಂಡು, ಜ್ಞಾನದಿಂದ ತುಂಬಿದ ತಲೆಯುಳ್ಳವರಾಗಿ ಅಂದರೆ ಜ್ಞಾನಸಂಪನ್ನರಾಗಿ, ಆನಂದಮಯ, ಶಾಂತಿಪೂರ್ಣ ಸಂತೃಪ್ತ ಜೀವನವನ್ನು ನಡೆಸುವವರು ಋಷಿಗಳು ಎಂದು ಹೇಳಲಾಗಿದೆ.
‘ಅತೀಂದ್ರಿಯಸ್ಯ ವೇದಸ್ಯ ಪರಮೇಶ್ವರಾನುಗ್ರಹೇಣ ಪ್ರಥಮತೋ ದರ್ಶನಾತ್ ಋಷಿತ್ವಂ’ – ಎಲ್ಲಕ್ಕಿಂತ ಮೊದಲು ಭಗವಂತನ ಅನುಗ್ರಹದಿಂದ, ಅವಿರತ ತಪಸ್ಸಿನಿಂದ ಅತೀಂದ್ರಿಯವಾದ ವೇದಗಳನ್ನು ಕಂಡುಕೊಳ್ಳುವುದು ಋಷಿತನ ಎಂದು ವೇದ ಭಾಷ್ಯಕಾರ ಸಾಯಣರು ಸಾರಿದ್ದಾರೆ.
ಅಪೌರುಷೇಯವಾದ ವೇದಗಳನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಋಷಿಗಳುನೇರವಾಗಿ ಭಗವಂತನಿಂದ ಸಾಕ್ಷಾತ್ಕರಿಸಿಕೊಂಡರು. ಅವೇ ವೇದಮಂತ್ರಗಳು. ‘ಋಷಯೋ ಮಂತ್ರ ದೃಷ್ಟಾರಃ’ ಎನ್ನುವ ಮಾತಿದೆ. ಇದು, ಋಷಿಗಳು ಮಂತ್ರ ಕರ್ತಾರರಲ್ಲ ದೃಷ್ಟಾರರು ಎಂಬುದನ್ನು ಸ್ಪಷ್ಟವಾಗಿ ಸಾರುತ್ತದೆ. ಋಷಿಗಳು ಅವುಗಳನ್ನು ಕಂಡುಕೊಂಡ ಅನ್ವೇಷಕರು ಹೊರತು ಸೃಷ್ಟಿಕರ್ತರಲ್ಲ. ಅವರು ಬೆಳಕಿನ ಹಾದಿಯ ಪಥಿಕರು. ಇಡಿಯ ಜಗತ್ತೇ ಬಾಹ್ಯವಾಗಿ ಕತ್ತಲಾದರೂ ಅವರು ತಮ್ಮ ಅಂತರ್ ದೃಷ್ಟಿಯಿಂದ ಬೆಳಕು ಕಂಡುಕೊಳ್ಳುತ್ತ ಇತರರಿಗೂ ಅದನ್ನು ಹಂಚುವವರು.
ಮಧ್ವಾಚಾರ್ಯರು ವೇದ ಭಾಷ್ಯದಲ್ಲಿ , ‘ಯಾರು ಸ್ವಯಂ ಅನುಭವದಲ್ಲಿ ಸತ್ಯವನ್ನು ಅರಿತುಕೊಳ್ಳುಕೊಳ್ಳುವರೋ, ಅವರನ್ನು ಋಷಿಗಳೆಂದು ಕರೆಯುತ್ತಾರೆ’ ಎಂದು ಹೇಳಿದ್ದಾರೆ. ಟೀಕಾಚಾರ್ಯರು ಈ ವಾಕ್ಯದ ಅರ್ಥವನ್ನು ‘ಅಧ್ಯಯನ ಮಾಡದೆ, ಯಾರು ಕೇವಲ ನಿರಂತರ ತಪಸ್ಸಿನಿಂದ ನೇರವಾಗಿ ಭಗವಂತನನ್ನು ಒಲಿಸಿಕೊಂಡು ಮಂತ್ರಗಳನ್ನು ಪಡೆದುಕೊಳ್ಳುತಾರೋ ಅವರು ಋಷಿಗಳು’ ಎಂದು ಆಚಾರ್ಯರ ವಾಕ್ಯವನ್ನು ಇನ್ನೂ ಸರಳೀಕರಿಸುತ್ತಾರೆ. ಅರವಿಂದರು, `ಅಂತರಿಕ್ಷದ ದೈವವಾಣಿಯನ್ನು ಅಂತರಂಗದಲ್ಲಿ ಕೇಳಿಸಿಕೊಂಡವರು ಋಷಿಗಳು’ ಎಂದು ಹೇಳಿರುವುದು ಋಷಿಗಳ ವ್ಯಾಪ್ತಿ ಸಾಧ್ಯತೆಯನ್ನು ಸೂಚಿಸುತ್ತದೆ.
