SEARCH HERE

Monday 1 April 2019

ರಾಯರು ರಾಘವೇಂದ್ರ ಸ್ವಾಮಿ rayaru raghavendra swamy





gandha alankara to rayaru on akshaya triteeya 2020




******
read more

click  rayaru raghavendra swamy 1671 mantralaya shravana krishna dwiteeya ರಾಯರು ರಾಘವೇಂದ್ರ ಸ್ವಾಮಿ ಮಂತ್ರಾಲಯ 

please look at https://madhwayati.blogspot.com/ for more

info from sriraghavendraswami.blogspot.com

Sri. Raghavendra Swamy 1595–1671


Is a respected 16th century Hindu saint who advocated Madhvism (worship of Vishnu as the supreme God) and Sri Madhvacharya's Dvaita philosophy. He ascended Brindavana at Mantralayam in present day Andhra Pradesh in 1671. His Brindavanam in Mantralayam situated in Andhra Pradesh, India is a pilgrimage destination. Sri Raghavendra Swami was born as Sri Venkata Natha (Venkata Ramana), the second son of Sri Thimanna Bhatta and Smt. Gopikamba on Thursday, Sukla Navami of Phalguna month in 1595, when the moon was in Mrigashīrsha Nakshatra, at Bhuvanagiri, near present-day Chidambaram in Tamil Nadu. Sri Thimmanna Bhatta was the son of Sri Kanakachala Bhatta and the grandson of Sri Krishna bhatta, a Veena scholar in the court of King Krishnadevaraya. Sri. Thimanna Bhatta and his wife, Smt. Gopikamba had a son, Gururajacharya and a daughter, Venkatamba.

Sri Venkanna Bhatta was also called Venkatanatha or Venkatacharya in honor of Sri Venkateshwara at Tirupati, with whose blessings he was considered to have been born, to his parents for their devotion and diligence towards the deity.

Early life
Sri Venkatanatha proved to be a very brilliant scholar from a very young age who learnt to play the Veena very proficiently thanks to his father and grandfather.

After his father's demise, Venkatanatha was brought up by his brother Sri Gururaja Bhatta and completed the initial portion of his education under his brother-in-law Lakshminarasimhacharya's guidance in Madurai.

Marriage

After his return from Madurai in 1614, Sri Venkatanatha married Smt. Saraswathi Bai in the same year and had a son Sri Lakshminarayanacharya. After his marriage, Sri Venkatanatha and his family went to Kumbakonam where he studied the Dwaita vedantha, grammar and literary works under his guru, Sri Sudheendra Theertha.

Sri Venkatanatha was already very well versed in bhashyas and consistently prevailed over renowned and reputed scholars, irrespective of the complexity of the debates. He was an ardent devotee of Sri Moola Rama and Sri Panchamukha MukhyaPranaDevaru (the five-faced form of Hanuman - Pancha meaning five, mukha meaning faces). He spent a large part of his Poorvashrama life teaching Sanskrit and the ancient Vedic texts to children.

He never demanded any money for his services and endured a life of poverty along with his wife and son. They went without food several times a week. On occasion, his wife did not have change of clothes. This forced her daily change of wear to be dependent on when the clothes dried. She would wear 1/2 the saree, wait for the other 1/2 to dry and wrap it around her. But he was so devoted in his quest for a higher spiritual plane that these obstacles never deterred his faith in the Lord

Ordination into Sanyasa as Guru Raghavendra

Thus while his life was spent in the worship of God and service of humanity, his spiritual guru, Sri Sudheendra Theertharu, was looking for a successor to his math. He had a dream where the Lord indicated that Sri Venkatanatha would be the right person to succeed him as the pontiff. Sri Venkatanatha initially refused due to his responsibility towards his young wife and son but was soon blessed by the Goddess of Learning, where she in a dream indicated that he was to seek salvation as a Sanyasi. Sri Venkatanatha treated this as an omen and changed his mind. The sanyasa ordination took place in 1621 on the Phalguni Sukla Dwitiya at Tanjore.

Moksha of Smt. Saraswathi

On the day of Sri Venkatanatha's ascension into SanyasAshrama, his wife, Smt. Saraswathi was seized by a sudden desire to see her husband's face for the last time. She ran towards the Matha throwing caution to the winds and was turned back. Since she couldn't see her husband any longer, she committed suicide by drowning in an old and unused well on the way.

Per the tenets of Hinduism, she became a ghost trapped mid-way between Heaven and Earth due to her untimely death. Since her last wish of seeing her husband was not fulfilled, her ghost went to the matha to witness the ordaining function. However, by the time she arrived, her husband had become a Sannyasi Sri Raghavendra Theertha. However, Sri Guru Raghavendra could immediately sense his wife's presence with his spiritual powers. He sprinkled some holy water from His Kamandalu on her as a means of granting her last wish. This action granted her moksha or liberation from the cycle of births and deaths and was considered her reward for a lifetime of dedicated and selfless service to Sri Raghavendra Swami.

Sri Sudheendra Tirtha Swamiji

On handing over the Peetha to Sri Raghavendra Swami, his guru, Sri Sudheendra Tirtha Swamiji left for his heavenly abode. His Brindavana was constructed at Anegundi near Hampi under the personal supervision of Sri Raghavendra Swami. Sri Sudheendra Tirtha Swami's Brindavana is the ninth Brindavana at that location, earning the region the popular moniker of "Nava Brindavana". It is an extremely holy pilgrimage centre for Madhvas.

Sri Yadavendra Tirtha and Sri Raghavendra Swami

Much before Sri Raghavendra Swami ascended as Peethaathipathi of the Mutt, Sri Yadavendra Tirtha had been given Sanyasa by Sri Sudheendra Tirtha Swamiji. When he came back to Tanjore from his Teertha Yatra across Southern India, Sri Raghavendra Swami offered to make him the Peethaathipathi of the Matha and offered him the idols of Sri Moola Rama. However, Sri Yadavendra Tirtha, on seeing the devotion and spiritual prowess with which Sri Raghavendra Swami was pontificating the Mutt, declined the offer and continued on his pilgrimage. Thus Sri Raghavendra Swami then continued to enrich Dvaita Vedanta from Kumbakonam where numerous shishyas joined the Matha.

