SEARCH HERE

Tuesday 1 January 2019

ಸುಭಾಷಿತ 2 subhashita 2 kannada





न गृहं गृहमित्याहुः गृहणी गृहमुच्यते।

गृहं हि गृहिणीहीनं अरण्यं सदृशं मतम्।


Hindi Translation:- घर तो गृहणी (घरवाली) के कारण ही घर कहलाता है। बिन गृहणी तो घर जंगल के समान होता है।

***


" ಗೆಲುವು ಬೀಗುವುದನ್ನು ಕಲಿಸಿದರೆ, ಸೋಲು ಬಾಗುವುದನ್ನು ಕಲಿಸುತ್ತದೆ".

**

ಸ್ನೇಹಾದ್ವಾ ಯದಿ ವಾ ಲೋಭಾತ್ ಭಯಾದಜ್ಞಾನತೋsಪಿ ವಾ |
ಕುರ್ವಂತ್ಯನುಗ್ರಹಂ ಯೇ ತು ತತ್ಪಾಪಂ ತೇಷು ಗಚ್ಛತಿ ||
-- ಲಘುಶಂಖಸ್ಮೃತಿ.

          ಪ್ರೀತಿಯಿಂದಾಗಲೀ, ದುರಾಸೆಯಿಂದಾಗಲೀ, ಹೆದರಿಕೆಯಿಂದಾಗಲೀ, ತಿಳುವಳಿಕೆ ಇಲ್ಲದಾಗಲೀ ಅನರ್ಹನಾದವನಿಗೆ ದಾನ ಅಥವಾ ಸಹಾಯ ಮಾಡಿದರೆ, ತೆಗೆದುಕೊಂಡವನು ಮಾಡಿದ ಪಾಪ ಕೊಟ್ಟವನಿಗೆ ಬರುತ್ತದೆ.
***
ನ ಚೋರ ಹಾರ್ಯಂ ನ ಚ ರಾಜ ಹಾರ್ಯಂ
ನ ಭ್ರಾತೃ ಭಾಜ್ಯಂ ನ ಚ ಭಾರಕಾರೀ 
ವ್ಯಯೇ ಕೃತೇ ವರ್ಧತ ಏವ ನಿತ್ಯಮ್
ವಿದ್ಯಾಧನಂ ಸರ್ವಧನಪ್ರಧಾನಂ 

ಭಾವಾರ್ಥ 
ಕಳ್ಳರಿಂದ ಕದಿಯಲಾಗದು. ರಾಜರಿಂದ ಕಸಿದುಕೊಳ್ಳಲಾಗದು. ಅಣ್ಣತಮ್ಮಂದಿರು ವ್ಯಾಜ್ಯವಾಡಿ ಹಂಚಿಕೊಳ್ಳಲಾರರು. ಇದು ಭಾರವಿಲ್ಲ. ಖರ್ಚು ಮಾಡಿದಷ್ಟೂ ಹೆಚ್ಚಾಗುತ್ತಲೇ ಹೋಗುವ ವಿದ್ಯಾಧನವೇ ಮಿಕ್ಕ ಎಲ್ಲ ಧನಗಳಿಗಿಂತ  ಉತ್ತಮವಾದದ್ದು
_____________
ಅದಕ್ಕೇ ಹೇಳುತ್ತಾರಲ್ಲವೇ ವಿದ್ಯಾ ದದಾತಿ ವಿನಯಂ
***

ಆಯುಃ ಕರ್ಮ ಚ ವಿತ್ತಂಚ  ವಿದ್ಯಾ ನಿಧನಮೇವ ಚ|
ಪಂಚೈತಾನಿ ಹಿ ಸೃಜ್ಯಂತೆ ಗರ್ಭಸ್ಥಸ್ಯೈವ ದೇಹಿನಃ॥

(೧) ಆಯುಷ್ಯ
(೨) ಹಿಂದಿನ ಜನ್ಮದಿಂದ ಬರುವ ಕರ್ಮಫಲ
(೩) ಹಣ
(೪) ಗಳಿಸಬಹುದಾದ ವಿದ್ಯೆ
(೫) ಮರಣ

ಈ ಐದು ವಿಷಯಗಳು ಶಿಶು ತಾಯಿಯ ಗರ್ಭದಲ್ಲಿ ಇರುವಾಗಲೇ ನಿರ್ಣಯವಾಗಿರುತ್ತದೆ. ಇದರಲ್ಲಿ 
ಕರ್ಮ ಫಲದ ಒಂದು ವಿವರಣೆ.......

ಧರ್ಮರಾಜನು  ಭೀಷ್ಮನಿಗೆ ಹೇಳುತ್ತಾನೆ - 

ಎಷ್ಟೋ ಧರ್ಮ ಸೂಕ್ಮಗಳನ್ನು ನನಗೆ ತಿಳಿಸಿ ಕೊಟ್ಟಿದ್ದೀರಿ. ಆದರೆ ಬಂಧುಗಳನ್ನೆಲ್ಲಾ ಕೊಲ್ಲಿಸಿದ್ದರಿಂದ ನನ್ನ ಮನಸ್ಸು ಅಶಾಂತಿ ಇದೆ. ಈ ಎಲ್ಲಾ ಅನರ್ಥಗಳಿಗೂ ದುರ್ಯೋಧನನೇ ಕಾರಣನಾದನಲ್ಲ ತಾತಾ!
ಆಗ ಭೀಷ್ಮ ಪಿತಾಮಹ ಹೇಳುತ್ತಾರೆ :- ವತ್ಸಾ ಧರ್ಮನಂದನಾ, ಮನುಷ್ಯ ಯಾವುದಕ್ಕೂ ಕರ್ತನಲ್ಲ. 

ಅವರವರ ಜನ್ಮಾಂತರ ಕರ್ಮಗಳೇ ಫಲಿತಗಳಿಗೆ ಕಾರಣ. ಕಾರ್ಯ ಕಾರಣ ಸಂಬಂಧ ಸೂತ್ರವನ್ನು ಮರೆಯಬೇಡ.
***
ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ  ಕ್ರೋಧಶ್ಚ ದೃಢವಾದಶ್ಚ ಪರವಾಕ್ಯೇಷ್ವನಾದರಃ

ಮೂರ್ಖರ ಐದು ಚಿಹ್ನೆಗಳು:-
ಸದಾ ಆತ್ಮ ಪ್ರಶಂಸೆ 
ಪರ ನಿಂದನೆ 
ಕೋಪ
ಮೊಂಡುತನದ ವಾದ
ಇತರರ ಅಭಿಪ್ರಾಯಕ್ಕೆ ಅಗೌರವ
***

ಪೂರ್ವ ಜನ್ಮದ ಸುಕೃತಗಳು

ಆಯುಃ ಕರ್ಮ ಚ ವಿತ್ತಂಚ  ವಿದ್ಯಾ ನಿಧನಮೇವ ಚ |
ಪಂಚೈತಾನಿ ಹಿ ಸೃಜ್ಯಂತೆ
ಗರ್ಭಸ್ಥಸ್ಯೈವ ದೇಹಿನಃ॥.

(೧)ಆಯುಷ್ಯ,   
(೨)ಹಿಂದಿನ ಜನ್ಮದಿಂದ ಬರುವ ಕರ್ಮಫಲ,
  (೩)ಹಣ,
    (೪)ಗಳಿಸಬಹುದಾದ ವಿದ್ಯೆ
        (೫) ಮರಣ.
ಈ ಐದು ವಿಷಯಗಳು ಶಿಶು ತಾಯಿಯ ಗರ್ಭದಲ್ಲಿರುವಾಗಲೇ ನಿರ್ಣಯವಾಗಿರುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ಹಿಂದಿನ ಜನ್ಮಗಳಲ್ಲಿ ಮಾಡಿದ ಪಾಪ-ಪುಣ್ಯಗಳಿಗೆ  ಅನುಗುಣವಾಗಿ ನೀಚ- ಉಚ್ಚ , ಬಡವ- ಬಲ್ಲಿದ,  ಸಾಕ್ಷರ- ನಿರಕ್ಷರ, ರೋಗಿ ನಿರೋಗಿ ಜನ್ಮ ಬರುವದೆಂದು ನಂಬಲಾಗುತ್ತದೆ.
ಅದರ ವಿವರವನ್ನು ಈ ಸುಭಾಷಿತದಲ್ಲಿ ಕಾಣ ಬಹುದು.

ಮೊದಲನೆಯದಾಗಿ ಆಯುಷ್ಯ.

 ಇಂಥ ವ್ಯಕ್ತಿಗೆ ಇಷ್ಟೇ ಆಯುಷ್ಯ ,
ಇಂಥಲ್ಲಿ ಹೀಗೇ ಮರಣ ಎಂದು ಗರ್ಭದಲ್ಲಿರುವಾಗಲೇ
ಬರೆಯಲ್ಪಡುತ್ತದೆ.
ಈ ಹಣೆಬರಹವನ್ನು ತಪ್ಪಿಸಲು ಹರಿಹರ ಬ್ರಹ್ಮರಿಂದಲೂ ಸಾಧ್ಯವಿಲ್ಲ.

ಕರ್ಮ 
    ಎಂದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಪಾಪ - ಪುಣ್ಯ ಕರ್ಮಗಳು .ಇವು ನೆರಳಿನಂತೆ ಮುಂದಿನ ಜನ್ಮದಲ್ಲಿ ನಮ್ಮನ್ನು ಹಿಂಬಾಲಿಸುತ್ತವೆ.
ಕರು ಸಾವಿರಾರು ಹಸುಗಳಲ್ಲಿ ತನ್ನ ತಾಯಿಯನ್ನೇ ಹುಡುಕಿಕೊಂಡು ಹೋಗುವಂತೆ ಪೂರ್ವಾರ್ಜಿತ ಕರ್ಮಗಳು ನಮ್ಮನು ಬೆಂಬೆತ್ತಿ ಬರುತ್ತವೆ.

ಹಣ

ಲಕ್ಷ್ಮಿ ಚಂಚಲೆ. ಎಲ್ಲೂ ಕಾಲೂರಿ ನಿಂತವಳಲ್ಲ. ಒಮ್ಮೆ ಏರಿಸುತ್ತಾಳೆ. ದಿಢೀರನೆ ಕೆಡವುತ್ತಾಳೆ. ತಮ್ಮ ಜೀವನದಲ್ಲಿ ಅನೇಕ ಜನ ಕೃಷಿ,ವಾಣಿಜ್ಯೋದ್ಯಮ ,ಕೈಗಾರಿಕೆ ಮುಂತಾದುವುಗಳ ಮೂಲಕ ಶ್ರೀಮಂತರಾಗಲು ಹೊರಟು ಭಾರೀ ಸೋಲುಂಡವರನ್ನು ಕಾಣುತ್ತೇವೆ.
ಆತ ಪಡೆದದ್ದು ಉಣ್ಣಬೇಕೆ ಹೊರತು  ದುಡಿದದ್ದಲ್ಲ.ಇದನ್ನೇ .ಕವಿವಾಣಿ ಹೇಳುವುದು

"ಸಿರಿಯದು  ನೀರಿನ ತೆರೆಯಂತೆ
  ಜೀವನ ಮಿಂಚಿನ ಸೆಳಕಂತೆ
   ಅರಿತಿದ ನಡೆ ನೀ ನಿನ್ನಂತೆ
     ಅಳಿದೂ ಉಳಿಯುವ ತೆರನಂತೆ......
ಎಂದು ನಮ್ಮನ್ನು ಎಚ್ಚರಿಸಿದೆ.

ಶುಚೀನಾಂ ಶ್ರೀಮತಾಂ ಗೇಹೆ ಯೋಗಭ್ರಷ್ಟೋ ಅಭಿಜಾಯತೇ
ಅಂದರೆ ಯೋಗಿಯಾಗ ಹೊರಟು ಪೂರ್ಣ ಸಿದ್ಧಿ ಪಡೆಯಲಾಗದೇ ಮಡಿದವನು  ಮುಂದಿನ ಜನ್ಮದಲ್ಲಿ ಶ್ರೀಮಂತರ ಮನೆಯಲ್ಲಿ ಜನಿಸುತ್ತಾನೆ ಎಂದು ಗೀತೆ ಸಾರುತ್ತದೆ.

ವಿದ್ಯೆ

ಹಿಂದಿನ ಜನ್ಮದಲ್ಲಿ ದೊಡ್ಡ ವಿದ್ಯಾವಂತನಾಗಲು ಹೊರಟು ಅಲ್ಲಿ 
ಸಫಲತೆ ಯನ್ನು ಪಡೆಯದೇ ಹೋದವನು , ಆ ಸಂಸ್ಕಾರ ಬಲ ದಿಂದ  ಮುಂದಿನ ಜನ್ಮದಲ್ಲಿ ಹುಟ್ಟಿನಿಂದಲೇ ಪ್ರತಿಭಾವಂತನಾಗಿ ಜನಿಸುತ್ತಾನೆ.  ಒಂದೇ ತರಗತಿಯಲ್ಲಿ ಓದುವ ಮಕ್ಕಳಲ್ಲಿ  ಅಜ-ಗಜಾಂತರವಿರುವುದನ್ನು ಕಾಣುತ್ತೇವೆ. ಅದಕ್ಕೆ ಪೂರ್ವ ಜನ್ಮದ
ಸಂಸ್ಕಾರ ಹಾಗೂ ಅದರ ಅಭಾವವೇ ಕಾರಣ.

ಮರಣ 
ಮರಣವೂ ಅಷ್ಟೆ.ಇಂಥವನಿಗೆ ಹೀಗೆ , ಇಂತಲ್ಲಿ ಮರಣವೆಂಬುದು ಮೊದಲೇ ಬರೆದಿರುತ್ತದೆ.

ಆದ್ದರಿಂದ ಮುಂದೆ ಒಳ್ಳೆಯ ಜನ್ಮ ,ದೀರ್ಘ ಆಯುಷ್ಯ ,ಆರೋಗ್ಯ , ವಿದ್ಯೆ , ವಿತ್ತ,(ಹಣ)ಎಲ್ಲವೂ ಬೇಕೆಂದು ಬಯಸುವವರು  ಈ ಜನ್ಮದಲ್ಲೇ ಎಚ್ಚೆತ್ತು ಒಳ್ಳೆಯ ಕಾರ್ಯದಲ್ಲಿ ನಿರತರಾಗುವುದು ಒಳಿತು. 

 ಶ್ರೀ ಕೃಷ್ಣಾರ್ಪಣಮಸ್ತು
***
ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರಂ ವಿಶಿಷ್ಯತೇ |
ಚಿತಾ ದಹತಿ ನಿರ್ಜೀವಂ ಚಿಂತಾ ದಹತಿ ಜೀವಿನಮ್ ||
-- ಸಮಯೋಚಿತ ಪದ್ಯಮಾಲಿಕಾ

         ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವಿಶೇಷ. ಚಿತೆ ಜೀವವಿಲ್ಲದ ಹೆಣವನ್ನು ಸುಡುತ್ತದೆ. ಚಿಂತೆ ಜೀವವಿರತಕ್ಕವನನ್ನು ಸುಡುತ್ತದೆ.

****

ಸಾಮಾನ್ಯ ನೀತಿ 💐

ಆಗ್ಞೌ ದಗ್ದಂ ಜಲೇ ಮಗ್ಞಂ ಹೃತಂ ತಸ್ಕರಪಾರ್ಥಿವೈಃ |
ತತ್ಸರ್ವಂ ದಾನಮಿತ್ಯಾಹುರ್ಯದಿ ಕೈಬ್ಯಂ ನ ಭಾಷತೇ ||
-- ಸುಭಾಷಿತ ರತ್ನಭಾಂಡಾಗಾರ

     ಬೆಂಕಿಯಲ್ಲಿ ಸುಟ್ಟುಹೋದುದು , ನೀರಿನಲ್ಲಿ ಮುಳುಗಿದ್ದು , ಕಳ್ಳರು ಮತ್ತು ರಾಜರುಗಳಿಂದ ಅಪಹರಿಸಲ್ಪಟ್ಟದು - ಇವೆಲ್ಲವನ್ನೂ ದಾನವೆಂದೇ ಹೇಳುತ್ತಾರೆ , ಒಂದು ವೇಳೆ ಅವುಗಳ ನಷ್ಟಕ್ಕಾಗಿ ದೀನನಾಗಿ ವಿಲಪಿಸದಿದ್ದರೆ.
***

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ ||

        ತಾಯಿ , ತಂದೆ , ಗುರು -- ಈ ಮೂವರು ಪ್ರತ್ಯಕ್ಷವಾಗಿರುವ ದೇವರು. ಇವರನ್ನು ಉಲ್ಲಂಘಿಸಿ ಕಣ್ಣಿಗೆ ಕಾಣದ ದೇವರನ್ನು  ಆರಾಧಿಸುವ ಪ್ರಕಾರವಾದರೂ ಯಾವುದು ?
****

श्री हरि 🕉️ सुभाषितम्।"पत्युराज्ञां विना नारी उपोष्य वृतचारिणी। आयुष्यं हरते भर्तुः सा नारी नरकं व्रजेत्"।( ಪತ್ಯುರಾಜ್ಞಾ ವಿನಾ ನಾರೀ ಉಪೋಷ್ಯ ವೃತಚಾರಿಣೀ।ಆಯುಷ್ಯಂ ಹರತೇ ಭತ್ರೃ:ಸಾ ನಾರೀ ನರಕಂ ವ್ರಜೇತ್)-ಗೃಹಿಣಿಯು ಸುಮಂಗಲೆ ಎನಿಸಿರುವುದರಿಂದ ಹಾಗೂ ಧಾರ್ಮಿಕ ವಿಧಿ ನಿಷೇಧಗಳ ಕಟ್ಟುಪಾಡುಗಳು ಪುರುಷರಿಗಿಂತ ಕಡಿಮೆ ಇರುವುದರಿಂದ ಪತಿಯ ಅನುಮತಿ ಇಲ್ಲದೇ ಕಠಿಣವಾದ ವ್ರತ, ಉಪವಾಸಗಳನ್ನು ಮಾಡಬಾರದು.ಪತಿಯ ಅನುಮತಿಯೊಂದಿಗೆ ಶಾಸ್ತ್ರ ಸಮ್ಮತ, ಆರೋಗ್ಯಕರ ವ್ರತ,ಉಪವಾಸಾದಿಗಳನ್ನು ಆಚರಿಸಬೇಕು.ಅಕಸ್ಮಾತ್ ವಿರುದ್ಧವಾಗಿ ನಡೆದುಕೊಂಡರೆ ಗಂಡನ ಆಯುಷ್ಯವು ಕ್ಷೀಣಿಸಿ ತಾನು ದು:ಖಿ ಯಾಗಬೇಕಾಗುತ್ತದೆ-ಚಾಣಕ್ಯ 
**

.  ಅನ್ಯಕ್ಷೇತ್ರೇ ಕೃತಂ ಪಾಪಂ, 
ಪುಣ್ಯ ಕ್ಷೇತ್ರೇ ವಿನಶ್ಯತಿ |
       ಪುಣ್ಯಕ್ಷೇತ್ರೇ ಕೃತಂ ಪಾಪಂ,
ವಜ್ರಲೇಪೋ ಭವಿಷ್ಯತಿ ||
******
  2.    ಅನ್ಯಕ್ಷೇತ್ರೇ ಕೃತಂ ಪಾಪಂ, ಪುಣ್ಯ ಕ್ಷೇತ್ರೇ ವಿನಶ್ಯತಿ |
  ಪುಣ್ಯಕ್ಷೇತ್ರೇ ಕೃತಂ ಪಾಪಂ,  ವಾರಣಾಸ್ಯಾಂ ವಿನಶ್ಯತಿ ||
 ವಾರಣಸ್ಯಾಂ ಕೃತಂ ಪಾಪಂ, ಕುಂಭಕೋಣೆ ವಿನಶ್ಯತಿ |
 ಕುಂಭಕೋಣಂ ಕೃತಂ ಪಾಪಂ, ಕುಂಭಕೋಣೇ ವಿನಶ್ಯತಿ ||
******

ನಂದಂತ್ಯುದಿತ ಆದಿತ್ಯೇ ನಂದಂತ್ಯಸ್ತಮಿತೇ ರವೌ |
ಆತ್ಮನೋ ನಾವಬುದ್ಯಂತೇ ಮನುಷ್ಯಾ ಜೀವಿತಕ್ಷಯಂ ||
--- ರಾಮಾಯಣ.