ಆದರೆ ಹೀಗೆ ಮಂತ್ರವನ್ನು ಕಂಡುಹಿಡಿದವರು ಮಾತ್ರವೇ ಋಷಿಗಳಾಗಿರಬೇಕು ಎಂದೇನಿಲ್ಲ. ಮಂತ್ರ / ಜ್ಞಾನವನ್ನು ಗುರುಗಳಿಂದ ಮೊದಲು ಪಡೆದುಕೊಂಡವರು, ಅದರಿಂದ ಸಿದ್ಧಿ ಹೊಂದಿದವರು, ಮಂತ್ರದ ಪ್ರಸಿದ್ಧಿಗೆ ಕಾರಣರಾದವರೂ ಋಷಿಗಳೇ. ಉದಾಹರಣೆಗಾಗಿ ಗಾಯಂತ್ರಿ ಮಂತ್ರಕ್ಕೆ ವಿಶ್ವಾಮಿತ್ರನನ್ನು ಋಷಿಯಾಗಿ ಸ್ಮರಿಸುತ್ತೇವೆ, ಆದರೆ ಅದಕ್ಕಿಂತ ಮೊದಲಲ್ಲಿಯೂ ಗಾಯಂತ್ರಿ ಮಂತ್ರ ಇತ್ತು. ಅದರ ಜಪದಿಂದ ವಿಶ್ವಾಮಿತ್ರರು ಬ್ರಹ್ಮರ್ಷಿ ಪಟ್ಟಕ್ಕೇರಿದ್ದರಿಂದ ಅವರನ್ನು ಗಾಯತ್ರಿ ಮಂತ್ರಕ್ಕೆ ಋಷಿಯಾಗಿ ಪರಿಗಣಿಸಲಾಗುತ್ತದೆ ಎಂಬುದು ಆಚಾರ್ಯ ಮಧ್ವರ ನಿರ್ಣಯ.
ಸಂಸ್ಕೃತ ಶಬ್ದಗಳ ಅರ್ಥ ಸಂಪತ್ತಿನ ಆಗರ ಅಮರಕೋಶದಲ್ಲಿ ಋಷಿ ಶಬ್ದಕ್ಕೆ ‘ಸತ್ಯ ವಚಃ’ ಎಂಬ ಪರ್ಯಾಯಪದವನ್ನು ಸೂಚಿಸಲಾಗಿದೆ. ಸತ್ಯವನ್ನು ಮಾತನಾಡುವವರು ಎಂತಲೂ, ಕಂಡುಕೊಂಡ ಸತ್ಯವನ್ನು ಸಾದರ ಪಡಿಸುವವರು ಎಂತಲೂ ಇದನ್ನು ಅರ್ಥೈಸಿಕೊಳ್ಳಬಹುದು.
ಋಷಿಗಳನ್ನು ಸಾಕ್ಷಾತ್ ಋಷಿ (ಭಗವಂತನಿಂದ ಕೇಳಿಸಿಕೊಂಡ ಋಷಿ) ಮತ್ತು ಶ್ರುತ ಋಷಿ (ಗುರುವಿನಿಂದ ಹೇಳಿಸಿಕೊಂಡ ಋಷಿ) ಎಂಬ ಎರಡು ವಿಧಗಳಾಗಿ ಪರಿಗಣಿಸಲಾಗುತ್ತದೆ.
ಋಗ್ವೇದ ಕಾಲಕ್ಕೆ ಮಂತ್ರ ದೃಷ್ಟಾರತ್ವ ಮಿಗಿಲಾದರೆ, ಪುರಾಣಗಳಲ್ಲಿ ದೀರ್ಘಾಯುಷ್ಯ, ದಿವ್ಯಜ್ಞಾನ, ಶಾಪ – ಅನುಗ್ರಹ ಶಕ್ತಿಯನ್ನು ಋಷಿ ಲಕ್ಷಣಕ್ಕೆ ಪರಿಗಣಿಸಲಾಯಿತು.