Panchamuki

Sri Guru Raghavendra performed penance at a place called Panchamukhi, near Mantralayam, in present day Andhra Pradesh where He received darshan of Hanuman in the form of Sri Panchamukha MukhyaPrana. Sri Guru Raghavendra is considered by his devotees to be a reincarnation of Prahalada, the devotee who was saved by Vishnu in his Avatar as Narasimha (see Vaishnava Theology). Prahalada in turn is believed to be a reincarnation of Shankukarna, a Devatha, in the Dwapara Yuga. Hence, Sri Raghavendra Swamy chose Mantralayam as the location of his Brindavana

Jeeva Samadhi



On Dwitiya Day of Sravana Krishna Paksha in 1671, Raghavendra Swami gave a soul-stirring speech to hundreds of devotees who had gathered to watch the event.

Sloka by Sri. Appannacharya which is known to all madhwa-



"Poojyaaya Raaghavendraaya Satya Dharma Rathaayacha
 Bhajataam Kalpa Vrukshaaya Namathaam Kaamadhenave"
****

ಫಾಲ್ಗುಣ ಶುದ್ಧ ಪ್ರತಿಪದಾ

ರಾಯೆನ್ನೆ ರಾಶಿ ದೋಷಗಳ ದಹಿಸುವರು
ಘಾಯೆನ್ನೆ ಘನ ಜ್ಞಾನ ಭಕುತಿಯನಿತ್ತು
ವೇ ಯೆನ್ನೆ ವೇಗಾದಿ ಜನನ ಮರಣ ಗೆದ್ದು
ದ್ರಾ ಯೆನ್ನೆ ದ್ರವಿಣೋದ ಶೃತಿಗೇವ ಘನಕಾಂಬ

ಎನ್ನುವ ದಾಸಾರ್ಯರ ಮಾತುಗಳನ್ನು ಕ್ಷಣಕ್ಷಣಕ್ಕೂ ಬಿಡದೇ ಸ್ಮರಣೆ ಮಾಡುತ್ತ , ಕಲಿಯುಗ ಕಲ್ಪತರು, ಕಾಮಧೇನು, ನಮಗಾಗಿ ಹುಟ್ಟಿ ಬಂದು ಇಂದಿಗೂ ಮಂತ್ರಮಂದಿರದಲ್ಲಿ ನೆಲಸಿರುವವರಾದ, ಮತ್ತೆ ಪ್ರತಿಯೊಂದು ಊರಿನಲ್ಲಿಯೂ ವೃಂದಾವನದಲ್ಲಿ ನೆಲೆನಿಂತು,  ಭಕ್ತರನು ಬೇಡಿದ್ದಲ್ಲಿ ಬಂದು ಕಾಯುತ್ತಿರುವ ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರಿಗೆ ಜೀವದ ಭಕ್ತಿಯಿಂದ ಶರಣಾಗೋಣ...

ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ, (ದ್ವಿತೀಯಾ)ದಿಂದ ಅವತಾರದಿನದವರೆಗಿನ(ಸಪ್ತಮೀ)  ಸಪ್ತಾಹ ಮಹೋತ್ಸವದ 
ವರೆಗಿನ  ಸಪ್ತಾಹವನ್ನು ನಾವೂ ಸೇವಾರೂಪದಿ ಆಚರಿಸೋಣ..

ಫಾಲ್ಗುಣ ಶುದ್ಧ ಪ್ರತಿಪದೆಯಿಂದ , ಫಾಲ್ಗುಣ ಶುದ್ಧ ಸಪ್ತಮಿ ವರೆಗೆ...

ಶ್ರೀ ರಾಯರ ಅವರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ ಮೂಲರಾಮದೇವರ ಅನುಗ್ರಹ ಸದಾ ನಮಗಿರಲೆಂದು ಭಕ್ತಿಯಿಂದ ಪ್ರಾರ್ಥನೆ
*****

(ಬಾಲಕ ವೆಂಕಟನಾಥ - ರಾಯರ ಪೂರ್ವಾಶ್ರಮದ ಹೆಸರು - ತಮ್ಮ ತಂದೆ ತಾಯಿಗಳಾದ ಶ್ರೀ ತಿಮ್ಮಣ್ಣ ಭಟ್ಟರು ಮತ್ತು ಶ್ರೀಮತಿ ಗೋಪಿಕಾಂಬ ದೇವಿಯ ತೊಡೆಯ ಮೇಲೆ ಕುಳಿತು ಆಟವಾಡುವ ಪರಿ. ಇದನ್ನು ಅವರ ಅಣ್ಣನವರಾದ ಶ್ರೀ ಗುರುರಾಜ ಮತ್ತು ಅಕ್ಕ ವೆಂಕಟಾಂಬ ನವರು ನೋಡಿ ಆನಂದಿಸುತ್ತಾ ಇರುವುದು.  ಕಲಾವಿದ ನ ಕೈಯಲ್ಲಿ ಬಹು ಸುಂದರವಾದ ಚಿತ್ರ.)

