Why are Veda mantras chanted in Sanskrit only ? Why not translate into Tamil / Marathi and chanted ? A beautiful explanation Sri T Sadagopan Iyengar Physics IIT retiree answers:
I am of the firm belief that science and reality are not different at all.
I do a little bit of research, whenever I get the chance to confirm this.
Recently I attended a Srardham at a relative’s house. That relative has some revolutionary thoughts (he thinks so).
He was translating all the Veda mantras recited by the Shastri into Tamil, instead of repeating in Sanskrit :
‘After wearing the Sacred Thread, I sat on the Darbha and took one, two, three, four spoons of ghee’.
Instead of chanting in Sanskrit, he was chanting the Tamil translation of the Mantra.
Shastri did not like this at all. He told him- ‘Don’t chant that in Tamil. It can only be chanted in Sanskrit. '
‘Why ? Doesn’t God understand other languages like Tamil ?
provokingly Laughed Puratchi.
I had to open my mouth as I was idle for so long like Vikraman who broke his silence, while Bethal Provoked.
( Vikram-Bethal stories)
‘What you are talking about is only audible for the person sitting opposite to you. On a Radio or on TV channels, your speech can be heard thousands of miles away. Why? '
‘Electro Magnetic Waves’
‘So what does that mean ?’
I asked
"Changing to Specific frequency", he replied
Well , there are some frequencies which a human being can listen to, some frequencies are irritating, some may even cause ear damage, some Ragas have the ability to heal specific diseases. What’s so significant about these ? ”
'what does it mean ?'
‘The effects vary vastly depending on the frequency of sound waves we produce. Is that right ? '
Yes'
Say Darbe Asinaha with a mike connected to an oscilloscope. Then say in English-
‘I sat on the bench’.
Will the Wave Form on the Oscilloscope be the same for both ? '
‘Will not be’
‘Sanskrit mantras are rhymed to create certain specific vibrations in the ambient atmosphere for a particular cause & will create the corresponding effect’
‘Well what do you say now ?’
Sanskrit Mantras are uttered not for just translation or simple Communication. Sanskrit generates sound waves of specific frequency.
‘Is it not possible in Tamil ?’
‘Maybe, but not by its literal translation as it is. You have to form words which would also produce the same frequency of waves as Sanskrit generates, when you form a sentence in another language'
‘So ?’
‘Translating mantras is like drawing the Sun on a piece of paper. No matter how beautiful and realistic it is, the drawing of the Sun, does not give real light or real heat as the Sun.
*********
According to tradition, Vyasa is the compiler of the Vedas, who arranged the four kinds of mantras into four Samhitas. There are four Vedas: the Rigveda, the Yajurveda, the Samaveda and the Atharvaveda.
Each Veda has been subclassified into four major text types:
– the Samhitas (mantras and benedictions),
- the Aranyakas (text on rituals, ceremonies, sacrifices and symbolic-sacrifices),
- the Brahmanas(commentaries on rituals, ceremonies and sacrifices),
- the Upanishads (texts discussing meditation, philosophy and spiritual knowledge).
Some scholars add a fifth category – the Upasanas (worship).
*****
ವೇದವೆಂದರೇನು ?
ಪ್ರಶ್ನೆ:
ವೇದವೆಂದರೇನು ?
ಉತ್ತರ:
ವೇದವೆಂದರೆ ಜ್ಞಾನ.
ಪ್ರಶ್ನೆ:
ವೇದಜ್ಞಾನವನ್ನು ನೀಡಿದವರು ಯಾರು ?
ಉತ್ತರ:
ಸಾಕ್ಷಾತ್ ಭಗವಂತ
ಪ್ರಶ್ನೆ:
ಭಗವಂತ ವೇದಜ್ಞಾನವನ್ನು ಎಂದು ನೀಡಿದ ?
ಉತ್ತರ:
ಸೃಷ್ಟಿಯ ಆರಂಭದಲ್ಲೇ ಭಗವಂತ ವೇದಜ್ಞಾನವನ್ನು ನೀಡಿದ.
ಪ್ರಶ್ನೆ:
ಭಗವಂತ ವೇದಜ್ಞಾನವನ್ನೇಕೆ ನೀಡಿದ ?
ಉತ್ತರ:
ಮಾನವಕುಲದ ಒಳಿತಿಗಾಗಿ ನೀಡಿದ.
ಪ್ರಶ್ನೆ:
ವೇದಗಳೆಷ್ಟು?
ಉತ್ತರ:
ನಾಲ್ಕು
ಋಗ್ವೇದ
ಯಜುರ್ವೇದ
ಸಾಮವೇದ
ಅಥರ್ವವೇದ.
ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಯಾರಿಗೆ ನೀಡಿದ ?
ಉತ್ತರ:
ನಾಲ್ಕು ಋಷಿಗಳಿಗೆ.
ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಋಷಿಗಳಿಗೆ ಹೇಗೆ ನೀಡಿದ ?
ಉತ್ತರ:
ಯೋಗಾವಸ್ಥೆಯ ಸಮಾಧಿ ಸ್ಥಿತಿಯಲ್ಲಿ.
ಪ್ರಶ್ನೆ:
ವೇದಗಳಲ್ಲಿ ಎಂತಹ ಜ್ಞಾನವಿದೆ ?
ಉತ್ತರ:
ಎಲ್ಲ ಸತ್ಯ ವಿದ್ಯೆಗಳು, ಜ್ಞಾನ ಹಾಗೂ ವಿಜ್ಞಾನ
ಪ್ರಶ್ನೆ:
ವೇದಗಳ ಜ್ಞಾನವನ್ನು ಮೊದಲು ಪಡೆದವರು ಯಾರಾರು ?
ಉತ್ತರ:
ಅಗ್ನಿ-ಋಗ್ವೇದ
ವಾಯು-ಯಜುರ್ವೇದ
ಆದಿತ್ಯ-ಸಾಮವೇದ
ಅಂಗಿರಾ-ಅಥರ್ವವೇದ
ಪ್ರಶ್ನೆ:
ಋಗ್ವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
ಜ್ಞಾನ
ಪ್ರಶ್ನೆ:
ಯಜುರ್ವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
ಕರ್ಮ
ಪ್ರಶ್ನೆ:
ಸಾಮವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
ಉಪಾಸನೆ
ಪ್ರಶ್ನೆ:
ಅಥರ್ವವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
ವಿಜ್ಞಾನ
ಪ್ರಶ್ನೆ:
ವೇದವನ್ನು ಓದುವ ಅಧಿಕಾರ ಯಾರಿಗಿದೆ ?
ಉತ್ತರ:
ಉತ್ತಮ ಸಂಸ್ಕಾರ ಹಾಗೂ ಕಾಯಿಕ, ವಾಚಿಕ, ಮಾನಸಿಕ ಪರಿಶುದ್ಧಿಯಿರುವವರಿಗಷ್ಟೇ
ಪ್ರಶ್ನೆ:
ವೇದಗಳಲ್ಲಿ ಮೂರ್ತಿಪೂಜೆಯ ವಿಧಾನವಿದೆಯೇ ?
ಉತ್ತರ:
ಖಂಡಿತವಾಗಲೂ ಇಲ್ಲ.
ಪ್ರಶ್ನೆ:
ವೇದಗಳಲ್ಲಿ ಅವತಾರವಾದದ ಪ್ರಮಾಣವಿದೆಯೇ ?
ಉತ್ತರ:
ಇಲ್ಲ
ಪ್ರಶ್ನೆ:
ವೇದಗಳಲ್ಲಿ ಜಾತಿಪದ್ಧತಿಯನ್ನು ಹೇಳಲಾಗಿದೆಯೇ ?
ಉತ್ತರ:
ಎಲ್ಲೂ ಇಲ್ಲ.
ಪ್ರಶ್ನೆ:
ವೇದಗಳಲ್ಲಿ ಪ್ರಾಣಿಹತ್ಯೆಯನ್ನು ಸಮರ್ಥಿಸಲಾಗಿದೆಯೇ ?
ಉತ್ತರ:
ಖಂಡಿತಾ ಇಲ್ಲ.
ಪ್ರಶ್ನೆ:
ಅತಿದೊಡ್ಡ ವೇದ ಯಾವುದು ?
ಉತ್ತರ:
ಋಗ್ವೇದ
ಪ್ರಶ್ನೆ:
ವೇದಾರ್ಥವನ್ನು ಅರಿಯಲು ದರ್ಶನಶಾಸ್ತ್ರಗಳ ಅವಶ್ಯಯಕತೆಯಿದೆಯೇ ?
ಉತ್ತರ:
ಖಂಡಿತಾ ಇದೆ.
ಪ್ರಶ್ನೆ:
ದರ್ಶನ ಶಾಸ್ತ್ರಗಳೆಷ್ಟಿವೆ ? ಅವುಗಳ ಪ್ರವರ್ತಕರು ಯಾರು ?
ಉತ್ತರ: ಷಟ್ (ಆರು) ದರ್ಶನಗಳಿವ.
ಪ್ರಶ್ನೆ:
ವೇದವೆಂದರೇನು ?
ಉತ್ತರ:
ವೇದವೆಂದರೆ ಜ್ಞಾನ.
ಪ್ರಶ್ನೆ:
ವೇದಜ್ಞಾನವನ್ನು ನೀಡಿದವರು ಯಾರು ?
ಉತ್ತರ:
ಸಾಕ್ಷಾತ್ ಭಗವಂತ
ಪ್ರಶ್ನೆ:
ಭಗವಂತ ವೇದಜ್ಞಾನವನ್ನು ಎಂದು ನೀಡಿದ ?
ಉತ್ತರ:
ಸೃಷ್ಟಿಯ ಆರಂಭದಲ್ಲೇ ಭಗವಂತ ವೇದಜ್ಞಾನವನ್ನು ನೀಡಿದ.
ಪ್ರಶ್ನೆ:
ಭಗವಂತ ವೇದಜ್ಞಾನವನ್ನೇಕೆ ನೀಡಿದ ?
ಉತ್ತರ:
ಮಾನವಕುಲದ ಒಳಿತಿಗಾಗಿ ನೀಡಿದ.
ಪ್ರಶ್ನೆ:
ವೇದಗಳೆಷ್ಟು?
ಉತ್ತರ:
ನಾಲ್ಕು
ಋಗ್ವೇದ
ಯಜುರ್ವೇದ
ಸಾಮವೇದ
ಅಥರ್ವವೇದ.
ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಯಾರಿಗೆ ನೀಡಿದ ?
ಉತ್ತರ:
ನಾಲ್ಕು ಋಷಿಗಳಿಗೆ.
ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಋಷಿಗಳಿಗೆ ಹೇಗೆ ನೀಡಿದ ?
ಉತ್ತರ:
ಯೋಗಾವಸ್ಥೆಯ ಸಮಾಧಿ ಸ್ಥಿತಿಯಲ್ಲಿ.
ಪ್ರಶ್ನೆ:
ವೇದಗಳಲ್ಲಿ ಎಂತಹ ಜ್ಞಾನವಿದೆ ?
ಉತ್ತರ:
ಎಲ್ಲ ಸತ್ಯ ವಿದ್ಯೆಗಳು, ಜ್ಞಾನ ಹಾಗೂ ವಿಜ್ಞಾನ
ಪ್ರಶ್ನೆ:
ವೇದಗಳ ಜ್ಞಾನವನ್ನು ಮೊದಲು ಪಡೆದವರು ಯಾರಾರು ?
ಉತ್ತರ:
ಅಗ್ನಿ-ಋಗ್ವೇದ
ವಾಯು-ಯಜುರ್ವೇದ
ಆದಿತ್ಯ-ಸಾಮವೇದ
ಅಂಗಿರಾ-ಅಥರ್ವವೇದ
ಪ್ರಶ್ನೆ:
ಋಗ್ವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
ಜ್ಞಾನ
ಪ್ರಶ್ನೆ:
ಯಜುರ್ವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
ಕರ್ಮ
ಪ್ರಶ್ನೆ:
ಸಾಮವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
ಉಪಾಸನೆ
ಪ್ರಶ್ನೆ:
ಅಥರ್ವವೇದದ ಪ್ರಮುಖ ವಿಷಯ ಯಾವುದು ?
ಉತ್ತರ:
ವಿಜ್ಞಾನ
ಪ್ರಶ್ನೆ:
ವೇದವನ್ನು ಓದುವ ಅಧಿಕಾರ ಯಾರಿಗಿದೆ ?
ಉತ್ತರ:
ಉತ್ತಮ ಸಂಸ್ಕಾರ ಹಾಗೂ ಕಾಯಿಕ, ವಾಚಿಕ, ಮಾನಸಿಕ ಪರಿಶುದ್ಧಿಯಿರುವವರಿಗಷ್ಟೇ
ಪ್ರಶ್ನೆ:
ವೇದಗಳಲ್ಲಿ ಮೂರ್ತಿಪೂಜೆಯ ವಿಧಾನವಿದೆಯೇ ?
ಉತ್ತರ:
ಖಂಡಿತವಾಗಲೂ ಇಲ್ಲ.
ಪ್ರಶ್ನೆ:
ವೇದಗಳಲ್ಲಿ ಅವತಾರವಾದದ ಪ್ರಮಾಣವಿದೆಯೇ ?
ಉತ್ತರ:
ಇಲ್ಲ
ಪ್ರಶ್ನೆ:
ವೇದಗಳಲ್ಲಿ ಜಾತಿಪದ್ಧತಿಯನ್ನು ಹೇಳಲಾಗಿದೆಯೇ ?
ಉತ್ತರ:
ಎಲ್ಲೂ ಇಲ್ಲ.
ಪ್ರಶ್ನೆ:
ವೇದಗಳಲ್ಲಿ ಪ್ರಾಣಿಹತ್ಯೆಯನ್ನು ಸಮರ್ಥಿಸಲಾಗಿದೆಯೇ ?
ಉತ್ತರ:
ಖಂಡಿತಾ ಇಲ್ಲ.
ಪ್ರಶ್ನೆ:
ಅತಿದೊಡ್ಡ ವೇದ ಯಾವುದು ?
ಉತ್ತರ:
ಋಗ್ವೇದ
ಪ್ರಶ್ನೆ:
ವೇದಾರ್ಥವನ್ನು ಅರಿಯಲು ದರ್ಶನಶಾಸ್ತ್ರಗಳ ಅವಶ್ಯಯಕತೆಯಿದೆಯೇ ?
ಉತ್ತರ:
ಖಂಡಿತಾ ಇದೆ.
ಪ್ರಶ್ನೆ:
ದರ್ಶನ ಶಾಸ್ತ್ರಗಳೆಷ್ಟಿವೆ ? ಅವುಗಳ ಪ್ರವರ್ತಕರು ಯಾರು ?
ಉತ್ತರ: ಷಟ್ (ಆರು) ದರ್ಶನಗಳಿವ.
ಪ್ರಶ್ನೆ:
ವೇದಗಳ ಇತಿಹಾಸವೆಷ್ಟಿರಬಹುದು ?
ಉತ್ತರ:
ಸುಮಾರು ೯೬ ಕೋಟಿ ವರ್ಷಕ್ಕಿಂತಲೂ ಮುಂಚೆ.
ಪ್ರಶ್ನೆ:
ವೇದಾರ್ಥವನ್ನು ಅರಿಯಲು ದರ್ಶನಶಾಸ್ತ್ರಗಳ ಅವಶ್ಯಯಕತೆಯಿದೆಯೇ ?
ಉತ್ತರ:
ಖಂಡಿತಾ ಇದೆ.
ಪ್ರಶ್ನೆ:
ದರ್ಶನ ಶಾಸ್ತ್ರಗಳೆಷ್ಟಿವೆ ? ಅವುಗಳ ಪ್ರವರ್ತಕರು ಯಾರು ?
ಉತ್ತರ:
ಷಟ್ (ಆರು) ದರ್ಶನಗಳಿವೆ.
ನ್ಯಾಯದರ್ಶನ-ಗೌತಮ ಮುನಿಗಳು
ವೈಶೇಷಿಕ ದರ್ಶನ- ಕಣಾದ ಮುನಿಗಳು
ಯೋಗದರ್ಶನ-ಪತಂಜಲಿ ಮುನಿಗಳು
ಮೀಮಾಂಸಾದರ್ಶನ- ಜೈಮಿನಿ ಮುನಿಗಳು
ಸಾಂಖ್ಯದರ್ಶನ*ಕಪಿಲ ಮುನಿಗಳು
ವೇದಾಂತದರ್ಶನ-ವ್ಯಾಸ ಮುನಿಗಳು
ಪ್ರಶ್ನೆ:
ದರ್ಶನಗಳಲ್ಲಿರುವ ವಿಷಯಗಳೇನು ?
ಉತ್ತರ: ಆತ್ಮಾ, ಪರಮಾತ್ಮಾ, ಪ್ರಕೃತಿ, ಜಗತ್ತಿನ ಉತ್ಪತ್ತಿ, ಮೋಕ್ಷ, ಭೌತಿಕ ಹಾಗೂ ಆಧ್ಯಾತ್ಮಿಕ ಜ್ಞಾನ ಮುಂತಾದವು.
ಪ್ರಶ್ನೆ:
ಪ್ರಾಮಾಣಿಕ ಉಪನಿಷತ್ತುಗಳೆಷ್ಟು ?
ಉತ್ತರ:
ಕೇವಲ ಹನ್ನೊಂದು.
ಪ್ರಶ್ನೆ:
ಉಪನಿಷತ್ತಿನ ಹೆಸರುಗಳು ?
ಉತ್ತರ:
ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ ಹಾಗೂ ಶ್ವೇತಾಶ್ವತರ
ಪ್ರಶ್ನೆ:
ಉಪನಿಷತ್ತುಗಳಲ್ಲಿರುವ ವಿಷಯಗಳ ಆಧಾರ ಯಾವುದು ?
ಉತ್ತರ:
ವೇದಗಳು
ಪ್ರಶ್ನೆ:
ವೇದಾಂಗಗಳೆಷ್ಟು ? ಅವು ಯಾವವು ?
ಉತ್ತರ:
ಆರು
ಅವು:
ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ ಹಾಗೂ ಕಲ್ಪ
ಪ್ರಶ್ನೆ:
ವೇದಾಂಗಗಳ ಪ್ರಯೋಜನವೇನು ?
ಉತ್ತರ:
ವೇದಾರ್ಥವನ್ನು ತಿಳಿಯಲು.
🌕ಲೋಕಾಃ ಸಮಸ್ತಾಃ ಸುಖಿನೋ ಭವಂತು.✋🤚
*****ino from ವೇದ ಪರಿಚಯ
ಶ್ರೀ ವೇದವ್ಯಾಸರಿಂದ ವಿಭಾಗಿಸಲ್ಪಟ್ಟ ನಾಲ್ಕು ವೇದಗಳು.ಆರು ಶಾಸ್ತ)ಗಳು.ಹದಿನೆಂಟು ಪುರಾಣಗಳು ಶ್ರೀಹರಿಯ ಸವೋ೯ತ್ತಮತ್ವವನ್ನು ಪ್ರತಿಪಾದಿಸುತ್ತವೆ.ತಮ್ಮ ಮುವತ್ತೇಳು ಸವ೯ಮೂಲ ಗ್ರಂಥಗಳಲ್ಲಿ ಶ್ರೀಮಧ್ವಾಚಾಯ೯ರ ಪ್ರತಿಪಾದನೆಯು ಇದೆ ಆಗಿದ್ದು.ಎಲ್ಲಾ ಗ್ರಂಥಗಳ ಪ್ರಾರಂಭ ಮತ್ತು ಮುಕ್ತಾಯವನ್ನು ಶ್ರೀಹರಿಯ ಸ್ತುತಿಯಿಂದಲೇ ಗೈದಿದ್ದಾರೆ.ಹರಿದಾಸರು ಶ್ರೀಹರಿಯಸವೋ೯ತ್ತಮತ್ವದ ಜೋತೆಗೆ ವಾಯುಜೀವೋತ್ತಮರೆನಿಸಿದ ಮಧ್ವಾಚಾಯ೯ರನ್ನು,ಅವರ ಹನುಮ ಭೀಮ ಮಧ್ವಾವತಾರಗಳನ್ನು ಸ್ತುತಿಸಿದ್ದಾರೆ.ಮಧ್ವಸಿದ್ದಾಂತದ ಪ್ರಕಾರ ಪರಮಾತ್ಮ ಸವ೯ಶಕ್ತ.ಸಕಲ ದೇವತೆಗಳಲ್ಲಿ ಆಯಾನಾಮವಾಚ್ಯನಾಗಿದ್ದು.ತಾನೇ ಅವರವರ ಕಾಯ೯ವನ್ನು ಗೈಯುವವ.ಶ್ರೀಹರಿ ಸಾಕಾರರೂಪಿ.ಅನಂತ ರೂಪಗಳಿಂದ ಅಭಿವ್ಯಕ್ತನಾಗುವವ.ಒಂದು ದೀಪದಿಂದಾ ಅನಂತ ದೀಪಗಳು ಬೆಳಗುವಂತೆ ಪರಮಾತ್ಮನ ಮೂಲರೂಪಕ್ಕೂ ಅವತಾರಗಳಿಗೂ ಶಕ್ತಯಲ್ಲಿ ವ್ಯತ್ಯಾಸವಿಲ್ಲಾ.ವೈಷಮ್ಯ ನೈಗು೯ಣ್ಯಗಳು ಆತನಲ್ಲಿಲ್ಲ.ತ್ರಿವಿಧ ಜೀವರ ಸಾತ್ವಿಕ,ರಾಜಸ,ತಾಮಸ ಸಾಧನೆಯಂತೆ ಗತಿ ನೀಡುತ್ತಾನೆಯೇ ಹೊರತು ಯಾರಲ್ಲಿಯೂ ಪಕ್ಷಪಾತ ಅಥವಾ ದ್ವೇಷವಿಲ್ಲಾ.ಪರಮಾತ್ಮ ಮೋಕ್ಷ ಪ್ರದಾತ.