          ಸೂರ್ಯನು ಉದಯಿಸಿದನೆಂದು ಜನರು ಆನಂದಿಸುತ್ತಾರೆ. ಅಸ್ತಮಿಸಿದನೆಂದೂ ಆನಂದಿಸುತ್ತಾರೆ. ತಮ್ಮ ಆಯುಸ್ಸು ಕ್ಷಯಿಸಿಹೊಗುತ್ತದೆಯಂಬುದನ್ನು ಮಾತ್ರ ಅವರು ಗಮನಿಸುವದಿಲ್ಲ.
*****

गुणैरुत्तुंगतां याति नोत्तुंगेनासनेन वै |
प्रासादशिखरस्थोऽपि काको न गरुडायते ||
---

         ಗುಣಗಳಿಂದ ಮಹಾನ್ ವ್ಯಕ್ತಿಗಳಾಗುತ್ತೇವೆ, ಉನ್ನತ ಹುದ್ದೆಯಲ್ಲಿ ಇರುವುದರಿಂದಲ್ಲ. ಅರಮನೆಯ ಮೇಲೆ ಕುಳಿತಿರುವ ಕಾಗೆಯನ್ನು ಗರುಡ ಪಕ್ಷಿ ಎಂದು ಪರಿಗಣಿಸುವುದಿಲ್ಲ.
***

श्रुतेनापि हृदिस्थेन खलो न स्यात् सुशीलवान 
मधूनां कोटरस्तेन निम्बः किं मधुरायते ?


ವಿಶ್ವಕೋಶದಂತಹ ಜ್ಞಾನವಿದ್ದರೂ ಮತ್ತು ಆ ಜ್ಞಾನವನ್ನು ಬೇಕಾದಾಗ ನೆನಪಿಗೆ ತಂದುಕೊಳ್ಳುವ ಸಾಮರ್ಥ್ಯವಿದ್ದರೂ ಕೆಟ್ಟ ಮನುಷ್ಯ ಒಳ್ಳೆಯನಾಗುವುದಿಲ್ಲ. ಜೇನುಗೂಡು ಇದ್ದಾಕ್ಷಣ ಬೇವಿನ ಮರ ಸಿಹಿಯಾಗಿ ಬಿಡುತ್ತೇನು?
*******
ಶಾಂತಿಖಡ್ಗಃ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |
ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ ||
---- ಮಹಾಭಾರತ.

          ಶಾಂತಿಯಂಬ ಕತ್ತಿ ಯಾರ ಕೈಯಲ್ಲಿದೆಯೋ ಅವನಿಗೆ ದುಷ್ಟನು ಏನನ್ನು ಮಾಡಿಯಾನು ? ಬೆಂಕಿ ಹುಲ್ಲಿನಮೇಲೆ ಬೀಳದಿದ್ದಾಗ ತಾನಾಗಿಯೇ ಶಾಂತವಾಗುವದು.
***

ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಛ್ರಯಾಃ |
ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಚ ಜೀವಿತಂ ||
--- ರಾಮಾಯಣ.

        ಐಶ್ವರ್ಯದ ಎಲ್ಲ ರಾಶಿಗೂ ನಾಶವುಂಟು. ಉನ್ನತವಾದ ಅಧಿಕಾರಕ್ಕೂ ಪತನವುಂಟು . ಪತ್ನೀಪುತ್ರಾದಿ ಸಂಯೋಗವು ವಿಯೋಗದಲ್ಲಿ ಕೊನೆಗೊಳ್ಳುತ್ತದೆ.
****

🌹 ಸುಭಾಷಿತ ಮಂಜರೀ 🌹
                 💐 ಧರ್ಮ 💐

ಇಜ್ಯಾಧ್ಯಯನದಾನಾದಿ ತಪಃ ಸತ್ಯಂ ಧೃತಿಃ ಕ್ಷಮಾ |
ಅಲೋಭ ಇತಿ ಮಾರ್ಗೋಯಂ ಧರ್ಮಸ್ಯಾಷ್ಟವಿಧಃ ಸ್ಮೃತಃ ||
-- ಹಿತೋಪದೇಶ.

           ಧರ್ಮಕ್ಕೆ ಯಾಗ, ಅಧ್ಯಯನ, ದಾನ, ತಪಸ್ಸು, ಸತ್ಯ, ಧೈರ್ಯ, ಕ್ಷಮಾಗುಣ, ಲೋಭವಿಲ್ಲದಿರುವದು, ಇವು ಎಂಟೂ ಮಾರ್ಗಗಳೆಂದು ಹೇಳಲಾಗಿದೆ. 

*****

ಅಪತ್ಯಂ ಮೇ ಕಳತ್ರಂ ಮೇ ಧನಂ ಮೇ ಬಾಂಧವಾಶ್ಚ ಮೇ |
ಜಲ್ಪಂತಮಿತಿ ಮರ್ತ್ಯಾಜಂ ಹಂತಿ ಕಾಲವೃಕೋ ಬಲಾತ್ ||
-- ಗರುಡ ಪುರಾಣ.
          ನನ್ನ ಮಕ್ಕಳು , ನನ್ನಹೆಂಡತಿ , ನನ್ನ ಹಣ , ನನ್ನ ನೆಂಟರು , ಎಂದು ಒದರುತ್ತಿರುವ ಮನುಷ್ಯನೆಂಬ ಮೇಕೆಯನ್ನು ಕಾಲನೆಂಬ ತೋಳವು ಬಲತ್ಕಾರವಾಗಿ ಕೊಲ್ಲುತ್ತದೆ.
***

ಯಸ್ಯಾರ್ಥಾಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ |
ಯಸ್ಯಾರ್ಥಾಃ ಸ ಪುಮಾನ್ ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ ||
                  -- ಮಹಾಭಾರತ.
       ಯಾವನ ಬಳಿ ಹಣವಿದೆಯೋ ಅವನಿಗೆ ಮಿತ್ರರಿರುತ್ತಾರೆ. ಅವನಿಗೆ ಬಂಧುಗಳೂ ಒದಗುತ್ತಾರೆ. ಹಣವಿರತಕ್ಕವನೇ ಈ ಲೋಕದಲ್ಲಿ  ಗಂಡಸು. ಅವನೇ ಪಂಡಿತ.
****

ಯಥಾ ಮಧು ಸಮಾದತ್ತೇ ರಕ್ಷನ್ ಪುಷ್ಪಾಣಿ ಷಟ್ಪದಃ |
ತದ್ವದರ್ಥಾನ್ ಮನುಷ್ಯೇಭ್ಯಃ ಆದದ್ಯಾದವಿಹಿಂಸಯಸ ||
    -- ಸುಭಾಷಿತ ಸುಧಾನಿಧಿ.

      ದುಂಬಿಯು ಹೂಗಳನ್ನು ಕಾಪಾಡುತ್ತಾ ಹೇಗೆ ಮಕರಂದವನ್ನು ಹೀರಿಕೊಳ್ಳುತ್ತದೆಯೋ ಹಾಗೆಯೇ ಹಿಂಸೆ ಮಾಡದೇ ಮನುಷ್ಯರಿಂದ ಹಣವನ್ನು ಸಂಗ್ರಹಿಸಬೇಕು.
*****

ಅಯಾಚಿತಃ ಸುಖಂ ದತ್ತೇ ಯಾಚಿತಶ್ಚ ನ ಯಚ್ಛತಿ |
ಸರ್ವಸ್ವಂ ಚಾಪಿ ಹರತೇ ವಿಧಿರುಚ್ಛೃಂಖಲೋ ನೃಣಾಂ ||
-- ರಸಗಂಗಾಧರ.

         ಬೇಡದಿದ್ದಾಗ ವಿಧಿಯು ಸುಖವನ್ನು ಕೊಡುತ್ತಾನೆ. ಬೇಡಿದಾಗ ಕೊಡುವದಿಲ್ಲ. ಅಷ್ಟೇ ಅಲ್ಲ. ಜನರ ಸರ್ವಸ್ವವನ್ನು ಅಪಹರಿಸಿಬಿಡುತ್ತಾನೆ. ವಿಧಿಯು ಯಾವನಿಯಮಕ್ಕೂ ಒಳಪಡದ ಸ್ವೇಚ್ಛಾಚಾರಿ.
***

ಮೂಲಂ ದೋಷಸ್ಯ ಹಿಂಸಾದೇರರ್ಥಕಾಮೌ ಸ್ಮ ಮಾ ಪುಷಃ |
ತೌ ಹಿ ತತ್ತ್ವಾವಭೋದಸ್ಯ ದುರುಚ್ಛೇದಾವುಪಪ್ಲವೌ ||
-- ಕಿರಾತುರ್ಜನೀಯ

        ಅರ್ಥ ಅಂದರೆ ಹಣ, ಕಾಮ ಅಂದರೆ ಸುಖ. ಇವೆರಡೂ ಹಿಂಸೆ, ಸುಳ್ಳು, ಕಳ್ಳತನ ಮೊದಲಾದ ದೋಷಗಳಿಗೆ ಮೂಲ. ಅದನ್ನು ಹೆಚ್ಚಿಸಬಾರದು. ತತ್ವವನ್ನು ತಿಳಿಯುವದಕ್ಕೆ ಇವೆರಡೂ ದೊಡ್ಡ ವಿಘ್ನಗಳು.
****
ಯಥಾ ಮಧು ಸಮಾದತ್ತೇ ರಕ್ಷನ್ ಪುಷ್ಪಾಣಿ ಷಟ್ಪದಃ |
ತದ್ವದರ್ಥಾನ್ ಮನುಷ್ಯೇಭ್ಯಃ ಆದದ್ಯಾದವಿಹಿಂಸಯಸ ||
    -- ಸುಭಾಷಿತ ಸುಧಾನಿಧಿ.
      ದುಂಬಿಯು ಹೂಗಳನ್ನು ಕಾಪಾಡುತ್ತಾ ಹೇಗೆ ಮಕರಂದವನ್ನು ಹೀರಿಕೊಳ್ಳುತ್ತದೆಯೋ ಹಾಗೆಯೇ ಹಿಂಸೆ ಮಾಡದೇ ಮನುಷ್ಯರಿಂದ ಹಣವನ್ನು ಸಂಗ್ರಹಿಸಬೇಕು.
****

ಅಚೋದ್ಯಮಾನಾನಿ ಯಥಾ ಪುಷ್ಪಾಣಿ ಚ ಫಲಾನಿ ಚ |
ಸ್ವಂ ಕಾಲಂ ನಾತಿವರ್ತಂತೇ ತಥಾ ಕರ್ಮ ಪುರಾ ಕೃತಂ ||
-- ಮಹಾಭಾರತ.
ಹೂಗಳೂ , ಹಣ್ಣುಗಳೂ ಯಾರ ಪ್ರೇರಣೆಯೂ ಇಲ್ಲದೇ ತಮ್ಮ ತಮ್ಮ ಕಾಲವನ್ನು ಮೀರದೇ ಇರುತ್ತವೆ. ಹಾಗೆಯೇ ಪುರಾಕೃತವಾದ ಕರ್ಮವೂ ಸಹ. ( ತನ್ನ ಕಾಲ ಬಂದಾಗ ಫಲಿಸುತ್ತದೆ ).
***

ಅನಾಗತವಿಧಾನಂ ತು ಕರ್ತವ್ಯಂ ಶುಭಮಿಚ್ಛಿತಾ |
ಆಪದಾಶಂಕಮಾನೇನ ಪುರುಷೇಣ ವಿಪಶ್ಚಿತಾ ||
- ರಾಮಾಯಣ.

      ಮುಂದೆ ಅನರ್ಥವು ಸಂಭವಿಸೀತೆಂಬ ಶಂಕೆಯಿದ್ದಾಗ , ಶಭವನ್ನು ಬಯಸುವ ವಿವೇಕಿಯು ಮೊದಲೇ ಅದಕ್ಕೆ ತಕ್ಕ ಪರಿಹಾರವನ್ನು ಚಿಂತಿಸಬೇಕು.
****


ರಹಸ್ಯಭೇದೋ ಯಾಚ್ನಾ ಚ ನೈಷ್ಠುರ್ಯಂ ಚಲಚಿತ್ತತಾ |
ಕ್ರೋಧೋ ನಿಃಸತ್ವತಾ ದ್ಯೂತಮೇತನ್ಮಿತ್ರಸ್ಯ ದೋಷಣಾಂ ||
-- ಹಿತೋಪದೇಶ, ಮಿತ್ರಲಾಭ.
         ಗುಟ್ಟು ರಟ್ಟು ಮಾಡುವದು , ಯಾಚಿಸುವದು , ನಿಷ್ಠುರವಾಗಿರುವದು , ಚಂಚಲವಾದ ಮನಸ್ಸು ಹೊಂದಿರುವದು , ಕ್ರೋಧ , ಸತ್ವಹೀನತೆ , ಜೂಜು , ಇವಿಷ್ಟೂ ಮಿತ್ರನಲ್ಲಿ ದೋಚಗಳು.
***f

ಅಚೇಷ್ಟಮಾನಮಾಸೀನಂ ಶ್ರೀಃ ಕಂಚಿದುಪತಿಷ್ಟತಿ |
ಕರ್ಮೀ ಕರ್ಮಾsಪಿ ಕೃತ್ವಾsನ್ಯಃ ನ ಪ್ರಾಶ್ಯಮಧಿಗಚ್ಛತಿ ||

       ಏನೂ ಕೆಲಸ ಮಾಡದೇ ಇರುವ ಯಾವನೋ ಒಬ್ಬನಿಗೆ ಬೇಕಾದಷ್ಟು ಹಣ ಸಿಗುವದುಂಟು. ಕಷ್ಟಪಟ್ಟು ಕೆಲಸ ಮಾಡಿದರೂ ಕೆಲವರಿಗೆ ಕುಡಿಯಲು ನೀರು ಸಿಗುವದಿಲ್ಲ.
****


ಹರಣಂ ಚ ಪರಸ್ವಾನಾಂ ಪರದಾರಾಭಿಮರ್ಶನಂ |
ಸುಹೃದಶ್ಚ ಪರಿತ್ಯಾಗಸ್ತ್ರಯೋ ದೋಷಾಃ ಕ್ಷಯಾವಹಾಃ ||
-- ಮಹಾಭಾರತ.
        ಅನ್ಯರ ಆಸ್ತಿಯನ್ನು ಅಪಹರಿಸುವದು , ಪರಸ್ತ್ರೀಯರನ್ನು ಕೆಣಕುವದು , ಸ್ನೇಹಿತರನ್ನು ತ್ಯಜಿಸುವದು -- ಇವು ಮೂರೂ ಸರ್ವನಾಶ ಮಾಡತಕ್ಕ ದೋಷಗಳು.
****
ಸುಹೃದಿ ನಿರಂತರಚಿತ್ತೇ ಗುಣವತಿ ಭೃತ್ಯೇsನುವರ್ತಿನಿ ಕಲತ್ರೇ |
ಸ್ವಾಮಿನಿ ಸೌಹೃದಯುಕ್ತೇ ನಿವೇದ್ಯ ದುಃಖಂ ಸುಖೀ ಭವತಿ ||
-- ಪಂಚತಂತ್ರ, ಮಿತ್ರಭೇದ.
ಒಂದೇ ರೀತಿಯ ಮನಸ್ಸುಳ್ಳ ಸ್ನೇಹಿತನಲ್ಲಿ , ಗುಣಶಾಲಿಯಾದ ಸೇವಕನಲ್ಲಿ ತನ್ನನ್ನು ಅನುಸರಿಸುವ ಪತ್ನಿಯಲ್ಲಿ , ಒಳ್ಳೆಯ ಮನಸ್ಸುಳ್ಳ ಒಡೆಯನಲ್ಲಿ ತನ್ನ ದುಃಖವನ್ನು ತೋಡಿಕೊಂಡು ಮನುಷ್ಯನು ಸುಖಿಯಾಗಿರುತ್ತಾನೆ.
****
ಸಾರ್ಥಃ ಪ್ರವಸತೋ ಮಿತ್ರಂ ಭಾರ್ಯಾ ಮಿತ್ರಂ ಗೃಹೇ ಸತಃ |
ಆತುರಸ್ಯ ಭಿಷಙ್ಮಿತ್ರಂ  ದಾನಂ ಮಿತ್ರಂ ಮರಿಷ್ಯತಃ ||
-- ಮಹಾಭಾರತ.
      ಪ್ರಯಾಣಿಕನಿಗೆ ಜೊತೆಯಲ್ಲಿರತಕ್ಕವನು ಮಿತ್ರ, ಮನೆಯಲ್ಲಿ ಇರುವವನಿಗೆ ಮಡದಿ ಮಿತ್ರಳು. ರೋಗಿಗೆ ವೈದ್ಯನು ಮಿತ್ರ. ಸಾಯುವವನಿಗೆ ದಾನವು ಮಿತ್ರ.
***

ಸ ಸುಹೃದ್ವ್ಯಸನೇ ಯಃ ಸ್ಯಾತ್ಸ ಪುತ್ರೋ ಯಸ್ತು ಭಕ್ತಿಮಾನ್ |
ಸ ಭೃತ್ಯೋ ಯೋ ವಿಧೇಯಜ್ಞಃ ಸಾ ಭಾರ್ಯಾ ಯತ್ರ ನಿರ್ವೃತಿಃ ||
-- ಪಂಚತಂತ್ರ , ಮಿತ್ರಬೇಧ.
           ಕಷ್ಟದಲ್ಲಿ ಯಾವನು ಆಗುವನೋ ಅವನೇ ಮಿತ್ರ. ಯಾರು ಭಕ್ತಿಯನ್ನು ಹೊಂದಿದ್ದಾನೆಯೋ ಅವನೇ ಮಗ. ಯಾವನು ವಿಧೇಯತೆಯನ್ನರಿತಿದ್ದಾನೆಯೋ ಅವನೇ ಸೇವಕ . ಸಂತೋಷವುಂಟುಮಾಡುವವಳೇ ಹೆಂಡತಿ.
***