ಮತ್ತೊಂದು ಪುತ್ರನ ಬಯಕೆ ಗಾಗಿ ತಿಮ್ಮಣ್ಣ ಭಟ್ಟರು ಹಾಗು ಗೋಪಿಕಾಂಬ ದಂಪತಿಗಳು ಭೂ ವೈಕುಂಠ ಎಂದು ಕರೆಯಲ್ಪಡುವ ತಿರುಪತಿ ಹೋಗಿ ಅನೇಕ ವ್ರತ ನೇಮಾದಿಗಳಿಂದ,ಸೇವೆಯನ್ನು ಮಾಡಿದರು.
ಇವರ ಸೇವೆಗೆ ಸ್ವಾಮಿ ಪ್ರಸನ್ನ ನಾಗಿ 
ಆ ದಂಪತಿಗಳಿಗೆ ಸ್ವಪ್ನದಲ್ಲಿ ಬಂದು
ನನ್ನ ಭಕ್ತರಲ್ಲಿ ಅಗ್ರ ಗಣ್ಯನು,ಲೋಕಮಾನ್ಯ ನು ಆದ ಸತ್ಪುತ್ರನ್ನು ನಿಮಗೆ ಕರುಣಿಸುವೆನು ಅಂತ ಸೂಚನೆ ಕೊಡುತ್ತಾನೆ.. ಆನಂತರ ದಂಪತಿಗಳು ಪೂಜೆ ಸಲ್ಲಿಸಿ ಹಿಂತಿರುಗಿ ತಮ್ಮ ಊರಿಗೆ ಬರುತ್ತಾರೆ.
ಕಾಲ ಕ್ರಮೇಣ ಗೋಪಿಕಾಂಬ ದೇವಿಯು ಗರ್ಭಿಣಿ ಆಗುತ್ತಾಳೆ.
ಶ್ರೀ ವೆಂಕಟ ನ ದಯದಿಂದ ಗೋಪಿಕಾಂಬ ದೇವಿಯು
ಶ್ರೀ ಶಾಲಿವಾಹನ ಶಕೆ 1517ನೇ
ಮನ್ಮಥ ನಾಮ ಸಂವತ್ಸರದ
ಫಾಲ್ಗುಣ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ಗುರುವಾರ ಮೃಗಶಿರಾ ನಕ್ಷತ್ರ (ಕ್ರಿ.ಶ 1595)
ದಂದು  ಸರ್ವ ಲಕ್ಷಣಗಳು ಉಳ್ಳ ಪುತ್ರ ರತ್ನ ವನ್ನು ಪ್ರಸವಿಸುತ್ತಾಳೆ
ಆ ಸಮಯದಲ್ಲಿ ಶುಭ ಸೂಚನೆ ಗಳು ಗೋಚರವಾಗುತ್ತದೆ.
ಲೋಕದ ಜನರನ್ನು ಉದ್ದರಿಸಲು
ಶ್ರೀ ಪ್ರಹ್ಲಾದ ರಾಜರು ಮತ್ತೆ ಜನಿಸುತ್ತಾರೆ.
ಇಂದು ರಾಯರು ಧರೆಯೊಳಗೆ ಅವತಾರ ಮಾಡಿದ ದಿನ
ಎಲ್ಲಾ ರು ಅವರ ಬೃಂದಾವನ ದರುಶನ ಮಾಡುವ.
ರಾಯರ ಅನುಗ್ರಹ ಎಲ್ಲಾ ಜೀವಿಗಳ ಮೇಲೆ ಆಗಲಿ
: ಶ್ರೀ ಗುರು ಜಗನ್ನಾಥ ದಾಸರು ತಮ್ಮ ಕೃತಿಯಲ್ಲಿ ರಾಯರ ಬಗ್ಗೆ ಹೇಳಿದ್ದಾರೆ.
ಮಾತ ಪಿತ ಸುತ ಭ್ರಾತ ಬಾಂದವ
ದೂತ ಸತಿ ಗುರು ನಾಥ ಗತಿ ಮತಿ
ನೀತ ಸಖ ಮುಖವ್ರಾತ ಸಂತತ ಎನಗೆ ನೀನಯ್ಯ
ಭೂತಿದಾಯಕ ಸರ್ವಲೋಕದಿ
ಖ್ಯಾತ ಗುರು ಪವಮಾನ ವಂದಿತ ದಾತ
ಗುರು ಜಗನ್ನಾಥ ವಿಠ್ಠಲನ ಪ್ರೀತಿ ಪಡೆದಿರುವಿ

*******


ಪೂಜ್ಯಾಯ ರಾಘವೇಂದ್ರಾಯ
ಸತ್ಯಧರ್ಮರತಾಯ ಚ !
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ !!

ಅರ್ಥ : - ಪೂಜ್ಯರಾದ, ಸತ್ಯ, ಧರ್ಮ ಇವುಗಳನ್ನು ಚೆನ್ನಾಗಿ ಪಾಲಿಸುವಂಥ, ನಿಮ್ಮನ್ನು ಭಜಿಸಿದವರಿಗೆ & ನಮಸ್ಕರಿಸಿದವರಿಗೆ ಕಲ್ಪವೃಕ್ಷ ಕಾಮಧೇನುವಿನಂತೆ ಇರುವ ಶ್ರೀರಾಘವೇಂದ್ರಸ್ವಾಮಿಗಳಿಗೆ (ರಾಯರಿಗೆ) ಸಾಷ್ಟಾಂಗ ನಮಸ್ಕಾರ. ಅಂತ ಪ್ರಾರ್ಥನೆ.

ಕಲಿಯುಗದದೈವ ಅಂದ್ರೆ ಅದು ರಾಯರು ರಾಯರು ಅಂದ್ರೆ ಸಾಕು ಎಲ್ಲರಿಗೂ ಏನೋ ಒಂದು ಭಯ,ಭಕ್ತಿಗಳು ಹುಟ್ತಾವೆ. ಅಂಥ ಮಹಾಮಹಿಮೆವುಳ್ಳವರು ಅದು ರಾಯರು. ಅಂಥ ರಾಯರು ಎಲ್ಲರಿಗೂ ಅನುಗ್ರಹಿಸಲಿ.