ಮೋದಭರಿತ ಕೇಶವನೇ ಈ ಜಗಕಾದಿಕತ೯ನೆಂಬುದು ಖರೆ ಸಾಧಿಸಿಕೋಂಬುವ ವಿಭುದರ ಕೈವಶವಾಗುತಿಪ್ಪನೆಂಬುದು ಖರೆ.//
"ಹರಿಯೇ ಪರತರ ಪರಮ ದೇವ ದೇವಾ ಸಾರುತಿವೆ ವೇದ ಶ್ರುತಿಸ್ಮತಿ ಪುರಾಣಗಳು ".
*********
[9:17 AM, 12/20/2018] +91 99727 16812:
ಅವತೀರ್ಯ ಹರಿರ್ವೇದ|ವ್ಯಾಸರೂಪೇಣ ‘ವಾ ಗತೇಃ’ |
ಪರಾಗತಿಪ್ರದಾನಾರ್ಥಂ ಚತುರ್ವೇದಾನ್ ದದಾತಿ ನಃ || ೧೬ ||
ಶ್ರೀಹರಿಯು ಪ್ರತಿ ದ್ವಾಪರದಲ್ಲೂ ವೇದವ್ಯಾಸರೂಪದಿಂದ ಅವತರಿಸಿ, (ಲೋಕದ ಜೀವರಿಗೆ) ಮೋಕ್ಷವನ್ನೀಯುವುದಕ್ಕಾಗಿ ಸಾಧನರೂಪವಾದ ನಾಲ್ಕು ವೇದಗಳನ್ನು ನಮಗೆ ದಯಪಾಲಿಸುತ್ತಾನೆ. ವಷಟ್ಕಾರದ ಮೊದಲ ಅಕ್ಷರವು ‘ವಾ ಗತೇಃ’ ಎಂಬ ಧಾತುವಿನಂತೆ ಪರಗತಿಯನ್ನೀಯುವವನೆಂದರ್ಥ.
ವೈದಿಕಾನಾಂ ಪದಾನಾಂ ಚ ‘ವಾ ಗನ್ಧನಸ್ಯ’ ಚೇತ್ಯಪಿ |
ವಾಸನಾರ್ಥಂ ಪಞ್ಚಮಂ ಚ ಪುರಾಣಭಾರತೌ ಕೃತೌ || ೧೭ ||
ಇನ್ನು, ‘ವಾ ಗನ್ಧನಸ್ಯ’ ಎಂಬ ಧಾತುವಿನಂತೆ ಚತುರ್ವೇದಗಳ ಪದಗಳ ಅರ್ಥವಾಸನೆ / ವೇದಾರ್ಥದ ಸುಗಂಧ / ಅರ್ಥಸಂಸ್ಕಾರ ವನ್ನು ಜನಸಾಮಾನ್ಯರಿಗೆ ಉಂಟುಮಾಡಲು ಪಂಚಮವೇದವೆನಿಸಿದ ಮಹಾಭಾರತ ಹಾಗೂ ಅಷ್ಟಾದಶಪುರಾಣಗಳು ಆತನಿಂದಲೇ ವಿರಚಿಸಲ್ಪಟ್ಟವು.
ತೇಷಾಮರ್ಥಂ ವಿನಿರ್ಣೇತುಂ ಷಷ್ಠಂ ವೇದಾನ್ತಸೂತ್ರಕಮ್ |
ಪ್ರಾದದಾಚ್ಛಟ್ಚ ಶಾಸ್ತ್ರಾಣಿ ವಷಟ್ಕಾರ ಇತೀರಿತಃ || ೧೮ ||
ಹೀಗೆ ೪ ವೇದಗಳು ಹಾಗೂ ಪಂಚಮವೇದವೆನಿಸಿದ ಭಾರತ-ಪುರಾಣಗಳ ಭಾವ / ತಾತ್ಪರ್ಯ / ಸಾರ ವನ್ನು “ಇದಮ್ ಇತ್ಥಮ್— ಇದು ಹೀಗೆಯೇ” ಎಂದು ನಿರ್ಣಯಿಸಲು ಷಷ್ಠ / ೬ನೆಯದಾದ ಬ್ರಹ್ಮಸೂತ್ರ / ಬ್ರಹ್ಮಮೀಮಾಂಸಾಸೂತ್ರ / ವೇದಾಂತಸೂತ್ರ ವನ್ನು ವೇದವ್ಯಾಸರೂಪೀ ಭಗವಂತನು ಲೋಕಕ್ಕೆ ಪ್ರದಾನಮಾಡಿದನು. ಹೀಗೆ, ವ — “ವಾ ಗತಿಗನ್ಧನಯೋಃ” ಎಂಬಂತೆ ಪರಾಗತಿಗಾಗಿ ವೇದಾರ್ಥಗಂಧವನ್ನರಿಯುವಂತೆ, ಷಟ್ — ೪ ವೇದಗಳು, ೫ನೆಯ ಭಾರತ-ಪುರಾಣಗಳು ಹಾಗೂ ೬ನೆಯದಾದ ಬ್ರಹ್ಮಸೂತ್ರಗಳು— ಎಂಬ ೬ ಶಾಸ್ತ್ರಗಳನ್ನು, ಕಾರಃ — (“ಕರೋತೀತಿ ಕಾರಃ” ಎಂಬಂತೆ) ವಿರಚಿಸಿರುವುದರಿಂದ ಮಹಾವಿಷ್ಣುವು ವಷಟ್ಕಾರ ನೆನಿಸಿರುವನು.
********
90. ಜಗತ್ ಸೃಷ್ಟಿಯ ಬಗ್ಗೆ ವೇದಗಳಲ್ಲಿ ಉಲ್ಲೇಖಗಳು ಏನಿವೆ?
#ವೇದಪರಿಚಯ
(ಮುಂದುವರೆದುದು)
ಹಾಗೆ ಜಗತ್ತಿನ ಆವಿರ್ಭಾವವನ್ನು ಕುರಿತಂತೆ ನಡೆಸಲಾದ ಚಿಂತನೆಯ ಹರಹುಗಳು ಪ್ರಸಿದ್ಧ ನಾಸದಾಸೀನ್ನೋ.. ಎಂದು ಆರಂಭವಾಗುವ, ಆ ಕಾರಣದಿಂದಲೇ ಹೆಸರಾಗಿರುವ “ನಾಸದೀಯ ಸೂಕ್ತ”ದಲ್ಲಿ ಕಾಣಬರುತ್ತವೆ. ವೇದ ವಾಜ್ಞ್ಮಯದಲ್ಲಿ ಅತ್ಯಂತ ಪ್ರಸಿದ್ಧವೂ, ಜನಪ್ರಿಯವೂ ಆದ ಈ ಕಿರುಸೂಕ್ತ ಬೃಹತ್ ತತ್ತ್ವವನ್ನು ಪ್ರತಿಪಾದಿಸುತ್ತದೆ. ಇದಲ್ಲದೆ ಹಿರಣ್ಯಗರ್ಭಸೂಕ್ತ, ವಿಶ್ವಕರ್ಮ ಸೂಕ್ತ, ಪುರುಷ ಸೂಕ್ತ, ಪ್ರಜಾಪತಿ ಸೂಕ್ತ, ಅಸ್ಯವಾಮೀಯ ಸೂಕ್ತ ಇವೆಲ್ಲದರಲ್ಲೂ ಜಗತ್ ಸೃಷ್ಟಿಯ ಪ್ರಸ್ತಾಪಗಳಿವೆ.
ಋಗ್ವೇದದ ಹತ್ತನೆಯ ಮಂಡಲದಲ್ಲಿ ಉಕ್ತವಾಗಿರುವ ಒಂದುನೂರ ಇಪ್ಪತ್ತೊಂಬತ್ತನೆಯ ಸೂಕ್ತದಲ್ಲಿ ಪರತತ್ತ್ವಾನ್ವೇಷಣೆಯಲ್ಲಿ ತೊಡಗಿ ತನ್ನ ಚಿಂತನೆಗಳಲ್ಲಿ ನ ಅಸತ್ ಇತ್ಯಾದಿ ನಿಷೇಧ ರೂಪದಿಂದ ಪ್ರಾರಂಭವಾಗಿದೆ. ಏಕೈಕವಾಗಿರುವ ಪರಾತ್ಪರ ವಸ್ತುವೇ ತತ್ತ್ವವಾಗಿದ್ದಿರಬಹುದೆಂಬ ನಂಬಿಕೆಯನ್ನು ಈ ಸೂಕ್ತ ಕಡೆಯ ಭಾಗಗಳಲ್ಲಿ ವ್ಯಕ್ತಪಡಿಸುತ್ತದೆ. ಪ್ರಜಾಪತಿ ಪರಮೇಷ್ಠಿಯೇ ಈ ಸೂಕ್ತಕ್ಕೆ ದ್ರಷ್ಟಾರನೆನ್ನಲಾಗಿದೆ. ಇದರಲ್ಲಿ ಆಕಾಶಾದಿಗಳ ಮತ್ತು ಸೃಷ್ಟಿ ಪ್ರಳಯ ಮುಂತಾದವುಗಳ ವಿಚಾರವಿರುವುದರಿಂದ ಅವುಗಳ ಕರ್ತೃವಾದ ಪರಮಾತ್ಮನೇ ದೇವತೆಯೆಂದು ಸಾಯಣ ಭಾಷ್ಯದಲ್ಲಿ ವಿವರಣೆ ಇದೆ.
ಜಗತ್ ಸೃಷ್ಟಿಯ ಮುನ್ನ ಏನೂ ಇರದ ಕಾರಣಕ್ಕೆ ಸೃಷ್ಟಿಯ ಅಗತ್ಯ ಕಾಣಿಸಿತಲ್ಲವೆ. ಹಾಗಾಗಿ ಏನೂ ಇರದಿದ್ದ ಸ್ಥಿತಿಯಲ್ಲಿ ಚಿಂತಿಸಿರುವ, ಇರಲಿಲ್ಲ, ಇರಲಿಲ್ಲ ಎಂದರೆ ನಾ ಆಸೀತ್, ಎಂದಿರುವ ಕಾರಣಕ್ಕೆ ಅದನ್ನು ನಾಸದೀಯ ಸೂಕ್ತ ಎಂದು ಕರೆಯಲಾಗಿದೆ. ಇದು ದಿನನಿತ್ಯದ ಪೂಜಾದಿಗಳಲ್ಲೋ, ಹೋಮ-ಹವನಗಳಲ್ಲಿ ಎಲ್ಲಿಯೂ ಬಳಸಲಾಗಿಲ್ಲವಾದ್ದರಿಂದ ವೈದಿಕರು ಇದರ ಬಗ್ಗೆ ಚಿಂತಿಸಿದ್ದು ಕಡಿಮೆಯೇ ಎನ್ನಬಹುದು.
ವಿಜ್ಞಾನಿಗಳು ಇದರ ಬಗ್ಗೆ ಆಸಕ್ತಿ ತೋರಿದ್ದರೆ, ಅದು ಸಕಾರಣವಾಗಿ ಎನ್ನಬಹುದು. ಆದರೆ ಅವರ ಅಭಿವ್ಯಕ್ತಿ ಹೆಚ್ಚಾಗಿ ಎಲ್ಲೂ ಚರ್ಚಿತವಾದಂತಿಲ್ಲ. ಈ ಸೂಕ್ತದ ಸೌಂದರ್ಯವನ್ನು ಸವಿಯಲು ಕವಿ ಹೃದಯ ಇರಬೇಕಾದಂತೆಯೇ, ವಿಜ್ಞಾನಿಯ ನಿಶಿತಮತಿಯೂ ಅಗತ್ಯವಾಗುತ್ತದೆ. ನಮ್ಮ ದೊಡ್ಡ ಕೊರತೆಯೆಂದರೆ, ವಿಜ್ಞಾನಿಗಳಿಗೆ ಸಂಸ್ಕೃತದಲ್ಲಿ ಆಸಕ್ತಿಯಿಲ್ಲ, ವೈದಿಕರಿಗೆ ವಿಜ್ಞಾನದ ವಿವರಣೆಗಳು ಅರ್ಥವಾಗುವುದಿಲ್ಲ. ವೇದ ಮತ್ತು ಇತರ ಭಾರತೀಯ ಸಾಹಿತ್ಯದಲ್ಲಿ ವೈಜ್ಞಾನಿಕ ಹೊಳಹುಗಳು ಇಲ್ಲವೆನ್ನಲಾಗದು. ಅವುಗಳ ಬೆನ್ನುಬಿದ್ದು ಹೊರಟರೆ ಜೀವನ ನಡೆಯದು ಎಂಬ ಕಾರಣಕ್ಕಾಗಿ ಅವು ಹಿಂದುಳಿದಿದವೆ ಎನ್ನುವುದೇ ವಾಸ್ತವ.
ಇಲ್ಲಿ ಜಗತ್ಕಾರಣವಾದ ವಸ್ತುವು ಏನು ಎಂಬ ಬಗ್ಗೆ ಚಿಂತನೆ ಹರಿದಿದೆ. ಈ ವಸ್ತುವು ಇತ್ತೇ ಎಂದು ಕೇಳಿದರೆ ಇರಲೂ ಇಲ್ಲ, ಇಲ್ಲದೆಯೂ ಇರಲಿಲ್ಲ. ಇದೊಂದು ಸುತ್ತುಬಳಸಿನ ಹೇಳಿಕೆಯಂತೆ ತೋರುತ್ತದೆ. ಇದನ್ನು ಕೇವಲ ವಾಗಾಡಂಬರವೆಂದು ಲಘುವಾಗಿ ಕಾಣಲಾಗದು. ಆದರೆ ವಸ್ತುಸ್ಥಿತಿ ಹಾಗಲ್ಲ. ಏನೂ ಇಲ್ಲದ ಬಗ್ಗೆ ಚಿಂತಿಸುವ ಯಾರಿಗೂ ಇವೆಲ್ಲ ಹೀಗೆಯೇ ತೋರಬಹುದು. ಅದನ್ನೇ ವಿವರಣಾತ್ಮಕವಾಗಿ ನಾಸದೀಯ ಸೂಕ್ತದಲ್ಲಿ ಹೇಳಲಾಗಿದೆ.
ಅನೇಕ ದೇವತೆಗಳ ಆರಾಧನೆಯಲ್ಲಿ ಆಸಕ್ತಿಯನ್ನು ತೋರಿಸಿದ ಋಗ್ವೇದವು ಕ್ರಮೇಣ ಏಕದೇವತಾವಾದದ ಮೂಲಕ ಏಕತತ್ತಾನ್ವೇಷಣೆಯಲ್ಲಿ ತೊಡಗಿಕೊಂಡದ್ದರ ಸೂಚಕವಾಗಿ ನಾಸದೀಯ ಸೂಕ್ತವನ್ನು ಉಲ್ಲೇಖಿಸುವುದುಂಟು. ಮುಂದೆ ಉಪನಿಷತ್ತುಗಳಲ್ಲಿ ಎಲ್ಲ ವಿಶ್ವವೂ ಒಂದೇ ಒಂದು ಮೂಲದಿಂದ ಆರಂಭಗೊಂಡಿತೆಂದು ಪ್ರತಿಪಾದಿಸುವ ವಾದಗಳಿವೆ.
ಆದರೆ ವಿಶ್ವಾತೀತವೂ ವ್ಯಕ್ತ್ಯತೀತವೂ ಆದ ಒಂದು ಆಧ್ಯಾತ್ಮಿಕ ತತ್ತ್ವದ ಅನ್ವೇಷಣೆಯ ರೂಪದಲ್ಲಿ ಆ ವಾದದ ಬೇರುಗಳು ಈ ಸೂಕ್ತದಲ್ಲಿ ಕಂಡುಬರುತ್ತವೆ. ಆದ್ದರಿಂದ ಇದು ಭಾರತೀಯ ತತ್ತ್ವ ಚಿಂತನೆಯಲ್ಲಿ ಅತಿಶ್ರೇಷ್ಠವಾದುದೆಂಬು ಪರಿಗಣಿಸಲ್ಪಡುತ್ತದೆ. ನೈಜ ವಿಶ್ವ ಸಾಹಿತ್ಯವೆಂದರೆ ಇಂಥ ಚಿಂತನೆಗಳನ್ನು ಒಳಗೊಂಡಿರಬೇಕು ಎನ್ನಲು ಇದು ಅತ್ಯುತ್ತಮ ಉದಾಹರಣೆಯೂ ಹೌದು.
ವೇದಗಳಿಗೊಂದು ಪ್ರವೇಶ ದೊರಕಿಸುವ ಉದ್ದೇಶವಿರುವ ಈ ಮಾಲಿಕೆಯಲ್ಲಿ ಇಂಥ ಸೂಕ್ತ, ಮಂತ್ರಗಳ ಸ್ಥೂಲಾರ್ಥಗಳನ್ನು ಮಾತ್ರವೇ ಪರಿಚಯಿಸಲಾಗಿದೆ. ವಿಸ್ತೃತ ಅಧ್ಯಯನಕ್ಕೆ ಇದು ಆರಂಭಿಕ ಮೆಟ್ಟಿಲು ಎಂಬುದು ಆಶಯ. "ನಾಸದೀಯ ಸೂಕ್ತ"ದ ಸಂಕ್ಷಿಪ್ತ ಮಾಹಿತಿ ಮುಂದಿನ ಲೇಖನದಲ್ಲಿ ಬರಲಿದೆ.
ದ್ವಿಭಾಷಾಭಿಜ್ಞವದ್ವಿದ್ವಾನುಭೌ ಲೌಕಿಕವೈದಿಕೌ |
(ದ್ವಿ-ಭಾಷಾ-ಅಭಿಜ್ಞವತ್ ವಿದ್ವಾನ್ ಉಭೌ ಲೌಕಿಕ-ವೈದಿಕೌ)
೨ ಭಾಷೆಗಳನ್ನು ಬಲ್ಲವರಂತೆ, ಲೌಕಿಕಜೀವನ / ದೇಹಯಾತ್ರೆ / ಲೋಕವ್ಯವಹಾರ ಹಾಗೂ ಪಾರಮಾರ್ಥಿಕ ಅಥವಾ ಆಧ್ಯಾತ್ಮಿಕ ಜೀವನ / ಆತ್ಮಯಾತ್ರೆ / ಲೋಕಾತೀತವ್ಯವಹಾರ— ಇವೆರಡರಲ್ಲೂ ಸಾಧಕನು ಸಮನ್ವಯತೆ-ಸಾಮರಸ್ಯಗಳನ್ನು ತಂದುಕೊಂಡು, ಈ ೨ ಮಾರ್ಗಗಳಲ್ಲೂ ”ಯೋಗಃ ಕರ್ಮಸು ಕೌಶಲಮ್” ಎಂಬ ಗೀತಾಚಾರ್ಯೋಕ್ತಿಯಂತೆ ಕುಶಲತೆಯಿಂದ ಸಂಚರಿಸಿ, ಇಂದ್ರಿಯಗಳನ್ನು ಅತೀಂದ್ರಿಯಸುಖದೆಡೆಗೆ ತಲುಪಿಸುವ ಸಾಧನಗಳನ್ನಾಗಿ ಮಾಡಿಕೊಂಡು, ೪ ಪುರುಷಾರ್ಥಗಳನ್ನೂ ಸಾಧಿಸಬಹುದು.
ಈಶಾನಃ ಸರ್ವವಿದ್ಯಾನಾಂ; ಶಾಸ್ತ್ರಯೋನಿತ್ವಾತ್; ನಿಖಿಲ-ಕಲಾ-ಆದಿಗುರುಃ ನನರ್ತ |
ಸಕಲ ವೇದಪುರಾಣಶಾಸ್ತ್ರಾದಿಗಳ ಜನ್ಮಸ್ಥಾನವಾದುದರಿಂದಾಗಿ ಪರಮೇಶ್ವರ ಪರಮಾತ್ಮನು ಎಲ್ಲ ವಿದ್ಯೆಗಳ, ಎಲ್ಲ ಕಲೆಗಳ ಆದಿಗುರುವಾಗಿ, ನಟರಾಜನಾಗಿ ಪರಮಾನಂದದಿಂದ ಜಗತ್-ಸೃಷ್ಟಿನಾಟಕದಲ್ಲಿ ನರ್ತಿಸಿದನು (ನರ್ತಿಸುತ್ತಿರುವನು, ನರ್ತಿಸಲಿರುವನು). ಹೀಗಾಗಿ, ಇವೆಲ್ಲವೂ ಆತನನ್ನು ಕಾಣುವ ವಿಭಿನ್ನ ಪಥಗಳಾಗಿದ್ದು, ಇವೆಲ್ಲ ಮಾರ್ಗಗಳ ಮೂಲಕವೂ ಆತನ ಸಾನ್ನಿಧ್ಯವನ್ನು ಪಡೆಯಬಹುದು.
ನಿಮೇಷಾರ್ಧಂ ನ ತಿಷ್ಠನ್ತಿ ವೃತ್ತಿಂ ಬ್ರಹ್ಮಮಯೀಂ ವಿನಾ |
ಜ್ಞಾನಿಗಳು ತಮ್ಮ ಚಿತ್ತವೃತ್ತಿಗಳನ್ನು / ಯೋಚನಾತರಂಗಗಳನ್ನು ಪರಬ್ರಹ್ಮತತ್ತ್ವ / ಭಗವತ್ತತ್ತ್ವವಲ್ಲದೆ ಬೇರೆಡೆಗೆ ಅರೆಗಳಿಗೆಯೂ ಹೋಗಗೊಡಲಾರರು. ಅರ್ಥಾತ್, ಕೇವಲ ಪಾರಮಾರ್ಥಿಕವಾದ ಧ್ಯಾನಾದಿಗಳಲ್ಲದೆ, ಲೌಕಿಕವ್ಯವಹಾರದಲ್ಲೂ / ಪ್ರಪಂಚದಲ್ಲೂ ಆ ಭಗವದ್ಭಾವವನ್ನೇ ಸದಾ ಹೊಂದಿದ್ದು ಕುಶಲತೆಯಿಂದ ಕಾರ್ಯಶೀಲರಾಗಿರುವರು.