ಸರ್ವಥಾ ಸುಕರಂ ಮಿತ್ರಂ ದುಷ್ಕರಂ ಪರಿಪಾಲನಂ |
ಅನಿತ್ಯತ್ವಾತ್ತು ಚಿತ್ತಾನಾಂ ಮತಿರಲ್ಪೇsಪಿ ಭಿದ್ಯತೇ ||
-- ರಾಮಾಯಣ.
      ಮಿತ್ರನನ್ನು ಸಂಪಾದಿಸುವದು ಸುಲಭ . ಹಾಗೆಯೇ ಉಳಿಸಿಕೊಳ್ಳುವದು ಮಾತ್ರ ಕಷ್ಟ. ಮನಸ್ಸು ಚಂಚಲವಾದ್ದರಿಂದ ಅಲ್ಪಕಾರಣಕ್ಕಾಗಿ ಸ್ನೇಹವು ಕೆಟ್ಟುಹೋಗುತ್ತದೆ.
***
ಯೇ ಯಾಂತ್ಯಭ್ಯುದಯೇ ಪ್ರೀತಿಂ ನೋಜ್ಝಂತಿ ವ್ಯಸನೇಷು ಚ |
ತೇ ಬಾಂಧವಾಸ್ತೇ ಸುಹೃದೋ ಲೋಕಃ ಸ್ವಾರ್ಥಪರೋಪರಃ ||
-- ಲೋಚನ
        ನಮ್ಮ ಅಭ್ಯುದಯಕಾಲದಲ್ಲಿ ಯಾರು ಸಂತೋಷಪಡುವರೋ , ವಿಪತ್ಕಾಲದಲ್ಲಿ ನಮ್ಮನ್ನು ತ್ಯಜಿಸುವದಿಲ್ಲವೋ ಅವರೇ ಬಂಧುಗಳು. ಅವರೇ ಸ್ನೇಹಿತರು. ಉಳಿದವರು ಸ್ವಾರ್ಥಿಗಳು.
****


ಯಯೋರೇವ ಸಮಂ ವಿತ್ತಂ ಯಯೋರೇವ ಸಮಂ ಶ್ರುತಂ |
ತಯೋರ್ವಿವಾಹಃ ಸಖ್ಯಂ ಚ ನ ತು ಪುಷ್ಪವಿಪುಷ್ಪಯೋಃ ||
-- ಮಹಾಭಾರತ.
         ಯಾರಿಗೆ ಹಣ ಮತ್ತು ವಿದ್ಯೆ ಸಮಾನವಾಗಿದೆಯೋ ಅವರ ನಡುವೆ ಮಾತ್ರ ಮದುವೆಯೋ ಸ್ನೇಹವೂ ಪ್ರಶಸ್ತ. ಹೆಚ್ಚು ಕಡಿಮೆ ಇರತಕ್ಕವರಲ್ಲಿ ಪ್ರಶಸ್ತವಲ್ಲ.
***

ಯದ್ದ್ರವ್ಯಂ ಬಾಂಧವಾನಾಂ ವಾ ಮಿತ್ರಾಣಾಂ ವಾ ಕ್ಷಯೇ ಭವೇತ್ |
ನಾಹಂ ತತ್ ಪ್ರತಿಗೃಹ್ಣೀಯಾಂ ಭಕ್ಷಾನ್ ವಿಷಕೃತಾನಿವ ||
-- ರಾಮಾಯಣ.
      ಬಾಂಧವರಾಗಲಿ ಮಿತ್ರರಾಗಲಿ ಹಾಳಾಗುವದರಿಂದ ದೊರಕುವ ಹಣವನ್ನು ನಾನು ಎಂದಿಗೂ ಮುಟ್ಟಲಾರೆ. ಅದು ವಿಷಮಿಶ್ರಿತವಾದ ಭಕ್ಷ್ಯದಂತೆ ಹೇಯವಾದ್ದೆಂದು ತಿಳಿಯುತ್ತೇನೆ.
****


ಯಥಾ ಪುಷ್ಕರಪರ್ಣೇಷು ಪತಿತಾಸ್ತೋಯಬಿಂದವಃ |

ನ ಶ್ಲೇಷಮುಪಗಚ್ಛಂತಿ ತಥಾsನಾರ್ಯೇಷು ಸೌಹೃದಂ ||

-- ರಾಮಾಯಣ

      ತಾವರೆ ಎಲೆಯಲ್ಲಿ ಬಿದ್ದ ನೀರುಹನಿಗಳು ಹೇಗೆ ಅಂಟಿಕೊಳ್ಳುವದಿಲ್ಲವೋ ಹಾಗೆ ದುಷ್ಟಜನರಲ್ಲಿಡುವ ಪ್ರೀತಿಯು ಸ್ನೇಹಬಂಧನದಿಂದ ಅಂಟಿಕೊಂಡಿರುವದಿಲ್ಲ.
*****

ಯಥಾ ಶರಧಿ ಮೇಘಾನಾಂ ಸಿಂಚಿತಾಮಪಿ ಗರ್ಜತಾಂ |
ನ ಭವತ್ಯಂಬುಸಂಕ್ಲೇದಸ್ತಥಾsನಾರ್ಯೇಷು ಸೌಹೃದಂ ||
-- ರಾಮಾಯಣ, 

        ಮಳೆಗಾಲದಲ್ಲಿ ಮೋಡಗಳು ಮಳೆ ಸುರಿಸುತ್ತವೆ , ಗರ್ಜಿಸುತ್ತವೆ , ಶರತ್ಕಾಲ ಬಂದಾಗ ನೆಲ ನೆನೆಯುವಷ್ಟು ನೀರನ್ನು ಸುರಿಸುವದಿಲ್ಲ. ಹಾಗೆ ದುಷ್ಟರ ಸ್ನೇಹವು ಕ್ರಮವಾಗಿ ಕುಗ್ಗಿ ನಸಿಸಿಹೋಗುವದು.
******

ಮೃದೋಃ ಪರಿಭವೋ ನಿತ್ಯಂ ವೈರಂ ತೀಕ್ಷ್ಣಸ್ಯ ನಿತ್ಯಶಃ |
ಉತ್ಸೃಜ್ಯ ತದ್ವಯಂ ತಸ್ಮಾತ್ ಮಧ್ಯಾಂ ವೃತ್ತಿಂ ಸಮಾಶ್ರಯೇತ ||
-- ಸುಭಾಷಿತರತ್ನಭಾಂಡಾಗಾರ

ಮೆತ್ತಗಿರುವವನು ಯಾವಾಗಲೂ ಅಪಮಾನಕ್ಕೆ ಒಳಗಾಗುತ್ತಾನೆ. ಉಗ್ರನಾಗಿದ್ದರೆ ಯಾವಾಗಲೂ ಹಗೆತನಕ್ಕೆ ಹೆಚ್ಚು . ಆದುದರಿಂದ ಇವೆರಡನ್ನೂ ಬಿಟ್ಟು ಮದ್ಯರೀತಿಯಲ್ಲಿ ವರ್ತಿಸುವದು ಒಳ್ಳೆಯದು.
****

ಮಿತ್ರವಾನ್ ಸಾಧಯತ್ಯರ್ಥಾನ್ ದುಸ್ಸಾಧ್ಯಾನಪಿ ವೈ ಯತಃ |
ತಸ್ಮಾನ್ಮಿತ್ರಾಣಿ ಕುರ್ವಿತ ಸಮಾನಾನ್ಯೇವ ಚಾತ್ಮನಃ ||
-- ಪಂಚತಂತ್ರ , ಮಿತ್ರಸಂಪ್ರಾಪ್ತಿ.

         ಸಾಧಿಸಲಸಾಧ್ಯವಾದ ಕೆಲಸಗಳನ್ನು ಸಹ ಸ್ನೇಹಿತನನ್ನು ಹೊಂದಿರುವವನು ಸಾಧಿಸುತ್ತಾನೆ. ಆದುದರಿಂದ ತನಗೆ ಸಮಾನರಾಗಿರುವವರನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು.
****

ಮರಣಾಂತಾನಿ ವೈರಾಣಿ ನಿವೃತ್ತಂ ನಃ ಪ್ರಯೋಜನಂ |
ಕ್ರಿಯತಾಮಸ್ಯ ಸಂಸ್ಕಾರೋ ಮಮಾಪ್ಯೇಷ ಯಥಾ ತವ ||
-- ರಾಮಾಯಣ .

        ವೈರವು ಮರಣ ಪರ್ಯಂತ. ನಮ್ಮ ಉದ್ದೇಶವು ನೆರವೇರಿತು. ಈತನ ( ರಾವಣನ ) ಉತ್ತರಕ್ರಿಯೆಯನ್ನು ಮಾಡು. ಇವನು ನಿನಗೆ ಹೇಗೋ ನನಗೂ ಹಾಗೆಯೇ . ( ವಿಭೀಷಣನನ್ನು ಕುರಿತು ರಾಮನ ನುಡಿ ).
****

ಮಜ್ಜಮಾನಮಕಾರ್ಯೇಷು ಪುರುಷಂ ವಿಷಯೇಷು ವೈ |
ನಿವಾರಯತಿ ಯೋ ರಾಜನ್ ! ಸ ಮಿತ್ರಂ ರಿಪುರನ್ಯಥಾ ||
-- ಅಭಿಷೇಕ.

        ಕೆಟ್ಟ ಕೆಲಸಗಳಲ್ಲಿ , ಇಂದ್ರೀಯ ಸುಖಗಳಲ್ಲಿ ಆಸಕ್ತನಾಗುವ ಮನುಷ್ಯನನ್ನು ತಡೆಯುವವನೇ ಮಿತ್ರ. ಇಲ್ಲವಾದರೆ ಅವನು ಶತ್ರು.
****

ನ ಹೀದೃಶಂ ಸಂವನನಂ ತ್ರಿಷು ಲೋಕೇಷು ವಿದ್ಯತೇ |
ಮೈತ್ರೀ ಚ ಸರ್ವಭೂತೇಷು ದಾನಂ ಚ ಮಧುರಾ ಚ ವಾಕ್ ||
-- ಸುಭಾಷಿತಸುಧಾನಿಧಿ.
        ಸಕಲ ಪ್ರಾಣಿಗಳಲ್ಲಿಯೂ ಸ್ನೇಹಭಾವ , ದಾನ , ಮಧುರವಾದ ನುಡಿ - ಇವುಗಳಿಗೆ ಸಮಾನವಾದ ಸಂತೋಷಜನಕ ಉತ್ತಮಗುಣವು ಮೂರುಲೋಕಗಳಲ್ಲಿಯೂ ಇಲ್ಲ.
*****

ನ ಕಶ್ಚಿತ್ಕಸ್ಯಚಿನ್ಮಿತ್ರಂ ನ ಕಶ್ಚಿತ್ಕಸ್ಯಚಿದ್ರಿಪುಃ |
ಕಾರಣೇನ ಹಿ ಜಾಯಂತೇ ಮಿತ್ರಾಣಿ ರಿಪವಸ್ತಥಾ ||
-- ಸುಭಾಷಿತರತ್ನಭಾಂಡಾಗಾರ

        ಯಾರು ಯಾರಿಗೂ ಸ್ನೇಹಿತನಲ್ಲ , ಶತ್ರುವೂ ಅಲ್ಲ. ಮಿತ್ರರೂ ಹಾಗೂ ಶತ್ರುಗಳೂ ಕೆಲವು ಕಾರಣಗಳಿಂದುಂಟಾಗುತ್ತಾರೆ.
****

ತೇ ಧನ್ಯಾಸ್ತೇ  ವಿವೇಕಜ್ಞಾಸ್ತೇ ಸಭ್ಯಾ ಇಹ ಭೂತಲೇ |
ಆಗಚ್ಛಂತಿ ಗೃಹೇ ಯೇಷಾಂ ಕಾರ್ಯಾರ್ಥಂ ಸುಹೃದೋ ಜನಾಃ ||
 -- ಪಂಚತಂತ್ರ , ಮಿತ್ರಭೇದ.
          ತಮ್ಮ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಸ್ನೇಹಿತರು ಯಾರ ಮನೆಗೆ ಬರುವರೋ ಅವರೇ ಈ ಲೋಕದಲ್ಲಿ ಧನ್ಯರು. ವಿವೇಕವನ್ನರಿತವರು ಹಾಗೂ ಸಭ್ಯರು.
****

ತ ಏತೇ ಸಾಧವಃ ಸಾದ್ವಿ ಸರ್ವಸಂಗವಿವರ್ಜಿತಾಃ |
ಸಂಗಸ್ತೇಷ್ವಥ ತೇ ಪ್ರಾರ್ಥ್ಯಃ ಸಂಗದೋಷಹರಾ ಹಿ ತೇ ||
-- ಭಾಗವತ

            ಎಲೈ ಸಾದ್ವಿಯೇ , ಯಾರು ಸಮಸ್ತ ಸಹವಾಸಗಳಿಂದ ಬಿಡಲ್ಪಟ್ಟಿದ್ದಾರೋ ಅವರೇ ಸಾಧುಗಳು. ಅವರಲ್ಲಿಯೇ ಸಹವಾಸವನ್ನು ಬಯಸಬೇಕು. ಏಕೆಂದರೆ , ಅವರೇ ಸಂಗದಿಂದುಟಾಗುವ ದೋಷಗಳನ್ನು ನಿರ್ಮೂಲಮಾಡುತ್ತಾರೆ.
*****

ಜಾತಾ ಮಾತ್ರಂ ನ ಯಃ ಶತ್ರುಂ ವ್ಯಾಧಿಂ ಚ ಪ್ರಶಮಂ ನಯೇತ್ |
ಮಹಾಬಲೋsಪಿ ತೇನೈವ ವೃದ್ಧಿಂ ಪ್ರಾಪ್ಯ ಸ ಹನ್ಯತೇ ||
-- ಪಂಚತಂತ್ರ , ಮಿತ್ರಬೇಧ.

          ಯಾರು ಶತ್ರುವನ್ನೂ , ರೋಗವನ್ನೂ ಹುಟ್ಟಿದ ಕೂಡಲೇ ನಾಶಗೊಳಿಸುವದಿಲ್ಲವೋ ಅಂಥವನು ಎಷ್ಟೇ ಬಲಶಾಲಿಯಾಗಿದ್ದರೂ ಅದರಿಂದಲೇ ಕೊಲ್ಲಲ್ಪಡುತ್ತಾನೆ.
*****

ಕಾರಣಾನ್ಮಿತ್ರತಾಂ ಯಾತಿ ಕಾರಣಾದೇತಿ ಶತ್ರುತಾಂ |
ತಸ್ಮಾನ್ಮಿತ್ರತ್ವಮೇವಾತ್ರ ಯೋಜ್ಯಂ ವೈರಂ ನ ಧೀಮತಾ ||
-- ಪಂಚತಂತ್ರ , ಮಿತ್ರಸಂಪ್ರಾಪ್ತಿ.

        ಯಾವುದೋ ಕಾರಣದಿಂದಲೇ ಸ್ನೇಹವುಂಟಾಗುತ್ತದೆ. ಅಂಥ ಯಾವುದೋ ಕಾರಣದಿಂದಲೇ ಶತ್ರುತ್ವ ಉಂಟಾಗುತ್ತದೆ. ಆದುದರಿಂದ ಬುದ್ದಿವಂತನಾದವನು ಸ್ನೇಹವನ್ನೇ ಇಲ್ಲಿ ಸಾಧಿಸಬೇಕು ; ದ್ವೇಷವನ್ನಲ್ಲ.
***

ಕೇನಾಮೃತಮಿದಂ ಸೃಷ್ಟಂ ಮಿತ್ರಮಿತ್ಯಕ್ಷರದ್ವಯಂ
ಆಪದಾಂ ಚ ಪರಿತ್ರಾಣಂ ಶೋಕಸಂತಾಪಭೇಷಜಂ
-- ಪಂಚತಂತ್ರ , ಮಿತ್ರಸಂಪ್ರಾಪ್ತಿ.
           ಅಮೃತಪ್ರಾಯವಾದರೂ , ಕಷ್ಟಗಳಿಂದ ಕಾಪಾಡುವದೂ , ದುಖಃ ಸಂತಾಪ ಇವುಗಳಿಗೆ ಔಷಧಿಯಾದುದೂ ಆದ 

'ಮಿತ್ರ' ಎಂಬ ಈ ಎರಡು ಅಕ್ಷರವನ್ನು ಯಾರು ಸೃಷ್ಟಿಮಾಡಿದರೋ !
*****

ಏಕ ಏವ ಸುಹೃದ್ಧರ್ಮೋ ನಿಧನೇsಪ್ಯನುಯಾತಿ ಯಃ |
ಶರೀರೇಣ ಸಮಂ ನಾಶಂ ಸರ್ವಮನ್ಯದ್ಧಿ ಗಚ್ಛತಿ ||
-- ಮನುಸ್ಮೃತಿ.
          ಧರ್ಮ ಒಂದೇ ನಿಜವಾದ ಮಿತ್ರ. ಸಾವಿನಲ್ಲಿಯೂ ಸಹ ಜೊತೆಯಲ್ಲಿರುತ್ತದೆ. ಉಳಿದ ಎಲ್ಲವೂ ಶರೀರದೊಡನೆಯೇ ನಾಶವಾಗುತ್ತವೆ.
*****

ಉತ್ತಿಷ್ಟಮಾನಸ್ತು ಪರೋ ನೋಪೇಕ್ಷ್ಯಃ ಪಥ್ಯಮಿಚ್ಛಿತಾ |
ಸಮೌ ಹಿ ಶಿಷ್ಟೈರಾಮ್ನಾತೌ ವರ್ತ್ಸ್ಯಂತಾವಾಮಯಃ ಸ ಚ
- ಶಿಶುಪಾಲವಧ.