ಆಧುನಿಕ ಕಾಲದಲ್ಲಿ ಸಾತ್ವಿಕತೆ, ಅಪರೋಕ್ಷ ಜ್ಞಾನ, ಧರ್ಮ ತತ್ಪರತೆ,ಸತ್ಯ ನಿಷ್ಟೆ, ನಿರಪೇಕ್ಷತೆ, ಸಾಮಾಜಿಕ ಕಳಕಳಿ ಉಳ್ಳವರನ್ನು ಋಷಿ ಸದೃಶರು ಎಂದು ಹೇಳುವುದು ರೂಢಿಯಲ್ಲಿದೆ.
***
ಋಷಿ
ಗತ್ಯರ್ಥಕವಾಗಿದ್ದರೂ ಋಷಿ ಎಂಬ ಧಾತು ಜ್ಞಾನಾರ್ಥವಾಗಿದೆ, ಈ ಪದ ಶಾಸ್ತ್ರಜ್ಞಾನ, ಸತ್ಯ, ತಪಸ್ಸು ಎಂಬ ಅರ್ಥವನ್ನು ಕೊಡುತ್ತದೆ,
ಜ್ಞಾನ, ಸತ್ಯ, ತಪಸ್ಸು ಯಾರಲ್ಲಿ ಇರುತ್ತವೆಯೋ ಅವರೆಲ್ಲ ಋಷಿಗಳೇ,
ಸ್ವತಂತ್ರನಾದ ಭಗವಾನ್ ವಿಷ್ಣವನ್ನು ಅರಿತವರು, ಅರಿತದ್ದನ್ನು ಅನುಭವಿಸುತ್ತಲೇ ಸಮಾಜಕ್ಕೆ ನೀಡುವವರು ಇಂಥ ಋಷಿಗಳೇ.
ಬ್ರಹ್ಮದೇವರ ಮಾನಸ ಪುತ್ರರು ಮಹಾತ್ಮರೇ ಸರಿ, ಕಾರಣ ಸಮಸ್ತಗುಣಪೂರ್ಣ ಸ್ವತಂತ್ರನೆಂಬ ಸ್ಪಷ್ಟ ಜ್ಞಾನದಿಂದ ಅಹಂಭಾವ, ಅಜ್ಞಾನ ಬಿಟ್ಟವರಾಗಿದ್ದಾರೆ,
ಭೃಗು, ಮರೀಚಿ, ಅತ್ರಿ, ಅಂಗಿರಸ, ಪುಲಹ, ಕ್ರತು, ಮನು, ದಕ್ಷ, ವಸಿಷ್ಠ, ಪುಲಸ್ತ್ಯ ಈ ಹತ್ತು ಜನ ಋಷಿಗಳು ಲೋಕಪ್ರಸಿದ್ದರು, ಇವರು ಬ್ರಹ್ಮದೇವರ ಮಕ್ಕಳು ಕೂಡ ಹೌದು.
ಮಹರ್ಷಿಗಳು ಋಷಿಗಳ ಜ್ಞಾನದಿಂದ ಋಷಿಗಳಾಗುತ್ತಾರೆ, ಶುಕ್ರ, ಬೃಹಸ್ಪತಿ, ಕಶ್ಯಪ, ಉಪನಶ, ಉತಥ್ಯ, ವಾಮದೇವ, ಆಪೋಜ್ಯ, ಐಶಿಜ, ಕರ್ದಮ, ವಿಶ್ರವಸ್ಸು ಶಕ್ತಿ, ವಾಲಿಖಿಲ್ಯ, ಧರ, ಎಂಬುದಾಗಿ ಮಹರ್ಷಿಗಳು.
ಋಷಿಗಳ ಮಕ್ಕಳು ಋಷಿಕರು
ವತ್ಸರ, ನಗ್ರಹೂ, ಭಾರದ್ವಾಜ, ಬೃಹದುತ್ಥ, ಶರದ್ವಂತ, ವಾಜಶ್ರವಸ, ಸುಮಿತ್ತ, ಸುವಾಕ್ಕು, ವೇಷಪರಾಯಣ, ದಧಿಚಿ, ಶಂಖಮಂತ, ವೈ ಶ್ರವಣ ಮೊದಲಾದವರು.