ಮಾತಾ ಚ ಪಾರ್ವತೀದೇವೀ ಪಿತಾ ದೇವೋ ಮಹೇಶ್ವರಃ |
ಬಾನ್ಧವಾಶ್ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್ ||
ಜಗನ್ಮಾತೆಯೇ ನನ್ನ ತಾಯಿ; ಲೋಕದ ತಂದೆಯಾದ ಪರಮೇಶ್ವರನೇ ನನ್ನ ಜನಕ. ಭಗವದ್ಭಕ್ತರೇ ನನ್ನ ಬಂಧು-ಬಾಂಧವರು; ಮೂರುಲೋಕಗಳೇ ನನ್ನ ದೇಶ— “ಅಯಂ ನಿಜಃ ಪರೋ ವೇತಿ ಗಣನಾ ಲಘುಚೇತಸಾಮ್ | ಉದಾರಚರಿತಾನಾಂ ತು ವಸುಧಾ ಏವ ಕುಟುಮ್ಬಕಮ್” ಎಂಬ ಸೂಕ್ತಿಯಂತೆ ಮಹಾತ್ಮರ ನಡವಳಿಕೆಯೇ ಹೀಗಿರುವುದು. ಸಂಕುಚಿತದೃಷ್ಟಿಯವರ “ಇವ ನಮ್ಮವ, ಇವ ಪರರವ” ಎಂಬ ಅಲ್ಪಬುದ್ಧಿಯು ವಿಶಾಲಹೃದಯಿಗಳೂ, ಉದಾರಬುದ್ಧಿಯವರೂ, ಸಂತರೂ, ಸಾಧು-ಸಜ್ಜನರೂ, ಸುಜ್ಞಾನಿಗಳೂ ಆದವರಿಗಿರಲಾರದು. ಸರ್ವರ ಹಿತವೇ ಇಂಥವರ ಧ್ಯೇಯ. “ಸರ್ವೇ ಜನಾಸ್ಸುಖಿನೋ ಭವನ್ತು | ಲೋಕಾಸ್ಸಮಸ್ತಾಸ್ಸುಖಿನೋ ಭವನ್ತು ||” ಎಂಬೀ ಧ್ಯೇಯವು ವಿಶ್ವಮಾನವತೆಯ ಲಕ್ಷಣ.
ಛಂದಸ್ಸು
ಯಜುರ್ವೇದವು ಗದ್ಯಪ್ರಧಾನವಾದರೆ ಉಳಿದ ವೇದಗಳು ಪದ್ಯಮಯ. ಸಾಮಾನ್ಯವಾಗಿ ಗದ್ಯಕ್ಕೆ ಛಂದಸ್ಸು ಇಲ್ಲವೆಂದೇ ತಿಳಿಯಲಾಗುತ್ತದೆ. ಪ್ರಾಚೀನ ಆಚಾರ್ಯರ ಮತದಂತೆ ಗದ್ಯಕ್ಕೂ ಛಂದಸ್ಸಿದೆ. ನಿರುಕ್ತ ಭಾಷ್ಯಕಾರ ದುರ್ಗಾಚಾರ್ಯರು ಹೀಗೊಂದು ವಾಕ್ಯವನ್ನು ಉಚ್ಚರಿಸುತ್ತಾರೆ. 'ನಾಚ್ಛಂದಸಿ ವಾಗುಚ್ಚರತಿ ಇತಿ' ಛಂದಸ್ಸಿಲ್ಲದೆ ಮಾತೇ ಹೊರಡದು. ಆದ್ದರಿಂದ ವ್ಯಾಕರಾಣಾದಿಗಳಂತೆ ಛಂದಸ್ಸೂ ಒಂದು ವಿದ್ಯಾಸ್ಥಾನವಾಗಿದೆ. ವೇದಮಂತ್ರಗಳ ಸರಿಯಾದ ಉಚ್ಚಾರಣೆ ಗಾಗಿಯೂ, ಸರಿಯಾದ ಅರ್ಥವನ್ನು ತಿಳಿಯುವುದಕ್ಕಾಗಿಯೂ, ಛಂದಸ್ಸು ವಿನ ಜ್ಞಾನವು ಅನಿವಾರ್ಯ ವಾಗಿದೆ.
"ಛಂದಾಂಸಿ ಛಾದನಾತ್| ಅಥ ಛಂದಾಂಸಿ ಕಸ್ಮಾತ್? ಛಾದನಾತ್, ಯದೇಭಿರಾತ್ಮಾನಮಾಚ್ಛಾದಯನ್ದೇವಾ ಮೃತ್ಯೋರ್ಬಿಭ್ಯತ: ತಚ್ಛಂದಸಾಂ ಛಂದಸ್ವಂ ಇತಿ ವಿಜ್ಞಾಯತೇ"| ( ನಿರುಕ್ತ. ೭.೧೨)
ಆವರಿಸಿ, ಒಂದು ವ್ಯವಸ್ಥೆಯಲ್ಲಿ ಬಂಧಿಸಿಡುವುದರಿಂದ ಛಂದಸ್ಸು. ನಾಶ ಭಯದಿಂದ ದೇವತೆಗಳು (ವಿಷಯಗಳು, ತತ್ವಗಳು) ಈ ಆವರಣದ ಆಶ್ರಯ ಪಡೆದದ್ದರಿಂದ ಛಂದಸ್ಸು. ಹನ್ನೆರಡನೇ ಶತಮಾನದ ಕ್ಷೀರಸ್ವಾಮಿ ತಮ್ಮ ಕ್ಷೀರ ತರಂಗಿಣಿಯಲ್ಲಿ " ಛಂದಯತಿ ಆಹ್ಲಾದಯತೇ ಛಂದ:' (೩.೨.೨೦) ಸಂತೋಷ ವನ್ನುಂಟುಮಾಡುತ್ತದೆ, ಆದ್ದರಿಂದ ಛಂದಸ್ಸು ಎಂದಿದ್ದಾರೆ. ಋಕ್ ಸರ್ವಾನುಕ್ರಮಣಿಯಲ್ಲಿ ಛಂದಸ್ಸಿನ ಲಕ್ಷಣವನ್ನು "ಛಂದೋsಕ್ಷರ ಸಂಖ್ಯಾ ವ್ಯವಚ್ಛೇದಕಂ ಉಚ್ಯತೇ" (ಪೃಷ್ಠ.೧) ಅಕ್ಷರ ಸಂಖ್ಯೆಗಳ ನಿಯಾಮಕವೇ ಛಂದಸ್ಸು ಎಂದು ತಿಳಿಸುತ್ತಾರೆ. ಈ ಲಕ್ಷಣಗಳ ಮೂಲವನ್ನು ಈ ಋಗ್ವೇದ ಮಂತ್ರದಲ್ಲಿ ಕಾಣಬಹುದು.
"ಅಕ್ಷರೇಣ ಮಿಮತೇ ಸಪ್ತವಾಣೀ:" ( ಋಕ್. ೧.೧೬೪.೨೪) ವಾಣಿಯು ಏಳು ರೀತಿಗಳಲ್ಲಿ ಅಕ್ಷರಗಳಿಂದ ವ್ಯವಸ್ಥೆ ಗೊಳಿಸಲ್ಪಟಿದೆ.
ಸಾರಾಂಶ:- ಆಹ್ಲಾದವನ್ನು ಉಂಟು ಮಾಡುವ ಗತಿ, ವಿನ್ಯಾಸ, ಮಾತ್ರೆಗಳ ಮೂಲಕ ವರ್ಣಗಳನ್ನೂ ಅರ್ಥಗಳನ್ನೂ, ಹಿದಿಡಿಟ್ಟು ಆವರಿಸಿ ವ್ಯವಸ್ಥೆ ಗೊಳಿಸಿರುವುದೇ ಛಂದಶಾಸ್ತ್ರ. ಮಂತ್ರದ ಭಾವವನ್ನು ಸೂಕ್ತ ಲಯ, ಗತಿಗಳ ಮೂಲಕ ಹೊರಗೆಡಹಲೂ, ಛಂದಸ್ಸಿನ ವ್ಯವಸ್ಥೆ ಅನುಪಮವಾಗಿದೆ. ಅಕ್ಷರಗಳ ಸಂಖ್ಯೆ ನಿರ್ದಿಷ್ಟವಾಗಿರುವುದರಂದ.
92. ವಿಶ್ವಕರ್ಮ ಸೂಕ್ತ
(#ವೇದಪರಿಚಯ)
ವಿಶ್ವಕರ್ಮ ಎಂಬುದು ಈಗ ಒಂದು ಜನಾಂಗವಾಗಿ ಗುರುತಿಸಲ್ಪಡುತ್ತಿದ್ದರೂ, ಅದು ರಚನಾತ್ಮತೆಯ ಮೂಲದಿಂದ ದೂರ ಸರಿದಿಲ್ಲ ಎನ್ನುವುದು ತುಂಬ ಸಂತೋಷದ ಸಂಗತಿ. ಕಲೆಯ ಎಲ್ಲ ಪ್ರಾಕಾರಗಳಲ್ಲಿ ಇವರ ಕೊಡುಗೆಯಿದೆ. ಕಲಾತ್ಮಕತೆ, ನವಿರಾದ ಭಾವಗಳನ್ನು ವಿವಿಧ ಮಾಧ್ಯಮಗಳಲ್ಲಿ ತೋರುವ ನೈಪುಣ್ಯವಿರುವ ಈ ಜನಾಂಗವು ಜಗತ್ತಿಗೆ ಸೌಂದರ್ಯಪ್ರಜ್ಞೆಯನ್ನು ಪಸರಿಸುತ್ತಿದೆ. ಇಲ್ಲಿ ಪ್ರಸ್ತಾಪಿಸಿರುವ ವಿಶ್ವಕರ್ಮನು ಯಾವೊಂದು ಜನಾಂಗಕ್ಕೆ ಮಾತ್ರ ಸೀಮಿತವಾಗಿರುವಂತೆ ಇರದೇ, ಇಡೀ ಸೃಷ್ಟಿಯ ಸೌಂದರ್ಯಪ್ರಜ್ಞೆಯ ನಿರ್ಮಾಪಕನಾಗಿದ್ದಾನೆ. ಆತನ ಕುರಿತಾದ ಸೂಕ್ತದ ಸ್ಥೂಲ ವಿವರಣೆ ಇಲ್ಲಿದೆ.
ಬ್ರಹ್ಮವಸ್ತುವೇ ವಿಶ್ವಕರ್ಮ ಎಂದು ಒಪ್ಪುವುದು ಸರಳ ಮಾರ್ಗ. ಇದು ಇನ್ನಿತರ ದೇವತೆಗಳಿಗೂ ಅನ್ವಯಿಸುವುದು. ಏಕದೇವತಾ, ಬಹುದೇವತಾವಾದಗಳ ಬೆಳವಣಿಗೆ ನಡೆದುದು ಮುಂದೆ ಎಂದು ಭಾವಿಸಿದರೆ, ವಿಶ್ವಕರ್ಮ ಸೂಕ್ತದಲ್ಲಿ ಕಾಣುವ ಪ್ರಶ್ನೆಯ ಪರಿಭಾಷೆ ಈ ಹಿಂದೆ ಹೇಳಲಾದ ನಾಸದೀಯ, ಪುರುಷ ಸೂಕ್ತ, ಅಸ್ಯವಾಮೀಯ ಹೀಗೆ ಎಲ್ಲಕ್ಕೂ ಅನ್ವಯಿಸುವಂಥದೇ ಆಗಿದೆ. ಏಕೆಂದರೆ ಇಲ್ಲಿ ಚರ್ಚಿಸುತ್ತಿರುವ ವಿಷಯವು ಬ್ರಹ್ಮವಸ್ತುವನ್ನು ಕುರಿತಾದ್ದರಿಂದ ಅದು ವಿವಿಧ ಬಗೆಯಲ್ಲಿ ಕಾಣಿಸಿಕೊಳ್ಳುವುದು ಅಸಹಜ ಎಂದು ಅನ್ನಿಸುವುದಿಲ್ಲ.
ಹಾಗೆ ನೋಡುವಾಗ ಸೃಷ್ಟಿಯ ಅಗತ್ಯ ಕಂಡುಬಂದುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ವೇದಗಳು ನೀಡಿರುವ ಉತ್ತರವೆಂದರೆ - ಆಶೆ, ಬಯಕೆಗಳೇ. ಆಶೆಯಿಲ್ಲದ ಬದುಕೊಂದು ಬದುಕೇ. ಅದು ಜೀವನೋತ್ಸಾಹವನ್ನು ಕಾಪಿಟ್ಟುಕೊಳ್ಳಲು ನಿಸರ್ಗ ಮಾಡಿರುವ ಉಪಾಯ. ಅದರ ಪೂರ್ವರೂಪವಾಗಿ ವಿಶ್ವಕರ್ಮಸೂಕ್ತದಲ್ಲಿ ಅದರ ಹೊಳಹುಗಳು ಕಾಣುತ್ತವೆ.
ಅಂಥ ಒಂದು ಪ್ರಚೋದನಾತ್ಮಕತೆಯ ಕಾರಣದಿಂದಲೇ ಇಷ್ಟೆಲ್ಲ ಆವಿಷ್ಕಾರಗಳು ನಡೆದವು. ಅದ್ಭುತಗಳು ಸಾಧಿತವಾದವು. ಸೃಷ್ಟಿ-ವಿನಾಶಗಳ ಚಕ್ರ ತಿರುಗಿದ ರೀತಿ ಇದೇ ಕ್ರಮದಲ್ಲಿ. ಇದನ್ನು ವಿಶ್ವಕರ್ಮ ಸೂಕ್ತದಲ್ಲಿ ಸುಂದರವಾಗಿ ಕಟ್ಟಿಕೊಡಲಾಗಿದೆ. ಈತನ ಇನ್ನೊಂದು ವಿಶೇಷವೆಂದರೆ ಈತ ಋಷಿಯೂ ಹೌದು, ಯಜ್ಞಕರ್ತನೂ ಹೌದು. ಆತನೇ ಯಜ್ಞ ಮಾಡುವಾಗ ಅದಕ್ಕೆ ಬೇಕಿರುವ ಸಂಭಾರಗಳನ್ನೂ ಆತನೇ ಸೃಷ್ಟಿಸಿದನು. ಆತನೇ ತಂದೆಯಾಗಿರುವ ಜಗವನ್ನು ತನ್ನಲ್ಲಿಯೇ ಆಹುತಿ ನೀಡಿದನು. ಎಲ್ಲ ಜೀವಜಂತುಗಳಲ್ಲೂ ಅವನೇ ಸೇರಿಕೊಂಡದ್ದರಿಂದ ನಿರ್ಮಾತೃವೂ ಅವನೇ, ವಿನಾಶಕನೂ ಅವನೇ ಆಗಿದ್ದುದು ವಿಶೇಷವೇನಲ್ಲ. ಆದರೆ ಇಂಥವನೊಬ್ಬ ಇದ್ದಾಗ ಆತನು ನಿರ್ಮಿಸಿದ ಜಗತ್ತಿಗೆ ಅವನೇ ಸಾಮಗ್ರಿ, ಅವನೇ ಕೃತಿ. ಅದು ಪ್ರಶ್ನೋತ್ತರ ರೂಪದಲ್ಲಿರುವಂತೆ ಹೇಳಲಾಗಿದೆ.
ದೇವರು ಜಗತ್ತನ್ನು ಸೃಷ್ಟಿಸುವ ಮುನ್ನ ಅದಕ್ಕೆ ಯಾವ ಆಧಾರವಿದ್ದಿತು? ಆತನೊಬ್ಬನೇ ಇದ್ದನೆಂದು ಹೇಳುವಾಗ, ಅದು ಸಂಭವಿಸಿದ್ದಾದರೂ ಹೇಗೆ? ಆತ ಭೂಮಿಯನ್ನು ಮೊದಲು ಸೃಷ್ಟಿಸಿ ನಂತರ ದ್ಯುಲೋಕಗಳನ್ನು ಹೇಗೆ ನಿರ್ಮಿಸಿದನು? ಇವು ಇಂದಿಗೂ ಮೂಲಭೂತ ಪ್ರಶ್ನೆಗಳೇ. ಅದಕ್ಕೆ ನೀಡಿರುವ ಉತ್ತರಗಳನ್ನು ನೋಡಿದರೆ ಆತನೇ ನಿಮಿತ್ತನೂ, ಉತ್ಪನ್ನವೂ ಆತನದೇ, ಸ್ತ್ರೀ-ಪುರುಷರೆಂಬ ಭೇದವೂ ಇರಲಿಲ್ಲ. ಆತನೇ ಆದಿತ್ಯ, ವಾಯು ಮತ್ತು ಪರ್ಜನ್ಯನು ಎಂದಾಗ, ಶಕ್ತಿಯ ಉತ್ಪತ್ತಿಗೆ ಈ ಮೂಲಭೂತ ವಸ್ತುಗಳು ಕಾರಣವಾಗುತ್ತವೆಯಲ್ಲವೆ.
ಅದಿಲ್ಲದೆ ಸೃಷ್ಟಿ ಹೇಗೆ ತಾನೇ ಸಾಧ್ಯವಾದೀತೆಂಬ ಪ್ರಶ್ನೆಗೆ ಇದು ವಿಜ್ಞಾನ ಒಪ್ಪುವಂಥ ಉತ್ತರವೂ ಆಗಿದೆಯಲ್ಲವೆ. ತರ್ಕದ ಭಾವನೆಗಳಿಂದ ಏನನ್ನಾದರೂ, ಹೇಗಾದರೂ ಮಾಡಿ ಒಪ್ಪಿಸಬಹುದು ಎಂಬುದು ನಿಜವೇ. ಆದರೆ ವಾಸ್ತವವೂ ಇಲ್ಲಿ ಅದೇ ಆಗಿದೆಯಲ್ಲವೆ. ವಿಜ್ಞಾನದ ಅಳವಿಗೆ ಮೀರಿದ ಸಂಗತಿಗಳನ್ನು ವಿವೇಚಿಸಿರುವ ದೃಷ್ಟಿಕೋನ ಯಾರೂ ಮೆಚ್ಚುವಂಥದು. ಹಾಗಾಗಿ ಜಗತ್ ಸೃಷ್ಟಿಯನ್ನು ಕುರಿತಾದ ಭಾರತೀಯ ಚಿಂತನೆಗಳು ಎಂದಿಗೂ ಮಾನ್ಯವೇ ಸರಿ.
***
Why Veda mantrams are chanted in Sanskrit only ? Why not to translate into Tamil / Marathi , etc and chanted ? --- A beautiful explanation
Sri T Sadagopan Iyengar is a genius. Studied Physics at IIT and retired from IIT. I admire him for his simplicity and complex knowledge. Sharing a recent post of his--
Interesting response.
I am a firm believer that science and reality are not different.
I will do a little research whenever I get the chance to confirm it.
Recently I attended a Srarddham ceremony at a relative’s house. That relative has some revolutionary thoughts (he thinks). He was translating all the mantras recited by the Shastri into Tamil meaning....instead of repeating in Sanskrit like below.
‘After wearing the sacrament, I sat on the darba and took one, two, three, four spoons of ghee’. Etc.
And instead of Sanskrit he told it in Tamil meaning.
Shastri did not like this much. He told him ‘Don’t say that in Tamil. It can only be said in Sanskrit. '
‘Why? Doesn’t God understand other languages like Tamil? ’provokingly Laughed Puratchi (revolutionary)
I had to open my mouth as I was idle for so long like Vikraman who broke his silence while doing Betalam Provoke.
‘What you are talking about is only audible for the person sitting opposite to you. On a radio or TV station, your speech can be heard thousands of kilometers away. Why? '
‘Electro Magnetic Waves’
‘So what it means?’ I asked
‘Changing to Specific frequency...he replied
Well .. there are some frequencies to listen to, some are annoying, some may even cause ear damage, some ragas have the ability to prove the healing properties of the disease. What’s so significant about these? ”
'what does it mean?'
‘The effects vary depending on what kind of sound waves we make. Is that right? '
Yes'
Say ‘Darbe Swasinaha’ with a mic in an oscilloscope. Then say ‘I sat on the bench’. Will Wave Form be the same for both? '
‘Will not be’
‘Sanskrit mantras are set up knowing what kind of vibrations in the atmosphere in a particular case will create a worthy mood and corresponding effect’
‘Well what do you say now?’
Mantras uttered not for translation or Communication. Set for specific sound waves'
‘Is it not possible in Tamil?’
‘Yes, but not by its literal translationas it is. You have to form words which would mean and also produce the same waves as Sanskrit when you form another sentence '
‘So?’
‘Merely translating mantras is like the sun drawn on paper. No matter how beautiful and realistic it is, we can't get light or heat from that sun on the paper.
Simple translation of Sanskrit Mantrams are just like the Sun drawn on a paper. Nothing more.
Hope now we understand the underlying message.