            ಹಿತವನ್ನು ಬಯಸುವವನು ಬಲಿಷ್ಠನಾಗುತ್ತಿರುವ ಶತ್ರುವನ್ನು ಉದಾಶೀನ ಮಾಡಬಾರದು. ಹೆಚ್ಚುತ್ತಿರುವ ರೋಗ ಮತ್ತು ಹೆಚ್ಚುತ್ತಿರುವ ಶತ್ರು ಇವರಿಬ್ಬರೂ ಕೆಡಕುಂಟು ಮಾಡುವದರಲ್ಲಿ ಸಮವೆಂದು ಉತ್ತಮರು ತಿಳಿಯುತ್ತಾರೆ.
*****

ಉತ್ಸವೇ ವ್ಯಸನೇ ಚೈವ ದುರ್ಭಿಕ್ಷೇ ಶತ್ರುನಿಗ್ರಹೇ |
ರಾಜದ್ವಾರೇ ಸ್ಮಶಾನೇ ಚ ಯಸ್ತಿಷ್ಟತಿ ಸ ಬಾಂಧವಃ ||
-- ಸಮಯೋಚಿತ ಪದ್ಯಮಾಲಿಕಾ
             ಸಂಪತ್ತಿನಲ್ಲಿ , ವಿಪತ್ತಿನಲ್ಲಿ , ಬರಗಾಲದಲ್ಲಿ , ಶತ್ರುವನ್ನು ಗೆಲ್ಲುವ ಪ್ರಸಂಗದಲ್ಲಿ , ( ದಂಡನೆಯ ಸಂದರ್ಭ ಬಂದಾಗ ) ರಾಜದ್ವಾರದಲ್ಲಿ , ಮತ್ತು ಸ್ಮಶಾನದಲ್ಲಿ ಯಾವನು ಜೊತೆಗೆ ಇರುವನೋ ಅವನೇ ನೆಂಟ.
****

ಆಪತ್ಸು ಮಿತ್ರಂ ಜಾನೀಯಾತ್ ಯುದ್ಧೇ ಶೂರಂ ಧನೇ ಶುಚಿಂ |
ಭಾರ್ಯಾಂ ಕ್ಷೀಣೇಶು ವ್ಯಸನೇಷು ಚ ಬಾಂಧವಾನ್ ||
-- ಹಿತೋಪದೇಶ, ಮಿತ್ರಲಾಭ
            ಕಷ್ಟದಲ್ಲಿ ಸ್ನೇಹಿತನನ್ನೂ , ಯುದ್ಧದಲ್ಲಿ ಶೂರನನ್ನೂ , ಹಣ ಬಂದಾಗ ಪ್ರಾಮಾಣಿಕನನ್ನೂ , ಬಡತನದಲ್ಲಿ ಹೆಂಡತಿಯನ್ನೂ , ಕಷ್ಟ ಬಂದಾಗ ಬಂಧುಗಳನ್ನೂ , ಪರೀಕ್ಷಿಸಿ ತಿಳಿಯಬೇಕು.
*****

ಅಪನ್ನಾಶಾಯ ವಿಬುಧೈಃ ಕರ್ತವ್ಯಾ ಸಹೃದೋsಮಲಾಃ |
ನ ತರತ್ಯಾಪದಂ ಕಶ್ಚದ್ಯೋsತ್ರ ಮಿತ್ರವಿವರ್ಜಿತಃ ||
-- ಪಂಚತಂತ್ರ, ಮಿತ್ರಸಂಪ್ರಾಪ್ತಿ.
        ತಮ್ಮ ಕಷ್ಟಗಳ ಪರಿಹಾರಕ್ಕಾಗಿ ತಿಳಿದವರು ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಯಾರಿಗೆ ಸ್ನೇಹಿತರೇ ಇಲ್ಲವೋ ಅಂಥವನು ಯಾರೂ ಕಷ್ಟದಿಂದ ಪಾರಾಗಲಾರ.
*****

ಆಪತ್ಕಾಲೇ ತು ಸಂಪ್ರಾಪ್ತೇ ಯನ್ಮಿತ್ರಂ ಮಿತ್ರಮೇವ ತತ್ |
ವೃದ್ಧಿಕಾಲೇ ತು ಸಂಪ್ರಾಪ್ತೇ ದುರ್ಜನೋsಪಿ ಸುಹೃದ್ಭವೇತ್ ||
-- ಪಂಚತಂತ್ರ, ಮಿತ್ರಸಂಪ್ರಾಪ್ತಿ
          ಕಷ್ಟಕಾಲ ಒದಗಿದಾಗ ಯಾರು ಸ್ನೇಹಿತನಾಗಿರುವರೋ ಅವನೇ ಮಿತ್ರ. ಏಳಿಗೆಯ ಕಾಲ ಬಂದಾಗ ಕೆಟ್ಟವನೂ ಸಹ ಸ್ನೇಹಿತನಾಗುವನು.
****
      
ಅಸಹಾಯಃ ಪುಮಾನೇಕಃ ಕಾರ್ಯಾಂತಂ ನಾದಿಗಚ್ಛತಿ |
ತುಷೇಣಾಪಿ ವಿನಿರ್ಮುಕ್ತಸ್ತಂಡಲೋ ನ ಪುರೋಹತಿ ||
-- ಸಮಯೋಚಿತ ಪದ್ಯಮಾಲಾ
            ಇತರ ಸಹಾಯವಿಲ್ಲದೇ ಮನುಷ್ಯನು ಕಾರ್ಯಸಿದ್ಧಿಯನ್ನು ಪಡೆಯಲಾರ. ಹೊಟ್ಟಿನ ಸಹಾಯವಿಲ್ಲದಿದ್ದರೆ ಬರೀಯ ಅಕ್ಕಿ ಮೊಳೆಯುವದಿಲ್ಲ.
****

ಅಸಹಾಯಃ ಸಮರ್ಥೋsಪಿ ತೇಜಸ್ವೀ ಕಿಂ ಕರಿಷ್ಯತಿ |
ನಿರ್ವಾತೇ ಜ್ವಲಿತೋ ವಹ್ನಿಃ ಸ್ವಯಮೇವ ಪ್ರಶಾಮ್ಯತಿ ||
-- ಪಂಚತಂತ್ರ, ಕಾಕೋಲೂಕೀಯ
          ಸಮರ್ಥನಾಗಿದ್ದರೂ ಒಬ್ಬ ತೇಜಸ್ವಿಯ ಸಹಾಯವಿಲ್ಲದಿದ್ದರೆ ಏನನ್ನು ತಾನೇ ಮಾಡಬಲ್ಲ ? ಉರಿಯುವ ಬೆಂಕಿ ಗಾಳಿಯ ಸಹಾಯವಿಲ್ಲದಿದ್ದಾಗ ತಾನಾಗಿಯೇ ಆರಿ ಹೋಗುತ್ತದೆ.
****

ಅವಜ್ಞೋಪೇಕ್ಷಿತೇ ಪ್ರೇಮ್ಣಿ ಸಂಧಾನಂ ದುಷ್ಕರಂ ಪುನಃ |
ಜತುಲೇಶೇನ ಸಂಷ್ಲೇಷಃ ಕಥಂ ನು ಸ್ಪುಟತೇ ಮಣೌ
-- ರಾಮಾಯಣ ಮಂಜರೀ.
        ಅವಮಾನದಿಂದ ಉಪೇಕ್ಷಿತವಾದ ಪ್ರೇಮವು ಮತ್ತೇ ಬೆಸುಗೆಯಾಗುವದು ಕಷ್ಟ. ಒಡೆದ ಮಣಿಯನ್ನು ಅರಗಿನಿಂದ ಕೂಡಿಸಲಾಗುವದಿಲ್ಲ.
****


ಅತ ಅತ್ಯಂತಿಕಂ ಕ್ಷೇಮಂ ಪ್ರಚ್ಛಾಮೋ ಭವತೋSನಘಾಃ |
ಸಂಸಾರೇSಸ್ಮಿನ್ ಕ್ಷಣಾರ್ದೋSಪಿ ಸತ್ಸಂಗಃ ಶೇವಧಿರ್ನೃಣಾಮ್ ||
-- ಭಾಗವತ.
          ಆದುದರಿಂದ ಅತ್ಯಂತ ಕ್ಷೇಮಕರವಾದುದನ್ನು ಕೇಳಿ ತಿಳಿಯಲಪೇಕ್ಷಿಸುತ್ತೇವೆ. ಈ ಸಂಸಾರದಲ್ಲಿ ಸತ್ಪುರುಷರ ಸಹವಾಸವು ಒಂದು ಅರ್ದಕ್ಷಣವಿದ್ದರೂ ಕೂಡಾ ಅದು ಮಾನವರಿಗೆ ಒಂದು ನಿಧಿಯಿದ್ದಂತೆ.
*****

ಸುಜನೋ ನ ಯಾತಿ ವೈರಂ ಪರಹಿತಬುದ್ಧಿರ್ವಿನಾಶಕಾಲೇಪಿ |
ಛೇದೇsಪಿ ಚಂದನತರುಃ ಸುರಭಯತಿ ಮುಖಂ ಕುಠಾರಸ್ಯ ||
-- ಸುಭಾಷಿತಸುಧಾನಿಧಿ

         ಇತರರಿಗೆ ಒಳ್ಳೆಯದಾಗಲೆಂದು ಬಯಸುವ ಒಳ್ಳೆಯವನು ನಾಶವೊದಗುವ ಸಮಯದಲ್ಲಿಯೂ ದ್ವೇಷವನ್ನು ಮಾಡುವದಿಲ್ಲ. ಶ್ರೀಗಂಧದಮರ ಕತ್ತರಿಸಿದಾಗಲೂ ಕೊಡಲಿಯ ಬಾಯನ್ನು ಸುವಾಸನೆಯುಳ್ಳದ್ದನ್ನಾಗಿ ಮಾಡುತ್ತದೆ. 
*****

ಸ್ಪರ್ಶನ್ನಪಿ ಗಜೋ ಹಂತಿ ಜಿಘ್ರನ್ನಪಿ ಭುಜಂಗಮಃ |
ಹಸನ್ನಪಿ ನೃಪೋ ಹಂತಿ ಮಾನಯನ್ನಪಿ ದುರ್ಜನಃ ||
-- ಹಿತೋಪದೇಶ, ವಿಗ್ರಹ.
          ಕೇವಲ ಸ್ಪರ್ಶದಿಂದಲೂ ಆನೆ ಕೊಲ್ಲುತ್ತದೆ. ಸರ್ಪವು ಮೂಸಿ ನೋಡುವದರಿಂದಲೂ, ರಾಜನು ಮಂದಹಾಸ ಬೀರುತ್ತಲೂ, ಕೊಲ್ಲುವರು. ಹಾಗೆಯೇ ದುರ್ಜನನಾದವನಿಗೆ ಗೌರವ ತೋರಿದರೂ ಅವನು ಕೊಲ್ಲುವನು.E
******

ಸ್ನೇಹಚ್ಛೇದೇSಪಿ ಸಾಧೂನಾಂ ಗುಣೋ ನಾಯಾತಿ ವಿಕ್ರಿಯಾಂ |
ಭಂಗೇSಪಿ ಹಿ ಮೃಣಾಲಾನಾಂ ಅನುಬಧ್ನಂತಿ ತಂತವಃ ||
-- ಹಿತೋಪದೇಶ, ಮಿತ್ರಲಾಭ.
          ಸಜ್ಜನನೊಡನೆ ಸ್ನೇಹ ಮುರಿದುಹೋದರೂ ಅವರ ಗುಣಗಳು ಯಾವ ಬದಲಾವಣೆಯನ್ನೂ ಹೊಂದುವದಿಲ್ಲ. ತಾವರೆ ದಂಟುಗಳು ಮುರಿದರೂ ಒಳಗಿನ ಎಳೆಗಳು ಕೂಡಿಕೊಂಡೇ ಇರುತ್ತವೆ.
*******


ಹೀಯತೇ ಹಿ ಮತಿಸ್ತಾತ ಹೀನೈಃ ಸಹ ಸಮಾಗಮಾತ್ |
ಸಮೈಶ್ಚ ಸಮತಾಮೇತಿ ವಿಶಿಷ್ಟೈಶ್ಚ ವಿಶಿಷ್ಟತಾಮ್ ||
-- ಹಿತೋಪದೇಶ.
         ತನಗಿಂತ ಹೀನರ ಜೊತೆ ಸಹವಾಸ ಮಾಡಿದರೆ ಬುದ್ಧಿ ಕುಂದುತ್ತದೆ ; ತನಗೆ ಸಮರಾದವರೊಡನೆ ಸೇರುವದರಿಂದ ಸಮವಾಗಿರುತ್ತದೆ. ಆದರೆ ಅಧಿಕರೊಡನೆ ಸೇರುವದರಿಂದ ಬುದ್ದಿ ಹೆಚ್ಚುತ್ತದೆ.
*****



ಉಪಕಾರಃ ಪರೋ ಧರ್ಮಃ ಪರಾರ್ಥಂ ಕರ್ಮ ನೈಪುಣಂ |
ಪಾತ್ರೇ ದಾನಂ ಪರಃ ಕಾಮಃ ಪರೋ ಮೋಕ್ಷೋ ವಿತೃಷ್ಣತಾ ||
-- ಸುಭಾಷಿತರತ್ನಭಾಂಡಾಗಾರ.

        ಪರೋಪಕಾರವೇ ದೊಡ್ಡ ಧರ್ಮ ; ಇತರರಿಗಾಗಿ ಕೆಲಸಮಾಡುವದೇ ಕಾರ್ಯ ನಿಪುಣತೆ ; ಸತ್ಪಾತ್ರದಲ್ಲಿ ದಾನ ಮಾಡುವದೇ ಶ್ರೇಷ್ಠವಾದ ಆಶೆ ; ಆಶೆಯಿದಿರುವಿಕೆಯೇ ನಿಜವಾಗಿ ಮೋಕ್ಷ. 
**

"ವಿದ್ಯಾಫಲಂ ಸ್ಯಾದಸತೋ ನಿವೃತ್ತಿಃ
ಪ್ರವೃತ್ತಿರಕ್ಷಾನಫಲಂ ಯದೀಕ್ಷಿತಮ್ |
ತಜ್ಞಾಜ್ಞಯೋರ್ಯನ್ಮೃಗತೃಷ್ಣಿಕಾದೌ
ನೋ ಚೇದ್ ವಿದೋ ದೃಷ್ಟಫಲಂ ಕಿಮಸ್ಮಾತ್ || 423 ||"

ಶಬ್ದಾರ್ಥ:
"ಅಸತಃ ನಿವೃತ್ತಿಃ ವಿದ್ಯಾಫಲಂ ಸ್ಯಾತ್"
ಅಜ್ಞಾನದಿಂದ ನಿವೃತ್ತನಾಗುವುದೇ ಜ್ಞಾನದ ಫಲ

"ಪ್ರವೃತ್ತಿಃ ಅಜ್ಞಾನಫಲಂ"
ಅಸದ್ವಸ್ತುವಿನಕಡೆಗೆ ಪ್ರವೃತ್ತನಾಗುವುದೇ ಅಜ್ಞಾನದಿಂದ ಆಗುವ ಫಲ
"ಮೃಗತೃಷ್ಣಿಕಾದೌ ತತ್ ಈಕ್ಷಿತಂ ತಜ್ಞ ಅಜ್ಞಯೋಃ"
ಬಿಸಿಲ್ಗುದುರೆ ಮೊದಲಾದವು ಅದರ ಬಗ್ಗೆ ತಿಳಿದವನು ತಿಳಿಯದವನು ಇವರ ವಿಷಯದಲ್ಲಿ ಕಂಡುಬರುತ್ತದೆ
"ನ ಉ ಚೇತ್ ವಿದಾಂ ಅಸ್ಮಾತ್ ದೃಷ್ಟ ಫಲಂ ಕಿಮ್"
ಹಾಗಲ್ಲದೇ ಹೋದರೆ ಜ್ಞಾನಿಗಳಿಗೆ ಇದಕ್ಕಿಂತ ದೃಷ್ಟಫಲವು ಇನ್ನಾವುದ್ದೀತು?

ಭಾವಾರ್ಥ:
ಯಾವುದೇ ವಸ್ತು ವಿಷಯಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿದ್ದಲ್ಲಿ ಅದರಿಂದ ಬಯಸಿದ ಫಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಮರಳುಗಾಡಿನಲ್ಲಿ ಬಿಸಿಲ ಝಳದ ಕಾರಣದಿಂದ ದೂರದಲ್ಲಿ ನೀರಿರುವಂತೆ ತೋರುತ್ತದೆ. ಇದನ್ನೇ ಮೃಗಜಲ, ಮೃಗತೃಷ್ಣ, ಬಿಸಿಲುಗುದುರೆ ಎನ್ನುತ್ತಾರೆ.
ಇಂತಹ ಬಿಸಿಲುಕುದುರೆಯ ಬಗ್ಗೆ ಸರಿಯಾದ ತಿಳಿವಳಿಕೆಯುಳ್ಳವನು ಅಲ್ಲಿ ನೀರನ್ನು ಬಯಸುವುದಿಲ್ಲ.
ಆದರೆ ತಿಳಿವಳಿಕೆ ಇಲ್ಲದವನು ನೀರುಕುಡಿಯಲು ಹೋಗಿ ನೀರು ಸಿಗದೇ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಅಲೆದು ವ್ಯರ್ಥವಾಗಿ ಶ್ರಮಪಡುತ್ತಾನೆ.
ಹಾಗೆ
ಅಜ್ಞಾನಿಯು ಜಗತ್ತಿನಲ್ಲಿ ಸಿಗುವ ಸುಖವೇ ಸುಖ ಎಂಬ ಭ್ರಮೆಯಿಂದ ಸುಖವನ್ನು ಹೊಂದಲು ಹಲವಾರು ಬಗೆಗಳಲ್ಲಿ ಪ್ರಯತ್ನಿಸಿ ಸುಖಸಿಗದೇ ಹತಾಶನಾಗಿ ಜೀವಮಾನವನ್ನಷ್ಟೇ ಅಲ್ಲ ಜನ್ಮಜನ್ಮಾಂತರಗಳನ್ನೇ ಕಳೆದುಬಿಡುತ್ತಾನೆ.
ಆದರೆ
ಬ್ರಹ್ಮಸಾಕ್ಷಾತ್ಕಾರವನ್ನು ಹೊಂದಿದ ಜ್ಞಾನಿಗೆ ಈ ಜಗತ್ತು ನಶ್ವರವಾದ್ದು. ಇದರಲ್ಲಿ ಸುಖದಂತೆ ತೋರುವ ಹಲವಾರು ವಸ್ತು ವಿಷಯಗಳುಂಟು. ಇವಾವೂ ಶಾಶ್ವತವಾದ ಆನಂದವನ್ನು ನೀಡುವುದಿಲ್ಲ ಎಂಬ ಸ್ಪಷ್ಟ ತಿಳಿವಳಿಕೆಯನ್ನು ಹೊಂದಿದ್ದು ಶಾಶ್ವತವಾದ ಪರಮಾತ್ಮಾನುಭವದ ಸುಖವನ್ನು ಹೊಂದುತ್ತಾನೆ.

********


ದಿನಕ್ಕೊಂದು ಸುಭಾಷಿತ:-

"ಕೃಷಿತೋನಾಸ್ತಿ ದುರ್ಭಿಕ್ಷಂ"
"ಕೃಷಿ ತೋ ನಾಸ್ತಿ ದುರ್ಭಿಕ್ಷಂ"
ಸತತ ಪ್ರಯತ್ನದಿಂದ ಎಂತಹ ಕಷ್ಟವನ್ನು ಅಥವಾ ಸಾದ್ಯವಿಲ್ಲ ಎನ್ನುವ ಕೆಲಸವನ್ನು ಸಹ ಮಾಡಬಹುದು ಅಥವಾ ಸುಖವನ್ನು ಪಡೆಯಬಹುದು

ಸಂಸ್ಕ್ರತ ಸುಭಾಷಿತ
ವ್ಯವಸಾಯ ಮಾಡುವುದರಿಂದ ಎಂತಹ ಆರ್ಥಿಕ ಪರಿಸ್ಥಿತಿಯನ್ನು ಸಹ ಸರಿಮಾಡಿಕೊಳ್ಳಬಹುದು ಎಂದು
"ಕೃಷಿತೋನಾಸ್ತಿ ದುರ್ಭಿಕ್ಷಂ"
"ಕೃಷಿತೋನಾಸ್ತಿ ದುರ್ಭಿಕ್ಷಂ"

ಇಲ್ಲಿ "ಕೃಷಿ" ಎನ್ನುವ ಪದವು ಸಾಧನೆಯನ್ನು ಸೂಚಿಸುತ್ತದೆ, "ದುರ್ಭಿಕ್ಷಂ" ಎನ್ನುವ ಪದವು ಸಾಧನೆಯ ಫಲಿತವನ್ನು ಸೂಚಿಸುತ್ತದೆ, ಕಷ್ಟ ಪಟ್ಟು ವ್ಯವಸಾಯ ಮಾಡಿದ ರೈತನಿಗೆ ಫಲಿತಾಂಶ ಇದ್ದೇ ಇರುತ್ತದೆ
ಸತ್ಯ.ಪಿ.ಎ......
ಅದೇ ರೀತಿಯಲ್ಲಿ ಗುರುವಿನ ಅನುಗ್ರಹದಿಂದ ಸಾಧನೆ ಮಾಡಿದವನಿಗೆ ಸಾಧನೆಯ ಫಲ ಮತ್ತು ಯಶಸ್ಸು ಸಿಕ್ಕೇ ತೀರುತ್ತದೆ ಎಂದು.

