SEARCH HERE

Wednesday 14 April 2021

ಮನಸ್ಸು manassu mind

*
ಮನಸ್ಸೇ ಎಂಬ ವಿಷಯ ತಿಳಿದು ಕೊಳ್ಳೊಣ - ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ ಮನುಷ್ಯರ ಸಂಸಾರ ಬಂಧಕ್ಕೂ ಹಾಗೂ ಬಂಧದಿಂದ ಮುಕ್ತಿಗೂ ಮನಸ್ಸೇ ಕಾರಣ. ಸಂಸಾರದಲ್ಲಿ ಸುಖ ದುಃಖ, ಸೋಲು ಗೆಲವು, ಯಶಸ್ಸು ಅಪಯಶಸ್ಸು, ಏಳು ಬೀಳು, ಇತ್ಯಾದಿ ಎಲ್ಲವನ್ನು ಅನುಭವಿಸಲೂ ಮನಸ್ಸೇ ಮೂಲ ಕಾರಣ.
ಮನಸ್ಸು ಮಹಾಕೋತಿ. ಇಂದಿನ ಈ ಕ್ಷಣದ ವೈಭವನಸ್ಸಿಗೆ ಬೇಕು. ಅಂತೆಯೇ ಪುಣ್ಯಸಂಪಾದೆನೆಗೆ ಹಿದೇಟು ಹಾಕುತ್ತದೆ. ಪುಣ್ಯ ಮಾಡುವಾಗ ದುಃಖ, ಆ ದುಃಖ ಮನಸ್ಸಿಗೆ ಬೇಡ. ಪಾಪ ಮಾಡುವಾಗ ಸುಖ, ಆ ಸುಖವನ್ಜು ಸ್ವಾಗತಿಸುತ್ತದೆ ಮನಸ್ಸು ಆ ಕಾರಣದಿಂದಲೇ ಅದೃಷ್ಟ ಹೀನವಾಗಿದೆ ಮನಸ್ಸು. ಅದೃಷ್ಟವಿರದಿರೆ ಮನಸ್ಸು ಮಹಾ ದುರ್ಬಲ. ಹಿತವಾದ ಯಾವ ಮಾತನ್ನೂ ಕೇಳದು.

ಅದೃಷ್ಟ ಹೀನ ಮನಸ್ಸಿಗೆ ದೂರದೃಷ್ಟಿ ಕಡಿಮೆ*

ಅದೃಷ್ಟ ಹೀನವಾದ ಮನಸ್ಸು ಎಂದಿಗೂ ದೂರಾಲೋಚನೆ ಕಡಿಮೆ ಇರುತ್ತದೆ. *ದೂರಾಲೋಚನೆಗಿಂತಲೂ ದುರಾಲೋಚನೆಯೇ ಹೆಚ್ಚು ಆಗಿರುತ್ತದೆ* ದುರಾಲೋಚೆನೆಗಳು ಹೆಚ್ಚಾದಷ್ಟು ಮನಸ್ಸು ದುರ್ಬಲ ಆಗುತ್ತಾ ಸಾಗುತ್ತದೆ. ದುರ್ಬಲ ಮನಸ್ಸು ಎಲ್ಲ ವಿಷಯದಲ್ಲಿಯೂ ಸ್ವಾಸ್ಥತೆಯು ಇರುವದಿಲ್ಲ. ಎಲ್ಲಲಕಡೆ ಕದಡಿಸಿಕೊಂಡಿರುತ್ತದೆ. ಎಲ್ಲದರ ನಿರ್ಣಯವೂ ಪ್ರತಿಕೂಲವೇ ಆಗುತ್ತದೆ.

*ಮನಸ್ಸಿಗೆ ಬಲ.....*

ಮನಸ್ಸಿಗೆ ಶಕ್ತಿ ಕೊಟ್ಟು ಸದೃಢನನ್ನಾಗಿ ಮಾಡಲು *ಅದೃಷ್ಟ*ದ ಸಾಥ ಅತ್ಯಂತ ಅನಿವಾರ್ಯವಾಗಿ ಬೇಕು. ಪುಣ್ಯ ಬೆಳಿಯಿತೋ ಮನಸ್ಸು ಪ್ರಬಲ. ಪುಣ್ಯವಿದೆಯಾ ಸದ್ವಿಚಾರಗಳೇ. ಪುಣ್ಯವಿದ್ದರೆ ಪ್ರಶಾಂತ. ಪುಣ್ಯವಿದ್ದರೆ ತಾತ್ಕಾಲಿಕ ಕಷ್ಟ ಸಹನೆ. ಪುಣ್ಯವಿದ್ದರೆ ದೂರಾಲೋಚನೆ. ಪುಣ್ಯವಿದ್ದರೆ ಹಿತದ ಚಿಂತನೆ. ಕೊನೆಗೆ ಮಂಗಳವಾಗುವದು ನಿಶ್ಚಿತ, ಅದು ಆಗುವದು ಪುಣ್ಯವಂತನಿಗೆ.