*****
ದಲಿತರಿಗೆ ದೇವಾಲಯದ ಪ್ರೇವೇಶವಿಲ್ಲ, ಊರೊಳಗಿನ ಬಾವಿಯಲ್ಲಿ ನೀರು ಬಳಸುವಂತಿಲ್ಲ, ದೇವರ ಕೋಲು-ಕಡ್ಡಿ ಮುಟ್ಟುವಂತಿಲ್ಲ, ಖಾನಾವಳಿಯಲ್ಲಿ ಅವರಿಗೆ ಬೇರೆ ಲೋಟ-ತಟ್ಟೆ, ಇನ್ನೂ ಹಿಂದೆ ಉಗುಳಲು ಕುತ್ತಿಗೆಯಲ್ಲಿ ಚಿಪ್ಪು, ವೇದ ಓದುವಂತಿಲ್ಲ, ಓದಿದರೇ ನಾಲಿಗೆ ತುಂಡರಿಸಬೇಕು, ಕೇಳಿದರೇ ಕಿವಿಗೆ ಸೀಸ ಕಾಯಿಸಿ ಹುಯ್ಯಬೇಕು, ಇತ್ಯಾದಿ, ಇತ್ಯಾದಿ. ಇದಕ್ಕಾಗಿ ಹೋರಾಟ ನಡೆಯಲೇಬೇಕು. ಹಿಂದಿನಿಂದಲೂ ನಡೆದಿದೆ, ಇಂದಿಗೂ ಮಾಯ, ಮಮತಾ, ಲಾಲು, ಮುಲಾಯಂರಿಂದ ಹಿಡಿದು ಸಿದ್ದರಾಮಣ್ಣರವರೆಗೂ ಹೋರಾಟ ಮಾಡುತ್ತಲೇ ಇದ್ದಾರೆ? ಈ ಹೋರಾಟದ ಫಲ ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾಣುತ್ತಲೂ ಇದೆ, ಆದರೇ ಸಾಮಾಜಿಕ ಮತ್ತು ಪೂಜಾ ಪದ್ಧತಿಯಲ್ಲಿ ಯಾವ ವ್ಯತ್ಯಾಸವೂ ಆಗಿರುವುದಿಲ್ಲ. ಹಾಗಾದರೇ ಈ ವೈದಿಕರ ಮತ್ತು ಮನುವಾದಿಗಳ ವಿರುದ್ಧ ಇನ್ನು ಉಗ್ರ ಹೋರಾಟ ಮಾಡಬೇಕಿದೆ. ವೈದಿಕರು ಯಾರು? ಚತರ್ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದಗಳನ್ನು ನಂಬುವವರು ಮತ್ತು ಆಚರಣೆ ಮಾಡುವವರು. ಸರಿ, ವೇದ ಏನು ಹೇಳುತ್ತದೆ. ಯಜುರ್ವೇದ- 36-18 ರಲ್ಲಿ ಮಾನವರು- ಪ್ರಾಣಿಗಳು ಸಮಸ್ತ ಜೀವರು ಪರಸ್ಪರ ಮೈತ್ರೀ ಭಾವನೆಯಿಂದರಬೇಕು. (ಋ-10-53-06)= ಮನುರ್ಭವ= ಮನುಷ್ಯರಾಗಿ, ಯಜುರ್ವೇದ- 30-5= “ತಪಸೇ ಶೂದ್ರಂ”= ದ್ವಂದ್ವಸಹನದ(ತಪಸ್ಸಿನ) ಸ್ವಭಾವದವನೇ ಶೂದ್ರ. ಯಜು-30-7= “ತಪಸೇ ಕೌಲಾಲಂ”= ಶ್ರಮಸಾಧ್ಯವಾದ ಕೌಶಲ್ಯಯುಕ್ತ ಕಾರ್ಯಗಳನ್ನು ನಿರ್ವಹಿಸುವುದೇ ತಪಸ್ಸು. ಅಥರ್ವವೇದ- 2-11-1= “ ಓ ಶ್ರಮಸಹಿಷ್ಣು! ನೀನು ದೋಷಗಳನೆಲ್ಲಾ, ದೂರೀಕರಿಸುವನು, ಘಾತಕವಾದುದೆಲ್ಲವನ್ನು, ಘಾತಿಸುವವನು, ದೂರಕ್ಕೆಸೆಯುವಂತಹದನ್ನು, ದೂರತಳ್ಳುವವನಾಗಿದ್ದೀಯೆ. ಸ್ವಕರ್ಮನಿಷ್ಠನಾಗಿ ಶ್ರೇಯಸ್ಸನ್ನು ಪಡೆದುಕೊ, ಸಮನಾದವರನ್ನು ಮೀರಿ ಮುಂದೆ ಸಾಗು. [ಋಗ್ವೇದ- 5-60-5= ಈ ಮಾನವರು, ತಮಗಿಂತ ಉಚ್ಛರನ್ನು-ನೀಚರನ್ನು ಹೊಂದಿಲ್ಲ. ಇವರು ಪರಸ್ಪರ ಅಣ್ಣ-ತಮ್ಮಂದಿರು, ಸೌಭಾಗ್ಯಕ್ಕಾಗಿ ಮುನ್ನಡೆಯುವವರೂ ಆಗಿದ್ದಾರೆ. ಯಜುರ್ವೇದ-11-5= ಈ ದೇವನಿರ್ಮಿತ ನೆಲೆಯಲ್ಲಿ ವಾಸವಾಗಿರುವ, ಅಮರನಾದ ಪ್ರಭುವಿನ ಮಕ್ಕಳೆಲ್ಲರೂ ಆಲಿಸಿರಿ. ಅಥರ್ವವೇದ-3-30-6= ಮಾನವರೇ ನಿಮ್ಮ ಜಲಾಶಯವು, ಆಹಾರ ಭಾಗವೂ ಒಂದಿಗೆ ಇರಲಿ. ನಿಮ್ಮನೆಲ್ಲಾ ಸಮಾನವಾದ ಧರ್ಮನೊಗದಲ್ಲಿ ಹೂಡುತ್ತೇನೆ. ಋಗ್ವೇದ-10-135-1= ಸಬಲ ಮಾನವರೇ ಕೆಳಗೆ ಬಿದ್ದವನನ್ನು ಮೇಲಕೆತ್ತಿ. ಪಾಪಕರ್ಮದಲ್ಲಿ ನಿರತನಾದವನಿಗೆ ನವಜೀವನ ಕೊಡಿ. ಋಗ್ವೇದ-10-53-5= ಮಾನವರೇ, ನಿಮ್ಮಲ್ಲಿ ನಾಲ್ಕೂ ಸ್ವಭಾವದವರೂ ಮತ್ತು ಐದನೆಯ ಪಂಚಮನೂ ಸೇರಿದಂತೆ ಎಲ್ಲರೂ ಒಟ್ಟಾಗಿ ನನ್ನ ಆರಾಧನೆ ಮಾಡಿ. ವೇದಾದೇಶ ಹೀಗಿರುವಾಗ, ದೇವಾಲಯಗಳಲ್ಲಿ ಮೇಲೆ ಕಾಣಿಸಿರುವ ಕುರೀತಿಗಳ ಆಚರಣೆಗೆ ಅವಕಾಶವೇ ಇಲ್ಲ. ಹಾಗಾದರೇ ಇಂತಹ ಆಚರಣೆಯವರೆಲ್ಲಾ ವೈದಿಕರಲ್ಲ, ಇವರುಗಳು ಸಂಪ್ರದಾಯವಾದಿಗಳು, ರೂಡಿವಾದಿಗಳು, ಪೌರಾಣಿಕವಾದಿಗಳೆಂದು ಕರೆಯಬಹುದು. ಇನ್ನು ಮನುವಾದಿಗಳು ಯಾರು? ನೋಡೋಣ. ಮನು-2-28= ಅತ್ಯುತ್ತಮ ಕಾರ್ಯಗಳಿಂದ ಬ್ರಾಹ್ಮಣತ್ವ ಬರುವುದೇ ಹೊರತೂ ಕೇವಲ ಜನ್ಮದಿಂದ ಬ್ರಾಹ್ಮಣಶರೀರವಾಗಲಾರದು. ಮನು-7-152= ಸಮಸ್ತ ಕನ್ಯೆಯರನ್ನು, ಬಾಲಕರನ್ನು ನಿರ್ಧಿಷ್ಟ ಸಮಯಕ್ಕನುಸಾರವಾಗಿ ವಿದ್ಯಾವಂತರನ್ನಾಗಿ ಮಾಡುವುದು ರಾಜ್ಯಶಾಸನದ ಕಾರ್ಯವಾಗಿದೆ. ಮನು-10-65= ಗುಣ, ಕರ್ಮ, ಸ್ವಭಾವನುಸಾರ ಬ್ರಾಹ್ಮಣನು ಶೂದ್ರನು. ಹಾಗೆಯೇ ಶೂದ್ರನು ಬ್ರಾಹ್ಮಣನು ಆಗಬಲ್ಲರು. ಇತರ ವರ್ಣಗಳು ಸ್ವಭಾನುಸಾರ ಹೀಗೆಯೇ ಪರಿವರ್ತನೆಯಾಗಬಲ್ಲವು. ಮನು-7-128= ಹೇಗೆ ಕರು. ದುಂಬಿ ಸ್ವಲ್ಪ- ಸ್ವಲ್ಪ ಭೋಗ್ಯವಸ್ತುಗಳನ್ನು ಗ್ರಹಿಸುತ್ತವೋ, ಹಾಗೇ ರಾಜನು ಪ್ರಜೆಗಳಿಂದ ವಾರ್ಷಿಕ ಕರವನ್ನು ಸಂಗ್ರಹಿಸಬೇಕು. ಮನು-8-334 ರಿಂದ 338= ಅಪರಾಧಿಗೆ ಅಂಗಕ್ಕೆ ಅಂಗ, ಜೀವಕ್ಕೆ ಜೀವ ಕಸಿದುಕೊಳ್ಳುವ ಶಿಕ್ಷೆ ವಿಧಿಸಬೇಕು. ತಂದೆ, ಆಚಾರ್ಯ, ಸ್ನೇಹಿತ, ಪುತ್ರ, ಪುತ್ರೀ, ಪುರೋಹಿತನೇ ಆಗಿದ್ದರೂ ಪಕ್ಷಪಾತವಿಲ್ಲದೇ ನ್ಯಾಯ ನಿರ್ಣಯ ಮಾಡಬೇಕು. ಸಾಮಾನ್ಯ ಮಾನವನಿಗಿಂತ ಸರ್ಕಾರಿ ನೌಕರರಿಗೆ ಎಂಟುಪಟ್ಟು ಅಧಿಕ ದಂಡ, ಹೀಗೆಯೇ ಅಧಿಕಾರದ ಮೇಲೆ ದಂಡವು ಹೆಚ್ಚುತ್ತಾ, ಸರ್ವೋಚ್ಛ ಶಾಸಕನಿಗೆ ಸಾವಿರಪಟ್ಟು ಅಧಿಕ ದಂಡ ವಿಧಿಸಬೇಕು. ಹಾಗೆಯೇ ಕಳುವಾದ ವಸ್ತುವಿನ ಬೆಲೆಗಿಂತ ಎಂಟರಷ್ಟು ದಂಡ ಶೂದ್ರಸ್ವಭಾವದವನಿಗೂ, ವೈಶ್ಯ ಸ್ವಭಾವದವನಿಗೆ ಹದಿನಾರರಷ್ಟು, ಕ್ಷತ್ರೀಯ ಸ್ವಭಾವದವನಿಗೆ ಮುವತ್ತೆರಡರಷ್ಟು, ಬ್ರಾಹ್ಮಣ ಸ್ವಭಾವದವನಿಗೆ ಅರವತ್ತು ನಾಲ್ಕರಷ್ಟು ಅಥವಾ ನೂರರಷ್ಟು ಅಥವಾ ಅದಕ್ಕೂ ಅಧಿಕ ದಂಡ ವಿಧಿಸಬೇಕು. ಯಾರ ಜ್ಞಾನ, ಪ್ರತಿಷ್ಠೆ ಅಧಿಕವೋ ಅಷ್ಟು ಅಧಿಕ ದಂಡ. ಇದೆಲ್ಲಾ ನೋಡಿದರೇ ಮನುವಾದ ದೇಶದಲ್ಲಿ ಇರುವುದು ಕಂಡು ಬರುವುದಿಲ್ಲ. ಮನುವಾದಿಗಳು- ವೈದಿಕರೇ ದೇಶದಲ್ಲಿ ಇಲ್ಲದಿರುವಾಗ ನಾವು ಗಾಳಿಯಲ್ಲಿ ಗುದ್ದಾಡುತ್ತಿದ್ದೇವೆಯೇ? ಹೌದು, ಮೇಲೆ ಕಾಣಿಸಿದ ಕುಕರ್ಮಗಳು ವೇದ- ಮನುಸ್ಮೃತಿಯಲ್ಲಿ ಉಲ್ಲೇಖ ಇಲ್ಲದಿರುವಾಗ, ಈ ಆಚರಣೆಗಳನ್ನು ಮಾಡುತ್ತಿರುವವರು ಯಾರು? ಅವರ ವಿರುದ್ಧ ನಾವೇಕೆ ಹೋರಾಟ ಮಾಡುತ್ತಿಲ್ಲವೆಂದರೇ, ಆ ರೂಡಿವಾದಿಗಳು ಎಲ್ಲಾ ವರ್ಗಗಳಲ್ಲಿಯೂ, ಎಲ್ಲಾ ಕುಟುಂಬದಲ್ಲೂ ಹೀಗೆ ಎಲ್ಲರ ಮಧ್ಯೆಯೇ ಇದ್ದಾರೆ. ಇವರುಗಳು ಸರಿಯಾಗುವುದು ಹೇಗೆ? ಆದುದರಿಂದ ಯಾವ ದೇವಾಲಯದ ಹಣವು, ದೀನರನ್ನು- ಬಿದ್ದವರನ್ನು ಮೇಲೆತ್ತುವ ಕಾರ್ಯಕ್ಕೆ ಬಳಕೆಯಾಗುವುದಿಲ್ಲವೋ ಮತ್ತು ಯಾವ ದೇವಾಲಯದಲ್ಲಿ ಎಲ್ಲರನ್ನು ಸಮಾನರೆಂದು ಕಾಣುವುದಿಲ್ಲವೊ ಅಂತಹ ದೇವಾಲಯಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಮೊನ್ನೆ ಮುಂಬಾಯಿಯ ಗಣೇಶನಿಗೆ- ಐದು ಕಿಲೋ ಬೆಳ್ಳಿ, ಐದು ಕಿಲೋ ಚಿನ್ನ ಮತ್ತು ಐದು ಕೋಟಿ ಹಣ ಭಕ್ತಾದಿಗಳಿಂದ ಬಂದಿದೆ, ಮಧ್ಯಪ್ರದೇಶದ ಮಹಾಕಾಲ ಮಂದಿರಕ್ಕೆ ತೊಂಭತ್ತು ಕೋಟಿ ಆದಾಯ ಬಂದಿರುತ್ತದೆ. ಇದೆಲ್ಲಾ ಸಮಾಜಕ್ಕೆ ಬಳಕೆಯಾಗದಿದ್ದಲ್ಲಿ ಪ್ರಯೋಜನವೇನು? ಜನರು ತಮ್ಮ ತಮ್ಮ ಬಡಾವಣೆಯಲ್ಲಿ, ಗಲ್ಲಿಯಲ್ಲಿ ಪ್ರಾರ್ಥನಾ ಮಂದಿರಗಳನ್ನು ಮಾಡಿಕೊಂಡು ಸಮಾನ ಮನಸ್ಕರೊಂದಿಗೆ ಶಾಂತಿ- ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ.
***
***ವೇದದಲ್ಲಿ ಯಾವುದೇ ಪಶು ಹಿಂಸೆ, ಹತ್ಯೆ, ಭಕ್ಷಣೆ ಇಲ್ಲ***
ಈ ಕೆಳಗೆ ಮಂಡಿಸಿರುವ ವಿಷಯವು ಪೂರ್ಣವಾಗಿ ಹಾಗು ನಿಷ್ಪಕ್ಷಪಾತವಾಗಿ ವೇದಗಳು, ಅದರ ಅನ್ವಯ, ವ್ಯಾಕರಣ, ಭಾಷೆ ಮತ್ತು ಅದಕ್ಕೆ ಸಂಬಂಧಿಸಿದ ವೇದ ಮಂತ್ರಗಳ ಹಾಗು ಅದರ ಸರಿಯಾದ ಉದ್ದೇಶವನ್ನು ಆಧರಿಸಿದ್ದಾಗಿದೆ. ಆದ್ದರಿಂದ ಇದು ಮ್ಯಾಕ್ಸ್ ಮುಲ್ಲರ್, ಗ್ರಿಫ಼ತ್, ವಿಲ್ಸನ್, ವಿಲಿಯಂಸ್ ಮತ್ತು ಇನ್ನಿತರ ಭಾರತೀಯ ಅನ್ವೇಷಕರ ಅಭಿಪ್ರಾಯವನ್ನು ಕುರುಡಾಗಿ ಪ್ರತಿಬಿಂಬಿಸುತ್ತಿಲ್ಲ. ಇವರ ಅನ್ವೇಷಣೆಯು ಪಾಶ್ಚಾತ್ಯ ದೇಶದಲ್ಲಿ ಪ್ರಸಿದ್ಧಿ ಹೊಂದಿದ್ದರೂ ನಮಗೆ ಹಲವಾರು ಬಲವಾದ ಕಾರಣಗಳಿಂದ ಅವರ ಅನ್ವೇಷಣೆಯು ಕಪೋಲಕಲ್ಪಿತ ಹಾಗು ನ್ಯಾಯಯುತವಾಗಿಲ್ಲ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನಾವು ಹೆಚ್ಚಿನ ವಿಷಯವನ್ನು ಈ ವರದಿಯಲ್ಲಿ ವಿಮರ್ಷಿಸುತ್ತಿದ್ದೇವೆ.
ವೇದಗಳು – ಪ್ರಪಂಚದ ಮೊದಲನೆಯ ಜ್ಞಾನದ ಪುಸ್ತಕ. ನಮ್ಮ ಮೊದಲನೆ ಭಾಗವಾದ ವೇದಗಳಿಗೆ ಸಂಬಂಧಿಸಿದಂತ ತಪ್ಪು ಗ್ರಹಿಕೆಗಳ ವಿಮರ್ಷೆಗೆ ನಿಮಗೆ ಸ್ವಾಗತ.
ಭಾರತೀಯರ ಪವಿತ್ರ ಗ್ರಂಥವಾದ ವೇದವು ಶತಕಗಳಿಂದ ಹಲವಾರು ರೀತಿಯಲ್ಲಿ ಹಲವಾರು ಜನರಿಂದ ನಿಂದನೆಗೆ ಗುರಿಯಾಗಿದೆ. ಇವರ ತಪ್ಪು ಗ್ರಹಿಕೆಯಿಂದ ಬಹಳಾ ಅಪವಿತ್ರ ವಿಷಯಗಳನ್ನು ಸೇರಿಸಿ ಜನರನ್ನು ನಂಬಿಸುತ್ತಿದ್ದಾರೆ. ಇವರ ನಿಂದನೆಗಳನ್ನು ಪೂರ್ಣವಾಗಿ ನಂಬಿದರೆ ಹಿಂದುಗಳ ತತ್ವಜ್ಞಾನ, ಸಂಸ್ಕೃತಿ, ಪದ್ಧತಿ, ಕೇವಲ ಬರ್ಬರತೆ, ಅಸಭ್ಯತೆ, ಕ್ರೌರ್ಯತೆ ಹಾಗು ನರಭಕ್ಷತೆಗೆ ಮೀಸಲೆಂದು ಅನಿಸುತ್ತದೆ.
ಹಿಂದುಗಳ ಮೂಲ ಬೇರಾದ ವೇದವು, ಪ್ರಪಂಚದ ಜ್ಞಾನದ ಮೊದಲನೆಯ ಮೂಲಸ್ರೋತವಾಗಿದೆ. ಈ ವೇದಗಳು ಮನುಷ್ಯನ ಪರಮಾನಂದಕ್ಕೆ ಕೈಪಿಡಿಯಾಗಿದೆ. ಇದನ್ನು ಇಷ್ಟಪಡದ ಕೆಲವರು ವೇದಗಳ ಪಾವಿತ್ರ್ಯತೆಯನ್ನು ಹಾಳುಮಾಡುವ ಸಲುವಾಗಿ ಹುಚ್ಚುಹುಚ್ಚಾದ, ಅರ್ಥ ಗರ್ಭಿತವಲ್ಲದ ವಿಷಯಗಳಿಗೆ ವೇದಗಳೇ ಆಧಾರವೆಂದು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ.
ಇವರ ಈ ಪ್ರಯತ್ನದಿಂದ ಬಡವರು ಹಾಗು ಅನಕ್ಷರಸ್ಥರು ಭಾರತದ ಮೂಲ ಆಧಾರವಾದ ವೇದವು ಹೆಂಗಸರ ಮೇಲೆ ದೌರ್ಜನ್ಯ, ಮಂಸ ಭಕ್ಷಣೆ, ಬಹು ಪತ್ನಿತ್ವ, ಜಾತೀಯತೆ ಹಾಗು ಇದೆಲ್ಲಕ್ಕಿಂತ ಹೆಚ್ಚಾಗಿ ಗೋಮಾಂಸ ಭಕ್ಷಣೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಅರ್ಥೈಸಿಕೊಳ್ಳುತ್ತಾರೆ.
ಯಜ್ಞಗಳಂತಹ ಇತರೆ ಉತ್ಸವಗಳಲ್ಲಿ ಪ್ರಾಣಿಗಳನ್ನು ಬಲಿದಾನ ಮಾಡಲು ವೇದಗಳು ಪ್ರೋತ್ಸಾಹಿಸುವುದು ಎಂಬ ಆಪಾದನೆಗೆ ವೇದಗಳು ಗುರಿಯಾಗಿವೆ. ವಿದೇಶಿಯರಷ್ಟೆ ಅಲ್ಲ, ನಮ್ಮ ದೇಶದ ಎಷ್ಟೋ ಬುದ್ಧಿಜೀವಿಗಳು ಈ ಹಿಂದೆ ಉಲ್ಲೇಖಿಸಿದ ವಿದೇಶಿ ಅನ್ವೇಷಕರ ಪುಸ್ತಕಗಳನ್ನೇ ಆಧಾರವಾಗಿಟ್ಟುಕೊಂಡು ವೇದಗಳಲ್ಲಿ ಪಾಂಡಿತ್ಯ ಹೊಂದಿದವರಂತೆ ವರ್ತಿಸಿ ವೇದಗಳ ಮೇಲೆ ಹಲವಾರು ಆಪಾದನೆ ಹೊರಸಿದ್ದಾರೆ.