*********

ಭಗವಂತನು ಇಲ್ಲ,ಧರ್ಮ ಇಲ್ಲ ಎನ್ನುವ  ಹಲವರ  ನಿಂದನೆಯ ಮಾತು ಬರೀ ಕಲ್ಪನೆ ಅಂತ ಹೇಳಬಹುದು.
330ಕ್ಕು ಹೆಚ್ಚಿನ ವರ್ಷಗಳ ಹಿಂದೆ ಸಜೀವವಾಗಿ ಬೃಂದಾವನ ಪ್ರವೇಶ ಮಾಡಿ ಕಣ್ಮರೆಯಾದ ಒಬ್ಬ ಯತಿಗಳು ನೂರಾರು ಬೃಂದಾವನ ಗಳಲ್ಲಿ, ಮನೆ ಮನೆಗಳಲ್ಲಿ ಎಲ್ಲರ ಮನಗಳಲ್ಲಿ ಸನ್ನಿಹಿತ ರಾಗಿ,ಕರೆದಲ್ಲಿಗೆ ಬಂದು ನಾಮ ಸ್ಮರಣೆ ಮಾತ್ರ ದಿಂದ ಜಗತ್ತಿನ ಯಾವ ಮಾನವ ಶಕ್ತಿ ಗಳು ಗುಣಪಡಿಸುವಲ್ಲಿ ಸೋತ ಅನೇಕ ರೋಗ ಪರಿಹಾರ,  ಬೇಡಿದ ಮನೋರಥ ಪೂರೈಸುವ, ಜ್ಞಾನವನ್ನು ನೀಡುವದು ಸಾಧ್ಯ ವಾಗುತ್ತಾಇತ್ತೇ??
ಒಬ್ಬರು, ಇಬ್ಬರು,ಅಥವಾ ನೂರಾರು ಜನ ಶ್ರೀ ರಾಯರನ್ನು ಭಜಿಸಬಹುದು.
ಆದರೆ ಕೋಟ್ಯಾಂತರ ಜನರು ಅವರನ್ನು ಆರಾಧಿಸುತ್ತಾರೆ ಅಂದರೆ
ಅವರಲ್ಲಿ ಯಾವುದೋ  ಒಂದು ಮಹಾಶಕ್ತಿಅಡಗಿದೆ ಎಂಬುವದು ಸ್ಪಷ್ಟವಾಗಿ ಕಾಣುತ್ತದೆ.
ಇಂದು ಅತ್ಯಂತ ಪ್ರತಿಭಾ ಶಾಲಿಗಳು,ವೈದ್ಯರು,ರಾಜಕೀಯ ವ್ಯಕ್ತಿಗಳು, ಸಾಹಿತಿಗಳು ಉದ್ಯಮ ಮಾಡುವ ದೊಡ್ಡ ವ್ಯಕ್ತಿಗಳು ವಿಜ್ಞಾನಿಗಳು, ಸಣ್ಣ ಪುಟ್ಟ ಕೆಲಸ ಮಾಡುವ ಜನಗಳು, ಯಾವುದೇ ಮತ ಭಾಷೆ ಜಾತಿ ಭೇದ ವಿಲ್ಲದೇ ದೇಶದ ಹಲವಾರು ಕಡೆಗೆ ಇವರನ್ನು ಆರಾಧಿಸುತ್ತಾರೆ ಅಂದರೆ ಇದು ಸಣ್ಣ ಹಾಗು ಸಾಮಾನ್ಯವಾದ ವಿಷಯ ಅಲ್ಲ.
ಶ್ರೀ ರಾಯರು ಸಾಮಾನ್ಯ ಮಾನವರಲ್ಲ
ದೇವಾಂಶ ಸಂಭೂತರು
ಪರಮಪುರುಷ ನಾದ 
ಆ ಶ್ರೀ ಹರಿಯ ಕಾರುಣ್ಯಕ್ಕೆ ಪಾತ್ರ ರಾದವರು
ಇಂತಹ ಗುರುಗಳಲ್ಲಿ ಭಗವಂತನು ನಿಂತು ಮಾಡಿಸುವ ಅನೇಕ ಮಹಿಮೆಯನ್ನು ನಾವುಗಳು ಇಂದಿಗು ನೋಡುತ್ತೇವೆ ಹಾಗು ಕೇಳುತೇವೆ.
ಶ್ರೀ ಗುರು ಜಗನ್ನಾಥ ದಾಸರು ಹೇಳಿದಂತೆ
ಏನು ಚೋದ್ಯವೋ ಕಲಿಯ ಯುಗದಲಿ
ಏನು ಈತನ ಪುಣ್ಯ ಬಲವೋ
ಏನು ಈತನ ವಶದಿ ಶ್ರೀಹರಿ ತಾನೇ ನಿಂತಿಹನೋ
ಏನು ಕರುಣಾನಿಧಿಯೋ ಈತನು
ಏನು ಭಕುತರಿಗಭಯದಾಯಕ
ಏನು ಈತನ ಮಹಿಮೆ ಲೋಕಕ್ಕೆ ಗಮ್ಯವೆನಿಸಿಹದೋ

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುಣ ಬಲದಲಿ
ರಾಘವೇಂದ್ರರ ಭಕುತರಾದವ ಇದನು ಕೇಳುವದು

ದಾತ ಗುರು ಜಗನ್ನಾಥ ವಿಠ್ಠಲನ ಸೇವಕಾಗ್ರಣಿಯೋ
🙏ಅ.ವಿಜಯ ವಿಠ್ಠಲ🙏
*****
" ಶ್ರೀ ರಾಯರ ವೃಂದಾವನ - ಒಂದು ಚಿಂತನೆ " 


ಶ್ರೀ ಮಂತ್ರಾಲಯ ಪ್ರಭುಗಳ ಬೃಂದಾವನವನ್ನು ಮೂರು ಭಾಗಗಳಲ್ಲಿ ನೋಡಬಹುದು.

೧. ಕೂರ್ಮಾಸನದಿಂದ ಹಿಡಿದು ವಸ್ತ್ರವನ್ನುಡಿಸುವ ಸ್ಥಳದವರೆಗೂ ಇರುವುದು ಮೊದಲನೆಯ ಭಾಗ.

ಇದರಲ್ಲಿ ೯ ಉಪಭಾಗಗಳಿವೆ. ಅವುಗಳು...

೧. ಪರಮಪುರುಷ ೨. ಆಧಾರ ರೂಪಿಣಿ ಶಕ್ತಿ ೩. ವಿಷ್ಣು, ಕೂರ್ಮ ೪. ವಿಷ್ಣು ಕೂರ್ಮ ೫. ವಾಯು ಕೂರ್ಮ ೬. ಆದಿಶೇಷ ೭. ಭೂಮಿ ೮. ಕ್ಷೀರಸಾಗರ ೯. ಶೇತದ್ವೀಪ

೨. ಬೃಂದಾವನದ ಮಧ್ಯ ಭಾಗದಿಂದ ತೆನೆಗಳ ವರೆಗಿನದ್ದು ಎರಡನೆಯ ಭಾಗ.

ಇಂದು ಬೃಂದಾವನದಲ್ಲಿ ನಾಮ ಹಾಗೂ ಕಣ್ಣು ಮೂಗು ಇತ್ಯಾದಿ ಹಚ್ಚುವ ಭಾಗದಿಂದ ಕೂಡಿಕೊಂಡು ೬ ತೆನೆಗಳ ವರೆಗೂ ಇರುವ ಭಾಗವು ಮಂಟಪಕ್ಕೆ ಪ್ರತಿ ರೂಪವಾಗಿದೆ.