******

ದಿನಕ್ಕೊಂದು ಸುಭಾಷಿತ:-

ಸಂಸಾರ
ತದಾ ರಮ್ಯಾಣ್ಯರಮ್ಯಾಣಿ ಪ್ರಿಯಾಃ ಶಲ್ಯಂ ತದಾಸವಃ  |
ತದೈಕಾಕೀ ಸ ಬಂಧುಃ ಸನ್ನಿಷ್ಟೇನ ರಹಿತೋ ಯದಾ  ||

ನಮಗೆ ಬೇಕಾದ ವಸ್ತುವಿಲ್ಲದಿದ್ದರೆ , ಸುಂದರವಾದ ವಸ್ತುವೂ ವಿಕಾರವಾಗಿ ಕಾಣಿಸುತ್ತದೆ. ಪ್ರಿಯವಾದ ಪ್ರಾಣವೂ ಮುಳ್ಳಿನಂತೆ ಯಾತನೆ ಕೊಡುತ್ತದೆ. ನೆಂಟರಿದ್ದರೂ ಒಂಟಿಗನ ಹಾಗೆ ಬೇಸರವಾಗುತ್ತದೆ.
********

ದಿನಕ್ಕೊಂದು ಸುಭಾಷಿತ:-

ನ ಪೃಥಗ್ಜನವಚ್ಛುಚೋ ವಶಂ
ವಶಿನಾಮುತ್ತಮ ಗಂತುಮರ್ಹಸಿ  ||
ದ್ರುಮಸಾನುಮತಾಂ ಕಿಮಂತರಂ
ಯದಿ ವಾಯೌ ದ್ವಿತಯೇsಪಿ ತೇ ಚಲಾಃ   ||


ಸಾಮಾನ್ಯಜನರಂತೆ ಧೀರರೂ ಸಹ ದುಃಖಕ್ಕೆ ಒಳಗಾದರೆ ಇಬ್ಬರಿಗೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಬಿರುಗಾಳಿಯು ಬೀಸಿದಾಗ ಮರಗಳು ಅಲ್ಲಾಡುತ್ತವೆ. ಬೆಟ್ಟಗಳು ಅಲಗುವದಿಲ್ಲ. ಇಲ್ಲವಾದರೆ ಇವೆರಡಕ್ಕೆ ಏನು ವ್ಯತ್ಯಾಸ ?
*********

नास्ति वेदात्परं शास्त्रं नास्ति मातुस्समोगुरुः |
नास्ति दानात् परं इहलोके परत्रच ||


ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ವೇದಕ್ಕೆ ಸಮನಾದ ಶಾಸ್ತ್ರವಿಲ್ಲ. ತಾಯಿಗೆ ಸಮನಾದ ಗುರುವಿಲ್ಲ. ದಾನಕ್ಕೆ ಸಮಾನನಾದ ಸ್ನೇಹಿತನಿಲ್ಲ.
***********

गुणा गुणज्ञेषु गुणा भवन्ति । 
ते निर्गुणं प्राप्य भवन्ति दोषाः ।।
आखाद्यतोयाः प्रभवन्ति नद्यः ।
समुद्रमासाद्य भवन्त्यपेयाः ।। 
--

ಸಿಹಿ ನೀರನ್ನು ಕೊಡುವ ನದಿಗಳು ಸಮುದ್ರವನ್ನು ಸೇರಿ ಉಪ್ಪುನೀರಾಗುತ್ತವೆ. ಹಾಗೆಯೇ ಗುಣವಂತ ಸಜ್ಜನರಲ್ಲಿರುವ ಗುಣಗಳು ದುಷ್ಟರನ್ನು ಸೇರಿದರೆ ಅವುಗಳು ದೋಷ/ ದುರ್ಗುಣಗಳು ಆಗುತ್ತವೆ.
*********

ऐश्वर्यस्य विभूषणं सुजनता शौर्यस्य वाक्संयमो
ज्ञानस्योपशमो कुलस्य विनयो वित्तस्य पात्रे व्ययः ।
अक्रोधस्तपसः क्षमा बलवतां धर्मस्य निर्व्याजता
सर्वेषामपि सर्वकारणमिदं शीलं परं भूषणम् ॥
---

ಐಶ್ವರ್ಯಕ್ಕೆ ಭೂಷಣ ವಾಗಿರುವುದು ಸಜ್ಜನರು, ಶೌರ್ಯಕ್ಕೆ ಭೂಷಣ ವಾಕ್ಸಂಯಮ. ಜ್ಞಾನಕ್ಕೆ ಭೂಷಣ ಮನಃಶಾಂತಿ, ಕುಲಕ್ಕೆ ಭೂಷಣ ವಿನಯ, ಸಂಪತ್ತಿಗೆ ಭೂಷಣ ಮಿತವ್ಯಯ. ತಪಸ್ಸಿನ ಗುಣ/ಭೂಷಣ ಅಕ್ರೋಧ, ಬಲವಂತನಿಗೆ ಭೂಷಣ ಕ್ಷಮೆ, ಧರ್ಮಕ್ಕೆ ಭೂಷಣ ಪ್ರಾಮಾಣಿಕತೆ, ಸರ್ವರಿಗೂ, ಸರ್ವಕಾಲಕ್ಕೂ ಶೀಲವೇ ಪರಮ ಭೂಷಣ.
*********

ಸ್ವಭಾವೋ ನೋಪದೇಶೇನ ಶಕ್ಯತೇ ಕರ್ತುಮನ್ಯಥಾ | ಸುತಪ್ತಮಪಿ ಪಾನೀಯಂ ಪುನರ್ಗಚ್ಛತಿ ಶೀತತಾಮ್ || ಉಪದೇಶಮಾಡುವದರಿಂದ ಒಬ್ಬನ ಸ್ವಭಾವವನ್ನು (ಹುಟ್ಟುಗುಣ) ಬದಲಾಯಿಸಲು ಸಾಧ್ಯವಿಲ್ಲ. ಹೇಗೆ ನೀರನ್ನು ಚೆನ್ನಾಗಿ ಕುದಿಸಿದರೂ ಅದು ಮತ್ತೆ ತಣ್ಣಗಾಗುತ್ತದೆಯೂ ಹಾಗೆ. ************


ದುರ್ಜನಃ ಪರಿಹರ್ತವ್ಯೋ
ವಿದ್ಯಯಾಲಂಕೃತೋಪಿ ಸನ್|
ಮಣಿನಾ ಭೂಷಿತಃ ಸರ್ಪಃ
ಕಿಮಸೌ ನ ಭಯಂಕರಃ||
      ವಿದ್ಯೆಯಿಂದ ಅಲಂಕರಿಸಲ್ಪಟ್ಟರೂ ದುರ್ಜನರಾದವರನ್ನ ಬಿಟ್ಟುಬಿಡಬೇಕು. ರತ್ನದಿಂದ ಅಲಂಕೃತವಾದ ಮಾತ್ರಕ್ಕೆ ಹಾವು ಭಯಂಕರವಲ್ಲವೇ?
**************

ಪ್ರಾಯಃ ಸಂಪ್ರತಿ ಕೋಪಾಯ ಸನ್ಮಾರ್ಗಸ್ಯೋಪದೇಶನಮ್|
ವಿಲೂನನಾಸಿಕಸ್ಯೇವ ಯದ್ವದಾದರ್ಶದರ್ಶನಮ್ ||
      ಒಳ್ಳೆಯ ಮಾರ್ಗದಲ್ಲಿ ನೆಡೆದುಕೋ ಎಂದು ಉಪದೇಶಿಸುವದು ಕೋಪವನ್ನುಂಟು ಮಾಡುತ್ತದೆ. ಮೂಗುಕಳೆದುಕೊಂಡವನಿಗೆ ಕನ್ನಡಿ ತೋರಿಸುವದು ಅಪರಾಧವಾಗುತ್ತದೆ.

************
|ಜಾಮಾತಾ ಜಠರಂ ಜಾಯಾ ಜಾತವೇದಾ ಜಲಾಶಯಾ |
ಪೂರಿತನೈವ ಪೂರ್ಯಂತೇ ಜಕಾರಾ ಪಂಚ ದುರ್ಬಲಾ ||
---
 ಈ ಜಗತ್ತಿನಲ್ಲಿ ತೃಪ್ತಿಪಡಿಸಲಾಗದ ಐದು ಜ ಕಾರಗಳಿವೆ.! ಅವುಗಳೆಂದರೆ - ಅಳಿಯ, ಹೊಟ್ಟೆ, ಹೆಂಡತಿ, ಅಗ್ನಿ, ಸಮುದ್ರ.

1.ಜಾಮಾತಾ - ಅಂದರೆ ಅಳಿಯ,ಎಷ್ಠು ಕೊಟ್ಟರೂ ತೃಪ್ತಿ ಪಡುವುದಿಲ್ಲ.!
2.ಜಠರ-ಅಂದರೆ ಹೊಟ್ಟೆ,ಎಷ್ಟೇ ಆಹಾರ ಸೇವಿಸಿದರೂ, ಮರುದಿನಆಹಾರಕ್ಕೆ ಸಿದ್ಧ 
3.ಜಾಯಾ-ಅಂದರೆ ಹೆಂಡತಿ,ಎಷ್ಟೇ ಆಭರಣ, ವಸ್ತ್ರವಿದ್ದರೂ ಬೇಕೆನ್ನುವಳು.
4.ಜಾತವೇದಾ-ಅಂದರೆ ಅಗ್ನಿ,ಬೆಂಕಿಗೆ ಏನೇ ಹಾಕಿದರೂ ಎಲ್ಲಆಹುತಿ. 
5.ಜಲಾಶಯ-ಅಂದರೆ ಸಾಗರ,ನದಿಗಳುಬಂದು ಸಂಗಮವಾದರೂ ತುಂಬೊಲ್ಲ.
ದಿನಕ್ಕೊಂದು ಸುಭಾಷಿತ:-


को लाभो गुणिसंगमः किमसुखं प्राज्ञेतरैर्संगतिः
का हानिर्समयच्युतिः निपुणता का धर्मतत्त्वे रतिः ।
कः शूरो विजितेन्द्रियः प्रियतमाकाऽनुव्रता किं धनं
विद्या किं सुखमप्रवासगमनं राज्यं किमाज्ञाफलम् ॥
--
ಲಾಭ ಯಾವುದು? ಗುಣವಂತರ ಸಂಘ. ನೋವು ಯಾವುದು? ಮೂರ್ಖರ ಸಂಘ. ನಷ್ಟ ಯಾವುದು? ಕಾಲಹರಣ. ನಿಪುಣತೆ ಯಾವುದು? ಧರ್ಮತತ್ವದ ಬಗ್ಗೆ ಮಹದಾಸಕ್ತಿ. ಶೂರ ಯಾರು? ಇಂದ್ರಿಯಗಳನ್ನು ಜಯಸಿದವನು. ಪ್ರಿಯತಮರಿಗೆ ಪ್ರಿಯವಾದುದು ಯಾವುದು? ಜೊತೆಯಲ್ಲಿ ಸಾಗುವುದು. ಸಂಪತ್ತು ಯಾವುದು? ವಿದ್ಯೆ. ಸುಖ ಯಾವುದು? ದೂರ ದೇಶದಲ್ಲಿ ನೆಲಸದಿರುವುದು. ರಾಜ್ಯ ಯಾವುದು? ಪ್ರಜೆಗಳನ್ನು ಆಳುವ ಶಕ್ತಿ.
******

ಅಕುರ್ವಂತೋಪಿ ಪಾಪಾನಿ ಶುಚಯಃ ಪಾಪಸಂಶ್ರಯಾತ್ | ಪರಪಾಪೈರ್ವಿಶ್ಯಂತಿ ಮತ್ಸ್ಯಾ ನಾಗಹ್ರದೇ ಯಥಾ || -- ರಾಮಾಯಣ, ಅರಣ್ಯ. ಸಜ್ಜನರು ಸ್ವತಃ ಪಾಪಕೃತ್ಯಗಳನ್ನು ಮಾಡದಿದ್ದರೂ ದುಷ್ಟರ ಸಹವಾಸದಿಂದ ಅವರ ಪಾಪಕೃತ್ಯಗಳಿಗೆ ಸಿಕ್ಕಿ ನಾಶಹೊಂದುತ್ತಾರೆ. ಹಾವುಗಳ ಮಡುವಿನಲ್ಲೊರುವ ಮೀನುಗಳು (ಗರುಡನ ಬಾಯಿಗೆ ಸಿಕ್ಕಿದಂತೆ) ಹಾಳಾಗುತ್ತಾರೆ.
*******

ತುಂಬಲಾಗದ ಕೊಡಗಳು
ಜಮಾತಾ ಜಠರಂ ಜಾಯಾ ಜಾತವೇದಾ ಜಲಾಶಯ |
ಪೂರಿತನೈವ ಪೂರ್ಯಂತೇ ಜಕಾರ ಪಂಚದುರ್ಲಭಾ ||

1. ಜಾಮಾತಾ ಅಂದರೆ 'ಅಳಿಯ'*ಎಷ್ಟು ಕೊಟ್ಟರೂ ಸಾಕು ಎನ್ನುವುದಿಲ್ಲ
2 . ಜಠರಂ ಅಂದರೆ 'ಹೊಟ್ಟೆ' ಎಷ್ಟೇ ಆಹಾರ ಸೇವಿಸಿದರೂ ಮರುದಿನ ಪುನಃ ಆಹಾರ ಕೊಡಬೇಕಾಗುತ್ತದೆ .
3 . ಜಾಯಾ ಅಂದರೆ 'ಹೆಂಡತಿ' ಈಕೆ ಎಷ್ಟು ಸೀರೆಗಳಿದ್ದರೂ ಆಭರಣಗಳಿದ್ದರೂ ಇನ್ನೂ ಬೇಕೆನ್ನುತ್ತಾಳೆ .
4 . ಜಾತವೇದಾ ಅಂದರೆ 'ಆಗ್ನಿ' ಬೆಂಕಿಗೆ ಏನನ್ನು ಹಾಕಿದರೂ ಎಷ್ಟು ಹಾಕಿದರೂ ಎಲ್ಲವನ್ನು ಸುಡುತ್ತದೆ .
5 . ಜಲಾಶಯ ಎಂದರೆ 'ಸಮುದ್ರ' ಇದಕ್ಕೆ ಎಷ್ಟು ನೀರು ತುಂಬಿದರೂ (ಅರ್ಥಾತ್ ನದಿಗಳು ಬಂದು ಸೇರಿದರೂ )ಸಮುದ್ರ ತುಂಬುವುದಿಲ್ಲ

ಈ ಐದು ಜ ಕಾರಗಳನ್ನು ತೃಪ್ತಿ ಪಡಿಸಲು ಸಾಧ್ಯ ಆಗುವುದಿಲ್ಲ .
**********

खल: सर्षप मात्राणि परच्छिद्राणि पश्यसि। 
आत्मनो बिल्वमात्राणि पश्यन्नपि न पश्यसि
(- महाभारत)
---
ದುಷ್ಟನು ಇನ್ನೊಬ್ಬರಲ್ಲಿರುವ ಸಾಸುವೆ ಕಾಳಷ್ಟು ದೋಷವನ್ನು ಕಂಡು ಹಿಡಿಯುತ್ತಾನೆ. ಆದರೆ ತನ್ನಲ್ಲಿರುವ ಬಿಲ್ವಫಲದಷ್ಟು ದೊಡ್ಡ ತಪ್ಪಿದ್ದರೂ ಅವನು ಕಾಣುವುದಿಲ್ಲ. ~ ಮಹಾಭಾರತ ೧.೬೯.೧.

************
[6:01 PM, 10/5/2020] Prasad Karpara Group: 🌹 ಸುಭಾಷಿತ ಮಂಜರೀ 🌹
               💐 ಧರ್ಮ 💐
ಆರ್ಷಂ ಧರ್ಮೋಪದೇಶಂ ಚ ವೇದಶಾಸ್ತ್ರಾವಿರೋಧಿನಾ |
ಯಸ್ತರ್ಕೇಣಾನುಸಂಧತ್ತೇ ಸ ಧರ್ಮಂ ವೇದ ನೇತರಃ ||
-- ಮನುಸ್ಮೃತಿ.


            ಋಷಿಗಳ ಮಾತನ್ನೂ ಧರ್ಮೋಪದೇಶವನ್ನೂ ವೇದಗಳಿಗೂ ಶಾಸ್ತ್ರಗಳಿಗೂ ವಿರೋಧವಿಲ್ಲದಂತೆ ಯಾರು ತರ್ಕಮಾಡಿ ತಿಳಿಯುತ್ತಾನೆಯೋ ಅವನೇ ಧರ್ಮವನ್ನು ಚನ್ನಾಗಿ ಬಲ್ಲವನು. 
*********


🌹 ಸುಭಾಷಿತ ಮಂಜರೀ 🌹
           💐 ಧರ್ಮ 💐

ಏವಮಾಚಾರತೋ ದೃಷ್ಟ್ವಾ ಧರ್ಮಸ್ಯ ಮುನಯೋ ಗತಿಂ |
ಸರ್ವಸ್ಯ ತಪಸೋ ಮೂಲಂ ಆಚಾರಂ ಜಗೃಹುಃ ಪರಮ್ ||
-- ಮನುಸ್ಮೃತಿ.

         ಋಷಿಗಳು ಆಚಾರಾನುಷ್ಠಾನದಿಂದಲೇ ಧರ್ಮವು ಹೆಚ್ಚುವದೆಂದು ತಿಳಿದು ಎಲ್ಲ ಬಗೆಯ ತಪಸ್ಸಿಗೂ ಆಚಾರವನ್ನೇ ಮೂಲವೆಂದು ಸ್ವೀಕರಿಸಿದರು. 
*****

ಗತೇ ಶೋಕೋ ನ ಕರ್ತವ್ಯೋ
ಭವಿಷ್ಯಂ ನೈವ ಚಿಂತಯೇತ್ |
ವರ್ತಮಾನೇನ ಕಾಲೇನ
ವರ್ತಯಂತಿ ವಿಚಕ್ಷಣಾಃ ||


ಕಳೆದುಹೋದುದಕ್ಕಾಗಿ ದುಃಖಿಸಬಾರದು. ಮುಂದೆ ಬರುವುದಕ್ಕಾಗಿ ಚಿಂತಿಸಬಾರದು. ವರ್ತಮಾನದಲ್ಲಿ ಇರುವುದನ್ನು ಗಮನಿಸಿಕೊಳ್ಳುವವರೆ ಜಾಣರು.
**
ಅಕ್ಷರಾಣಿ ಪರೀಕ್ಷ್ಯಂತಾಮಂರಾಡಂಬರೇಣ ಕಿಂ |
ಶಂಭುರಂಭರಹೀನೋಪಿ ಸರ್ವಜ್ಞಃ ಕಿಂ ನ ಕಥೈತೇ ||
--- ಅಪ್ಪಯ್ಯದೀಕ್ಷಿತರು.

          ಅಕ್ಷರಗಳನ್ನು ( ವಿದ್ಯೆಯನ್ನು ) ಪರೀಕ್ಷಿಸಿ ನೋಡೋಣವಾಗಲಿ. ವಸ್ತ್ರಗಳ ಆಡಂಬರದಿಂದೇನು ? ಶಿವನು ಬಟ್ಟೆಯಿಲ್ಲದ ದಿಗಂಬರನೆನಿಸಿದ್ದರೂ ಸರ್ವಜ್ಞನೆನಿಸಿಲ್ಲವೇ ?
***
ಅಪಿ ಮಾನುಷ್ಯಕಂ ಲಬ್ದ್ವಾ ಭವಂತಿ ಜ್ಞಾನಿನೋ ನಯೇ |
ಪಶುತೈವ ವರಾ ತೇಷಾಂ ಪ್ರತ್ಯವಾಯಾಪ್ರವರ್ತನಾತ್ ||
---- ಸಭಾರಂಜನಶತಕ.