ಗೋಮಾಂಸ ಭಕ್ಷಣೆಯನ್ನು ವೇದವು ಓಪ್ಪುತ್ತದೆ ಎಂಬ ಘನಘೋರ ಸುಳ್ಳನ್ನು ಹೇಳಿ, ಗೋವಿನ ಮೇಲಿರುವಂತಹ ಗೌರವವನ್ನು ಹಾಳುಮಾಡುತಿದ್ದಾರೆ. ಎಲ್ಲಿಯವರಗೆ ವೇದಗಳ ಸಂಪೂರ್ಣ ಜ್ಞಾನ ಹೊಂದಿರುವುದಿಲ್ಲವೊ ಅಲ್ಲಿಯವರೆಗೆ ಸನಾತನ ಧರ್ಮೀಯ ಅನುಯಾಯಿಗಳಾದ ಭಾರತೀಯರು ಈ ವಿದೇಶಿ ಬೇಟೆಗಾರರಿಗೆ ಸುಲಭ ತುತ್ತಾಗಬಹುದು. ಸಂಪೂರ್ಣವಾಗಿ ವೇದಗಳನ್ನರಿಯದ ಲಕ್ಷಾಂತರ ಭಾರತೀಯರು ವಿದೇಶಿಯರು ಮಂಡಿಸುವ ವಿತಂಡವಾದಗಳಿಗೆ, ಹುಚ್ಚು ತರ್ಕಗಳಿಗೆ ಹಾಗು ಸುಳ್ಳಿನ ಸರಮಾಲೆಗೆ ಸೋತು ಶರಣಾಗುತ್ತಿದ್ದಾರೆ.
ವೇದಗಳನ್ನು ಕಲ್ಮಶಗೊಳಿಸಲು ಕೇವಲ ವಿದೇಶಿಯರು ಹಾಗು ಬುದ್ದಿಜೀವಿಗಳು ಮಾತ್ರ ಹೊಣೆಯಲ್ಲ, ಇವರ ಜೊತೆಗೆ ಹಿಂದುಗಳಲ್ಲೆ ಕೆಲವು ಪಂಗಡಗಳು ಆರ್ಥಿಕ ಹಾಗು ಸಾಮಾಜಿಕ ಬಲಹೀನರಾಗಿರುವ ಹಲವು ಪಂಗಡಗಳನ್ನು ವೇದಗಳ ಕಾರಣ ಹೇಳಿ ಅನುಚಿತ ಉಪಯೋಗ ಪಡೆದುಕೊಂಡಿದ್ದಾರೆ. ವೇದಗಳನ್ನರಿತ್ತಿದ್ದ ಈ ಜನರು, ಅದರ ಜ್ಞಾನವನ್ನು ಇತರರಿಗೆ ಹಂಚದೆ ತಮ್ಮ ಸ್ವಪ್ರಯೋಜನಕ್ಕಾಗಿ ತಾವೇ ಶ್ರೇಷ್ಠರು ಎಂಬ ನಂಬಿಕೆಯನ್ನು ಇತರ ಪಂಗಡಗಳಲ್ಲಿ ಹುಟ್ಟುಹಾಕಿದ್ದಾರೆ.
ವೇದಗಳ ಈ ಎಲ್ಲಾ ಆಪಾದನೆಗಳಿಗೆ ಮುಖ್ಯಕಾರಣವೆಂದರೆ, ಮಧ್ಯಕಾಲೀನ ಬರಹಗಾರರಾದ ಮಾಹಿಧರ್, ಉವಾತ್ ಸಾಯನ ಹಾಗು ದಯಾನಂದರ ವ್ಯಾಖ್ಯಾನಗಳ ಟೇಕೆಗಳಿಂದ ಹಾಗು ವೇದಗಳು ಕೇವಲ ವಾಮಾಚಾರ, ಗೂಢಾಚಾರ, ಮಾಟಮಂತ್ರಗಳಿಗೆ ಸೀಮಿತ ಎಂದು ಹಬ್ಬಿಸಿರುವುದು ಇದಕ್ಕೆ ಕಾರಣವಾಗಿದೆ. ವೇದಗಳ ಪಾವಿತ್ರ್ಯತೆಯನ್ನು ಮತ್ತಷ್ಟು ಉಲ್ಬಣಗೊಳಿಸಲು, ಅರ್ಧಜ್ಞಾನ ಹೊಂದಿದ ವಿದೇಶಿ ಅನ್ವೇಶಕರು, ಮಾಹಿಧರ್, ಉವಾತ್ ಹಾಗು ಸಾಯನರ ವ್ಯಾಖ್ಯಾನಗಳ ಟೇಕೆಯನ್ನು ಭಾಷಾಂತರಿಸಿ ವೇದಗಳನ್ನೇ ಭಾಷಾಂತರ ಮಾಡಿದುದಾಗಿ ಹೇಳಿಕೊಂಡರು.
ಸಂಸ್ಕೃತದ ಬಗ್ಗೆ ಅರ್ಧಜ್ಞಾನ ಹೊಂದಿದಂತಹ ವಿದೇಶಿ ಭಾಷಾಂತರರು ವೇದಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಲು ಬಹು ಅವಶ್ಯಕವಾಗಿರುವಂತಹ ವೇದ ಭಾಷೆ ಬ್ರಾಹ್ಮಿ(Language), ಭಾಷಾಧ್ವನಿ ರೂಪಕ(Phonetic), ನಿಘಂಟು(Vocabulary), ಛಂದಸ್ಸು(Prosody), ಜ್ಯೋತಿಷ ಶಾಸ್ತ್ರ(Astronomy), ಮತ್ತು ಇತರ ವಿಷಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಓಮ್ಮೆ ಮೂಲ ವೇದಗಳನ್ನು ಓದಿದರೆ ಅವರ ಈ ತಪ್ಪುಗಳನ್ನು ಬಹಳ ಸುಲಭವಾಗಿ ಕಂಡುಹಿಡಿಯಬಹುದಾಗಿದೆ.
ಈ ಪ್ರಯತ್ನದ ಹಿಂದಿರುವ ಉದ್ದೇಶವೇನೆಂದರೆ, ವೇದಗಳ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಿ, ಅದರ ಪಾವಿತ್ರ್ಯತೆಯನ್ನು ಕಾಪಡುವುದು ಹಾಗು ವೇದಗಳು ಕೇವಲ ಹಿಂದುಗಳಿಗೆ ಮಾತ್ರ ಸೀಮಿತವಲ್ಲದೆ ಪ್ರಪಂಚದ ಎಲ್ಲಾ ಮಾನವರಿಗು ಅನ್ವಯಿಸುತ್ತದೆ ಎಂದು ತಿಳಿಸುವಂತದ್ದಾಗಿದೆ.
ಭಾಗ – ೧ ಪ್ರಾಣಿ ಹಿಂಸೆ ಮಹಾ ಪಾಪ
ಯಜುರ್ವೇದ ೪೦.೭
ಯಸ್ಮಿನ್ ಸರ್ವಾಣಿ ಭೂತಾನಿ ಆತ್ಮೈವಾಭೂದ್ ವಿಜಾನತಃ
ತತ್ರ ಕೋ ಮೋಹಃ ಕಃ ಶೋಕಃ ಏಕತ್ವಮನುಪಶ್ಯತಃ ||
ಯಾರು, ಎಲ್ಲಾ ಜೀವಿಗಳು ಒಂದೇ ಆತ್ಮನೆಂದು ತಿಳಿಯುತ್ತಾರೊ ಅವರು ದಡ್ಡತನದಿಂದಾಗಲಿ, ಯಾತನೆಯಿಂದಾಗಲಿ ಬಳಲುವುದಿಲ್ಲ ಏಕೆಂದರೆ ನಾವೆಲ್ಲರೂ ಒಂದೇ ಎಂಬ ಅನುಭವವನ್ನು ಹೊಂದಿರುತ್ತಾರೆ.
ಯಾವ ಮನುಷ್ಯರು ಅನಶ್ವರ (ಶಾಶ್ವತತೆ) ಹಾಗು ಪುನರ್ಜನ್ಮ ಸಿದ್ಧಾಂತಗಳನ್ನು ನಂಬುತ್ತಾರೊ, ಅವರು ಪ್ರಾಣಿಗಳನ್ನು ಯಜ್ಞಗಳಲ್ಲಿ ಕೊಲ್ಲಲು ಧೈರ್ಯವಾದರೂ ಹೇಗೆ ಮಾಡಿಯಾರು? ಏಕೆಂದರೆ ಆ ಪ್ರಾಣಿಗಳಲ್ಲಿ ಒಂದಾನೊಂದು ಸಮಯದಲ್ಲಿ ತಮಗೆ ಹತ್ತಿರವಾಗಿದ್ದ, ಪ್ರೀತಿ ಪಾತ್ರರಾಗಿದ್ದ ಆತ್ಮ – ಅಂದರೆ ಪರಮಾತ್ಮನ ಅಂಶವನ್ನೇ ನೋಡುತ್ತಾರೆ.
ಮನುಸ್ಮೃತಿ ೫.೫೧
ಅನುಮನ್ತಾ ವಿಶಸಿತಾ ನಿಹನ್ತಾ ಕ್ರಯವಿಕ್ರಯೀ
ಸಂಸ್ಕರ್ತಾ ಚೋಪಹರ್ತಾ ಚ ಖಾದಕಶ್ಚೇತಿ ಘಾತಕಾಃ ||
ಪ್ರಾಣಿಗಳನ್ನು ಕೊಲ್ಲಲು ಅನುಮತಿ ಕೊಡುವವರು, ಬಲಿಕೊಡಲೆಂದೇ ಪ್ರಾಣಿಗಳನ್ನು ತರುವವರು, ಪ್ರಾಣಿಗಳನ್ನು ಕೊಲ್ಲುವವರು, ಮಾಂಸವನ್ನು ಮಾರುವವರು, ಮಾಂಸವನ್ನು ಕೊಂಡುಕೊಂಡವರು, ಮಾಂಸದಿಂದ ಅಡುಗೆ ಮಾಡುವವರು, ಮಾಂಸದ ಅಡುಗೆಯನ್ನು ಬಡಿಸುವವರು ಮತ್ತು ಮಾಂಸವನ್ನು ತಿನ್ನುವವರನ್ನು ಕೊಲೆಗಡುಕರೆಂದೇ ಪರಿಗಣಿಸಲಾಗುವುದು.
ಅಥರ್ವ ವೇದ ೬.೧೪೦.೨
ಬ್ರೀಹಿಮತ್ತಂ ಯವಮತ್ತಮಥೋ ಮಾಷಮಥೋ ತಿಲಮ್ |
ಏಷ ವಾಂ ಭಾಗೋ ನಿಹಿತೋ ರತ್ನಧೇಯಾಯ ದಾನ್ತೌ ಮಾ ಹಿಂಸಿಷ್ಟಂ ಪಿತರಂ ಮಾತರಂ ಚ ||
ಓ ಹಲ್ಲುಗಳೇ, ನೀವು ಅಕ್ಕಿ, ಗೋಧಿ, ಎಳ್ಳು ಇತ್ಯಾದಿ ಧವಸಧಾನ್ಯಗಳ ಜೊಳ್ಳನ್ನು ತಿಂದರೂ ಹಾಲು ಇತ್ಯಾದಿ ಶ್ರೇಷ್ಠ ಉತ್ಪನ್ನಗಳನ್ನು ನಮಗಾಗಿ ಕೊಡುವಿರಿ. ತಂದೆ+ತಾಯಿಯರ ಸ್ಥಾನದಲ್ಲಿರುವ ಈ ಗೋ+ವೃಷಭಾದಿ ಪ್ರಾಣಿ ವರ್ಗವನ್ನು ಎಂದಿಗೂ ಹಿಂಸಿಸಬೇಡಿ, ಕೊಲ್ಲಬೇಡಿ.
ಅಥರ್ವ ವೇದ ೮.೬.೨೩
ಯ ಆಮಂ ಮಾಂಸಮದನ್ತಿ ಪೌರುಷೇಯಂ ಚ ಯೇ ಕ್ರವಿಃ
ಗರ್ಭನ್ ಖಾದನ್ತಿ ಕೇಶವಾಸ್ತಾನಿತೋ ನಾಶಯಾಮಸಿ ||
ಹಸಿ ಮಾಂಸವಾಗಲಿ ಅಥವ ಬೇಯಿಸಿದ ಮಾಂಸವಾಗಲಿ, ಮಾಂಸ ತಿನ್ನುವುದನ್ನು ನಾಶಪಡಿಸಬೇಕು. ಮಾಂಸವೆಂದರೆ ಗಂಡಾಗಲಿ, ಹೆಣ್ಣಾಗಲಿ, ಭ್ರೂಣವಾಗಲಿ ಅಥವ ಮೊಟ್ಟೆಯಾಗಲಿ ನಾಶಪಡಿಸುವುದನ್ನು ನಿಲ್ಲಿಸಬೇಕು.
ಅಥರ್ವ ವೇದ ೧೦.೧.೨೯
ಅನಾಗೋಹತ್ಯಾ ವೈ ಭೀಮಾ ಕೃತ್ಯೇ, ಮಾ ನೋ ಗೋಮಶ್ವಂ ಪುರುಷಂ ವಧೀಃ ||
ಅಮಾಯಕರನ್ನು ಕೊಲ್ಲುವುದು ಮಹಾಪಾಪ. ಹಸು, ಕುದುರೆ ಅಥವ ಮನುಷ್ಯರನ್ನು ಎಂದಿಗೂ ಕೊಲ್ಲಬೇಡಿ.
ವೇದಗಳು, ಪ್ರಾಣಿಹಿಂಸೆ ಮಾಡುವುದು ನಿಷೇಧಿಸಲಾಗಿದೆ ಎಂದು ಇಷ್ಟು ಪರಿಪಕ್ವವಾಗಿ ಹೇಳಿದರೂ ಸಹ ಗೋವು ಮತ್ತು ಇತರ ಪ್ರಾಣಿಗಳನ್ನು ಕೊಲ್ಲಿ ಎಂದು ಹೇಳುವುದು ಎಷ್ಟು ನ್ಯಾಯಯುತವಾಗಿದೆ? ಇದು ನಂಬುವಂತಹ ವಿಷಯವಲ್ಲ.
ಯಜುರ್ವೇದ ೧.೧
ಅಘ್ನ್ಯಾ ಯಜಮಾನಸ್ಯ ಪಶೂನ್ಪಾಹಿ ||
“ಓ ಮಾನವನೆ! ಪ್ರಾಣಿಗಳನ್ನು ಕೊಲ್ಲುವುದಕ್ಕಾಗಿ ಅಲ್ಲ, ಪಶುಗಳನ್ನು ರಕ್ಷಿಸು”
ಯಜುರ್ವೇದ ೬.೧೧
ಪಶೂಂಸ್ತ್ರಾಯೇಥಾಂ – ಎಲ್ಲಾ ಪಶುಗಳನ್ನು ರಕ್ಷಿಸು
ಯಜುರ್ವೇದ ೧೪.೮
ದ್ವಿಪಾದವ ಚತುಷ್ಪಾತ್ ಪಾಹಿ - ದ್ವಿಪಾದ ಹಾಗು ಚತುಷ್ಪಾದ ಜೀವಿಗಳನ್ನು ರಕ್ಷಿಸು
ಕ್ರವ್ಯಾದ – ಕ್ರವ್ಯ (ಕೊಂದ ನಂತರ ಬರುವ ಮಾಂಸ) + ಅದ (ತಿನ್ನುವವನು) = ಮಾಂಸ ತಿನ್ನುವವನು
ಪಿಶಾಚ – ಪಿಶಿತ (ಮಾಂಸ) + ಅಶ (ತಿನ್ನುವವನು) = ಮಾಂಸ ತಿನ್ನುವವನು
ಅಸುತೃಪ – ಅಸು (ಉಸಿರಾಡುವ ಜೀವಿ) + ತೃಪ (ತನ್ನನ್ನು ತಾನೆ ತೃಪ್ತಿಪಡಿಸಿ ಕೊಳ್ಳುವವನು) = ಇನ್ನೊಂದು ಜೀವಿಯನ್ನು ಆಹಾರಕ್ಕೆಂದು ಬಳಸುವವನು
ಗರ್ಭದಾ ಮತ್ತು ಅಂಡದಾ – ಗರ್ಭವನ್ನು ಮತ್ತು ಮೊಟ್ಟೆಯನ್ನು ತಿನ್ನುವವನು
ವೈದಿಕ ಸಾಹಿತ್ಯದಲ್ಲಿ ಮಾಂಸ ಭಕ್ಷಕರನ್ನು ಯಾವಾಗಲೂ ತಿರಸ್ಕರಿಸಲಾಗಿದೆ. ಮಾಂಸ ತಿನ್ನುವವರನ್ನು ರಾಕ್ಷಸ, ಪಿಶಾಚಿ, ಹಾಗು ಇತರೆ ಪ್ರೇತಗಳಿಗೆ ಸಮಾನಾರ್ಥಕವಾಗಿದೆ ಹಾಗು ಇವೆಲ್ಲರನ್ನು ನಾಗರೀಕ ಸಮಾಜದಿಂದ ಬಹಿಷ್ಕರಿಸಲಾಗಿದೆ.
ಯಜುರ್ವೇದ ೧೧.೮೩
ಊರ್ಜಂ ನೋ ಧೇಹಿ ದ್ವಿಪದೇ ಚತುಷ್ಪದೇ - ಎಲ್ಲಾ ದ್ವಿಪಾದಿಗಳು ಹಾಗು ಚತುಷ್ಪಾದಿಗಳು ಶಕ್ತಿಗೊಂಡು ಬೆಳೆಯಲಿ
ಈ ಮೇಲಿನ ಮಂತ್ರವನ್ನು ಹಲವು ಕಡೆ ಸನಾತನ ಧರ್ಮೀಯರು ಪ್ರತಿ ಊಟದ ಮೂದಲು ಪಠಿಸುತ್ತಾರೆ. ಯಾವ ಶಾಸ್ತ್ರವು ಪ್ರತಿ ಆತ್ಮದ ಸೌಖ್ಯಕ್ಕಾಗಿ ಪ್ರಾರ್ಥಿಸುತ್ತದೊ ಅಂತಹ ದರ್ಶನಶಾಸ್ತ್ರವು ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡಲು ಹೇಗೆ ಸಾಧ್ಯ?
ಭಾಗ – ೨ ಯಜ್ಞಗಳಲ್ಲಿ ಹಿಂಸೆ ಸಲ್ಲದು
ಜನಪ್ರಿಯವಾಗಿ ತಿಳಿದಿರುವಂತೆ, ಯಜ್ಞಗಳಲ್ಲಿ ಪ್ರಾಣಿ ಬಲಿಯಾಗುವುದಿಲ್ಲ. ವೇದಗಳಲ್ಲಿ ಯಜ್ಞಗಳೆಂದರೆ ಶ್ರೇಷ್ಠತಮ ಕರ್ಮ ಅಥವ ವಾತಾವರಣವನ್ನು ಅತ್ಯಂತ ಶುದ್ಧಿಗೊಳಿಸುವ ಕಾರ್ಯ.
ನಿರುಕ್ತ ೨/೭
ಅಧ್ವರ ಇತಿ ಯಜ್ಞಾನಾಮ – ಧ್ವರತಿಹಿಂಸಾ ಕರ್ಮ ತತ್ಪ್ರತಿಷೇಧಃ
ಯಾಸ್ಕ ಆಚಾರ್ಯರು ಹೇಳಿರುವಂತೆ ವೇದಗಳ ಭಾಷಾಶಾಸ್ತ್ರ ಅಥವ ನಿರುಕ್ತದ ಪ್ರಕಾರ ಯಜ್ಞದ ಇನ್ನೊಂದು ಅರ್ಥವೇ ಅಧ್ವರ. ಧ್ವರ ಎಂದರೆ ಹಿಂಸೆ ಅಥವ ದೌರ್ಜನ್ಯದ ಕೃತ್ಯ. ಅಧ್ವರ ಎಂದರೆ ಅಹಿಂಸೆ, ದೌರ್ಜನ್ಯವಿಲ್ಲದ ಕೆಲಸ. ವೇದಗಳಲ್ಲಿ ಅಧ್ವರ ಎಂಬ ಪದವನ್ನು ಬಹಳವಾಗಿ ಉಪಯೋಗಿಸಲಾಗಿದೆ.
ಮಹಾಭಾರತ ನಂತರದ ಕಾಲದಲ್ಲಿ ವೇದಗಳನ್ನು ಅಪವ್ಯಾಖ್ಯಾನಿಸಲಾಗಿದೆ, ಹಾಗು ಮೂಲ ಗ್ರಂಥಕ್ಕೆ ಹೊಸ ವಿಚಾರಗಳನ್ನು ಸೇರಿಸಿ ಅಪಮೌಲ್ಯಗೊಳಿಸಲಾಗಿದೆ. ಶಂಕರಾಚಾರ್ಯರು ವೇದದ ಮೌಲ್ಯಗಳನ್ನು ಮರುಸ್ಥಾಪಿಸಲು ಶ್ಲಾಘನೀಯ ಕೆಲಸಗಳನ್ನು ಮಾಡಿದ್ದಾರೆ. ಸ್ವಾಮಿ ದಯಾನಂದ ಸರಸ್ವತಿಯವರು, ಒಂದಿಷ್ಟು ಅಧಿಕೃತ ಸಾಕ್ಷಾಧಾರಗಳನಿಟ್ಟುಕೊಂಡು ಕೆಲವು ಭಾಷಾ ಪಂಡಿತರೊಂದಿಗೆ ಮೇಳೈಸಿದ ವಿಧಿ ವಿಧಾನಗಳೊಂದಿಗೆ ವೇದಗಳನ್ನು ವ್ಯಾಖ್ಯಾನಿಸಿದ್ದಾರೆ. ಇವರ ಸಾಹಿತ್ಯದಲ್ಲಿ ವೇದಗಳ ವಿವರಣೆ, ಸತ್ಯರ್ಥ್ ಪ್ರಕಾಶ್ ರವರು ಶಿಥಿಲವಾಗಿ ಭಾಷಾಂತರಿಸಿದ “ಸತ್ಯದ ಬೆಳಕು”(Light of truth), ವೇದಗಳ ಪರಿಚಯ ಮತ್ತು ಇತರೆ ಪಠ್ಯಗಳು ಜನಪ್ರಿಯಗೊಂಡು ವೇದ ತತ್ವಶಾಸ್ತ್ರದ ಅನ್ವಯ ಸಾಮಾಜಿಕ ಬದಲಾವಣೆ ತರುವಲ್ಲಿ ಹಾಗು ಅದಕ್ಕೆ ಅಂಟಿದ್ದಂತಹ ಕಳಂಕವನ್ನು ಗಮನಾರ್ಹವಾಗಿ ಹೋಗಲಾಡಿಸಲು ಪ್ರಯತ್ನಿಸಲಾಗಿದೆ. ಇವರ ಭಾಷ್ಯವು ಕೆಲವಾರು ಮೌಢ್ಯಗಳನ್ನು ನಿವಾರಿಸಲು ಶಕ್ಯವೇ ಹೊರತು ವೇದದ ಮೂಲ ಬ್ರಾಹ್ಮಿ ಭಾಷೆಯ ನೈಜ ವಿಚಾರಗಳಿಗೆ ಸರಿಹೊಂದುವುದಿಲ್ಲ.