೩. ತೆನೆಗಳಿಂದ ಕೂಡಿದ ಭಾಗ ಮೂರನೆಯ ಭಾಗ.

ಇದು ೬ ಊರ್ಧ್ವ ಲೋಕಗಳಿಗೆ ಪ್ರತಿ ರೂಪವಾಗಿದೆ. ಭೂಲೋಕದ ಮೇಲೆ...

೧. ಭುವರ್ಲೋಕ
೨. ಸ್ವರ್ಗಲೋಕ
೩. ಮಹಾಲೋಕ
೪. ಜನೋಲೋಕ
೫. ತಪೋಲೋಕ
೬. ಸತ್ಯಲೋಕ

 ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಸತ್ಯಲೋಕದಿಂದಲೇ ಭುವಿಗಿಳಿದು ಬಂದ ಕಲ್ಪವೃಕ್ಷ - ಕಾಮಧೇನು. 

ಶ್ರೀಮಂತ್ರಾಲಯ ಪ್ರಭುಗಳ ಬೃಂದಾವನದಲ್ಲಿರುವ ೭೧೩ ಸಾಲಿಗ್ರಾಮಗಳು ಪೀಠ ಪೂಜೆಯಲ್ಲಿ ಬರುವ ಭಗವಂತನ ಹಾಗೂ ಅವನ ಪರಿವಾರ ದೇವತೆಗಳಿಗೆ ಸೂಚಿತವಾಗಿವೆ.

ಶ್ರೀ ಗುರುಸಾರ್ವಭೌಮರು ಬ್ರಹ್ಮಾಂಡ - ಹರಿಮಂದಿರ - ಪೀಠಗಳಿಗೆ ಪ್ರತಿರೂಪವೆನಿಸಿದ, ಸುಂದರ ಬೃಂದಾವನದ ಕೆಳ ಭಾಗದಲ್ಲಿ ಕುಳಿತಿದ್ದಾರೆ. ಇದರಿಂದ ಶ್ರೀ ಗುರುರಾಜರ ಬೃಂದಾವನ ಶ್ರೀ ಹರಿಯ ಮಂದಿರವೇ ಆಗಿದೆ.

 " ಶ್ರೀ ಗುರುರಾಜರ ಬೃಂದಾವನದಲ್ಲಿರುವ ಭಗವದ್ರೂಪಗಳು " 

 ಶ್ರೀ ವಿಜಯರಾಯರು... 

 **ರಾಮ ನರಹರಿ ಕೃಷ್ಣ ಕೃಷ್ಣರ ।
ನೇಮದಿಂದೀ ಮೂರ್ತಿಗಳ ಪದ ।* 
ತಾಮರಸ ಭಜನೆಯನು ಮಾಳ್ಪರು ।
ಕೋಮಲಾಂಗರು ಕಠಿಣ ಪರವಾದಿ ।।* 

ಹಾಗೆಯೇ...

ಅಲವಬೋಧ ಮಿಕ್ಕಾದ ಮಹ । ಮುನಿ ।
ಗಳು ಸಾಂಶದಿ ಒಂದು ರೂಪದಿ ।
ನೆಲೆಯಾಗಿ ನಿತ್ಯದಲಿ ಯಿಪ್ಪರು ।
ಒಲಿಸಿ ಕೊಳುತಲಿ ಹರಿಯ ಗುಣಗಳ ।।

 ಶ್ರೀ ಗೋಪಾಲದಾಸರು.... 

ನರಹರಿ ರಾಮ ಕೃಷ್ಣ ಸಿರಿ ವೇದವ್ಯಾಸ ।
ಎರಡೆರಡು ನಾಲುಕು ಹರಿ ಮೂರ್ತಿಗಳು ।
ಪರಿವಾರ ಸಹಿತವಾಗಿ ಸಿರಿ ಸಹಿತ ನಿಂದು ।
ಸುರಗುರು ಮಧ್ವಾಚಾರ್ಯರೇ ಮೊದಲಾಗಿ ।
ತರವಾಯದಲ್ಲಿನ್ನು ತಾರತಮ್ಯಾನುಸಾರ ।
ಪರಿಪರಿ ಯತಿಗಳು ಯಿರುತಿಪ್ಪವರಿಲ್ಲಿ ।।

 ಶ್ರೀ ವೆಂಕಟವಿಠಲರು... 

ಸತ್ಯಾಧಿ ಗುಣಸಿಂಧು ವೆಂಕಟವಿಠಲನ್ನ ।
ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ ।
ಬೃಂದಾವನ ನೋಡಿರೋ ।।

 ಶ್ರೀ ಗುರು ಜಗನ್ನಾಥದಾಸರು... 

ಶ್ರೀ ನಾರಸಿಂಹ ಯದುವೀರ ರಘುತ್ತಮಾಖ್ಯ ।
ವಾಶಿಷ್ಠಕೃಷ್ಣ ಹಯತುಂಡ ಪದಾಬ್ಜಭೃಂಗ ।।

ಹಾಗೆಯೇ ಇನ್ನೊಂದು ಪದ್ಯದಲ್ಲಿ ಶ್ರೀ ಗುರು ಜಗನ್ನಾಥದಾಸರು...

ಶ್ರೀವರನುತಾ ಚಕ್ರ ರೂಪದಿ ।
ಜೀವೋತ್ತಮ ಪ್ರಾಣದೇವನು ।
ಸಾವಿರಾಸ್ಯನೇ ರಾಯರೆಂದು ಸುರರು ನಿಂತಿಹರು ।।

ಅಲವಬೋಧ ಸುತೀರ್ಥ ಮುನಿಗಳು ।
ಹಲವು ಕಾಲದಿ ನಿಂತು ಜನರಘ ।
ವಳಿದು ಕೀರುತಿಯಿತ್ತು ಲೋಕ ವಿಖ್ಯಾತಿ ಮಾಡಿದರು ।।

ಎಲ್ಲ ಕಾಲದಿ ಪ್ರಾಣ ಲಕುಮೀ ।
ನಲ್ಲ ನಿನ್ನೊಳು ನಿಂತು । ಕಾರ್ಯಗ ।
ಲೆಲ್ಲ ತಾನೇ ಮಾಡಿ ಕೀರ್ತಿಯು ನಿನಗೆ ಕೊಡುತಿಪ್ಪ ।।

 ಶ್ರೀ ಕನಕಾದ್ರಿವಿಠಲರು... 