ಜ್ಙಾನ. ಸಮಾಧಾನ, ಶಾಂತಿ, ಆರೋಗ್ಯಭಾಗ್ಯ, ಮನಃಸ್ವಾಸ್ಥ್ಯ, ಎಲ್ಲವೂ ಪುಣ್ಯವಂತರಿಗೆ. *ಪುಣ್ಯವಂತನಿಗೆ ದುರಾಲೋಚೆನೆಗಳು ತುಂಬ ಕಡಿಮೆ, ಅಂತೇ ಹಿತವಾದ ದೂರಾಲೋಚೆನೆಗಳೇ ಹೆಚ್ಚೆಚ್ಚು* ಅಂತೆಯೆ ನಮ್ಮ ಸಮಾಜದಲ್ಲಿ ಪುಣ್ಯಸಂಪಾದೆನೆಗೆ ಅಷ್ಟಷ್ಟು ಪ್ರಾಶಸ್ತ್ಯ. ಪುಣ್ಯ ಸಂಪಾದೆನೆಯ ಕಡೆ ಗಮನಕೊಡುವದು ನಮನಮಗೆ ಬಿಟ್ಟಿರುವದು.

ಅಪಘಾತಗಳಿಗೆ ಮನಸ್ಸು ಪ್ರೇರಿಸುವದು ಪಾಪವಿದ್ದಾಗ. ಅಪಮೃತ್ಯವೆಡೆಗೆ ನಮ್ಮನ್ನು ಕರೆದೊಯ್ಯುವದು ಪಾಪವೇ. ದುಶ್ಚಗಳಿಗೆ ಬಲಿಯಾಗಿಸುವದೂ ಪಾಪವೇ. ಆಗಬೇಕಾದ ಮಂಗಳಗಳು ಆಗದಿರುವದೂ ಪಾಪಗಳಿಂದಲೇ.

ಗುರು, ದೇವರು, ದೇವಪ್ರೀತಿ, ಅತ್ಯಂತ ಸದ್ವಿಚಾರ, ಅಪಮೃತ್ಯು ಪರಿಹಾರ, ರೋಗಗಳ ಎಚ್ಚರಿಕೆ, ಆಗುವ ಅಪಘಾತಗಳನ್ನು ತಪ್ಪಿಸುವದು, ಆಗುವ ಎಲ್ಲ ಮಂಗಳಗಳು ಸುಸೂತ್ರವಾಗಿ ಆಗುವದು, ಎಲ್ಲವೂ ಪುಣ್ಯದ ಬಲದಿಂದಲೇ.......

೧೦ ನಿಮಿಷದ ಎರಡೂ ಹೊತ್ತು ಸಂಧ್ಯಾವಂದನೆ, ನಿತ್ಯ ಸಾವಿರ ಗಾಯತ್ರೀ ಜಪ, ಕೇವಲ ಹನ್ನೆರಡು/ ಇಪ್ಪತ್ತುನಾಲಕು ನಮಸ್ಕಾರ, ಕೇವಲ ಇಪ್ಪತ್ತೇ ನಿಮಿಷದ ಪೂಜೆ. ವಾರಕ್ಕೊಂದು ದಿನವಾದರೂ ದೇವಸ್ಥಾನಕ್ಕೆ ಹೋಗಿ ಇಪ್ಪತ್ತು ನಿಮಿಷ ಕಣ್ಣುಮುಚ್ಚಿ ಯಾವಕಡೆಯೂ ಗಮನಕೊಡದೇ ಕೂಡುವದು, ಶರಣಾಗತಿ, ನಿತ್ಯ/ ವಾರಕ್ಕೊಂದು ದಿನ ಕೆಲಹೊತ್ತಾದರೂ ಪಾಠ ಇತ್ಯಾದಿಗಳೇ ತಳಹದಿಯ ಪುಣ್ಯಸಂಪಾದನೆಯ ಮಾರ್ಗವಾಗಿದೆ.
*ಅದೃಷ್ಟ ಸಹಿತವಾದ ಮನಸ್ಸು ಅತ್ಯಂತ ಸದೃಢ ಹಾಗೂ ಸ್ವಸ್ಥ.*ಸ್ವಲ್ಪ ವಿಚಾರ ಮಾಡಿ ನಿರ್ಣಯ ತೆಗೆದುಕೊಳ್ಳೋಣ ಸ್ನೇಹಿತರೇ.*
*****


No comments:

Post a Comment