ಯಾವ ಋಷಿಗಳಿಂದ ಮಂತ್ರಗಳು ವ್ಯಕ್ತಗಳಾಗಿವೆಯೋ ಅವರೆಲ್ಲ ಮಂತ್ರದ್ರಷ್ಟೃರು , ಭೃಗು, ಕಾವ್ಯ, ಪ್ರಚೇತಸ, ದಧೀಚಿ, ಔರ್ವ, ಜಮದಗ್ನಿ, ವಿದ, ಸಾರಸ್ವತ, ಆರ್ಟಿಷೇಣ, ಅರೂಪ, ವೀತಹವ್ಯ, ಸುಮೇಧಸ, ವೈನ್ಯ, ಪೃಥು, ದಿವೋದಾಸ, ಪ್ರಶ್ವಾರ, ಗೃತ್ಸಮದ, ನಭ,
ಇವರೆಲ್ಲ ಮಂತ್ರದೃಷ್ಟೃರು, ಇವರಿಂದಲೇ ಮಂತ್ರಗಳು ವ್ಯಕ್ತವಾಗಿವೆ,
ಆಂಗಿರಸರ ವಂಶದವರಾದ
ಆಂಗಿರಸ, ವೇದಸ, ಭಾರದ್ವಜ, ಬಾಷ್ಕಲಿ, ಅಮೃತ,ಗಾರ್ಗ್ಯ, ಶೇನೀ, ಸಂಹೃತಿ, ಪುರು, ಕುತ್ಸ, ಮಾಂಧಾತ, ಅಂಬರೀಷ, ಆಹಾರ್ಯ, ಅಜಮೀಢ, ಋಷಭ, ಬಲಿ, ಪೃಷದಶ್ವ, ವಿರೂಪ, ಕಣ್ವ, ಮುದ್ಗಲ, ಯುವನಾಶ್ವ, ಪೌರಕುತ್ಸ, ತ್ರಸದಸ್ಯು, ದಸ್ಯುವಂತ, ಉತಥ್ಯ, ಭರದ್ವಾಜ, ವಾಜಶ್ರವಸ್ಸು, ಆಯೂದ್ಯ, ಸುವಿತ್ತಿ, ವಾಮದೇವ, ಔಗಜ, ಬೃಹದುಕ್ಥ, ದೀರ್ಘತಮಸ್ಸು, ಕಕ್ಷೀವಂತ, ಇವರೆಲ್ಲರೂ ಮಂತ್ರದ್ರಷ್ಟೃರು.
ಕಾಶ್ಯಪ, ವತ್ಸಾರ, ಬಭ್ರಮ, ರೈಭ್ಯ, - ಅಸಿತ, ದೇವಲ ಇವರು ಬ್ರಹ್ಮವಾದಿಗಳು,,
ಅತ್ರಿಗೋತ್ರದವರಾದ ಅತ್ರಿ, ಅರ್ಚಿಸನ, ಶ್ಯಾಮಾವಂತ, ನಿಷ್ಠುರ, ವಲ್ಗೂತಕ, ಮುನಿ, ಪೂರ್ವತಿಥಿ, ಇವರು ಮಹಾಜ್ಞಾನಿಗಳು, ಮಂತ್ರದ್ರಷ್ಟೃರು .
ಸತ್ಯಧರ್ಮಸ್ಥಾಪಕರು, ಅಧರ್ಮಧ್ವಂಸಕರಾದ ಸರ್ವಶಾಖಾಪ್ರವರ್ತಕರಾದವರು ವಸಿಷ್ಠ, ಶಕ್ತಿ, ಪರಾಶರ, ಇಂದ್ರಪ್ರಮತಿ, ಭರದ್ವಸು, ಮೈತ್ರಾವರುಣ, ಕುಂಡಿನ, ಸುದ್ಯುಮ್ನ, ಬೃಹಸ್ಪತಿ, ಭರದ್ವಾಜ. ಇವರೆಲ್ಲ ಮಂತ್ರಬ್ರಾಹ್ಮಣಕಾರಕರು.
ಯಾರು ವಾಕ್ಯಾರ್ಥ ಮಾಡುತ್ತಾ ವಿವರಣೆ ಕೊಡುವರೊ ಅವರೆಲ್ಲ ಆಚಾರ್ಯಪುರುಷರು ,
ದೋಷರಹಿತವಾದ ಮಾತನ್ನು ಆಡುವವರೇ ಮಹಾತ್ಮರು .
ಭೂಮಿಯೊಳು ವರದೇಶವಿಠಲನ ನಿಜಭಕ್ತಸ್ತೋಮಕ್ಕೆ ಶಿರಬಾಗಿ ನಮಿಸುವೆ||
:- ಸಂತೆಕೆಲ್ಲೂರ ಶೇಷು
***
No comments:
Post a Comment