ಈ ಭಾಗದಲ್ಲಿ ನಮ್ಮ ಪವಿತ್ರ ವೇದಗಳು ಯಜ್ಞದ ಬಗ್ಗೆ ಏನು ಹೇಳುತ್ತದೆ ಎಂದು ತಿಳಿದುಕೊಳ್ಳೊಣ.
ಋಗ್ವೇದ: ೧.೧.೪
ಅಗ್ನೇ ಯಂ ಯಜ್ಞಮಧ್ವರಂ ವಿಶ್ವತಃ ಪರಿ ಭೂರಸಿ, ಸ ಇದ್ದೇವೇಷು ಗಚ್ಛತಿ ||
ಓ ಕಾಂತಿಯುತವಾದ ದೇವರೆ! ನೀನು ಆಜ್ಞಾಪಿಸುವಂತಹ, ಎಲ್ಲಾ ಕಡೆಗಳಿಂದಲೂ ಮಾಡುವಂತಹ ಅಹಿಂಸೆಯ ಈ ಯಜ್ಞವು ಎಲ್ಲಾರಿಗೂ ಬಹಳ ಉಪಯೋಗಕಾರಿಯಾಗಿದೆ ಮತ್ತು ಈ ಯಜ್ಞವು ಆಧ್ಯಾತ್ಮ ತ್ರೈರಾಶಿಯನ್ನು ಹಾಗು ಕೀರ್ತಿವಂತ ಆತ್ಮಗಳನ್ನು ಮುಟ್ಟುತ್ತದೆ.
ಋಗ್ವೇದದಲ್ಲಿ, ಮೊದಲಿನಿಂದ ಕೊನೆಯವರೆಗೂ ಯಜ್ಞವನ್ನು ಅಧ್ವರ ಅಥವ ಅಹಿಂಸೆ ಎಂದು ವರ್ಣಿಸಲಾಗಿದೆ, ಅಷ್ಟೇ ಅಲ್ಲದೆ ಉಳಿದ ಮೂರು ವೇದಗಳಲ್ಲೂ ಸಹ ಪ್ರಾಣಿ ಹಿಂಸೆಯನ್ನು ವಿರೋಧಿಸಲಾಗಿದೆ. ಹೀಗಿರುವಾಗ ಹಿಂಸೆಯನ್ನಾಗಲಿ ಅಥವ ಪ್ರಾಣಿ ಬಲಿಯನ್ನಾಗಲಿ ವೇದಗಳು ನೇರವಾಗಿ ಅಥವ ಪರೋಕ್ಷವಾಗಿ ಸಮ್ಮತಿಸಲು ಹೇಗೆ ತಾನೆ ಸಾಧ್ಯ? ಹಲವಾರು ದುಷ್ಟರ ಪ್ರಯತ್ನದಿಂದ ವೇದಗಳನ್ನು ತಿರುಚಲು ಪ್ರಯತ್ನಿಸಿ, ವೇದಗಳ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದಾರೆ.
ಅತಿ ದೊಡ್ಡ ಆಘಾತಕಾರಿ ಆಪಾದನೆ ಏನೆಂದರೆ, ಯಜ್ಞಗಳಲ್ಲಿ ಜಾನುವಾರು ಬಲಿಗಳನ್ನು ಮಾಡುತ್ತಾರೆ, ಅದರಲ್ಲಿಯೂ ಅಶ್ವಮೇಧ ಯಾಗ, ಗೋಮೇಧ ಯಜ್ಞ, ಅಜಮೇಧ ಯಜ್ಞ, ಪಿತೃಮೇಧ ಯಜ್ಞ, ನರಮೇಧ ಇತ್ಯಾದಿ ಯಜ್ಞಗಳಲ್ಲಿ ಹಿಂಸೆಯು ಸರ್ವೆ ಸಾಮಾನ್ಯ ಎಂದು ತಪ್ಪು ತಿಳಿದಿದ್ದಾರೆ ಆದರೆ ಮೇಧ ಎಂಬ ಪದವು ಯಾವುದೇ ಕಾರಣದಿಂದಲು ಬಲಿ ಎಂದು ಅನ್ವಯಿಸುವುದಿಲ್ಲ. ವೇದದಲ್ಲಿ ಹೇಳಿದ ಮೇಧವೇ ಬೇರೆ ನೀವು ದೇಹಶಾಸ್ತ್ರದಲ್ಲಿ ಹೇಳುವ ಕೊಬ್ಬಿನಾಂಶವುಳ್ಳ ಮೇದ(ಧ)ಸ್ಸೇ ಬೇರೆ.
ಯಜುರ್ವೇದವು ಕುದುರೆಗಳ ಬಗ್ಗೆ ಏನು ಹೇಳುವುದೆಂದು ತಿಳಿಯುವುದು ಮುಖ್ಯ
ಯಜುರ್ವೇದ ೧೩.೪೮
ಇಮಂ ಮಾ ಹಿಂಸೀರೇಕಶಫಂ ಪಶುಂ ಕನಿಕ್ರದಂ ವಾಜಿನಂ ವಾಜಿನೇಷು ||
ಈ ಗೊರಸುಳ್ಳ, ಹೇಷಾರವ ಮಾಡುತ್ತಾ ಇತರೆ ಪ್ರಾಣಿಗಳಿಗಿಂತಲೂ ವೇಗವಾಗಿ ಚಲಿಸಿ ನಿಮಗೆ ಸಹಾಯಕವಾಗಿರುವ ಪಶುವನ್ನು ಸಂಹಾರ ಮಾಡಬೇಡಿ. ಅಶ್ವಮೇಧ ಯಾಗ ಎಂದರೆ ಕುದುರೆಯನ್ನು ಬಲಿಕೊಡುವುದಲ್ಲ. ಯಜುರ್ವೇದವು ಕುದುರೆ ಬಲಿಯನ್ನು ಮಾಡಲೇಬಾರದೆಂದು ಸ್ಪಷ್ಟವಾಗಿ ಹೇಳಿದೆ.
ಶತಪಥ ೧೩-೧-೬-೩
ರಾಷ್ಟ್ರಂ ವಾ ಅಶ್ವಮೇಧಃ, ಅನ್ನಂ ಹಿ ಗೌಃ, ಅಗ್ನಿರ್ವಾ ಅಶ್ವಃ, ಆಜ್ಯಂ ಮೇಧಾಃ ||
ಶಥಪಥದಲ್ಲಿ ಅಶ್ವ ಎಂದರೆ ದೇಶ ಅಥವ ಸಾಮ್ರಾಜ್ಯ ಎಂದರ್ಥ. ಮೇಧ ಎಂಬ ಪದದ ಅರ್ಥ ಸಂಹಾರ ಎಂದಲ್ಲ. ಅದರ ಧಾತು ಮೇಧೃ –ಸಂ –ಗಂ –ಮೇ ಎಂಬ ಮೂಲಾರ್ಥದಲ್ಲಿ ಮೇಧ ಎಂದರೆ ವಿವೇಕದಿಂದ ಮಾಡಿದಂತಹ ಕೆಲಸ ಒಟ್ಟು ಗೂಡುಸುವಿಕೆ ಎಂದು ಸ್ಪಷ್ಟವಾಗುತ್ತದೆ. ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ ಸತ್ಯದ ಬೆಳಕಿನಲ್ಲಿ ಹೀಗೆ ಬರೆಯುತ್ತಾರೆ “ಅಶ್ವಮೇಧ ಯಜ್ಞವು ರಾಷ್ಟ್ರದ, ದೇಶದ ಅಥವ ಒಂದು ಸಾಮ್ರಾಜ್ಯದ ವೈಭವ, ಸುಖ – ನೆಮ್ಮದಿ ಹಾಗು ಸಮೃದ್ಧಿಗೆ ಅರ್ಪಿಸಲಾಗುತ್ತದೆ.
ಗೋಮೇಧ ಯಜ್ಞ ಎಂದರೆ ನಮ್ಮ ಆಹಾರವನ್ನು ಶುಚಿಯಾಗಿಡಲಿ ಅಥವ ನಮ್ಮ ಇಂದ್ರಿಯಗಳನ್ನು ಹಿಡಿತದಲ್ಲಿಡಲು / ಸ್ಥಿತ ಪ್ರಜ್ಞರಾಗಲು ಅಥವ ಆಹಾರವನ್ನು ಶುಚಿಮಾಡಲು ಅಥವ ಸೂರ್ಯನ ಕಿರಣಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಅಥವ ಭೂಮಿಯನ್ನು ಮಲಿನತೆಯಿಂದ ಕಾಪಾಡಿಕೊಳ್ಳುವುದು. ಗೋ ಪದದ ಇನ್ನೊಂದು ಅರ್ಥ ಭೂಮಿ ಎಂದು ಹಾಗು ಗೋವಿನಿಂದ ಸ್ಥಿರತೆಯನ್ನು ಪಡೆಯುವ ಈ ಭೂಮಿಯನ್ನು, ಗೋವಿನಿಂದಲೇ ಶುಚಿಯಾಗಿಡಲು ಮಾಡುವ ಯಜ್ಞವೇ ಗೋಮೇಧ ಯಜ್ಞ.
ಅಜ ಎಂದರೆ ಧಾನ್ಯಗಳು. ಅಜಮೇಧ ಯಜ್ಞ ಎಂದರೆ ಕೃಷಿ ಉತ್ಪಾದನೆಯನ್ನು ಅಭಿವೃದ್ಧಿಗೊಳಿಸುವ ವಿಧಾನ. ಇದರಲ್ಲಿ ವಿವಿಧ ಧಾನ್ಯಗಳ ಬಳಕೆ ಮಾಡಲಾಗುತ್ತದೆ (ಶಾಂತಿ ಪರ್ವ- ೩೩೭.೪-೫).
ನರಮೇಧ/ನೃಮೇಧ ಯಜ್ಞ ಎಂದರೆ ವ್ಯಕ್ತಿ ಸತ್ತ ನಂತರ ದೇಹವನ್ನು ವೇದಗಳ ವಿಧಿ – ವಿಧಾನದ ಪ್ರಕಾರ ಅಂತ್ಯಸಂಸ್ಕಾರ ಮಾಡುವುದು. ಈ ಪುರುಷಮೇಧ ಯಜ್ಞಗಳಲ್ಲಿ ಅದು ಮಾತ್ರವಲ್ಲದೆ ಹಲವು ಜನರ ತಂಡಗಳನ್ನು ಶ್ರಮಭರಿತರಾಗುವಂತೆ, ದುಡಿಯುವತ್ತ, ದೇಶದ ಪ್ರಗತಿಯತ್ತ, ರಾಷ್ಟ್ರ ರಕ್ಷಣೆಯತ್ತ, ಉತ್ಪಾದಕತೆಯತ್ತ, ಇತ್ಯಾದಿಯಾಗಿ ಒಗ್ಗೂಡಿಸಲು ಮಾಡುವ ಪ್ರಕ್ರಿಯೆಯೂ ಸೇರಿರುತ್ತದೆ. ಪಿತೃಮೇಧದಲ್ಲಿ ಉತ್ತರ ಕ್ರಿಯಾ ಕರ್ಮದ ನಂತರ ಮಕ್ಕಳು ಆ ಆತ್ಮದ ದೈವೀಕಾಂಶವನ್ನು ಪಿತೃ ಸ್ವರೂಪದಲ್ಲಿ ಉಳಿಸಿಕೊಂಡು ಅಗ್ನಿಶ್ವಾತ್ಥಾ-ಬರ್ಹಿಷಾದಿಗಳಲ್ಲಿ ಅಗ್ನಿಯಲ್ಲಿ ಸ್ವಧಾ ಮುಖೇನ ಉಪಾಸನೆ ಗೈದು ತಮ್ಮ ಶ್ರೇಯೋಭಿಲಾಷೆನ್ನು ಪಡೆಯುವ ಶ್ರೇಷ್ಠ ಯಜ್ಞ ಪ್ರಕ್ರಿಯೆ.
ಪಂಚತಂತ್ರದಲ್ಲಿ ವಿಷ್ಣುಶರ್ಮನು ಸ್ಪಷ್ಟವಾಗಿ ಹೇಳಿದ್ದಾನೆ – ಯಜ್ಞದಲ್ಲಿ ಪಶು ಹಿಂಸೆ ಮಾಡುವವರು ವೇದವನ್ನರಿಯದ ಮೂರ್ಖರು. ಪಶು ಹತ್ಯೆಯೇ ಸ್ವರ್ಗಕ್ಕೆ ಹೋಗಲು ರಹದಾರಿಯಾದರೆ, ನರಕಕ್ಕೆ ಹೋಗಲು ಏನು ಮಾಡಬೇಕು? ಹಾಗೆಯೇ ಮಹಾಭಾರತದ ಶಾಂತಿ ಪರ್ವದಲ್ಲಿ (೨೬೩.೬, ೨೬೫.೯) ಯಜ್ಞದಲ್ಲಿ ಮತ್ಸ್ಯ, ಮದಿರ, ಮಾಂಸಗಳನ್ನು ಬಳಸಬೇಕೆನ್ನುವವರು ಪಾಖಂಡಿಗಳು, ನಾಸ್ತಿಕರು, ಶಾಸ್ತ್ರಾರ್ಥ ತಿಳಿಯದವರು ಎಂದಿದೆ.
ಭಾಗ – ೩ ವೇದಗಳಲ್ಲಿ ಗೋಮಾಂಸ ಸೇವನೆ ಇಲ್ಲ.
ವೇದಗಳು ಪ್ರಾಣಿಸಂಹಾರವನ್ನು ವಿರೋಧಿಸುತ್ತದೆ, ಅದರಲ್ಲಿಯೂ ಗೋ ಸಂಹಾರವನ್ನು ತೀವ್ರವಾಗಿ ವಿರೋಧಿಸುವುದಲ್ಲದೆ, ಗೋಸಂಹಾರವನ್ನು ನಿಷೇಧಿಸಿದೆ.
ಯಜುರ್ವೇದ ೧೩.೪೯
ಘೃತಂ ದುಹಾನಾಮದಿತಿಂ ಜನಾಯಾಗ್ನೇ ಮಾ ಹಿಂಸೀಃ ||
ಶೇಷ್ಠತ್ವದ ಪ್ರತೀಕವಾಗಿರುವಂತಹಾ, ರಕ್ಷಣೆಗೆ ಅರ್ಹರಾಗಿರುವಂತಹ ಹಸು ಹಾಗು ಎತ್ತುಗಳನ್ನು ಹಿಂಸಿಸಬೇಡಿ, ಕೊಲ್ಲಬೇಡಿ.
ಋಗ್ವೇದ ೭.೫೬.೧೭
ಆರೇ ಗೋಹಾ ನೃಹಾ ವಧೋ ವೋ ಅಸ್ತು ||
ಋಗ್ವೇದದಲ್ಲಂತೂ ಗೋ ಹತ್ಯೆಯನ್ನು ಮಾನವಹತ್ಯೆಗೆ ಸಮನಾದ ಅಪರಾಧವೆಂದು ಘೋಷಿಸಲ್ಪಟ್ಟಿದೆ. ಇಂತಹ ಹೀನ ಕೃತ್ಯ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಹೇಳುತ್ತದೆ.
ಋಗ್ವೇದ ೧.೧೬೪.೪೦, ಅಥರ್ವ ವೇದ೭.೭೩.೧೧, ೯.೧೦.೨೦
ಸೂಯವಸಾದ್ ಭಗವತೀ ಹಿ ಭೂಯಾ ಅಥೋ ವಯಂ ಭಗವಂತಃ ಸ್ಯಾಮ
ಅದ್ಧಿ ತರ್ಣಮಘ್ನ್ಯೇ ವಿಶ್ವದಾನೀಂ ಪಿಬ ಶುದ್ಧಮುದಕಮಾಚರಂತೀ ||
ಪಾವಿತ್ರ್ಯತೆ, ಜ್ಞಾನ ಹಾಗು ಐಶ್ವರ್ಯವನ್ನು ಏತೇಚ್ಛವಾಗಿ ಪಡೆಯಲು ಅಘ್ನ್ಯಾ ಗೌ– ಅಂದರೆ ಹಸುಗಳನ್ನು ಕೊಲ್ಲದೆ ಅವುಗಳಿಗೆ ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ನೀಡಿ ಅವುಗಳನ್ನು ಆರೋಗ್ಯಕರ ರೀತಿಯಲ್ಲಿ ರಕ್ಷಿಸತಕ್ಕದ್ದು. ವೇದಗಳ ಶಬ್ದಕೋಶದಲ್ಲಿ ಅಥವ ನಿಘಂಟಿನಲ್ಲಿ ಗೋ ಅಥವ ಹಸುವಿಗೆ ಸಮಾನಾರ್ಥಕವಾಗಿ ಅಘ್ನ್ಯಾ, ಅಹಿ ಮತ್ತು ಅದಿತಿ ಎಂದು ಬಳಸಲಾಗಿದೆ. ಯಾವುದನ್ನು ಕೊಲ್ಲಬಾರದೊ ಅದನ್ನು ಅಘ್ನ್ಯಾ ಎನ್ನುತ್ತಾರೆ. ಯಾವುದನ್ನು ಸಂಹಾರಮಾಡಬಾರದೊ ಅದನ್ನು ಅಹಿ ಎನ್ನುತ್ತಾರೆ. ಯಾವುದನ್ನು ತುಂಡುತುಂಡಾಗಿ ಕತ್ತರಿಸಬಾರದೊ ಅದನ್ನು ಅದಿತಿ ಎನ್ನುತ್ತಾರೆ. ಈ ಮೂರು ಪದಗಳು ಹಸುಗಳನ್ನು ಯಾವುದೇ ರೀತಿಯಲ್ಲಿ ಹಿಂಸಿಸುವಂತಿಲ್ಲ ಎಂದು ಅರ್ಥೈಸುತ್ತದೆ. ಹಸುಗಳಿಗೆ ಸಂಬಂಧಿಸಿದಂತೆ ವೇದಗಳಲ್ಲಿ ಈ ಪದಗಳು ಎತೇಚ್ಛವಾಗಿ ಬಳಸಲಾಗಿದೆ.
ಋಗ್ವೇದ ೧.೧೬೪.೨೭
ಅಘ್ನ್ಯೇಯಂ ಸಾ ವರ್ದ್ಧತಾಂ ಮಹತೇ ಸೌಭಗಾಯ ||
ಅಘ್ನ್ಯಾ = ಗೋವು - ನಮಗಾಗಿ ಆರೋಗ್ಯ, ಐಶ್ವರ್ಯ ಇತ್ಯಾದಿ ಮಹತ್ತರವಾದ ಸೌಭಾಗ್ಯವನ್ನು ತರುವುದು.
ಋಗ್ವೇದ ೫.೮೩.೮
ಸುಪ್ರಪಾಣಂ ಭವತ್ವಘ್ನ್ಯಾಭ್ಯಃ ||
ಆಘ್ನ್ಯಾ = ಗೋವುಗಳಿಗೆ ಶುದ್ಧ ನೀರನ್ನು ಪೂರೈಸಲು ಅತ್ಯುತ್ತಮ ಸೌಲಭ್ಯವನ್ನು ಕಲ್ಪಿಸಬೇಕು.
ಋಗ್ವೇದ ೧೦.೮೭.೧೬
ಯಃ ಪೌರುಷೇಯೇಣ ಕ್ರವಿಷಾ ಸಮಂಕ್ತೇ ಯೋ ಪಶುನಾ ಯಾತುಧಾನಃ
ಯೋ ಅಘ್ನ್ಯಾಯಾ ಭರತಿ ಕ್ಷೀರಮಗ್ನೇ ತೇಷಾಂ ಶೀರ್ಷಾಣಿ ಹರಸಾಪಿ ವೃಶ್ಚ ||
ನ್ಯಾಯಶಾಸ್ತ್ರದ ದಂಡಸಂಹಿತೆಯ ವ್ಯಾಖ್ಯಾನದಂತೆ ಯಾರು ಮಾನವರನ್ನು, ಕುದುರೆಗಳನ್ನು ಅಥವ ಇತರೆ ಪ್ರಾಣಿಗಳ ಮಾಂಸವನ್ನು ಆಹಾರಕ್ಕೆಂದು ಬಳಸುತ್ತಾರೊ ಹಾಗು ಹಾಲು ಕೊಡುವ ಆಜ್ಞ ಹಸುಗಳನ್ನು ನಾಶ ಪಡಿಸುತ್ತಾರೊ ಅವರನ್ನು ತೀವ್ರವಾಗಿ ಶಿಕ್ಷಿಸಬೇಕು.
ಋಗ್ವೇದ ೮.೧೦೧.೧೫
ಮಾ ಗಾಮನಾಂಗಾಮದಿತಿಂ ವಧಿಷ್ಟ ||
ಗೋವುಗಳನ್ನು ಕೊಲ್ಲಬೇಡಿ. ಗೋವು ಬಹಳಾ ಮುಗ್ಧ ಪ್ರಾಣಿ. ಅವುಗಳನ್ನು ತುಂಡುತುಂಡಾಗಿ ಕತ್ತರಿಸುವ ಹೇಯ ಕೃತ್ಯ ಮಾಡಬೇಡಿ. (ನೀತಿಶಾಸ್ತ್ರ ವ್ಯಾಖ್ಯಾನ)
ಯಜುರ್ವೇದ ೧೨.೭೩
ವಿಮುಚ್ಯಧ್ವಮಘ್ನ್ಯಾ ದೇವಯಾನಾ ಅಗನ್ಮ || ಅಘ್ನ್ಯಾ - ಹಸುಗಳು ಹಾಗು ಎತ್ತುಗಳು ಸಮೃದ್ಧಿತರುತ್ತದೆ.