          ಮನುಷ್ಯಜನ್ಮವನ್ನು ಪಡೆದಿದ್ದರೂ ಯಾರು ವಿದ್ಯಾವಂತರಾಗುವದಿಲ್ಲವೋ ಅವರು ಪಶುಗಳಾಗಿ ಹುಟ್ಟಿದ್ದರೆ ಒಳ್ಳೆಯದಾಗುತ್ತಿತ್ತು ! ಏಕೆಂದರೆ, ಪಶುಗಳಿಗೆ ಪಾಪದ ಲೇಪವಿಲ್ಲ !
**
ಅಪ್ರಾಪ್ತಕಾಲಂ ವಚನಂ ಬೃಹಸ್ಪತಿರಪಿ ಬ್ರುವನ್ |
ಲಭತೇ ಬಹ್ವವಜ್ಞಾನಮಪಮಾನಂ ಚ ಪುಷ್ಕಲಂ ||
--- ಪಂಚತಂತ್ರ.

              ಸಮಯಕ್ಕೆ ಸರಿಹೊಂದದ ಮಾತನ್ನು ಬ್ರಹಸ್ಪತಿ ಹೇಳಿದರೂ ಸಹ ಅವನಿಗೆ ಹೆಚ್ಚಾದ ತಿರಸ್ಕಾರವೂ ಅಪಮಾನವೂ ಸಂಭವಿಸುವವು.
***
ಸತ್ಯಸ್ಯ ವಚನಂ ಶ್ರೇಯಃ ಸತ್ಯಾದಪಿ ಹಿತಂ ವದೇತ್ |
ಯದ್ಭೂತಹಿತಮತ್ಯಂತಂ ಏತತ್ಸತ್ಯಂ ಮತಂ ಮಮ ||
--- ಮಹಾಭಾರತ.

           ಸತ್ಯವನ್ನು ನುಡಿಯುವದು ಶ್ರೇಯಸ್ಕರ. ಸತ್ಯಕ್ಕಿಂತಲೂ ಪ್ರಾಣಿಗಳಿಗೆ ಹಿತವಾದದ್ದನ್ನು ಹೇಳುವದುತ್ತಮ. ಯಾವದು ಪರಮಾರ್ಥದಲ್ಲಿ ಪ್ರಾಣಿಗಳಿಗೆ ಹಿತವೋ ಅದೇ ಸತ್ಯವೆಂದು ನನ್ನ ( ಸನತ್ಕುಮಾರ ) ಮತ.
***


ಅತ್ಯಂತಮತಿಮೇಧಾವೀ ತ್ರಯಾಣಾಂ ಏಕಮಶ್ನುತೇ |
ಅಲ್ಪಾಯುರ್ವಾ ದರಿದ್ರೋ ವಾ ಹ್ಯನಪತ್ಯೋ ನ ಸಂಶಯಃ ||
--- ಸುಭಾಷಿತರತ್ನ ಸಮುಚ್ಚಯ.

           ಅತ್ಯಂತ ಬುದ್ಧಿಶಾಲಿಯಾದವನಿಗೆ ಈ ಮೂರರಲ್ಲಿ ಯಾವುದಾದರೂ ಒಂದಿರುತ್ತೇ -- ಅಲ್ಪಾಯುಸ್ಸು , ಬಡತನ , ಅಥವಾ ಮಕ್ಕಳಿಲ್ಲದಿರುವಿಕೆ. ಇದಕ್ಕೆ ಸಂಶಯವಿಲ್ಲ.
***
ಸರ್ವೇ ಕಂಕಣಕೇಯೂರಕುಂಡಲಪ್ರತಿಮಾ ಗುಣಾಃ |
ಶೀಲಂ ಚಾಕೃತ್ರಿಮಂ ಲೋಕೇ ಲಾವಣ್ಯಮಿವ ಭೂಷಣಂ ||
--- ಸುಭಾಷಿತಸುಧಾನಿಧಿ.

          ಇತರ ಎಲ್ಲಾ ಗುಣಗಳೂ ಕೈಬಳೆ, ತೋಳ್ಬಳೆ, ಕರ್ಣಕುಂಡಲಗಳಂತೆ ಆದರೆ ಶೀಲವು ಲಾವಣ್ಯದಂತೆ ಲೋಕದಲ್ಲಿ ಸಹಜವಾದ ಭೂಷಣವಾಗಿರುತ್ತದೆ.
**
ಸ್ತ್ರೀಷು ನರ್ಮವಿವಾಹೇ ಚ ವೃತ್ತ್ಯರ್ಥೇ ಪ್ರಾಣಸಂಕಟೇ |
ಗೋಬ್ರಾಹ್ಮಣಾರ್ಥೇ ಹಿಂಸಾಯಾಂ ನಾನೃತಂ ಸ್ಯಾಜ್ಜುಗುಪ್ಸಿತಮ್ ||
--- ಭಾಗವತ.

                ಹೆಂಗಸರಲ್ಲಿಯೂ , ಸುಖವಿವಾಹದಲ್ಲಿಯೂ , ವೃತ್ತಿಗೋಸ್ಕರವಾಗಿಯೂ, ಪ್ರಾಣಾಪಾಯದಲ್ಲಿಯೂ, ಗೋ - ಬ್ರಾಹ್ಮಣಗೋಸ್ಕರವೂ, ಹಿಂಸೆ ಒದಗಿದಾಗಲೂ ನುಡಿದ ಸುಳ್ಳು ನಿಂದಾಸ್ಪದವಲ್ಲ. 
****

ಸರ್ವಹಿಂಸಾನಿವೃತ್ತಾ ಯೇ ನರಾಃ ಸರ್ವಂ ಸಹಾಶ್ಚ ಯೇ |
ಸರ್ವಸ್ಯಾಶ್ರಯಭೂತಾಶ್ಚ ತೇ ನರಾಃ ಸ್ವರ್ಗಗಾಮಿನಃ ||
--- ಸುಭಾಷಿತರತ್ನಭಾಂಡಾಗಾರ

          ಯಾರು ಎಲ್ಲ ರೀತಿಯಲ್ಲಿಯೂ ಹಿಂಸೆಯನ್ನು ಬಿಟ್ಟಿದ್ದಾರೋ, ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆಯೋ, ಎಲ್ಲರಿಗೂ ಆಶ್ರಯವಾಗಿದ್ದಾರೆಯೋ ಅಂಥ ಜನರು ಸ್ವರ್ಗವನ್ನು ಪಡೆಯುತ್ತಾರೆ.
**

ದಂಡಿಸೋ ಅವಕಾಶವಿದ್ರೂ ದಂಡಿಸದೆ ಇರೋದನ್ನು  ಸಹನೆ ಅನ್ನುತ್ತಾರೆ.
ಬಿಟ್ಟು ಹೋಗುವುದಕ್ಕೆ ಹಲವಾರು ಕಾರಣ ಗಳಿದ್ದರು ಜೊತೆ ಯಾಗಿರೋದನ್ನು  ಪ್ರೀತಿ ಅಂತಾರೆ.
ತಪ್ಪು ಮಾಡೋದಕ್ಕೆ ಬೇಕಾದಷ್ಟು ಮಾರ್ಗವಿದ್ರು ಮಾಡದೇ ಇರುವುದಕ್ಕೆ  ವ್ಯಕಿತ್ವ  ಅಂತಾರೆ.
**
ಸಂಪ್ರಾಪ್ತಾಯ ತ್ವತಿಥಯೇ ಪ್ರದದ್ಯಾದಾಸನೋದಕೇ |
ಅನ್ನಂ ಚೈವ ಯಥಾಶಕ್ತಿ ಸತ್ಕೃತ್ಯ ವಿಧಿಪೂರ್ವಕಂ ||
--- ಮನುಸ್ಮೃತಿ.

             ಮನೆಗೆ ಬಂದ ಅತಿಥಿಗೆ ಕುಳ್ಳಿರಲು ಆಸನವನ್ನೂ ನೀರನ್ನೂ ಕೊಡಬೇಕು. ಆಮೇಲೆ ಸತ್ಕರಿಸಿ ತನ್ನ ಶಕ್ತಿಗೆ ತಕ್ಕಂತೆ ಅನ್ನವನ್ನು ನೀಡಬೇಕು.
**

ಶತೇಷು ಜಾಯತೇ ಶೂರಃ ಸಹಸ್ರೇಷು ಚ ಪಂಡಿತಃ |
ವಕ್ತಾ ದಶಸಹಸ್ರೇಷು ದಾತಾ ಭವತಿ ವಾ ನ ವಾ ||
--- ವ್ಯಾಸಸ್ಮೃತಿ.

             ನೂರರಲ್ಲೊಬ್ಬನು ಶೂರನಾಗುತ್ತಾನೆ. ಸಾವಿರಕ್ಕೊಬ್ಬನು ವಿದ್ವಾಂಸನಾಗುತ್ತಾನೆ. ಹತ್ತುಸಾವಿರಕ್ಕೊಬ್ಬ ಭಾಷಣ ಮಾಡುವವನಾಗುತ್ತಾನೆ.  ಆದರೆ ದಾನ ಮಾಡುವವನು ಇರುವನೋ ಇಲ್ಲವೋ !
***
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಮಿತಾತ್ |
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ||
--- ಭಗವದ್ಗೀತಾ.

          ಪರಧರ್ಮವನ್ನು ಚೆನ್ನಾಗಿ ಆಚರಿಸಬಹುದಾಗಿದ್ದರೂ ಸ್ವಧರ್ಮವೇ ಉತ್ತಮ. ಅದು ವಿಗುಣವಾಗಿದ್ದರೂ - ದೋಷಯುಕ್ತವಾಗಿದ್ದರೂ ಚಿಂತೆ ಇಲ್ಲ. ಸ್ವಧರ್ಮದಲ್ಲಿ ನಡೆಯುವಾಗ ಮರಣ ಒದಗಿದರೂ ಶ್ರೇಯಸ್ಕರವೇ. ಪರಧರ್ಮದಲ್ಲಿ ಭಯ ಉಂಟು.
***
ಸಂಕ್ಷೇಪಾತ್ಕಥ್ಯತೇ ಧರ್ಮೋ ಜನಾಃ ಕಿಂ ವಿಸ್ತರೇಣ ವಃ |
ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ ||
--- ಪಂಚತಂತ್ರ.

             ಎಲೈ ಜನರೇ, ನಿಮಗೆ ಧರ್ಮವನ್ನು ಸಂಗ್ರಹವಾಗಿ ಹೇಳುತ್ತೇನೆ. ಹೆಚ್ಚು ಬೆಳಸುವದರಿಂದೇನು ? ಪರೋಪಕಾರ ಪುಣ್ಯಕ್ಕೂ ಪರಹಿಂಸೆಯು ಪಾಪಕ್ಕೂ ಕಾರಣವಾಗುತ್ತದೆ.
***
ಸತ್ಯಮಸ್ತೇಯಮಕ್ರೋಧೋ ಹ್ರೀಃ ಶೌಚಂ ಧೀರ್ಧೃತಿರ್ಧಮಃ |
ಸಂಯತೇಂದ್ರಿಯತಾ ವಿದ್ಯಾ ಧರ್ಮಃ ಸರ್ವ ಉದಾಹೃತಃ ||
--- ಯಾಜ್ಞವಲ್ಕ್ಯ.

      ಸತ್ಯ, ಕದಿಯದಿರುವದು, ಸಿಟ್ಟನ್ನು ಗೆದ್ದಿರುವದು, ತಪ್ಪಿಗೆ ನಾಚಿಕೆ, ನೈರ್ಮಲ್ಯ, ಹಿತಾಹಿತ ಜ್ಞಾನ , ನಿಶ್ಚಲಬುದ್ಧಿ, ಗರ್ವವಿಲ್ಲದಿರುವದು, ಇಂದ್ರೀಯ ನಿಗ್ರಹ, ವಿದ್ಯೆ -- ಇವೆಲ್ಲವೂ ಧರ್ಮದಲ್ಲಿ ಸೇರುತ್ತವೆ.
**

ವಿನಯೋ ರತ್ನಮುಕುಟಂ ಸಚ್ಛಾಸ್ತ್ರಂ ಮಣಿಕುಂಡಲೇ |
ತ್ಯಾಗಶ್ಚ ಕಂಕಣಂ ಯೇಷಾಂ ಕಿ ತೇಷಾಂ ಜಡಮಂಡನೈಃ ||
--- ಭಾರತಮಂಜರೀ.

         ಯಾರಿಗೆ ವಿನಯವೇ ರತ್ನಕಿರೀಟವೋ, ಒಳ್ಳೆಯ ಶಾಸ್ತ್ರವೇ ಮಣಿಕುಂಡಲಗಳೋ, ತ್ಯಾಗವೇ ಕಂಕಣವೋ, ಅವರಿಗೆ ಜಡವಾದ ಒಡವೆಗಳಿಂದ ಏನು ಪ್ರಯೋಜನ ?

***
ವಿದ್ಯಾ ಪ್ರವಸತೋ ಮಿತ್ರಂ ಭಾರ್ಯಾ ಮಿತ್ರಂ ಗೃಹೇ ಸತಃ |
ಆತುರಸ್ಯ ಭಿಷಕ್ ಮಿತ್ರಂ ದಾನಂ ಮಿತ್ರಂ ಮರಿಷ್ಯತಃ ||
--- ಸುಭಾಷಿತ ಸುಧಾನಿಧಿ

             ಪ್ರವಾಸ ಮಾಡುವವನಿಗೆ ವಿದ್ಯೆ ಮಿತ್ರ. ಮನೆಯಲ್ಲಿರುವವನಿಗೆ ಹೆಂಡತಿ ಮಿತ್ರಳು. ರೋಗಿಗೆ ವೈದ್ಯ ಮಿತ್ರ. ಹಾಗೆಯೇ ಸಾಯುವವನಿಗೆ ದಾನವೇ ಮಿತ್ರ.
***
ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ |
ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್ ||
--- ಭಗವದ್ಗೀತಾ.

            ಯಾವನು ಶಾಸ್ತ್ರವಿಧಾನವನ್ನು ಬದಿಗೊತ್ತಿ ಮನಸ್ಸಿಗೆ ಬಂದಂತೆ ನಡೆಯುವನೋ ಅವನು ಸಿದ್ಧಿಯನ್ನು ಪಡೆಯುವದಿಲ್ಲ. ಅವನಿಗೆ ಸುಖವೂ ಇಲ್ಲ. ಉತ್ತಮ ಗತಿಯೂ ಇಲ್ಲ.
****


**


ಯೋ ಭಂಧನವಧಕ್ಲೇಶಾನ್ ಪ್ರಾಣಿನಾಂ ನ ಚಕೀರ್ಷತಿ ||
ಸ ಸರ್ವಸ್ಯ ಹಿತಪ್ರೇಪ್ಸುಃ ಸುಖಮತ್ಯಂತಮಶ್ನುತೇ ||
--- ಮನುಸ್ಮೃತಿ.

           ಕಟ್ಟಿಹಾಕುವದು, ಕೊಲ್ಲುವದು ಮೊದಲಾದ ಹಿಂಸೆಗಳನ್ನು ಪ್ರಾಣಿಗಳಿಗೆ ಯಾರು ಮಾಡುವದಿಲ್ಲವೋ, ಎಲ್ಲರ ಹಿತವನ್ನೂ ಬಯಸುವ ಅವನು ಬಹಳ ಸುಖವಾಗಿರುತ್ತಾನೆ.
***


ಯಸ್ಮಿನ್ ದೇಶೇ ಯ ಆಚಾರೋ ವ್ಯವಹಾರಃ ಕುಲಸ್ಥಿತಿಃ |
ತಥೈವ ಪರಿಪಾಲ್ಯೋsಸೌ ಯದಾ ವಶಮುಪಾಗತಃ ||
--- ಯಾಜ್ಞವಲ್ಕ್ಯ.

             ಒಂದು ದೇಶವನ್ನು ವಶಮಾಡಿಕೊಂಡಮೇಲೆ, ಆ ದೇಶವನ್ನು ಅಲ್ಲಿನ ಆಚಾರ, ವ್ಯವಹಾರ, ಕುಟುಂಬಗಳ ಮರ್ಯಾದೆ ಇವುಗಳನ್ನು ಅನುಸರಿಸಿಯೇ ಆಳಬೇಕು.

****

ಯಃ ಶಾಸ್ತ್ರವಿಧಿಮುತ್ಸೃಜ್ಯ ವರ್ತತೇ ಕಾಮಕಾರತಃ |
ನ ಸ ಸಿದ್ಧಿಮವಾಪ್ನೋತಿ ನ ಸುಖಂ ನ ಪರಾಂ ಗತಿಮ್ ||
--- ಭಗವದ್ಗೀತಾ.

          ಯಾವನು ಶಾಸ್ತ್ರವಿಧಾನವನ್ನು ಬದಿಗೊತ್ತಿ ಮನಸ್ಸಿಗೆ ಬಂದಂತೆ ನಡೆಯುವನೋ ಅವನು ಸಿದ್ಧಿಯನ್ನು ಪಡೆಯುವದಿಲ್ಲ. ಅವನಿಗೆ ಸುಖವೂ ಇಲ್ಲ. ಉತ್ತಮ ಗತಿಯೂ ಇಲ್ಲ.
**
ಯಥಾ ಯಮಃ ಪ್ರಿಯದ್ವೇಷ್ಯೌ ಪ್ರಾಪ್ತೇ ಕಾಲೇ ನಿಯಚ್ಛತಿ |
ತಥಾ ರಾಜ್ಞಾ ನಿಯಂತವ್ಯಾಃ ಪ್ರಜಾಸ್ತದ್ಧಿ ಯಮವೃತಂ ||
--- ಮನುಸ್ಮೃತಿ.

               ಇವರು ಬೇಕಾದವರು, ಇವರು ಬೇಡದವರೆಂಬ ಭಾವನೆಯಿಲ್ಲದೇ ಆಯುಸ್ಸು ಮುಗಿದಾಗ ಎಲ್ಲರನ್ನೂ ಹೇಗೆ ಯಮನು ಸಾಯಿಸುತ್ತಾನೆಯೋ ಅದೇ ರೀತಿ ಪಕ್ಷಪಾತವಿಲ್ಲದೇ ಅರಸನು ಎಲ್ಲರನ್ನೂ ದಂಡಿಸಬೇಕು. ಇದು ಯಮವೃತ.
**
ಯತ್ ಸ್ಯಾದಹಿಂಸಾಸಂಯುಕ್ತಂ ಸ ಧರ್ಮ ಇತಿ ನಿಶ್ಚಯಃ |
ಅಹಿಂಸಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಂ ||
--- ಮಹಾಭಾರತ, ಕರ್ಣ.