ಸ್ವಾಮಿ ನಿಮ್ಮರಿದೇನೆಂದು ಸುಮಹಾ ವೃಂದಾವನದ ।
ಆ ಮೂಲಾಗ್ರದಲಿ ಅಣು ಮಹದ್ರೂಪಾನಂತ ವಿಶ್ವ ದಾಸ್ಯೆಕೂಡಿ ।
ಶ್ರೀ ಮಹಾಲಕ್ಷ್ಮೀಕಾಂತ ತುರ್ಯ ಶಿರದ ಮೇಲೆ ।
ರಾಮ ವಿಶ್ವಾದಿ ಸುರರು ತೆನೆ ಕಂಕಣದಿ ಋಷಿಗಳು ।
ಆ ಮಹಾ ಹೃದ್ದೇಶದಿ ಪಿತ್ರಾದಿಗಳು । ಈ ।
ನೇಮದಿ ಕೆಳ ಕಂಕಣದಿ ಗಂಧರ್ವರು ।
ಈ ಮಾಡಗಳಲ್ಲಿ ಕ್ಷಿತಿಪರು ಪೀಠಾದಲ್ಲಿ ।
ಸ್ವಾಮಿ ಕಮಲಾಭಾದಿ ಯತಿಗಳು ।
ಸಮಸ್ತ ದಾಸರಿಹರು ವೇದಿಕದಿ ಪ್ರಾಕಾರದಲ್ಲಿ ।
ಭೂಮಿ ಸುರರು ಅಂಗಳದಿ ।
ಶೀಮೆ ರಾಯರು ಅನೇಕ ಶಾಖಸ್ತ ।
ರೋಮಾಂಚನರಾಗಿ ಕೈಯೆತ್ತಿ ತುತಿಪರೋ ।
ಶ್ರೀಮಂತ ಗುರು ರಾಘವೇಂದ್ರಂತರ್ಯಾಮಿ ।
ಶ್ರೀಮಂತ ಕನಕಾದ್ರಿವಿಠಲ ।
ನೀ ಮರೆಯದೆ ಜ್ಞಾನ ಶುದ್ಧಿಯ ನೀಯೋಗಿ ।।

ಹೀಗೆ ಶ್ರೀ ಭಗವಂತನ ವಿಭೂತಿ ರೂಪಗಳಿಂದಲೂ, ಶ್ರೀ ವಾಯುದೇವರ ನಿತ್ಯಾವೇಶದಿಂದಲೂ; ಶ್ರೀಮದಾಚಾರ್ಯರೇ ಮೊದಲಾದ ಯತಿವರೇಣ್ಯರ ಸನ್ನಿಧಾನದಿಂದಲೂ ಕೂಡಿರುವವರು ಶ್ರೀ ಗುರುರಾಜ ಗುರುಸಾರ್ವಭೌಮರು!!

ಮೇಲ್ಕಂಡ ಪದ್ಯಗಳಿಗನುಗುಣವಾಗಿ ಧಾರವಾಡದ ನಿವಾಸಿಗಳಾದ ಶ್ರೀ ಅರವಿಂದ ಕುಲಕರ್ಣಿಯವರು ತಮ್ಮ ೭೫ನೇ ವಯಸ್ಸಿನಲ್ಲಿ ಶ್ರೀ ರಾಯರ ವೃಂದಾವನವನ್ನು ಚಿತ್ರಿಸಿದ್ದು ಶ್ರೀ ರಾಯರು ಬೃಂದಾವನದ ಮುಂದೆ ಕುಳಿತಿದ್ದಾರೆ. ಅದರಲ್ಲಿ ಶ್ರೀ ಶ್ರೀನಿವಾಸ - ಶ್ರೀ ನರಸಿಂಹ - ಶ್ರೀ ರಾಮ - ಶ್ರೀ ಪಂಚಮುಖಿ ಪ್ರಾಣದೇವರು - ಶ್ರೀ ಕೃಷ್ಣ ಮತ್ತು ಕಾಮಧೇನುವನ್ನು ಚಿತ್ರಿಸಿದ್ದಾರೆ.

 *೧. ಶ್ರೀ ಶ್ರೀನಿವಾಸದೇವರು.  ಶ್ರೀ ಶ್ರೀನಿವಾಸನ ಪರಮಾನುಗ್ರಹದಿಂದಲೇ ಶ್ರೀ ರಾಯರ ಅವತಾರ.

ಗುರುರಾಜರು! ಜಗದ್ವಿಖ್ಯಾತವಾದ ಗೌತಮ ಗೋತ್ರದಲ್ಲಿ ಮಂಗಳಕರವಾದ ಷಾಷ್ಠಿಕ ವಂಶದಲ್ಲಿ ಖ್ಯಾತ ನಾಮರಾದ ಶ್ರೀ ವೀಣಾ ತಿಮ್ಮಣ್ಣಭಟ್ಟರು, ಸಾಧ್ವೀ ಗೋಪಿಕಾಂಬಾ ದಂಪತಿಗಳ ತಪಸ್ಸಿಗೆ ಮೆಚ್ಚಿ ಶ್ರೀ ಶ್ರೀನಿವಾಸನು...

" ತಿಮ್ಮಣ್ಣಾ! ನೀನು ನನಗೆ ಆಹ್ಲಾದವನ್ನುಂಟು ಮಾಡಿದ್ಯಾ! ನಿನಗೆ ಪ್ರಹ್ಲಾದನನ್ನೇ ಕೊಡುತ್ತೇನೆಂದೂ, ಲೋಕ ಪೂಜ್ಯನಾದ, ನನ್ನ ಭಕ್ತಾಗ್ರಣಿಯಾದ ಸತ್ಪುತ್ರನನ್ನು ಕೊಡುತ್ತೇನೆ "
ಯೆಂದು ವರವಿತ್ತು ಅನುಗ್ರಹಿಸಿದನು. ಆದ್ದರಿಂದಲೇ ಲೋಕ ವಿಲೋಕ್ಷಕನಾದ ರಮಾಪತಿಯ ವರದಿಂದ ಅವತರಿಸಿದ ಶ್ರೀ ರಾಯರು ಪರಮ ಪಾವನ ಮೂರ್ತಿಗಳಾಗಿದ್ದಾರೆ.