ಯಜುರ್ವೇದ ೩೦,೧೮
ಅಂತಕಾಯ ಗೋಘಾತಂ - ಗೋವುಗಳನ್ನು ಕೊಲ್ಲುವವರನ್ನು ನಾಶ ಮಾಡು. (ರಾಜ್ಯಶಾಸ್ತ್ರದ ರಾಜನೀತಿ ವ್ಯಾಖ್ಯಾನ)
ಅಥರ್ವ ವೇದ ೧.೧೬.೪
ಯದಿ ನೋ ಗಾಂ ಹಂಸಿ ಯದ್ಯಶ್ವಮ್ ಯದಿ ಪೂರುಷಂ
ತಂ ತ್ವಾ ಸೀಸೇನ ವಿಧ್ಯಾಮೋ ಯಥಾ ನೋ ಸೋ ಅವೀರಹಾ ||
ಯಾರಾದರೊ ಹಸುಗಳನ್ನು, ಕುದುರೆಗಳನ್ನು ಅಥವ ಮನುಷ್ಯರನ್ನು ನಾಶಪಡಿಸಿದರೆ ಅವರ ವೀರತ್ವವನ್ನು ಸೀಸವಿಧ್ಯೆಯಿಂದ ಮಟ್ಟಹಾಕಬೇಕು. (ನ್ಯಾಯಶಾಸ್ತ್ರದ ದಂಡನೀತಿ ವ್ಯಾಖ್ಯಾನ)
ಅಥರ್ವ ವೇದ ೩.೩೦.೧
ವತ್ಸಂ ಜಾತಮಿವಾಘ್ನ್ಯಾ – ಎಂದಿಗೂ ಕೊಲ್ಲಬಾರದಂತಹ ಗೋವು ಹೇಗೆ ತನ್ನ ಕರುವನ್ನು ಪ್ರೀತಿಸುತ್ತದೋ ಹಾಗೆಯೇ ಒಬ್ಬರನ್ನೊಬ್ಬರು ಪ್ರೀತಿಸಿ.
ಅಥರ್ವ ವೇದ ೧೧.೧.೩೪
ಧೇನುಂ ಸದನಂ ರಯೀಣಾಮ್ - ಹಸುವು ಎಲ್ಲಾ ಐಶ್ವರ್ಯಗಳ ಉಗಮಸ್ಥಾನ.
ಋಗ್ವೇದದ, ಆರನೆಯ ಮಂಡಲದ, ೨೮ನೆಯ ಎಲ್ಲಾ ಸೂಕ್ತಗಳು ಗೋವಿನ ಕೀರ್ತಿ ಮಹಿಮೆಯನ್ನು ಹಾಡಿಹೊಗಳುತ್ತದೆ. ಅದಕ್ಕೆ ಸಂಸ್ಕೃತದ ಲೌಕಿಕಾರ್ಥ ನೀಡಲಾಗಿದೆ:
೧. ಆ ಗಾವೋ ಅಗ್ಮನ್ನುತ ಭದ್ರಮಕ್ರನ್ತ್ಸೀದಂತು - ಹಸುಗಳನ್ನು ಆರೋಗ್ಯಕರ ರೀತಿಯಲ್ಲಿದಯೇ, ಅವುಗಳು ತೊಂದರೆಗಳಿಂದ ದೂರವಿದಯೇ, ಅವುಗಳು ಸುಭದ್ರವಾಗಿದಯೇ ಎಂದು ನೋಡಿಕೊಳ್ಳುತ್ತಿರಬೇಕು.
೨. ಭೂಯೋಭೂಯೋ ರಯಿಮಿದಸ್ಯ ವರ್ಧಯನ್ನಭಿನ್ನೇ - ಹಸುಗಳ ಬಗ್ಗೆ ಕಾಳಜಿ ವಹಿಸುವವರಿಗೆ ದೇವರ ಕೃಪಾಕಟಾಕ್ಷವಿರುತ್ತದೆ.
೩. ನ ತಾ ನಶಂತಿ ನ ದಭಾತಿ ತಸ್ಕರೋ ನಾಸಾಮಾಮಿತ್ರೋ ವ್ಯಥಿರಾ ದಧರ್ಷತಿ - ಶತ್ರುಗಳು ಸಹ ಹಸುಗಳ ಮೇಲೆ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಬಾರದು.
೪. ನ ತಾ ಅರ್ವಾ ರೇಣುಕಕಾಟೋ ಅಶ್ನುತೇ ನ ಸಂಸ್ಕೃತ್ರಮುಪ ಯಂತಿ ತಾ ಅಭಿ - ಯಾರೊಬ್ಬರು ಹಸುಗಳನ್ನು ಹತ್ಯೆಮಾಡಬಾರದು.
೫. ಗಾವೋ ಭಗೋ ಗಾವ ಇಂದ್ರೋ ಮೇ ಅಚ್ಛನ್ - ಹಸುವು ಸನ್ಮಾರ್ಗದರ್ಶಕ ಹಾಗು ಬಲಪ್ರದಾಯಕ.
೬. ಯೂಯಂ ಗಾವೋ ಮೇದಯಥಾ - ಹಸುಗಳು ಖುಷಿಯಾಗಿ ಹಾಗು ಆರೋಗ್ಯಕರ ರೀತಿಯಲ್ಲಿ ಇದ್ದಲ್ಲಿ ಗಂಡಸರು ಹಾಗು ಹೆಂಗಸರಿಗೆ ಬಾಧಿಸುವ ರೋಗ ರುಜಿನಗಳಿಂದ ದೂರವಿದ್ದು ಅಭಿವೃದ್ಧಿ ಹೊಂದುತ್ತಾರೆ.
೭. ಮಾ ವಃ ಸ್ತೇನ ಈಶತ ಮಾಘಶಂಸಃ - ಹಸುವು ಹಸಿ ಹುಲ್ಲನ್ನು ಹಾಗು ಶುದ್ಧ ನೀರನ್ನು ಸೇವಿಸಲು ಅವುಗಳನ್ನು ಯಾರು ಕೊಲ್ಲದಿರಲಿ, ಅವು ನಮಗೆ ಸಮೃದ್ಧಿಯನ್ನು ನೀಡಲಿ.
ವೇದಗಳಲ್ಲಿ ಕೇವಲ ಹಸುಗಳನಲ್ಲದೆ ಸಕಲ ಜೀವಜಂತುಗಳನ್ನು ಉತ್ತಮವಾಗಿ ಪ್ರಶಂಸಿಸಲಾಗಿದೆ ಹಾಗು ಪ್ರಾಣಿ ಹಿಂಸೆಯನ್ನು ಖಂಡಿಸಲಾಗಿದೆ ಎಂದು ಸಾಬೀತು ಪಡಿಸಲು ಯಾರಿಗಾದರೂ ಇದಕ್ಕಿಂತ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಬೇಕೇ? ಯಾವುದೇ ಅಮಾನವೀಯ ಕೃತ್ಯಗಳಿಗೆ ವೇದಗಳು ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ ಎಂಬುದನ್ನು ಈ ಎಲ್ಲಾ ಪ್ರಮಾಣಗಳು ಧೃಢಪಡಿಸುತ್ತದೆ. ಅದರಲ್ಲೂ ಗೋಮಾಂಸ ಭಕ್ಷಣೆ ಮತ್ತು ಗೋಹತ್ಯೆ ಬಗ್ಗೆ ವೇದಗಳ ಪೂರ್ಣ ವಿರೋಧವಿದೆ. ಆದ್ದರಿಂದ ವಿಧ್ಯಾವಂತ ಓದುಗರೆ, ವೇದಗಳಲ್ಲಿ ಪ್ರಾಣಿ ಹಿಂಸೆ ಇದಯೇ? ಅಥವ ಇಲ್ಲವೇ? ಎಂಬುದನ್ನು ನೀವೇ ನಿರ್ಧರಿಸಿ.
ಭಾಗ – ೪ ವಿತಂಡವಾದಿಗಳ ಆಪಾದನೆಗಳಿಗೆ ಸತ್ಯಾಂಶದ ಉತ್ತರ
ಈ ರೀತಿಯ ಅಹಿಂಸಾ ಪ್ರಧಾನ ವಿಚಾರಗಳು ಪ್ರಕಟವಾದ ನಂತರ, ವೇದಗಳ ಪಾವಿತ್ರ್ಯತೆಯನ್ನು ಹಾಗು ನಮ್ಮ ಪುರಾತನ ಸಂಸ್ಕೃತಿಯನ್ನು ಸಹಿಸದ ಕೆಲವರು ನಾನಾ ಕಡೆಗಳಿಂದ ತೀವ್ರವಾದ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಋಗ್ವೇದದ ೨ ಮಂತ್ರಗಳು, ಮನುಸ್ಮೃತಿಯ ಕೆಲವು ಶ್ಲೋಕಗಳು ಹಾಗು ಇತರೆ ಮೂಲಗಳು. ಅದಕ್ಕಾಗಿ ಈ ಕೆಳಗಂಡಂತೆ ಹೆಚ್ಚಿನೆ ವಿವರಣೆ ನೀಡಲಾಗಿದೆ.
೧. ಈ ಲೇಖನವು ಮನುಸ್ಮೃತಿಯ ಆಧಾರವನ್ನು ಉಲ್ಲೇಖಿಸಿದೆ. ಅದರಂತೆ ಯಾರಾದರು ಕೊಲ್ಲಲು ಅನುಮತಿ ಕೊಟ್ಟರೂ ಅವರನ್ನು ಕೊಲೆಗೆಡುಕರೆಂದೆ ಪರಿಗಣಿಸಲಾಗುವುದು. ಆದ್ದರಿಂದ ಈ ಹಿಂದೆಯೇ ಹೇಳಿದಂತೆ ಎಷ್ಟೊ ಶ್ಲೋಕಗಳು ಹಾಗು ವಿಷಯಗಳನ್ನು ಹೊಸದಾಗಿ ಸೇರಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಈ ನಿಮ್ಮ ಸಂಶಯವು ಕಲಬೆರಕೆ ಮನುಸ್ಮೃತಿಯನ್ನೋ ಅಥವ ತಪ್ಪು ವ್ಯಾಖ್ಯಾನ ಮಾಡಿದಂತಹ ಕೃತಿಯಿಂದಲೋ ಬಂದಂತಾಗಿದೆ. ಮೊಟ್ಟಮೊದಲಾಗಿ ಮನುಸ್ಮೃತಿಯಲ್ಲಿ ಪ್ರಾಣಿಹಿಂಸೆಯನ್ನು ತೀವ್ರವಾಗಿ ವಿರೋಧಿಸಲಾಗಿದೆ. http://www.vedicbooks.com ನಲ್ಲಿ ಸಿಗುವಂತಹ ಡಾ. ಸುರೇಂದ್ರ ಕುಮಾರ್ ರವರ ಮನುಸ್ಮೃತಿಯನ್ನು ಓದಲು ಶಿಫ಼ಾರಸ್ಸು ಮಾಡುತ್ತೇವೆ.
೨.ಇಲ್ಲಿ ಕೆಲವರು ಗೋಮಾಂಸ ಸೇವನೆಯು ವೇದಗಳಲ್ಲಿ ಅಥವ ಸನಾತನ ಪಠ್ಯಗಳಲ್ಲಿ ಉದಾಹರಣೆಗಳನ್ನು ತೋರಿಸಲೇಬೇಕೆಂಬ ಹುಚ್ಚು ಹಠವಾದಿಗಳು ಮಾನ್ಸವನ್ನು ಮಾಂಸ ಎಂದು ಅರ್ಥೈಸಿಕೊಂಡಿದ್ದಾರೆ. ನೈಜತೆಯಲ್ಲಿ ಮಾನ್ಸ ಎಂಬ ಪದವು ಮೆತ್ತಗಿರುವ ತಿರುಳು ಎಂದರ್ಥ. ಈ ಮೆತ್ತಗಿರುವ ತಿರುಳು ಹಣ್ಣಿನದ್ದಾಗಿರಬಹುದು, ತರಕಾರಿಯದಾಗಿರಬಹುದು ಅಥವ ಮಾಂಸದಾದರೊ ಆಗಿರಬಹುದು. ವೇದಗಳಲ್ಲಿ ಪ್ರಾಣಿ ಹಿಂಸೆಯನ್ನು ಅಷ್ಟು ತೀವ್ರವಾಗಿ ವಿರೋಧಿಸಿರುವುದರಿಂದ, ಈ ಮಾನ್ಸ ಎಂಬ ಪದಾದ ಅರ್ಥ ಖಂಡಿತ ಮಾಂಸವಾಗಿರಲು ಸಾಧ್ಯವೇ ಇಲ್ಲ. ಇನ್ನು ಕೆಲವು ಕಡೆ ಮಾಂಸಃ ಎಂದರೆ ಮಾಂ + ಸಃ ಅಂದರೆ ನಾನು ಹಾಗೂ ನನ್ನ ಜೊತೆಯಲ್ಲಿರುವ ಸಮಾಜ ಎಂಬಿತ್ಯಾದಿ ಸಂದರ್ಭೋಚಿತ ವ್ಯಾಖ್ಯಾನವನ್ನು ಅಕ್ಷಸೂತ್ರದಂತೆ ಹೊಂದುತ್ತದೆ.
೩. ಇನ್ನು ಕೆಲವರು ಸತ್ಯಕ್ಕೆ ದೂರವಿರುವಂತಹ, ಪ್ರಮಾಣವಲ್ಲದ ಪಠ್ಯಗಳನ್ನೇ ಆಧಾರವಾಗಿಟ್ಟುಕೊಂಡು ಅದೇ ಉತ್ತಮ ಸಾಕ್ಷಿಗಳೆಂದು ಬಣ್ಣಿಸಿದ್ದಾರೆ. ಇವರು ಮಾಡುವಂತಹ ಕೆಲಸ ಬಹಳಾ ಸುಲಭ. ಯಾವುದಾದರೋ ಸಂಸ್ಕೃತದಲ್ಲಿ ಬರೆದಂತಹ ಪಠ್ಯಗಳನ್ನೊ, ವಾಕ್ಯಗಳನ್ನೊ ಧರ್ಮವೆಂದೇ ತಿಳಿದು ಅವರಿಗೆ ಬೇಕಾದ ರೀತಿಯಲ್ಲಿ ಭಾಷಾಂತರಿಸಿ ನಮ್ಮ ಈ ಸನಾತನ ಧರ್ಮವೇ ತಪ್ಪೆಂದು ಧೃಡಪಡಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗೆಯೇ ನಮ್ಮನ್ನು ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ತಿರುಚಿದ ಸಾಕ್ಷಾಧಾರಗಳನ್ನು ತೋರಿಸಿ ಮೂರ್ಖರನ್ನಾಗಿ ಮಾಡುತಿದ್ದಾರೆ.
೪. ಇವರು ಹೇಳುವಂತಹಾ ೨ ಋಗ್ವೇದದ ಮಂತ್ರಗಳನ್ನು ವಿಶ್ಲೇಷಿಸೋಣ;
೧. ಋಗ್ವೇದ ೧೦.೮೫.೧೩
ಋಷಿ – ಸೂರ್ಯಾಸಾವಿತ್ರೀ, ದೇವತಾ – ಸೂರ್ಯಾವಿವಾಹಃ, ಛಂದಃ – ವಿರಾಡನುಷ್ಟುಪ್, ಸ್ವರ - ಗಾಂಧಾರ
ಸೂರ್ಯಾಯಾ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ |
ಅಘಾನು ಹನ್ಯಂತೇ ಗಾವೋಽರ್ಜುನ್ಯೋಃ ಪರ್ಯುಹ್ಯತೇ ||
ಆಪಾದನೆ:- ಮಗಳ ಮದುವೆಯ ಸಮಾರಂಭದಲ್ಲಿ ಎತ್ತುಗಳನ್ನು ಹಾಗು ಹಸುಗಳನ್ನು ಬಲಿಕೊಡುತ್ತಾರೆ.
ಸತ್ಯಾಂಶ:- ಋಗ್ವೇದದ ಈ ಮಂತ್ರದಲ್ಲಿ “ಸೂರ್ಯನಕಿರಣವು ಚಳಿಗಾಲದಲ್ಲಿ ಬಲಹೀನಗೊಂಡು, ವಸಂತ ಋತುವಿನಲ್ಲಿ ಮತ್ತೆ ಬಲಶಾಲಿಯಾಗುತ್ತದೆ” ಎಂದು.
ಹಸುವನ್ನು ಕೂಡ ಗೋ ಎಂದು ಕರೆಯಲಾಗುವುದು. ಆದ್ದರಿಂದ ಸೂರ್ಯನ ಕಿರಣಗಳಿಗೆ ಬದಲಾಗಿ ಗೋವು ಎಂದೇ ಮಂತ್ರದಲ್ಲಿ ಭಾಷಾಂತರಿಸಿದ್ದಾರೆ. ಈ ಮಂತ್ರದಲ್ಲಿ ಬಲಹೀನ ಎಂಬುದಕ್ಕೆ ಸಂಸ್ಕೃತದಲ್ಲಿ ಹನ್ಯತೆ ಎಂಬ ಪದ ಉಪಯೋಗಿಸಲಾಗಿದೆ. ಇದರ ಇನ್ನೊಂದರ್ಥ ಕೊಲ್ಲುವುದು ಎಂದು. ಕೆಲವರು ಬೇಕೆಂತಲೆ ಈ ಮಂತ್ರವನ್ನು ಸಂಪೂರ್ಣವಾಗಿ ಹೇಳದೆ, ಅವರಿಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳುತ್ತಾರೆ. ಇಂತಹ ಅಜ್ಞಾನಿ ಮೋಸಗಾರರಿಗೆ ಕೇಳುವುದಿಷ್ಟೇ, ಚಳಿಗಾಲದಲ್ಲಿ ಕೊಂದಂತಹ ಹಸುವು ಪುನಃ ವಸಂತ ಋತುವಿನಲ್ಲಿ ಬಲಶಾಲಿಯಾಗಲು ಹೇಗೆ ತಾನೆ ಸಾಧ್ಯ?
೨. ಋಗ್ವೇದ ೬.೧೭.೧
ಋಷಿ - ಭರದ್ವಾಜೋ ಬಾರ್ಹಸ್ಪತ್ಯಃ, ದೇವತಾ – ಇಂದ್ರಃ, ಛಂದಃ – ತ್ರಿಷ್ಟುಪ್, ಸ್ವರ – ಧೈವತಃ
ಪಿಬಾ ಸೋಮಮಭಿ ಯಮುಗ್ರ ತರ್ದ ಊರ್ವಂ ಗವ್ಯಂ ಮಹಿ ಗೃಣಾನ ಇಂದ್ರ |
ವಿ ಯೋ ಧೃಷ್ಣೋ ವಧಿಷೋ ವಜ್ರಹಸ್ತ ವಿಶ್ವಾ ವೃತ್ರಮಮಿತ್ರಿಯಾ ಶವೋಭಿಃ ||
ಆಪಾದನೆ:- ಇಂದ್ರನು ಹಸು, ಕುರಿ, ಕುದುರೆ ಹಾಗು ಎಮ್ಮೆಗಳ ಮಾಂಸವನ್ನು ತಿನ್ನುತ್ತಿದ್ದ.
ಸತ್ಯಾಂಶ:- ಋಗ್ವೇದದ ಈ ಮಂತ್ರವು “ಹೇಗೆ ಮರದ ಸೌದೆಯು ಯಜ್ಞದ ಬೆಂಕಿಯನ್ನು ಹೆಚ್ಚಿಸುತ್ತದೊ ಹಾಗೆಯೇ ಉತ್ತಮ ವಿದ್ವಾಂಸರು ಪ್ರಪಂಚವನ್ನು ಪ್ರಾಕಾಶಿಸುತ್ತಾರೆ” ಎಂದು ಹೇಳುತ್ತದೆ.
ಈ ಮಂತ್ರದಲ್ಲಿ ಅದು ಹೇಗೆ ಇಂದ್ರನು, ಹಸು, ಕುರಿ, ಕುದುರೆ ಹಾಗು ಎಮ್ಮೆಗಳು ಬಂದವೊ ಇವರ ದಡ್ಡತಲೆಗಳಿಗೆ ಮಾತ್ರ ತಿಳಿದಿರುವಂತದ್ದು.
೫. ಆಪಾದನೆ:- ಯಜುರ್ವೇದ ೨೪.೨೯ “ಹಸ್ತಿನಾ ಆಲಂಭತೇ” ಎಂದು ಆನೆಯನ್ನು ಆಹುತಿ ನೀಡುವುದಾಗಿ ಹೇಳಿದೆಯಲ್ಲ?
ಸತ್ಯಾಂಶ:- ಲಭ್ ಧಾತುವಿನಿಂದ ಉತ್ಪನ್ನ ಆಲಂಭ ಶಬ್ದವು ಆಹುತಿ ಅಥವಾ ಹತ್ಯೆ ಎಂದು ಯಾರು ನಿಮಗೆ ಹೇಳಿದರು? ಲಭ ಎಂದರೆ ಗ್ರಹಿಸುವುದು. ಇಲ್ಲಿ ಹಸ್ತಿನಾ ಎಂದರೆ ಆನೆ ಎನ್ನುವ ಪ್ರಾಣಿಯ ವ್ಯಾಪ್ತಿಯನ್ನು ಮೀರಿದ ಬೇರೆಯೇ ಅರ್ಥ ಉಳ್ಳದ್ದು. ಹೋಗಲಿ ಪಾಮರರು ನಾವು ಪಾರಮಾರ್ಥಿಕ ಬೇಡವೆಂದರೆ ರಾಜನು ತನ್ನ ಗಜಸೇನಾ ಬಲವೃದ್ಧಿಗೆ ಆನೆಗಳನ್ನು ಗ್ರಹಿಸಬೇಕು ಎಂದು ರಾಜ್ಯಶಾಸ್ತ್ರ ವ್ಯಾಖ್ಯಾನ. ಇದರಲ್ಲಿ ಹಿಂಸೆ ಎಲ್ಲಿದೆ? ಆಲಂಭ ಶಬ್ದವು ಬೇರೆ ಬೇರೆ ವಾಕ್ಯ ಪ್ರಯೋಗದಲ್ಲಿ ಕಂಡುಬರುತ್ತದೆ. ಮನುಸ್ಮೃತಿಯಲ್ಲಿ ಬ್ರಹ್ಮಚಾರಿಯು “ವರ್ಜಯೇತ್ ಸ್ತ್ರೀನಾಮ್ ಆಲಂಭಮ್” ಎಂದಿದೆ. ಆಲಂಭತೇ ಎನ್ನುವುದು ಕೊಲ್ಲುವುದೇ ಎಂದು ಪ್ರತಿಪಾದಿಸುವವರು ಪ್ರಾಯಶಃ ಪ್ರಾಣಿಭಕ್ಷಕರಾಗಿದ್ದು ತಮ್ಮನ್ನು ಸರ್ಮರ್ಥಿಸಿಕೊಳ್ಳಲು ವೇದಾರ್ಥವನ್ನೇ ತಿರುಚಿದ್ದಾರೆ.