              ಯಾವುದರಲ್ಲಿ ಹಿಂಸೆ ಇಲ್ಲವೋ ಅದು ಧರ್ಮವೆಂಬುದು ನಿಶ್ಚಿತ. ಪ್ರಾಣಿಗಳಿಗೆ ಹಿಂಸೆಯಾಗಬಾರದೆಂದೇ ಧರ್ಮಪ್ರವಚನ ನಡೆದಿದೆ.
**
ಯದ್ ಭೂತಹಿತಮತ್ಯಂತಂ ತತ್ ಸತ್ಯಮಿತಿ ಧಾರಣಾ |
ವಿಪರ್ಯಯಕೃತೋಧರ್ಮಃ ಪಶ್ಯ ಧರ್ಮಸ್ಯ ಸೂಕ್ಷ್ಮತಾಮ್ ||
--- ಮಹಾಭಾರತ ( ಧರ್ಮವ್ಯಾಧ ಬ್ರಾಹ್ಮಣನಿಗೆ ಹೇಳಿದ್ದು. )

            ಯಾವುದು ಪರಮಾರ್ಥದಲ್ಲಿ ಪ್ರಾಣಿಗಳಿಗೆ ಹಿತಕಾರಿಯೋ ಅದೇ ಸತ್ಯವೆಂದು ನಿಶ್ಚಿತ . ಇದಕ್ಕೆ ವಿರುದ್ಧವಾದದ್ದು ,ಪ್ರಾಣಿಗಳಿಗೆ ಅಹಿತಕರಿಯಾದದ್ದು ಅಧರ್ಮ. ಧರ್ಮವು ಎಷ್ಟು ಸೂಕ್ಷ್ಮವೆಂಬುದನ್ನು ನೋಡು !
***

ಜಾನೀಯಾತ್ ಸಂಗರೇ ಭೃತ್ಯಾನ್ ಬಾಂಧವಾನ್  ವ್ಯಸನಾಗಮೇ |
ಆಪತ್ಕಾಲೇಷು ಮಿತ್ರಾಣಿ ಭಾರ್ಯಾಂ ಚ ವಿಭವಕ್ಷಯೇ || ---ಚಾಣಕ್ಯ ನೀತಿ

ಯುದ್ಧಕಾಲದಲ್ಲಿ ಸೇವಕನ ಪರೀಕ್ಷೆಯಾಗುವುದು; ಸಂಕಟಕಾಲದಲ್ಲಿ ಭಾಂಧವರ ಪರೀಕ್ಷೆಯಾಗುವುದು; ಆಪತ್ಕಾಲದಲ್ಲಿ ಗೆಳೆಯನ ಗುಣವು ವ್ಯಕ್ತವಾಗುವುದು; ಹೆಂಡತಿಯ ಸ್ವಭಾವವು ಬಡತನ ಬಂದಾಗ ತಿಳಿಯುವುದು.
***

ಯವೀಯಾನಾತ್ಮನಃ ಪುತ್ರಃ ಶಿಷ್ಯಶ್ಚಾಪಿ ಗುಣೋದಿತಃ |
ಪುತ್ರವತ್ತೇ ತ್ರಯಶ್ಚಿಂತ್ಯಾ ಧರ್ಮಶ್ಚೇದತ್ರ ಕಾರಣಮ್ ||
---- ರಾಮಾಯಣ.

           ಧರ್ಮಮಾರ್ಗವೇ ಯುಕ್ತವೆಂದು ನಂಬುವದಾದರೆ, ತನ್ನ ತಮ್ಮ , ಮಗ ಮತ್ತು ಗುಣಶಾಲಿಯಾದ ಶಷ್ಯ - ಈ ಮೂವರನ್ನೂ ಮಕ್ಕಳೆಂದು ತಿಳಿದು ವಾತ್ಸಲ್ಯದಿಂದ ನೋಡಿಕೊಳ್ಳಬೇಕು.
****

ಯತ್ಕರ್ಮ ಕುರ್ವತೋsಸ್ಯ ಸ್ಯಾತ್ ಪರಿತೋಷೋಂತರಾತ್ಮನಃ |
ತತ್ಪ್ರಯತ್ನೇನ ಕುರ್ವೀತ ವಿಪರೀತಂ ತು ವರ್ಜಯೇತ್ ||
--- ಮನುಸ್ಮೃತಿ.

           ಯಾವ ಕೆಲಸವನ್ನು ಮಾಡುವಾಗ ಮನಸ್ಸಿಗೆ ಸಂತೋಷವಾಗುತ್ತದೆಯೋ ಅದನ್ನು ಕಷ್ಟಪಟ್ಟಾದರೂ ಮಾಡಬೇಕು. ಅದಕ್ಕೆ ವಿರುದ್ದವಾದುದನ್ನು ಮಾಡಬಾರದು.

***
ವಿದ್ಯಾ ದದಾತಿ ವಿನಯಂ ,
ವಿನಯಾ ಧ್ಯಾತಿ, ಪಾತ್ರತ್ವಂ,
ಪಾತ್ರತ್ವಾ ಧನ ಮಾಪ್ನೋತಿ , 
ಧನ ಧರ್ಮಂ,  ತಥ ಸುಖಂ.
                                                                              ವಿದ್ಯೆಯು ವಿನಯವನ್ನು ಕೊಡುತ್ತದೆ, ವಿನಯದಿಂದ ಸ್ಥಾನವು ಸಿಗುತ್ತದೆ,  ಸ್ಥಾನದಿಂದ ಹಣವು ದೊರೆಯುತ್ತದೆ,  ಆ  ಹಣದ ದಾನ ಧರ್ಮದಿಂದ ನಂತರ ಸುಖವು ಉಂಟಾಗುತ್ತದೆ .   ಆದ್ದರಿಂದ ನಾವುಗಳು ವಿದ್ಯಾಧಿ ದೇವತೆ ಸರಸ್ವತಿ ಗೆ ನಮಿಸೋಣ .
***
ಮೃತಂ ಶರೀರಮುತ್ಸೃಜ್ಯ ಕಾಷ್ಠಲೋಷ್ಟಸಮಂ ಕ್ಷಿತೌ |
ವಿಮುಖಾ ಬಾಂಧವಾ ಯಾಂತಿ ಧರ್ಮಸ್ತಮನುಗಚ್ಛತಿ ||
--- ಮನುಸ್ಮೃತಿ.

         ಸತ್ತಮೇಲೆ ಸೌದೆಯಂತೆ , ಮಣ್ಣಿನ ಹೆಂಟೆಯಂತೆ ಇರುವ ಹೆಣವನ್ನು ಬಿಟ್ಟು ನೆಂಟರು ಹಿಂತಿರುಗುತ್ತಾರೆ. ಧರ್ಮ ಒಂದೇ ಅವನನ್ನು ಹಿಂಬಾಲಿಸುತ್ತದೆ. 
****
ಮೃತೋsಪ್ಯರ್ಥಂ ನ ಮೋಕ್ಷಾಮಿ ಬದ್ಧ್ವಾನೇಷ್ಯಾಮಿ ಮೂರ್ಧನಿ |
ಇತಿ ಚೇತ್ ಸುದೃಡೋ ಲೋಭಃ ಪಾತ್ರೇ ದೇಯಮಶಂಕಿತಂ ||
--- ಸಭಾರಂಜನಶತಕ.

             ಸತ್ತರೂ ಹಣವನ್ನು ಬಿಡಲಾರೆ , ಅದನ್ನು ಕಟ್ಟಿ ತಲೆಯಲ್ಲಿ ಹೊತ್ತುಕೊಂಡು ಹೊಗುವೆನು ' ಎಂದು ಲೋಭವು ದೃಡವಾಗಿರುವದಾದರೆ, ಹಿಂದೆ ಮುಂದೆ ನೋಡದೆ ಯೋಗ್ಯರಿಗೆ ದಾನಮಾಡು ! ( ದಾನ ಮಾಡಿದ್ದು ಸತ್ತಮೇಲೆ ಜೊತೆಗೆ ಬರುತ್ತದೆ. )
**
ಯ ಉದ್ಧರೇತ್ಕರಂ ರಾಜಾ ಪ್ರಜಾ ಧರ್ಮೇಷ್ವಶಿಕ್ಷಯನ್ |
ಪ್ರಜಾನಾಂ ಶಮಲಂ ಭುಂಕ್ತೇ ಭಗಂ ಚ ಸ್ವಂ ಜಹಾತಿ ಸಃ ||
--- ಭಾಗವತ.

         ಯಾವ ರಾಜನು ಧರ್ಮದ ವಿಷಯದಲ್ಲಿ ಪ್ರಜೆಗಳನ್ನು ಉಪದೇಶಿಸದೇ ತೆರಿಗೆಯನ್ನು ಅವರಿಂದ ಪಡೆಯುತ್ತಾನೋ ಅವನು ಪ್ರಜೆಗಳ ಕೊಳಕನ್ನು ತಿನ್ನುತ್ತಾನೆ. ಅವನಿಗೆ ಶ್ರೇಯಸ್ಸು ಇಲ್ಲ.
**

ಮೂರ್ಖಾ ನ ದೃಷ್ಟವ್ಯಾ ದೃಷ್ಟವ್ಯಾಚೇತ್ ನತೈಸ್ತು ಸಹ ತಿಷ್ಠೇತ್ |
ಯದಿ ತಿಷ್ಠೇನ್ನ ಕಥಯೇತ್ ಯದಿ ಕಥಯೇನ್ಮೂರ್ಖವತ್ ಕಥಯೇತ್ || 
ಸುಭಾಷಿತ ಸುಧಾನಿಧಿ.

ಮೂರ್ಖರನ್ನು ಕಾಣಲು ಹೋಗಬಾರದು. ಹಾಗೇನಾದರೂ ಕಂಡರೂ ಅವರೊಡನೆ ಇರಬಾರದು. ಹಾಗೆ ಇದ್ದರೂ ಅವರೊಡನೆ ಮಾತನಾಡ ಬಾರದು. ಮಾತನಾಡಿದರೂ ಮೂರ್ಖನಂತೆಯೇ ಮಾತನಾಡಬೇಕು.
***
ಮಾಂ ಸ ಭಕ್ಷಯಿತಾsಮುತ್ರ ಯಸ್ಯ ಮಾಂಸಮಿಹಾದ್ಮ್ಯಹಂ |
ಏತನ್ಮಾಂಸಸ್ಯ ಮಾಂಸತ್ವಂ ಪ್ರವದಂತಿ ಮನೀಷಣಃ ||
--- ಮನುಸ್ಮೃತಿ.

         ಯಾವುದರ ಮಾಂಸವನ್ನು ಇಲ್ಲಿ ತಿನ್ನುತ್ತೇನೆಯೋ, ಬೇರೆ ಲೋಕದಲ್ಲಿ ಮಾಂ = ನನ್ನನ್ನು  ಸಃ = ಅದು ತಿನ್ನುತ್ತದೆ. ಇದೇ ಮಾಂಸ ಎಂಬ ಪದಕ್ಕೆ ಅರ್ಥವೆಂದು ತಿಈಳಿದವರು ಹೇಳುತ್ತಾರೆ.
****

ಮಹತಾ ಪುಣ್ಯಯೋಗೇನ ಮಾನುಷಂ ಜನ್ಮ ಲಭ್ಯತೇ |
ತತ್ಪ್ರಾಪ್ಯ ನ ಕೃತೋ ಧರ್ಮಃ ಕೀದೃಶಂ ಹಿ ಮಯಾಕೃತಂ ||
--- ಗರುಡಪುರಾಣ.

         ಬಹಳ ಪುಣ್ಯಗಳಿಂದ ಮನುಷ್ಯ ಜನ್ಮ ಸಿಗುತ್ತದೆ. ಅದನ್ನು ಪಡೆದೂ ಸಹ ನಾನು ಧರ್ಮಕಾರ್ಯ ಮಾಡಲಿಲ್ಲ. ನಾನು ಮಾಡಿದ್ದೇನು - ಎಂದು ಜೀವಿಯ ಪಶ್ಚಾತ್ತಾಪಪಡುತ್ತಾನೆ.
****
ಮನಃಪ್ರೀತಿಕರಃ ಸ್ವರ್ಗಃ ನರಕಸ್ತದ್ವಿಪರ್ಯಯಃ |
ನರಕಸ್ವರ್ಗಸಂಜ್ಞೇ ವೈ ಪಾಪಪುಣ್ಯೇ ದ್ವಿಜೊತ್ತಮ ||‌
--- ವಿಷ್ಣುಪುರಾಣ.

         ಮನಸ್ಸಿಗೆ ಆನಂದವುಂಟುಮಾಡುವದೇ ಸ್ವರ್ಗ. ದುಃಖವೇ ನರಕ. ನರಕ ಸ್ವರ್ಗಗಳಿಗೆ ಪಾಪ ಪುಣ್ಯವೆಂದು ಹೆಸರು.
***
ಫಲಮೂಲಾಶನೈರ್ಮೇಧ್ಯೈಃ ಮುನ್ಯನ್ನಾನಾಂ ಚ ಭೋಜನೈಃ |
ನ ತತ್ಫಲಮವಾಪ್ನೋತಿ ಯನ್ಮಾಂಸಪರಿವರ್ಜನಾತ್ ||
--- ಮನುಸ್ಮೃತಿ.

            ಪವಿತ್ರವಾದ ಹಣ್ಣು ಗೆಡ್ಡೆ ಮೊದಲಾದ ಋಷಿಗಳ ಆಹಾರದಿಂದಲೂ ಬಾರದ ಫಲ , ಮಾಂಸವನ್ನು ಬಿಡುವದರಿಂದ ಬರುತ್ತದೆ.
*
ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿತಾನಿ ಚ |
ವಂಚನಂ ಚಾಪಮಾನಂ ಚ ಮತಿವಾನ್ ನ ಪ್ರಕಾಶಯೇತ್ ||--ಚಾಣಕ್ಯ ನೀತಿ.
ತನ್ನ ಸಂಪತ್ತು ನಾಶವಾದದ್ದನ್ನು, ಮಾನಸಿಕ ವ್ಯಥೆಯನ್ನು, ಮನೆಯಲ್ಲಿನ ಕೆಟ್ಟನಡತೆಯನ್ನು, ಮೋಸಹೋದದ್ದನ್ನು, ಅವಮಾನವಾದದ್ದನ್ನು ಬುದ್ಧಿವಂತನಾದವನು ಹೊರಗಿನವರಲ್ಲಿ ಹೇಳಬಾರದು
***
ಪೂರ್ವೇ ವಯಸಿ ತತ್ ಕುರ್ಯಾತ್ ವೃದ್ಧಃ ಸುಖಂ ವಸೇತ್ |
ಯಾವಜ್ಜೀವೇನ ತತ್ ಕುರ್ಯಾತ ಯೇನ ಪ್ರೇತ್ಯ ಸುಖಂ ವಸೇತ್ ||
--- ಮಹಾಭಾರತ

          ವಯಸ್ಸಾದಮೇಲೆ ಯಾವುದರಿಂದ ಸುಖವಾಗಿರಲು ಸಾಧ್ಯವೋ ಅದನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು. ಪರಲೋಕದಲ್ಲಿ ಯಾವುದರಿಂದ ಸುಖ ಉಂಟೋ ಅಂಥ ಕೆಲಸವನ್ನು ಬದುಕಿರುವಾಗ ಮಾಡಬೇಕು.
***

ಪುಣ್ಣೇನ ಕಾಯಃ ಸುಖಿತಃ ಪಾಂಡಿತ್ತೇನ ಮನಃಸುಖಂ |
ತಿಷ್ಠನ್ ಪರಾರ್ಥಂ ಸಂಸಾರೇ ಕೃಪಾಲುಃ ಕೇನ ಖಿದ್ಯತೇ ||
--- ಬೋಧಿಚರ್ಯಾವತಾರ.

            ಪುಣ್ಯಕಾರ್ಯಗಳಿಂದ ಶರೀರಕ್ಕೆ ಸುಖವುಂಟಾಗುತ್ತದೆ. ಪಾಂಡಿತ್ಯದಿಂದ ಮನಸ್ಸಿಗೆ ಸುಖವುಂಟಾಗುತ್ತದೆ. ಬೇರೆಯವರಿಗೋಸ್ಕರ ಜಗತ್ತಿನಲ್ಲಿ ಜೀವಿಸುವ ಕೃಪಾಳುವಿಗೆ ದುಃಖವಾಗಲು ಕಾರಣವೇ ಇಲ್ಲ.
*

ಪ್ರಾಣಾ ಯಥಾತ್ಮನೋsಭೀಷ್ಟಾ ಭೂತಾನಾಮಪಿ ತೇ ತಥಾ |
ಆತ್ಮೌಪಮ್ಯೇನ ಭೂತೇಷು ದಯಾಂ ಕುರ್ವಂತಿ ಸಾಧವಃ ||
---- ಹಿತೋಪದೇಶ.

           ತನಗೆ ಹೇಗೆ ಪ್ರಾಣದಮೇಲೆ ಆಸೆ ಇದೆಯೋ ಹಾಗೆಯೇ ಇತರ ಪ್ರಾಣಿಗಳಿಗೂ ಸಹ. ಆದುದರಿಂದ ಸಾಧುಗಳು ತಮ್ಮಂತೆಯೇ ಎಣಿಸಿ ಪ್ರಾಣಿಗಳೆಲ್ಲಕ್ಕೂ ದಯೆ ತೋರುತ್ತಾರೆ.
****
ಪರೋಕ್ಷೇ ಕಾರ್ಯಹಂತಾರಂ ಪ್ರತ್ಯಕ್ಷೇ ಪ್ರಿಯವಾದಿನಮ್ |
ವರ್ಜಯೇತ್ತಾದೃಶಂ ಮಿತ್ರಂ ವಿಷಕುಂಭಂ ಪಯೋಮುಖಮ್ ||
  
ಎದುರಿಗೆ ಒಳ್ಳೆಯ ಮಾತನ್ನಾಡುತ್ತಾ, ಮರೆಯಲ್ಲಿ ಕೆಲಸ ಕೆಡಿಸುವ ಮಿತ್ರನು, "ಮೇಲೆ ಹಾಲಿರುವ, ಒಳಗೆ ವಿಷವಿರುವ ಮಡಕೆ"ಯಂತೆ ನಂಬಿಕೆಗೆ ಅರ್ಹನಲ್ಲ.
**

ಪಾದೋsಧರ್ಮಸ್ಯ ಕರ್ತಾರಂ ಪಾದಃ ಸಾಕ್ಷಿಣಮೃಚ್ಛತಿ |
ಪಾದಃ ಸಭಾಸದಃ ಸರ್ವಾನ್ ಪಾದೋ ರಾಜಾನಮೃಚ್ಛತಿ ||
--- ಮನುಸ್ಮೃತಿ.

            ಒಂದು ಸಭೆಯಲ್ಲಿ ಅಧರ್ಮವು ನಡೆದು ಅದನ್ನು ಯಾರೂ ವಿರೋಧಿಸದೇ ಇದ್ದರೆ ಅಧರ್ಮದ ಕಾಲುಭಾಗ ಮಾಡಿದವನಿಗೂ , ಕಾಲಭಾಗ ಸಾಕ್ಷಿಗೂ , ಕಾಲುಭಾಗ ಎಲ್ಲಾ ಸಭ್ಯರಿಗೂ, ಕಾಲುಭಾಗ ಅರಸನಿಗೂ ಸೇರುತ್ತದೆ.
**
ಪರಸ್ಮಿನ್ ಬಂಧುವರ್ಗೇ ವಾ ಮಿತ್ರೇ ದ್ವೇಷ್ಯೇ ರಿಪೌ ತಥಾ |
ಆತ್ಮವದ್ವರ್ತಿತವ್ಯಂ ಹಿ ದಯೈಷಾ ಪರಿಕೀರ್ತಿತಾ ||
--- ಅತ್ರಿ ಸಂಹಿತಾ.

           ನೆಂಟರಲ್ಲಾಗಲೀ ಬೇರೆಯವರಲ್ಲಾಗಲಿ , ಮಿತ್ರರಲ್ಲಾಗಲಿ ದ್ವೇಷದಿಂದ ಕೂಡಿದ ಶತ್ರುವಿನಲ್ಲಾಗಲಿ ತನ್ನಂತೆ ಅವರೂ ಎಂದು ವರ್ತಿಸುವದೇ ದಯೆ.
***
ನ ಹೀದೃಶ್ಯಂ ಸಂವನನಂ ತ್ರಿಷು ಲೋಕೇಷು ವಿದ್ಯತೇ |
ದಯಾ ಮೈತ್ರೀ ಚ ಭೂತೇಷು ದಾನಂ ಚ ಮಧುರಾ ಚ ವಾಕ್ ||
--- ಮಹಾಭಾರತ.