ಅಂತೆಯೇ, ಶ್ರೀ ರಾಯರು ಗರುಡವಾಹನನಾದ, ವೈಕುಂಠ ಪತಿಯಾದ ಶ್ರೀಲಕ್ಷ್ಮೀನಾರಾಯರಣನ ಕರುಣೆಯಿಂದ ಲಬ್ಧವಾದ ಧರ್ಮ - ಅರ್ಥ - ಕಾಮ - ಮೋಕ್ಷಗಳೆಂಬ ಚತುರ್ವಿಧ ಶುಭಾರ್ಥಗಳುಳ್ಳವರಾಗಿದ್ದಾರೆ ( ಶ್ರೀ ರಾಘವೇಂದ್ರೋ ಹರಿಪಾದಕಂಜ ನಿಷೇವಣಾಲಬ್ಧ ಸಮಸ್ತ ಸಂಪತ್ ).

ಇಷ್ಟೇ ಅಲ್ಲ, ತಮ್ಮನ್ನು ಆಶ್ರಯಿಸಿದ ಭಕ್ತ ಜನರಿಗೆ ಶ್ರೀ ಹರಿಯ ವರ ಬಲದಿಂದ, ಅನುಗ್ರಹದಿಂದ ನಾಲ್ಕು ವಿಧ ಪುರುಷಾರ್ಥಗಳನ್ನು ( ಮೋಕ್ಷವನ್ನು ) ಕೊಡಲೂ ಸಮರ್ಥರಾಗಿದ್ದಾರೆ.

ಅಗಮ್ಯ ಮಹಿಮರೂ, ಭಗವತಾಗ್ರಣಿಗಳೂ ಆದ್ದರಿಂದಲೇ, ಇಂದ್ರನ ಅಮರಾವತಿಯಲ್ಲಿ ದೇವತೆಗಳೂ ಸಹ ಶ್ರೀ ರಾಯರ ಅಮರ ಚರಿತ್ರೆಯ ಕೀರ್ತಿಯನ್ನು ಗಾನ ಮಾಡುತ್ತಿದ್ದಾರೆ ( ಕೀರ್ತಿಂ ವಿಶುದ್ಧಾಂ  ಸರಲೋಕ ಗೀತಾಮ್ - (ಶ್ರೀಮದ್ಭಾಗವತಮ್ )

 ಶ್ರೀ ಗುರು ಜಗನ್ನಾಥದಾಸರು... 

ಏನು ಪುಣ್ಯವೋ ನಿನ್ನ ವಶದಲಿ ।
ಶ್ರೀನಿವಾಸನು ಸತತ ಯಿಪ್ಪನು ।
ನೀನೆ ಲೋಕತ್ರಯದಿ ಧನ್ಯನು ಮಾನ್ಯ ಸುರರಿಂದ ।।

 ೨. ಶ್ರೀ ನರಸಿಂಹದೇವರು. 

ಶ್ರೀ ನೃಸಿಂಹನು ಕ್ಷೇತ್ರ ಮಂತ್ರಾಲಯದ ಕ್ಷೇತ್ರಪಾಲಕ. ಶ್ರೀ ರಾಯರಲ್ಲಿ ನೃಸಿಂಹ ರೂಪದಿಂದ ಶ್ರೀ ಹರಿಯು ಭಕ್ತರ ದುರಿತಗಳನ್ನು ನಾಶ ಮಾಡುತ್ತಾನೆ.

೩. ಶ್ರೀ ರಾಮ. ಶ್ರೀರಾಮನು ಶ್ರೀ ರಾಯರ ಆರಾಧ್ಯ ದೈವ. ಶ್ರೀ ರಾಘವೇಂದ್ರ ನಾಮ ಶ್ರೀ ರಾಮನ ದ್ವಾದಶ ನಾಮಗಳಲ್ಲಿ ಒಂದು. ಅಂತೆಯೇ ಶ್ರೀ ವಾಮನ ಅವತಾರ ಕಾಲದಲ್ಲಿಯೇ ಶ್ರೀ ವಾಮನ ರೂಪಿ ಶ್ರೀ ಹರಿಯು ಶ್ರೀ ರಾಯರಿಗೆ " ರಾಘವೇಂದ್ರ " ಎಂದು ನಾಮಕರಣ ಮಾಡಿದ್ದಾನೆ. ಹೆಚ್ಚಿನ ವಿಷಯಗಳಿಗೆ ವಾಮನ ಪುರಾಣ ನೋಡುವುದು!!

ಶ್ರೀ ರಾಘವನೇ ಉಪಾಸ್ಯ ಮೂರ್ತಿಯಾಗುಳ್ಳ ಅಂದರೆ ಶ್ರೀಮೂಲರಾಮೋಪಾಸಕರೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು.

ಶ್ರೀ ಶಂಖುಕರ್ಣರೆಂಬ ಕರ್ಮಜ ದೇವತೆಯು ನಾಲ್ಕು ಅವತಾರಗಳನ್ನೆತ್ತಿ, ಶ್ರೀ ಹರಿಭಕ್ತಿ - ಭಾಗವತ ಧರ್ಮ - ಸಜ್ಜನೋದ್ಧಾರ - ತತ್ತ್ವ ಪ್ರಸಾರಗಳನ್ನು ನೆರವೇರಿಸಿ ಲೋಕ ವಿಖ್ಯಾತರಾದರೆಂದೂ, ಆ ಶ್ರೀ ಶಂಖುಕರ್ಣರ ನಾಲ್ಕು ಅವತಾರಗಳು ಕ್ರಮವಾಗಿ...