೬. ಆಪಾದನೆ:- ಬ್ರಾಹ್ಮಣ ಹಾಗೂ ಶ್ರೌತ ಗ್ರಂಥಗಳಲ್ಲಿ ಯಜ್ಞದಲ್ಲಿ ಸಂಜ್ಞಾಪನಾ ಎಂದು ಹತ್ಯೆಯನ್ನು ಸೂಚಿಸಿದೆ.
ಸತ್ಯಾಂಶ:- ಅಥರ್ವವೇದ ೬.೧೦.೯೪-೯೫ ಇದರಲ್ಲಿ ಮನಸ್ಸು, ದೇಹ, ಹೃದಯಾದಿಗಳ ಸಂಜ್ಞಾಪನೆಯನ್ನು ಹೇಳಿದೆ. ಅಂದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅರ್ಥವೇ? ಸಂಜ್ಞಾಪನಾ ಎಂದರೆ ಸಂಯೋಗ + ಪೋಷಣೆ ಎಂದರ್ಥ. ಈ ಮಂತ್ರ ಹೇಳುವುದೇನೆಂದರೆ ನಾವು ನಮ್ಮ ಮನಸ್ಸು, ದೇಹ ಮತ್ತು ಹೃದಯಗಳನ್ನು ಸದೃಢಗೊಳಿಸಿಕೊಂಡು ಎಲ್ಲವೂ ಒಟ್ಟಾಗಿ ಚಟುವಟಿಕೆ ಮಾಡಲು ಪೋಷಣೆ ಒದಗಿಸಿಕೊಳ್ಳಬೇಕು ಎಂಬ ಭಾವನೆ ಇದೆ. ಸಂಜ್ಞಾಪನಾ ಎಂದರೆ ತಿಳಿಸುವುದು ಎಂಬ ಅರ್ಥವೂ ಇದೆ.
೭. ಆಪಾದನೆ:- ಯಜುರ್ವೇದ ೨೫.೩೪-೩೫ ಭೂಮಿ ಅಥವ ಹುಲ್ಲುಗಾವಲಲ್ಲಿದ್ದ ಸಾವಿರಾರು ಕಾಯವನ್ನು ಕುದಿಸಿ, ಮಾಂಸವ ರೋಸ್ಟ್ ಮಾಡಿ ಸುಟ್ಟು ಭಗವಂತನಿಗೆ ಅರ್ಪಿಸುವುದು. ಋಗ್ವೇದ ೧.೧೬೨.೧೧-೧೨ ಅಶ್ವಪಾಲಕರನ್ನು ಕರೆದು ಹೇಳು- ಅದರ ದುರ್ಗಂಧವನ್ನು ತೆಗೆದು, ಮಾಂಸ ಬಗೆದು, ಹಂಚಲಿಕ್ಕೆ ಕಾಯಿರಿ, ಪ್ರಧಾನರಿಂದ ಆಜ್ಞೆ ದೊರೆತೊಡನೆ ಹಂಚಿರಿ. ಇವುಗಳಿಂದ ಯಜ್ಞದಲ್ಲಿ ಅಶ್ವ ಹತ್ಯೆಯು ಸಿದ್ಧವಾಗುತ್ತದೆ.
ಸತ್ಯಾಂಶ:- ಇದು ವೇದವನ್ನು ಇಂಗ್ಲಿಷಿಗೆ ಭಾಷಾಂತರಿಸಿದ ಗ್ರಿಫಿತ್‌ನ ಕಪೋಲ ಕಲ್ಪಿತ ವಾಕ್ಯಗಳು. ಮೊದಲನೆಯ ಮಂತ್ರದಲ್ಲಿ ಅಶ್ವದ ಉಲ್ಲೇಖವೇ ಇಲ್ಲ. ಅದೊಂದು ಚಿಕಿತ್ಸಾ ಪ್ರಕ್ರಿಯೆ. ಏರಿದ ಜ್ವರವನ್ನು ಉಪಶಮನ ಗೈಯಲು ಬೇಕಾದ ಪರಿಹಾರೋಪಾಯಗಳನ್ನು ವೈದ್ಯನಿಗಾಗಿ ಹೇಳಲಾಗಿದೆಯೇ ಹೊರತು ಅಲ್ಲ್ಯಾವುದೇ ಪ್ರಾಣಿ ವಿಚಾರವೇ ಇಲ್ಲ. ಎರಡನೆಯ ಮಂತ್ರದಲ್ಲಿ ವಾಜಿನಮ್ ಎಂದರೆ ಕುದುರೆ ಮಾತ್ರವಲ್ಲದೆ ವೀರತ್ವ, ಶೂರತ್ವ, ಧೀರತ್ವ, ಖಗ, ಮನುಷ್ಯತ್ವ, ಯೋಧ, ಬಾಣ ಪ್ರಯೋಗ, ಪೌರುಷತ್ವ, ವೇಗ ಇತ್ಯಾದಿ ಹಲವು ಅರ್ಥ ಕೊಡುತ್ತದೆ. ಹಾಗಾಗಿ ವೇಗ, ವೀರ, ಶೂರತ್ವಕ್ಕೆ ಸರಿಸಾಟಿಯಾದ ಕುದುರೆಯನ್ನೂ ವಾಜಿನಮ್ ಎಂದರು. ನಿರುಕ್ತದ ಯಾವುದೇ ಅರ್ಥವನ್ನು ನೋಡಿದರೂ ಯಜ್ಞದಲ್ಲಿ ಅಶ್ವ ಹತ್ಯೆ ಎನ್ನುವ ಅಪಾರ್ಥವನ್ನು ಬಿಂಬಿಸುವುದೇ ಇಲ್ಲ.
ಎರಡನೆಯ ಮಂತ್ರದಲ್ಲಿ ಅದನ್ನು ಕುದುರೆ ಎಂದೇ ಗ್ರಹಿಸಿದರೆ ಅಲ್ಲಿ ಅಶ್ವವಧೆಯನ್ನು ಹತ್ತಿಕ್ಕಬೇಕು ಎಂಬ ಭಾವ ಬಿಂಬಿತವಾಗುತ್ತದೆಯೇ ಹೊರತು ಕೊಲ್ಲಲಿಕ್ಕಲ್ಲ.
೮. ಆಪಾದನೆ:- ಗೋಘ್ನ ಎಂದು ಗೋಹತ್ಯೆಯನ್ನು ವೇದದಲ್ಲಿ ಹೇಳಿದೆ. ಅತಿಥಿಗ್ವ/ಅತಿಥಿಘ್ನ – ಗೋಮಾಂಸವನ್ನು ಅತಿಥಿಗಳಿಗೆ ಉಣಬಡಿಸುವವ ಎಂದಿದೆ.
ಸತ್ಯಾಂಶ:- ಈ ಲೇಖನದ ಒಂದನೇ ಭಾಗದಲ್ಲಿ ಅಘ್ನ್ಯ ಹಾಗೂ ಅದಿತಿ ಎಂದರೆ ಕೊಲ್ಲಲರ್ಹವಲ್ಲದ್ದು ಎಂದು ಸಾಧಿಸಲಾಗಿದೆ. ಗೋನಾಶಕರಿಗೆ ನ್ಯಾಯಶಾಸ್ತ್ರವು ಕಠಿಣ ಸಜೆ ವಿಧಿಸಲು ಹೇಳಿದೆ. ಗಮ್ ಧಾತುವು ‘ಹೋಗುವುದು’ ಎಂಬ ಶಬ್ದವಾಗಿ ಪ್ರಯೋಗವಾಗುತ್ತದೆ. ಆದ್ದರಿಂದ ಗ್ರಹಗಳನ್ನೂ ಗೋ ಎಂದಿದೆ. ಅತಿಥಿಗ್ವ/ಅತಿಥಿಘ್ನ ಎಂದರೆ ಅತಿಥಿಗಳ ಹತ್ತಿರ ಹೋಗಿ ಅವರ ಕುಶಲೋಪರಿಯನ್ನು ವಿಚಾರಿಸುವವ.
ಗೋಘ್ನ ಎಂದರೆ ಹಲವು ಅರ್ಥಗಳನ್ನು ಬಿಂಬಿಸುತ್ತದೆ. ಗೋ + ಹನ್ = ಗೋವಿನ ಹತ್ತಿರ ಹೋಗುವುದು, ಗೋ + ಅಘ್ + ಹನ್ = ಗೋವು ಪಾಪ ಕರ್ಮಗಳನ್ನು ನಾಶಮಾಡುತ್ತದೆ. ವೇದದಲ್ಲಿ ಹನ್ ಧಾತುವು ಹತ್ತಿರ ಹೋಗುವುದು ಎಂದು ಎಷ್ಟೋ ಕಡೆ ಬಳಕೆಯಾಗಿದೆ. ಅಥರ್ವವು ಪತಿಯು ಪತ್ನಿಯನ್ನು ಹನ್ – ಎಂದರೆ ಹತ್ಯೆಯಲ್ಲ, ಹತ್ತಿರ ಇರುವುದು. ಆದ್ದರಿಂದ ಈ ಎಲ್ಲಾ ಮಂಡನೆಗಳು ಆಧಾರ ರಹಿತವಾದ ವಿತಂಡ ವಾದಗಳು.
೯. ಆಪಾದನೆ:- ವೇದಗಳು ಬಾಲ, ಯುವ, ಪ್ರೌಢ ಹಸುಗಳನ್ನು ಕೊಲ್ಲಬಾರದೆಂದಿದೆ. ಆದರೆ ವಶಾ ಗೋ = ವಯೋವೃದ್ಧವಾದ, ಬರಡಾದ ಹಸುಗಳನ್ನು, ಊಕ್ಷ = ಎತ್ತುಗಳನ್ನು ಕೊಲ್ಲಬೇಕು ಎಂದಿದೆ.
ಸತ್ಯಾಂಶ:- ಇದು ಅರೆ ಬೆಂದ ಕಾಳಿನಂತಹಾ ವಿದ್ವಾನ್ ಡಿ. ಎನ್ ಜಾಹ್ ಎನ್ನುವವ ಗೋಹತ್ಯೆ ವಿರುದ್ಧ ಸನಾತನ ಧರ್ಮೀಯರಿಂದ ನೀಡಲ್ಪಟ್ಟ ವೇದಾಧಾರಗಳನ್ನು ಪೊಳ್ಳಾಗಿಸಲು ಮಾಡಿದ ಪ್ರಯತ್ನ. ಇಂತಹಾ ವಿದ್ವಾಂಸರು ನಮ್ಮಲ್ಲೇ ಇದ್ದು ನಮಗೇ ಬೆನ್ನಿಗೆ ಚೂರಿ ಹಾಕುತ್ತಿರುವಾಗ ಅನ್ಯ ಧರ್ಮೀಯರ ಆಕ್ರಮಣ ಏನೂ ಅಲ್ಲ! ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತಿದೆ. ಆದರೆ ಹೊಲದ ಮಾಲೀಕನಿಗೆ ಬೇಲಿಯನ್ನೂ ಕತ್ತರಿಸಲು ತಿಳಿದಿದೆ ಎಂದು ಅದಕ್ಕೆ ತಿಳಿದಿರುವುದಿಲ್ಲ.
ಊಕ್ಷ ಎಂದರೆ ಒಂದು ಓಷಧಿ ಸಸ್ಯ. ಅದನ್ನು ಸೋಮ ಎಂದು ಮೊನಿಯರ್ ವಿಲಿಯಮ್ಸ್‍ನಂತಹಾ ಕೆಲ ಸಂಸ್ಕೃತ-ಆಂಗ್ಲ ಶಬ್ದಕೋಶ ರಚನಾಕಾರರೂ ಹೆಸರಿಸಿದ್ದಾರೆ.
ವಶಾ ಎಂದರೆ ಪರಮಾತ್ಮನ ಹಿಡಿತದಲ್ಲಿರುವ ಶಕ್ತಿಗಳೇ ಹೊರತು ಬರಡು ಹಸುಗಳಲ್ಲ. ಅಥರ್ವವೇದ ೧೦.೧೦.೪ ವಶಾಮ್ ಸಹಸ್ರಧಾರಾಮ್ ಎಂದು ಧಾರಾಕಾರವಾಗಿ ಅಮೃತಸುಧೆಯನ್ನು ತನ್ನ ದೇಹದ ಕಣ ಕಣಗಳಿಂದ ಹೊರಸೂಸುವ ಶಕ್ತಿ ಪುಂಜಗಳು ಎಂದಿದೆ. ಹೀಗಿರುವಾಗ ವಶಾ ಎಂದರೆ ಬರಡು ಎಂದಾಗುವುದೇ ಇಲ್ಲ.
ಋಗ್ವೇದ ೧೦.೧೯೦ – ವಶೀ ಎಂದರೆ ಭಗವಂತನ ಹಿಡಿತದಲ್ಲಿರುವ ಶಕ್ತಿಯನ್ನು ಸಂಧ್ಯಾಕಾಲದಲ್ಲಿ ಉಪಾಸಿಸಲಾಗುತ್ತದೆ. ಮತ್ತೆ ಕೆಲವು ಋಕ್ಕುಗಳಲ್ಲಿ ವಶಾ ಎನ್ನುವುದನ್ನು ಸಮೃದ್ಧ ಭೂಮಿ, ತಾಯಿಯು ಮಗುವನ್ನು ಹೇಗೆ ತನ್ನ ಹಿಡಿತದಲ್ಲಿ ಪೋಷಿಸುತ್ತಾಳೆ (ಅಥರ್ವ ೨೦.೧೩೦.೧೫), ಒಂದು ಓಷಧೀ ಸಸ್ಯ, ಇತ್ಯಾದಿಯಾಗಿ ಬಳಕೆಯಾಗಿದೆ.
ಯಾವ ರಾಕ್ಷಸೀ ಪ್ರೇರಣೆಯು ಬರಡು ಹಸುವನ್ನು ಕೊಲ್ಲಿರೆಂದು ವಿದ್ವಾಂಸರಿಂದ ಹೇಳಿಸಿತೋ ಗೊತ್ತಿಲ್ಲ!!
೧೦. ಆಪಾದನೆ:- ಬೃಹದಾರಣ್ಯಕ ಉಪನಿಷತ್ತು ೬.೪.೧೮ ಹೇಳುವುದೇನೆಂದರೆ ಸುಪುತ್ರ ಪ್ರಾಪ್ತಿಗಾಗಿ ದಂಪತಿಗಳು ಮಾಂಸಾನ್ನ (ಮಾಂಸೌದನಂ) ಅಥವಾ ಎತ್ತು (ಆರ್ಷಭಃ) ಅಥವಾ ಕರುವನ್ನು (ಊಕ್ಷ) ಭುಂಜಿಸಬೇಕು.
ಸತ್ಯಾಂಶ:-
ಪ್ರತಿಪಾದನೆ ೧:- ಈಗ ವಿತಂಡವಾದಿಗಳು ವೇದಗಳನ್ನು ಬಿಟ್ಟು ಉಪನಿಷತ್ ಭಾಗಕ್ಕೆ ಇಳಿದಿದ್ದಾರೆ. ಯಾರಾದರೂ ಉಪನಿಷತ್ತಿನಲ್ಲಿ ಮಾಂಸಭಕ್ಷಣೆ ಇದೆ ಎಂದು ಒಂದು ಪಕ್ಷ ಸಾಧಿಸಿ ತೋರಿಸಿದರೂ ವೇದದಲ್ಲಿ ಇದೆ ಎಂದು ಸಾಧಿಸಿದಂತೆ ಆಗುವುದಿಲ್ಲ. ಸನಾತನ ಧರ್ಮದ ತಳಹದಿಯೇ ವೇದಗಳು ಹೊರತು ಉಪನಿಷತ್ತಲ್ಲ. ಇದನ್ನು ಪೂರ್ವ ಮೀಮಾಂಸಾ ೧.೩.೩, ಮನುಸ್ಮೃತಿ ೨.೧೩ + ೧೨.೯೫, ಜಾಬಾಲ ಸ್ಮೃತಿ, ಭವಿಷ್ಯ ಪುರಾಣ ಇತ್ಯಾದಿಗಳ ಮತದಂತೆ ವೇದ ಮತ್ತು ಶಾಸ್ತ್ರಗಳಲ್ಲಿ ಭಿನ್ನತೆಯಿಂದ ಶಂಕೆ ಉಂಟಾದಲ್ಲಿ ವೇದವೇ ಸರ್ವಮಾನ್ಯ, ಸರ್ವಗ್ರಾಹ್ಯ, ಸಾರ್ವಕಾಲಿಕ, ಸಾರ್ವದೇಶಿಕ ಸತ್ಯ ಎಂದು ಪರಿಗಣಿಸಬೇಕು. ಉಪನಿಷತ್ತುಗಳು ಯಾವುದೋ ಒಂದು ಮಂತ್ರವನ್ನು ವ್ಯಾಖ್ಯಾನಿಸಲು ಹೊರಟು ಹಲವು ಪರಿಷ್ಕರಣೆಗಳನ್ನು ಹೊಂದಿ ಇಂದು ಮೂಲ ಉಪನಿಷತ್ತುಗಳು ಮರೆಯಾಗಿ ವ್ಯಾಖ್ಯಾನವೇ ಮೂಲವೆಂಬ ಅಯೋಮಯ ಉತ್ಪನ್ನವಾಗಿದೆ.
ಪ್ರತಿಪಾದನೆ ೨:- ಪ್ರತಿವಾದಕ್ಕೆ ಪ್ರತಿಪಾದನೆ ೧ ಸಾಕಾದರೂ ನೀಡಲ್ಪಟ್ಟಿರುವ ಉಪನಿಷತ್ ವಾಕ್ಯವನ್ನು ಪರಾಮರ್ಷಿಸಿ ಆಧಾರ ರಹಿತವೆಂದು ಸಾಧಿಸಿ ತೋರಿಸುತ್ತೇವೆ.
ಪ್ರತಿಪಾದನೆ ೨.೧:- ಮಾಷೋದನಮ್ – ಈ ಶಬ್ದವುಳ್ಳ ಶ್ಲೋಕವು ಬರುವ ಮುನ್ನ ಇನ್ನೂ ೪ ಶ್ಲೋಕಗಳುಂಟು. ಅದರಲ್ಲಿ ಅನ್ನದೊಂದಿಗೆ ಅಗ್ನಿಯಲ್ಲಿ ವಿವಿಧ ಆಹುತಿ ಸಂಯೋಜನೆಗಳಿಂದ ಉಳಿದ ಸರ್ಪಿಷ ಪ್ರಸಾದವನ್ನು ಸ್ವೀಕರಿಸುವ ಮುಖೇನ ವೇದದ ವಿವಿಧ ಜ್ಞಾನವುಳ್ಳ ಮಗುವನ್ನು ಪಡೆಯುವ ವಿಚಾರ ಹೇಳಿದೆ. ಆ ವಿವಿಧ ವಸ್ತುಗಳೆಂದರೆ:
· ಕ್ಷೀರೌದನಮ್ (ಹಾಲು+ಅನ್ನ) – ಶುಕ್ಲೋ ಜಾಯತೇ ಏಕವೇದಜ್ಞ,
· ದಧ್ಯೋದನಮ್ (ಮೊಸರು+ಅನ್ನ) – ಕಪಿಲಃ ಪಿಂಗಲೋ ಜಾಯತೇ ದ್ವಿವೇದಿ,
· ಉದೌದನಮ್ (ನೀರು+ಅನ್ನ) – ಶ್ಯಾಮೋ ಲೋಹಿತಾಕ್ಷೋ ಜಾಯತೇ ತ್ರಿವೇದಿ,
· ತಿಲೌದನಮ್ (ತಿಲ+ಅನ್ನ) - ದ್ಯುಹಿತಾ ಮೇ ಪಂಡಿತಾ ಜಾಯತೇ,
· ಮಾಂÆಸೌದನಮ್ (ಮಾಂಸ ಅಲ್ಲ ಅದು ಮಾಂÆಸ ಅಂದರೆ) – ಪಂಡಿತೋ ವಿಗೀತಃ ಸಮಿತಿಂಗಮಃ ಶುಶ್ರೂಷಿತಾಂ ವಾಚಂ ಭಾಷಿತಾ ಜಾಯೇತ ಸರ್ವಾನ್ ವೇದಾನನುಬ್ರುವೀತ.
ಅಂದರೆ ಮನಸ್ಸಿಗೇ ಬೇಕಾದ ಸರಿಯಾದ ಅನ್ನವನ್ನು ಅಗ್ನಿಯಲ್ಲಿ ಆಹುತಿ ನೀಡಿ ಸರ್ಪಿಷವನ್ನು ೬೪ ಲಕ್ಷ ಮನೋ ಕೇಂದ್ರಗಳಲ್ಲಿ ವಿನ್ಯಸಿತಗೊಳಿಸಿದರೆ ಸರ್ವವೇದಗಳನ್ನೂ ಬಲ್ಲವನಾದ ಪುತ್ರ ಪ್ರಾಪ್ತಿ
(ಸಂಗ್ರಹ)
***
Buckingham Palace
No comments:
Post a Comment