           ಪ್ರಾಣಿಗಳಲ್ಲಿ ದಯ , ಸ್ನೇಹ , ದಾನ , ಪ್ರೀಯವಾದ ಮಾತು - ಇಂತಹ ಪ್ರೀತಿಜನಕವಾದ ಉತ್ತಮ ಗುಣವು ಮೂರು ಲೋಕಗಳಲ್ಲಿ ಇನ್ನೊಂದಿಲ್ಲ.
***
ನ ಹಾಯನೈರ್ನಪಲಿತೈಃ ನ ವಿತ್ತೇನ ನ ಬಂಧುಭಿಃ |
ಋಷಯಶ್ಚಕ್ರಿರೇ ಧರ್ಮಂ ಯೋsನೂಚಾನಃ ಸ ನೋ ಮಹಾನ್ ||
--- ಮನುಸ್ಮೃತಿ.

            ವಯಸ್ಸಿನಿಂದಾಗಲೀ , ನರೆಗೂದಲಿನಿಂದಾಗಲಿ , ಹಣದಿಂದಾಗಲಿ , ನೆಂಟಸ್ತಿಕೆಯಿಂದಾಗಲಿ ಯಾರೂ ದೊಡ್ಡವರಾಗುವದಿಲ್ಲ. ಋಷಿಗಳು ಧರ್ಮವನ್ನು ಆಚರಿಸಿ ದೊಡ್ಡವರಾದರು. ಅಧ್ಯಯನಮಾಡಿದವನು ದೊಡ್ಡವನು.
****

ನಾಸ್ತಿ ಸತ್ಯಾತ್ ಪರೋ ಧರ್ಮಃ ಸಂತುಷ್ಟರ್ನಾತ್ಮಜಾತ್ ಪರಾ |
ನಾನ್ನದಾನಾತ್ ಪರಂ ದಾನಂ ವಂದನಾನ್ನೋಪಚಾರಕಂ ||
--- ಪ್ರಯೋಗರತ್ನಮಾಲಾ.

         ಸತ್ಯಕ್ಕಿಂತ ಹೆಚ್ಚಿನ ಧರ್ಮವಿಲ್ಲ ; ಪುತ್ರಜನ್ಮಕ್ಕಿಂತ ಹೆಚ್ಚಿನ ಆನಂದವಿಲ್ಲ. ಅನ್ನದಾನಕ್ಕಿಂತ ಉತ್ತಮವಾದ ದಾನವಿಲ್ಲ. ನಮಸ್ಕಾರಕ್ಕಿಂತ ಉತ್ತಮವಾದ ಉಪಚಾರವಿಲ್ಲ.

ಸಂಗ್ರಹ ~
ಗುರುರಾಜಾಚಾರ್ಯ ಕೃ. ಪುಣ್ಯವಂತ
***

ನಾಶ್ರಮಃ ಕಾರಣಂ ಧರ್ಮೇ ಕ್ರಿಯಮಾಣೋ ಭವೇದ್ಧಿ ಸಃ |
ಅತೋ ಯದಾತ್ಮನೋsಪಥ್ಯಂ ಪರೇಷಾಂ ನ ತದಾಚರೇತ್ ||
--- ಯಾಜ್ಞವಲ್ಕ್ಯ.

         ಧರ್ಮಕಾರ್ಯಗಳಿಗೆ ಆಶ್ರಮವಾಗಲಿ ದಂಡಕಮಂಡಲಗಳಾಗಲೀ ಕಾರಣವಲ್ಲ. ಮಾಡಿದರೆ ಧರ್ಮವು ಆಗುತ್ತದೆ. ಆದುದರಿಂದ ಜ್ಞಾನಿಯಾದವನು ತನಗೆ ಪಥ್ಯವಲ್ಲದ್ದನ್ನು ಇನ್ನೊಬ್ಬರಿಗೆ ಮಾಡಬಾರದು.

ಸಂಗ್ರಹ ~
ಗುರುರಾಜಾಚಾರ್ಯ ಕೃ. ಪುಣ್ಯವಂತ.
***

ಅಗುಣಸ್ಯ ಹತಂ ರೂಪಂ ಅಶೀಲಸ್ಯ ಹತಂ ಕುಲಮ್ |
ಅಸಿದ್ಧೇಸ್ತು ಹತಾ ವಿದ್ಯಾ ಅಭೋಗಸ್ಯ ಹತಂ ಧನಮ್ ||

ಗುಣವಿಲ್ಲದವನ ರೂಪ, ಶೀಲವಿಲ್ಲದವನ ಕುಲ,
ಸಿದ್ಧಿಪಡೆಯದವನ ವಿದ್ಯೆ,ಅನುಭವಿಸದೆ ಇರುವ ಹಣ -
ಈ ನಾಲ್ಕೂ ಹತವಾದಂತೆಯೇ.
***
ನಾಧರ್ಮಶ್ಚರಿತೋ ರಾಜನ್ ಸದ್ಯಃ ಫಲತಿ ಗೌರಿವ |
ಶನೈರಾವರ್ತ್ಯಮಾನೋ ಹಿ ಕರ್ತುರ್ಮೂಲಾನಿ ಕೃಂತತಿ ||
--- ಮಹಾಭಾರತ.

        ರಾಜ ಅಧರ್ಮವನ್ನಾಚರಿಸಿದರೆ ಅದು ಹಸುವಿನಂತೆ ಕೂಡಲೇ ಫಲವನ್ನೀಯುವದಿಲ್ಲ. ಅದು ಮೆಲ್ಲನೇ ತಿರುಗಿ , ಅಧರ್ಮೀಯ ಬುಡವನ್ನೇ ಕಡಿದುಹಾಕುತ್ತದೆ.

**
ನ ಹಿ ಧರ್ಮಾರ್ಥಸಿದ್ಧ್ಯರ್ಥಂ ಪಾನಮೇವಂ ಪ್ರಶಸ್ಯತೇ |
ಪಾನಾದರ್ಥಶ್ಚ ಧರ್ಮಶ್ಚ ಕಾಮಶ್ಚ ಪರಿಹೀಯತೇ ||
--- ರಾಮಾಯಣ.

           ಧರ್ಮಾರ್ಥಗಳನ್ನು ಸಾಧಿಸತಕ್ಕವರಿಗೆ ಮಧ್ಯಪಾನವು ಯೋಗ್ಯವಲ್ಲ. ಧರ್ಮ , ಅರ್ಥ , ಕಾಮ , ಈ ಮೂರು ಮಧ್ಯಪಾನದಿಂದ ಕ್ಷೀಣಿಸುತ್ತವೆ. 
**

ದೃಷ್ಟಿಪೂತಂ ನ್ಯಸೇತ್ಪಾದಂ ವಸ್ತ್ರಪೂತಂ ಜಲಂ ಪಿಬೇತ್ |
ಸತ್ಯಪೂತಾಂ ವದೇದ್ವಾಚಂ ಮನಃಪೂತಂ ಸಮಾಚರೇತ್ ||
--- ಮನುಸ್ಮೃತಿ.

           ಕಣ್ಣಿನಿಂದ ನೋಡಿ ಹೆಜ್ಜೆಯಿಡಬೇಕು. ಬಟ್ಟೆಯಿಂದ ಶೋಧಿಸಿ ನೀರನ್ನು ಕುಡಿಯಬೇಕು. ಸತ್ಯದಿಂದ ಶುದ್ಧವಾದ ಮಾತನ್ನಾಡಬೇಕು. ಮನಸ್ಸಿನಿಂದ ಪವಿತ್ರವಾದ ಕೆಲಸವನ್ನು ಮಾಡಬೇಕು.
***
ಅತಿ ದರ್ಪೇ ಹತಾ ಲಂಕಾಹ್ಯತಿ ಮಾನೇ ಚ ಕೌರವಾಃ |
ಅತಿದಾನಾತ್ ಬಲಿರ್ಬದ್ಧಃ ಸರ್ವಮತ್ಯಂತಗರ್ಹಿತಂ ||--ಶಾರ್ಙ್ಗಧರ ಪದ್ಧತಿ.
ಅತಿ ಗರ್ವದಿಂದ ಲಂಕೆ ನಷ್ಟವಾಯಿತು; ಅತಿಹೆಮ್ಮೆಯಿಂದ ಕೌರವರು ನಾಶವಾದರು; ಅತಿದಾನದಿಂದ ಬಲಿಯು ಸ್ಥಾನವನ್ನು ಕಳೆದುಕೊಂಡ. ಅತಿಯಾದುದ್ದೆಲ್ಲವೂ ದೂಷಣೀಯವೂ, ವರ್ಜ್ಯವೂ ಅಗಿವೆ.
**
ತ್ರಿಭಿರ್ವರ್ಷೈಸ್ತ್ರೀಭಿರ್ಮಾಸೈಸ್ತ್ರೀಭಿಃ ಪಕ್ಷೈಸ್ತ್ರೀಭಿರ್ದಿನೈಃ |
ಅತ್ಯುತ್ಕಟೈಃ ಪುಣ್ಯಪಾಪೈರಿಹೈವ ಫಲಮುಶ್ನುತೇ ||
-- ಸಮಯೋಚಿತ ಪದ್ಯಮಾಲಿಕಾ.

          ಬಹಳ ಘೋರವಾದ ಪುಣ್ಯಪಾಪಗಳನ್ನು ಮಾಡಿದರೆ, ಅದರ ಫಲವನ್ನು ಈ ಜನ್ಮದಲ್ಲಿಯೇ ಮೂರು ವರ್ಷ , ಮೂರು ತಿಂಗಳು, ಮೂರು ಪಕ್ಷ, ಅಥವಾ ಮೂರು ದಿನಗಳಲ್ಲಿ ಅನುಭವಿಸುತ್ತಾನೆ.
***

ಅಸಹಾಯಃ ಸಮರ್ಥೋsಪಿ ನ ಜಾತು ಹಿತಸಿದ್ಧಯೇ |
ವಹ್ನಿರ್ವಾತವಿಹೀನೋ ಹಿ ಬುಸಸ್ಯಾಪಿ ನ ದೀಪಕಃ ||
- ಯಶಸ್ತಿಲಕ.
       ಸಮರ್ಥನಾದರೂ ಸಹಾಯವಿಲ್ಲದಿದ್ದರೆ , ಆತನು ಹಿತವನ್ನು ಸಾಧಿಸಲಾರ. ಗಾಳಿಯಿಲ್ಲದಿದ್ದರೆ ಬೆಂಕಿ ಹೊಟ್ಟನ್ನು ಸಹ ಸುಟ್ಟುಹಾಕಲಾರದು.
**

विषयेंद्रिय संयोगात् यत् तत् अग्रे 
अमृतोपमम्। परिणामे विषमिव ।।

यदग्रे च अनुबंधे च सुखं मोहनम् 
आत्मन: ।।

ವಿಷಯ ಸುಖಗಳಲ್ಲಿ ನಾವು ಕುರುಡರಾಗಿದ್ದಾಗ ಇಂದ್ರಿಯಗಳಿಗೆ 
ಪ್ರಿಯವಾದುದೆಲ್ಲ ಅಮೃತವೇ ಎಂದು ಭಾಸವಾಗುತ್ತದೆ .ಆದರೆ ಅದ, ಪರಿಣಾಯ ವಿಷಕಾರಿ ಎಂಬ 
ಸತ್ಯದ ಅರಿವು ನಮಗೆ ಆಗ ಇರುವುದಿಲ್ಲ . ರಸನೇಂದ್ರಿಯದ ಶರಣಾಗಿ ನಮ್ಮ ಶಕ್ತಿ ಮೀರಿ ತಿಂದರೆ 
ಅಜೀರ್ಣ ಆಗುವದು ಖಂಡಿತ . ಮುಂದಾಲೋಚನೆ ಇಲ್ಲದೇ 
ಇಂದ್ರಿಯಗಳ ಬೆನ್ನು ಹತ್ತಿದಾಗ ಮೊದಲು ಸುಖ ಎನಿಸಿದರೂ ದು:ಖ ಕಟ್ಟಿ ಇಟ್ಟಿದ್ದೇ . ಎಲ್ಲದರ ದುಷ್ಪರಿಣಾಮದ ಅರಿವು ಇದ್ದರೂ ಅವುಗಳ ದಾಸರಾಗುವದು 
ಅಜ್ಞಾನ . ಸಂಗತಿಯ ಪರಿಣಾಮ .
ಅಲ್ಲದೇ ಮಾನಸಿಕ ಅಶಕ್ತತೆ ! 
ಯಾರ ಆಶೆ ಆಕಾಂಕ್ಷೆಗಳು ಶಕ್ತಿ ಮೀರೀ ಇರುವತ್ತವೆಯೋ ಆತ ಅತ್ಯಂತ ದರಿದ್ರನಂತೆ .
ಯಾರಲ್ಲಿ ತೃಪ್ತಿ ಇದೆಯೋ ಆತ 
ಅತ್ಯಂತ ಧನಿಕನಂತೆ .
ಯಾವದೇ ಕೆಲಸ ಮಾಡುವ ಮೊದಲು ಸಾರಾಸಾರ ಆಲೋಚನೆ 
ಮಾಡಿ ಧನಿಕರಾಗೀ ಎಂದೇ 

ಭಗವಂತ ಬುದ್ಧಿ ಎಂಬ ವಿಶೇಷವಾದ  ಸಾಧನ ಕೊಟ್ಟಿರುವನು .ಅದರ ಉಪಯೋಗ ಆಗಬೇಕು .
****

ಅವಶ್ಯಮೇವ ಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ |
ನಾಭುಕ್ತಂ ಕ್ಷೀಯತೇ ಕರ್ಮ ಕಲ್ಪಕೋಟಿಶತೈರಪಿ ||
- ಗರುಡಪುರಾಣ
       ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳ ಫಲವನ್ನು ಖಂಡಿತ ಅನುಭವಿಸಬೇಕು. ಎಷ್ಟೇ ಕಾಲಕಳೆದರೂ ಅನುಭವಿಸದೆ ಕರ್ಮ ಕಳೆಯುವದಿಲ್ಲ.
*****

ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವ ಚ ನೈವ ಚ |
ಅಜಾಪುತ್ರಂ ಬಲಿಂ ದದ್ಯಾದ್ದೇವೋ ದುರ್ಬಲಘಾತಕಃ ||
- ಸಮಯೋಚಿತಪದ್ಯಮಾಲಿಕ

         ಕುದುರೆಯನ್ನಲ್ಲ , ಆನೆಯನ್ನಲ್ಲ , ಹುಲಿಯನ್ನಂತೂ ಸರ್ವತಾ ಅಲ್ಲ , ಮೇಕೆಮರಿಯನ್ನು ಬಲಿಯಾಗಿ ಕೊಡಬೇಕಂತೆ ! ದೇವರೂ ದುರ್ಬಲರನ್ನೇ ಕೊಲ್ಲುತ್ತಾನೆ.
***

ಅಲಬ್ಧ್ವಾ ನ ವಿಷೀದೇತ ಕಾಲೇ ಕಾಲೇsಶನಂ ಕ್ವಚಿತ್ |
ಲಬ್ಧ್ವಾ ನ ಹೃಷೇದ್ ಧೃತಿಮಾನುಭಯಂ ದೈವತಂತ್ರಿತಮ್ ||
- ಭಾಗವತ.
        ಕಾಲಕಾಲಕ್ಕೆ ಆಹಾರ ಪಡೆಯದೇ ಇದ್ದರೂ ಅಥವಾ ಒಮ್ಮೊಮ್ಮೆ ಕಾಲಕಾಲಕ್ಕೆ ಪಡೆದರೂ ಧೀರನಾದವನು ದುಃಖಪಡಲೂಬಾರದು ಸಂತೋಷವನ್ನೂ ಪಡಬಾರದು. ಇವೆರಡೂ ವಿಧಿನಿಯಮದಿಂದಾದುದೇ.
****
ಅಲಿರನುಸರತಿ ಪರಿಮಲಂ ಲಕ್ಷ್ಮೀರನುಸರತಿ ನಯಗುಣಸಮೃದ್ಧಿಂ |
ನಿಮ್ನಮನುಸರತಿ ಸಲಿಲಂ ವಿಧಿಲಿಖಿತಂ ಬುದ್ಧಿರನುಸರತಿ ||
-- ಸುಭಾಷಿತಸುಧಾನಿಧಿ.
        ದುಂಬಿಯು ಪರಿಮಳವನ್ನನುಸರಿಸುತ್ತದೆ. ಐಶ್ವರ್ಯವು ನೀತಿ , ಗುಣ ಇವುಗಳ ಸಮೃದ್ಧಿಯನ್ನು ಅನುಸರಿಸುತ್ತದೆ. ನೀರು ತಗ್ಗಿನ ಪ್ರದೇಶವನ್ನನುಸರಿಸುತ್ತದೆ. ಬುದ್ಧಿಯು ವಿಧಿಲಿಖಿತವನ್ನು ಅನುಸರಿಸುತ್ತದೆ.
***

ಅನಾರಂಭೋ ಮನುಷ್ಯಾಣಾಂ ಪ್ರಥಮಂ ಬುದ್ಧಿಲಕ್ಷಣಂ |
ಪ್ರಾರಬ್ಧಸ್ಯಾಂತಗಮನಂ ದ್ವಿತೀಯಂ ಬುದ್ಧಿ ಲಕ್ಷಣಂ ||
-- ಸಮಯೋಚಿತಪದ್ಯಮಾಲಿಕಾ.
ಕಾರ್ಯವನ್ನು ಆರಂಭಿಸದಿರುವದು ಮೊದಲನೆಯ ಬುದ್ಧಿ ಲಕ್ಷಣ. ಆರಂಭಿಸಿದ ಮೇಲೆ ಅದನ್ನು ತುದಿಮುಟ್ಟಿಸುವದು ಎರಡನೆಯ ಬುದ್ಧಿಲಕ್ಷಣ.
****

ಜಾಮಾತಾ ಜಠರಂ ಜಾಯಾ ಜಾತವೇದಾ ಜಲಾಶಯಾ |
ಪೂರಿತನೈವ ಪೂರ್ಯಂತೇ ಜಕಾರಾ ಪಂಚ ದುರ್ಬಲಾ ||
---
 ಈ ಜಗತ್ತಿನಲ್ಲಿ ತೃಪ್ತಿಪಡಿಸಲಾಗದ ಐದು ಜ ಕಾರಗಳಿವೆ.! ಅವುಗಳೆಂದರೆ - ಅಳಿಯ, ಹೊಟ್ಟೆ, ಹೆಂಡತಿ, ಅಗ್ನಿ, ಸಮುದ್ರ.

1.ಜಾಮಾತಾ - ಅಂದರೆ ಅಳಿಯ,ಎಷ್ಠು ಕೊಟ್ಟರೂ ತೃಪ್ತಿ ಪಡುವುದಿಲ್ಲ.!
2.ಜಠರ-ಅಂದರೆ ಹೊಟ್ಟೆ,ಎಷ್ಟೇ ಆಹಾರ ಸೇವಿಸಿದರೂ, ಮರುದಿನಆಹಾರಕ್ಕೆ ಸಿದ್ಧ 
3.ಜಾಯಾ-ಅಂದರೆ ಹೆಂಡತಿ,ಎಷ್ಟೇ ಆಭರಣ, ವಸ್ತ್ರವಿದ್ದರೂ ಬೇಕೆನ್ನುವಳು.
4.ಜಾತವೇದಾ-ಅಂದರೆ ಅಗ್ನಿ,ಬೆಂಕಿಗೆ ಏನೇ ಹಾಕಿದರೂ ಎಲ್ಲಆಹುತಿ. 
5.ಜಲಾಶಯ-ಅಂದರೆ ಸಾಗರ,ನದಿಗಳುಬಂದು ಸಂಗಮವಾದರೂ ತುಂಬೊಲ್ಲ.
***




c






No comments:

Post a Comment