೧. ಕೃತ ಯುಗದಲ್ಲಿ " ಶ್ರೀ ಪ್ರಹ್ಲಾದರಾಜ " ರಾಗಿಯೂ;
೨. ದ್ವಾಪರದಲ್ಲಿ " ಶ್ರೀ ಬಾಹ್ಲೀಕರಾಜ " ರಾಗಿಯೂ;

 ಮಹಾ ಭಾರತ ತಾತ್ಪರ್ಯ ನಿರ್ಣಯದಲ್ಲಿ ಶ್ರೀಮದಾಚಾರ್ಯರು... 

 ಬಾಹ್ಲೀಕೋರಾಜ ಸತ್ತಮಃ ಹಿರಣ್ಯಕಶಿಪೋ ಪುತ್ರ: । 
 ಪ್ರಹ್ಲಾದೋ ಭಗವತ್ಪ್ರಿಯಃ ವಾಯೂನಾ ಚ ಸಮಾವಿಷ್ಟ: ।। 

 ಶ್ರೀ ಅಭಿನವ ಜನಾರ್ಧನವಿಠಲರು.. 

ಮೊದಲು ಹಿರಣ್ಯಕಶಿಪುನರಸಿಯ ।
ಉದರದಲಿ ಸಂಭವಿಸಿದ ।
ಅದರ ತರುವಾಯದಲಿ ಬಾಹ್ಲೀಕ ಅಧಿಪನೆಂದೆನಿಸಿ ।।

 ಶ್ರೀ ರಮಾಪತಿವಿಠಲರು... 

ಈತನೇ ಪ್ರಹ್ಲಾದನು ಆಹ್ಲಾದಕರನು ಶೂರ ಬಾಹ್ಲೀಕನೆನಿಸಿದ ।।

 ಈ ಕಲಿಯುಗದಲ್ಲಿ..... 

೩. ಶ್ರೀ ವ್ಯಾಸರಾಜ ಗುರುಸಾರ್ವಭೌಮರಾಗಿಯೂ; ೪ನೇ ಹಾಗೂ ಕೊನೆಯ ಅವತಾರವೇ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು!!

 ಶ್ರೀ ಗೋಪಾಲದಾಸರು... 

ಪ್ರಥಮ ಪ್ರಹ್ಲಾದ ವ್ಯಾಸಮುನಿಯೇ ರಾಘವೇಂದ್ರ ಯತಿಯೇ ।।

 ಶ್ರೀ ಜಗನ್ನಾಥದಾಸರು... 

ವ್ಯಾಸರಾಯ ನೆನಿಸಿ ನೃಪನಾ ।
ಕ್ಲೇಶ ಕಳೆದವನೇ ಬಾರೋ ।
ಶ್ರೀ ಸುಧೀಂದ್ರರ ಕರ ಸಂಜಾತ ।
ವಾಸುದೇವಾರ್ಚಕನೇ ಬಾರೋ ।।

 ಶ್ರೀ ಪ್ರಾಣೇಶದಾಸರು.... 

ರಾಯರ ನೋಡಿರೈ ಗುರುರಾಯರ ಪಾಡಿರೈ ।
ಸಿರಿ ಪ್ರಹ್ಲಾದ ವರ ಬಾಹ್ಲೀಕ ಗುರು ವ್ಯಾಸ ರಾಘವೇಂದ್ರ ।।

ಶ್ರೀ ರಾಮನು ಶ್ರೀ ರಾಯರಲ್ಲಿ ಶ್ರೀರಾಮ ರೂಪದಿಂದ ಶ್ರೀ ಹರಿಯು ನಿರ್ಗತಿಕರಿಗೆ ಗತಿಯನ್ನುಂಟು ಮಾಡುವನು.

೩. ಶ್ರೀ ಕೃಷ್ಣನು ಶ್ರೀ ರಾಯರಲ್ಲಿ ಶ್ರೀ ಕೃಷ್ಣ ರೂಪದಿಂದ ಶ್ರೀ ಹರಿಯು ಭಕ್ತರ ಸಕಲ ಮನೋಭೀಷ್ಟಗಳನ್ನು ಪೂರೈಸುತ್ತಾನೆ.

೪. " ಶ್ರೀ ಪಂಚಮುಖಿ ಪ್ರಾಣದೇವರು " . ಶ್ರೀ ರಾಯರು ಶ್ರೀ ವಾಯುದೇವರ ನಿತ್ಯಾವೇಶಯುಕ್ತರು.

ವಾಯುನಾ ಚ ಸಮಾವಿಷ್ಟ: ಮಹಾಬಲ ಸಮನ್ವಿತಃ ।।

೫. " ಕಾಮಧೇನು " 

 ಶ್ರೀ ಅಪ್ಪಣ್ಣಾಚಾರ್ಯರು... 

ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ।।

 ಶ್ರೀ ಗುರು ಗೋಪಾಲದಾಸರು... 

ಗುರುವೇ ಕಾಮಿತ ತರುವೇ ತ್ರಿಕಾಲಜ್ಞ ।
ವರಯೋಗಿ ಅನಘ ನಿ:ಸ್ಸಂಗ ।।

 ಶ್ರೀ ಜಗನ್ನಾಥದಾಸರು... 

ಕಾಮಧೇನುವಿನಂತೆ ಇಪ್ಪ ಗುರುವರನ । ಸಾರ್ವ ।
ಭೌಮ ಸುಧಿಯೀ೦ದ್ರ ಸುತ ರಾಘವೇಂದ್ರ ।।

 ಶ್ರೀ ರಾಮಚಂದ್ರವಿಠಲರು... 

ಸುರತರುವೆ ನಿರುತದಲಿ ಎನ್ನನು ।
ಪೊರೆಯೊ ಬಾರಿಂದೆರವು ಮಾಡದೆ ।
ಕರೆದು ಕೈ ಪಿಡಿಯೋ ಯೆನ್ನ ಶ್ರೀ ರಾಘವೇಂದ್ರ ।।

ಅಂಥಾ ಮಹಾ ಮಹಿಮರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಸರ್ವರನ್ನೂ ಸರ್ವ ಕಾಲಗಳಲ್ಲಿಯೂ ರಕ್ಷಿಸಲೆಂದು ಪ್ರಾರ್ಥಿಸೋಣ....
**********


In English CLICK 👇👇below



In Kannada CLICK 👇👇below 
 ರಾಯರು 01 ಮಹಿಮೆ 



******

No comments:

Post a Comment